ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕ್ಷಮಿಸು ಮಗಳೇ,

ಕವಿತೆ ಕ್ಷಮಿಸು ಮಗಳೇ, ಬಾಲಾಜಿ ಕುಂಬಾರ ಕ್ಷಮಿಸು ಮಗಳೇ,ನಿನಗೆ ನಾಲಿಗೆ ಕತ್ತರಿಸಿದಾಗನಮಗೂ ನಾಲಿಗೆ ಮೇಲೆ ಗಾಯವಾಗಿದೆ,ಆದರೆ ಮಾತನಾಡಲು ಆಗಲಿಲ್ಲ.ಮಾತು ಮೌನವಾಗಿದೆ, ವೇದನೆ ಮಿತಿಮೀರಿದೆ, ಕ್ಷಮಿಸು ಮಗಳೇ,ನಿನಗೆ ಕಾಲು ಕತ್ತರಿಸಿ, ಕೈ ಮುರಿದಾಗಕಾಲುಗಳಿಗೆ ನೋವಾಗಿದೆ,ಕೈಗಳಿಗೆ ಬೀಗಗಳಿವೆ, ಕೈಕಟ್ಟಿ ಕುಳಿತಿದ್ದೇವೆನಿನ್ನ ‘ಜೀವ’ ಕಳೆದುಕೊಂಡು,ಮತ್ತದೇ ಸೂತಕದ ಮನೆಯಲ್ಲಿ, ಕ್ಷಮಿಸು ಮಗಳೇ,ಇದು ‘ರಾಮರಾಜ್ಯ’ ಇಲ್ಲಿ ಸ್ವಾತಂತ್ರ್ಯವಾಗಿತಿರುಗಾಡುವಂತೆ ಹೇಳಿದ್ದೇವೆ, ಆದರೆರಾಮರಾಜ್ಯದ ಕೀಚಕರ ಕೈಯಿಂದ ನಿನ್ನನ್ನುರಕ್ಷಿಸಲು ಆಗದೇ, ನಾವು ಅಪರಾಧಿಗಳಾಗಿದ್ದೇವೆ. ಕ್ಷಮಿಸು ಮಗಳೇ,ಈಗ ಕೌರ್ಯ ಮೆರೆಯುತ್ತಿದೆ, ನ್ಯಾಯ ಗಂಟಲಲ್ಲಿ ಉಸಿರುಗಟ್ಟಿದೆ, ಇನ್ನು ಮನುಷ್ಯತ್ವ ಎಂಬುದು ಮರೀಚಿಕೆಯಾಗಿದೆ, ಎಲ್ಲೆಡೆ ರಕ್ತದ ಕಲೆಗಳು ಚಿಮ್ಮುತ್ತಿವೆ, ಇನ್ನೆಲ್ಲಿದೆ ‘ಭಾರತ ಮಾತೆಯ’ ರಕ್ಷಣೆ?? ಕ್ಷಮಿಸು ಮಗಳೇ,ಅವಸ್ಥೆಯ ನೆಲದಲ್ಲಿ ಅನ್ಯಾಯ ಪಂಜಿನಮೆರವಣಿಗೆ ಹೊರಟಾಗ ‘ಬಡ ಜೀವಗಳು’ಮೌನವಾಗಿ ಪ್ರತಿರೋಧಿಸುತ್ತಿವೆ,ಆ ಕ್ಷಣದ ತೊಳಲಾಟ, ಅಸಹಾಯಕತೆ,ನಿನ್ನ ರಕ್ತ ಕಣ್ಣೀರು ನೆನೆದಾಗ, ಒಮ್ಮೆ ಕಣ್ಣು ಒದ್ದೆಯಾದವು, ಹಾಗೇ ರಕ್ತ ಕುದಿಯುತ್ತಿದೆ, ಕ್ಷಮಿಸುಬಿಡು ಮಗಳೇ,ನಿನಗೆ ಉಳಿಸಿಕೊಳ್ಳಲು ಆಗಲಿಲ್ಲ, *****************************

ಕ್ಷಮಿಸು ಮಗಳೇ, Read Post »

ಕಾವ್ಯಯಾನ, ಗಝಲ್

ಗಝಲ್

ಕವಿತೆ ಗಝಲ್ ರತ್ನರಾಯ ಮಲ್ಲ ಒರಟಾದ ಅಧರಗಳಲಿ ನುಲಿಯುತಿದೆ ನಿನ್ನದೆ ಹೆಸರುಎದೆಯ ಎಡ ಭಾಗದಲ್ಲಿ ಕುಣಿಯುತಿದೆ ನಿನ್ನದೆ ಉಸಿರು ಹಗಲಿರುಳು ಕಳೆಯುತಿರುವೆ ನಿನ್ನಯ ಕನವರಿಕೆಯಲ್ಲಿಕನಸುಗಳೆಂಬ ಹೆಪ್ಪಿನಿಂದ ಭಾವವು ಆಗಿದೆ ಮೊಸರು ಈ ರಾತ್ರಿಯು ಹರಿಯುತಿದೆ ನಿದ್ರೆಯ ಆಲಿಂಗನವಿಲ್ಲದೆಹಾಸಿಗೆಯ ತುಂಬೆಲ್ಲ ಬರಿ ನಿನ್ನ ಮಾದಕತೆಯ ಒಸರು ಗಾಳಿ ಬೀಸುತಿದೆ ಅನುರಾಗದ ಕಡಲು ಭೋರ್ಗರೆಯಲುಕಂಗಳ ಬಾಯಾರಿಕೆಯಲ್ಲಿ ಬರಿ ನಿನ್ನ ಬಿಂಬದೆ ಕೊಸರು ‘ಮಲ್ಲಿ’ಯ ಈ ಬಿಳಿ ಬಾಹುಗಳು ನಿನ್ನನ್ನೇ ಹುಡುಕುತಿವೆಅಂತರವನ್ನು ಮುಗಿಸಲು ಅನುವಾಗಿದೆ ಪ್ರಣಯದ ಕೆಸರು ********************************

ಗಝಲ್ Read Post »

