ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಹುಯಿಲಗೋಳ ನಾರಾಯಣರಾಯ..!

ಲೇಖನ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ವಿನ ಹುಯಿಲಗೋಳ ನಾರಾಯಣರಾಯ..! ಇಂದು ಹುಯಿಲಗೋಳ ನಾರಾಯಣರಾಯರ ಜನ್ಮದಿನ. ಆ ನೆನಪಲ್ಲಿ ಈ ಬರಹ… ಹುಯಿಲಗೋಳ ನಾರಾಯಣರಾಯರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯನ್ನು ರಚಿಸಿದವರು. ೧೮೮೪ ಅಕ್ಟೋಬರ್ ೪ ರಂದು ಗದಗದಲ್ಲಿ ಜನಿಸಿದವರು. ಇವರ ತಂದೆ ಕೃಷ್ಣರಾಯರು, ತಾಯಿ ರಾಧಾಬಾಯಿ(ಬಹಿಣಕ್ಕ). ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗೂ ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು (ಮುಂಬೈ ವಿಶ್ವವಿದ್ಯಾಲಯ) ಸೇರಿದರು. ೧೯೦೭ ರಲ್ಲಿ ಬಿ.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ, ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿಯೇ ಆರಂಭಿಸಿದವರು. ಇಂತಹ ಹುಯಿಲಗೋಳ ನಾರಾಯಣರಾಯರು ‘ಕರ್ನಾಟಕ ಏಕೀಕರಣ’ದಲ್ಲಿ ಪ್ರಮುಖ ಪಾತ್ರ ವಹಿಸದವರಲ್ಲಿ ಒಬ್ಬರು. ಅಲ್ಲದೇ ಧಾರವಾಡದ ವಿದ್ಯಾವರ್ಧಕ ಸಂಘದ ಸ್ಥಾಪನೆಯಲ್ಲೂ ಪ್ರಮುಖರಲ್ಲೊಬ್ಬರಾಗಿದ್ದವರು. ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದವರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ‘ಜೈ ಕರ್ನಾಟಕ ವೃತ್ತ’ , ‘ಪ್ರಭಾತ’ , ‘ಧನಂಜಯ’ ಮೊದಲಾದವುಗಳಲ್ಲಿ ಪ್ರಕಟವಾದವು. ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನೂ ರಚಿಸಿದರು. ನಾರಾಯಣರಾಯರು ‘ಮೂಡಲು ಹರಿಯಿತು’ ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬರುತ್ತದೆ. ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ. ನಾಟಕಗಳು– ಹುಯಿಲಗೋಳ ನಾರಾಯಣರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ನಾಟಕಗಳನ್ನು ರಚಿಸಿದವರು. ಅವುಗಳು ಕೆಳಕಂಡಂತಿವೆ– # ಕಾಲ್ಪನಿಕ ವಜ್ರಮುಕುಟ (೧೯೧೦) ಕನಕವಿಲಾಸ (೧೯೧೩) # ಐತಿಹಾಸಿಕ ಪ್ರೇಮಾರ್ಜುನ(೧೯೧೨) ಮೋಹಹರಿ(೧೯೧೪) ಅಜ್ಞಾತವಾಸ(೧೯೧೫) ಪ್ರೇಮವಿಜಯ(೧೯೧೬) ಸಂಗೀತ ಕುಮಾರರಾಮ ಚರಿತ(೧೯೧೭) ವಿದ್ಯಾರಣ್ಯ(೧೯೨೧) # ಪೌರಾಣಿಕ ಭಾರತ ಸಂಧಾನ(೧೯೧೮) ಉತ್ತರ ಗೋಗ್ರಹಣ(೧೯೨೨) # ಸಾಮಾಜಿಕ ಸ್ತ್ರೀ ಧರ್ಮ ರಹಸ್ಯ(೧೯೧೯) ಶಿಕ್ಷಣಸಂಭ್ರಮ(೧೯೨೦) ಪತಿತೋದ್ಧಾರ(೧೯೫೨) ಅವರಿಗೆ ಸಂದ ಪ್ರಶಸ್ತಿ ಹಾಗೂ ಗೌರವಗಳು ಹೀಗಿವೆ– ಆಗಿದ್ದ ಮುಂಬಯಿ ಸರಕಾರವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು. ಕಲೋಪಾಸಕ ಮಂಡಳಿಯಿಂದ ಸನ್ಮಾನ – ೧೯೫೨ ಗದಗ – ಬೆಟಗೇರಿ ನಾಗರಿಕರಿಂದ ಸನ್ಮಾನ – ೧೯೩೫ ಗದಗ ವಕೀಲರ ಸಂಗದಿಂದ – ೧೯೫೫ ಕರ್ನಾಟಕ ಸರ್ಕಾರ ಪ್ರಥಮ ರಾಜ್ಯೋತ್ಸವ – ೧೯೫೬ ಕನ್ನಡ ಸಾಹಿತ್ಯ ಪರಿಷತ್ತು – ೧೯೬೧ ಇನ್ನಿತರ ವಿಷಯಗಳು– ಹುಲಗೋಳ ನಾರಾಯಣರಾಯರ ಸಂಗಡಿಗರು ಅಥವಾ ನಾಟ್ಯವಿಲಾಸಿಗಳು ಆಡಿದ ಇವರ ನಾಟಕಗಳ ಸಂಪಾದನೆಯನ್ನು ಸಮಾಜಶಿಕ್ಷಣ ಮತ್ತು ಸುಧಾರಣೆಗೆ ವಿನಿಯೋಗಿಸಲು ಇವರು ಉದ್ದೇಶಿಸಿದ್ದರು. ಅದರಂತೆಯೇ ಗದಗಿನಲ್ಲಿ ವಿಧ್ಯಾದಾನ ಸಮಿತಿಯಿಂದ ಪ್ರೌಢಶಾಲೆಯೊಂದು ನಿರ್ಮಾಣವಾಯಿತು. ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು… ‘ಉದಯವಾಗಲಿ’ ಗೀತೆ ರಚಿಸಿದರು. ಇಂತಹ ಹುಯಿಲಗೋಳ ನಾರಾಯಣರಾಯರು ೪, ಜುಲೈ ೧೯೭೧ರಂದು ಹುಬ್ಬಳ್ಳಿಯಲ್ಲಿ ನಿಧನರಾದರು… ಇಂತಹ ಹುಯಿಲಗೋಳ ನಾರಾಯಣರಾಯರ ಪುಸ್ತಿಕೆಗಳನ್ನ ಮುಂದೆ ಕನ್ನಡ ಪುಸ್ತಕ ಪ್ರಾಧಿಕಾರವು “ಹುಯಿಲಗೋಳ ನಾರಾಯಣರಾಯರು ಜೀವನ ಸಾಧನೆ”ಯನ್ನು ಪುಸ್ತಕದಲ್ಲಿ ಪ್ರೊ.ಸಂಪದಾ ಸುಭಾಷ್‌, ಕನ್ನಡ ಪುಸ್ತಕ ಪ್ರಾಧಿಕಾರ, ೨೦೧೨.ರಲ್ಲಿ ಪ್ರಕಟಿಸಿತು. ಹೀದ್ದರು ಹುಯಿಲಗೋಳ ನಾರಾಯಣರಾಯರು. ಮತ್ತು ಹೀಗಿತ್ತು ಹುಯಿಲಗೋಳ ನಾರಾಯಣರಾಯರ  ಸಾಹಿತ್ಯ ಸಾಧನೆ… **************************** ಕೆ.ಶಿವು.ಲಕ್ಕಣ್ಣವರ

ಹುಯಿಲಗೋಳ ನಾರಾಯಣರಾಯ..! Read Post »

