ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ ಕನಸಿಗಾಗಿ ಕತ್ತಲೆ ಹಗಲಬಚ್ಚಿಟ್ಟಂತೆ ದಿನ ದಿನವೂ ಹಚ್ಚಿಕೊಂಡೆನೆಂದು ನೆಚ್ಚಿಕೊಳದ ನೋವುಬಾಳ ಯಂತ್ರಕೆ ಕೀಲೆಣ್ಣೆ ಕೊನೆತನಕರೆಕ್ಕೆಗಳೀಗ ಹಾರಲು ಹವಣಿಸಿವೆಆಗಸದ ಹೊಸ ಹಾದಿಗೆಅಣಿಗೊಂಡ ವಿದಾಯಕೊಂದು ನಗು ಸೇರಲಿನೀರಸವಾಗದಿರಲಿನಿನ್ನ ಹಾದಿ ಮತ್ತೆ ನನ್ನದೂ ********************************

ಹಚ್ಚಿಕೊಂಡರೆ Read Post »

ಅನುವಾದ

ಅನುವಾದ ಸಂಗಾತಿ

ಕನ್ನಡ ಮೂಲ: ಸ್ಮಿತಾ ಅಮೃತರಾಜ್ ಇಂಗ್ಲೀಷಿಗೆ: ಸಮತಾ ಆರ್. ಹಸಿ ಮಣ್ಣ ಧ್ಯಾನ. ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂದುರ್ಬೀನು ಧರಿಸಿ ಹಸಿ ಮಣ್ಣ ಅರಸಿಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರುಫೌಂಡೇಶನ್ ಕ್ರೀಂ ಹಚ್ಚುವಂತೆ. ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ.ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆಎಷ್ಟು ಚಂದದ ಮಿರುಗು ಬಣ್ಣದ ಲೇಪ. ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯುಹೇಳಿಕೊಡಲಾಗುತ್ತಿದೆ ಇಲ್ಲೀಗ ಎಳೆಯರಿಗೆಚಿತ್ರಕ್ಕೆ ಬಣ್ಣ ತುಂಬುವ ಪಾಠಫ್ಯಾನಿನ ಅಡಿಯಲ್ಲಿ ಕುಳ್ಳಿರಿಸಿ. ತಲೆಯೆತ್ತಿದೆ ವಿಶಾಲ ಸಭಾಂಗಣತೇವದ ಗುರುತೇ ಸಿಗದಂತೆ,ಕೆರೆಯ ಸಮಾಧಿಯ ಮೇಲೆ.ನಡೆಸುತ್ತಿದ್ದಾರೆ ಹಿರಿಯರುಶುಷ್ಕ ಸಮಾಲೋಚನೆ ಒಳಗೆ. ಮೋಡ ಬಿತ್ತನೆ, ನದಿ ತಿರುವುಗಹನ ಚರ್ಚೆಯ ಕಾವುಎಸಿಯ ಒಳಗೂ ಸುರಿವ ಬೆವರುಸೈ ಎನ್ನಲಾಗದ ತೀರ್ಮಾನಕ್ಕೆಮುಂದೂಡಲಾಗಿದೆ ಸಭೆ ನಾಳೆಗೂ. ಎಲ್ಲಿಂದಲೋ ತೂರಿಬಂದ ಹಿಡಿ ಬೀಜವೀಗಕಾದ ಟಾರು ರಸ್ತೆಯ ಮೇಲೆ ಬಿದ್ದುಪಟಪಟನೆ ಸಿಡಿದೇಳುತ್ತಿವೆತಾಳ್ಮೆಗೆಟ್ಟು. ಸಾವಿಗೆ ಸೆಡ್ಡುಹೊಡೆದ ದೈತ್ಯ ಮಹಲುಗಳುದಿಟ್ಟಿಸುವಾಗ ಬಿಡುಗಣ್ಣಿನಿಂದನಾನಿಲ್ಲಿ ಧ್ಯಾನಿಸುತ್ತಿರುವೆತೊಂಡೆ, ಬೆಂಡೆ ,ಬಸಳೆಬೇರು ಸೋಕುವ ಹಸಿ ಮಣ್ಣ. ನಾನೀಗ ಉಮೇದಿಗೆ ಬಿದ್ದಿದ್ದೇನೆಹಸಿಮಣ್ಣು ಹಂಚುವುದಕ್ಕಾಗಿಇಲ್ಲಿಯ ಮಣ್ಣು ಅಲ್ಲಿಯ ಸಸಿಬೇರಿಳಿಸಿ ಬಿಟ್ಟ ಉಸಿರು.. ಪವಡಿಸಲಿ ಜಗದ ಜಗುಲಿಯಲ್ಲಿಪ್ರಭುವೇ. —- A yearning for some wet soil. Holding the binoculars,Everyone is competing hard,To search for a fistful of wet soil. Worshipping the spadeWork is inaugurated,As a foundation creamRoads are smeared with coal tar. Pain is not easily empathised now,How nice to overlayThese fidgeting dust particles,Who want to fly away,with glistening hues. The breath gets transformedWhile gasping for air in the hot sun.Here kids are taught to fill colours to the sketches ,sitting under a fan. .A capacious auditorium is erectedWithout the traces of any moistureOn the grave of a vast lake.Leaders are busy insideWith their dry speeches. Deep discussions on“Cloud seeding,linking rivers”Are heating up the air,Sweating even inside an ac room,When Conclusions are hard to findThe meeting is carried overDay after day.. A handful of seeds came flyingFrom nowhere and fell on theHot tar road,and unable to bearExploding aloud. When the immortal giant mansionsAre staring with eyes wide open,I am yearning for some fresh wet soilTo root my greens,gourds and creepers. One of my apartment friendsCalled me up forAn urgent supply ofSome fresh wet soil,For a potted Tulasi plant. Now I am all eagerTo distribute the wet soil.Soil from here ,will root deepThe plant over thereand let the breath out.. And let the Lord restOn the stage of the world. *******************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಬೆವರು ಹಾಗೂ ಹೆಣ್ಣು

ಕವಿತೆ ಬೆವರು ಹಾಗೂ ಹೆಣ್ಣು ನೂತನ ದೋಶೆಟ್ಟಿ ಹೆಂಟೆಯೊಡೆದು ಮಡಿ ಮಾಡಿಬೆವರ ಧಾರೆ ಎರೆದೆರೆದುನೀರುಣಿಸಿದ ಪೈರೀಗಕಾಳುಕಟ್ಟಿ ನಿಂತಿದೆಎದೆಯೆತ್ತರದ ಮಗನಂತೆ ಕೈಯ ಕೆಸರುಮನದ ಕೊಸರುಹಚ್ಚಿಟ್ಟ ಕಣ್ಣ ಹಣತೆಹನಿಸಿದ್ದ ಎದೆಯಾಮೃತ ಹಿಂಡಿ ತೆಗೆದ ಕಾಳ ಹಾಲುಸೇರಿ ಸವಿದ ಪಾಯಸಾನ್ನಸಂಭ್ರಮದ ನಗೆಯ ಮೋಡಿ ಆಳೆತ್ತರ ಬೆಳೆದ ಪೈರುಎದೆಯೆತ್ತರ ಬೆಳೆದ ಮಗಹೆಣೆದ ಕನಸುಗಳ ಕೊಂಡಿಬೆವರಿಗೂ ಹೆಣ್ಣಿಗೂ ತಾಳೆಯ ಮಾಡಿ. ********************************

ಬೆವರು ಹಾಗೂ ಹೆಣ್ಣು Read Post »

ಕಾವ್ಯಯಾನ

ಹಣೆಗೆ ಹಣೆ ಹಚ್ಚಿ

ಕವಿತೆ ಹಣೆಗೆ ಹಣೆ ಹಚ್ಚಿ ನಾಗರಾಜ ಹರಪನಹಳ್ಳಿ ಹಣೆಗೆ ಹಣೆ ಹಚ್ಚಿಪಿಸುಮಾತಾನಾಡೋಣಜಗಕೆ ಪ್ರೀತಿಯ ಹಾಡ ಹಾಡೋಣ ಇರುವಷ್ಟು ದಿನಹಗಲುಜೀವ ಕಾರುಣ್ಯದ ಹಾಡ ಹಾಡಿನೆಲದ ಜನಕೆ ಬದುಕ ಹಾಡೋಣ ಸುಖವೋ ದುಃಖವೋ ಸಮನಾಗಿ ಸ್ವೀಕರಿಸಿಹಣೆ ತುಂಬ , ಮನ ತುಂಬ ಸಿಹಿಯ ಹಂಚೋಣ ಬದುಕೆಂಬುದು ಸುಖದ ಹಾಸಿಗೆಯಲ್ಲಕಡು ಕಷ್ಟವನೆ ಹೊದ್ದ ದಾರಿಯೂ ಅಲ್ಲಎಂಬುದು ಸಾರಿ ಹೇಳೋಣ ಹಗಲು ಸೂರ್ಯನ ಪಯಣಇರುಳು ಚಂದ್ರನ ಗಗನಸುಳಿವ ಗಾಳಿಗೆ ದಣಿವಿಲ್ಲದಿರುವಾಗದುಡಿಮೆ ಒಲುವೆ ಜೊತೆ ಜೊತೆಗೆ ಎಂಬ ತತ್ವ ಸಾರೋಣ ಮಗನ ಹಣೆಗೆ ಹಣೆಯಿಟ್ಟುಬದುಕ ಪ್ರೀತಿಸುವುದ ಕಲಿಸೋಣಪಿಸುಮಾತು ಎದೆಯೊಳಗೆನುಡಿಗಟ್ಟು ಕಣ್ಣೊಳಗೆಹಾಡಾಗುವ ಗುಟ್ಟನಲಿಸಿ ಕಲಿಸೋಣ ಪ್ರೀತಿ ಎಂಬುದು ಹಿಗ್ಗುಬದುಕು ಎಂಬುದು ಸುಗ್ಗಿಹೋರಾಡಿ ಪಡೆದ ಸುಖವುಕೊನೆತನಕ ಎಂಬ ಗುಟ್ಟಕಲಿಸೋಣ ಹಣೆಗೆ ಹಣೆ ಹಚ್ಚಿ ಪ್ರೀತಿಸೋಣಕೊನೆಯಿರದ ಬದುಕಿನ ಹಾಡ ಹಾಡೋಣಕೊನೆಯಿರದ ಬದುಕಿನ ಪ್ರೀತಿ ಕಲಿಸೋಣ**************************

