ಏನೂ ಸಾಧ್ಯವಿಲ್ಲವೆಂಬ ಕಾಲಘಟ್ಟದಲ್ಲಿ ಪ್ರತಿರೋಧಗಳು ಬಂದಿವೆ ಬಿ.ಶ್ರೀನಿವಾಸ ಬಂಡ್ರಿ ಗೆಳೆಯ ಬಿ.ಶ್ರೀನಿವಾಸ ಕಡುಬಡತನದ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದರು. ೦೧-೦೬-೧೯೭೦ ಅವರ ಜನ್ಮದಿನ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ತಂದೆ ಬಂಡ್ರಿ ನರಸಪ್ಪ, ತಾಯಿ ಓಬವ್ವರಿಗೆ ಹನ್ನೊಂದು ಮಕ್ಕಳ ಪೈಕಿ, ಬದುಕುಳಿದ ಏಳು ಮಕ್ಕಳಲ್ಲಿ ಶ್ರೀನಿವಾಸ ಸಹ ಒಬ್ಬರು.ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಜೋಗಿಕಲ್ಲು ಗುಡ್ಡದಿಂದ ಬದುಕನ್ನರಸಿ ಕೂಡ್ಲಿಗಿಯಲ್ಲಿ ನೆಲೆನಿಂತರು. ಪ್ರಾಥಮಿಕ,ಪ್ರೌಢಶಾಲಾ ವಿದ್ಯಾಭ್ಯಾಸವನ್ನೆಲ್ಲ ಕೂಡ್ಲಿಗಿಯಲ್ಲಿ ಪೂರೈಸಿದ ನಂತರ,ಕೊಟ್ಟೂರು,ಹೂವಿನಹಡಗಲಿ,ಹೊಸಪೇಟೆಯಲ್ಲಿ ಬಿ.ಎಸ್.ಸಿ ಪದವಿ ನಂತರ ಕಲಬುರಗಿಯಲ್ಲಿ ನ್ಯೂಕ್ಲಿಯರ್ ಭೌತಶಾಸ್ತ್ರದಲ್ಲಿ ಎಮ್.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದರು.ಪ್ರಜಾವಾಣಿ ದೀಪಾವಳಿ ಕಥಾ ಪುರಸ್ಕಾರ,ಕಥೆಗಾರ ಸದಾಶಿವ ದತ್ತಿನಿಧಿ ಪುರಸ್ಕಾರ,ಸಿಂಚನ ಕಾವ್ಯಪುರಸ್ಕಾರಕ್ಕೆ ಅವರು ಪಾತ್ರರಾಗಿದ್ದಾರೆ.ಪ್ರಕಟಿತ ಕೃತಿಗಳು : ಕಾಣದಾಯಿತೋ ಊರುಕೇರಿ (ಕಥಾ ಸಂಕಲನ), ಉರಿವ ಒಲೆಯ ಮುಂದೆ (ಕವನ ಸಂಕಲನ),ಪುರೋಹಿತಶಾಹಿ ಮತ್ತು ಗುಲಾಮಗಿರಿ (ಅನುವಾದಿತ ಕೃತಿ), ಹಾವೇರಿ ನ್ಯಾಯ (ಸಂಪಾದಿತ ಕೃತಿ) ಅವರ ಬರೆದ ಪುಸ್ತಕಗಳು.…………………………………. ಕತೆ,ಕವಿತೆ ಹುಟ್ಟುವ ಕ್ಷಣ ಯಾವುದು ? ಇವುಗಳು ಹುಟ್ಟುವ ಕ್ಷಣಗಳು ನಿರ್ದಿಷ್ಟವಾಗಿ ಬರವಣಿಗೆಯ ಮಾತ್ರದಿಂದಲೇ ಹುಟ್ಟಿಬರುತ್ತವೆ ಎಂಬುದು ತಪ್ಪು. ಸವಣೂರಿನ ಭಂಗಿಗಳು ಮೈ ಮೇಲೆ ಮಲ ಸುರುವಿಕೊಂಡು ಪ್ರತಿಭಟಿಸಿದ ಸುದ್ದಿಯಾಯ್ತಲ್ಲ..ಅವರ ಪೈಕಿ ಮಂಜುನಾಥ ಭಂಗಿ ಎಂಬ ಹುಡುಗ ಹೇಳ್ತಾನೆ….”ನಾವು…ಅಂದರೆ ನಾನು,ನನ್ ಚಿಗವ್ವ,ಚಿಗಪ್ಪ,ತಂಗಿ,ತಮ್ಮಂದಿರೆಲ್ಲರೂ ಹುಟ್ಟಿ ಈಗ್ಗೆ ಮೂರುದಿನಗಳಾದ್ವು”ಎಂದ!. ಅವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮಲ ಸರುವಿಕೊಂಡು ಅಂದಿಗೆ ಮೂರುದಿನವಾಗಿತ್ತು.ಟೀವಿ,ಪೇಪರ್ನಾಗೆಲ್ಲ ಸುದ್ದಿ ಬಂದಿತ್ತು. ಅಲ್ಲೀವರೆಗೂ ನಮ್ಮ ವ್ಯವಸ್ಥೆಗೆ ಅವರ ಸಂಕಟಗಳು ಹೋಗಲಿ ಮನುಷ್ಯರು ಇದ್ದಾರೆನ್ನುವುದೇ ಇರಲಿಲ್ಲ. ಇಪ್ಪತೈದರ ಹರೆಯದ ಯುವಕ “ನಾನು ಈಗ್ಗೆ ಮೂರು ದಿನದ ಹಿಂದೆ ಹುಟ್ಟಿದೆ” ಎನ್ನುವುದನ್ನು ಹೇಗೆ ತೆಗೆದುಕೊಳ್ತೀರಿ..?ಅವನೇನು ದಾರ್ಶನಿಕನಾ..? ಕವಿಯೋ…ಕಥೆಗಾರನೋ..ಏನಂತಾ ಕರೀತೀರಿ? ಅದಕ್ಕೆ ಅಕ್ಷರಗಳ ಸಾಲಿಯಲಿ ಕಲಿತವರಿಗಿಂತಲೂ ಲೋಕದ ಸಾಲಿಯಲಿ ಕಲಿತವರ ಬಹುದೊಡ್ಡ ಪರಂಪರೆಯೇ ನಮ್ಮ ಮುಂದಿದೆ.ಹೀಗಾಗಿ ನಾವು ಒಂದೆರೆಡು ಪುಸ್ತಕಗಳಲ್ಲಿ ಕೆಲವನ್ನು ಹಿಡಿದಿಟ್ಟರೆ ಅದು ಕಡಲಲಿ ನಿಂತು ಹಿಡಿದ ಬೊಗಸೆ ನೀರು ಮಾತ್ರ . ನಾನು..ನನ್ನ ಮೊದಲ ಪದ್ಯ ಬರೆದದ್ದು ಕೂಡ ಹೀಗೆಯೇ. ಅದೊಂದು ದಿನ,ಶಾಲೆಗೆ ರಜೆಯಿತ್ತು.ಬಳ್ಳಾರಿ ಜಿಲ್ಲೆಯ ಬಿಸಿಲು ನಿಮಗೆ ಗೊತ್ತೇ ಇದೆ.ಅಂಥಾ ಬಿಸಿಲಿನಲ್ಲೂ ಅಪ್ಪ,ನನ್ನನ್ನು ಬತ್ತಿಮರದ ನೆರಳಲ್ಲಿ ಕುಳ್ಳಿರಿಸಿ ರಂಟೆ ಹೊಡೆಯುತ್ತಿದ್ದ.ಆತನ ಕಪ್ಪು ಎದೆಯಲ್ಲಿ ಮೂಳೆಗಳು ಎದ್ದು ಕಾಣುತ್ತಿದ್ದವು. ಈ ಚಿತ್ರ ಬಹುಶಃ ನಾನು ಮೂರೋ ನಾಕನೇ ಕ್ಲಾಸಿದ್ದಾಗೋ ಆಗಿರಬಹುದು.ಆದರೆ ಇಂದಿಗೂ ಕಾಡುತ್ತಿದೆ.`ನಾನು ಸಾಲಿ ಕಲಿತಿಲ್ಲ/ ಆದರೂ ಎಣಿಸಬಲ್ಲೆ/ ಅಪ್ಪನ ಎದೆಯ ಮೂಳೆಗಳನ್ನು/ ಎನ್ನುವ ಸಾಲುಗಳನ್ನು ಬರೆಯಲಿಕ್ಕೆ ಸಾಧ್ಯವಾಯಿತು. ಅಂದರೆ ಅಕ್ಷರ ಕಲಿತರೆ ಮಾತ್ರವೇ ಸಂವೇದನೆ ಗಳಿರುತ್ತವೆ ಎಂಬ ಮಾತನ್ನು ಹೊಡೆದು ಹಾಕಿದೆ. ಹೌದು,ನಿವೇಕೆ ಬರೆಯುತ್ತೀರಿ? ಸೃಜನಶೀಲ ಬರಹಗಾರನೊಬ್ಬ ‘ಡಿಸ್ಟರ್ಬ್’ ಆದಾಗ,ಲೇಖನಿ ಖಡ್ಗವಾಗುವುದುಂಟು.