ಕಥಾಗುಚ್ಛ

ಭಯ

ಕಥೆ ಭಯ ಲಕ್ಷ್ಮೀದೇವಿ ಪತ್ತಾರ ಸಂಜನಾ ಬೆಳಗ್ಗೆದ್ದ ತಕ್ಷಣ ಪಾರಿಜಾತದ ಗಿಡದತ್ತ ಹೂ ತರಲು ಹೋದಳು. ಹೊತ್ತಾದರೆ ಹೂಗಳು ನೆಲಕ್ಕುರುಳಿ ಬಿಳುವುದೆಂದು ಹೂಬುಟ್ಟಿ ಹಿಡಿದು ಗಿಡದ ಬಳಿ ಹೋದಳು. ಆ ಹೂವೆ ಹಾಗೆ. ಅತಿಸೂಕ್ಷ್ಮವೂ ಅತ್ಯಾಕರ್ಷಕವೂ ಅಲ್ಲದೆ ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ನೆಲಕ್ಕೆ ಅಲಂಕಾರ ಮಾಡಿದಂತೆ ನೆಲದ ತುಂಬಾ ಅರಳಿ ಬೀಳುತ್ತಿದ್ದವು. ಕೆಲವಷ್ಟು ಗಿಡದ ಮೇಲೆಯೂ ಇರುತ್ತಿದ್ದವು. ಇನ್ನು ಪೂರ್ಣ ಬೆಳಕು ಹರಿಯುವ ಮುನ್ನವೇ ಅವನು ತಂದು ಬಿಡುತ್ತಿದ್ದಳು ಸಂಜನಾ. ಅಂದು ಸ್ವಲ್ಪ ಲೇಟಾಗಿ ಎದ್ದಿರುದರಿಂದ ದೌಡಾಯಿಸಿ ಹೋದಳು . ಗಾಳಿಗೆಲ್ಲಿ ಹೂಗಳೆಲ್ಲಾ ಬಿದ್ದುಬಡುವವೂ ಎಂದು ಅವಸರವಾಗಿ ಎಲೆಗಳ ಮೇಲಿನ ಹೂಗಳನ್ನು ಆಯ್ದುಕೊಂಡು ಬುಟ್ಟಿಗೆ ಹಾಕಿಕೊಂಡಳು. ಹೂಗಳೆಂದರೆ ಬಲು ಇಷ್ಟ ಸಂಜನಾಗೆ. ಗಿಡಗಳಿಗೆ ನೀರು ಹಾಕುವುದು, ಪೂಜೆಗೆ ಮತ್ತು ತನಗೂ ಹೂ ಕಿತ್ತು ತರುವುದು ಅವಳಿಗೆ ಅಚ್ಚುಮೆಚ್ಚಿನ ಕೆಲಸ. ಚೆಂದದ ಹೂಗಳನ್ನು ನೋಡುತ್ತಾ ಇರಬೇಕಾದರೆ ಅವುಗಳ ಮೇಲೆ ಸಣ್ಣದಾದ ಬಿಳಿ ಜೇಡ ಹರಿದಾಡಿದ್ದು ಕಾಣಿಸಿತು. ಅದನ್ನು ತೆಗೆಯಲು ಹೋದಾಗ ಅದು ಕೆಳಗೆ ಜಾರಿತು. ಹೂ ಸರಿಸಿ ಬುಡದಲ್ಲಿದ್ದ ಜೇಡರಹುಳು ತೆಗೆಯುವಷ್ಟರಲ್ಲಿ ಹೂಗಳ ಬುಡದಲ್ಲಿದ್ದ ಅತಿ ಸೂಕ್ಷ್ಮವಾದ ಸಣ್ಣ ಸಣ್ಣ ಹುಳುಗಳು ಹರಿದಾಡುತ್ತಿರುವದನ್ನು ಕಂಡಳು. ಅಂತಹ ಹುಳುಗಳನ್ನು ಈ ಮೋದಲು ಅವಳು ಗಮನಿಸಿರಲಿಲ್ಲ.ಅವು ಅವಳ ಕೈಮೇಲೆ ಸರಸರ ಏರಲಾರಂಭಿಸಿದವು . ಅಷ್ಟು ಸಣ್ಣ ಹುಳುಗಳಾಗಿದ್ದರು ಅವು ಹಾರುತ್ತಿದ್ದವು. ನಂತರ ಅವಳ ಮೈ ಮೇಲೆಲ್ಲಾ ಹರಿದಾಡಲಾರಂಭಿಸಿದವು. ಅವಳು ಆತಂಕದಿಂದ ಬುಟ್ಟಿ ದೇವರ ಜಗುಲಿ ಮೇಲೆ ಇಟ್ಟವಳೆ ತನ್ನ ಬಟ್ಟೆ ಜಾಡಿಸಲು ಆರಂಭಿಸಿದಳು .ಮೈಯೆಲ್ಲಾ ತುರುಸಲಾರಂಭಿಸಿತು .ಜೊತೆಗೆ ಬೊಬ್ಬೆಗಳು ಏಳಲಾರಂಭಿಸಿದವು. ಸ್ನಾನ ಮಾಡಿದರು ಗುಳ್ಳೆಗಳು ಹೋಗಲಿಲ್ಲ. ಎಣ್ಣೆ ಸವರಿದರು ಹೋಗಲಿಲ್ಲ .ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೊಬ್ಬೆಗಳು ದೊಡ್ಡವಾಗಿ ನೀರುಗುಳ್ಳೆಯಂತಾದವು . ತಡಮಾಡದೇ ಸ್ಕಿನ್ ಡಾಕ್ಟರ್ ಬಳಿ ಕರೆದೊಯ್ದರು. ಇನ್ಫೆಕ್ಷನ್ ಆಗಿದೆ ಎಂದು ಡಾಕ್ಟರ್ ಔಷದಿ, ಮುಲಾಮು ಬರೆದುಕೊಟ್ಟರು. ಆದರೂ ವಾರ ಕಳೆದರೂ ಗುಳ್ಳೆಗಳು ಮಾಯಲಿಲ್ಲ .ಯಾವುದನ್ನೇ ಆಗಲಿ ಮನಸ್ಸಿಗೆ ಬೇಗ ಹಚ್ಚಿಕೊಳ್ಳುವ ಸಂಜನಾ ಅಂಜಿಕೆ ಆತಂಕದಿಂದ ಕುಗ್ಗಿ ಹೋದಳು. ತಂದೆ-ತಾಯಿಯರು ಗಾಬರಿಗೊಂಡರು. ಧಾರ್ಮಿಕ ಸ್ವಭಾವದವರಾದ ಅವರು ಇದು ದೇವರ ಶಾಪವು ಏನು. ನಾವೇನಾದರೂ ತಪ್ಪು ಮಾಡಿರಬೇಕು ಅದಕ್ಕೆ ನಮ್ಮ ಮಗಳಿಗೆ ಶಿಕ್ಷೆಯಾಗಿದೆ. ಇರುವುದು ಒಬ್ಬಳೇ ಒಬ್ಬಳು ಮಗಳು .ಅವಳಿಗೆ ಏನಾದರೂ ಆದರೆ ಅದು ನಮಗೆ ಆದಂತೆ ಎಂದು ಚಡಪಡಿಸಿದರು. ಅವಳ ತಂದೆ ತಾಯಿ ಕೊನೆಗೆ ಸ್ವಾಮಿಯರ ಬಳಿ ಕೇಳಿಬರಲು ನಿರ್ಧರಿಸಿದರು. ಮರುದಿನ ರವಿವಾರ ಸ್ವಾಮಿಯರ ಬಳಿ ಓಡಿ ಹೋದರು.ಆದದ್ದು ತಿಳಿಸಿದ ದಂಪತಿಗಳು ಹೀಗೇಕಾಗಿದೆ ನಮ್ಮ ಮಗಳಿಗೆ , ಪರಿಹಾರ ಏನು ಎಂದು ವಿಚಾರಿಸಲು ಗಣಪತಿ ಆಚಾರ್ಯರು “ಇದು ಖಚಿತವಾಗಿಯೂ ನಾಗದೋಷ ನೀವು ಕುಕ್ಕೆ ಗೆ ಹೋಗಿ ಬನ್ನಿ ಎಲ್ಲಾ ಪರಿಹಾರ ಆಗುತ್ತೆ “ಎಂದು ಹೇಳಿದರು. ಸರಿಯೆಂದು ಕುಕ್ಕೆಗೆ ಪ್ರಯಾಣಮಾಡಿದರು ಸಂಜನಾಳ ತಂದೆ ನಾಗರಾಜ ,ತಾಯಿ ರತ್ನಮ್ಮ. ಹೋಗಿ ಹರಕೆ ತೀರಿಸಿ ಅಂದು ರಾತ್ರಿ ಅಲ್ಲೇ ಉಳಿದು ಮರುದಿನ ಸೇವೆಮಾಡಿ ಮನೆಗೆ ಬಂದರು .ಬಂದು ನೋಡಿದರೆ ಗುಳ್ಳೆಗಳ ಮಂಗಮಾಯ. ನಾಗರಾಜ ರತ್ನಮ್ಮಗಂತು ಹೇಳಲಾಗದಷ್ಟು ಸಂತೋಷ. ಸ್ವಾಮೇರ ಶಕ್ತಿ, ದೇವರ ಮಹಿಮೆ ಎಲ್ಲರ ಮುಂದೆ ಹೇಳಿ ಹೊಗಳಿದ್ದೆ ಹೊಗಳಿದ್ಧು. ಆದರೆ ನಿಜಕ್ಕೂ ಆದದ್ದೆ ಬೇರೆ .ಸಂಜನ ಯಾವುದನ್ನೇ ಆಗಲಿ ಬಹಳ ದೀರ್ಘವಾಗಿ ವಿಚಾರ ಮಾಡುತ್ತಿದ್ದಳು . ಓದುವಾಗ ನೋಡುವಾಗ ,ಕುಲಂಕುಶವಾಗಿ ತಿಳಿದುಕೊಳ್ಳುತ್ತಿದ್ದಳು. ಇತ್ತೀಚಿಗೆ ವಾಟ್ಸಾಪ್ ಫೇಸ್ಬುಕ್ನಲ್ಲಿ ಬರುವ ಆರೋಗ್ಯ ಸೌಂದರ್ಯವರ್ಧಕಗಳ ಬಗ್ಗೆ ಓದುವುದು ಹೆಚ್ಚಾಗಿತ್ತು. 21ರ ಹರೆಯದ ಸಂಜನಾಗೆ ಸಹಜವಾಗಿ ವಯೋಧರ್ಮಕ್ಕೆ ತಕ್ಕಂತೆ ಮುಖದ ಮೇಲೆ ಮೊಡವೆ ಬಂದಿದ್ದವು. ಹೀಗಾಗಿ ದೇಹ ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಂಡು ಅತಿ ವಿಷಯ ವಿಷಕ್ಕೆ ಸಾಮಾನ ಎಂಬಂತೆ ಸ್ವಲ್ಪ ಮೊಡವೆಯಾದರೂ ಅತಿಯಾಗಿ ಯೋಚಿಸುತ್ತಿದ್ದಳು. ಮೊದಲೇ ಸೈನ್ಸ್ ಸ್ಟೂಡೆಂಟ್. ಪಾರಿಜಾತ ಗಿಡದಲ್ಲಿನ ಸಣ್ಣ ಸಣ್ಣ ಹುಳಗಳು ದಿನಾ ಆ ಗಿಡದಲ್ಲಿ ಇರುತ್ತಿದ್ದವು.ಹೂವು ಕೀಳಿದವರ ಮೈಮೇಲೆ ಏರುತ್ತಿದ್ದವು. ಅದನ್ನು ಸಂಜನಾ ಮಬ್ಬುಬೆಳಕಿನಲ್ಲಿ ಗಮನಿಸಿರಲಿಲ್ಲ .ಆದರೆ ಆ ದಿನ ಸ್ವಲ್ಪ ತಡವಾಗಿದ್ದರಿಂದ ಜೇಡರ ಹುಳು ವಿನ ಕಾರಣದಿಂದ ಅವಳ ಗಮನಕ್ಕೆ ಬಂತು.ಆ ಹುಳುಗಳು ಮೇಲೇರಿ ಏನೇನು ಆಗಬಹುದು ಎಂದು ಅತಿಯಾಗಿ ಯೋಚಿಸುತ್ತಾ ಕಳೆದ ಪರಿಣಾಮ ಅವಳ ದೇಹದ ಮೇಲೂ ಆ ರೀತಿಯ ಪರಿಣಾಮ ಬೀರಿತ್ತು. ಅವಳ ಭಾವನೆ ತೀವ್ರವಾಗಿ ಅವಳ ಯೋಚನೆಯಂತೆ ಘಟಿಸಿತ್ತು. ಯಾವಾಗ ಕುಕ್ಕೆಗೆ ಹೋದರು ಅಲ್ಲೇ ದೇವರ ಮೇಲಿನ ಅತಿಯಾದ ನಂಬಿಕೆಯಿರುವದರಿಂದ ರೋಗ ಹೋಗುವದೆಂದು ಪೂರ್ಣವಾಗಿ ನಂಬಿದಳು.ಅದೂ ಪರಿಣಾಮ ಬೀರಿತು.ಅವಳು ಆರಾಮ ವಾದಳು. ಭಯದೊಂದಿಗೆ ಬಂದ ರೋಗ ಭಯ ಹೋದೊಡನೆ ಹೊರಟುಹೋಗಿತ್ತು ಆದರೆ ಇದು ಅವಳಿಗೆ ಗೊತ್ತಾಗಿದೆ ತನ್ನ ಮೆಚ್ಚಿನ ಪಾರಿಜಾತ ಹೂವುಗಳನ್ನು ತರುವುದನ್ನೇ ಅವಳು ಬಟ್ಟುಬಿಟ್ಟಳು. **************************************

ಭಯ Read Post »

ಕಾವ್ಯಯಾನ

ಸೌಹಾರ್ದ

ಕವಿತೆ ಸೌಹಾರ್ದ ರೇಷ್ಮಾ ಕಂದಕೂರು ಜಾತಿಮತದ ಭೇದಾಗ್ನಿ ಮನೆ ಮನಗಳಲಿ ಆಗ್ನಿಸ್ಪರ್ಷ ಗೈದಿದೆಪ್ರೀತಿ ವಿಶ್ವಾಸದ ದ್ವಂಸವಾಗುತ ನೀತಿ ನಿಯಮ ಸಾಯುತಿದೆ ನೂರು ಮತಗಳ ಸಾರ ಒಂದೇ ತಿಳಿಯದ ಗಾಂಪರೊಡೆಯನಂತಿದೆಭ್ರಾಂತಿ ಮೋಹಗಳು ದೇಶಪ್ರೇಮ ನೆಮ್ಮದಿಗೆ ಭೀತಿ ಹಬ್ಬಿಸುತಿದೆ ಕೋಮು ಸೌಹಾರ್ಧವನು ಕ್ರೋದಾಗ್ನಿಯಲಿ ತಳ್ಳುತಲಿದೆಸದ್ಗುಣಗಳು ಕ್ಷಾಮಕೆ ತುತ್ತಾಗಿ ಮಾನವೀಯತೆ ಬೆಂದಾಗಿದೆ ಜಾತಿ ಜಂಜಡದಲಿ ನೀತಿಯನು ಬಲಿಕೊಟ್ಟು ಗಹಗಹಿಸುತಿದೆಕುಟಿಲತೆ ವರ್ಧಿಸಿ ಭಾವೈಕ್ಯತೆಗೆ ಮಸಿಬಳಿದಂತಾಗಿದೆ ದಯೆ ಪ್ರೇಮ ಗುಣ ಬೆಳೆಸಿಬಿದ್ದವರನೆತ್ತಿ ಪೋಷಿಸುವಂತಾಗಬೇಕಿದೆಸ್ನೇಹ ಸೌಗಂಧವ ತಾಗಿ ಸಿಪ್ರೀತಿರಸ ಉಣಿಸುವಂತಾಗಬೇಕಿದೆ ************************

ಸೌಹಾರ್ದ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಮತ್ಲಾಸಾನಿ /ಹುಸ್ನೆಮತ್ಲಾ ಗಜಲ್ ಕಂಡ ಕನಸೆಲ್ಲವೂ ಗುರಿಯ ಮುಟ್ಟವು ಕೇಳುನಡೆದ ಘಟನೆಯೆಲ್ಲವೂ ನನಸಾಗವು ಕೇಳು ವನದ ಸುಮವೆಲ್ಲವೂ ಗುಡಿಯ ಸೇರವು ಕೇಳುಬೀರಿದ ಕಂಪೆಲ್ಲವೂ ಸುಗಂಧ ದ್ರವ್ಯವಾಗವು ಕೇಳು ಅವನಿಯೆದೆಯ ಗೂಡ ಸ್ಪರ್ಶಿಸುವುದು ವರ್ಷಧಾರೆಬಿದ್ದ ಹನಿಗಳೆಲ್ಲವೂ ಸ್ವಾತಿಯ ಮುತ್ತಾಗವು ಕೇಳು ಬಯಲ ಭೂಮಿಯನ್ನೆಲ್ಲ ಹಸನು ಮಾಡಿ ಉಳಬಹುದುಬಿತ್ತಿದ ಬೆಳೆಗಳೆಲ್ಲವೂ ಫಲವ ನೀಡವು ಕೇಳು ಭವದ ಸಾಗರವು ವಿಸ್ತಾರವಾಗಿರುವುದು ಈ ಜಗದಲ್ಲಿಹೊರಟ ನಾವೆಗಳೆಲ್ಲವೂ ದಡವ ಸೇರವು ಕೇಳು ಸಪ್ತ ವರ್ಣಗಳ ಮೂಲವು ಶ್ವೇತವೇ ಆಗಿರುವುದುನೋಡಿದ ಬಿಳುಪೆಲ್ಲವೂ ಕ್ಷೀರವಾಗಲಾರವು ಕೇಳು ಇತಿಹಾಸದ ಚರಿತ್ರೆಯು ದೀರ್ಘವಾಗಿರುವುದು ‘ತೇಜ’ನೆಟ್ಟ ಹೆಜ್ಜೆಗಲೆಲ್ಲವೂ ಗುರುತಾಗಲಾರವು ಕೇಳು ******************************

ಗಝಲ್ Read Post »