ಹಣೆಗೆ ಹಣೆ ಹಚ್ಚಿ Read Post »

ಕಾವ್ಯಯಾನ

ಗಾಂಧಿ

ಕವಿತೆ ಗಾಂಧಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆಹೇ ರಾಮ್… ಹೇ ರಾಮ್… ಎನ್ನುತ್ತ…ಎಷ್ಟೋ ಬಾರಿಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟುಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟುಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿಹಗಲು ರಾತ್ರಿ ಶುಶ್ರೂಷೆ ಮಾಡಿಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆಬಸುರಿ ಸೀತೆ ಹೊಟ್ಟೆಯೊಳಗೆ ಅವಳಿಭ್ರೂಣಗಳ ಹೊತ್ತು ತಿರುಗಿದಂತೆ ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ ಆಡು ಕುರಿ ಕೋಳಿಗಳನಡುವೆ ಹಿಟ್ಟು ನಾದಿ ಮೊಟ್ಟೆಯಾಕಾರದಲ್ಲಿ ಲಟ್ಟಿಸಿಬೆಂಕಿಯಲ್ಲಿಅಹಿಂಸಾ… ಅಹಿಂಸಾ… ಎಂದುಚೀರುತ್ತಲೇ ಸುಟ್ಟ ರೊಟ್ಟಿಯಂತಹ ಹೃದಯ ಹೊತ್ತು ಒಣಕಲು ರೊಟ್ಟಿಯಂತಹ ದೇಹದ ದಂಟು ಕೈ ಕಾಲುಗಳಲ್ಲಿ ಹಾರು ನಡಿಗೆಯಲ್ಲಿ ಓಡುತ್ತಿದ್ದಾನೆಕಡಲ ತಡಿಯಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಕುಳಿತವನ ಹೃದಯಬಾಯ್ಬಾಯ್ ಬಿಡುತ್ತಿರುವ ಬಂಗುಡೆ ಮೀನಿನ ಮೈಗೆ ಉಪ್ಪು ಖಾರ ಹಚ್ಚಿದಂತೆ ಬೇಯುತ್ತ ಚೀರುತ್ತಿದೆ ಕೃತ ತ್ರೇತಾ ದ್ವಾಪರ ಕಲಿ ಕಾಲಗಳುಯುದ್ಧ ಕೊಲೆ ರಕ್ತಪಾತದಲ್ಲಿ ನೆಂದುಪೂವ೯ದಲ್ಲಿ ಮೂಡಿದ ಸೂಯ೯ನನ್ನೇ ನುಂಗಿ ಪಶ್ಚಿಮಕ್ಕೆ ಉಗುಳುತ್ತಿವೆನೀಲಿ ಆಗಸದಲ್ಲಿ ನೀಲಿ ಕಡಲಲ್ಲಿಕೆಂಪು ಬಟ್ಟೆಯ ಹೆಣಗಳ ರಾಶಿತೇಲುತ್ತಿವೆಕೈಗಳನ್ನು ಚಾಚುತ್ತ ಅಹಿಂಸೆ ಅಹಿಂಸೆ… ಹೇ ರಾಮ್ ಹೇ ರಾಮ್ ಎಂದು ಚೀರುತ್ತಲೇ ಇವೆ ಅಡ್ಡೆ ಹೊತ್ತ ತಾತ ನಡೆಯುತ್ತಲೇ ಇದ್ದಾನೆಅವನ ಎದೆಯೊಳಗಿನ ಅಹಿಂಸೆಯಬೆಂಕಿಯ ಬೇಗೆ ಸಹಿಸಲಾಗದೆಫರಂಗಿಗಳು ಹೊರಗೆ ಓಡಿ ಹೋಗಿದ್ದಾರೆ…ಗೋಡ್ಸೆ ಕೋವಿ ಸಹಿತ ಒಳ ನುಗ್ಗಿದ್ದಾನೆಹೇ ರಾಮ್….! ಕಣ್ಣು ಮುಚ್ಚಿದಾಗೆಲ್ಲಎವೆಗಳ ಪರದೆಯ ಒಳಗೆಬಿಳಿ ಕಚ್ಚೆಯ ಸಣಕಲು ಕಪ್ಪು ಮೈಯ ಆತ ಬೀಸ ಬೀಸಓಡು ನಡಿಗೆಯಲ್ಲಿ ನಡೆಯುತ್ತಲೇ ಇರುತ್ತಾನೆಮೆದುಳಿನಿಂದ ಹೃದಯಕ್ಕೆಹೃದಯದಿಂದ ಮೆದುಳಿಗೆಬೆಳಕು ಹೊತ್ತ ಮಿಣುಕು ಹುಳದಂತೆ ಇಡೀ ಲೋಕದ ಹೃದಯ ಹೊಕ್ಕುಅಲ್ಲಿಂದ ಮೆದುಳಿಗೇರುತ್ತ ಇಳಿಯುತ್ತ ಏರುತ್ತ ಇಳಿಯುತ್ತನಡೆಯುವ ಮೊದಲುಆತ ತನ್ನೊಳಗೆೇ ಕವುಚಿ ಬಿದ್ದು ಹೊಟ್ಟೆ ಎಳೆದು ಅಂಬೆ ಹರಿದುಕುಳಿತು ನಿಂತು ಬಿದ್ದು ಎದ್ದುನಡಿಗೆ ಕಲಿತಿದ್ದನಂತೆಅದನ್ನು ನೋಡಲೆಂದು ಅವನೊಳಗೇಸೂಯ೯ ಮೂಡಿದ್ದನಂತೆ ಬೆಳಕು ಕೋಲನು ಊರಿಕತ್ತಲ ಕೋಲ್ಮಿಂಚಂತೆಬೀಸ ಬೀಸ ನಡೆಯುವ ಈ ಅಜ್ಜಅಜ್ಜನಲ್ಲ… ಗಲ್ಲದಲ್ಲಿ ಮೊಲೆಹಾಲುಕ್ಕಿಸುತಬೊಚ್ಚು ಬಾಯಲ್ಲಿ ನಗುವ ಮಗುಎದೆ ಎದೆಗಳಲ್ಲಿ ಹರಿಯುವ ಶಾಂತಿಗೊಂದು ರೂಪ ಕೊಟ್ಟು ನೋಡಿರಿ…ಅವ ಗಾಂಧಿ ಮನೆ ಮನೆಯಲ್ಲೂ ಗಾಂಧಿಯುಹುಟ್ಟುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಮುದ್ದು ಮುದ್ದಾಗಿ ನಗುತ್ತಮನೆ ಮನೆಯಲ್ಲೂ ಗಾಂಧಿ ಸಾಯುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಹೇರಾo ಎನ್ನುತ್ತಗೋಡ್ಸೆಯ ಗೋಡೆ ಗೋಡೆಗಳ ನಡುವೆ ಹಿಂಸೆಯ ಗೋಲಿಗಳಿಗೆ ಎದೆಯೊಡ್ಡಿ… ಇವನನ್ನು ಕ್ಷಮಿಸು ಎಂದು ಯೇಸು ವಾಗುತ್ತಅಂಗುಲೀ ಮಾಲನ ಕಂಬನಿಯಲ್ಲಿ ತೊಯ್ದ ಬುದ್ಧನಾಗುತ್ತ ***********************