ನಿಮ್ಮೊಂದಿಗೆ

ಕಲಿಕೆ ಕಸಿದ ಕರೋನ

ಕವಿತೆ ಕಲಿಕೆ ಕಸಿದ ಕರೋನ ಜಿ.ಎಸ್.ಹೆಗಡೆ ಶಾಲೆಯ ಅಂಗಳದಿ ಬೆಳೆದಿವೆ ಈಗಮುಳ್ಳಿನ ಜೊತೆಗೆ ಕಳ್ಳಿಗಳುಕಲಿಕಾಕೋಣೆಯ ಚಪ್ಪರ ತುಂಬಿದೆಜೇಡರ ಬಲೆಯೊಳು ಕೀಟಗಳುಹಾಜರಿ ವಹಿಗೆ ಮೆತ್ತುತ್ತಿದೆ ಈಗಮಣಗಟ್ಟಲೆ ಧೂಳುಅಡುಗೆ ಮನೆಯಲಿ ಓಡಾಡುತಿವೆಇಲಿ ಜಿರಲೆಗಳು ಜೋರು ಪರಿಮಳವಾದ ಪೆನ್ಸಿಲ್ ರಬ್ಬರ್ಬ್ಯಾಗೊಳು ಹಾಗೆ ಇವೆಹೊಸ ಹೊದಿಕೆಯನು ಧರಿಸಿಹ ಪುಸ್ತಕತೆರೆಯಲು ಕಾಯುತಿವೆಅಪ್ಪನು ಕೊಡಿಸಿಹ ಬಣ್ಣದ ಛತ್ರಿಮಳೆಯೊಳು ಆಡು ಎನ್ನುತಿದೆಮಾವನು ಕೊಡಿಸಿಹ ಹೊಸ ಬಟ್ಟೆಯುಹುಟ್ಟುಹಬ್ಬವನು ನೆನಪಿಸಿವೆ ಶಾಲೆಗೆ ಹೋದರೆ ಗುರುಗಳು ಎಂದರು‘ಬರಬೇಡವೋ ನೀನು ಶಾಲೆ‌ ಕಡೆ,ನೀನಿದ್ದಲ್ಲಿಗೆ ನಾನೇ ಬರುವೆನುನೀಡಿರಿ ಗಮನವ ವಿದ್ಯೆಯೆಡೆ’ಊರಿನ ಗುಡಿಗೋಪುರ ಅಂಗಣದಲ್ಲಿ‌ಮಕ್ಕಳ ಮೊಗಕೆ ಮುಸುಕುಕಲಿಯುವ ಆಸೆಗೆ ಮುಸುಕನು ಹಾಕಿತುಕರೋನದಿ ಮುದುಡಿತು ಕನಸು ಮಕ್ಕಳೇ ಬನ್ನಿರಿ ತನ್ನಿರಿ ನೀವುಹಳೆ ಪುಸ್ತಕಗಳ ಗಂಟುನೆನಪಿಸಿ ಕಲಿಸುವೆ ಮರೆತಿರುವುದನುಹೊಸ ಪಠ್ಯಕೆ ನೀಡುವೆ ನಂಟುಬೇಡ ಗುರುಗಳೆ ಹಳೆಯ ಪಾಠವುಬೇಸರ ತರಿಸುತಿದೆಹೊಸ ಪಾಠಗಳ ದಿನವೂ ಕಲಿಸಿರೆಸಂತಸ ಉಕ್ಕುತಿದೆ *************

ಕಲಿಕೆ ಕಸಿದ ಕರೋನ Read Post »

ಕಾವ್ಯಯಾನ

ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ

ಕವಿತೆ ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ ಪ್ರಜ್ಞಾ ಮತ್ತಿಹಳ್ಳಿ ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವನುಅರ್ಧ ಮುಚ್ಚಿದರೂಮಾಸ್ಕ್ ತೆಗೆಯಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ ರಘುಪತಿಮುಗಿಸಿ ಬಂದ ಮೇಲೆಯೇ ನಾಷ್ಟಾ ತಿಂದೆಆದರೀ ಸಲಏನೋ ಕಲಮಲ ಕಳೆದ ವಾರ ನಿನ್ನ ಆತ್ಮಕತೆ ಓದಿಎಲ್ಲರ ನೋವನು ಬಲ್ಲವನೊಬ್ಬನಹುಡುಕುತ್ತ ಹೊರಟಿದ್ದೆನಡುರಾತ್ರಿ ಕಂದೀಲು ಹಚ್ಚಿದದೋಣಿಗಳು ತುಯ್ಯುವ ಅಲೆಯಲ್ಲಿನಿಧಾನಕ್ಕೆ ಹೊರಟಿದ್ದವು.ನಿದ್ದೆ ಜಗ್ಗುವ ರೆಪ್ಪೆಗಳ ಅಗಲಿಸುತ್ತಹುಟ್ಟು ಹಾಕುವ ಬೆಸ್ತರು ಎಂದೂಮಲಗದ ಮೀನುಗಳ ಹಂಬಲಿಸುತಿದ್ದರುಕೈ ಮಗ್ಗ ನಂಬಿ ಬಟ್ಟೆ ಕತ್ತರಿಸುವಹೆಂಗಸರು ಕೂಳಿಲ್ಲದೇ ಕಂಡವರತೋಟಕ್ಕೆ ಮಣ್ಣು ಹೊರುತ್ತಾಕೆಕ್ಕರಿಸುವ ನೋಟಕ್ಕೆ ಕಾನದಿರುವಂತೆಹರಿದ ಸೆರಗೆಳೆಯಲು ಪರದಾಡುತ್ತಿದ್ದಾರೆ ಆಡಿನ ಹಾಲು ಕರೆದಿಟ್ಟ ಪಾತ್ರೆಯಲ್ಲಿಸಣ್ಣಗೆ ನೊರೆಯ ಗುಳ್ಳೆಗಳುಅಡಗುತ್ತ ಒಳ ಪದರಕ್ಕೆ ಹೈನುಗಸಿ ಮೂಡಿಸುತ್ತ ಕುಡಿದ ತುಟಿಯಮೇಲೊಂದು ಹಾಲಿನ ಮೀಸೆನಿನಗೂ ಮೂಡಿರಬಹುದಲ್ಲವೆ ಬಾಪೂ ಜೊಹಾನ್ಸಬರ್ಗಿನ ಪ್ಲೇಗು ರೋಗಿಗೆಗಂಜಿ ಕಾಯಿಸುವಾಗ ಫೀನಿಕ್ಸಆಶ್ರಮದ ಪುಂಡು ಹುಡುಗರಿಗೆ ಕವಾಯತುಮಾಡಿಸುವಾಗ ಬಿಚ್ಚಿಟ್ಟ ಕೋಟಿನಕಿಸೆಯಲ್ಲಿ ತುಂಡು ಹಾಳೆಯ ಕವಿತೆಲೋಟ ನೀರು ಕೊಟ್ಟವನಿಗೆ ಊಟವಿಕ್ಕುಕಾಸು ಕೊಟ್ಟವಗೆ ಚಿನ್ನದ ಮೊಹರುಹತ್ತು ಪಟ್ಟು ಪ್ರತ್ಯುಪಕಾರಕ್ಕೆತೋಳು ಮಡಚಿ ತಯಾರಾದೆಓ ಅಲ್ಲಿ ರಿಕ್ಷಾದಲ್ಲಿ ಅಡ್ಮಿಶನ್ ಮಾಡಿಸಿಬರುತ್ತಿದ್ದ ಹುಡುಗಿಯನೆಳೆದು ಸಿರಿಂಜುಚುಚ್ಚಿ ಈಗ ಮನೆ ಮುಂದೆ ತಂದೊಗೆದರಕ್ತಸಿಕ್ತೆ ಪ್ರಾಣ ಬಿಡುವಾಗ ಕಿವಿಯಲ್ಲಿಹಾಡಬಹುದೇ ಪೀಡಪರಾಯೆ ಜಾನೆ ಕ್ಷಮೆಯಿರಲಿ ಬಾಪೂ ಈ ಸಲಭಜನೆಗೆ ಧ್ವನಿಗೂಡಿಸುವಾಗಗಂಟಲು ಗೊರಗೊರ ಕಣ್ಣುಒದ್ದೆಯಾದರೂ ನಾಲಿಗೆ ನುಡಿಯುತ್ತಿಲ್ಲಹುಲ್ಲು ಕೊಯ್ಯುವ ಹುಡುಗಿಯಕತ್ತರಿಸಿ ಬಿದ್ದ ನಾಲಿಗೆಯದೇ ನೆನಪುನೋಡು ಬಾಪೂ ಅಕಾಲದಲ್ಲಿಮೋಡ ಕತ್ತರಿಸಿ ಮಳೆ ಹೊಯ್ಯುತಿದೆಬಾರದುದು ಬಂದಾಗ ಬಪ್ಪುದು ತಪ್ಪದುಎನ್ನುತ್ತಾರೆ ಹಿರಿಯರುಮಳೆ ನಿಂತ ಕೆಸರು ದಾರಿಯಲಿಹಗೂರಕೆ ಕೋಲೂರಿ ಹೊರಡುಮುಂದಿನ ಜಯಂತಿಗಾದರೂಹಾಡಲಾಗುತ್ತದೆಯೆ ನೋಡೋಣ ***************************************

ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಗಾಂಧಿ ನಾಡಿನಲಿ ಮಾತುಗಳು ಮೌನ ಅರ್ಥ ಕಳೆದುಕೊಂಡಿವೆ |ಗಾಂಧಿ ನಾಡಿನಲಿ ಕನಸುಗಳು ಹೊಸಕಿ ಬಿಸಾಕಿ ಹಾಕಲಾಗುತ್ತಿವೆ || ಬಾಪೂಜಿ ದೇಶದಲಿ ನಾಲಿಗೆ ಹರಿತವಾದರೆ ಕತ್ತರಿಸಲಾಗುತ್ತದೆ |ಇಲ್ಲಿ ಎಲ್ಲವೂ ಭಕ್ತಿಯ ಪರಾಕಾಷ್ಠೆ ಉಧೋಒಪ್ಪಿತ ನಿರ್ಧಾರಗಳಿವೆ || ಮಲಗಿದವರ ಎಬ್ಬಿಸಬಹುದು ಸತ್ತಂತೆ ನಟಿಸುವ ದುರುಳರು ತುಂಬಿದ್ದಾರೆ |ಕಟ್ಟೆ ಪಂಚಾಯತಿ ನ್ಯಾಯ ತೀರ್ಮಾನ ಕಚ್ಚೆ ಹರುಕರೆ ತುಂಬಿಕೊಂಡಿವೆ || ಉಳ್ಳವರ ಕಾಯ್ದೆಗೆ ಹೆಣ್ಣು ಭೋಗ ವಸ್ತು ಆಕೆಯ ರಕ್ತವೇ ಗುಲಾಲು |ರಾತ್ರಿಯೂ ಕೆಲಸಗಳು ನಡೆಯುತ್ತಿವೆ ಸತ್ತ ಹೆಣಗಳು ಬೂದಿಯಾಗಿವೆ || ‘ಮುತ್ತು’ಬದಲಾವಣೆಗೆ ಕಾಯದಿರು ಮನೆ ಹೆಣ್ಣು ಮಕ್ಕಳ ಕಾವಲುಗಾರನಾಗು |ನನ್ನ ಸುಟ್ಟ ಹೊಗೆಯ ವಾಸನೆ ಪಕ್ಕದ ಗೂಡಸಲಿಗೂ ಹಬ್ಬಲಿದೆ ಎಚ್ಚರಿಸಿರುವೆ | ****************************

ಗಝಲ್ Read Post »

ಇತರೆ, ಜೀವನ

ಯಾಕೆ ನೆಗೆಟಿವಿಟಿ?