ಪುಸ್ತಕ ಸಂಗಾತಿ

ಅಂತರಂಗದ ಆಲಾಪ ಕವಿತೆಗಳು

ಪುಸ್ತಕ ಪರಿಚಯ ಅಂತರಂಗದ ಆಲಾಪ   ಕವಿತೆಗಳು ಅಂತರಂಗದ ಆಲಾಪ   ಕವಿತೆಗಳು ಸುಜಾತಾ ಎನ್        ” ಬೆಚ್ಚನೆಯ ಕೌದಿಯ ತುಂಡುಗಳು”             ಸುಜಾತಾ ಎನ್ ಮೈಸೂರಿನವರು. ಭಾರತೀಯ ಜೀವವಿಮಾ ನಿಗಮದ ಉದ್ಯೋಗಿ. ಕಾಲೇಜು ದಿನಗಳಲಿ ಬರವಣಿಗೆ ಇದ್ದರೂ ಎಲ್ಲವನೂ ಬಿಟ್ಟು ನೌಕರಿ, ಸಂಸಾರದಲ್ಲಿ ನೆಲೆನಿಂತು ವಾತಾವರಣಕ್ಕೆ ತಕ್ಕಂತೆ ಕಳೆದ ಮೂರ್ನಾಲ್ಕು  ವರ್ಷಗಳಿಂದ ಮತ್ತೆ ಬರವಣಿಗೆಯಲಿ ನಿರತರಾಗಿರುವರು. ಕಥೆ,ಕವಿತೆ, ವಿಮರ್ಶೆ ,ಲೇಖನಹೀಗೆ ಎಲ್ಲ ಪುಟಗಳನ್ನೂ ತಿರುವಿ ನೋಡಿದವರೇ. ಫೇಸ್ಬುಕ್ , ವಾಟ್ಸಪ್ ಗುಂಪುಗಳ ಮೂಲಕ ತಮ್ಮದೇ ಆದ ವಿಶಿಷ್ಟ ಓದುಗರನ್ನು ಕಲೆಹಾಕಿ , ಸಂಘಟಿಸಿ ಸ್ಪರ್ಧೆ , ಬಹುಮಾನಗಳ ಮೂಲಕ  ತಾವೂ ಬರೆದರು ತಮ್ಮ ಸುತ್ತಮುತ್ತಲಿನವರನ್ನೂ ಬರಹಕೆ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಕೊಂಡ ಎಂ.ಕಾಂ. ಪಧವೀಧರೆಯಾದ ಇವರಿಗೆ ಈಗ ಕನ್ನಡ ಸಾಹಿತ್ಯವೇ ಉಸಿರಾಗಿದೆ. ಬೆಂಗಳೂರಿನ ಹೆಚ್.ಎಸ್.ಆರ್.ಎ ಪ್ರಕಾಶನ ಪ್ರಕಟಿಸಿದ ಸುಜಾತಾ ಅವರ ಮೊದಲಿನ ಸಂಕಲನವಾದ ಈ  ” ಅಂತರಂಗದ ಆಲಾಪ ” ದ  ನೂರು ಪುಟಗಳಲ್ಲಿ  76 ಕವಿತೆಗಳಿವೆ. ತನ್ನ ಮುತ್ತಮುತ್ತಲಿನ ಸಾಮಾನ್ಯ ಜನರು ಕಂಡುಂಡ  ಸಂಗತಿಗಳೇ ಇವರ ಕವನಕ್ಕೆ ಸ್ಪೂರ್ತಿಯಾಗಿದೆ. ಹೊಸ ಹುಡುಗ, ಹೊಸ ಕ್ಯಾಮರಾ ಕೊಂಡಾಗ ಕಂಡದ್ದೆಲ್ಲಾ  ಕ್ಲಿಕ್ಕಿಸುವಂತೆ ಸುಜಾತಾ ತಮ್ಮ ಅಕ್ಷರಗಳ ಮೂಲಕ ಉತ್ಸಾಹದಲ್ಲಿ ಕಂಡುಕಂಡದ್ದೆಲ್ಲಾ  ಮನನ ಮಾಡಿ  ಕವಿತೆಯ ರೂಪ ನೀಡಿರುವರು.   ಸಂಸಾರ , ಕಛೇರಿಯ ಕೆಲಸದ ಒತ್ತಡದ ನಡುವೆಯೂ  ಸದಾ ಕ್ರಿಯಾಶೀಲರಾದ ಇವರು ಕನ್ನಡ ಪ್ರೀತಿಗೆ ಅಭಿನಂದನಾರ್ಹರು ಮನೆ ಮನಗಳಲಿ ತುಂಬಿರಲು ಸ್ನೇಹ ಸೌಹಾರ್ದ ಸಂತೃಪ್ತಿಯ ಅನುಭೂತಿ ತುಂಬಿರುವ ಮನ ಆರ್ದ ಪರಸ್ಪರ ಸಹಕಾರದ ಸಹಬಾಳ್ವೆಯದೇ ಆನಂದ ವಿಶ್ವಕುಟುಂಬದೀ ಪರಿಕಲ್ಪನೆಯ ನಾ ಇಷ್ಟ ಪಟ್ಟೆ. ” ನಾ ಇಷ್ಟಪಟ್ಟೆ ” ಕವಿತೆಯಲಿ ಮಾನವೀಯ ಮೌಲ್ಯಗಳ ಕುರಿತು ಬರೆಯುತ್ತಾ , ಸ್ನೇಹ ಸೌಹಾರ್ದತೆ ಸಂತೃಪ್ತಿ , ಸಹಕಾರದ ಬಾಳ್ವೆಯಿಂದ ನಾವು ವಿಶ್ವಕುಟುಂಬದ ಪರಿಕಲ್ಪನೆಯಲಿ ಬದುಕಬೇಕು. ದ್ವೇಷ , ದುರಹಂಕಾರದಿಂದ ಬದುಕಿ ಏನು ಪ್ರಯೋಜನ. ಕಂದನ ಮುಗ್ಧ ನಗು , ಬಣ್ಣ ಬಣ್ಣದ ಹೂವು , ಜುಳುಜುಳು ನಿನಾದದ ನದಿ  ಇವುಗಳಂತರಂಗವ ಕಂಡು ನಾವು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವದೇ ತನಗೆ ಇಷ್ಟ ಎಂದು ಕವಿ ತಮ್ಮ ಮನದಾಳದ ಇಂಗಿತವನ್ನು ಅಕ್ಷರಗಳಾಗಿಸಿರುವರು. ” ಅಭಿನೇತ್ರಿ ” ಕವಿತೆಯಲಿ ಜೀವನದ ರಂಗಭೂಮಿಯಲಿ ಭೂಮಿಕೆಗಳ ನಿರ್ವಹಿಸುತ್ತಾ ಅಸ್ಮಿತೆಯಾಗಿ ತನ್ನ ಅಸ್ತಿತ್ವದ  ಸುಳಿವ ಹೊಳಹಿಸುತ್ತಾ ಬಾಳ ಗಮ್ಯದ ಕಡೆಗೆ ಪಯಣಿಸುತಿಹ ಯಾತ್ರಿ ಓ ಹೆಣ್ಣೆ ನಿಜ ಅರ್ಥದಲಿ ನೀನು ಶ್ರೇಷ್ಠ ಅಭಿನೇತ್ರಿ. ಎಂದು ಹೆಣ್ಣಿನ ಅಸ್ಮಿತೆಗಾಗಿ  ಮನದ ಮಾತನಾಡಿರುವರು. ಹೆಣ್ಣು ಈ ಭೂಮಿಗೆ ಬರುವ ಮೊದಲೇ ಸಾಕಷ್ಟು ಅವಮಾನವನ್ನು ಸ್ವಾಗತಿಸಬೇಕಿದೆ. ಅವಳು ಮುಂದೆ ನಿರ್ವಹಣೆ ಮಾಡಬೇಕಾದ ಪಾತ್ರಗಳು ಕಣ್ಮುಂದೆ ಬರುವದು. ಮಗಳು / ಸಹೋದರಿ/ ಸಂಗಾತಿ/ ತಾಯಿ…. ಹೀಗೆ ಎಲ್ಲವೂ ಆಗಿರುವಳು ಹೆಣ್ಣು. ಆದರೂ ಅವಳಿಗೆ ಅವಮಾನ ಅನುಮಾನಗಳು ಸದಾ ಕಟ್ಟಿಟ್ಟ ಬುತ್ತಿ. ಹೆಣ್ಣೆಂದರೆ  ಎಲ್ಲಾ ಪಾತ್ರಗಳನ್ನೂ ನಿರ್ವಹಿಸುವ ಅಭಿನೇತ್ರಿ ಎಂದಿರುವರು. ಹವ್ಯಾಸಿ ಬರಹಗಾರರಾದ ಮೈಸೂರು ನಾಗೇಶ , ಈ ಪುಸ್ತಕಕೆ ಮುನ್ನುಡಿ ಬರೆಯುತ್ತಾ ….. ” ನಿರಂತರ ಕಾವ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಸುಜಾತಾರವರದು ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಕಾಣಿಸುವ ಹೆಸರು. ದುಡಿಯುವ ನಡುವಿನ ಬಿಡುವಲ್ಲಿ ಬರೆದ ಕವನಗಳನ್ನು ಪ್ರಕಟಿಸುತ್ತಲೋ, ಹಲವಾರು ಗುಂಪಿನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಲೋ, ಬರೆಯುವ ಇತರ ಬರಹಗಾರರನ್ನು ಪ್ರೋತ್ಸಾಹಿಸುತ್ತಲೋ, ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯವಾದ ವ್ಯಕ್ತಿತ್ವ ಇವರದು.ಹೆಣ್ಣಿನ ಅಂತಃಕರಣ, ಮನಃಸತ್ವಗಳ ಕ್ಯಾನ್ವಾಸಿನಲ್ಲಿ ಬಿತ್ತನೆಯಾಗುವ ವೈವಿಧ್ಯಮಯ ಸಂಗತಿಗಳೆಲ್ಲದ್ದಕ್ಕೂ ಕವನದ ದಿರಿಸುಡಿಸಿ ನಲಿವಿನ ರಮ್ಯೋದ್ಯಾನವಾಗಿಸುವ ಪ್ರಯತ್ನ ಇಲ್ಲಿ ಸಾಕಾರ. ವಸ್ತು, ವಿಷಯದ ಪರಿಮಿತಿ ಇಲ್ಲದೇ ದೈನಂದಿನವೆಲ್ಲದರ ಪ್ರಭಾವವನ್ನೇ ಸರಕಾಗಿಸಿಕೊಂಡ ಕವಿತೆಗಳಿವು ” ಎಂದಿರುವರು. ಹೆಣ್ಣು ತ್ಯಾಗಮಯಿ ಸಹನಶೀಲೆಎಂತೆಲ್ಲಾ ಹೊಗಳಿಕೆಯ ಪದವಿಯಿತ್ತವರು.ದುರಂತವೆಂದರೆ ಕಾಣದ್ದು ಆ ಹೊನ್ನಶೂಲದಡಿ ಭಾವನೆಗಳಿಗಾಗುತ್ತಿಹ ಶೋಷಣೆಯ ಅರ್ಧಸತ್ಯ. ಎನ್ನುತ್ತಾ “ಅರ್ಧಸತ್ಯ ” ಕವಿತೆಯಲ್ಲಿ  ಹೆಣ್ಣಿನ ನೋವನ್ನು ಅರ್ಧಸತ್ಯದಲಿ ಬಿಚ್ಚಿಡುತ್ತಾ ಹೋಗುವರು. ಈ ಸಮಯ ಸಾಧಕರದು ಬರೀ ಹೊಗಳಿಕೆಯೆ.ತಮ್ಮ ಬೇಳೆ ಬೇಯಿಸಿಕೊಳ್ಳುವ ಮುಖವಾಡಿಗರು ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಿ ನಂತರ ಪ್ರಪಾತಕ್ಕೆ ನೂಕಿಬಿಡುವರು. ಬೂದಿ ಮುಚ್ಚಿದ ಕೆಂಡದಂತೆ ಕಾಣುವದೆಲ್ಲಾ ಅರೆಸತ್ಯವೇ ! ಇವೆಲ್ಲವೂ ಸುಳ್ಳಿನ ಕವಚದಲಿ ಹುದುಗಿರುವುದೇ ಆಗಿರುತ್ತದೆ. ಯಾವುದೇ ದೇಶವಿರಲಿ , ಭಾಷೆಯಿರಲಿ , ಧರ್ಮವಿರಲಿ ಅಲ್ಲೆಲ್ಲಾ ಹೆಣ್ಣಿನ ಶೋಷಣೆಗಳು ನಿತ್ಯನಿರಂತರವೇ . ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಅರಿತ ಸುಜಾತಾರವರ ಸಹೋದರಿ ವೈಶಾಲಿ ರಾವ್ ಅಕ್ಕನ ಕವಿತೆಗಳ ಕುರಿತು ಬರೆಯುತ್ತಾ…..ಹೆಸರಿಗೆ ತಕ್ಕಂತೆ ಎಲ್ಲಾ ಕವನಗಳೂ ಈ ಕವಯತ್ರಿಯ ಅಂತರಂಗದ ಆಲಾಪವಾಗಿದೆ. ಸಂಗೀತದಲ್ಲಿ, ರಾಗಾಲಾಪನೆಯಿಂದ ಆಯಾ ರಾಗದ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಮೂಡಿಸುವದು ಹೇಗೆ ಮುಖ್ಯವೋ, ಅದೇ ರೀತಿ ಸುಜಾತಾರವರು ತಮ್ಮ ಅಂತರಂಗದ ಆಲಾಪನೆಯಿಂದ ಪ್ರತಿಯೊಂದು ಕವಿತೆಗೂ ನಿರ್ದಿಷ್ಟ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಬದುಕಿನ ನಾಗಾಲೋಟದಲ್ಲಿ ಸಂಬಂಧಗಳು ಕಾಣೆಯಾಗುತ್ತಿದೆ ; ಆದರೆ ದುರದೃಷ್ಟವೆಂದರೆ ಸಂಬಂಧಗಳಿರಲಿ, ನಮ್ಮನ್ನು ನಾವೇ ಕಾಣದಂತಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾವನೆಗಳಿಗೆ ಅಕ್ಷರ ರೂಪ ನೀಡುವದರೊಂದಿಗೆ, ಪದಗಳ ಮಧ್ಯೆ ಪದಪುಂಜಗಳ ಲಾಲಿತ್ಯವನ್ನೂ ಸೇರಿಸಿದರೆ ಮಾತ್ರ ಅದು ಕವಿತೆ ಎನಿಸಿಕೊಳ್ಳುವದು. ಆ ಜಾಣ್ಮೆಯನ್ನು ಸುಜಾತಾ ಸಾಬೀತು ಪಡಿಸಿರುವರು…. ಎಂದಿರುವರು. ” ಅನ್ನದಾತ ” ಕವಿತೆಯಲ್ಲಿ ದೇಶದ ಬೆನ್ನೆಲುಬಾದ ರೈತರ ಕುರಿತಾಗಿ  ಬರೆಯುತ್ತಾ… ಆ ಪ್ರಕೃತಿ ಮಾತೆಗೂ ನಿನ್ನ ಮೇಲೆ ಕೋಪ  ಆಗಾಗ ತೋರುವಳು ತನ್ನ ಪ್ರತಾಪ ಅತಿವೃಷ್ಟಿ ಅನಾವೃಷ್ಟಿ ಪ್ರವಾಹಗಳ ಪ್ರಕೋಪ ಯಾವುದೇ ಇರಲಿ ಹೆಚ್ಚಿಸುವದು ಮನದ ತಾಪ ಎನ್ನುತ್ತಾ….. ನೀನು ಪಟ್ಟ ಶ್ರಮಕ್ಕೆ ತಕ್ಕ ಬೆಲೆ ನಿನ್ನ ಅಸ್ತಿತ್ವಕ್ಕೆ ಸೂಕ್ತ ನೆಲೆ ಸಿಕ್ಕಾಗ ಮಾತ್ರ ದೇಶದ ಉನ್ನತಿ ಇದಿಲ್ಲದಿದ್ದರೆ ಭವಿಷ್ಯ ಅಧೋಗತಿ.. ಎಂಬ ಅರಿವಿನೊಂದಿಗೆ  ರೈತನ ಬವಣೆಯನ್ನು ತೀರಾ ಸಾಮಾನ್ಯ ಜನರೂ ಅರ್ಥೈಸುವಂತೆ ಕವಿ ಇಲ್ಲಿ ತಮ್ಮ ಕವನವನ್ನು ಹೊಸೆದಿರುವರು. ಈ ಪುಸ್ತಕಕೆ ಬೆನ್ನುಡಿ ಬರೆದ ಕವಿ ಮನಸಿನ ಗುರುಮಾತೆ ಎಂ.ವಿಜಯ ಜಯಪ್ರಕಾಶ , ” ಸಂಪಾದನೆ ಮತ್ತು ಸುಖದ ಜೀವನದತ್ತ ವಾಲುತ್ತಿರುವ ಈ ಹೊತ್ತಿನ ಸಂದರ್ಭದಲ್ಲಿ  ಸುಜಾತಾ ವಿಶಿಷ್ಟವಾಗಿ ನಿಲ್ಲುತ್ತಿರುವದು ಅಭಿಮಾನದ ಸಂಗತಿಯಾಗಿದೆ. ತಾಜಾ  ಪ್ರತಿಭೆಯಾದ ಸುಜಾತಾ ರವೀಶ್ ರಿಗೆ ತಮ್ಮ ಬಾಲ್ಯದ ಬದುಕಿನ ಅನುಭವಗಳು ಬರವಣಿಗೆಯ ಮೇಲೆ ಪ್ರಭಾವ ಬೀರಿರುವದನ್ನು ಇಲ್ಲಿಯ ಕವನಗಳಲ್ಲಿ ಕಾಣಬಹುದು. ಕ್ರಿಯಾಶೀಲ ಮನಸ್ಸಿನ ಇವರಿಗೆ  ಸಂಬಂಧಗಳು, ಪ್ರಕೃತಿ, ಸಾಮಾಜಿಕ ಜೀವನದ ಬಗ್ಗೆ ಅತೀವ ಆಸಕ್ತಿ ಇರುವುದು ವ್ಯಕ್ತವಾಗುತ್ತದೆ “. ಎಂದಿರುವರು. ಮತ್ತೆ ಅಮ್ಮನ ಮಡಿಲ ಸೇರಿ ಮಗುವಾಗಿ ಬಿಡುವಾಸೆ ಬೆರಗುಗಣ್ಣಲಿ ಹೊಸದಾಗಿ ಈ ಜಗವ ನೋಡುವಾಸೆ ಪೂರ್ವಗ್ರಹಗಳ ಹಂಗಿಲ್ಲದೇ ಹೊಸ ನಂಟು ಬೆಸೆವಾಸೆ ಮತ್ತೊಮ್ಮೆ ಬಾಲ್ಯವೆಂಬ ಕಡಲಲಿ ಮುಳುಗಿ ಬಿಡುವಾಸೆ ಎಂದು ” ಮಗುವಾಗಿ ಬಿಡುವಾಸೆ ” ಕವಿತೆಯಲ್ಲಿ ಮಗುಮನವನ್ನು ಬಿಚ್ಚಿಡುವರು. ಈ ಧಾವಂತ ಬದುಕಿನಲಿ ಆದೇ ದ್ವೇಷ ಅಸೂಯೆಗಳು , ನಂಬಿಕೆಗಳು ಕಳೆದು ಹೋಗಿದೆ. ಎಲ್ಲೆಲ್ಲೋ ಹಣದ ವ್ಯಾಮೋಹ. ಈ ಬದುಕೇ ಸಾಕಾಗಿ ಬಿಟ್ಟಿದೆ. ಅದಕಾಗಿ ಎಲ್ಲವನೂ ಮರೆತು ಅಮ್ಮನ ಮಡಿಲು ಸೇರಿ ಬಾಲ್ಯವೆಂಬ ಕಡಲಲಿ ಮಗುಮನದಿಂದ ಮುಳುಗುವಾ ಎಂದು ಕವಿ ಆಶಿಸುವರು. ದೇಶ ಕಾಯುವ ಸೈನಿಕನ ಕುರಿತಾಗಿಯೂ ” ಪುಳಕ “ ಕವಿತೆಯಲ್ಲಿ ಬರೆಯುತ್ತಾ , ಇವರ ನಿಸ್ವಾರ್ಥ ಸೇವೆ ನೆನೆದು ಧನ್ಯತೆಯ ಪುಳಕವಾಗುವದು ಎಂಬ ಧನ್ಯತಾಭಾವ  ಮೈಗೂಡಿಸಿಕೊಂಡಿರುವರು. ಈ ಪುಸ್ತಕದ ಕವಿತೆಗಳೊಡತಿ ಸುಜಾತಾ ಎನ್.” ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಓದುತ್ತಲೇ ಬೆಳೆದಿದ್ದೆ.ಈಗ ನಾಲ್ಕು ವರ್ಷಗಳಿಂದೀಚೆ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ತೊಡಗಿಸಿಕೊಂಡಾಗ ಸಾಹಿತ್ಯ ಚಟುವಟಿಕೆಗಳು ಮತ್ತೆ ಗರಿಗೆದರಿದವು. ಸುಪ್ತವಾದ ಕವಿತೆಯ ಬರವಣಿಗೆಗೆ ಮರುಚಾಲನೆ ದೊರೆಯಿತು. ಮನಸ್ಸಿನ ತೀರಕ್ಕೆ ಭಾವನೆಗಳ  ಅಲೆ ಅಪ್ಪಳಿಸಿದಾಗ ಹುಟ್ಟಿದ ಅಕ್ಷರದ ಸಾಲುಗಳೇ ಈ ಕವನ ಸಂಕಲನ ” ಎಂದಿರುವರು. ಹಳೆಯ ಬಟ್ಟೆಗಳ  ಸಣ್ಣ ಚೂರುಗಳಾಗಿ ಮಾಡಿ ಹೊಲೆಯುವ ಹಾಗೆ ಮೆತ್ತಗಿನ ಬೆಚ್ಚಗಿನ ಕೌದಿ ಎಂಬ ಮನದ ಸುಜಾತಾರವರು ಈ ಎಲ್ಲಾ ಕವಿತೆಗಳನ್ನೂ ಕೌದಿಯ ತೆರನಾಗೇ ವೈವಿಧ್ಯಮಯ ವಿಷಯಗಳಿಂದ ಹೆಣೆದಿರುತ್ತಾರೆ. ಇವರ ಕವಿತೆಗಳು” ಬೆಚ್ಚನೆಯ ಕೌದಿಯ ತುಂಡುಗಳು ” ಇದ್ದಂತೆ. ಕವಿತೆಗಳೆಂದರೆ ಪ್ರಾಸದಿಂದ , ಪ್ರಾಸಕ್ಕಾಗಿ ಬರೆಯುವ ಸಾಲುಗಳಲ್ಲ ಎಂಬುದನ್ನು ಮನಗೊಂಡು ,ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ,  ಕನ್ನಡ ಸಾಹಿತ್ಸವನ್ನು ಅಭ್ಯಸಿಸಿ , ಇದೇ ಹುರುಪಿನಿಂದ ಬರೆದರೆ ಇವರಿಂದ ಮುಂದಿನ ದಿನದಲ್ಲಿ ಇನ್ನೂ ಒಳ್ಳೆ ಕವಿತೆಗಳನ್ನು ನಿರೀಕ್ಷಿಸುವಾ ಎಂದು ಹಾರೈಸಿ , ಇವರ ಮೊದಲವೇ ಸಂಕಲನಕ್ಕಾಗಿ  ” ನಾಗಸುಧೆ ” ಯಿಂದ ಶುಭಕೋರಿ ಅಭಿನಂದಿಸುವೆ. ********************************************** ಪ್ರಕಾಶ ಕಡಮೆ

