ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅವಳೂ ಹಾಗೇ .

ಡಾ. ರೇಣುಕಾ ಅರುಣ ಕಠಾರಿ

ಬೀಜ ಸಸಿಯಾಗುವ ಹಾಗೆ,
ಸಸಿ ಮರವಾಗುವ ಹಾಗೆ,
ಮರದಲಿ ಕಾಯಾಗಿ ಹಣ್ಣಾದ ಹಾಗೇ
ಅವಳೂ ಹಾಗೆ.,

ಮಳೆ ಹನಿಗೆ ಸೂರ್ಯ ಚುಂಬನ
ಕಾಮನ ಬಿಲ್ಲಿನಂದದ ಹಾಗೇ
ಅವಳೂ ಹಾಗೇ.,

ಮುಡಿಬಿಟ್ಟು ಮೊಲೆಮೂಡಿ
ಚಿತ್ತರಾದಿ ರವಕೆ ಬಿಗಿಯಾದ ಹಾಗೇ
ಅವಳೂ ಹಾಗೇ.,

ನಿತ್ಯವೂ ಕುಡಿ ಕುಡಿದಷ್ಟು
ಮಧು ತು..$ ತುಂಬಿ ಬಂದು
ಕಪ್ಪೆ ಚಿಪ್ಪಿನ ಮುತ್ತಿನ ಹೊಳಪಿನ ಹಾಗೇ
ಅವಳೂ ಹಾಗೇ.,

ಮೈಮುರಿದು ನಾಚಿ ಕೆನ್ನೆ ಕೆಂಪಾದAತೆ
ಮುಸ್ಸೂಂಜೆ ಮೂಡಣ ನಕ್ಕಂತೆ
ಅವಳೂ ಹಾಗೇ.,

ಬಯಕೆಯ ಕಾತರಕೆ ಬಾಯಾರಿದಳವಳು
ಬಾಯಾರಿದೆ ನೆಲಕ್ಕೆ
ಮಳೆ ಬೀಳುವ ತವಕವು ಕಾದಂತೆ
ಅವಳೂ ಹಾಗೇ.,

ಬಯಕೆಯು ಬೆರ‍್ನೀರಿನಂತೆ
ಹಸಿದ ಗರ್ಭದೊಳಗೆ ಜಾರಿ ಜಾರಿ ಇಳಿದಂತೆ
ಅವಳೂ ಹಾಗೇ.,

ಭಾವದ ನಂಟಿಗೆ ಅಂಟಿಕೊAಡ ಚಿಗುರು
ಅರಿವಾದ ಅಗೋಚರ ಹೆಜ್ಜೆಗಳು
ಕಡ¯ದ ಆಳದಂತೆ
ಅವಳೂ ಹಾಗೇ.,
ಮುಸುಕೆಲ್ಲಾ ಸಿಂಗರಗೊAಡAತೆ
ಹಣತೆಯೊಳಗಿನ ತೈಲ ಮಯವಾದಂತೆ
ಅವಳೂ ಹಾಗೇ.,

ಸುತ್ತ ಹಸರೆಲ್ಲ ಕಾಡಿಗಣ್ಣಿನಂತೆ
ಇಳೆಯ ಸ್ಪರ್ಷಕೆ ನಿರಗೆಗಳ ಆಲಿಂಗನವಾದAತೆ
ಅವಳೂ ಹಾಗೇ.,

ಉರಿವ ಬಿಸಿಲೊಳಗೆ ಮೈಮಿಡುವಂತೆ
ಬೆಳದಿAಗಳಿನ ಮಳೆ ನಿತ್ಯ ಸುರಿದ ಹಾಗೆ
ಅವಳೂ ಹಾಗೇ.,

ನಿನ್ನೊಳಗೆ ನಾನು ನನ್ನೊಳಗೆ ನೀನು
ಏನೋ ಹೆಣೆದಿರುವ
ಭಾವ ಬಂಧನವ ಕಳಚಿದ ಹಾಗೆ
ನಾವುಗಳೂ ಹಾಗೇ ಅಲ್ವೆ?

ಅರ್ಧರೊಟ್ಟಿ ಹಿಡಿದು
ಪರರ ನೋವಿಗೆ ಚಿಂತೆ ಮಾಡುವ ತಾಯಂತೆ
ಅವಳು ಹಾಗೇ.,

*************************************

About The Author

Leave a Reply

You cannot copy content of this page

Scroll to Top