ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಮುತ್ತು ಬಳ್ಳಾ ಕಮತಪುರ

Mahatma Gandhi Statue. Statue of Mahatma Gandhi in Hull, England royalty free stock photography

ಗಾಂಧಿ ನಾಡಿನಲಿ ಮಾತುಗಳು ಮೌನ ಅರ್ಥ ಕಳೆದುಕೊಂಡಿವೆ |
ಗಾಂಧಿ ನಾಡಿನಲಿ ಕನಸುಗಳು ಹೊಸಕಿ ಬಿಸಾಕಿ ಹಾಕಲಾಗುತ್ತಿವೆ ||

ಬಾಪೂಜಿ ದೇಶದಲಿ ನಾಲಿಗೆ ಹರಿತವಾದರೆ ಕತ್ತರಿಸಲಾಗುತ್ತದೆ |
ಇಲ್ಲಿ ಎಲ್ಲವೂ ಭಕ್ತಿಯ ಪರಾಕಾಷ್ಠೆ ಉಧೋ
ಒಪ್ಪಿತ ನಿರ್ಧಾರಗಳಿವೆ ||

ಮಲಗಿದವರ ಎಬ್ಬಿಸಬಹುದು ಸತ್ತಂತೆ ನಟಿಸುವ ದುರುಳರು ತುಂಬಿದ್ದಾರೆ |
ಕಟ್ಟೆ ಪಂಚಾಯತಿ ನ್ಯಾಯ ತೀರ್ಮಾನ ಕಚ್ಚೆ ಹರುಕರೆ ತುಂಬಿಕೊಂಡಿವೆ ||

ಉಳ್ಳವರ ಕಾಯ್ದೆಗೆ ಹೆಣ್ಣು ಭೋಗ ವಸ್ತು ಆಕೆಯ ರಕ್ತವೇ ಗುಲಾಲು |
ರಾತ್ರಿಯೂ ಕೆಲಸಗಳು ನಡೆಯುತ್ತಿವೆ ಸತ್ತ ಹೆಣಗಳು ಬೂದಿಯಾಗಿವೆ ||

‘ಮುತ್ತು’ಬದಲಾವಣೆಗೆ ಕಾಯದಿರು ಮನೆ ಹೆಣ್ಣು ಮಕ್ಕಳ ಕಾವಲುಗಾರನಾಗು |
ನನ್ನ ಸುಟ್ಟ ಹೊಗೆಯ ವಾಸನೆ ಪಕ್ಕದ ಗೂಡಸಲಿಗೂ ಹಬ್ಬಲಿದೆ ಎಚ್ಚರಿಸಿರುವೆ |

****************************

About The Author

Leave a Reply

You cannot copy content of this page

Scroll to Top