ಕೆಲವೊಮ್ಮೆ ಅವ್ವನ ಬತ್ತಿದೆದೆಯಲಿ ಹಾಲು ಬರುವುದಿಲ್ಲವೆಂದು ಗೊತ್ತಿದ್ದೂ ಚೀಪುವ ಬಡಪಾಯಿ ಮಗುವಿನ ಹಾಗೆ.ಬರಹಗಾರ ಬರೀತಾ ಹೋಗ್ತಾನೆ.ನಿರಾಳತೆಯ ಅನಂತ ಗುಹೆ ಹೊಕ್ಕು ಸಾಗುತ್ತಲೇ ಇರುತ್ತಾನೆ.ಈ ಪಯಣ ಕವಿಗೆ,ಕಥೆಗಾರನಿಗೆ,ಕಾದಂಬರಿಕಾರನಿಗೆ,ಹೆಚ್ಚು ಭಾವುಕವಾಗಿಬಿಡುತ್ತದೆ. ಅಕ್ಷರಗಳಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಗೊತ್ತಿರುವ ಕಾಲಘಟ್ಟಗಳಲ್ಲಿ ಪ್ರಪಂಚದ ಅತ್ಯುತ್ತಮ ಕೃತಿಗಳು,ಪ್ರತಿರೋಧಗಳು ಮೂಡಿಬಂದಿರುವುದನ್ನು ಗಮನಿಸಬಹುದು. ಲಿಯೋ ಟಾಲ್ಸ್ಟಾಯ್,ಪಾಬ್ಲೋನೆರೂಡ, ಸಿದ್ಧಲಿಂಗಯ್ಯ, ದೇವನೂರು, ಅನಂತಮೂರ್ತಿ, ಲಂಕೇಶ, ತೇಜಸ್ವಿಯವರ ಸಾಹಿತ್ಯ ಉದಾಹರಿಸಬಹುದು. ಕತೆ-ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯೆ? ಓ…ಖಂಡಿತ.ಇಣುಕುವುದಿರಲಿ ಪರಿಪೂರ್ಣ ಹಾಜರಿಯೇ ಇದೆ.ನನ್ನ ಕಥೆ,ಕವಿತೆ….ಬರೆಯುತ್ತಿರುವ ಸಂಡೂರಿನ ಚಿತ್ರಗಳಾಗಲೀ,ಕಾದಂಬರಿಯೇ ಆಗಿರಲಿ ಎಲ್ಲದರ ಮೂಲಧಾತು ನನ್ನ ಊರಿನ ಬಾಲ್ಯ,ಮತ್ತು ಹರೆಯದ ಮೌನ. ಅಪ್ಪ ಚೌರ ಮಾಡಿಸಿಕೊಂಡಿದ್ದ ಕಿಟ್ಟಪ್ಪನ ಅಂಗಡಿಯಿಂದ ಹಿಡಿದು ಹರಿದ ಬನಿಯನ್ನಿನ ನನ್ನ ಮೇಷ್ಟ್ರವರೆಗೆ…ನನ್ನ ಬರವಣಿಗೆಯಲ್ಲಿ ಬಂದಿದ್ದಾರೆ. ಈ ಮನೆಯ ಮುದ್ದೆಗೆ/ ಆ ಮನೆಯ ಸಾರು/ ಉಂಡ ರುಚಿ ಮೂಲೆ ಸೇರಿದೆ ಅಜ್ಜನ ಹಾಗೆ/ ಹೀಗೆ ಬರೆಯಲಿಕ್ಕೆ ನನಗೆ ಸಾಧ್ಯ ಮಾಡಿದ್ದೇ ನನ್ನ ಕಳೆದುಹೋದ ಬದುಕು. ಪ್ರತಿಯೊಬ್ಬ ಲೇಖಕನಿಗೂ ಅವನ ಬಾಲ್ಯ,ಹರೆಯ, ಬರವಣಿಗೆಯೊಳು ಹಾಸುಹೊಕ್ಕಾಗಿರುತ್ತವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತಿದೆ? ಇತ್ತೀಚೆಗೆ ಎಲ್ಲ ಸಮುದಾಯಗಳೂ ತಮ್ಮ ತಮ್ಮ ಸಾಂಸ್ಕೃತಿಕ ಐಕಾನ್ ಗಳನ್ನು ಹೊಂದಿದ್ದಾರೆ.ಬಸವಣ್ಣನನ್ನು,ಕನಕನನ್ನು,ವಾಲ್ಮೀಕಿಯನ್ನು….ಹೀಗೆ ಆಯಾ ಬಹುಸಂಖ್ಯಾತ ಸಮುದಾಯಗಳು ತಮ್ಮ ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿಕೊಂಡಿವೆ.ಆದರೆ ವಿಪರ್ಯಾಸ ನೋಡಿ,ಅಂಚಿನ ಸಮುದಾಯಗಳಾದ ಕೊರಚ,ಕೊರಮ,ಕೊರವರ,,ಕಮ್ಮಾರ,ಕುಂಬಾರ…ತಮ್ಮ ಅಸ್ತಿತ್ವಕ್ಕಾಗಿ ಇನ್ನೂ ಹೋರಾಡುತ್ತಿದ್ದಾರೆ.ಯಾವ ನಾಯಕರು ಇಡೀ ಮಾನವ ಕುಲವೊಂದೇ ಎಂದು ಹೋರಾಡಿದರೋ ,ಅವರನೆಲ್ಲ ಆಯಾ ನಿರ್ದಿಷ್ಟ ಸಮುದಾಯಗಳು ಮಾತ್ರವೇ ಗುತ್ತಿಗೆ ಪಡೆದ ರೀತಿಯಲ್ಲಿ ವರ್ತಿಸುತ್ತಿವೆ.ಸಾಹಿತ್ಯಿಕ ಲೋಕದ ದಿಗ್ಗಜರಿಗೂ ಈ ಸತ್ಯ ಅರಿವಾಗಿದ್ದರೂ ಮೌನವಾಗಿರುವುದು ಸಾಂಸ್ಕೃತಿಕ ಅಪರಾಧ. ಇನ್ನು ಇತರೆ ಧರ್ಮೀಯರದಂತೂ ಹೇಳುವ ಹಾಗೆಯೇ ಇಲ್ಲ.ಶರೀಫರಿಗೂ ಮಠ ಕಟ್ಟಿ ಬಂಧಿಸಿಡಲಾಗಿದೆ.ಮಠಾಧೀಶರಂತೂ ಧಾರ್ಮಿಕ ಮತ್ತು ರಾಜಕಾರಣದ ಗೆರೆ ಅಳಿಸಿರುವವರಂತೆ ತೋರುತ್ತಿದ್ದಾರೆ.ಸಂಪುಟದ ತೀರ್ಮಾನಗಳು ಇವರ “ಅಪ್ಪಣೆ”ಮೇರೆಗೂ ನಡೆದ ವಿದ್ಯಮಾನಗಳು ನಮ್ಮ ಕಣ್ಣೆದುರಿಗಿವೆ. ಸಾಂಸ್ಕೃತಿಕ ರಾಜಕಾರಣ ಎಲ್ಲದಕ್ಕಿಂತಲೂ ಅಪಾಯಕಾರಿಯಾದುದು.ಇದನ್ನು ಗ್ರಹಿಸುತ್ತಿದ್ದ ಲೋಹಿಯಾ,ಜೆ.ಪಿ.,ನಮ್ಮ ಪಟೇಲರಂತಹ ರಾಜಕಾರಣಿಗಳೂ ಈಗ ಇಲ್ಲ.ಒಂದು ರೀತಿ ಕಲ್ಚರಲ್ ವ್ಯಾಕ್ಯೂಮ್ ಸೃಷ್ಟಿಯಾಗಿಹೋಗಿದೆ. ಈ ಮಾತನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ,ರಾಜಕಾರಣಿಯೂ ಎಲ್ಲ ಮನುಷ್ಯರ ಹಾಗೆ ನಗಬೇಕು,ಅಳಬೇಕು,ಸಂಕಟಗಳ ಅರಿವೂ ಇರಬೇಕು.ಈ ಹಿಂದಿನ ರಾಜಕಾರಣಿಗಳಿಗೆ ಕನಿಷ್ಟ ಮಟ್ಟದಲ್ಲಾದರೂ ಇವುಗಳ ಅರಿವಿತ್ತು. ನಗು ಮರೆತು,ಅಳು ಮರೆತು ರಾಜಕಾರಣ ಮಾಡಿದರೆ ಅದು ಮನುಷ್ಯ ರಾಜಕಾರಣವಾಗುವುದಿಲ್ಲ.ಸಂವೇದನಾರಹಿತನೊಬ್ಬ ರಾಜಕಾರಣಿಯಾಗುವುದೂ..ಬಾಂಬುಗಳೇ ನಮ್ಮನ್ನಾಳುವುದಕ್ಕೂ ವ್ಯತ್ಯಾಸವಿಲ್ಲ. ಇಂದು ನಮ್ಮನ್ನಾಳುವ ಪ್ರಭುಗಳ ಪರಿಸ್ಥಿತಿ ನೋಡಿ,ಎಲೆಕ್ಷನ್ ಹತ್ತಿರ ಬಂದಾಗಲೆಲ್ಲ ಮಿಲಿಟರಿ ಡ್ರೆಸ್ ಹಾಕ್ಕೊಂಡು ನಿಲ್ತಾರೆ.