ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ದೈವನಿಹನು

ದಯಾನಂದ ಕೆ ಚಂದ್ರಶೇಖರಯ್ಯ

ಗುಡಿ ಗುಂಡಾರಗಳ ಕಟ್ಟಿ
ನಾಮಫಲಕದೊಳು ವೈಭವಿಸಿದಿರೇನು?
ಮಡಿಯ ಮಾಡಿ ಹೂವು ಹಣ್ಣು ಕಾಯಿಡಿದು ಗುಡಿಯಹೊಕ್ಕಿರೇನು ?

ಕಲ್ಲಾಗಿ ಕುಳಿತ ಅವನಿಗೆ
ಕ್ಷೀರಾಭಿಷೇಕವ ಮಾಡಿರೇನು?
ನಿರ್ವಿಕಾರ ಪರಮಶಿವನಿಗೆ
ಮೃಷ್ಟಾನ್ನವ ಉಣ ಬಡಿಸಿದರೇನು?

ಜಡನೀವನು, ಹಸಿವಿರದವನು
ಉಸಿರಿರದವನು ಹೆಸರರಿರದವನು,
ನಿರ್ವೀಕಾರ ಅಗೋಚರನಿವನು
ಅವರವರ ಭಾವದಲಿ ನೆಲೆಸಿಹನು,

ಎಮ್ಮ ಶಿವ ಹೃದಯಶಿವ
ಆತ್ಮಸಾಕ್ಷಾತ್ಕರದೊಳು ನೆಲಸಿಹನು, ಕರುಣಿಯಲಿ ತ್ಯಾಗದಲಿ,
ಮನುಷತ್ವದಲಿ ದೈವನಿಹನು

*******************

About The Author

Leave a Reply

You cannot copy content of this page

Scroll to Top