ಲೇಖನ ಯಾಕೆ ನೆಗೆಟಿವಿಟಿ? ಮಾಲಾ.ಮ. ಅಕ್ಕಿಶೆಟ್ಟಿ.  “ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು ಸಮಸ್ಯೆಯನ್ನು ಹುಟ್ಟಿಸಿಬಿಡತಾರೆ ಅನ್ನೊ ಗುಂಪಿನಲ್ಲಿ ಇವಳೂ ಒಬ್ಬಳು”  ಎಂದು ನಾವು, ನೀವು ಹೀಗಿರುವವರನ್ನು ಭಾರಿ ಬಾರಿ ಟೀಕಿಸಿ ಮಾತನಾಡಿರಬಹುದು.ಕೊರೊನಾ ರೋಗದ ಬೆನ್ನಲ್ಲೇ ಎಲ್ಲಾ ವಯಸ್ಸಿನವರನ್ನೂ ಈ ನಕಾರಾತ್ಮಕತೆ ಕಾಡುತ್ತಿದೆ.ಆದರೆ ಎಲ್ಲರೂ ಮಾಡುವ ತಪ್ಪು ಇಲ್ಲೇ ಇದೆ. ಹೌದು ಸಕಾರಾತ್ಮಕವಾಗಿ ಇರಬೇಕು, ಯೋಚಿಸಬೇಕು… ಎಲ್ಲಾ ಸರಿ. ಆದರೆ ಯಾಕೆ ವ್ಯಕ್ತಿ ಇಷ್ಟೊಂದು ನಕಾರಾತ್ಮಕವಾಗಿ ಯೋಚಿಸುತ್ತಾನೆ ಅನ್ನುವುದನ್ನು ನಾವು, ಅಂದರೆ ಅಂತ ಅಂಥ ವ್ಯಕ್ತಿಗಳಿಗೆ ಉಪದೇಶ ಮಾಡುವಾಗ ಯೋಚಿಸಬೇಕಾಗುತ್ತದೆ.ಪೊಜಿಟಿವ್ ಥಿಂಕ್ ಮಾಡಿ, ಮಾಡಿ, ಎಂದು ಒತ್ತಾಯಿಸಿದಾಗ ಅತೀವ ದುಃಖದಲ್ಲಿದ್ದ ವ್ಯಕ್ತಿ ಹೇಗೆ ತಾನೇ ಪೊಜಿಟಿವ್ ಆಗಿ ಯೋಚಿಸಬಲ್ಲ! ಆದ್ದರಿಂದ ನೆಗೆಟಿವ್ ವ್ಯಕ್ತಿಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.               ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿ ಮರಣ ಹೊಂದಿದಾಗ, ಆತ್ಮೀಯರಿಂದ ಬೇರ್ಪಟ್ಟ ನೋವು ಅಪಾರ.ಈ ಆತ್ಮೀಯರು.. ತಂದೆ ,ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ, ತಂಗಿ, ಗೆಳೆಯ,ಗೆಳತಿ ಅಥವಾ ತನ್ನದು ಅಂದುಕೊಂಡ ಯಾವುದೇ ಜೀವ, ಇತ್ಯಾದಿಗಳ ಯಾದಿಯನ್ನು ಹೊಂದಿರುತ್ತದೆ. ಜೀವನವೇ ಅವರು ಎಂದಾಗ ಅವರಿಲ್ಲದ ಜೀವನಕ್ಕೆ ಅರ್ಥವೇ ಇಲ್ಲ ಎನ್ನಿಸುವುದು ತೀರ ಸ್ವಾಭಾವಿಕ. ಅನುಭವಗಳು ಜೀವನಕ್ಕೆ ಪಾಠ ಕಲಿಸುತ್ತಾ ಎನ್ನುವುದೇನೋ ಸರಿ. ಆದರೆ ಆದ ಕೆಟ್ಟ ಅನುಭವಗಳು ಮನುಷ್ಯನನ್ನು ನೆಗೆಟಿವ್ ಕೂಪಕ್ಕೆ ತಳ್ಳುವುದೂ ಅಷ್ಟೇ ಸತ್ಯವಾಗಿದೆ. ಕೆಟ್ಟ ಅನುಭವಗಳು  ಒಬ್ಬನನ್ನು ಮೇಲೆತ್ತುವಂತೆ ಮಾಡಿದರೆ, ಇನ್ನುಳಿದವರಿಗೆ ಅಂಥ ಘಟನೆಗಳಿಂದ ಹೊರಬಾರದಂತೆ ಮಾಡಿರುತ್ತವೆ. ಪೆಟ್ಟು ತಿಂದ ವ್ಯಕ್ತಿ ಪೆಟ್ಟನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾಗಾಲೋಟದಲ್ಲಿ ಮುಂದುವರಿದು ಪ್ರಗತಿಯನ್ನು ಸಾಧಿಸಬಹುದು… ಆದರೆ ಅದು ಎಲ್ಲರ ಜೀವನದಲ್ಲೂ ಸಾಧ್ಯವಿಲ್ಲ.          ಎಷ್ಟೇ ಪೊಜಿಟಿವ್ ಆಗಿ ಇರಲು ಬಯಸಿದರೂ ಬರುವ ಸಂದರ್ಭಗಳು ಮನುಷ್ಯನನ್ನು ಕುಗ್ಗಿಸಿ ನೆಲಕಚ್ಚುತ್ತವೆ. ಅಂಥ ಸಂದರ್ಭ ಎಂದರೆ ಭಯ ಪೀಡಿತರಾಗುವ ಅನುಭವಗಳು ಅವರಲ್ಲಿ ಬೇರೂರಿ ಬಿಡುತ್ತವೆ.ಇನ್ನೊಂದೆಡೆ, ಮರಳಿ ಪ್ರಯತ್ನ ಮಾಡು ಎನ್ನುವ ಸಿದ್ಧಾಂತವನ್ನು ಕಟ್ಟಾ ನಿರ್ವಹಿಸಿದಾಗಲೂ ಮಾಡಿದ ಪ್ರಯತ್ನಗಳಿಗೆ ಬೆಲೆಯೇ ಇರಲ್ಲ; ಎಲ್ಲ ವಿಫಲವಾಗುತ್ತವೆ ಅಥವಾ ಪ್ರಯತ್ನಕ್ಕೆ ಫಲವೇ ಇರೋದಿಲ್ಲ. ಇನ್ನಷ್ಟು ಸಂದರ್ಭಗಳಲ್ಲಿ ಒಳ್ಳೆಯದೇ ಆಗುತ್ತೆ ಎಂದು ಕಾದು ಕಾದು ಕುಳಿತಿರುತ್ತಾರೆ. ಆದರೆ ಕಾಯುವಿಕೆಗೆ ಸಫಲತೆ ಸಿಕ್ಕಿರಲ್ಲ. ಒಳ್ಳೆಯ ಗಳಿಗೆ ನಿರೀಕ್ಷೆಯಲ್ಲಿ ದಿನ, ತಿಂಗಳು ವರ್ಷಗಳನ್ನು ಸವೆಸಿದರೂ ಸಾಧನೆ ಆಗಿರಲ್ಲ.ಕಾದು ಬರೀ ಸುಣ್ಣವಾಗುತ್ತಾರೆ ಅಷ್ಟೇ. ಕೆಲವು ಸಲ ಮನೆಯವರಿಂದ ಅಥವಾ ಸ್ನೇಹಿತರಿಂದ ನಿರೀಕ್ಷಿಸಿದ ಮಟ್ಟದ ಸಹಾಯ, ಸಹಕಾರಗಳು, ವ್ಯಕ್ತಿಗೆ ಸಿಕ್ಕಿರಲ್ಲ. ಒಂದು ಕಿರುಬೆರಳಷ್ಟೇ ಸಹಾಯ, ಸಹಕಾರ, ಉತ್ತೇಜನದ ಲಾಲಸೆಯನ್ನು ಇಟ್ಟುಕೊಂಡ ವ್ಯಕ್ತಿ ಒಮ್ಮೆಲೇ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಇದಕ್ಕೆ ವಿರುದ್ಧವಾದ ಸಂದರ್ಭಗಳಲ್ಲಿ ವ್ಯಕ್ತಿಯ ಸಹಾಯ, ಪ್ರೋತ್ಸಾಹ, ಕೆಲಸಕ್ಕೆ ಬಂದಿರಲ್ಲ. ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಚಿಮ್ಮುತ್ತಿರುತ್ತದೆ. ತಮ್ಮ ಮೇಲೆ ತಮಗೆ ವಿಶ್ವಾಸವಿಲ್ಲ. ಈ ಕೆಲಸದಲ್ಲಿ ನಾನು ಸೋತರೆ ಹೇಗೆ? ಜನ ಏನೆಂದಾರು? ಎಂಬುದರಲ್ಲಿ ಕಾಲಹರಣವಾಗುತ್ತದೆ. ಇಂಥದ್ದೇ ಸಂದರ್ಭಗಳು ವ್ಯಕ್ತಿಯನ್ನು ಜಿಗುಪ್ಸೆ ಹೊಂದುವಂತೆ ಮಾಡುತ್ತವೆ. ಈ ಜಿಗುಪ್ಸೆ ಜೀವನದುದ್ದಕ್ಕೂ ಮುಂದುವರಿದು ಜನ ಎಲ್ಲ ಆತ ಬರೀ ನೆಗೆಟಿವ್ ಬಿಡು ಎಂಬ ನೇಮಪ್ಲೇಟ್ ತಯಾರಿಸಿ, ಹಾಕುವುದರಲ್ಲಿ ಉತ್ಸುಕರಾಗಿರುತ್ತಾರೆ.                               ಆದರೆ ನಿಜಸಂಗತಿ ಇರೋದೇ ಇಲ್ಲಿ. ಒಬ್ಬ ವ್ಯಕ್ತಿ ಯಾವ ಕಾರಣಗಳಿಂದ ನೆಗೆಟಿವ್ ಆಗಿ ಯೋಚಿಸುತ್ತಾನೆ ಎಂಬುದನ್ನು ಅರಿಯಬೇಕಾಗಿದೆ. ಮೂಲ ಸಮಸ್ಯೆಗಳಿಗೆ ಪರಿಹಾರಗಳು ಸೃಷ್ಟಿಯಾದಾಗ ಸ್ವಾಭಾವಿಕವಾಗಿ ಪೊಜಿಟಿವ್ ಎಡೆಗೆ ಮನುಷ್ಯ ವಾಲಬಹುದು. ಇಲ್ಲಾದರೆ ಎಂದೂ ಆಗಲ್ಲ. ಪಾಸಿಟಿವ್ ಆಗಿ ಆಗಿ ಎಂದರೆ ನಾಟಕೀಯ ನಗುವನ್ನು ಹೊದ್ದು ಹೃದಯದಲ್ಲಿ ನೋವು ತುಂಬಿಕೊಂಡು ಸಾಗಬೇಕಾಗುತ್ತದೆ. ಇಂಥವರಿಗೆ ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ಅವರೊಂದಿಗೆ ಒಂದು ಆಪ್ತ ಸಮಾಲೋಚನೆಯ ಅಗತ್ಯವಿದೆ.ಸಮಸ್ಯೆಯ ಆಳ ಅರಿತು, ಪರಿಹಾರ ಒದಗಿಸಿ.ಇಲ್ಲಾ ಅವರಿಗೆ ಸಾಂತ್ವನ ನೀಡುವ ವ್ಯಕ್ತಿಗಳ ಹತ್ತಿರವಾದರೂ ಕರೆದುಕೊಂಡು ಹೋಗಿ. ಅವರಂಥದ್ದೇ ಸಮಸ್ಯೆಯಿಂದ ಬಳಲಿ, ಅವುಗಳನ್ನು ಮೆಟ್ಟಿನಿಂತ ವ್ಯಕ್ತಿಗಳ ಪರಿಚಯ ಮಾಡಿರಿ.ಅತೀಯಾದ negativity ಯಿಂದ ದೇಹಾರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಿ.ನೀವು ಕೊಡುವ ಸಲಹೆಗಳು ಅಥವಾ ಕ್ರಮಗಳು ನೈಜವಾದಲ್ಲಿ, ಖಂಡಿತ ವ್ಯಕ್ತಿ ತನ್ನ ನೆಗೆಟಿವಿಟಿಯಿಂದ ಹೊರಬರಬಹುದು.ಹೀಗೆ ಮಾಡಿದಾಗ ಒಳ್ಳೆಯ ಮಾರ್ಗದರ್ಶನ ಹಾಗೂ ಸಹಾಯ ಮಾಡಿದ ಆತ್ಮ ಸಂತೋಷ ನಿಮಗೂ ಇರುತ್ತದೆ. **************************************

ಯಾಕೆ ನೆಗೆಟಿವಿಟಿ? Read Post »

ಕಾವ್ಯಯಾನ

ಅಬಲೆಯ ಹಂಬಲ

ಕವಿತೆ ಅಬಲೆಯ ಹಂಬಲ ಅಶೋಕ ಬಾಬು ಟೇಕಲ್ ರಾಮನ ನೆಲವಾದರೂ ಅಷ್ಟೇರಹೀಮನ ನೆಲವಾದರೂ ಅಷ್ಟೇಕಾಮುಕನೆಂಬ ಕೆಂಡದಕಣ್ಣುಗಳ ಅಮಲಿಗರಿಗೆಅಬಲೆಯರ ಹಸಿ ಬಿಸಿ ರಕ್ತಹೀರ ಬೇಕಷ್ಟೇ… ಮನಿಶಾ, ಆಸೀಫಾ ಆದರೇನುನಿರ್ಭಯಾ ರಕ್ಷಿತ, ದಿಶಾಆದರೂ ಸರಿಯೇ ಇವರಿಗೆ ನಡು ರಸ್ತೆಯಲಿಹಾಡ ಹಗಲೇ ಹದ್ದು ಮೀರಿದಗೂಳಿಗಳಂತೆ ಬಂದೆರಗಿಹಾಲುಗಲ್ಲ ಹಸುಳೆಯಎದೆಯ ನಾಯಿಯಂತೆನೆಕ್ಕಿ ಬೆತ್ತಲಾಗಿಸಿಕಾಮ ತೃಷೆ ಮುಗಿಸಿಕಣ್ಣಿಲ್ಲದ ಕಾನೂನಿನಸಾಕ್ಷಿಯ ಕಟಕಟೆ ಒಳಗೂಕಥೆ ಹನಿಸಿ ಕಾಂಚಾಣದಬಿಸಿ ಮುಟ್ಟಿಸಿ ಕ್ಷಮಾದಾನದ ಅರ್ಜಿಯಲಿನಿರ್ದೋಷಿ ಪಟ್ಟ..! ಇನ್ನೆಷ್ಟು ದಿನ ಧರ್ಮಮತ ಪಂಥಗಳ ಕಡೆಬೊಟ್ಟು ಮಾಡಿ ಬೀಗುವಿರಿರಾಮ ರಹೀಮ‌ ಜೀಸಸ್ಏನಾದರೂ ಹೇಳಿಯಾರೆಅತ್ಯಾಚಾರ ಎಸಗಿರೆಂದು !! ಭ್ರಷ್ಟ ದುರುಳ ಗೋಮುಖವ್ಯಾಘ್ರರ ಕೈಯಲ್ಲಿನಅಧಿಕಾರದ ಅಂಕುಶಕಿತ್ತೊಗೆಯ ಬನ್ನಿರಿಕಾನೂನಿನ ಕುಣಿಕೆಗೆಕಾಮುಕರ ಕೊರಳೊಡ್ಡಿರಿನಾನಂದು ನಿರುಮ್ಮಳಳಾಗಿನಡು ಬೀದಿಯಲಿನೆತ್ತರಿಲ್ಲದ ಓಕುಳಿಯಲಿಗೆಜ್ಜೆಯ ಸದ್ದಿನೊಂದಿಗೆನಲಿದಾಡುತಾ ನಡೆದಾಡುವೆನಿಮ್ಮಗಳ ಕಾಯಕಕೆಜೈಯ್ ಘೋಷವಮೊಳಗಿಸುವೆ…!! ***********************************************************************

