ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧಿ ವಿಶೇಷ

‘ನಮ್ಮ ಮಹಾತ್ಮ’

ಎಸ್. ವಿಜಯಗುರುರಾಜ

ಗುಜರಾತಿನ ಸುಪುತ್ರ
ಕಸ್ತೂರ್ ಬಾ ರ ಬಾಳಮಿತ್ರ
ಆಫ್ರಿಕನ್ ಹಕ್ಕುಗಳಿಗಾಗಿ ಹೋರಾಡಿ
ಅಜೇಯನಾದ ಬ್ಯಾರಿಸ್ಟರ್

ಮೇಲು ಕೀಳಿನ ಕತ್ತಲೆಯ ಕಳೆದು
ಐಕಮತ್ಯ ಸಾಧಿಸಿದ ಸಾಧಕ
ಸಾಬರ್‌ಮತಿ ಆಶ್ರಮದಿ ನೆಲೆಸಿ
ಚರಕದಿ ನೂಲು ನೇಯ್ದ ಗುರಿಕಾರ
ಮಹೋನ್ನತ ಧ್ಯೇಯಗಳ ಹರಿಕಾರ

ಉಪ್ಪಿನ ಸತ್ಯಾಗ್ರಹದಿ ದಂಡೀಯಾತ್ರೆಯ
ಪಾದ ಸವೆಸಿದ ದಂಡನಾಯಕ
ಉಪವಾಸ ಸತ್ಯಾಗ್ರಹಗಳ ಕೈಗೊಂಡು
ಹರಿಜನ ಅಸ್ಪೃಷ್ಯತೆಗಳ ನಿವಾರಿಸಿ
ಮದ್ಯಪಾನ ವಿರೋಧಿ ಚಳುವಳಿಗಳ ಮುನ್ನಡೆಸಿದ ಮಹಾತ್ಮ

ಕಸ್ತೂರ್ ಬಾ ಆಶ್ರಮದ ಆಶ್ರಯಧಾತೆ
ಅನಾಥೆ ಲಕ್ಷಿö್ಮಯ ಲಾಲಿಸಿದ ಮಹಾಮಾತೆ
ಸೇವಾಗ್ರಾಮದ ಕರ್ಮಭೂಮಿಯಲಿ
ಕುಷ್ಠ ರೋಗಿಗಳ ಪಾಲಿಸಿದ ಶುಶ್ರೂಷಕಿ
ಖಾದಿಯ ಒರಟಿನಿಲಿ ಮೃದು ಮನಸ ಸಾಧ್ವಿ
ಧರ್ಮ ತ್ಯಾಗಗಳ ಸೇವಾ ಸಂಘರ್ಷಗಳಲಿ
ಬಾಪುವಿನ ಬಲಗೈ ಆದ ಬಾ

ಭಾರತಾಂಬೆಯ ಸೆರೆಯ ಬಿಡಿಸಲು
ಬ್ರಿಟಿಷರ ಕಪಿಮುಷ್ಟಿ ಸಡಿಸಲು
ಸೆರೆಮನೆಯೇ ಮನೆಯಾಗಿಸಿದ
ಬಾಪೂ ಬಾ ರ ಜೀವನ ಯಾನ
ಸ್ವಾತಂತ್ರö್ಯ ತಂದಿತ್ತು ಸ್ವಾತಂತ್ರö್ಯ ಗೀತೆ ಹಾಡಿ
ಹೇ ರಾಮ್ ಹೇ ರಾಮ್
ಎನ್ನುತ ಅಮರನಾದ
ನಮ್ಮ ಮಹಾತ್ಮ

******************************

About The Author

1 thought on “”

  1. ನನ್ನ ಕವನವನ್ನು ಪ್ರಕಟಿಸಿರುವುದಕ್ಕೆ ಧನ್ಯವಾದಗಳು

Leave a Reply

You cannot copy content of this page

Scroll to Top