ಜನರನ್ನು ಭಾವನಾತ್ಮಕವಾಗಿ,ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿಯೂ ವ್ಯವಸ್ಥಿತವಾಗಿ ಒಡೆಯಲಾಗುತ್ತಿದೆ. ಈಗೀಗ ಗಡಿರೇಖೆಯ ನ್ಯೂಸ್ ಗಳನ್ನೇ ಹೆಚ್ಚಾಗಿ ಕೇಳುತ್ತೇವೆ. ನಾವು ನೀವೆಲ್ಲ ಚಿಕ್ಕ ವಯಸ್ಸಿನಲ್ಲಿ ಯುದ್ಧ ಎಂದರೆ ಬಬ್ರುವಾಹನ ಚಿತ್ರದ ದೃಶ್ಯ ಕಣ್ಮುಂದೆ ಬರುತಿತ್ತು,ಬಿಟ್ಟರೆ ಇಸ್ರೇಲೋ..ಇರಾನ್ ನಲ್ಲೋ..ಅಲ್ಲೊಂದು ಇಲ್ಲೊಂದು ಸುದ್ದಿಯಿರುತ್ತಿತ್ತು.ಆದರೀಗ ಸುದ್ದಿಗಳೇ ಯುದ್ಧ ಸೃಷ್ಟಿಸುವಂತಹ ಸಂದರ್ಭಕ್ಕೆ ಬಂದು ನಿಂತಿದ್ದೇವೆ.ಇದು ನಾವು ತಲುಪಿರುವ ದುರಂತ. ನಿಮ್ಮ ಕತೆಗಳ ವಸ್ತು,ವ್ಯಕ್ತಿ ಹೆಚ್ಚಾಗಿ ಯಾವುದು?ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಬರವಣಿಗೆಯು ವರ್ತಮಾನದ ಕನ್ನಡಿ.ಸಾಮಾಜಿಕ ಅಸಮಾನತೆಯಲಿ ಬೆಂದವರು,ಬಂಡವಾಳಶಾಹಿಯ ಹಿಡಿತಕ್ಕೆ ಸಿಕ್ಕು ನಲುಗಿದವರು ನನ್ನ ಕಥೆಯ ಪಾತ್ರಧಾರಿಗಳು.ಬರಹಗಾರನಿಗೆ ವೈಯಕ್ತಿಕವು ಸಾಮಾಜಿಕವೂ ಆಗಿರಬೇಕು.ಆಗ ಮಾತ್ರ ವರ್ತಮಾನದ ಒತ್ತಡ ಅವನನ್ನು ಲೇಖಕನನ್ನಾಗಿ ಮಾಡುತ್ತೆ. ನನ್ನ ಕಥೆ,ಕವಿತೆಗಳೆಲ್ಲವೂ ಒಂದು ರೀತಿಯಲ್ಲಿ ರಿಯಾಕ್ಷನರಿ ಪ್ರೋಜ್, ಪೊಯೆಮ್ಸ್ …ಪ್ರತಿಕ್ರಿಯಾತ್ಮಕ ಗದ್ಯ,ಪದ್ಯಗಳೆ ಆಗಿವೆ. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಪ್ರತಿಯೊಬ್ಬ ಭಾರತೀಯನಲ್ಲೂ ರಾಮ,ರಹೀಮ,ಏಸು,ನಾನಕ….ಮುಂತಾದ ಧರ್ಮಗಳ ನಾಯಕರಿದ್ದಾರೆ.ವಿವೇಕಾನಂದರೂ ಹೇಳಿದ್ದನ್ನೆ ನಾನು ಅನುಮೋದಿಸುತ್ತಿರುವೆನಷ್ಟೆ.ಆದರೆ ಆ ದೇವರುಗಳ ಹೆಸರಿನಲ್ಲಿನ ಮೌಢ್ಯತೆಗಳನ್ನು ಸಹಿಸಲಾರೆ. ಧರ್ಮಗಳ ನಡುವಿನ ಅಂತರ ಹೆಚ್ಚಾಗ್ತಿರುವುದೂ ದೇಶದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.ನೇರವಾಗಿ ಹೇಳಿಬಿಡ್ತೇನೆ…ಒಂದು ನಿರ್ದಿಷ್ಟ ಧರ್ಮೀಯರನ್ನು ಹೊರಗಿಟ್ಟು ಸಿಎಎ ಕಾಯಿದೆ ಜಾರಿ ಮಾಡುವುದು ,ಅನುಮಾನದಿಂದ ನೋಡುವುದು ಆ ಧರ್ಮೀಯರಲ್ಲಿ ಅಭದ್ರತೆ,ಪರಕೀಯ ಭಾವನೆಯನ್ನು ಮೂಡಿಸುವುದಲ್ಲದೆ ಮತ್ತೇನು?ಈ ಹಿಂದೆ ಕಾರ್ಗಿಲ್ ವಿಜಯೋತ್ಸಾಹದ ಸಂದರ್ಭದಲ್ಲಿ ಹಿಂದೂ ಸೈನಿಕರಿಗೆ ರಕ್ಷಾಬಂಧನ ಕಟ್ಟಿದರೆ..ಜೊತೆಯಲಿದ್ದ ,ದೇಶಕ್ಕಾಗಿ ದುಡಿದ ಮುಸ್ಲಿಮ್ ಸೈನಿಕರುಗಳ ಭಾವನೆ ಹೇಗಾಗಿದ್ದೀತು? ಕಳೆದ ವರುಷ ಪುಲ್ವಾಮ ದಾಳಿಯಲ್ಲಿ ಹತರಾದವರು ನಲವತ್ತು ಜನ ಯೋಧರಿದ್ದರು.ನಮ್ಮೂರುಗಳಲ್ಲಿ ರಾತ್ರಿ ಸರ್ಕಲ್ಲುಗಳಲಿ ಮೊಂಬತ್ತಿ ಹಿಡಿದು ಭಾವನಮನ ಸಲ್ಲಿಸುವಾಗ, ಹಾಕಿದ್ದ ಕಾರ್ಯಕ್ರಮದ ಪ್ಲೆಕ್ಸನಲ್ಲಿ ಒಬ್ಬ ನತದೃಷ್ಟನ ಪಟ ಇರಲಿಲ್ಲ.ಕಾರಣವೇನೆಂದರೆಅವನು ಅನ್ಯಧರ್ಮೀಯನಾಗಿದ್ದುದು! ಇದು ನನ್ನ ಭಾರತ ಸಾಗುತ್ತಿರುವ ದುರಂತ ಪಥ. ವೈಯಕ್ತಿಕವಾಗಿ ಧರ್ಮ,ದೇವರುಗಳ ವಿಷಯದಲ್ಲಿ ಲೋಹಿಯಾ ನನಗೆ ಮಾದರಿ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ….ನೋಡಿ,ನಮ್ಮೂರಿನಲ್ಲಿ ಹಿಂದೆ ಕೂಡ ಗಣಿಗಾರಿಕೆಯಿತ್ತು.ಈಗಲೂ ಇದೆ.ಈಗ ಇರುವಷ್ಟು ಅಕ್ರಮ ಇರಲಿಲ್ಲ. ಊರ ಜನರಿಂದ ಆಯ್ಕೆಯಾಗಿ ಹೋದ ಎಮ್ಮೆಲ್ಲೆ ಹತ್ರ ಹೋಗಿ,ಊರಿಗೆ ಶಾಲೆ,ರಸ್ತೆ ರಿಪೇರಿಗೋ,ಕುಡಿಯುವ ನೀರಿಗೋ ಬೇಡಿಕೆಯಿಟ್ಟರೆ “ಮೀಕೇಮಿ ಕೆಲ್ಸಮಲೇದ..?ಮೀದೊಕ್ಕಟೆ ಊರೇಮಿ ನಾಕಿ..? ಪೋ ಪೋ..ಪೋರ್ರಾ”(ನಿಮಿಗೆ ಕೆಲ್ಸವಿಲ್ಲವೇನು ? ನಿಮ್ಮದೊಂದೆ ಊರಂದ್ಕಡಿದಿರೇನು ನನಗೆ…ಹೋಗ್ ಹೋಗ್ರಪಾ..)ಎಂದು ಅರ್ಧ ಕನ್ನಡ ಇನ್ನರ್ಧ ತೆಲುಗು ಮಿಶ್ರಿತ ಭಾಷೆಯಲ್ಲಿ ಗದರಿಸಿ ಕಳುಹಿಸುತ್ತಿದ್ದ.ಆತ ಒಂದು ಕಪ್ಪು ಟೀ ಕೂಡ ಕೊಡುತ್ತಿರಲಿಲ್ಲ.ಜನರೂ ಸುಮ್ಮನೆ ಬರೋರು. ಆದರೆ ಅದೇ ನಮ್ಮೂರಿಗೆ ಕಳೆದ ಹದಿನೈದು ವರುಷಗಳಿಂದ ಗಣಿಧಣಿಗಳೇ ಶಾಸಕರಾಗುತ್ತಿದ್ದಾರೆ.ಅವರನ್ನು ಎಲೆಕ್ಷನ್ ಟೈಮಲ್ಲಿ ನೋಡಿದ್ದು ಬಿಟ್ಟರೆ ಮತ್ತೆ ನೋಡಾದು ಮತ್ತೊಂದು ಎಲೆಕ್ಷನ್ನು ಬಂದಾಗಲೆ.