ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಪ್ರಭಾವತಿ ಎಸ್ ದೇಸಾಯಿ

Shadow Art Shri Krishna Playing Flute Stock Vector (Royalty Free) 82686718

ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರು
ಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು

ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡ
ಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ  ದೂರವಿರು

ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿ
ಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು

ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆ
ಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು

ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” ಹರಡಲಿ
ಮೋಹದ ಕವಚ ಸರಿದಿಲ್ಲ ಸಾವೇ ದೂರವಿರು.

****************************************

About The Author

3 thoughts on “ಗಝಲ್”

  1. ಶುಭಲಕ್ಷ್ಮಿ ಆರ್ ನಾಯಕ.

    ಸಾವಿಗೆ ದೂರವಿರು ಎಂಬ ತಮ್ಮ ಆಶಯದ ಗಝಲ್ ಸೂಪರ್ ಮಾ.

  2. ಸಂಗಾತಿಯಲ್ಲಿ ನನ್ನ ಗಜಲ್ ಪ್ರಕಟಿಸಿದಕ್ಕೆ ಪತ್ರಿಕೆ ಯ ಸಂಪಾದಕರೆ ಮತ್ತು ಸಂಪಾದಕ ಮಂಡಳಿಗೆ ಅನಂತ ಧನ್ಯವಾದಗಳು

  3. ತುಂಬಾ ಚೆಂದದ ಅಮ್ಮ. ಜೀವನದ ಕಡಲು ಈಜಬೇಕು ನೀನು ಅಂದರೆ ಸಾವು ದೂರ ಇರು ಎಂದು ವಿಧಿಯನ್ನು ನಿವೇದಿಸಿರುವುದು ವಾಸ್ತವಕ್ಕೆ ಸರಿಯಾಗಿದೆ… ಅಬಾಟೇ

Leave a Reply

You cannot copy content of this page

Scroll to Top