ಗಾಂಧಿ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನಮೂಲ ಗುಜರಾತಿ: ಪನ್ನಾಲಾಲ್ ಪಟೇಲ್ ಕನ್ನಡಕ್ಕೆ : ಎಲ್.ವಿ.ಶಾಂತಕುಮಾರಿಪ್ರ : ಸಾಹಿತ್ಯ ಅಕಾಡೆಮಿಪ್ರ.ವರ್ಷ :೨೦೧೫ಬೆಲೆ : ರೂ.೧೯೦ಪುಟಗಳು : ೪೨೪   ಎಲ್.ವಿ.ಶಾಂತಕುಮಾರಿ ನಮ್ಮ ನಡುವಿನ ಬಹಳ ದೊಡ್ಡ ವಿದ್ವಾಂಸರು ಮತ್ತು ಅನುವಾದಕರು. ಅನೇಕ ಕ್ಲಾಸಿಕ್ ಗಳನ್ನು ಅವರು ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ’ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತಿ ಲೇಖಕ ಪನ್ನಾಲಾಲ್ ಪಟೇಲ್ ಅವರ ‘ಮಾನವೀನಿ ಭಾವೈ’ಎಂಬ ಮೂರು ಭಾಗಗಳಲ್ಲಿರುವ ಕೃತಿಯ ಮೊದಲ ಭಾಗ ‘ಮಾಲೇಲ್ ಜೀವ್’ ಇದರ ಭಾಷಾಂತರ. ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಅನುವಾದವನ್ನು ಶಾಂತಕುಮಾರಿಯವರಿಂದ ಮಾಡಿಸಿದೆ. ನಲವತ್ತರ ದಶಕದಲ್ಲಿ ಪನ್ನಾಲಾಲ್ ಅವರು ಬರೆದ ಈ ಕಾದಂಬರಿ ಕಾಲ್ಪನಿಕ ಕಥನ ಶೈಲಿಯಲ್ಲಿದೆ.  ಅದುವರೆಗೆ ಗುಜರಾತಿ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಸಂಸ್ಕೃತ ಭೂಯಿಷ್ಠವಾದ ಶಿಷ್ಟ ಕಥಾಸಾಹಿತ್ಯಕ್ಕೊಂದು ತಿರುವು ಕೊಟ್ಟ ಕೃತಿಯಿದು. ತತ್ವ ಚಿಂತನೆಯ ಅತಿಭಾವುಕತೆ, ಆದರ್ಶಗಳ ಬೋಧನೆ ಮತ್ತು ತದ್ರೂಪಿ ಪಾತ್ರ ಚಿತ್ರಣಗಳನ್ನು ನಾವಿಲ್ಲಿ ನೋಡಬಹುದು. ಸಾಂಪ್ರದಾಯಿಕ ಶೈಲಿಯ ಕೃತಕತೆ ಹಾಗೂ ಸಂಕೀರ್ಣತೆಯಿಂದ ಮುಕ್ತವಾದ ಸರಳವೂ ನೇರವೂ ಆದ ನಿರೂಪಣೆ ಇಲ್ಲಿದೆ.      ಈ ಕಾದಂಬರಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದ ರೈತಾಪಿ ಜನರ ಬದುಕು, ಅವರು ಅನುಭವಿಸುವ ಕಷ್ಟ ಕೋಟಲೆಗಳು, ಅವರ ಪದ್ಧತಿ-ಸಂಪ್ರದಾಯಗಳು, ಜೀವನ ಕ್ರಮ, ಅವರ ನಡುವಣ ಪ್ರೀತಿಯ ಸಂಬಂಧಗಳು ಮತ್ತು ಅಂಧ ವಿಶ್ವಾಸಗಳ ಚಿತ್ರಣಗಳಿವೆ. ಜತೆಗೆ ನಿಸರ್ಗದ ರಮ್ಯ ಮನೋಹರ ಹಿನ್ನೆಲೆಯೂ ಇದೆ. ಆದರೆ ಕಾದಂಬರಿಯುದ್ದಕ್ಕೂ ಕಾಣುವ ಬರಗಾಲದ ಚಿತ್ರಣವು ಭಯಾನಕವಾಗಿದೆ. ಹಳ್ಳಿಗಳನ್ನೂ ಬೆಟ್ಟ ಗುಡ್ಡಗಳನ್ನೂ ಕೊಚ್ಚಿಕೊಂಡು ಹೋಗಿ ಜನರ ಬದುಕನ್ನು ಛಿದ್ರಗೊಳಿಸುವ ಚಿತ್ರಗಳು, ಗುಡ್ಡಗಾಡಿನ ಮಂದಿ ಗ್ರಾಮೀಣರ ಮೇಲೆ ನಡೆಸುವ ಲೂಟಿ-ಆಕ್ರಮಣಗಳು, ಕ್ಷಾಮದ ಅಸಹಾಯಕ ಸ್ಥಿತಿಯಲ್ಲಿ ದನಗಳನ್ನು ಹಸಿಹಸಿಯಾಗಿಯೇ ತಿನ್ನುವ ಮತ್ತು  ತಾಯಿಯೇ ತನ್ನ ಮಗುವನ್ನು ತಿನ್ನುವ ದೃಶ್ಯಗಳು ಭೀಭತ್ಸವಾಗಿವೆ.      ಕಾಳು ಮತ್ತು ರಾಜೂ ಇಲ್ಲಿನ ಮುಖ್ಯ ಪಾತ್ರಗಳು. ಬಹಳ ಚಿಕ್ಕವರಿದ್ದಾಗಲೇ ಅವರಲ್ಲಿ ಅಂಕುರಿಸಿದ್ದ ಪ್ರೇಮವು ಸಾಮಾಜಿಕ ಕಟ್ಟುಪಾಡುಗಳ ನಡುವೆ ಸಿಲುಕಿ ನಲುಗಿದರೂ ಕಾದಂಬರಿ ಕೊನೆ ಮುಟ್ಟುತ್ತಿದ್ದಂತೆ ಶುದ್ಧ ಸಲಿಲದ ಕಾರಂಜಿಯಾಗಿ ಚಿಮ್ಮಿ ಹರಿಯುವ ಹೃದಯಂಗಮ ಚಿತ್ರಣವು ಓದುವವರ ಮನಸ್ಸಿಗೆ ಕಚಗುಳಿಯಿಡುತ್ತದೆ.    ಕಾಳು-ರಾಜೂರ ನಡುವಣ ಉದಾತ್ತ ಪ್ರೇಮವು ಕಾದಂಬರಿಯ ಕೊನೆಯಲ್ಲಿ ಮನಸೂರೆಗೊಳ್ಳುತ್ತದೆ. ಬರದ ಬೇಗೆಯನ್ನು ತಾಳಲಾರದೆ ಅವರಿಬ್ಬರೂ ಊರು ಬಿಟ್ಟು ಹೋಗುತ್ತಾರೆ. ತಡೆಯಲಾರದ ಹಸಿವಿನಿಂದ ಬಳಲುವ ಕಾಳು ‘ನೀರು ಬೇಕು’ ಅನ್ನುತ್ತ ಕುಸಿದು ಬೀಳುತ್ತಾನೆ.  ಬರದ ಬೆಂಗಾಡಿನಲ್ಲಿ ರಾಜು ಎಲ್ಲಿಂದ ತರಬೇಕು ನೀರು? ಅವಳ ಮಾತೃಹೃದಯ ವಿಲವಿಲ ಒದ್ದಾಡುತ್ತದೆ. ಕಾಳೂನ ಎದೆಯ ಮೇಲೆ ಮಲಗಿ ಅವಳು ಅಳುತ್ತಾಳೆ. ತನ್ನ ಎದೆಯನ್ನು ತೋರಿಸಿ ‘ ಇಲ್ಲೂ ಏನೂ ಇಲ್ಲ. ಎಲ್ಲ ಒಣಗಿ ಹೋಗಿದೆ’ಅನ್ನುತ್ತಾಳೆ. ಅವಳ ಮೊಲೆಗಳಿಂದ ದ್ರವ ಜಿನುಗಿತೋ ಅಥವಾ ಅವಳ ಬಾಯಿಯಿಂದ ರಸದ ಸ್ಪರ್ಶವಾಯಿತೋ ದೇವರೇ ಬಲ್ಲ. ಪವಾಡದಂತೆ ಕಾಳು ಎದ್ದು ನಿಲ್ಲುತ್ತಾನೆ.  ಪ್ರಕೃತಿಯನ್ನು ಪ್ರತಿನಿಧಿಸುವ ಹೆಣ್ಣು ತಾನು ಪ್ರೀತಿಸುವ ಪುರುಷನ ಪಾಲಿಗೆ ಚೈತನ್ಯದಾಯಿನಿಯಾಗುತ್ತಾಳೆ ಎಂಬ ಅರ್ಥದಲ್ಲಿ ಈ ದೃಶ್ಯವು ಚಿತ್ರಿಸಲ್ಪಟ್ಟಿದೆ ( ಪು.೪೨೨). ಶಾಂತಕುಮಾರಿಯವರ ಸುಂದರ ಅನುವಾದವು ಕೃತಿಯನ್ನು ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************

ಗಝಲ್ Read Post »