ಅಬಲೆಯ ಹಂಬಲ Read Post »

ಅನುವಾದ

ಅನುವಾದ ಸಂಗಾತಿ

ಛೇ.. ಕನ್ನಡ ಮೂಲ:ದೀಪ್ತಿ ಭದ್ರಾವತಿ. ಇಂಗ್ಲೀಷಿಗೆ:ಸಮತಾ ಆರ್ ಛೇ ಪಕ್ಕದ ಕೋಣೆಯಲ್ಲಿಯೇ ಇದ್ದ ಬಾಡಿಗೆದಾರನೊಬ್ಬಹೇಳದೆ ಕೇಳದೆ ರಾತ್ರಿಹೊರಟು ಹೋಗಿದ್ದಾನೆ ನಾಪತ್ತೆಯಾಗಿದ್ದಾನೆನನ್ನ ಪುಟ್ಟ ಮಗಳಜೀನ್ಸ್ ಪ್ಯಾಂಟನ್ನು ಹರವುವಾಗಲೆಲ್ಲಕೆಂಪು ಕಣ್ಣಿನಲಿ ನೋಡಿ“ಸರಿಯಿಲ್ಲ ಸರಿಯಿಲ್ಲ”ಎನ್ನುತ್ತ ದಢಾರನೆ ಬಾಗಿಲು ಹಾಕಿಶತಪಥ ತಿರುಗುತ್ತಿದ್ದವ ಹಗಲಿರುಳೂ ನಮ್ಮ ಮನೆಯ ಕಡೆಯೇ ದಿಟ್ಟಿಸುತ್ತಬಾಗಿಲಲ್ಲಿ ಕೂತುಅವನ ಸಂಕಟ ನೋಡಲಾಗದೆ” ನಿನಗ್ಯಾಕೊ ನಮ್ಮಗಳ ಉಸಾಬರಿ”ಎಂದಿದ್ದೆದನಿ ಜೋರಾಯಿತೋ ಏನೋಎದೆಯೊಳಗೆ ಅದೆಷ್ಡು ಮಾತುಗಳಿದ್ದವೊಒಂದನ್ನು ಹೇಳಿಕೊಳ್ಳದೆಮನೆಯ ಗೋಡೆಯ ತುಂಬೆಲ್ಲಮಸಿಯಲ್ಲಿ ಗೀಚಿ ಹೋಗಿದ್ದಾನೆ ಅದೆಷ್ಟು ಕೋಪವ ಎದೆಯ ಪುಪ್ಪಸದಲಿಅಡಗಿಸಿಕೊಂಡಿದ್ದನೊಮನೆಯ ಹೆಂಚು ಕಿಟಕಿಬಾಗಿಲುಎಲ್ಲವನ್ನು ಮುರಿದು ಹಾಕಿದ್ದಾನೆಒತ್ತಿ ಹೋಗಿದ್ದಾನೆಸಾಕಷ್ಡು ಕುರುಹುಗಳ ಸುತ್ತಲುಯಾರು ಬಂದರು ತಳ ಊರದಂತೆ ಛೇ ಒಂದಿಷ್ಡು ಕಸ ತೆಗೆಸಿ ಚೊಕ್ಕಗೊಳಿಸಿಸುಣ್ಣಬಣ್ಣ ಬಳಿಸಿದರೆ ಯಾರಾದರು ಬಂದು ಉಳಿದುಕೊಂಡಾರು ಎಲ್ಲಿಯೂ ಮನೆ ಸಿಕ್ಕದಿದ್ದರೆಪಾಪ ಅವನು? ———- ದೀಪ್ತಿ ಭದ್ರಾವತಿ. Tchah…. A tenant living next doorhas gone away,last night,All of a suddenwithout telling anyone.. Absconding he is,The one who used to stare angrily,whenever I went to drythe jeans of my little daughter,And used to slam the doorSaying” not okay, not okay “Pacing to and fro,with unease . Day and night sitting at his doorused to stare at mine.Unable to bear his grunt,Said I “why are you botheredso much about us”My voice might have been on a high ,So much might be hidingin his chest to say,Without revealing anythingGone away scribbling all uponthe wall in charcoal. Who knows,How much anger he was hiding,Inside his rib cage,He has broken all the roof tiles,doors and windows of the house.Has gone away, leaving behindenough imprints around,To make sure not to letanyone to settle down. Tchah, If it’s cleaned removingall the cobwebs,And painted anew,Then someone may comeand stay here. What if the poor fellowDoesn’t getany homeany where? ———- Translated by Samatha.R *************************************