ಅಂತರಂಗದ ಆಲಾಪ ಕವಿತೆಗಳು Read Post »

ಕಾವ್ಯಯಾನ

ಅವರೆಲ್ಲ ಎಲ್ಲಿ ಹೋದರು?

ಕವಿತೆ ಅವರೆಲ್ಲ ಎಲ್ಲಿ ಹೋದರು? ಜಯಶ್ರೀ ಭ.ಭಂಡಾರಿ. ಹದಿಹರೆಯದ ದಿನಗಳಲ್ಲಿನಮಲೆನಾಡಿನ ಮೂಲೆಯಅಜ್ಜಿಯ ನೆನಪುಸೌದೆ ಒಲೆ ಮೇಲೆಕಾದ ಹಂಡೆ ನೀರುತಲೆಗೆ ಮೈಗೆಎಣ್ಣೆ ಪೂಸಿಆರೈಕೆ ಬೆರೆತ ಅಭ್ಯಂಜನರುಚಿ ರುಚಿ ಊಟಬೆಳಕಿಲ್ಲದ ಕೋಣೆಯಲ್ಲಿಕುಲಾಯಿ ಕಟ್ಟಿಕೊಂಡುಹಾಯಾಗಿ ನಿದ್ರಿಸುವ ಸುಖಪ್ರಕೃತಿ ಹಸಿರು ಸುವ್ವಲಾಲಿಹಾಡಿ ಮಲಗಿಸುತ್ತಿತ್ತುಬಸಿರು ಬಾಣಂತನದಲ್ಲಿ ತಿಂಗಳುಗಟ್ಟಲೆಉಪಚರಿಸುತ್ತಿದ್ದ ತಾಯಿಅಕ್ಕ ಭಾವನ ಸದಾ ಎದಿರುನೋಡುತ್ತಿದ್ದ ಒಲವಿನ ಸಹೋದರಿಯರುಮದುವೆಯಾಗಿ ತಂಗಿ ತವರನಿಂದದೂರಾಗ್ತಾಳೆ ಅಂತ ಕೊರಗುತ್ತಿದ್ದ ಅಣ್ಣಇವರೆಲ್ಲ ಈಗೆಲ್ಲಿ ಹೋದರು? ತಂಗೀನ ಕರೆಯದೆ ಜಾತ್ರೆ ಮಾಡುವ ಅಣ್ಣಅಕ್ಕನ ಕರಿದರೆ ಕಿರಿಕಿರಿ ಎನ್ನುವ ತಮ್ಮಸತಿಮಣಿಯೇ ರ‍್ವಸ್ವ ಎನ್ನುವರಲ್ಲವೃದ್ಧಾಪ್ಯದಲ್ಲಿ ತಂದೆ ತಾಯಿಗಳು ಭಾರಅವರು ಇಂದು ಮನೆಯಿಂದ ಬಹುದೂರಕೂಡಿ ಬಾಳಿದರೆ ಸ್ರ‍್ಗ ಸುಖ ಮರೆತರಲ್ಲಅವಿಭಕ್ತ ಕುಟುಂಬಗಳೆಲ್ಲ ಚೆಲ್ಲಾಪಿಲ್ಲಿಸ್ವರ‍್ಥವೇ ತುಂಬಿಹುದು ಜಗದಲಿ ‌‌‌‌‌‌‌.‌‌‌‌ಅವರು ಇಂದು… ಆಧುನಿಕ ತಲೆಮಾರಿನ ಸೋಗಿನಲ್ಲಿಬದಲಾಗಿದ್ದಾರೆಯೇ?ಎಲ್ಲ ಸಂಬಂಧಗಳು ಈಗ“ಮೇಲ್ಪದರ ಸಂಬಂಧ”ಎನಿಸುತ್ತಿಲ್ಲವೆ?… *******************************

ಅವರೆಲ್ಲ ಎಲ್ಲಿ ಹೋದರು? Read Post »

ಪುಸ್ತಕ ಸಂಗಾತಿ

ಬುಡಬುಡಿಕೆ’ ಮಕ್ಕಳ ಕವನ ಸಂಕಲನ

ಪುಸ್ತಕ ಪರಿಚಯ ಬುಡಬುಡಿಕೆ’ ಮಕ್ಕಳ ಕವನ ಸಂಕಲನ `ಬುಡಬುಡಿಕೆ’ ಮಕ್ಕಳ ಕವನ ಸಂಕಲನ. ಈ ಕೃತಿಯ ಲೇಖಕರು ಅಕ್ಕಿಮಂಗಲ ಮಂಜುನಾಥ. ನುಡಿ ಪುಸ್ತಕ ಪ್ರಕಾಶನ ಶ್ರೀ ಅಕ್ಕಿಮಂಗಲ ಮಂಜುನಾಥ ಅವರು ಕೃಷಿಕರಾಗಿದ್ದು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲ ಎನ್ನುವ ಚಿಕ್ಕ ಹಳ್ಳಿಯವರು. ಕೃಷಿ ಸೇವೆಯನ್ನು ಮಾಡುತ್ತಲೇ ಸಾಹಿತ್ಯದ ಒಲವನ್ನು ಬಿಡದೆ ಹಲವಾರು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ರವಿಕಾಣದ್ದನ್ನು ಕವಿಕಂಡ ಎಂಬAತೆ ಲೇಖಕರು ತಮ್ಮ ವೃತ್ತಿವಲಯದಲ್ಲಿ ಸುತ್ತಮುತ್ತಲೂ ಕಂಡ ಪರಿಸರದಲ್ಲಿ ಸಿಕ್ಕ ಕಾವ್ಯವಸ್ತುಗಳನ್ನು ಕಾಪಿಟ್ಟುಕೊಂಡು ಅವುಗಳಿಗೆ ಅಕ್ಷರ ರೂಪವನ್ನು ಕೊಟ್ಟು ಸಾಹಿತ್ಯ ಲೋಕಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುವ ಅವರ ಈ ಕಾಯಕ ನಿಜಕ್ಕೂ ಶ್ಲಾಘನೀಯ. ಅವರ ಇನ್ನಿತರ ಕೃತಿಗಳೆಂದರೆ `ಗುಮ್ಮ’, `ತುಂಟತಿಮ್ಮ’, `ಹೂವು ಮಾರುವವಳು’.      ಮಂಜುನಾಥ ಅವರ `ಬುಡಬುಡಿಕೆ’. ಸಂಕಲನದಲ್ಲಿ ನಲವತ್ತಕ್ಕೂ ಹೆಚ್ಚು ಮಕ್ಕಳ ಕವಿತೆಗಳಿವೆ. ಇವುಗಳಲ್ಲಿ ಮುಖ್ಯವಾದ ಕವಿತೆಗಳನ್ನು ನಾನು ಉಲ್ಲೇಖಿಸುವೆನು.  ಇದರಲ್ಲಿನ ಮೊದಲ ಕವಿತೆ `ರೈತನ ಬದುಕು’. ಹೆಸರೇ ಹೇಳುವಂತೆ ಈ ಕವಿತೆ ನಾವೆಲ್ಲಾ ಅನ್ನದಾತ’ನೆಂದು ಕರೆಯುವ ರೈತನ ಬದುಕಿನ ಕಷ್ಟಗಳನ್ನು ತಿಳಿಸಿಕೊಡುವ ಪದ್ಯವಾಗಿದೆ. ತಾಯಿ-ಮಗುವಿನ ನಡುವಿನ ಸಂಭಾಷಣೆಯ ಮೂಲಕ ಜಗತ್ತಿಗೂ ರೈತನ ಹಿರಿಮೆ ತ್ಯಾಗವನ್ನು ತಿಳಿಸುವ ಪದ್ಯ ಇದಾಗಿದೆ. ಇದನ್ನು ಓದುವಾಗ ನಮ್ಮ ಹೆಮ್ಮೆಯ ಕವಿ ಕುವೆಂಪುರವರ `ನೇಗಿಲಯೋಗಿ’ ಪದ್ಯ ನೆನಪಾಗದೆ ಇರದು. ಎರಡನೇ ಮತ್ತು ಪುಸ್ತಕದ ಶೀರ್ಷಿಕೆಯ ಕವಿತೆಯಾದ `ಬುಡಬುಡಿಕೆ’. ಇದು ಒಂದು ಜನಾಂಗದ ಕುಲಕಸುಬು ಅಥವಾ ವೃತ್ತಿಧರ್ಮವಾಗಿ ಬೆಳೆದು ಬಂದ ಒಂದು ಬಿಕ್ಷೆ ಬೇಡುವ ಪ್ರಾಕಾರ. ಕವಿ ಹೇಳಿರುವಂತೆ ಪದ್ಯದಲ್ಲಿ.. ಬೆಳದಿಂಗಳಿನಿAದ ಬೆಳಗುವ ಇರುಳು, ನೋಯಿಸಿಕೊಂಡು ಬಡಿಯುತ ಬೆರಳು, ಮನಸಿಗೆ ನೆಮ್ಮದಿ ನೀಡುತ ಕೊರಳು, ಬಿಚ್ಚಿಟ್ಟಿರುವನು ತನ್ನಯ ಕರಳು, ಇಲ್ಲದಿದ್ದರೂ ಏನೇ ತಿರುಳು, ಹೇಳುವನಿವ ಬುಡಮಟ್ಟದ ಸುಳ್ಳು…..’ ಎಂದಿದ್ದಾರೆ. ಕಲಿಗಾಲ ಹುಟ್ಟಿದಾಗಲೇ ಸುಳ್ಳು ಹುಟ್ಟಿಯಾಗಿದೆ. ಹೊಟ್ಟೆಗಾಗಿ ನಾನಾ ವೇಷ. ಉದರನಿಮಿತ್ತಮ್ ಬಹುಕೃತವೇಷಮ್ ಎಂಬAತಾಗಿದೆ. ನಮ್ಮ ನಾಡಿನ ದಾಸರಾದ ಕನಕದಾಸರೂ ಸಹ ಹೇಳಿಲ್ಲವೇ ` ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಎಂದು?      ಹಾವು ಮತ್ತು ನಾವು ೧-೨ ಭಾಗವಿರುವ ದೀರ್ಘ ಕವಿತೆಯಾಗಿದೆ. ಸೃಷ್ಠಿಯ ಸುಂದರ ಜೀವಿಗಳಲ್ಲೊಂದಾದ ಹಾವಿನ ಬಗೆಗೆ ಇಲ್ಲಸಲ್ಲದ ಊಹೆಗಳು ಮೂಢನಂಬಿಕೆಗಳು ನಮ್ಮ ಜನರಲ್ಲಿವೆ. ಕೆಲವು ಭಯ ಹುಟ್ಟಿಸುವ ನಂಬಿಕೆಗಳಿವೆ ಅವನ್ನು ಈ ಪದ್ಯದಲ್ಲಿ ಕವಿ ಸಾರಾಸಗಾಟಾಗಿ ತಳ್ಳಿಹಾಕಿ ಮಕ್ಕಳಲ್ಲಿ ವೈಜ್ಞಾನಿಕತೆಯನ್ನು ಬಿತ್ತುವ ಸಾಲುಗಳಿವೆ. ಈ ಪದ್ಯವು ವಚನಕಾರರಾದ ಬಸವಣ್ಣನವರ ವಚನ `ಕಲ್ಲನಾಗರ ಕಂಡರೆ ಹಾಲನೆರೆ ಎಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ’ ಎಂದು ೧೨ನೆ ಶತಮಾನದಲ್ಲೇ ಹೇಳಿದ ವಿಷಯವನ್ನು ನೆನೆಯಬಹುದು.      ನಮ್ಮ ಯುವ ಜನತೆಯನ್ನು ಹಾಳುಮಾಡುತ್ತಿರುವ ಮಾರಕಚಟಗಳಾದ ತಂಬಾಕು, ಬೀಡಿ, ಸಿಗರೇಟು, ಗುಟ್ಕಾ, ಸೆರೆ, ಸಾರಾಯಿ, ನಶ್ಯದ ಚಟಗಳಿಗೆ ಚಟ್ಟವನ್ನು ಕಟ್ಟುವ ಹಠ ತೊಡಬೇಕು ಎಂದು ಗೀತೆಯ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿದ್ದಾರೆ. `ಅನ್ನ’ ಎಂಬ ಕವಿತೆ ಅನ್ನದ ರುಚಿರುಚಿ ಭಕ್ಷö್ಯಗಳು ಮತ್ತು ಅದನ್ನು ತಿಂದು ಹೆಸರುಗಳಿಸಿದ ಬಕಾಸುರ, ಭೀಮರನ್ನು ಪರಿಚಯ ಒಳಗೊಂಡ ಹಾಸ್ಯಗೀತೆಯಾಗಿದೆ.      ಮುಂದೆ `ಆಕಾಶ’, `ಹುಂಜ’, `ಅಂದಿನ ಮಗು-ಇಂದಿನ ಮಗು’ `ವೃಕ್ಷ ಮಾತೆ’, `ತಾಯಿ ಮತ್ತು ಮಗು’, ಪೊರಕೆಯ ಹರಕೆ, `ಜಿಪುಣರು’, ಬೆಳದಿಂಗಳ ಹಾಲು’, `ದಾರೀಲು ಹೋಗೋ ಮಾರಿ’, `ಕೂಗು ಮಾರಿ’, ರಾತ್ರಿ’ ಮುಂತಾದವು.  ಇವುಗಳಲ್ಲಿ ಹುಂಜ ಹಿಂದೆ ಜಗತ್ತಿನ ಅಲಾರಮ್ ಅದೇ ಆಗಿತ್ತು. ಆದರೆ ಈಗ ನಾಟಿ ಕೋಳಿಗಳು ಮಾಯವಾಗಿ ಫಾರಂ ಕೋಳಿಗಳು ಕೂಗದ ವಿಷಯ ಮತ್ತು ಗಡಿಯಾರದ ಅಲಾರಮ್ ಗೆ ಮನುಷ್ಯ ಹೊಂದಿಕೊAಡ ಬವಣೆ ವಿವರಿಸಿದ್ದಾರೆ. ಇವುಗಳಲ್ಲಿ ವಿಶೇಷವಾದದ್ದೆಂದರೆ `ಕೂಗು ಮಾರಿ’ ಮತ್ತು  `ದಾರೀಲಿ ಹೋಗೋ ಮಾರಿ’ ಎಂಬ ಕವಿತೆಗಳು ಕೂಗು ಮಾರಿಯಲ್ಲಿ `ನಾಳೇ ಬಾ’ ಎಂದು ಹಳ್ಳಿಗಳಲ್ಲಿ ಬಾಗಿಲ ಮೇಲೆ ಬರೆದು ರೋಗ ಅಥವಾ ಸಾವನ್ನು ತಡೆಯಲು ಈ ಮೂಢನಂಬಿಕೆಯನ್ನು ಹಳ್ಳಿಗರು ಕಂಡುಕೊAಡ ಉಪಾಯವಾಗಿತ್ತು. ಅದರ ಬಗ್ಗೆ ಯೋಚಿಸಿರುವ ಕವಿ ಇದಕ್ಕೆ ಯಾವುದೇ ಸಾಕ್ಷö್ಯಪುರಾವೆಗಳಿಲ್ಲ ಇದೊಂದು ಅವೈಜ್ಞಾನಿಕ ನಂಬಿಕೆ ಎಂದು ತಿಳಿಸಿದ್ದಾರೆ. ಮತ್ತು ಅದರ ಸವಾಲಿಗೆ ತಿರುಗೇಟಿನಂತೆ ಸ್ವಚ್ಛತೆಯನ್ನು ಕಾಪಾಡಿಕೊಂಡು ನಾವು ಆರೋಗ್ಯ ಕಾಪಾಡುವ ಜಾಗೃತಿಯನ್ನು `ದಾರೀಲಿ ಹೋಗೋ ಮಾರಿ’ ಎಂಬ ಕವಿತೆಯಲ್ಲಿ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸೂಕ್ಷö್ಮ ಜೀವಿಗಳಾದ ಕೀಟಗಳಾದ ಸೊಳ್ಳೆ, ನೊಣ, ಇರುವೆ, ಗೊದ್ದಗಳಿಗೆ `ನಾಳೆ ಬಾ’ ಎಂಬ ಫಲಕ ಹಾಕೋಣ ಎಂದು ಮಕ್ಕಳ ಎಳೆ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ.      `ಮಂಗಳ ಗ್ರಹ’, ಗಾಳಿ ಆಲಿಕೆ’ ಇವು  ಪ್ರಕೃತಿಯ ಬಗ್ಗೆ ಮೂಡುವ ಕುತೂಹಲ ಮತ್ತು ಪ್ರಕೃತಿಯ ವೈಶಿಷ್ಟö್ಯಗಳನ್ನು ತಿಳಿಸುವ ಕವಿತೆಗಳಾಗಿವೆ.  ಮುಂದೆ ಉಪವಾಸ ಪದ್ಯವು ಹಾಸ್ಯಗವನವಾಗಿದೆ. ಈ ಕವಿತೆ ಬಿಆರ್ ಲಕ್ಷö್ಮಣರಾವ್ ಅವರು ಬರೆದ `ಆಚೆ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ’ದಂತೆ ಓದುಗರನ್ನು ನಗೆಗಡಲಲಿ ತೇಲಿಸುತ್ತದೆ.  `ದುಡಿಮೆಯ ಸಂಪತ್ತು’ ಇದು ಎಲ್ಲಾ ಜೀವಿಗಳೂ ದುಡಿಯುವುದನ್ನು ನಿರೂಪಣೆಯ ಮೂಲಕ ಹೇಳುತ್ತಾ ತಾನು ಏನೂ ಮಾಡದೆ ಕಾಲ ಕಳೆದೆ.. ಕಾಲವೆಂಬುದು ಅಮೂಲ್ಯವಾದದ್ದು ಎಂದು ತಿಳಿಸುತ್ತದೆ. ಶುಚಿತ್ವದ ಪಾಠ’, ನಮ್ಮ ಮನೆಯ ಬೆಕ್ಕು, ತುಂಟ ಪುಟ್ಟ ಮಕ್ಕಳಿಗೆ ಹಿತವಾಗಿವೆ ಓದಲು. ಆಸೆಯೇ ದುಃಖಕ್ಕೆ ಮೂಲ ಎಂಬ ನಾಣ್ಣುಡಿಯನ್ನು `ಆಸೆ’ಎಂಬ ಕಥನಕಾವ್ಯ ತಿಳಿಸುತ್ತದೆ.       ಲೇಖಕರು ಇಲ್ಲಿನ ಕವಿತೆಗಳಲ್ಲಿ ಮಾವು, ಹಲಸು, ಬೆಕ್ಕು, ನಾಯಿ, ಇಲಿ,ದಿನಕರ, ಬಿಂಬ,ಕೋಳಿ,ಹುಲಿ, ಇರುವೆ, ಮರ , ಹಾವು ಇಂತಹವನ್ನೆಲ್ಲಾ ಆರಿಸಿಕೊಂಡು ಮಕ್ಕಳಿಗೆ ಇಷ್ಟವಾಗುವ ವಿಷಯಗಳ ಬಗ್ಗೆಯೇ ಬರೆದಿದ್ದಾರೆ.  ಇಂದು ಇಂಗ್ಲೀಷ್ ವಿದ್ಯಾಭ್ಯಾಸ ಪದ್ಧತಿಯಿಂದ ಮಕ್ಕಳಿಗೆ ಸಮಯದ ಅಭಾವವಿದೆ. ಮಕ್ಕಳು ನಿಜವಾಗಲೂ ಕನ್ನಡ ಪದ್ಯಗಳಿಂದ ಸಂಸ್ಕೃತಿಗಳಿAದ ದೂರವಾಗುತ್ತಿದ್ದಾರೆ. ಹಿಂದೆ ತಾಯಂದಿರು ಲಾಲಿ ಹಾಡುತ್ತಿದ್ದರು, ಅಜ್ಜ ಅಜ್ಜಿಯರು ಜಾನಪದ ಕಥೆ, ಕಥನಗೀತೆಗಳನ್ನು ಸಂಪ್ರದಾಯ ಹಾಡುಗಳನ್ನು ಹೇಳುತ್ತಿದ್ದರು. ಆದರೆ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಇವುಗಳ ಜಾಗದಲ್ಲಿ ಇಂಗ್ಲೀಷ್ ರೈಮ್ಸ್, ಪದ್ಯಗಳ ಪುಸ್ತಕ, ಸಿ.ಡಿ.ಗಳು ಅರ್ಥವಾಗದ ಭಾಷೆಯು ಮಗು ಮಾತು ಕಲಿಯುವ ಮುನ್ನವೇ ಕೇಳಿಸಿಕೊಳ್ಳುವ ದುರ್ಗತಿಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವನ್ನು ಬರೆಯುವ ಹೆಜ್ಜೆಯನ್ನಿಟ್ಟಿರುವ ಯುವ ಲೇಖಕರು ಲೇಖಕಿಯರಿಗೆ ಗೆಲುವು ಸಿಗಬೇಕೆಂದರೆ ಸಾಹಿತ್ಯ ಲೋಕದಲ್ಲಿನ ಮಕ್ಕಳ ಸಾಹಿತ್ಯವು ಸಿ.ಡಿ. ರೂಪದಲ್ಲಿ ಸಂಗೀತದೊಡನೆ ಮನೆ ಮನೆಗೆ, ಮಕ್ಕಳಿಗೆ ತಲುಪಿಸುವ ಕೆಲಸವಾಗಬೇಕಿದೆ. `ಬುಡಬುಡಕೆ’ ಸಂಕಲನದ ಕವಿತೆಗಳು ಹಾಡಲು ಸುಲಭವಾಗಿವೆ. ಮಕ್ಕಳ ಸಾಹಿತ್ಯದ ಬಹು ಮುಖ್ಯ ಲಕ್ಷಣವೆಂದರೆ ಸರಳತೆ ಮತ್ತು ಪ್ರಾಸಬದ್ಧವಾಗಿರಬೇಕು. ಲೇಖಕರು ಬಹುಮಟ್ಟಿಗೆ ಆ ತತ್ವಕ್ಕೆ ಬದ್ಧರಾಗಿದ್ದಾರೆ ಎಂದು ನನ್ನ ಅನಿಸಿಕೆ. ****************************************** – ವಿಶಾಲಾ ಆರಾಧ್ಯ