ಕಾವ್ಯಯಾನ

ಸಾಧ್ಯವಾದರೆ ಕಲಿ

ಕವಿತೆ ಸಾಧ್ಯವಾದರೆ ಕಲಿ ಪ್ರತಿಮಾ ಕೋಮಾರ ಈರಾಪುರ ಹೌದು ನಾನು ಬರೀ ಇರುವೆನನ್ನಾಕಾರ,ಗಾತ್ರ,ಬಣ್ಣನೋಡಿನನ್ನೆಳೆಯದಿರು ಮನವೆನನ್ನ ಹೊಸಕದಿರುಸಾಧ್ಯವಾದರೆ ಕಲಿನನ್ನ ಸಂಘ ಜೀವನತುಸುವಾದರೂಹಂಚಿ ತಿನ್ನುವ ಉದಾರತೆ ನೀ ಕೊಡುವ ಪ್ರತೀತುತ್ತಿಗೂ ನಾನು ಋಣಿನಿನ್ನ ಮನೆ ಮೂಲೆಯೇಎನ್ನ ಸಾಮ್ರಾಜ್ಯನೀ ತೋರುವ ಹನಿ ಪ್ರೀತಿಗೆದುಪ್ಪುಟ್ಟು ಸೇರಿಸಿಕೊಡುವೆ ಪ್ರೀತಿಸಾಧ್ಯವಾದರೆ ಕಲಿಉಂಡ ಮನೆಗೆ ದ್ರೋಹ ಬಗೆಯದನನ್ನ ಪ್ರಾಮಾಣಿಕತೆ ನೀ ಬತ್ತಿಯಿಟ್ಟು ತೈಲವೆರೆದುಉರಿಸುವ ಹಣತೆ ನಾನುನಾ ಕತ್ತಲೆಯಲ್ಲುಳಿದರೂನೀಡುವೆ ನಿನಗೆ ಬರೀಬೆಳಕುಸಾಧ್ಯವಾದರೆ ಕಲಿಬೆಳಕ ನೀಡಿದವರಬದುಕ ಬೆಳಕಾಗಿಸಲುಇಲ್ಲ ಆರಿಸುವವಿಶ್ವಾಸ ದ್ರೋಹವಾದರೂಮಾಡದಿರು ಹಣ್ಣು ಹೇಗಿದ್ದರೂಬರೀ ಸವಿಯನ್ನಷ್ಟೇಕುಕ್ಕಿ ಹೀರಿಖುಷಿಪಡುವುದು ಹಕ್ಕಿಸಾಧ್ಯವಾದರೆ ಕಲಿಒಂದು ಕೆಟ್ಟದ್ದನ್ನೇಕೆದಕಿಕೂಗಿ ಹೇಳುವ ಬದಲುಸಾವಿರ ಒಳ್ಳೆಯದಕಂಡು ಕಲಿತುಖುಷಿಪಡುವ ಉದಾತ್ತತೆ **************************

ಸಾಧ್ಯವಾದರೆ ಕಲಿ Read Post »