ಎಲೆಕ್ಷನ್ನಲ್ಲಿ ಹಬ್ಬವೋ ಹಬ್ಬ.ಅದುವರೆಗೂ ಅಂತಹ ಸ್ಟೀಲ್ ಸಾಮಾನುಗಳನ್ನು ನೋಡಿರದ ಜನರಿಗೆ ತರಹೇವಾರಿ ಟಿಪನ್ನು ಕ್ಯಾರಿಯರ್ ಮನೆಮನೆಗೆ ತಲುಪಿಸಲಾಯಿತು.ಓಟಿಗೆ ಸಾವ್ರ,ಎರಡ್ಸಾವ್ರ ರೂಪಾಯಿಗಳಂತೆ ಹಂಚಲಾಯಿತು.ಹೀಗೆ ಗೆದ್ದು ಬಂದ ಎಮ್ಮೆಲ್ಲೆ ಹತ್ರನೂ ಅದೇ ಸಮಸ್ಯೆಗಳನ್ನು ಹೊತ್ತು ಬೆಂಗಳೂರಿಗೂ ಹೋಕ್ತಾರೆ. ಅಲ್ಲಿ ಬೆಳಗಾ ಮುಂಜಾನಿಗೆ ಬೆಂಗಳೂರಿಗೆ ಹೋದವರ ದೃಶ್ಯ ವಿವರಿಸುವೆ ಕೇಳಿ. ಭವ್ಯ ಬಂಗಲೆ!ಹೋದ ತಕ್ಷಣ,ಇವರ ವೋಟಿನ ಕಾರ್ಡು,ಆಧಾರಕಾರ್ಡು ಚೆಕ್ ಮಾಡಲಾಗುತ್ತದೆ.ಕ್ಷೇತ್ರದ ಮತದಾರರೆಂದು ಕನ್ಫರ್ಮ್ ಆದ ಮೇಲೇಯೇ ಇವರಿಗೆಲ್ಲ ಸ್ನಾನ,ನಿತ್ಯಕರ್ಮಾದಿಗಳಿಗೆ ರೂಮು ತೋರಿಸ್ತಾರೆ. ಭರ್ಜರಿ ತಿಂಡಿ,ತಿಂದ ನಂತರ ನಿಂತಿದ್ದ ವೋಲ್ವೋ ಬಸ್ ಹತ್ತಬೇಕು.ಯಂತ್ರಮಾನವರಂತೆ ಜನರು ಹತ್ತಿ ಕುಳಿತು ಬೆಂಗಳೂರೆಂಬ ಮಾಯಾನಗರಿಯನ್ನು ಬೆರಗಿನಿಂದ ನೋಡ್ತಾರೆ.ಇಂಥದೊಂದು ಲೋಕವ ನಾವೂ ನೋಡದೆ ಇರುತ್ತಿದ್ವಲ್ಲ ಎಂದು ಬಂದ ಭಾಗ್ಯಕೆ ಖುಷಿಪಡುತ್ತಾರೆ. ಮತ್ತೆ ರಾತ್ರಿ ಭೂರಿ ಭೋಜನದ ವ್ಯವಸ್ಥೆ.ಪ್ರತಿಯೊಬ್ಬರ ಕೈಗೂ ಐನೂರರ ಗಾಂಧಿ ನೋಟು! ಬಸ್ಸೇರಿ ಊರಿಗೆ ಮರಳುತ್ತಾರೆ. ತಾವು ಕೇಳಲೆಂದು ಹೋದ ಅದೇ ಮುರಿದು ಬೀಳುವ ಹಂತದ ಶಾಲೆ ,ತಗ್ಗುದಿಣ್ಣಿಯ ರಸ್ತೆ,ತುಂಬು ಗರ್ಭಿಣಿಯರು ಕೊಡ ನೀರಿಗಾಗಿ ಮೈಲುಗಟ್ಟಲೆ ದೂರ ನಡೆವ ಚಿತ್ರಗಳು ಕಾಣಸಿಗುತ್ತವೆ. ನಾನು ಹೇಳ್ತಿರುವುದು ಕಥೆಯಲ್ಲ.ವಾಸ್ತವ.ಇದು ಭಾರತದ ರಾಜಕಾರಣ ತಲುಪಿರುವ ದುರಂತ . ಮಾತನಾಡದಂತೆ ತಡೆಯುವುದು,ಪ್ರಭುತ್ವದ ವಿರುದ್ಧ ಮೌನವಾಗಿರುವಂತೆ ಬೆದರಿಸುವುದು ಫ್ಯಾಸಿಸಂನ ಲಕ್ಷಣಗಳನ್ನೂ ದಾಟಿ,ಇದೀಗ ಪ್ರತಿಯೊಬ್ಬರ ಮನೆಯಂಗಳಕೂ ಕಣ್ಗಾವಲಿಟ್ಟ ಬಿಗ್ ಬಾಸ್ ರೀತಿಯಲ್ಲಿ ನಮ್ಮ ಬದುಕು ನಡೆಯುತ್ತಿದೆ.ಈ ಹೊತ್ತು ಇಡೀ ಭಾರತವೇ ಡಿಟೆನ್ಷನ್ ಕ್ಯಾಂಪಿನಲ್ಲಿರುವ ಹಾಗೆ ತೋರುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನಾನು,ಮೂಲತಃ ನ್ಯೂಕ್ಲಿಯರ್ ಫಿಜಿಕ್ಸ್ನ ವಿದ್ಯಾರ್ಥಿ. ಆದರೆ ಭೌತಶಾಸ್ತ್ರಕ್ಕಿಂತಲೂ ಹೆಚ್ಚು ಓದಿದ್ದು ಕನ್ನಡ ಸಾಹಿತ್ಯ. ನಾನೇಕೆ ಇಷ್ಟೊಂದು ಸೆಳೆತಕ್ಕೆ ಒಳಗಾದೆ? ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಂಡಿದ್ದುಂಟು. ನನ್ನೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ.ಬಿಸಿಲು,ಬಡತನ ಮತ್ತು ದೇವದಾಸಿಯೆಂಬ ನತದೃಷ್ಟರೇ ಹೆಚ್ಚಾಗಿರುವ ಊರು.ಕೊಟ್ರೇಶ್ ಎಂಬ ಬಾಲ್ಯದ ಗೆಳೆಯನಿದ್ದ.ಅವನಿಗೋ ವಿಪರೀತ ಓದುವ ಹುಚ್ಚು.ನನಗೂ ಹಿಡಿಸಿದ.ಸರ್ಕಾರಿ ಲೈಬ್ರರಿಯ ಹೆಚ್ಚು ಕಮ್ಮಿ ಎಲ್ಲಾ ಪುಸ್ತಕಗಳನ್ನೂ ಓದಿಬಿಟ್ಟಿದ್ದೆವು.ಸಾಲದಕ್ಕೆ ಏಪ್ರಿಲ್ ಮೇ ತಿಂಗಳ ರಜೆಯಲ್ಲಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು.ನನಗೆ ಬಹುವಾಗಿ ಕಾಡಿದ ಕಥೆ ನಿರಂಜನರ ಕೊನೆಯ ಗಿರಾಕಿ.ಕಣ್ಣೆದುರೇ ನಮ್ಮೂರಿನಲ್ಲಿ ಅಂತಹ ಎಷ್ಟೋ ನತದೃಷ್ಟರನ್ನು ನೋಡ್ತಾ ಬೆಳೆದ್ವಿ.ಆಗ ನಮಗೆ ಈ ಸಾಹಿತ್ಯ ಬೇರೆಯಲ್ಲ, ಬದುಕೂ ಬೇರೆಯಲ್ಲ ಎಂಬುದು ಅರಿವಾಗತೊಡಗಿತ್ತು.ಆಗಲೇ ನಾವು ಕುವೆಂಪು, ಕಾರಂತರ ಜಗತ್ತನ್ನು, ಮಾಸ್ತಿಯವರನ್ನು,ಅನಂತಮೂರ್ತಿ,ದೇವನೂರು,ಕುಂವೀ,ಸಿದ್ಧಲಿಂಗಯ್ಯ ನವರನ್ನು ಓದಿಕೊಂಡಿದ್ದು.ಬಹುಶಃ ಈ ಸೆಳೆತದಿಂದಾಗಿಯೇ ನಾನು ಮನುಷ್ಯನಾಗಿ ಉಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. ಲಂಕೇಶ್-ತೇಜಸ್ವಿಯವರ ಓದು,ನಮ್ಮ ದಾರಿಗಳನ್ನು ಮತ್ತಷ್ಟು ಕ್ಲಿಯರ್ ಮಾಡ್ತಾ ಹೋಯಿತು.ನಿರಂಜನರ ಕೊನೆಯ ಗಿರಾಕಿಗಳೂ,ದೇವನೂರರ ಅಮಾಸ,ಕುಂವೀಯವರ ಡೋಮ,ಮೊಗಳ್ಳಿಯವರ ಬುಗುರಿ,ಎಲ್ಲವೂ ನಮ್ಮೂರಲ್ಲಿದ್ವಲ್ಲ!ಅದಕ್ಕೆ…ಬರಹ ನನಗೆ ಆಪ್ತತೆಯನ್ನು ನೀಡ್ತಾ ಬಂತು. ನಂಜುಂಡ ಸ್ವಾಮಿಯವರ ರೈತ ಹೋರಾಟ,ಕೃಷ್ಣಪ್ಪನವರ ದ.