ಬುಡಬುಡಿಕೆ’ ಮಕ್ಕಳ ಕವನ ಸಂಕಲನ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ ಬರಹ ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು        (ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ )           ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ  ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ  ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ ರೀತಿನ ಬದಲಿಸಬೇಕೋ ಏನೂ ತಿಳಿತಿಲ್ಲ. ಎಲ್ಲಾ ಗೊಂದಲಮಯ. ಈ ಗೊಂದಲಕ್ಕೆ ಮಂಗಳಾರತಿ ಹಾಡಬೇಕಂದರೆ ಇದನ್ನು ಗಮನವಿರಿಸಿ ಓದಿ ಇದರಲ್ಲಿಯ ನಿಯಮ ಪಾಲಿಸಿ.ಕೆಲಸಕ್ಕೆ ಉತ್ತಮ ಫಲ ತಾನೆ ಸಿಗುತ್ತೆ ನೋಡಿ.. ಕಾಲ ಮಿತ್ರನೂ ಹೌದು ಶತ್ರುವು ಹೌದು ಅರೆ ಅದ್ಹೇಗೆ ಮಿತ್ರ ಶತ್ರು ಆಗುವದು ಸಾಧ್ಯವಿದೆ ಅಂತಿರೇನು? ಕಾಲವನ್ನು ನಾವು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡರೆ ಮಾತ್ರ ಮಿತ್ರ ಇಲ್ಲದೇ ಹೋದರೆ ಶತ್ರು. ಬದುಕನ್ನು ನಂದನವನದಂತೆ ಸುಂದರಗೊಳಿಸುವ ದಿವ್ಯಶಕ್ತಿ ಮತ್ತು ಬಿರುಗಾಳಿಯಂತೆ ಹಾಳುಗೆಡುವುವÀ ದೈತ್ಯಶಕ್ತಿಯೂ ಇದಕ್ಕಿದೆ. ಕಾಲವನ್ನು ತಡೆಯೋರು ಯಾರು ಇಲ್ಲ. ಕಾಲ ಸಮುದ್ರದ ಅಲೆಯಂತೆ ಯಾರಿಗೂ ಕಾಯಲ್ಲ. ಕಾಲದ ಕಾಲಿಗೆ ಸಿಕ್ಕು ಹಲುಬದಿರಿ. ಚಿರದುಃಖಿಗಳಾಗದಿರಿ. ಅದನ್ನು ನೀವು ನಿಮ್ಮ ಆಪ್ತಮಿತ್ರನನ್ನಾಗಿಸಿಕೊಳ್ಳಿ. ಕಾಲವನ್ನು ಉಪೇಕ್ಷಿಸಿದರೆ ಅದು ನಮ್ಮನ್ನೂ ಉಪೇಕ್ಷಿಸುತ್ತದೆ. ಎನ್ನುವದು ನೆನಪಿರಲಿ ಕಾಲವನ್ನು. ಗೌರವಿಸಿದರೆ ನಮ್ಮನ್ನು ಗೌರವಿಸುವ ಕಾಲ ಬರುತ್ತೆ. ವ್ಯರ್ಥವಾಗಿ ವ್ಯಯ ಮಾಡಿದರೆ ನಮ್ಮ ಕಾಲುಗಳನ್ನೇ ಇಲ್ಲದಂತೆ ಮಾಡುತ್ತೆ. ಸದುಪಯೋಗಪಡಿಸಿಕೊಂಡರೆ ಸುಖದ ಉಡುಗೊರೆಯಾಗುತ್ತೆ. ಹೀಗೆ ಉಡುಗೊರೆಯಾಗಿಸಿಕೊಳ್ಳಲು ಕಳೆದು ಹೋದ ಸಮಯ ಒಡೆದ ಮುತ್ತಿನಂತೆ ಮರಳಿ ಮತ್ತೆಂದೂ ಬಾರದು ಎಂಬುದು ಮನದಲ್ಲಿರಲಿ. ಕೈಯಲ್ಲಿ ಹಿಡಿದುಕೊಂಡರೆ ಕಾಲಡಿಯಲ್ಲಿ ಬೀಳುತ್ತೆ.      ಕಾಲವನ್ನು ಕೊಳ್ಳುವ ಶ್ರೀಮಂತ ಜಗತಿನಲ್ಲಿ ಇನ್ನೂ ಹುಟ್ಟಿಲ್ಲ. ಹಣದಿಂದ ಜಗತ್ತಿನ ಎಲ್ಲ ವೈಭೋಗಗಳನ್ನು ನಮ್ಮದಾಗಿಸಿಕೊಂಡು ಮೆರೆಯಬಹುದು.  ಆದರೂ ಕಾಲವನ್ನು ಕೊಳ್ಳುವ ಶಕ್ತಿಯನ್ನು ಕಾಲ ಜಗತ್ತಿನ ನಂಬರ್ ಒನ್ ಶ್ರೀಮಂತನಿಗೂ ಕೊಟ್ಟಿಲ್ಲ.ಇಂಥ ಶಕ್ತಿಯುತ  ಕಾಲವನ್ನು ಅಂಗೈಯಲ್ಲಿ ತಡೆದು ಹಿಡಿದಿಟ್ಟುಕೊಂಡರೆ ನಮ್ಮ ಕಾಲಡಿಯಲ್ಲಿ ಬೀಳುತ್ತೆ. ಹಿಡಿದಿಟ್ಟುಕೊಳ್ಳುವ ಶಕ್ತಿ ಮನಸ್ಸಿಗೆ ಮಾತ್ರ ಇದೆ.ಹೀಗೆ ಮನಸ್ಸು ಮಾಡಿದರೆ ಕಾಲನಿಗೆ ಯಜಮಾನರಾಗಬಹುದು. ಯಜಮಾನರಾಗಲು ಶಿಸ್ತು ಸಂಯಮವೆಂಬ ಹಣ ಬೇಕೇ ಬೇಕು. ದಿನದ ಪ್ರತಿ ಕ್ಷಣ ಹೇಗೆ ಕಳೆಯಬೇಕೆಂಬ ವೇಳಾಪಟ್ಟಿ ಹಿಂದಿನ ದಿನದ ರಾತ್ರಿಯೇ ಸಿದ್ಧವಾಗಿರಬೇಕು ನೀವು ಹಾಕಿಕೊಂಡೆ ವೇಳಾ ಪಟ್ಟಿಯ ಅನುಷ್ಟಾನದಲ್ಲಿ ಕೆಲವು ಅಡೆತಡೆಗಳು ಬಂದೇ ಬರುತ್ತವೆ ಅವಗಳನ್ನು ಜಾಣ್ಮೆಯಿಂದ ಪರಿಹರಿಸಿ..ಕಾಲದ ಸದುಪಯೋಗಪಡಿಸಿಕೊಂಡವನೇ ಜಾಣ. ಅವನೇ ಗೆಲುವಿನ ಸರದಾರ. ಸಮಯ ಸರಿಯಾಗಿ ಉಪಯೋಗಿಸುತ್ತ ಹೋದ ಹಾಗೆ ಆತ್ಮವಿಶ್ವಾಸದ ಬಲ ಹೆಚ್ಚುತ್ತೆ. ಆತ್ಮವಿಶ್ವಾಸವಿರುವವನು ಸಾಧನೆಗೆ ಬೇಗ ಹತ್ತಿರವಾಗುತ್ತಾನೆ. ದಿನದ ಒಟ್ಟು ಕಾಲವನ್ನು ಅಂಗೈಯಲ್ಲಿಟ್ಟುಕೊಂಡು ಗುರಿ ಸಾಧನೆಗೆ ಮೀಸಲಿಟ್ಟು ಕಾರ್ಯ ಪ್ರವೃತ್ತರಾಗಬೇಕು. ಹೀಗೆ ಮಾಡುವದರಿಂದ ಬೆರಗು ಸೃಷ್ಟಿಸಬಹುದು. ಕಾಲವನ್ನು ನಿಮಗಿಷ್ಟ ಬಂದಂತೆ ಆಡಿಸೋ ಶಕ್ತಿ ನಿಮಗಿದೆ.  ವಿದ್ಯಾರ್ಥಿ ದಿಸೆಯಲ್ಲಿಯೇ ವೇಳಾ ಪಟ್ಟಿಯ ಅನುಸರಣೆಯ ರೂಡಿ ಅಂಟಿಸಿಕೊಳ್ಳಿ. ಸೋಮಾರಿತನದ ರೋಗದಿಂದ ಮುಕ್ತವಾದರೆ ಮಾತ್ರ ಕಾಲ ನಿಮ್ಮ ಕೈಗೆ ಸಿಗೋದು. ಸೋಮಾರಿತನಕ್ಕೆ ಮತ್ತು ಕಾಲಕ್ಕೆ ಎಣ್ಣೆ ಸೀಗೆಕಾಯಿ ಸಂಬಂಧ. ಕಾಲ ಎಲ್ಲ ಸಂಪತ್ತನ್ನೂ ಮೀರಿದ್ದು. ಈ ಸಂಪತ್ತಿನ ಒಡೆಯರಾಗಬೇಕೆಂದರೆ ಶ್ರದ್ಧೆ ಮತ್ತು ಪರಿಶ್ರಮದ ಅವಶ್ಯಕತೆಯಂತೂ ಇದ್ದೇ ಇದೆ. ಗುರಿಯ ಗೆರೆ ಮುಟ್ಟೋಕೆ ಕಾಲನ ಸಾಥ್ ಬೇಕೆ ಬೇಕು. ತಿಥಿ ಮಿತಿ ನೋಡದೆ ಒಂದೇ ಸಮನೆ ಓಡಬೇಕು. ಯಾವುದೇ ರಸ್ತೆಯಲ್ಲಿ ಸುಮ್ಮನೆ ಗೊತ್ತು ಗುರಿಯಿಲ್ಲದೆ ನಡೆಯುವದನ್ನು ಬಿಟ್ಟು ಗುರಿ ಯಾವುದು? ಎಷ್ಟು ಸಮಯದವರೆಗೆ ಅದರ ಜೊತೆ ಕಾಲು ಹಾಕಬೇಕು ಎನ್ನುವದನ್ನು  ಮೊದಲೇ ನಿರ್ಧರಿಸಬೇಕು.         ಹಿತ ಚಕ್ರದೊಂದಿಗೆ ಕಾಲು ಹಾಕಿ      ಬೇರೆ ಎಲ್ಲರಿಗೂ ಹೊಂದಿಕೆಯಾಗುವಂತೆ ತನ್ನನ್ನ್ನು ಕತ್ತರಿಸಿಕೊಳ್ಳುವವÀನು ತನ್ನ ಸ್ವಂತ ಆಕಾರವನ್ನೇ ಕಳೆದುಕೊಳ್ಳುತ್ತಾನೆ. ಎಂಬುದೊಂದು ನುಡಿಮುತ್ತು. ನಿನ್ನ ಸ್ಡಂತ ಆಸಕ್ತಿಗಳ ಬಗ್ಗೆ ಯೋಚಿಸಿದ್ರೆ ಪರರ ಹಿತಾಸಕ್ತಿಗಳನ್ನು ಚೆನ್ನಾಗಿ ಪೋಷಿಸಬಲ್ಲಿರಿ. ಇದೇ  ಹಿತಚಕ್ರ . ಈ ಹಿತಚಕ್ರದೊಂದಿಗೆ ಕಾಲು ಹಾಕಿದರೆ ಕಾಲದ ಮೌಲ್ಯ ನಿಮಗೆ ಪೂರ್ಣ ದಕ್ಕುತ್ತದೆ. ಉತ್ತಮ ನಾಯಕರು ಹುಟ್ಟಿ ಬಂದವರಲ್ಲ. ಕಾಲನ ಸದುಪಯೋಗದಿಂದ ರೂಪಗೊಂಡವರು. ಎಂಬ ಮಾತು ಮನದಲ್ಲಿರಲಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಅಂದುಕೊಳ್ಳುತ್ತಾರೊ ಎಂಬ ಯೊಚನೆಯಲ್ಲಿ ಬೀಳದಿರಿ. ನಿಮ್ಮಲ್ಲಿ ಇಲ್ಲದುದುರ ಬಗ್ಗೆ ಕೊರಗುವ ಬದಲು ನಿಮ್ಮಲ್ಲಿರುವ ಪ್ರತಿಭೆಯ, ಸದ್ಗುಣಗಳನ್ನು ಪೋಷಿಸಿ ಬೆಳೆಸಲು ಕಾಲ ಕಳೆಯಿರಿ. ಆಶಾರಹಿತ ಭಾವವೇ ಬೇಸರ. ಆಯಾಸವೆನಿಸಿದಾಗ ವಿರಾಮಕ್ಕೆ ಜಾಗ ಮಾಡಿಕೊಡಿ ಹೊರತು ಬೇಸರಕ್ಕಲ್ಲ. ಇಂದು ನಿಮ್ಮ ಕೈಯಲ್ಲಿದೆ. ಸಾಧನೆಗೆ ಬೇಕಾಗಿರುವ ಮೊದಲ ಭಾವ ಕನಸು. ಕಾಲ ಮತ್ತು ಕನಸಿನ ನಡುವೆ ಅವಿನಾಭಾವ ಸಂಬಂಧವುಂಟು. ಕಣ್ಣಲ್ಲಿ ಕನಸಿಲ್ಲದಿದ್ದರೆ ಹೋಗುವ ದಾರಿ ತಿಳಿಯುವದಿಲ್ಲ. ಸಾಧನೆಯಲ್ಲಿ ಕನಸು ಪ್ರಥಮ ಹೆಜ್ಜೆ. ಮೊದಲ ಹೆಜ್ಜೆ ಗಟ್ಟಿಯಾಗಿರಬೇಕು. ದಿಟ್ಟವಾಗಿರಬೇಕು. ಆತಂಕವನು ದೂರ ಸರಿಸಿ ಕಂಡ ಕನಸಿಗೆ ಶಕ್ತಿ ಸಾಮಥ್ರ್ಯ ಕೊಡಬೇಕಾದರೆ ನಿನ್ನೆ ನಾಳೆಗಳ ಚಿಂತೆಯಲ್ಲಿ ಇಂದನ್ನು ಹಾಳು ಮಾಡಿಕೊಳ್ಳದಿರಿ.