ಆರೋಗ್ಯ

ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ

ಅನುಭವ ಮೊದಲಬಾರಿಪೇಯಿಂಗ್ ಗೆಸ್ಟ್ಆಗಿಹೋದಾಗ      ಬೆಂಗಳೂರಿಗೆ ಹೋಗಿ ಬಂಧುಗಳ ಮನೆಯಲ್ಲಿ  ಬಂಧುಗಳ  ಹಾಗೆ ಒಂದೆರಡು ದಿನ ಇದ್ದು ಬರುವುದು ಬೇರೆ ವಿಚಾರ !ಅದೇ ನಮ್ಮ ಕೆಲಸಕ್ಕೆ ಹೋಗಿ ಇರುವುದು ವೆರಿ ಹಾರಿಬಲ್‌! ಯಾರಿಗೂ ಇರಿಸು ಮುರಿಸು ಬೇಡ ಎಂಬ ಕಾರಣಕ್ಕೆ ಸಾಧನಾಕಾಂಕ್ಷೆಗಳ ಅರ್ಥಾತ್ ಉದ್ಯೋಗಾಕಾಂಕ್ಷೆಗಳು,. ಸ್ಪರ್ಧಾಕಾಂಕ್ಷಿಗಳು ಏನೇ ಕರೆಯಲಿ ಅವರ ಮುಂದಿನ ಆಯ್ಕೆ ಪಿಜಿ.  ಪಿಜಿ ಅಂದರೆ  ‘ಪೇ’ ಮಾಡಿ ‘ಗೆಸ್ಟ್’ ಆಗಿರಿ ಅಂತ ಅಲ್ಲ ಪೇ ಮಾಡಿ  ಪೇನ್ಫುಲ್ ಅಡ್ಜಸ್ಮೆಂಟ್ ಮಾಡಿಕೊಂಡಿರಿ ಎಂದರ್ಥ. ಅತ್ತೆ ಮನೆಯ ಝಲಕ್‌ಗಳನ್ನು ಅಂದರೆ ಅತ್ತೆ ಮನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ರಿಯಲ್ ಡೆಮೊ ಕ್ಲಾಸ್‌ಮಾಡಿ ತೋರಿಸಿ ಬಿಡುತ್ತಾರೆ  ಕೆಲವೊಮ್ಮೆ ಪಿಜಿ ಸುಂದರಿಯರು ಎದ್ದರೆ ಕಾಲು ಹಿಡಿಯುತ್ತಾರೆ ಬಗ್ಗಿದರೆ ಜುಟ್ಟು ಹಿಡಿಯುತ್ತಾರೆ ಅಂತರಲ್ಲ ಹಾಗೆ ಮುಖ ನೋಡಿ ವ್ಯವಹರಿಸುತ್ತಾರೆ. ನಮಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂದು ಗೊತ್ತಾಗಿಬಿಟ್ಟರೆ ಚಿತ್ರ-ವಿಚಿತ್ರವಾಗಿ ವರ್ತಿಸುತ್ತಾರೆ. ಆದರೆ ನನಗೆ ಸಿಕ್ಕಿದ ರೂಮ್ಮೇಟ್ ಸ್ಮಿತಳ ಹಾಗೆ ಸದ್ಭಾವದವರೂ ಖಂಡಿತಾ ಇರುತ್ತಾರೆ ಹೇಗಾದರೂ ಮಾಡಿ ಕೆ.ಎ.ಎಸ್. ಪಾಸು ಮಾಡಿಯೇ ತೀರುತ್ತೇನೆ ಅಂತಿದ್ದ ನಂಗೆ ಪಿಜಿ ಗೆ ಹೋಗಲು ಮನಸ್ಸಾಯಿತು. ಲಗೇಜ್ ಸಮೇತ ಹೊರಟೇಬಿಟ್ಟೆ.  ಜಸ್ಟ್ ಡಯಲ್‌ ಮೂಲಕ ಪಿಜಿ ಅಡ್ರೆಸ್ ಹುಡುಕಿದ್ದ ನನಗೆ ವಿಳಾಸ ಸಿಕ್ಕಿತು.  ಅದು ನನ್ನ ಪಾಲಿಗೆ “ಅಡ್ಜಸ್ಟ್ ಡಯಲ್”  ಪಿಜಿಯ ಹೆಸರು ‘ವಸಂತವಿಹಾರ’. ಅಲ್ಲಿಯ ವಾಚ್‌ಮ್ಯಾನ್ ನನ್ನನ್ನು ನೋಡುತ್ತಲೇ ಒಳಕರೆದ ನನ್ನ ತಮ್ಮ ಪೂರ್ವಾಪರ ವಿಚಾರಿಸತೊಡಗಿದ. ನಮ್ಮ ಲಗೇಜ್ ನೋಡುತ್ತಲೇ ಶಾಕ್‌ಗೆ ಒಳಗಾಗಿದ್ದ ಅವನು ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲಾರದೆ ಬಾಯಿ ಮುಚ್ಚಿಸಬೇಕೆಂದು “ನಿಮ್ಮನೆ ಅಂತ ತಿಳಿದುಕೊಳ್ಳಬೇಡಿ ಇದು ಬೆಂಗಳೂರು ಅದೂ  ಪಿಜಿ…” ಅಂದುಬಿಟ್ಟ. “ಪ್ರಥಮ ಚುಂಬನA ದಂತಭಗ್ನA” ಆಯಿತು ಎಂಬ ಭಾವನೆ ನನ್ನನ್ನಾವರಿಸಿತು.      ಪಿಜಿಯ ಮ್ಯಾನೇಜರ್ ನೀಲಾದೇವಿ ಬಂದು  “ಮ್ಯಾಡಮ್” ಎಂದು ಪರಿಚಯ ಮಾಡಿಕೊಂಡು ಅಡ್ವಾನ್ಸ್ ತೆಗೆದುಕೊಂಡರು  ಅಡ್ರೆಸ್ ಫೋಟೊ ಎಲ್ಲಾ ತೆಗೆದುಕೊಂಡು “ನಮ್ಮ ಪಿಜಿ ಅಂದರೆ ಬಹಳ ಫೇಮಸ್ ಇಲ್ಲಿ ಬಂದವರಿಗೆ ಯಾರಿಗೂ ಮೋಸವಾಗಿಲ್ಲ sಸಕ್ಸಸ್ss ಅಗಿಯೇ ಇಲ್ಲಿಂದ ಕಾಲ್ತೆಗೆಯುವುದು. ನಿಮಗೂ ಶುಭಕಾಲ ಬಂದಿದೆ ಅದಕ್ಕೆ ಇಲ್ಲಿಗೆ ಬಂದಿರುವುದು” ಎಂದು ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು. ನಂತರ “ನೀವು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು ಯುಗಾದಿ ಹಬ್ಬಕ್ಕೆ ವೆಕೇಟ್ ಮಾಡ್ತೀವಿ ಅಂದವರು ಇನ್ನೂ ಬಂದಿಲ್ಲ ಇನ್ನೆರಡು ದಿನದಲ್ಲಿ ಅವರು ಬರುತ್ತಾರೆ. ಅಲ್ಲಿವರೆಗೆ ಹಬ್ಬಕ್ಕೆ ಊರಿಗೆ ಹೋಗಿರುವವರ ಬೆಡ್‌ಖಾಲಿ ಇದೆ ಅದನ್ನು ಉಪಯೋಗಸಿಕೊಳ್ಳಿ” ಎಂದರು ಸರಿ! ಎಂದು ನಾನು ತಲೆಯಾಡಿಸಿದೆ ಅಲ್ಲಿಗೆ ಎರಡನೆ ದಂತಭಗ್ನವಾದAತಾಯಿತು.   ಎರಡು ದಿನ ಹೇಗೋ ಕಳೆಯಿತು ಹಬ್ಬಕ್ಕೆ ಹೋದವಳು ಮರಳಿ ಬಂದು ನನ್ನನ್ನು ನೋಡಿದ ಕೂಡಲೆ ನೀಲಾದೇವಿಯನ್ನು ಕರೆದು “ನೋಡಿ ನಮ್ಮ ರೂಂನಲ್ಲಿ ಇರೋರು ಮೂವರು ಆ ಮೂವರನ್ನು ಬಿಟ್ಟರೆ  ವಾಶ್ ರೂಮನ್ನು ಬೇರೆಯವರು ಉಪಯೋಗಿಸುವಂತಿಲ್ಲ”. ಎಂದು ಸುಟ್ಟುರಿಯುವಂತೆ ನುಡಿದಳು. ಬೇಜಾರಿನ ಮೇಲೆ ಬೇಜಾರು ಪ್ರಾರಂಭವಾಯಿತು. ಅಷ್ಟರಲ್ಲಾಗಲೇ ಅವರಿಗೆ ಜಾಗ! ಜಾಗ! ಎಂದು ಸುದ್ದಿ ಇಡೀ ಪಿ.ಜಿಯ ತುಂಬೆಲ್ಲಾ ಹರಡಿತು. ಬೃಹತ್ ಸುದ್ದಿಯೇ ಆಯಿತು ಅನ್ನಿ. ಇವತ್ತೊಂದು ದಿನ ಬಂಧುಗಳ ಮನೆಗೆ ತೆರಳಿ ಊರಿಗೆ ಹೊರಡುವ ನಿರ್ಧಾರದಿಂದ ಲಗೇಜ್ ಬ್ಯಾಗ್ ಎತ್ತಿಕೊಂಡಾಗಲೇ ಸ್ಮಿತ ನನಗೆ ಪರಿಚಯವಾದಳು. ಹುಡುಗಿ ಮಂದಸ್ಮಿತಳಾಗಿಯೇ ಬಂದು “ಎಲ್ಲಿ ಮಲಗುವಿರಿ?” ಎಂದಳು “ಗೊತ್ತಿಲ್ಲ? ಊರಿಗೋ ಕಸಿನ್ ಮನೆಗೋ ಹೋಗುವೆ” ಎಂದೆ “ನೀವು ಬಂದಿರುವುದು ಸಾಧನೆಯ ಉದ್ದೇಶದಿಂದ ಊರಿಗೆ ಹೊರಡುವುದು ಏನು ಮಾತು ಬನ್ನಿ ನನ್ನ ರೂಮಿಗೆ ಅರೆ ಏನು ನೋಡೋದು ಬನ್ನಿ…. ಬನ್ನಿ ಅಂದರೆ ಬರಬೇಕಪ್ಪ” ಎಂದು ನನ್ನನ್ನು ಅವಳ ರೂಮಿಗೆ ಕರೆದೊಯ್ದಳು.      “ನಿಮ್ಮನ್ನು ನೋಡಿದರೆ ನನಗೆ ಏನು ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ನಮ್ಮ ರೂಮು ಖಾಲಿಯಿಲ್ಲ ಅದರೆ ನನ್ನ ಗೆಳತಿ ಬೇಸಿಗೆ ರಜೆಗೆ ಊರಿಗೆ ಹೋಗಿದ್ದಾಳೆ ಅವಳ ಬೆಡ್ ನೀವು ಉಪಯೋಗಿಸಬಹುದು” ಎಂದಳು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.  ಒಡಹುಟ್ಟಿದವರಿಗಿಂತ ಹೆಚ್ಚಾಗಿ ಪ್ರೀತಿ ತೋರಿಸಿದಳು.      ಎಷ್ಟು ಆತ್ಮೀಯತೆ ಎಂದರೆ ಇವತ್ತಿಗೂ ನೆನೆಸಿಕೊಂಡರೆ ಕಣ್ಣಾಲಿಗಳು ತೇವಗಟ್ಟುತ್ತವೆ. ಪರಿಚಯ ಗಾಢವಾದಂತೆ ಒಂದೇ ಊರಿನವರು ಎಂದು ಗೊತ್ತಾಯಿತು. ಕಣ್ಣರಿಯದಿದ್ದರೂ ನಮ್ಮ ಕೊರಳ ಧ್ವನಿ ಒಂದೇ ಆದ್ದರಿಂದ ಕರುಳ ಬಳ್ಳಿಯ ಸಂಬAಧಕ್ಕಿAತ ನಮ್ಮ ಭಾಂದವ್ಯ ಹೆಚ್ಚಾಗಿಬಿಟ್ಟಿತು. ಒಂದೇ ಮಾತು ಹೇಳಿದಳು “ನೀವು ಬಂದಿರುವುದು ಉದ್ದೇಶವಿಟ್ಟುಕೊಂಡು ಉದ್ದೇಶ ಈಡೇರಿಸಿಕೊಳ್ಳಿ ಅಷ್ಟೆ” ಎಂದಳು. ಮರುದಿನ ಎದ್ದು ಸ್ನಾನ ಮುಗಿಸಿ ಕ್ಲಾಸ್‌ಗೆ ಹೊರಟೆ. ನನ್ನ ಊರಿನಿಂದ ನನ್ನೊಟ್ಟಿಗೆ ಬಂದಿದ್ದ ನನ್ನ ಜೊತೆಗಾತಿಗೆ ಆಗಲೆ ಮುಖ ಗಡಿಗೆಯಾಯಿತು! ಇಲ್ಲಿ ಬಂದರೂ ಅವರಿಗೆ ಆತ್ಮೀಯರು ಸಿಕ್ಕಿಬಿಟ್ಟರಲ್ಲ ಎಂಬ ಧಗೆ ಇತ್ತು. ಪಾಪ ಸ್ಮಿತ  ಪಿಜಿಗೆ ಬರುವಷ್ಟರಲ್ಲಿ ತಿಂಡಿ ಖಾಲಿಯಾಗಿರುತ್ತದೆಂದು ಬಾಕ್ಸ್ಗೆ ತಿಂಡಿ ತುಂಬಿಸಿಕೊAಡು ನಮ್ಮ ತರಗತಿಗೇ ತಂದುಕೊಟ್ಟಳು. ರುಚಿರುಚಿಯಾಗಿ ಮಾಡಿಕೊಂಡು ತಿಂದಿದ್ದ ನಾಲಿಗೆಗೆ ಸ್ವಲ್ಪ ಕಷ್ಟದ ದಿನಗಳೆನೇ. ಮುರಿದ ಇಡ್ಲಿ, ಸುಕ್ಕುಗಟ್ಟಿದ ದೋಸೆ, ಬಣ್ಣಕಳೆದುಕೊಂಡ ಚಿತ್ರನ್ನ, ಸೊರಗಿದ ಉಪ್ಪಿಟ್ಟು, ಬಾಡಿದ ಪಲವ್ ಇವೆ! ಹಿಡಿಸಲಿಲ್ಲ.      ನಾನು ಡಯಟ್ ಮಾಡುತ್ತಿದ್ದೇನೆ ಎಂದು ನೆಪಹೇಳಿ  ಫ್ರಷ್ ಫ್ರೂಟ್ ಜೂಸ್ ತಂದು ಕುಡಿದು ರೂಮಿನಲ್ಲಿಯೇ ಓದುತ್ತಾ ಕುಳಿತೆ.  ಅದೇ ಟೈಮ್ ಟೇಬಲ್ .  ಸಂಜೆಯ  ತರಗತಿ ಮತ್ತೆ ೪ ರಿಂದ ೬ ಗಂಟೆಗೆ, ಸರಿಯಾಗಿ ೧೨.೦೦ ೧೨.೦೫ಕ್ಕೆ ಕುಕ್ಕರ್‌ಯುವತಿ ವಿಷಲ್ ಹಾಕಿ ಹಾಕಿ ಅಡುಗೆ ಆಗುತ್ತಿದೆ ಎಂದು ಸಾರಿಸಾರಿ ಹೇಳುತ್ತಿದ್ದಳು. ಒಗ್ಗರಣೆಯ ಸದ್ದು ಅಷ್ಟೇನು ಆರ್ಭಟಿಸಲಿಲ್ಲ ! ಆಘ್ರಾಣಿಸುವಂತಿರಲಿಲ್ಲ!. ನಮಗೆ ಒಂದು ಗಂಟೆಗೆ ಊಟಕ್ಕೆ ಬನ್ನಿ ಎಂಬ ಕರೆ ಬಂತು. ಬೇರೆ ಬೇರೆ ರೂಮಿನವರೆಲ್ಲ ಊಟದ ಬಾಕ್ಸ್ಗಳನ್ನು ಲೋಟಗಳನ್ನು ಸದ್ದುಮಾಡಿಕೊಂಡು ಹೊರ ಮೆಟ್ಟಿಲಿಳಿಯುತ್ತ ಬಂದರು. ನನಗೆ ಮಜುಗರವಾಯಿತು ಅವರೆಲ್ಲ ಊಟ ತೆಗೆದುಕೊಂಡು ಹೋಗಲಿ ಎಂದು ನಿಧಾನವಾಗಿ ಹೊದೆ. ಸಾಂಬರ್ ಏನೋ ಇದೆ ಸರಿ! ಆದರೆ ಯಾವ ಎಂದು ಕೇಳುವ ಪರಿಸ್ಥಿತಿ ಬಂದೇ ಬಿಟ್ಟಿತು.   ಮೊದಲಿಗೆ ಬಂದವರ ಪಾತ್ರೆಗೆ ಇದ್ದ ಸ್ವಲ್ಪ ತರಕಾರಿಗಳು ಸೇರಿದ್ದವು.      ಸಂಜೆ  ಟೀ ಟೈಮ್ ಅಗುತ್ತಲೇ ಬೆಕ್ಕು ಕೆಡಿಸಿದ ದುರ್ನಾತ ಎಲ್ಲಾ ಕಡೆ ಹಬ್ಬಿತು ಪಿಜಿ  ಲಲನೆಯರು ಮೂಗು ಹಿಡಿದುಕೊಂಡೇ ಬೆಕ್ಕು ಕೆಡಿಸಿದ ಜಾಗ ಹುಡುಕಹೊರಟರೆ ಆ ಗಬ್ಬುನಾತ ಬರುತ್ತಿರುವುದು ಟೀ…  ಪಾತ್ರೆಯಿಂದ ಎಂದು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಕಾಫಿ ಅಭ್ಯಾಸವಿದ್ದ ನಮಗೆ ಈ ಟೀ   ಉಸಾಬರಿ ಬೇಡವೆಂದೇ ಕಾಫಿಗೆ ಅನ್ಯ ಮಾರ್ಗ ಕಂಡುಕೊAಡೆ. ತಿಂಗಳಿಗೆ ರೂ.೫೦ ಕೊಟ್ಟರೆ ಎರಡು ಗ್ಲಾಸ್ ಬಿಸಿನೀರು ಸಿಗುತ್ತಿತ್ತು ಸಂಜೆಗೆ ಸರಿ ಅಂತ ಬಿಸಿನೀರು ತಂದು ಇನ್ಸಟಂಟ್ ಕಾಫಿ ಪೌಡರ್, sಸಕ್ಕರೆ  ಮಿಲ್ಕ್ ಪೌಡರ್ ಹಾಕಿ ಕಾಫಿ Éಅರೇಂಜ್   ಮಾಡಿಕೊಂಡರೆ ನನ್ನ ಊರಿನ ಜೊತೆಗಾತಿ “ಇದು ಕಾಫಿ ತರಾನೇ ಇಲ್ಲ” ಎಂದಳು ಇನ್ನೇನು ಅವಳ ತಲೆಗೆ ಮೊಟಕುವುದೊಂದು ಬಾಕಿ ಸುಮ್ಮನಾದೆ. ಹೀಗೆ ದಿನಗಳು ಉರುಳಿದವು. ಸಂಜೆ ಹೊರಗೆಲ್ಲು ಹೋಗಲಾಗುವುದಿಲ್ಲವಲ್ಲ ಪೇರ‍್ನಂಥ  ನಂತಹ ಚಪಾತಿಗೆ  ಟಿ ಸ್ಪೂನ್ನಂಥ sಸ್ಪೂನಲ್ಲಿ  ಪಲ್ಯ ಹೆಸರುಗೊತ್ತಿಲ್ಲದ ಸಾಂಬರ್ ಸೋಡದಿಂದ ಉಬ್ಬಿದ ಅನ್ನ ನೀರ್‌ರ್ ……… ಮಜ್ಜಿಗೆ ಅನಿವಾರ್ಯವಾಗಿ ನನ್ನ ಊಟದ ಪರಿ ಅಡ್ಜಸ್ಟ್  ಆಯ್ತು.      ಒದಲು ಕುಳಿತರೆ ೯.೩೦ ರಿಂದ ೯.