ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅವಳೆಂದರೆ?

ಪವಿತ್ರ.ಎಂ.

The Neurological Link Between Motherhood and Creativity - The Atlantic

ಅವಳೆಂದರೆ ಹಾಗೆಯಮ್ಮ
ಅವಳಿರುವೆಂದರೆ ನಲಿವು
ಅವಳಿರುವೆಂದರೆ ಮರುಳು
ಅವಳಿರುವೆಡೆ ನಗೆ ಹೊನಲು
ಅವಳಿಂದಲೆ ಜಗವು
ಅವಳಿರದಿರೆ ಅಳಿವು

ಅವಳು ಅಬಲೆ ಎಂದೆ ನೀನು
ಮೇಲರಗಿ ಒಸಕಿ ಹಿಸುಕಿ
ಸಾವಮನೆಗೆ ಆಹುತಿ ಆಗಿಸಿ
ನೋವ ನೋಡುತಾ ಹೇಗೆ
ನಿಂತೆ?ಅದೇಗೆ ನಿಂತೆ
ಮರುಕವಿರದೆ ಮೃಗವಾದೆಯ

ಅವಳೊಡಲ ಆಸರೆಯ ಮರೆತೆಯಾ
ಮರುಗಟ್ಟಿತೆ ಹೃದಯ
ಮನವಿಹುದು ಮನುಜನಿಗೆ
ಅದಕಾಗೆ ಅವ ಮನುಜ
ಎಲ್ಲ ಮರೆತೆಯಲ್ಲ ಇಂದು
ಪಿಶಾಚಿಗೂ ಮಿಗಿಲಾದ ರಕ್ಕಸ

ಕರುಳುಹಿಂಡೊ ಕೃತ್ಯವೆಸಗಿ
ಕಾರ್ಕೋಟ ವಿಷವ ಕಾರಿ
ಪುರುಷ ಪೌರುಷವೆಂದು ತೋರಿ
ಅವಳೆದೆಯ ಬಗೆದೆಯಲ್ಲ
ಮೃಗಕು ಕೀಳು ಮರುಕವಿರದ ಮಾನವ
ಕಾಮಾಂಧ ದಾನವ

ರುದಿರ ಹರಿವಾಗ ಕರಗಲಿಲ್ಲ
ಅವಳಾರ್ತ ಕೂಗು ಕೇಳಲಿಲ್ಲ
ಅಂದೂ ಇತ್ತು ಯುದ್ಧದಮಲು
ಇಂದಿಗೂ ಅದರದೇ ಘಾಟು
ನಾಗರೀಕ ನಗೆಪಾಟಲು
ಬಗೆ ಬಗೆಯ ನೀತಿ ನಿಯಮ
ಅನೀತಿಗಾಳಾಗಿಹನು
ಸಾಕ್ಷಾತ್ಕಾರವಿರದ ಮನುಜನು.

ಕಾಯುವರಸುತನದ ಕೇಡು
ಎಲ್ಲ ಅರಸರೇ..ಕಣ್ಣಿಗೆಣ್ಣೆ
ಸತ್ತ ಸಾಕ್ಷಿ ಸಾಲದು
ಬರಿದೆ ಬರೆಯಲಾರದೆ
ಅನ್ಯಾಯದ ತೀರ್ಪಗೀಚಲು
ನ್ಯಾಯದೇವತೆ ಕುರುಡ ಮಾಡಿ
ನೂಕಿ ನೂಕಿ ಕಾಲವ

ಅಟ್ಟಹಾಸ ಮೆರೆದು
ಬಲಾತ್ಕಾರದುನ್ಮಾದ
ಮರೆಸಿತೇ ಮಾನವತೆ
ಅವಳಮ್ಮನ ಅಳಲೆಷ್ಟೊ
ಭೀತ ಬೀಭತ್ಸಳಾದಳಿಲ್ಲಿ
ಅಮ್ಮ ತನ್ನ ಮಡಿಲ ತುಂಬಿ

ನಗುತ ಮಲಗಿಹ ಮನೆಯ
ಬೆಳಗೊ ಲಕುಮಿ ಭವಿತವವ
ನೆನೆದು ಬೆಚ್ಚಿಬೆವರಿ
ತಿಳಿಯದಾಗಿ ಪಾಪ ಪುಣ್ಯ
ನೆಲಕುರುಳಿದಳೀಕೆ
ಅಮ್ಮನಾದ ಪಾಪಕೆ!?

**********************

About The Author

2 thoughts on “ಅವಳೆಂದರೆ?”

Leave a Reply

You cannot copy content of this page

Scroll to Top