ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಇಲ್ಲೆ ಎಲ್ಲಾ..

ಜ್ಯೋತಿ ಡಿ.ಬೊಮ್ಮಾ

Two doors to heaven and hell. Choice concept royalty free stock photos

ಬಿಡು ಮನವೆ ಕೊರಗುವದು
ನಿನಗಾರಿಲ್ಲ ಇಲ್ಲಿ ಆಪ್ತ

ನಿನಗೆ ನೀನೆ ಶತ್ರು ನಿನಗೆ ನೀನೆ ಮಿತ್ರ
ನಿನಗೆ ನೀನೆ ಆಗು ಪರಮಾಪ್ತ

ಆಪೇಕ್ಷಿಸಿ ಕಾತರಿಸಿದಷ್ಟು ಹೆಚ್ಚುವದು ದುಃಖ
ನೀರಿಕ್ಷಿಸದಿರು ಯಾರಿಂದ ಎನನ್ನೂ ,ಅದೇ ಸುಖ

ಅಲೆಯದಿರು ಹುಡುಕುತ್ತಾ ಹೊರಗೆಲ್ಲೂ ಮುಕ್ತಿ
ಬಾಹ್ಯದಲ್ಲೆಲ್ಲೂ ದೊರಕದದು ಅರಿ ನೀ, ಅದೇ ಯುಕ್ತಿ

ನೆಮ್ಮದಿಯ ಬೆಂಬತ್ತಿ ಓಡೋಡದಿರು
ದ್ಯಾನದಲ್ಲೆ ಅಡಗಿರುವದದು ಮರೆಯದಿರು

ಕೋಪ ಅಸೂಯೆಗಳು ಚಿಗುರದಂತೆ ತಡೆ
ಪ್ರೀತಿ ಕರುಣೆಗಳು ಹಂಚುತ್ತ ನಡೆ

ಸ್ವರ್ಗ ನರಕಗಳು ಮತ್ತೆಲ್ಲೂ ಇಲ್ಲ
ತನ್ನ ತಾ ಅರಿತವನಿಗೆ ಇಲ್ಲೆ ಎಲ್ಲಾ..

******************************

ಜ್ಯೋತಿ ಡಿ.ಬೊಮ್ಮಾ.

About The Author

Leave a Reply

You cannot copy content of this page

Scroll to Top