ಸಂ.ಸ.,ಗೋಪಾಲಗೌಡರ ಸಮಾಜವಾದ ಕುರಿತಂತೆ ,,ಜೊತೆಗೆ ನಾನು ಈಗ ಕಳೆದ ಇಪ್ಪತ್ತು ವರುಷಗಳಿಂದ ಕೆಲಸ ಮಾಡುತ್ತಿರುವ ಹಾವೇರಿ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಚರಿತ್ರಾರ್ಹ ಬರವಣಿಗೆ ದಾಖಲಿಸಬೇಕಿದೆ.ಆ ಹೊತ್ತಿನ ಸಾಹಿತ್ಯದ ತೇವ ಆರಿ ಹೋಗದ ಹಾಗೆ ಮರು ರೂಪಿಸುವ ಬಹುದೊಡ್ಡ ಕನಸೊಂದಿದೆ.ಜೊತೆಗೆ ಗಣಿಗಾರಿಕೆಯೆಂಬ ಅತ್ಯಾಚಾರಕ್ಕೆ ಒಳಗಾದ ಸಂಡೂರೆಂಬ ಊರಿನ ಸಾಂಸ್ಕೃತಿಕ ದಾಳಿಯ ಕುರಿತೂ ಬರವಣಿಗೆ ಮಾಡಬೇಕಿದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ,ಸಾಹಿತಿ ಯಾರು..? ಲಂಕೇಶ್…ತೇಜಸ್ವಿ,ಕುವೆಂಪು, ಇಂಗ್ಲೀಷಿನಲ್ಲಿ ಶಿವ ವಿಶ್ವನಾಥನ್ ಬರಹಗಳಿಷ್ಟ.ಮಾರ್ಕ್ವೈಜ್ನ ಒನ್ ಹಂಡ್ರೆಡ್ ಡೇಸ್ ಆಫ್ ಸಾಲಿಟ್ಯೂಡ್….ತುಂಬ ಡಿಸ್ಟರ್ಬ್ ಮಾಡಿದ ಕೃತಿ.ಇತ್ತೀಚೆಗೆ ಶಿವಸುಂದರ್,ಬರಗೂರರ ,ಹರ್ಷಮಂದರ್,ಮುಜಾಫರ್ ಅಸಾದಿಯವರ ಮಾತುಗಳನ್ನು
ಮಕ್ಕಳಿಗೆ ಬದುಕಿನ ಪಾಠ
ಲೇಖನ ಮಕ್ಕಳಿಗೆ ಬದುಕಿನ ಪಾಠ ನಿಖಿಲ ಎಸ್. ಮಕ್ಕಳಿಗೆ ಬೇಕು ಶಿಕ್ಷಣದ ಜೊತೆಗೆ ಜೀವನದ ಪಾಠ.ಒಬ್ಬ ತಂದೆ ತಾನು ಅನುಭವಿಸಿದ ನೋವು ನನ್ನ ಮಕ್ಕಳಿಗೆ ಬರಬಾರದು ಎನ್ನುವಷ್ಟು ಚೆನ್ನಾಗಿ ಓದಿಸಿ,ಒಂದು ಒಳ್ಳೆಯ ನೌಕರಿ ಸೇರಿಸಬೇಕು, ಎಂಬ ಭಾವನೆ ಹೆಚ್ಚಿನ ಪೋಷಕರದ್ದಾಗಿರುತ್ತದೆ. ಇದು ಸಹಜ ಹಾಗೆಯೇ ಇದು ತಪ್ಪಲ್ಲ. ಆದರೆ ಮಕ್ಕಳಿಗೆ ಕಷ್ಟವೇ ಇರಬಾರದು ಎಂದು ಮುದ್ದಿನಿಂದ ಬೆಳೆಸುವುದರಿಂದ ಜೀವನದ ಶಿಕ್ಷಣ ಪಾಠ ಕಲಿಸದೆ ಕೇಳಿದೆಲ್ಲವನ್ನು ತಕ್ಷಣವೇ ಅವರ ಕೈಗೆಟಕುವಂತೆ ನೀಡುವುದರಿಂದ ಮಕ್ಕಳು ಹಣವನ್ನು ಗೆಲ್ಲುತ್ತಾರೆ ವಿನಹ ಜೀವನವನ್ನಲ್ಲ.“ಮಕ್ಕಳಿಗೆ ಆಸ್ತಿಯನ್ನು ಮಾಡುವುದರ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಡಾ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. . ”ಬಾಲ್ಯದಿಂದಲೇ ಜೀವನ ಶಿಕ್ಷಣ ಕಲಿಸಬೇಕೆನ್ನುವ ಸತ್ಯ ಈ ಮಾತಿನ ಹಿಂದಿದೆ.ಹಾಗಿದ್ದರೆ ಜೀವನ ಶಿಕ್ಷಣವೆಂದರೇನು ಎಂಬುದು ಸಹಜವಾಗಿ ಏಳುವ ಪ್ರಶ್ನೆ.ಸಂಸ್ಕಾರ, ಆತ್ಮವಿಶ್ವಾಸ, ಸವಾಲುಗಳನ್ನು ಸ್ವೀಕರಿಸುವ ಆತ್ಮಸ್ದೈರ್ಯ, ಕಠಿಣಪರಿಶ್ರಮ, ಮಾನವೀಯತೆ, ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆ, ಸಕರಾತ್ಮಕ ಮನೋಬಾವನೆಯನ್ನ ಬೆಳೆಸಿಕೊಳ್ಳುವುದೇ ಜೀವನ. ಸಂಸ್ಕಾರಕಲಿಸಿ: ಜೀವನದಲ್ಲಿ ಮುಖ್ಯವಾಗಿ ಬೇಕಿರುವುದು“ಸಂಸ್ಕಾರ”ಸುಂದರಬದುಕಿಗೊಂದು ಭದ್ರ ಬುನಾದಿ,ಮನೆಯೇ ಮೊದಲ ಪಾಠಶಾಲೆ. ಮಕ್ಕಳಿಗೆ ವಯಸ್ಸಿಗೆ ಬರುವವರೆಗೂ ತಂದೆ-ತಾಯಿಯೇ ಆದರ್ಶರಾಗಿರುತ್ತಾರೆ.ಅವರ ನಡವಳಿಕೆಗಳನ್ನೆ ಅನುಸರಿಸುತ್ತಾರೆ. “ಬಿತ್ತಿದಂತೆ ಬೆಳೆ” ಎಂಬ ನಾಣ್ಣುಡಿಯಂತೆ ಮಕ್ಕಳಿಗೆ ಮೌಲ್ಯವನ್ನು ತಿಳಿಹೇಳಿದರೆ ಆ ಆದರ್ಶದಂತೆಯೇ ಬೆಳೆಯುತ್ತಾರೆ. ಅವರಲ್ಲಿ ಸಕರಾತ್ಮಕ ಚಿಂತನೆಯನ್ನ ಬೆಳೆಸುವುದು. ಹಿರಿಯರನ್ನ ಗೌರವಿಸುವುದು. ಭಗವಂತನ ಶ್ರದ್ದೆ ಮತ್ತು ನಂಬಿಕೆಯನ್ನಿಡುವುದು. ಕುಟುಂಬ, ಸಂಬಂದಿಕರೊಂದಿಗೆ ಉತ್ತಮ ಬಾಂದವ್ಯವನ್ನ ಹೊಂದುವುದು. ಜೊತೆಗಿರುವ ಸ್ನೇಹಿತರನ್ನು ಆಧರಿಸಿ ಜೀವನದ ದಿಕ್ಕು ಸಾಗುವುದಿದೆ. ಅವಲಂಬನೆ ತಗ್ಗಿಸಿ: ಹೆತ್ತವರು ಮಕ್ಕಳಿಗೆ ಬದುಕಿನ ಅನುಭವಗಳನ್ನು ಕಲಿಸಬೇಕು. ಮಗು ಎಡವಿಬಿದ್ದಾಗ ಅಳುತ್ತಾರೆ. ಆ ನೋವಿನ ಅನುಭವದಿಂದ ಮುಂದೆ ಎಚ್ಚರಿಕೆಯಿಂದ ಹೆಜ್ಜೆಯನ್ನು ಹಾಕಿ ಮುಂದೆ ಸಾಗಬೇಕು.