ಗಝಲ್

ಸುಜಾತಾ ರವೀಶ್

ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತು 
ನಾಳಿನ ಕನಸಿನ  ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು 

ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇ 
ಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು

ಮಾರ್ದವ  ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯು 
ಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು

ಜೀವನ ನೌಕೆಯು ಸಿಲುಕಿ ಬಿರುಗಾಳಿಗೆ ಹೊಯ್ದಾಡುತಿದೆ ಹೀಗೇಕೆ? 
ದೇವನ ಒಲುಮೆ ಭದ್ರತೆ ನೀಡುತ ಭರವಸೆಯಲಿ ಖುಷಿಯಾಗಿಸಿತು

ಹಂಬಲ ಕಾಮನೆ ಮನುಜನ ಬದುಕಲಿ ನನಸಾದರೆನಿತು ಒಳಿತು 
ನಂಬಿದ ದೈವದ ಸನ್ನಿಧಿ ಸುಜಿಯ ಅಂತರಂಗದಲಿ ಮೊರೆಯಾಗಿಸಿತು  

*******************************************

About The Author


Comments

2 responses to “ಗಝಲ್”

  1. ಶುಭಲಕ್ಷ್ಮಿ ಆರ್ ನಾಯಕ Avatar
    ಶುಭಲಕ್ಷ್ಮಿ ಆರ್ ನಾಯಕ

    ಸುಂದರವಾಗಿದೆ ಮೆಡಮ್

    1. sujatha Raviah Avatar
      sujatha Raviah

      ಧನ್ಯವಾದಗಳು ಮೇಡಂ

Leave a Reply

You cannot copy content of this page