೪೦ರ ಒಳಗೆ ಒಳ್ಳೆಯ  ಸ್ಟಾçಂಗ್ ಕಾಫಿಯ ಮಸಾಲೆ ರೊಟ್ಟಿ ಬೇಯುತ್ತಿರುವ ಘಮಲು ಹಾಗೆ ನಾವಿದ್ದ ಎರಡನೆ ಮಹಡಿಗೆ ತೇಲಿ ತೇಲಿ ಬರುತ್ತಲಿತ್ತು. ಅಂದರೆ ನಮ್ಮ ಅಡುಗೆಯಾಕೆ ದ್ರೌಪದಿಯಮ್ಮನ ಸ್ಪೆಷಲ್ ಅಡುಗೆ ಅವರಿಗೆ ಮಾತ್ರ. ತೋಳಿಲ್ಲದ ಬಟ್ಟೆಯ ಲಲನೆಯರು ಬಂದರೆ ಕೆಂಗಣ್ಣಾಗುತ್ತಿದ್ದರು. ವಾಪಸಕಳಿಸಿ “ಮೈತುಂಬ ಬಟ್ಟೆ ಹಾಕೊಂಡು ಬಿಟ್ಟಿದ ಮುಡಿಯನ್ನು ಕಟ್ಟಿಕೊಂಡು ಬಾ!” ಎಂದು ಗದರುತ್ತಿದ್ದರು. ಸ್ಮಿತಾಳ ಚಿಕ್ಕಪ್ಪನ ಮನೆ ಜಯನಗರದ ಕಡೆಯಿತ್ತು. ಆಕೆ ವಾರಾಂತ್ಯದ ಎರಡು ದಿನಗಳು ಅಲ್ಲಿ ಹೋಗಿ ಗೆಳತಿಯರ ಜೊತೆ ಸೇರಿಸಿ ನನಗೂ ಬೇಕಾದ ಅಡುಗೆಯನ್ನು ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ತುಂಬಿ ತರುತ್ತಿದ್ದಳು. ಸದ್ಯ ಒಳ್ಳೆಯ ಮನೆ ರುಚಿ ತೋರಿಸಿ ಆಕೆಗೆ ಇಂದಿಗೂ ಮನಸ್ಸಿನಲ್ಲಿ ನೆನಪಾದಾಗಲೆಲ್ಲ ಥ್ಯಾಂಕ್ಸ್s ಹೇಳಿಕೊಳ್ಳುತ್ತೇನೆ. ಊಟವಾದ ನಂತರ ಬಿಡುವು ಮಾಡಿಕೊಂಡು ನಾನು ಕುಮಾರ ವ್ಯಾಸ ಭಾರತ ಸನ್ನಿವೇಶಗಳನ್ನು, ಕುವೆಂಪುರವರ ಬಗೆಗಿನ ವಿಚಾರ ಹೇಳುತ್ತಿದ್ದೆ ಅವಳು ಅವಳ ಗೆಳತಿ ರಮ್ಯ ಬಹಳ ಆಸಕ್ತಿಯಿಂದ ಕೇಳಿ ಮಲಗುತ್ತಿದ್ದರು.      ಸ್ಮಿತ ಉದ್ಯೋಗ ಮಾಡುತ್ತಿದ್ದ ಯುವತಿ ನಾನು ಸಂಜೆಯ ತರಗತಿಗೆ ಹೋಗುವಾಗ ಹಾಲ್‌ನಲ್ಲಿ  ಕೀಇಡುವ ಬದಲು ಮರೆತು ತೆಗೆದುಕೊಂಡು ಹೋಗಿದ್ದೆ  ಫೋನ್ ಮಾಡಿ ಸುಟ್ಟವರಿಯುವಂತೆ ಮಾತನಾಡಿದಳು ದಢದಢನೆ ಅವಳೆಡೆಗೆ ಧಾವಿಸಿ ಬರುತ್ತಿದ್ದ ನನ್ನನ್ನು ಕಂಡಾಕೆ ಕೂಲ್ ಆದಳು ಮರುಮಾತನಾಡಲಿಲ್ಲ. ಇಂದಿಗೂ ಅವಳ ನೆನಪು ನನ್ನಲ್ಲಿ ಹಸಿರಾಗಿದೆ. ಬಿಸಿ ನೀರು ಎಲ್ಲಿ ಖಾಲಿಯಾಗಿಬಿಡುವುದೋ ಎಂದು ಸ್ನಾನಮಾಡಿಕೊಂಡು ಮಲಗುವವರು ಅಲ್ಲಿದ್ದರು. ಸ್ವಲ್ಪವೂ ಮುಜುಗರವಿಲ್ಲದೆ ಉಪಯೋಗಿಸಿದ ಪ್ಯಾಡನ್ನು ಬೇಕಾಬಿಟ್ಟಿ ಎಸೆದು ಬೇರೆಯವರಿಗೆ ಮಜುಗರ ತರಿಸುವವರು ಅಲ್ಲಿದ್ದರು. ಎದ್ದು ಶನಿಕಸ ಗುಡಿಸಿಕೊಳ್ಳದೆ ಕಸ ಗುಡಿಸುವವರು ಬರುವವರೆಗೂ ಕಾಯುವ ಸೋಮಾರಿಗಳು ಅಲ್ಲಿದ್ದರು. ಅಂತವರಿಗೆಲ್ಲ ಈ ಸ್ಮಿತ ಅಂದರೆ ಭಯ. ಒಂತರಾ  ಲೇಡಿ ರ್ಯಾಂಬೋ ಆಕೆ ಬರುತ್ತಿದ್ದಳೆಂದು ಗೊತ್ತಾದರೆ ಎಲ್ಲರು ಅಲರ್ಟ್ ಆಗಿ ಬಿಡುತ್ತಿದ್ದರು. ನನಗೋಸ್ಕರ ಅವರಿವರ ಬಳಿ ಕೇ ಕೇಳಿ  ನೋಟ್ಸ್s ತಂದುಕೊಡುತ್ತಿದ್ದಳು. ಇಷ್ಟರಲ್ಲಿ ಸ್ಮಿತಳ  ರೂಮ್ ಮೇಟ್ ವಾಪಾಸ್ಸು  ಪಿಜಿಗೆ ಬರುವುದು ಖಾತ್ರಿಯಾಯಿತು. ಬೇರೆ ರೂಂಗಳು ಖಾಲಿಯಿದ್ದರೂ ಅಲ್ಲಿಗೆ ಹೋಗಲು ನನಗೆ ಮನಸ್ಸಾಗಲಿಲ್ಲ. ಸ್ಮಿತ ಆಫೀಸಿನಿಂದ ಬರುವುದನ್ನೆ ಕಾಯ್ದು ನಾನು ಊರಿಗೆ ಹೊರಡುತ್ತೇನೆ! ನಿನಗೆ ಶುಭವಾಲಿ! ಎಂದೆ. ಮನಸ್ಸಿನಲ್ಲಿ ಅಲ್ಲಿ ಇರುವುದಕ್ಕೆ ಅಸೆ ಅದರೆ ಪರಿಸ್ಥಿತಿ ಬೇಡ ಅನ್ನಿಸುತ್ತಿತ್ತು. ಅಲ್ಲಿಗೆ ಅಕ್ಷಯ ತದಿಗೆ ಸ್ಮಿತಳ ಗೆಳತಿ ರಶ್ಮಿ ಅವರಿಬ್ಬರು ವಿಜಯನಗರ  ಮಾರ್ಕೆಟ್ಗೆ ಹೋಗಿ ಅಗತಾನೆ ಸಂಪಿಗೆ, ಕನಕಾಂಬರ, ಮರುಗ ಹಾಕಿ ಕಟ್ಟಿದ ಮೈಸೂರು  ಮಲ್ಲಿಗೆಹೂವನ್ನು , ಬಳೆ ಅರಿಸಿನ ಕುಂಕುಮ ಸ್ವೀಟ್ ಎಲ್ಲ ತಂದರು. ನನ್ನನ್ನು ಕೂರಿಸಿ ನನ್ನ ಮಡಿಲು ತುಂಬಿದರು ಎಲ್ಲರ ಕಣ್ಣಂಚಲ್ಲಿ ನೀರು!  ನನ್ನ ವೇಲನ್ನೆ ಹರಹಿ ಮಡಿಲು ತುಂಬಿಸಿಕೊಂಡೆ.ಈಗಿನ ಹಾಗೆ ಸ್ಮಾರ್ಟ್   ಫೋನ್ ಹಾವಳಿ ಅಗಿರಲಿಲ್ಲ ಇದ್ದರೆ  ಫೋಟೊಗಳಲ್ಲಿ ಒಂದಷ್ಟು ನೆನಪು ಹಸಿಯಾಗಿ ಇರುತ್ತಿದ್ದವೇನೋ.? ಗೊತ್ತಿಲ್ಲ!! “ಥ್ಯಾಂಕ್ಸ್ ಫಾರ್ ಟೀಚಿಂಗ್ ಪಲ್ಸಸ್ ಆಫ್ ಲೈಫ್ ಬಿಟ್ಸ್ ಆಫ್ ಲೈಫ್”s  ಅಂತ ಅಂದುಕೊAಡೇ ನನ್ನೆಲ್ಲಾ ಲಗೇಜ್ ಪ್ಯಾಕ್ ಮಾಡಿಕೊಂಡೆ. ಆದರೆ ಹೊಸಬರನ್ನು ಕಳ್ಳಗಣ್ಣುಗಳಿಂದಲೆ ನೋಡುವ ಅನುಮಾನದ ಕಣ್ಣುಗಳಿಗೆ ಈಗಲೂ ಧಿಕ್ಕಾರವಿದೆ.      ಮರು ದಿನ ಸ್ಮಿತ ಕಛೆರಿಗೆ ರಜೆ ಹಾಕಿ ಅಚೇ ಕರೆದುಕೊಂಡು ಎಂದು ಲಗೇಜ್ ಇಟ್ಟುಕೊಟ್ಟು ಶುಭಾಶಯಗಳನ್ನು ಗದ್ಗದಿತಳಾಗಿಯೇ ಹೇಳಿದಳು ಬಾಯ್! ಬಾಯ್! ಅನ್ನುವ ಆಕೆಯ ಕೈಸನ್ನೆ ಇನ್ನೊಮ್ಮೆ “ಈ ಪಿ.ಜಿ. ಗೆ ಕಾಲಿಡಬೇಡಿ ನಿಮ್ಮಂತಹವರಿಗೆಲ್ಲ ಈ ಪಿ.ಜಿ. ಜೀವನ!” ಎಂದು ವಿನಂತಿಸಿಕೊಳ್ಳುವAತಿತ್ತು. ವಿನಂತಿಗೊಳ್ಳುತ್ತಲೇ ಆಕೆ ಮರೆಯಾದಳು.. ಬಿಳಿಬಣ್ಣದ ಚೂಡಿದಾರ್ಗೆ ಧರಿಸಿದ್ದ ಅವಳ ತಿಳಿನೀಲಿ ಬಣ್ಣದ ವೇಲ್ ತಿಳಿಗಾಳಿಗೆ  ಹಾರಾಡುತ್ತಿರುವಂತೆಯೇ  ನಾನಿದ್ದ ಅಟೋ ಮುಂದೆ  ಸಾಗಿತ್ತು. ಅವಳ ನಂಬರ್  ಬಹಳ ದಿನಗಳವರೆಗೆ ಇತ್ತು! ಆದರೆ ಈಗಿಲ್ಲ !ಕಡೆ ಪಕ್ಷ ಆಕೆಯ ನಂಬರನ್ನಾದರೂ ಉಳಿಸಿಕೊಂಡಿಲ್ಲವಲ್ಲ ಎಂಬ ಕೊರಗು ಇವತ್ತಿಗೂ ಇದೆ. ಆದರೆ ಆಕೆ ಸಾಯಿಮಂದಿರದಿAದ ತಂದು ಕೊಟ್ಟ ಸಾಯಿ ಫೋಟೋ ನನ್ನ

ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ Read Post »

ಇತರೆ, ಜೀವನ

ಕಡಿವಾಣವೂ ಪ್ರೀತಿಯೇ!!!!!

ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ   ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ ಕೊಟ್ಟಳು. ದಿನಾಲೂ ಶಾಲೆಯಿಂದ ಬಂದ ತಕ್ಷಣ ತನ್ನಲ್ಲಿರುವ ಪೆನ್ಸಿಲ್, ರಬ್ಬರ್, ಶಾರ್ಪನರ್ ಮತ್ತು ಕ್ರೆಯಾನ್ಸ್ ಗಳನ್ನು ತಪ್ಪದೇ ತನಗೆ ತೋರಿಸಬೇಕು, ಕಳೆದುಕೊಂಡು ಬಂದರೆ ಹೊಸ ವಸ್ತುಗಳನ್ನು ಕೊಡುವುದಿಲ್ಲವೆಂದು.ಈ ನಿಯಮವನ್ನು ತಲೆಯಲ್ಲಿ ಇಟ್ಟುಕೊಂಡ ಮಗಳು ದಿನಾಲೂ ತಪ್ಪದೆ ವಸ್ತುಗಳನ್ನು ತೋರಿಸತೊಡಗಿದಳು. ಕಳೆದುಕೊಂಡು ಅಥವಾ ಶಾಲೆಯಲ್ಲಿ ಎಲ್ಲೋ ಇಟ್ಟು ಮರೆತು ಬರುವ ಪದ್ಧತಿ ಕೊನೆಗೊಂಡಿತು.           ಈಗಿನ ಪಾಲಕರು ಮಕ್ಕಳಿಗೆ ಬೇಕೆಂದು ಎಲ್ಲವನ್ನೂ ಮಕ್ಕಳು ಕೇಳುವ ಮೊದಲೇ ಬಹುವಾಗಿ ತಂದು ಬಿಡುವ ಸಂಪ್ರದಾಯ ರೂಢಿಸಿಕೊಂಡು ಬಿಟ್ಟಿದ್ದಾರೆ. ವರ್ಷದುದ್ದಕ್ಕೂ ಒಂದು ಪೆನ್ಸಿಲ್, ಒಂದು ರಬ್ಬರ್, ಒಂದು ಶಾಪ್ ನರ್, ಒಂದು ಕ್ರೆಯಾನ್ ಬಾಕ್ಸ್ ಇದ್ದರೆ ಸಾಕು. ಆದರೆ ಪಾಲಕರು ಡಜನ್ಗಟ್ಟಲೆ ವಸ್ತುಗಳನ್ನು ತಂದಿಟ್ಟಿರುತ್ತಾರೆ. ಅವು ಎಲ್ಲಿಟ್ಟಿರುತ್ತಾರೆಂದು ಮಕ್ಕಳಿಗೂ ಗೊತ್ತು. ದಿನವೂ ಯಾವುದಾದರೂ ವಸ್ತುವನ್ನು ಕಳೆದುಕೊಂಡು ಬಂದು ಪಾಲಕರಿಗೆ ಹೇಳದೆಯೇ ಹೊಸದನ್ನು ಪ್ಯಾಕೆಟ್ ನಿಂದ ಒಡೆದು ಉಪಯೋಗಿಸಲು ಪ್ರಾರಂಭಿಸುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಡಜನ್ ಡಜನ್ ವಸ್ತುಗಳು ಮಾಯವಾಗಿರುತ್ತವೆ. ಮತ್ತೆ ಬೇಕು ಎಂದು ಹಟ ಹಿಡಿದಾಗ ಮಾತ್ರ, ಸಾಮಾನು ಖಾಲಿಯಾಗಿದೆ ಎಂಬ ಅರಿವು ಪಾಲಕರದ್ದಾಗುತ್ತದೆ. ಅಲ್ಲಿಯವರೆಗೂ ಎಷ್ಟಿತ್ತು?ಹೇಗೆ ಖಾಲಿಯಾಯಿತು? ಎಂಬುದು ಗೊತ್ತೇ ಆಗಿರುವುದಿಲ್ಲ.        ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಹಟ ಎನ್ನುವ ಶಬ್ದ ಎಂದೂ ಶಬ್ದಕೋಶದಲ್ಲಿ ಇರಲೇ ಇಲ್ಲ. ಪಾಲಕರು ಕೊಡಿಸಿದ ವಸ್ತುಗಳನ್ನು ಅವು ಇನ್ನೂ ಉಪಯೋಗಕ್ಕೆ ಬರಲ್ಲ ಎನ್ನುವವರಿಗೆ ಬಳಸಲಾಗುತ್ತಿತ್ತು. ಜೂನ್ ತಿಂಗಳಲ್ಲಿ ಸಾಮಾನುಗಳನ್ನು ಕೊಡಿಸಿದರೆ ಮುಗಿಯಿತು ಮುಂದೆ ಮುಂದಿನ ಜೂನ್ನಲ್ಲಿ ಶಾಲೆಯ ವಸ್ತುಗಳನ್ನು ಖರೀದಿಸಲಾಗುತ್ತಿತ್ತು. ಕಳೆದುಕೊಂಡು ಬಂದ ಉದಾಹರಣೆಗಳು ತುಂಬಾ ಕಡಿಮೆ. ಜೊತೆಗೆ ವೆರೈಟಿ,ವೆರೈಟಿ ಅಥವಾ ಪ್ರತಿದಿನಕ್ಕೆ ಹೊಸದನ್ನು ಉಪಯೋಗಿಸಬೇಕೆಂಬ ಹಟವೂ ಇರಲಿಲ್ಲ. ಮೇಲಾಗಿ ಆಗಿನ ಪಾಲಕರು ಎಷ್ಟು ಬೇಕೋ ಅಷ್ಟೇ ತಂದು ಮಕ್ಕಳಿಗೆ ಕೊಡುತ್ತಿದ್ದರು. ಡಜನ್ಗಟ್ಟಲೆ ತಂದ ರೂಢಿಯೇ ಇರಲಿಲ್ಲ. ವರ್ಷಕ್ಕೆ ಇಂತಿಷ್ಟೇ ಎಂಬ ಕಟ್ಟುನಿಟ್ಟು ಇದ್ದುದರಿಂದ ವಸ್ತುಗಳ ಉಪಯೋಗ ಮತ್ತು ರಕ್ಷಣೆ ಸರಿಯಾಗಿಯೇ ಆಗುತ್ತಿತ್ತು.           ಕಾಲ ಬದಲಾದಂತೆ ಪಾಲಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳು ಬೇಡಿದ್ದೆಲ್ಲವನ್ನು ಕೊಡಿಸುವುದು ತಮ್ಮ ಧರ್ಮ ಎಂದು ತಿಳಿದು, ಕೇಳಿದ್ದು ಕೇಳದೆ ಇದ್ದದ್ದನ್ನೆಲ್ಲ ಕೊಡಿಸುವುದನ್ನು ಪಾಲಕರು ಅನುಸರಿಸುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಕೊಡಿಸುವುದು ಉತ್ತಮ. ಜೊತೆಗೆ ಅದರ ಉಪಯೋಗ ಸರಿಯಾಗಿ ಆಗುತ್ತದೆಯೋ ಇಲ್ಲವೋ ಅನ್ನುವುದನ್ನು ಪರೀಕ್ಷಿಸುತ್ತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ದುಡ್ಡಿನ ಮಹತ್ವ ತಿಳಿಯುವಂತೆ ಮಾಡಬೇಕು.            ಇಗೀಗ ಡ್ರಗ್ಸ ಜಾಲದಲ್ಲಿ ಸಿಕ್ಕಿಕೊಂಡವರನ್ನ ನೋಡಿದರೆ ಇವರಿಗೆ ದುಡ್ಡು ಸಿಕ್ಕುವುದು ಎಷ್ಟು ಸಲೀಸು!!!ಮೈಯೊಳಗಿನ ರಕ್ತವನ್ನು ಬೆವರಿನಂತೆ ಸುರಿಸಿದರೂ ಬಡವನಿಗೆ ಎರಡು ಹೊತ್ತಿನ ಕೂಳು ದುರ್ಲಭ.ಇಂಥ ಬಡತನವನ್ನು ಉಂಡುಟ್ಟವರಿಗೆ,ಉತ್ತಮ ನೌಕರಿ, ತಮ್ಮದೊಂದು ಮನೆ,ಮಕ್ಕಳಿಗೆ ವಿದ್ಯಾಭ್ಯಾಸ ಕೊನೆಗೆ ಸಾಧ್ಯವಾದರೆ ಕಾರ್ ಒಂದು ಖರೀದಿ.ಇವಷ್ಟೇ ಕನಸುಗಳು.ಶ್ರೀಮಂತಿಕೆಯಲ್ಲೇ ಹುಟ್ಟಿದವರಿಗೆ, ಇಲ್ಲಾ ಇಗೀಗ ಶ್ರೀಮಂತ ಆದವರಿಗೆ ಅಥವಾ ತಾವಾಗಿಯೇ ದುಡ್ಡು ಗಳಿಸಿ ಪ್ರಾಥಮಿಕ ಹಂತದ ಎಲ್ಲಾ ಆಸೆಗಳು ಸಂಪೂರ್ಣಗೊಂಡವರಿಗೆ ದುಡ್ಡು ಕಷ್ಟವಲ್ಲ.ಇಂಥವರೇ ವ್ಯಸನಿಗಳಾಗುತ್ತಾರೆ.        ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿ ಎಂದುಕೊಂಡಿದ್ದಾರೆ ಕೊಡಿಸದಿದ್ದರೆ ಪ್ರೀತಿ ಇಲ್ಲ ಅಥವಾ ಕಡಿಮೆ ಎಂದು ಮಕ್ಕಳು ತಿಳಿದಾರು ಎಂಬ ಭಯದಲ್ಲೇ ಕೊಡಿಸುತ್ತಾರೆ. ಬೇಡಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿಯೇ? ಹಟ ಯಾವಾಗಲೂ ಗೆಲ್ಲಬೇಕೆ? ಇಲ್ಲ ಬೇಡಿದ್ದೆಲ್ಲವನ್ನೂ ಕೊಡಿಸದಿರುವುದು ಪ್ರೀತಿ ಎಂಬುದನ್ನು ಪಾಲಕರು ತೋರಿಸಬೇಕು.ಕಡಿವಾಣವೂ ಪ್ರೀತಿಯ ಸಂಕೇತ. ಯಾವ ವಸ್ತುವೂ ಜಗತ್ತಿನಲ್ಲಿ ಪುಗ್ಗಟ್ಟೇ ಸಿಗಲ್ಲವೆಂದು ತಿಳಿಹೇಳಬೇಕಾಗಿದೆ.ಹಣದ, ದುಡಿತದ ಮಹತ್ವವನ್ನು ಹೇಳಿಕೊಡಬೇಕು. ಬೇಕಾಬಿಟ್ಟಿ ವಸ್ತುಗಳನ್ನು ತೆಗೆದುಕೊಂಡು, ಒಂದು ದಿನವೂ ಉಪಯೋಗಿಸದೇ ಮತ್ತೆ ಹೊಸದು ಬೇಕೆನ್ನುವುದಕ್ಕೆ ಲಗಾಮ ‌ಮತ್ತು ‌ಹಟ ‌ಒಳ್ಳೆಯದಲ್ಲವೆಂದು ತಿಳಿಹೇಳಬೇಕು.  ***********************************************************

ಕಡಿವಾಣವೂ ಪ್ರೀತಿಯೇ!!!!! Read Post »

You cannot copy content of this page

Scroll to Top