ಮಕ್ಕಳು ಕೇಳಿದನ್ನೆಲ್ಲಾ ತಂದು ಕೊಡುವ ಬದಲು ಆ ವಸ್ತುವನ್ನು ಖರೀದಿಸುವ ಶ್ರಮವನ್ನ ತಿಳಿಸಿಕೊಡಬೇಕು. ಮಕ್ಕಳು ಪ್ರತಿಯೊಂದು ವಿಷಯದಲ್ಲೊ ಪೋಷಕರನ್ನೇ ಅವಲಂಬಿಸಿದರೆ ಕಲಿಕೆ ಮುಗಿದ ನಂತರ ನೀರಿನಿಂದ ಹೊರ ತೆಗೆದ ಮೀನಿನಂತಾಗುತ್ತದೆ. ಯಾವುದಾದರೂ ಸಣ್ಣಪುಟ್ಟ ವಿಷಯದಲ್ಲಿ ಮಕ್ಕಳೇ ನಿರ್ದಾರ ತೆಗೆದುಕೊಳ್ಳುವಂತಾಗಬೇಕು. ಒತ್ತಡ ಬೇಡ: ನನ್ನ ಮಗ ನಾನು ಹೇಳಿದ ಹಾಗೆ ಕೇಳಬೇಕು, ಹೇಳಿದ್ದನ್ನೆ ಓದಬೇಕು, ನಾನು ಹಾಕಿದ ಗೆರೆ ದಾಟಬಾರದು ಎಂಬ ಭಾವನೆ ಬೆಳೆಸಿಕೊಳ್ಳದೆ ಅವರ ಮನಸ್ಸನ್ನು ಅರಿತು ಅವರು ಬಯಸಿದ ಕ್ಷೇತ್ರದಲ್ಲಿ ಅವರಿಗೆ ಇಷ್ಟವಾದ ವಿಷಯವನ್ನು ಆಯ್ದುಕೊಳ್ಳಲು ಅವಕಾಶ ನೀಡಬೇಕು. ಸ್ನೇಹಬಾವದಿಂದಿರಿ: ಮಕ್ಕಳ ಪ್ರತಿಯೊಂದು ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದೇ ಕೆಲವವೊಂದು ನಿರ್ದಾರವನ್ನು ಅವರೇ ತೆಗೆದುಕೊಳ್ಳುವ ಹಾಗೆ ಸ್ವಾತಂತ್ರ್ಯ ನೀಡಬೇಕು.ಮಕ್ಕಳಿಗೆ ಜೀವನಶಿಕ್ಷಣದ ಪಾಟವನ್ನು ಕೊಡುವವರು ಬೆಳೆಯುವ ಪರಿಸರ, ತಂದೆ-ತಾಯಿ, ಗುರು-ಹಿರಿಯರು ಅವರ ಮಾರ್ಗದರ್ಶನಲ್ಲಿ ಮಕ್ಕಳು ಉತ್ತಮವಾಗಿ ಬೆಳೆಯಲು ಸಾದ್ಯ… ***************************************************************
ಮಕ್ಕಳಿಗೆ ಬದುಕಿನ ಪಾಠ Read Post »
ಗುಟ್ಟು
ಕವಿತೆ ಗುಟ್ಟು ಎಸ್ ನಾಗಶ್ರೀ ಸಣ್ಣ ಊರಿನ ಪ್ರೇಮಿಗಳಪಾಡು ಹೇಳಬಾರದುರಂಗೋಲಿ ಗೆರೆಯಲ್ಲಿನಸಣ್ಣ ಮಾರ್ಪಾಡುಮೂಲೆಯಂಗಡಿಯ ಕಾಯಿನ್ನುಬೂತಿನನಿಮಿಷಗಳ ಲೆಕ್ಕಕಾಲೇಜು ಬಿಟ್ಟ ಕರಾರುವಕ್ಕುನಿಮಿಷ ಸೆಕೆಂಡುಯಾವ ಬಸ್ಸಿನ ದಾರಿಯಲಿಅಡ್ಡ ನಿಂತಳು ಪೋರಿಯಾರ ಮನೆಯ ಚಿತ್ರಾನ್ನತಿಂದುಂಡ ಕೈ ಘಮನಾಯಿಗೇಕೆ ಅಲ್ಲೇ ನಡೆದಾಟಕೆನ್ನೆಗುಳಿ ಹೆಚ್ಚು ಹೊತ್ತುಯಾರ ಮುಂದಿತ್ತುಬೆಳಿಗ್ಗೆ ಮುಡಿಯದ ಹೂಸಂಜೆ ಹೆರಳಿಗೆ ಬಂದದ್ದು ಹೇಗೆಂಬಸೂಕ್ಷ್ಮಗಳು ಇಲ್ಲಿನಗೋಡೆ, ಗಿಡ, ಮರ, ಬೇಲಿಗಳಿಗೆ ಸಲೀಸುಕಣ್ಣಲ್ಲೇ ತೂಕದ ಬಟ್ಟು ಹೊತ್ತುತಿರುಗುವ ತಕ್ಕಡಿಗಳುರಸ್ತೆಬದಿಗೆ ನಿರಪಾಯ ನಿಂತುಮನೆ ಹಿರಿಯರಿಗೆಸಂದೇಶ ಕಳಿಸಿಮಜಾ ನೋಡುತ್ತವೆ ಸಣ್ಣ ಊರಿನ ಹೆಂಗೆಳೆಯರಬುದ್ಧಿ ಬ್ರಹ್ಮಾಂಡ ಬೆಳೆಯುವುದು ಹೀಗೆಪ್ರೀತಿಸಿದಾಗ ಬುದ್ಧಿ ಕಳೆಯದೆಜೋಪಾನ ಮನೆಗೊಯ್ಯುವ ಕಲೆನೊಸಲ ಮೇಲಿನ ಮುತ್ತುಕೆನ್ನೆರಂಗಿಗೆ ಇಳಿಯದಂತೆತೋರುವ ಹುಷಾರುಉಹೂಂಅರ್ಥವಾಗುವುದಿಲ್ಲ ಹುಡುಗಿಯರೆಮಹಾನಗರದ ಅನಾಮಿಕಸುಖದಲಿಪ್ರೇಮಿಸುವ ನಿಮಗೆ ************************
ಅನುವಾದ ಸಂಗಾತಿ
ಕಲ್ಲೆದೆ ಬಿರಿದಾಗ ಮಿಥ್ಯಾಪವಾದಕ್ಕೆಸಂಶಯದ ಶನಿಗೆಸೋತು ಸತ್ತಿದೆ ಪ್ರೀತಿ || ಯಾವ ಕಿಟಕಿಗಳು ಕಣ್ತೆರೆಯಲಿಲ್ಲಬಾಗಿಲುಗಳು ಬಾಯ್ಬಿಡಲಿಲ್ಲಗೋಡೆಗಳು ಉಸಿರಲೇಯಿಲ್ಲ || ಹೆಪ್ಪುಗಟ್ಟಿದ ಮೇಲೆಕಾವು ಕೊಡದಿರು ಗೆಳೆಯಎಂದಿಗೂ ಸವಿಹಾಲಾಗದು || ಸುಳ್ಳಿನ ಮಹಲಿನ ಮೇಲೆಪ್ರೇಮ ಗೋಪುರವೇ ?ನಂಬಿಕೆಯೇ ಮರಗುವುದು || ಮನದ ಮಡುವಲ್ಲಿ ನಿಂತ ನೀರಾಗಿದೆಗೆಳೆತನ, ಹೊಸ ಸುಗಂಧಸಿಂಚನಕೆ ಯತ್ನ ಬೇಡವೇ ಬೇಡ || ನೆನ್ನೆಗಳ ಗಾಯಕ್ಕೆಇಂದು ಉಪಚಾರವೇ ?ನಾನಿತ್ತ ಉಸಿರು ಮರಳಿಸು || ಅಂದು ಕಟ್ಟಿದ ಕನಸುಗಳುಹೂಮನೆ ಸೊಗಸುಗಳುಕಮರಿ ಗೋರಿ ಏರಿವೆ || ಎದೆಯುಕ್ಕಿದರೆ ಕಡಲುಹೊತ್ತಿ ಉರಿದರೆ ಬೆಂಕಿಬತ್ತಿ ಬಿರಿದರದು ಬರಡಾದೀತು || ಕತ್ತಲೆಯ ಜೀವಭಿಕ್ಷೆಗೆಬಸವಳಿದು ಬಂದ ಬೆಳಕಿಗೆಸತ್ತು ಬದುಕಿದ ಜೀವಂತೆ ನಾನು || ವಿಭಾ ಪುರೋಹಿತ್ When the iron heart broken To the denigrationto the skeptical tonelove defeated and died away. No windows opened their eyesno doors raised their voiceno walls uttered any words. Don’t heat up, my dearwhen it is already curdled. It never be a sweetest milk. Could it be possible a castle of love upon the palace of lies?The trust regret itself. Friendship turned like a stored water in a pond of mind.Don’t try to sprinkle new perfume. Is it a treatment for yesterday’s wound.. return that breathI have lent. The dreams of yesterday’sThe beauties of flowering housesall withered and reached up to the tomb. If the heart blossomed, it’s an ocean,Whereas it burnt, it’s a fire,If it dried up, will become barren. To the life owe of the darknessAnd the exhausted lightI’m the dead in alive. Nagarekha Gaonkar