ಅನುವಾದ ಸಂಗಾತಿ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ  ರಾಗದ ಬೆನ್ನೇರಿ ಬಂತು ಭಾವನಾ ವಿಲಾಸ ಕರ್ನಾಟಕ ಸಂಗೀತದಲ್ಲಿ’ ಕದನ ಕುತೂಹಲ’ ಅನ್ನೋ ರಾಗ ಇದೆ. ಈ ರಾಗದ ಸ್ವರಗಳನ್ನು ಸಾಕಷ್ಟು ವೇಗವಾಗಿ ಹಾಡುತ್ತಾರೆ. ಸಮುದ್ರಮಥನದ ಸಮಯದಲ್ಲಿ ಆಕಡೆ ರಾಕ್ಷಸರು,ಈ ಕಡೆ ದೇವತೆಗಳು ಅಮೃತಕ್ಕಾಗಿ ಕಡಲನ್ನು ಕಡೆಯುವಾಗಲೂ, ಎರಡೂ ವಿರುದ್ಧ ಪಂಗಡಗಳ ನಡುವೆ ಕದನವೇ. ಮನಸ್ಸೊಳಗೂ ಅಷ್ಟೇ, ಯಾವುದೇ ಹೊಸ ಆವಿಷ್ಕಾರದ ಬೆಣ್ಣೆ ಮೂಡುವುದು, ವಿರುದ್ಧ ಚಿಂತನೆಗಳ ಮಂಥನದಿಂದಲೇ. ಈ ರಾಗವನ್ನು ನೀವು ಆಲಿಸುವಾಗ ಒಂದು ಮಂಥನದ ಅನುಭವ ಆಗುತ್ತೆ. ರಾಗ ಎಂದರೆ ಒಂದು ನಿರ್ದಿಷ್ಟ ಆಯ್ಕೆಯ ಸ್ವರಗಳನ್ನು ಬೇರೆ ಬೇರೆ ಕಾಂಬಿನೇಷನ್ ಗಳಲ್ಲಿ ಹಾಡುವುದು. ಸ ರಿ ಗ ಮ ಪ ದ ನಿ ಎಂಬ ಸಪ್ತ ಸ್ವರಗಳು. ಅವುಗಳಲ್ಲಿ ಎರಡು ಅಥವಾ ಮೂರು ಬಗೆಯ ರಿ, ಗ ಮ, ಧ, ನಿ ಗಳಿವೆ. ರಿ : ಶುದ್ಧ ರಿ ( ರಿ1),  ಚತುಶ್ರುತಿ ರಿ ( ರಿ2) ಶಟ್ಶ್ರುತಿ ರಿ ( ರಿ3) ಗ : ಶುದ್ಧ ಗ ( ಗ1), ಸಾಧಾರಣ ಗ ( ಗ2), ಅಂತರ ಗ ( ಗ3) ಮ : ಶುದ್ಧ ಮ ( ಮ1), ಪ್ರತಿ ಮ ( ಮ2) ಧ :  ಶುದ್ಧ ಧ ( ಧ1), ಚತುಶ್ರುತಿ ಧ ( ಧ2) ಶಟ್ಶ್ರುತಿ ಧ ( ಧ3) ನಿ :  ಶುದ್ಧ ನಿ ( ನಿ1), ಕೈಶಿಕಿ ನಿ ( ನಿ2), ಕಾಕಲಿ ನಿ ( ನಿ3) ಸ ಮತ್ತು ಪ ಗಳನ್ನು ಆಧಾರಕ್ಕಾಗಿ ( ರೆಫರೆನ್ಸ್) ಉಪಯೋಗಿಸುವುದರಿಂದ, ಅವುಗಳಲ್ಲಿ ಒಂದೇ ವಿಧ.  ಈ ಸ್ವರಗಳ ಲಿಸ್ಟ್ ನಿಂದ, ನಾವು ಬೇಕಾದಂತೆ ಸ್ವರಗಳನ್ನು ಹೆಕ್ಕಿ ಮಾಲೆ ಕಟ್ಟಿದರೆ ಅದು ಒಂದು ರಾಗವಾಗುತ್ತೆ.  ಉದಾಹರಣೆಗೆ, ಸ, ರಿ1, ಗ1, ಮ1, ಪ, ಧ1, ನಿ1,  ಹೆಕ್ಕಿದರೆ ಅದೊಂದು ರಾಗ. ಹೀಗೆ ನೂರಾರು ಕಾಂಬಿನೇಷನ್ ಗಳನ್ನು ಮಾಡುವ ಮೂಲಕ ನಮಗೆ ಅಷ್ಟೂ ರಾಗಗಳ ಸಾಂಗತ್ಯ ಸಿಗುತ್ತೆ. ಇಲ್ಲಿ ವೈಜ್ಞಾನಿಕವಾಗಿ ನೋಡಿದರೆ, ಸ್ವರ ಎಂದರೆ ಒಂದು ಫ್ರೀಕ್ವೆನ್ಸಿ. ರಾಗದಲ್ಲಿ ಮೇಲೆ ಹೇಳಿದಂತೆ ಹಲವು ಫ್ರೀಕ್ವೆನ್ಸಿ ಗಳ ಮಾಲೆ ಇದೆ. ಮನುಷ್ಯನ ಕಿವಿಯ ಮೂಲಕ ಗ್ರಾಹ್ಯವಾಗುವ ಒಂದೊಂದು ಫ್ರೀಕ್ವೆನ್ಸಿ ಯೂ ಮಿದುಳಿನಲ್ಲಿ ಒಂದೊಂದು ಸಂವೇದನೆಯಾಗಿ ಮನಸ್ಸನ್ನು ಸ್ಪರ್ಶಿಸುತ್ತೆ. ಈ ಸಂವೇದನೆಯ ಸಾಹಿತ್ಯಿಕ ಹೆಸರೇ ಭಾವ. ಯಾವುದೇ  ಭಾಷೆಯನ್ನು ಮತ್ತು ಸಾಹಿತ್ಯವನ್ನು ಮೀರಿ, ಸ್ವರಗಳು, ಮನಸ್ಸೊಳಗೆ ಭಾವ ಸ್ಪಂದನೆ ಮಾಡಬಲ್ಲವು. ಶಿವರಂಜಿನಿ ಅಂತ ಒಂದು ರಾಗವಿದೆ.  ಇದರ ಆಲಾಪನೆಯನ್ನು ನೀವು ಆಲಿಸಿದರೆ ಶೋಕದ ಆರ್ದ್ರ ಭಾವ, ಭಕ್ತಿಯ ಸಮರ್ಪಣಾ ಭಾವ, ವಿರಹದ ನೋವಿನ ಅನುಭವ ಆಗುತ್ತೆ. ಹಾಗೆಯೇ ಮೋಹನ, ಯಮನ್ ಇತ್ಯಾದಿ ರಾಗಗಳು ಪ್ರೀತಿಯ ಉತ್ಕಟತೆಯಲ್ಲಿ, ಒಲವ ಧಾರೆಯಲ್ಲಿ ಮಿಂದ ಅನುಭೂತಿ ಕೊಡುತ್ತದೆ. ಸಾಹಿತ್ಯದ ಪದಗಳು ತಮ್ಮ ಅರ್ಥಗಳ ಮೂಲಕ, ಭಾವಕ್ಕೆ ಲಿಪಿಯಾದರೆ, ರಾಗಗಳು, ಭಾವದ ಅಮೂರ್ತ, ಅವರ್ಣನೀಯ ಅನುಭೂತಿ ಸ್ಫುರಿಸುತ್ತವೆ. ಈಗ ಭಾವಪೂರ್ಣ ಸಾಹಿತ್ಯದ ಭಾವಕ್ಕೆ ಹೊಂದುವ ರಾಗದಲ್ಲಿ, ಆ ಕವಿತೆಯನ್ನು ಹಾಡಿದರೆ!. ಅದು ರುಚಿಯಾದ ಅನ್ನ ಸಾರಿಗೆ, ಘಮಗಮ ತುಪ್ಪ ಬಡಿಸಿದ ಹಾಗೆ. ಸಾಹಿತ್ಯದ ಭಾವವನ್ನು ಚಿಂತನಶೀಲ ಮನಸ್ಸು ರಸಹಿಂಡುವಾಗ, ರಾಗದ ಸ್ವರಗಳು ಅದೇ ಹೊತ್ತಿಗೆ ಶ್ರವಣ ಮಾಧ್ಯಮದ ಮೂಲಕ ಎದೆಯೊಳಗೆ ಸ್ಪಂದನೆಯ ಲಬ್ ಡಬ್ ಆಗುತ್ತವೆ. ಹಾಡಿನ ಜತೆಗಿನ ಇತರ ವಾದ್ಯಗಳು, ಲಯ ಕಂಪನಗಳು ನಮ್ಮೊಳಗೆ ಒಂದು ಹೊಸ ಲೋಕ ಸೃಷ್ಟಿ ಮಾಡುತ್ತವೆ. ಈಗ, ಈ ಹಾಡು, ನಾಟಕದ್ದೋ, ಚಲನ ಚಿತ್ರದ್ದೋ, ಅಥವಾ ನಾಟ್ಯದ್ದೋ ಆಗಿದ್ದರೆ, ಭಾವೋತ್ಕರ್ಷಕ್ಕೆ ಮೂರನೆಯ ಆಯಾಮ ಸಿಗುತ್ತೆ. ಬರೇ ಅಭಿನಯದಿಂದಲೂ ಭಾವ ಪ್ರಕಟ ಮಾಡಲೂ ಬಹುದು, ಭಾವ ಸಂವಹನ ಮಾಡಬಹುದು ತಾನೇ. ಹಾಲುಗಲ್ಲದ ಬೊಚ್ಚುಬಾಯಿಯ ಮಗುವಿನ ಮುಗುಳು ನಗು ಸಂವಹಿಸುವ ಭಾವಕ್ಕೆ ಸಾಹಿತ್ಯ ಇದೆಯೇ?. ರಾಗ, ಕವಿತೆ ಮತ್ತು ಅಭಿನಯ ( ಶ್ರವಣ, ಭಾಷೆ ಮತ್ತು ದೃಶ್ಯ, ಮಾಧ್ಯಮ) ಈ ಮೂರೂ ವಿಧಾನದಿಂದ ನಮ್ಮ ಮನಮುಟ್ಟುವ ಪ್ರಯತ್ನ, ಸಿನೆಮಾ ಮತ್ತು ನಾಟಕದ ಹಾಡುಗಳದ್ದು. ಆ ಮೂಲಕ, ಮೂರೂ ರೀತಿಯಲ್ಲಿ  ಹಾಡಿನ ಪ್ರಸ್ತುತಿ, ನಮ್ಮೊಳಗೆ ಕಲ್ಪನಾಶಕ್ತಿಯ ನಾಲ್ಕನೇ ಆಯಾಮವನ್ನು ಸೃಜಿಸುತ್ತೆ. ಅದು ತುಂಬಾ ಹೊಸತಾದ ಅವರ್ಣನೀಯವಾದ ಪಿಕ್ಚರೈಸೇಷನ್ ನ ಕದ  ತೆರೆಯುತ್ತೆ. ಈ ಅನುಭವ ವ್ಯಕ್ತಿಯ ಹಳೆ ನೆನಪುಗಳ ಜತೆಗೆ ಅತ್ಯಂತ ಯುನೀಕ್ ಆಗಿರುತ್ತೆ. ಲಂಕೇಶ್ ಬರೆದ ಹಾಡು ಕೆಂಪಾದವೋ ಎಲ್ಲ ಕೆಂಪಾದವೋ. ಈ ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದು, ಎಸ್ ಪಿ. ಬಾಲಸುಬ್ರಹ್ಮಣ್ಯಂ. ಹಾಡಿನಲ್ಲಿ ಪುನಃ ಪುನಃ ‘ ಕೆಂಪಾದವೋ’ ಎಂಬ ಸಾಲು ಇಂಪು ಲಹರಿಯಾಗಿ ಹರಿಯುತ್ತೆ. ( ಚಲನ ಚಿತ್ರ: ಎಲ್ಲಿಂದಲೋ ಬಂದವರು, ಸಂಗೀತ : ವಿಜಯ ಭಾಸ್ಕರ್) **     ***     ** ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ ಊರು ಕಂದಮ್ಮಗಳು ಕೆಂಪಾದವೋ ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ ನುಡಿ ನುಡಿದು ಹೋದಾಗ ಪಚ್ಚಯ ತೆನೆಯಂತ ಭೂಮಿಯು ಎಲ್ಲಾನು ಕೆಂಪಾದವೋ ನನಗಾಗ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ ಕೆಂಪಾದವೋ ಎಲ್ಲ ಕೆಂಪಾದವೋ **     ***     ** ಕೆಂಪು ಬಣ್ಣ, ಕ್ರಾಂತಿಯ ಬಣ್ಣ. ಪರಿವರ್ತನೆಯ ಬಣ್ಣ. ಕ್ರಾಂತಿ, ರಕ್ತಕ್ರಾಂತಿಯೇ ಆಗಬೇಕೆಂದಿಲ್ಲ. ಜಗತ್ತಿನ ಪ್ರತೀ ಜೀವವೂ ಬದಲಾವಣೆಗೆ ಹಾತೊರೆಯುತ್ತೆ.  ಪ್ರಕೃತಿಯಲ್ಲಿ ಎರಡು ರೀತಿಯ ಬದಲಾವಣೆಯನ್ನು ಕಾಣಬಹುದು. ಮೊದಲನೆಯದ್ದು,ನಿಧಾನವಾದ, ನಿರಂತರವಾದ ಬದಲಾವಣೆ. ನಮಗೆ ದಿನ ದಿನ ,ಕ್ಷಣ ಕ್ಷಣ ಕಳೆದಂತೆ ವಯಸ್ಸಾಗುತ್ತಲ್ಲ,ಹಾಗೆ. ನಮ್ಮೊಳಗೆ ಅರಿವಿಲ್ಲದೆಯೇ ನಡೆಯುವ ಜೆನೆಟಿಕ್ ಬದಲಾವಣೆಗಳೂ ಅತ್ಯಂತ ಸೂಕ್ಷ್ಮ. ಜೀವ ವಿಕಾಸಕ್ಕೆ ಅದು ಮೂಲ.  ಎರಡನೆಯ ಬದಲಾವಣೆ ಪ್ರಳಯದಂತಹಾ ಬದಲಾವಣೆ. ಪ್ರಕೃತಿಯಲ್ಲಿ ಯಾವಾಗಲೂ ಮಲ್ಟಿಪೋಲಾರ್ ಪ್ರಕ್ರಿಯೆಗಳ ನಡುವೆ ಒಂದು ಸಮತೋಲನ ಇರುತ್ತೆ. ಆ ಸಮತೋಲನ ಯಾವುದೋ ಕಾರಣಕ್ಕೆ ( ಕೆಲವೊಮ್ಮೆ ಮಾನವ ನಿರ್ಮಿತ) ಸಮತೋಲನ ತಪ್ಪಿ, ಅಸಮತೋಲನ ಬೆಳೆಯುತ್ತಾ ಹೋಗುತ್ತೆ. ಈ ಅಸಮತೋಲನ, ಹೊರಲಸಾಧ್ಯ ಹೊರೆಯಾದಾಗ, ಹಠಾತ್ತಾದ, ಶಕ್ತಿಯುತವಾದ, ಭೂಕಂಪದಂತಹಾ ಘಟನೆ ನಡೆದು ಒಂದು ಕ್ಷಣಕ್ಕೆ ಎಲ್ಲವೂ ಅಲ್ಲೋಲಕಲ್ಲೋಲವಾಗಿ ಹೊಸ ಸಮತೋಲನಕ್ಕೆ ವ್ಯವಸ್ಥೆ ದಾಟಿಬಿಡುತ್ತೆ. ಇಂತಹ ವಿಪ್ಲವಕಾರೀ ಬದಲಾವಣೆಯಲ್ಲಿ ಸಾಕಷ್ಟು ,ಸಾವು ನೋವು ಸಂಭವಿಸುತ್ತೆ. ಹೇಗೇ ಇರಲಿ. ಬದಲಾವಣೆ ಮತ್ತು ವಿಕಾಸ ( evolution) ಜಗತ್ತಿನ ಭೂತ,ವರ್ತಮಾನ ಮತ್ತು ಭವಿಷ್ಯದ  ಅಂಗ.  ಬದಲಾವಣೆಗಾಗಿ ಗಿಡ,ಮರ, ಭೂಮಿ,ಬಾನು, ಪಚ್ಚೆ ಪೈರು ಎಲ್ಲವೂ ಹಾತೊರೆಯುವುದನ್ನು ,ಲಂಕೇಶ್ ಅವರು ಕೆಂಪಾದವೋ ಎಲ್ಲ ಕೆಂಪಾದವೋ ಅನ್ನುವ ಸಾಲುಗಳಲ್ಲಿ ಬಿಂಬಿಸಿದ್ದಾರೆ. ಹಾಡು ಕೇಳಿದಂತೆ, ಈ ಬದಲಾವಣೆಯತ್ತ ತುಡಿತ ಮನಸ್ಸೊಳಗೆ ತೀವ್ರವಾಗಲು,ಇದರ,ಸಂಗೀತ, ಹಾಡಿದ ಬಗೆ, ಲಯ ಕೂಡಾ ಕಾರಣ ಅಲ್ಲವೇ. ಈ ಕವಿತೆಯಲ್ಲಿ ಜನಪದ ಧ್ವನಿ ಹಾಡಿಗೆ ನೆಲದ ಪರಿಮಳ ಕೊಡುತ್ತೆ. ಈ ಕವಿತೆಯ ಕೊನೆಯ ಸಾಲು, “ನನಗಾಗ ಕೆಂಪಾದವೋ” ಲಂಕೇಶ್ ಅವರು ಅನುಭವ, ಸಿದ್ಧಾಂತ, ಮತ್ತು ಚಿಂತನೆ, ವ್ಯಕ್ತಿ ಕೇಂದ್ರಿತ ಎಂದು ನಂಬಿದಂತಿದೆ. ಕವಿತೆಯಲ್ಲಿ ಹೇಳಿದ ಅಷ್ಟೂ ವಿಷಯಗಳು ಕೆಂಪಾದವೋ ಅಂತ ಕಂಡದ್ದು ವ್ಯಕ್ತಿಯ  ಮನಸ್ಸಿಗೆ. ಲಂಕೇಶ್ ಅವರು ಇದೇ ಚಿತ್ರಕ್ಕೆ ಬರೆದ ಇನ್ನೊಂದು ಕವಿತೆ “ಎಲ್ಲಿದ್ದೆ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವ” ಹಾಡಾಗಿ ಹರಿದದ್ದು, ಎಸ್.ಪಿ.ಬಿ. ಅವರ ನಾದಬಿಂದುವಿನಿಂದಲೇ. ಜಾನಪದ ಶೈಲಿಯ ಭಾವಗೀತೆಗಳ ಸಂಕಲನ,ದೊಡ್ಡರಂಗೇ ಗೌಡರ, ಮಾವು- ಬೇವು. ಮಾವಿನ ತಳಿರು ಜನಪದ ಹಬ್ಬಗಳ ತೋರಣವಾದರೆ ಬೇವು ಬೆಲ್ಲ, ಬದುಕಿನ ಸಮತತ್ವ.  