ನಿನ್ನೆ ಇತಿಹಾಸ ನಾಳೆ ನಿಗೂಢ ಇಂದು ಉಡುಗೊರೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಯೋಜನೆ ಹಾಕಿಕೊಳ್ಳಿ ಯೋಜನೆ ಅನ್ನುವದು ಮಾನಸಿಕ ದೂರ ದೃಷ್ಟಿ. ಪ್ರತಿ ಕೆಲಸಕ್ಕೂ ಲೆಕ್ಕಾಚಾರ ಹಾಕಿ ತರ್ಕಬದ್ಧವಾಗಿ ಯೋಚಿಸಿ ಸಮಯದ ಸದುಪಯೋಗದ ಕುರಿತು ಮೈಂಡ್ ಟ್ಯೂನಿಂಗ್(ಮೆದುಳು ಹದಗೊಳಿಸುವದು) ಮಾಡಿಕೊಂಡರಂತೂ ಭಯ ಉದ್ವೇಗ ಖಿನ್ನತೆಗಳು ಮಾಯವಾಗುತ್ತವೆ. ಕಾಲದ ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಹಿಡಿದ ಕಾರ್ಯದಲ್ಲಿ ತಲ್ಲೀನವಾದರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಹುಡುಕಿಕೊಂಡು ಬರುತ್ತೆ. ಕೆಲವೊಂದಕ್ಕೆ ಇಲ್ಲ ಅನ್ನಿ ಸಮಯವನ್ನು ರಬ್ಬರ ತರ ಹಿಗ್ಗಿಸೋಕೂ ಆಗಲ್ಲ ಕುಗ್ಗಿಸೋಕೂ ಆಗಲ್ಲ. ಒಂದು ದಿನಕ್ಕಿರೋದು 1440 ನಿಮಿಷ ಮಾತ್ರ. ಸಾಧಿಸಬೇಕಾದ ಗುರಿಗೆ ಈ ಸಮಯ ಸಾಕಾಗಲ್ಲ. ಅಂತಿಮವಾಗಿ ನಿಮ್ಮ ಸಮಯವನ್ನು ಹಾಳು ಮಾಡಲು ನಿಂತವರಿಗೆ ನಿರ್ದಾಕ್ಷಿಣ್ಯವಾಗಿ ಇಲ್ಲ ಎಂದು ಹೇಳಲು ಕಲಿಯಿರಿ. ದಾಕ್ಷಿಣ್ಯಕ್ಕೆ ಬಿದ್ದು ಅಮೂಲ್ಯ ಸಮಯ ಹಾಳು ಮಾಡಿಕೊಳ್ಳದಿರಿ. ನೀವು ಕೆಲಸ ಮಾಡುವ/ಓದುವ ಕೋಣೆಯಲ್ಲಿ ನನ್ನ ಸಮಯ ಅಮೂಲ್ಯ ಎಂದು ದೊಡ್ಡದಾಗಿ  ಬರೆದು ಅಂಟಿಸಿ. ಸಮಯ ಪಾಲಿಸದವರ ಜೊತೆ ಅತಿಯಾದ ಸ್ನೇಹಬೇಡ. ಯಾರೋ ಯಾವುದೊ ಇಲ್ಲ ಸಲ್ಲದ ಕೆಲಸಕ್ಕೆ ಕರೆದರೆ ಇಲ್ಲ ಎನ್ನಲಾಗದೆ ಅವರ ಹಿಂದೆ ಕಾಲು ಎಳೆದುಕೊಂಡು ಹೊಗದಿರಿ. ನಿಮ್ಮ ಅತೀ ಜರೂರು ಕೆಲಸದ ಕಾರಣ ಹೇಳಿ ನಯವಾಗಿ ನಿರಾಕರಿಸಿ. ಹರಟೆ ತಡರಾತ್ರಿಯವರೆಗೂ ಹೊರಗೆ ತಿರುಗಾಡುವದು ಅಪರಿಚಿತ ವ್ಯಕ್ತಿಗಳೊಂದಿಗೆ ವಾಟ್ಸಪ್ ಫೇಸ್ ಬುಕ್ಗಳಲ್ಲಿ  ಅನವಶ್ಯಕ ಚಾಟ್ ಮಾಡೋದು ಇವೆಲ್ಲವುಗಳಿಗೆ ಮುಲಾಜಿಲ್ಲದೆ ಇಲ್ಲ ಅನ್ನಿ. ಕಲೆ ಕರಗತಗೊಳಿಸಿಕೊಳ್ಳಿ ಸಮಯ ಆಭಾವದಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ಅಂತ ಕಾರಣ ಹೇಳುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬಹಳ ಕೆಲಸಗಳಲ್ಲಿ ತೊಡಗಿಸಿಕೊಂಡವರು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವಷ್ಟು ಸಮಯ ಹೊಂದಿರುತ್ತಾರೆ. ನೀವೊಂದು ಮಹಲು ಕಟ್ಟುವದಾದರೆ ಕೈತುಂಬ ಕೆಲಸವಿರುವ ವಾಸ್ತುಶಿಲ್ಪಿಯ ಬಳಿ ಹೋಗಿ. ಎನ್ನುವ ನುಡಿಮುತ್ತು ಸಮಯ ನಿರ್ವಹಣೆ ಒಂದು ಕಲೆ ಎನ್ನುವದನ್ನು ಸಾರಿ ಹೇಳುತ್ತೆ. ಸಮಯ ನಿರ್ವಹಣೆಯಲ್ಲಿ ಆದ್ಯತೆಗೆ ಪ್ರಥಮ ಆದ್ಯತೆಯಿದೆ. ಅದರಲ್ಲಿ ತುರ್ತು ಮತ್ತು ಮಹತ್ವದ್ದು. ಅಂತ ಎರಡು ಪ್ರಕಾರ ತುರ್ತು ಅನಿವಾರ್ಯವಾದ ಕೆಲಸಗಳಿದ್ದರೆ ಶ್ರದ್ಧೆ ಶಿಸ್ತು ಆಸಕ್ತಿಯಿಂದ ತೊಡಗಿಸಿಕೊಳ್ಳಿ. ತಕ್ಷಣದ್ದು ಮತ್ತು ಅನಿವಾರ್ಯವಾದದ್ದು  ಅಂದರೆ ತಕ್ಷಣಕ್ಕೆ ನಿಮಗೆ ಖುಷಿ ಕೊಡಬಹುದು. ಆದರೆ ಅದರ ಅಗತ್ಯ ನಿಮಗಿಲ್ಲ. ಎನ್ನುವಂತದಕ್ಕೆ ಮಾರು ಹೋಗಲೇಬೇಡಿ. ಅನಿವಾರ್ಯ ಮತ್ತು ತಕ್ಷಣವಲ್ಲದ್ದು ಅಂದರೆ ಭವಿಷ್ಯತ್ತಿನಲ್ಲಿ ಲಾಭದಾಯಕವಾದುದು. ಈಗ ಮಾಡದೇ ಹೋದರೆ ಮುಂದೆ ತೊಂದರೆ ಆಗುವಂತಹುದು. ಸಮಯಾವಕಾಶ ಬಹಳವಿದೆಯೆಂದು ಮುಂದೂಡುತ್ತ ಬಂದರೆ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುವದು ನೂರಕ್ಕೆ ನೂರುಷ್ಟು ಖಚಿತ. ಮುಂಬರುವ ವಾರ್ಷಿಕ ಪರೀಕ್ಷೆಗೆ ಸ್ಪರ್ಧಾತ್ಮಕ  ಪರೀಕ್ಷೆಗೆ .ಇನ್ನೂ ಸಾಕಷ್ಟು ಸಮಯವಿದಿಯೆಂದು ಉಪೇಕ್ಷಿಸಿ ತಯಾರಿ.ಮಾಡದೇ ಹೋದರೆ ಸಮಸ್ಯೇಗೆ ಆಹ್ವಾನ ನೀಡಿದಂತೆ ಸರಿ. ಊಟ ಆಟ ಟಿವಿ ಮನರಂಜನೆ ಕುಟುಂಬ ಗೆಳತನಕ್ಕೆ ಅಗತ್ಯವಿರುವಷ್ಟು ಸಮಯ ಎತ್ತಿಡಿ. ಟೈಂ ಬ್ಯಾಂಕ್ ಬ್ಯಾಲೆನ್ಸ್ ಒಂದು ದಿನ ಬ್ಯಾಂಕಿನ ಖಾತೆಯಲ್ಲಿ ಪ್ರತಿದಿನವೂ ಪ್ರತಿಯೊಬ್ಬರಿಗೂ ಬೆಳ್ಳಂಬೆಳಿಗ್ಗೆ 86400 ಸೆಕೆಂಡುಗಳು ಜಮೆಯಾಗಿರುತ್ತವೆ. ಈ ಸೆಕೆಂಡುಗಳನ್ನು ಅಂದೇ ಖರ್ಚು ಮಾಡಬೇಕು. ಇಲ್ಲಿ ಓವರ್ ಡ್ರಾಫ್ಟ್ ಸೌಲಭ್ಯವಿಲ್ಲ. ಅಂದಿನದು ಅಂದು ಖರ್ಚು ಮಾಡಬೇಕು ಇಲ್ಲದಿದ್ದರೆ ಖಾತೆಯಲ್ಲಿ ಬ್ಯಾಲೆನ್ಸ್ ನಿಲ್ ಆಗಿ ಹೋಗುತ್ತೆ. ದೇವರು ನೀಡಿದ ಟೈಂ ಬ್ಯಾಂಕಿನ ಸೆಕೆಂಡುಗಳನ್ನು ತಪ್ಪದೇ ಸದ್ವಿನಿಯೊಗಪಡಿಸಿಕೊಳ್ಳಬೇಕು. ಟೈಂ ವೇಗವಾಗಿ ಜಾರುತ್ತಿದೆಯಾದರೆ ನೀವು ತುಂಬಾ ಬಿಜಿ ಎಂದರ್ಥ. ಬಿಜಿಯಾಗಿರುವ ಸಾಧಕರಿಗೆ ಸಮಯ ನಿರ್ವಹಣೆ ತುಂಬಾ ಆಕರ್ಷಣೀಯವಾಗಿ ಸೆಳೆಯುತ್ತೆ ಹೀಗಾಗಿ ಅವರು ನಮ್ಮ ಟೈಂ ಬ್ಯಾಂಕಿನಲ್ಲಿ ಪ್ರತಿದಿನದ ಒಂದೊಂದು ಸೆಕಂಡನ್ನು ಕಳೆದುಕೊಳ್ಳಲು ಇಚ್ಛಿಸುವದಿಲ್ಲ.             ಕಳೆದುಕೊಂಡಿದ್ದು ವಸ್ತು ಆದರೆ ಹುಡುಕಬಹುದು. ಸಿಗದಿದ್ದರೆ ಮತ್ತೊಂದು ಪಡೆದುಕೊಳ್ಳಲೂಬಹುದು. ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು ಪಡೆದುಕೊಳ್ಳಲೂ ಆಗದು. ಎನ್ನುವದನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡು ನಿಖರವಾದ ಗುರಿಯೊಂದಿಗೆ ಸಂವಹನ ಕಲೆ ಜಾಣ್ಮೆ ವ್ಯಹವಾರ ಕೌಶಲ ಬೆರೆಸಿ ಕಾಲದ ಜೊತೆ ಕಾಲು ಹಾಕಿದರೆ ಕಣ್ಣು ಕಂಡ ಕನಸುಗಳೆಲ್ಲ ನನಸಾಗಿ ಗೆಲುವು ನಿನ್ನ ಕಾಲಡಿಯಲ್ಲಿ ನಿಂತಿರುತ್ತದೆ ಹಾಗದರೆ ತಡವೇಕೆ? .ಬನ್ನಿ ಟೈಂ ಬ್ಯಾಂಕ್ ಬ್ಯಾಲನ್ಸ್ನ್ನು  ಬೇಗ ಬೇಗ ಇಂದಿನಿಂದ ಇಂದೇ ಗುರಿ ಸಾಧನೆಗಾಗಿ ಖಾಲಿ ಮಾಡಿ ಯಶ ಗಳಿಸಿ.             =============================================== ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು                                                         