ಸಾವು ಮಾತಾದಾಗ
ಕವಿತೆ ಸಾವು ಮಾತಾದಾಗ ವಿಶಾಲಾ ಆರಾಧ್ಯ ಭಯವೆನ್ನದಿರು ಕೊನೆಯೆನ್ನದಿರುಮೈಲಿಗೆ ಎನ್ನದಿರು ನನ್ನನುಹಗುರಾಗುವಿ ಮೃದುವಾಗುವಿಕೂಡಿದ ಕ್ಷಣದೊಳು ನನ್ನನು ಭವದೊಳು ಮಾಡಿದ ಪಾಪವತೊಳೆಯುವ ಹೊನಲು ನಾನುತರತರ ಮುಖವಾಡ ಹೊತ್ತವರಿಗೆಹೊಸ/ಕಳೆಯನು ಕೊಡುವೆ ನಾನು ಬಂಧು ಬಳಗವೇ ಹಿರಿದೆನ್ನದಿರುಎನಗಿಂ ಹಿರಿಯರ ನಾ ಕಾಣೆಸತಿ ಪತಿ ಸಂಸಾರ ಜೊತೆ ಮಮಕಾರನಾ ಬಂದರೆ ಅಲ್ಲಿಯೆ ಮಾಯೇ ಅಮ್ಮ ಅಪ್ಪ ಅಣ್ಣಾ ಅಕ್ಕಾಎನ್ನುವುದೆಲ್ಲಾ ಮೋಹಕೆಬಂದೊಡನೆಯೆ ನಾ ಕ್ಷಣಕರೆವರು ಹೆಣವೆಂದಾ ದೇಹಕೆ ————-
ಪುಸ್ತಕ ಪರಿಚಯ
ತಥಾಗತನಿಗೊಂದು ಪದ್ಮ ಪತ್ರ ಭಾವಜೀವಿಯ ಭಾಷಾ ಚಮತ್ಕಾರಿಕ ಕವಿತೆಗಳು ತಥಾಗತನಿಗೊಂದು ಪದ್ಮ ಪತ್ರಕವನ ಸಂಕಲನಡಾ. ಆನಂದ ಋಗ್ವೇದಿಸಾಧನ ಪಬ್ಲಿಕೇಷನ್ ವೃತ್ತಿಯಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆ, ಚಿಟಗೇರಿಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಋಗ್ವೇದಿ ಅವರು ಪ್ರವೃತ್ತಿಯಿಂದ ಕವಿ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ, ಡಾ. ಜೋಳದರಾಶಿ ದೊಡ್ಡನಗೌಡ ನಾಟಕ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗಳು ಲಭಿಸಿವೆ. ಪ್ರಕಟಿತ ಕೃತಿಗಳು – ‘ಜನ್ಮ ಮತ್ತು ಅನೂಹ್ಯ ಸಾಧ್ಯತೆ’ ಅವರ ಕಥಾಸಂಕಲನ. ‘ಊರ್ವಿ’ ಅವರ ನಾಟಕ, ‘ನಿತ್ಯ ನೆನಪಿಗೊಂದು ನವಿಲುಗರಿ’ ಅವರ ಕವನ ಸಂಕಲನ. ಈ ಕವನಗಳ ಗುಚ್ಛದಲ್ಲಿ ನಾಲ್ಕು ಭಾಗಗಳಿವೆ; ಬಯಲು, ಬೆಳಕು, ಮೃದ್ವಂಗಿ ಮತ್ತು ಋತುಮಾನ. ಒಟ್ಟು ಅರವತ್ತೇಳು ಕವಿತೆಗಳು ಈ ಕೃತಿಯಲ್ಲಿವೆ. ಶೀರ್ಷಿಕೆ ಕವಿತೆ ‘ತಥಾಗತನಿಗೊಂದು ಪದ್ಮ ಪತ್ರ’ ವನ್ನು ನೋಡಿ. ‘ ನಿನಗೆ ಜ್ಞಾನೋದಯವಾಗಿತ್ತಂತೆ, ನಮಗೆಕನಿಷ್ಠ ಉದಯಿಸಲಿ ಹೊಸ ಬೆಳಕ ಕಿರಣತೊಯ್ಯಿಸಲಿ ನವ ವರ್ಷ ಧಾರೆಈ ಧಗೆ ಹಗೆ ಆರಿ ಆವರಿಸಲಿ ಶುದ್ಧ ಗಾಳಿಅಂತಃಕರಣದ ಹೊಂಬಾಳೆ ಎಂಬುದೂ ದೂರಾಸೆ!!’ ಸದಾಶಯದ ಸಾಲುಗಳು ಗಮನ ಸೆಳೆಯುತ್ತವೆ. ಒಂಟಿ ಹಕ್ಕಿಯ ಉಲಿಯದ ಕೊಕ್ಕು ಕವಿತೆಯಲ್ಲಿ –‘ಹಕ್ಕಿಗೆ ಬೇಕಿರುವುದು;ಕೊರಳ ಹಾಡ ಆಲಿಸುವ ಕಿವಿಕಣ್ಣ ಕನಸ ಕಾಯುವ ರೆಪ್ಪೆದಣಿದ ರೆಕ್ಕೆಯ ಸವರುವ ಬೆರಳುಸದಾ ಹಿಂಬಾಲಿಸುವ –ತನ್ನಂತಹುದೇ ನೆರಳು’ ಹಕ್ಕಿಗಳ ಕುರಿತು ಅದೆಷ್ಟು ಕವನಗಳು ಬಂದಿಲ್ಲ? ಆದರೆ ಇದು ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ‘ಕಣ್ಣೆಂಬುದು ರೆಪ್ಪೆಯೊಳಗಿನ ಹಣ್ಣು’ ಎಂಬ ಶೀರ್ಷಿಕೆಯೇ ಪ್ರತಿಮಾತ್ಮಕವಾಗಿದೆ. ಇದರ ಮಿಂಚಿನಂತಹ ಸಾಲುಗಳನ್ನು ನೋಡಿ.. ‘ ಬದುಕೆಂಬುದು;ರೆಪ್ಪೆ ತೆರೆದಾಗಿನಿಂದ ಮುಚ್ಚುವವರೆಗೆತೆರೆದ ಅಧ್ಯಾಯ!!’ ಬಯಲಿಗೆ ಬಾಗಿಲಿಲ್ಲ, ಕೊಳಲೂದುವುದೆಂದರೆ, ಯುದ್ಧ ಸೋತ ಯಶೋಧರ ಬದುಕಿನ ದಾರಿಯನ್ನು ಶೋಧಿಸುವ ಕವಿತೆಗಳು. ಅದರದೇ ಸಾಲುಗಳು ಹೇಳುವಂತೆ ‘ ಯುದ್ಧದಿ ಮಣ್ಣ ಗೆಲ್ಲಬಹುದಲ್ಲದೇಹೆಣ್ಣ ಗೆಲ್ಲಬಹುದೇ!?’ ಅಳು ಒಂದೇ ಜಗದ ಭಾಷೆ, ಲೀಲಾಂಮೃತ, ನಾಗರ ಪಂಚಮಿ, ಅಹಲ್ಯಾಗತ, ನೀರೆಯ ಸೆರಗು, ನೆಲದ ನಕ್ಷತ್ರ, ಮೃದ್ವಂಗಿ, ಭವತಾರಿಣಿ ಕವಿತೆಗಳು ಈ ಗುಚ್ಛದಲ್ಲಿ ನನಗೆ ಹೆಚ್ಚು ಇಷ್ಟವಾದ ಕವಿತೆಗಳು.