ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕಲಿಕೆ ಕಸಿದ ಕರೋನ

ಜಿ.ಎಸ್.ಹೆಗಡೆ

ಶಾಲೆಯ ಅಂಗಳದಿ ಬೆಳೆದಿವೆ ಈಗ
ಮುಳ್ಳಿನ ಜೊತೆಗೆ ಕಳ್ಳಿಗಳು
ಕಲಿಕಾಕೋಣೆಯ ಚಪ್ಪರ ತುಂಬಿದೆ
ಜೇಡರ ಬಲೆಯೊಳು ಕೀಟಗಳು
ಹಾಜರಿ ವಹಿಗೆ ಮೆತ್ತುತ್ತಿದೆ ಈಗ
ಮಣಗಟ್ಟಲೆ ಧೂಳು
ಅಡುಗೆ ಮನೆಯಲಿ ಓಡಾಡುತಿವೆ
ಇಲಿ ಜಿರಲೆಗಳು ಜೋರು

Karnataka News: Karnataka's Vidyagama project, children shifting from  private schools to government - students are shifting government schools  from private in karnataka » Ampinity News

ಪರಿಮಳವಾದ ಪೆನ್ಸಿಲ್ ರಬ್ಬರ್
ಬ್ಯಾಗೊಳು ಹಾಗೆ ಇವೆ
ಹೊಸ ಹೊದಿಕೆಯನು ಧರಿಸಿಹ ಪುಸ್ತಕ
ತೆರೆಯಲು ಕಾಯುತಿವೆ
ಅಪ್ಪನು ಕೊಡಿಸಿಹ ಬಣ್ಣದ ಛತ್ರಿ
ಮಳೆಯೊಳು ಆಡು ಎನ್ನುತಿದೆ
ಮಾವನು ಕೊಡಿಸಿಹ ಹೊಸ ಬಟ್ಟೆಯು
ಹುಟ್ಟುಹಬ್ಬವನು ನೆನಪಿಸಿವೆ

ಶಾಲೆಗೆ ಹೋದರೆ ಗುರುಗಳು ಎಂದರು
‘ಬರಬೇಡವೋ ನೀನು ಶಾಲೆ‌ ಕಡೆ,
ನೀನಿದ್ದಲ್ಲಿಗೆ ನಾನೇ ಬರುವೆನು
ನೀಡಿರಿ ಗಮನವ ವಿದ್ಯೆಯೆಡೆ’
ಊರಿನ ಗುಡಿಗೋಪುರ ಅಂಗಣದಲ್ಲಿ‌
ಮಕ್ಕಳ ಮೊಗಕೆ ಮುಸುಕು
ಕಲಿಯುವ ಆಸೆಗೆ ಮುಸುಕನು ಹಾಕಿತು
ಕರೋನದಿ ಮುದುಡಿತು ಕನಸು

ಮಕ್ಕಳೇ ಬನ್ನಿರಿ ತನ್ನಿರಿ ನೀವು
ಹಳೆ ಪುಸ್ತಕಗಳ ಗಂಟು
ನೆನಪಿಸಿ ಕಲಿಸುವೆ ಮರೆತಿರುವುದನು
ಹೊಸ ಪಠ್ಯಕೆ ನೀಡುವೆ ನಂಟು
ಬೇಡ ಗುರುಗಳೆ ಹಳೆಯ ಪಾಠವು
ಬೇಸರ ತರಿಸುತಿದೆ
ಹೊಸ ಪಾಠಗಳ ದಿನವೂ ಕಲಿಸಿರೆ
ಸಂತಸ ಉಕ್ಕುತಿದೆ

*************

About The Author

1 thought on “ಕಲಿಕೆ ಕಸಿದ ಕರೋನ”

  1. ಕಲಿಕೆ ಕಸಿದ ಕೋರನಾ ಕವನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಇಂತಹ ಮನಮುಟ್ಟುವ, ಮನೆ ತಟ್ಟುವ ಕನ್ನಡಕ್ಕಾಗಿ ಕಾಯುವೆ ಗುರುಗಳೇ.

Leave a Reply

You cannot copy content of this page

Scroll to Top