ಈ ಆಲ್ಬಮ್‌ ನ ಅಷ್ಟೂ ಹಾಡುಗಳು ಹಳ್ಳಿಯ ಶುಭ್ರ ಪರಿಸರದ ಮನಸ್ಸಿನ, ಸಂಭ್ರಮದ, ಪ್ರೀತಿ, ಪ್ರೇಮಗಳ ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಎಂಬಂತೆ ರಸಿಕ ಮನಸ್ಸಿಗೆ ಮುಟ್ಟುತ್ತವೆ. ಇಂತಹ ಹಾಡುಗಳಿಗೆ ಅಶ್ವಥ್ ಅವರು ರಾಗ ಸಂಯೋಜನೆ ಮಾಡಿ, ಎಸ್.ಪಿ ಬಿ. ಅವರು ಹಾಡಿದರೆ, ಅದು ಜೀವ ಭಾವದ ಔತಣ. ಅದರ ಒಂದು ಹಾಡು ಹೀಗಿದೆ. **     ***     ** ಮುಂಜಾನೆ ಮಂಜೆಲ್ಲ ಚಂದಾಗೈತೆ ಸಂಗಾತಿ ತುಟಿ ಹಂಗೆ ಹವಳsದ ಮಣಿ ಹಂಗೆ ಹೊಳಪಾಗೈತೆ… ಸಂಪಿಗೆ ತೂಗಿ ಚೆಂಡು ಹೂ ಬಾಗಿ ನೇಸರ ನಗೆಸಾರ ಶುರುವಾಗೈತೆ ಸೂಲಂಗಿ ತೆನೆಗೆ ಬಾಳೆಲೆ ಕೊನೆಗೆ ತಂಗಾಳಿ ಸುಳಿದಾಡಿ ಹಾಡಾಗೈತೆ ಕಣ್ಣಾಗಿ ಸಂಗಾತಿ ಕುಣಿದ್ಹಂಗೈತೆ.. ಮೋಡದ ದಂಡು ಓಡೋದ ಕಂಡು ರಂಗೋಲಿ ವೈನಾಗಿ ಬರೆದ್ಹಂಗೈತೆ ಆಕಾಶದ  ಬದಿಗೆ ಗುಡ್ಡದ ತುದಿಗೆ ಹೊಂಬಿಸಿಲು ರಂಗಾಗಿ ಬೆಳಕಾಗೈತೆ ಮೈದುಂಬಿ ಮನಸೋತು ಮೆರೆದಂಗೈತೆ.. **     ***     ** ಇದರ ಪ್ರತಿಯೊಂದು ಪದಗಳೂ ರಾಗ ಹೀರಿ ಗಾಯಕನ ಕಂಠದಿಂದ ಹೊಮ್ಮಿದಾಗ, ಭಾವ ಕಳೆಗಟ್ಟುತ್ತೆ. ಭಾವಮಧುವಿನ ಉನ್ಮತ್ತವಾದ ಸ್ಥಿತಿಯಿಂದ ಹೊರಬರಲಾಗದ ಸ್ಥಿತಿ ರಸಿಕ ಕೇಳುಗನದ್ದು. ಬಾಲಸುಬ್ರಹ್ಮಣ್ಯಂ ಅವರ ರೇಶ್ಮೆ ಸ್ಪರ್ಶದ ಕಂಠ, ತಗ್ಗು ಸ್ಥಾಯಿಯಿಂದ ತಾರಸ್ಥಾಯಿಗೆ ಕ್ಷಣಗಳಲ್ಲಿ ಏರಿಳಿಯುವ ಪ್ರತಿಭೆ ಮತ್ತು ಎದೆತುಂಬಿ ಹಾಡುವ ಸಮರ್ಪಣೆ,  ಚೆನ್ನಾಗಿ ಹದ ಬಂದ ಸಕ್ಕರೆ ಪಾಕದ ನೂಲೆಳೆಯ ಧಾರೆಯಂತೆ ಕಡಿಯದೆ ಹರಿಯುವ ಸರಾಗ, ಕವಿತೆಯ ಅರ್ಥಕ್ಕೆ ವ್ಯೋಮದವಕಾಶ ಒದಗಿಸುತ್ತವೆ. ರಾಗಸ್ವರಗಳು ಮಿಡಿದಾಗ ಅಂತರಂಗದ ತಂತಿಗಳಲ್ಲಿ ಭಾವ ಅನುರಣಿಸುತ್ತವೆ. ಹೀಗೆಯೇ ‘ ಪರಸಂಗದ ಗಂಡೆ ತಿಮ್ಮ ‘ ಚಿತ್ರದಲ್ಲಿ, ದೊಡ್ಡ ರಂಗೇ ಗೌಡರ ಕವಿತೆ ಹೀಗಿದೆ. “ನೋಟದಾಗೆ ನಗೆಯಾ ಮೀಟೀ ಮೋಜಿನಾಗೆ ಎಲ್ಲೆಯ ದಾಟೀ. ಮೋಡಿಯ ಮಾಡಿದೋಳ ಪರಸಂಗ ಐತೇ  ಪರಸಂಗ ಐತೇ.. ಮೋಹಾವ ತೋರಿದೋಳ ಪರಸಂಗ ಐತೇ  ಪರಸಂಗ ಐತೇ… ಬರಡಾ..ದ ಬದ್ಕೀ..ಗೆ ಹೊಸಾ ನೇಸ್ರು ಅರಳೈತೇ.”  ರಾಜನ್-ನಾಗೇಂದ್ರ ಅವರ ರಾಗ ಸಂಯೋಜನೆಯಲ್ಲಿ ಈ ಕವಿತೆಗೆ ನಾದಭಾವ ತುಂಬಿದ್ದು ಎಸ್. ಪಿ.ಬಿ. ದೊಡ್ಡರಂಗೇಗೌಡರ ಹಳ್ಳಿಯ ಭಾವಚಿತ್ರವನ್ನು ಕಣ್ಣಿಗೊತ್ತಿದ ನಂತರ, ಕೆ.ಎಸ್ ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆಯ ಪ್ರೇಮಗೀತೆಯತ್ತ ಹೊರಳೋಣವೇ.. **    ***     *** ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು || ಹುಣ್ಣಿಮೆಯ ರಾತ್ರಿಯಲಿ ಉಕ್ಕುಹುದು ಕಡಲಾಗಿ ನಿನ್ನೊಲುಮೆ ನನ್ನ ಕಂಡು, ನಿನ್ನೊಳಿದೆ ನನ್ನ ಮನಸು ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ ಮಿಂಚಿನಲಿ ನೇವುದಂತೆ ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುಹು ಕನಸಿನಂತೆ, ನಿನ್ನೊಳಿದೆ ನನ್ನ ಮನಸು ಅಲೆ ಬಂದು ಕರೆಯುಹುದು ನಿನ್ನೊಲುಮೆ ಅರಮನೆಗೆ ಹೊರಗಡಲ ರತ್ನಪುರಿಗೆ ಅಲೆ ಇಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ ಒಳಗುಡಿಯ ಮೂರ್ತಿಮಹಿಮೆ, ನಿನ್ನೊಳಿದೆ ನನ್ನ ಮನಸು ***    ***    **** ಈ ಹಾಡಿಗೆ ಸಂಗೀತ ಅಶ್ವಥ್ ಅವರದ್ದು. ಹಾಡು ಮೈಸೂರು ಮಲ್ಲಿಗೆ ಚಲನಚಿತ್ರದ್ದು. ಬಾಲಸುಬ್ರಹ್ಮಣ್ಯಂ ಅವರು ಈ ಹಾಡನ್ನು ಪ್ರೇಮದ ಆರಾಧಕನಾಗಿ ಹಾಡಿದ್ದಾರೆ. ಈ ಹಾಡುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆಯೇ?!.  ಇವುಗಳನ್ನು ಅನುಭವಿಸಬೇಕು. ಇವುಗಳ ಭಾವದಬ್ಬಿಯಲಿ ಮೀಯಬೇಕು,ಕರಗಬೇಕು. ಅದು ಸಾಧ್ಯವಾಗುವುದೇ ಗಾಯಕನ ಪ್ರಸ್ತುತಿಯಿಂದ,ರಾಗ ಸಂಯೋಜನೆಯಿಂದ. ಗಾಯಕ, ನಟ, ಕವಿ,ಚಿತ್ರಕಾರ, ಇಂತಹ ಕಲಾವಿದರು, ಭಾವನೆ ,ಸಂವೇದನೆ ಮತ್ತು ಕಲ್ಪನೆಯ ಪ್ರತಿಭಾಸಂಪನ್ನರು. ಬ್ರಹ್ಮ, ಜೀವ ಸೃಷ್ಟಿ ಮಾಡಿದರೆ ಕಲಾವಿದರು ಜೀವಭಾವ ಸೃಷ್ಟಿಕರ್ತರು. ಅಮ್ಮ ಮತ್ತು ಅಪ್ಪ,ಎರಡೂ ಏಕಕಾಲದಲ್ಲಿ ಆಗಬಲ್ಲವರೆಂದರೆ ಕಲಾವಿದರೇ. ಹಾಗಾಗಿ

Read Post »

You cannot copy content of this page

Scroll to Top