ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನಿನ್ನಿರುವು..

ವೀಣಾ ಪಿ.

ನೀನಂದು
ನನ್ನ
ಮುಡಿಗಿಟ್ಟುಕೊಳಲೆಂದು
ನಿನ್ನೊಲವಿನ
ಉದ್ಯಾನದಿಂದೆನ್ನ
ಕೈಗಿತ್ತ
ಗುಲಾಬಿಯನು
ನಾನು
ಎದೆಗೊತ್ತಿ
ಹೊತ್ತಿಗೆಯಲಿ
ಅವಿತಿಟ್ಟು
ದಶ ವಸಂತಗಳುರುಳಿ
ನಮ್ಮಿಬ್ಬರ ನಡುವೆ
ತಲುಪಲಾಗದ
ಭುವಿ-ಬಾನಿನಂತರವು
ಹರವಿಯೂ
ಮಾಸಿಲ್ಲ
ಅದೇ
ಸಮ್ಮೋಹನದೊಲವು
ಸವಿ
ಪ್ರೇಮ ಪ್ರೇರಣೆಯ
ಕಡು
ಕೆಂಪಿನಿರುವು
ಅರಳಲೆಳಸಿಯೂ
ಅರಳದುಳಿದ
ಮೊಗ್ಗಿನಲಿ
ಅಂದಿನಂತೆಯೇ ಇಂದೂ..
ನನ್ನ ನವಿರು
ಭಾವದಾಂತರ್ಯದಲಿ
ನಿನ್ನಿರುವಿನಂತೆ..!!

*******************************

About The Author

Leave a Reply

You cannot copy content of this page

Scroll to Top