ಬೆಳಕು – ಒಂದು ಗಜಲ್, ಮೃದ್ವಂಗಿ- ಬಿಡಿ ಕವಿತೆಗಳು ಇದೇ ಸಂಕಲನದಲ್ಲಿದ್ದು, ವಿಭಿನ್ನವಾಗಿವೆ. ಸ್ನೇಹಶೀಲ ಮನಸ್ಸಿನ ಕವಿ ಆನಂದ ಋಗ್ವೇದಿ ಅವರು ಇತ್ತೀಚಿನ ವರ್ಷಗಳಲ್ಲಿ ಆತ್ಮೀಯರಾದವರು. ಅವರ ಹಿಂದಿನ ಕೃತಿಗಳನ್ನು ಓದಲು ನನಗೆ ಸಿಕ್ಕಿರಲಿಲ್ಲ. ಈ ಹೊಸ ಕವನ ಸಂಕಲನದಲ್ಲಿ ಅವರು ಹೊಸ ಎತ್ತರವನ್ನು ಏರುವ ಎಲ್ಲ ಭರವಸೆಗಳನ್ನು ಮೂಡಿಸಿದ್ದಾರೆ. ಅಪಾರ ಓದು, ಸಂಶೋಧನೆ ಮತ್ತು ಪರಿಶ್ರಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಹೆಜ್ಜೆ ಗುರುತುಗಳನ್ನು ಛಾಪಿಸಿರುವ ಋಗ್ವೇದಿಯವರು ಮತ್ತಷ್ಟು ಬರೆಯುತ್ತಾ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಿಲಿ ಎಂಬ ಆಶಯ ನನ್ನದು.******************************** ಡಾ. ಅಜಿತ್ ಹರೀಶಿ
ಗಝಲ್
ಗಝಲ್ ರೇಷ್ಮಾ ಕಂದಕೂರ. ಮುಗ್ದ ಮನಸುಗಳು ನಾವು ಚಿವುಟದಿರಿ ನಮ್ಮನ್ನಕಂಡ ಕನಸುಗಳು ನನಸಾಗ ಬೇಕಿದೆ ಇನ್ನ ನೋವುಗಳ ಸಹಿಸದ ಹಸುಳೆಗಳು ನಾವುಕ್ರೌರ್ಯದ ದಾಳಿಗೆ ಸಿಲುಕಿಸದಿರಿ ತನುವನ್ನ ಭರವಸೆಗಳ ಬೆಳಕಿನಡಿ ಸಾಗಬೇಕಿದೆ ಜೀವನಎಸೆಯ ಬೇಡಿ ಮೃದುಲತೆಗೆ ಮೋಹದ ಜಾಲವನ್ನ ಜ್ಞಾನದ ಹಂಬಲಕೆ ಕೈ ಚಾಚಿದೆ ಕರೆದಿದೆ ಮನವುವಿವಾಹ ಕೂಪಕೆ ವಶಪಡಿಸದಿರಿ ಕುಸುಮವನ್ನ ನಿರ್ಮಲತೆಯ ನಾಜೂಕು ನನ್ನೊಡನಾಟಹೊಸಕಿ ಹಾಕದಿರಿ ನಾಜೂಕು ರೇಷಿಮೆಯನ್ನ
ಪ್ರೀತಿ ಹೊನಲು
ಕವಿತೆ ಶ್ರೀವಲ್ಲಿ ಶೇಷಾದ್ರಿ ಮನದ ಮಾತಿನ್ನು ಮುಗಿದಿಲ್ಲ ನಲ್ಲಮೆಲ್ಲನೆದ್ದು ಯಾಮಾರಿಸ ಬೇಡನಿನ್ನೆದೆಯೊಳಗೊಂದು ಮುಳ್ಳಿನ ಪಕ್ಕಕೆಂಪು ಗುಲಾಬಿ ಗಂಧವಿದೆಯೆಂದುನೀ ಹೇಳದಿದ್ದರೂ ನಾ ಬಲ್ಲೆಗಂಡಸು ಹಾಗೆ ಬಲು ಗಡಸುಎಲ್ಲಿಂದ ಬಂದೀತು ನಯ ಸೊಗಸುಬೇಕೆಂದೆ ಮುಖ ಗಂಟಿಕ್ಕಿ ಮುನಿಸುಲಘು ಬಿಗು ಮುತ್ತುದುರಿದ ಮಾತುಕೋಪವಾರಿದಾಗ ಅಪರೂಪಕ್ಕೊಂದು ನಗುದೂರ ನಿಂತ ಬಾನಲ್ಲಿ ಮಿಂಚಂತೆಆಲಿ ಕಲ್ಲುಗಳ ಕಲ್ಲೆಂದರಾದೀತೆಧರೆ ತಬ್ಬಿದೊಡೆ ನೀರಾದಂತೆಪ್ರೀತಿ ಹೊನಲು ಹರಿವ ಬಾ ಇನಿಯ *************************
ಕಡಲು ಕರೆದ ಗಳಿಗೆ
ಕವಿತೆ ಕಡಲು ಕರೆದ ಗಳಿಗೆ ಪ್ರೇಮಶೇಖರ ಕಡಲ ತಡಿಯಲ್ಲೊಂದು ಗುಡಿಯ ಕಂಡುಮಿಂದು ಮಡಿಯಾಗಿ ದರ್ಶನಕ್ಕೆಂದುನಡೆದರೆಗುಡಿಯಲ್ಲಿ ದೇವತೆಇರಲಿಲ್ಲ. ಮರಳಲ್ಲಿ ದಿಕ್ಕುಮರೆತು ಕಾಲಾಡಿಸಿ,ಬೊಗಸೆ ತುಂಬಶಂಖಚಿಪ್ಪಿ ಆಯ್ದು,ಪುಪ್ಪುಸ ಪೂರ್ತಿಪಡುವಣದ ಗಾಳಿಯೆಳೆದು,ಕಣ್ಣತುಂಬಾ ನೀಲಿನೀಲಿಕಡಲನು ಆಹ್ವಾನಿಸಹೊರಟರೆಅಲ್ಲಿ ಕಂಡಳು ಅವಳು. ಮುಂಗುರುಳ ಹಾರಲು ಬಿಟ್ಟುಸೆರಗಿಗೂ ಸ್ವಾತಂತ್ರ್ಯ ಕೊಟ್ಟು,ಜತೆಗೆ ಮನಕೂ ರೆಕ್ಕೆ ಕಟ್ಟಿ,ಎತ್ತಿಕೋಎಂದು ಕಾಲಪ್ಪಿದ ಅಲೆಗಳಿಗೆಕವನ ಜೋಗುಳದ ಗುಟುಕು ಕೊಡುತ್ತಲೇಕಡಲಿಗೆ ಹಾಯಿಯೇರಿಸಿಯಾನ ಹೊರಡುವಸನ್ನಾಹದಲ್ಲಿದ್ದಳು.ನನಗೆ ದೇವತೆ ಸಿಕ್ಕಿದ್ದಳು. ಶತಶತಮಾನಗಳಿಗೊಮ್ಮೆ ಬರುವಸುಮುಹೂರ್ತ ಅದು.ಗಡಬಡಿಸಿ ಎದೆಗೂಡಲ್ಲಿ ಗುಡಿಕಟ್ಟಿ ದೇವತೆಯನುಪ್ರತಿಷ್ಟಾಪಿಸಿಬಿಟ್ಟೆ. ಇಂದು ನನ್ನೆದೆಯೊಂದುಅಗಾಧ ಕಡಲು,ಕಡಲಲ್ಲೊಂದುಬೆಳ್ಳನ್ನ ಬಿಳೀ ಹಾಯಿದೋಣಿ,ದೋಣಿಯಲ್ಲಿ ದೇವತೆ. ನನ್ನ ಉಸಿರೀಗ ಅನುದಿನವೂ ಅನಂತಕಾವ್ಯಯಾನ. ಪ್ರೇಮಶೇಖರ
ಮುಗಿಯದ ಪಯಣ
ಕವಿತೆ ಮುಗಿಯದ ಪಯಣ ವೀಣಾರಮೇಶ್ ಸಾವೇ ಕಾಡದಿರು ನನ್ನಮುಗಿದಿಲ್ಲ ಇನ್ನೂ ಬದುಕುವ ಹಲವುಕಾರಣ ಮನಸ್ಸಿಗಿದೆ ಇನ್ನೂ ದ್ವಂದ್ವಅರ್ಥ ಆಗದಮುಗ್ದ ಮನಸ್ಸುಗಳ ಜೊತೆ ಯುದ್ಧ ,.ಆಸೆ ಆಮಿಷಗಳಕತ್ತು ಹಿಸುಕಿ ಕಟ್ಟಬೇಕಿದೆನನ್ನ ಸೌಧಹೇಗೆ ಮುಗಿಯುವುದುನನ್ನ ಪಯಣನನ್ನ ಜೇಬಿನ್ನೂ ಭಣ ಭಣ ತಡಕಾಡಿದರೂ ಸಿಗದು ಕಾಂಚಾಣ ಪಾಪ ಪ್ರಜ್ಞೆಗಳು ಸುತ್ತುವರಿದು,ಮೋಸ,ಭ್ರಷ್ಟಾಚಾರ ದಿಕ್ಕು ತಪ್ಪಿಸಿಭಾವನೆಗಳೆಲ್ಲ ಸತ್ತು ಹೆಣವಾಗಿದೆ ನೀನು ಮತ್ತೆ ಕಾಡದಿರುಸಾವೇ, ನಾನಿಲ್ಲಿ ಸುಟ್ಟುಕರಕಲಾಗಿದ್ದೀನಿನನ್ನ ದಾರಿಗೆ ಅಡ್ಡ ಬರಬೇಡ ಎಲ್ಲದಕ್ಕೂಹೇಳುವೆ ಸಕಾರಣ









