ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧಿ ವಿಶೇಷ

ಬಾಪೂ

ಸತ್ಯಸಂಧ ಸರಳ ಗಾಂಧಿ ಮೋಹನ
ಸತ್ಯಾಗ್ರಹದಿಂದ ಜಯವ ತಂದವನ
ಅತಿಮೋಸದಿಂದ ಕೊಂದರಲ್ಲ ಬಾಪೂ

ಗುಂಡು ತುಂಡುಗಳ ಮುಟ್ಟದವನ
ಗುಂಡಿನಿಂದಲೇ ನಿನ್ನ ದೇಹವನು
ತುಂಡುಮಾಡಿ ಕೊಂದರಲ್ಲ ಬಾಪೂ

ಅಹಿಂಸೆಯೇ ಪರಮಧರ್ಮವೆಂದವನ
ರಕ್ತಪಾತವಿಲ್ಲದೆ ಸ್ವಾತಂತ್ರ್ಯ ತಂದವನ
ಹಿಂಸೆಯಿಂದಲೇ ಕೊಂದರಲ್ಲ ಬಾಪೂ

ಸಾಟಿಯಿಲ್ಲದ ಪ್ರಾಮಾಣಿಕ ಅವಧೂತನ
ನೋಟಿಗಳ ಮೇಲೆ ಹಾಕಿ ನಿನ್ನ ಚಿತ್ರಣ
ಅಟ್ಟಹಾಸದ ಭ್ರಷ್ಟಾಚಾರಗೈದರಲ್ಲ ಬಾಪೂ

ದೇವದೂತನಂತ ಶಾಂತ ಜೀವನದ ಸಂತನ
ಜೀವಂತವಿರುವಾಗ ಕಡೆಗಣಿಸಿ ರಾಮಭಕ್ತನ
ಸಾವಿನ ನಂತರ ನಿನ್ನ ಪೂಜಿಸಿದರಲ್ಲ ಬಾಪೂ

ಸ್ವಚ್ಛತಾ ಅಭಿಯಾನದ ಸುಳ್ಳು ಹೆಸರಿನಲಿ
ನಿಶ್ಚಲ ನಿರ್ಮಲ ನಿನ್ನ ಸಾತ್ವಿಕ ತತ್ವಗಳನೆಲ್ಲ
ಕೊಚ್ಚೆಯಂತೆ ಗುಡಿಸಿ ಒಗೆದರಲ್ಲ ಬಾಪೂ

ರಾಮರಾಜ್ಯದ ಸಿಹಿ ಕನಸು ಕಂಡವನ
ನಾಮ ಸ್ಮರಣೆಯನು ಮನಸಿನಿಂದಲೇ
ಸುಮ್ಮನೆ ತೆಗೆದು ಒಗೆದರಲ್ಲ ಬಾಪೂ

********************************

ವಿನುತಾ ಹಂಚಿನಮನಿ

ಕಸಾಪಗೆ ಮಹಿಳಾ ಅಧ್ಯಕ್ಷರು

About The Author

1 thought on “”

Leave a Reply

You cannot copy content of this page

Scroll to Top