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ ಕೆ.ಬಿ.ವೀರಲಿಂಗನಗೌಡ್ರ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ) ಸಂದರ್ಶನ ಪ್ರಶ್ನೆ  :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ? ಉತ್ತರ           :ನನ್ನೊಳಗೆ ನುಸುಳುವ ತುಮುಲಗಳನ್ನು ಹೊರಹಾಕಿ ಹಗುರಾಗುವುದಕ್ಕೆ.  ಪ್ರಶ್ನೆ  :ಚಿತ್ರ ಮತ್ತು ಕವಿತೆ ಹುಟ್ಟುವ ಕ್ಷಣ ಯಾವುದು? ಉತ್ತರ           :ಒಂದು ನೋವು ತಿಂದಾಗ, ಇನ್ನೊಂದು ನೋವಿಗೆ ಕಾಲವೇ ಮುಲಾಮು ಸವರುವಾಗ. ಪ್ರಶ್ನೆ  :ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ           :ನಿರ್ದಿಷ್ಟವಾದ ವಸ್ತು ವ್ಯಾಪ್ತಿ ಅಂದ್ರೆ ಅದೊಂದು ಚೌಕಟ್ಟು ಅನ್ಸತ್ತೆ, ಚೌಕಟ್ಟಿಗೆ ಸಿಲುಕದೆ  ಮೆಲ್ಲಗೆ ಎಲ್ಲವ           ದಾಟಿಕೊಂಡು ಅಲ್ಲಮರ ಬಯಲಿಗೆ ಹೋಗಲು ಕನವರಿಸುವೆ, ಬಯಲೇ ನನ್ನ ವಸ್ತು ಮತ್ತು      ವ್ಯಾಪ್ತಿ. ಇನ್ನು        ನನ್ನನ್ನು ಪದೇ ಪದೇ ಕಾಡುವ ವಿಷಯ ಅಂದ್ರೆ, ಚಾಡಿ ಕೇಳಲಷ್ಟೇ          ತೆರೆದುಕೊಳ್ಳುವ ಕೆಲ ಹಾಳು ಕಿವಿಗಳಿಗೆ, ಜೀವಪ್ರೀತಿಯ ಹಾಡನ್ನು ಹೇಗೆ ತಾಗಿಸುವುದು! ಪ್ರಶ್ನೆ  :ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ? ಉತ್ತರ           :ಅನುಭವಿಸದೇ ಬರೆಯುವುದು ಬಾಲ್ಯ, ಅನುಭವಿಸಿ ಬರೆಯುವುದು ಹರೆಯ, ಅನುಭವ     ಅನುಭಾವ ಆಗುವುದೇ ಮುಪ್ಪು ಅಥವಾ ಮುಕ್ತಿ ಅಂತಾ ಅಂದ್ಕೊತಿನಿ. ಪ್ರಶ್ನೆ  :ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಉತ್ತರ           :ಜಾತಿ ಧರ್ಮ ಮತ್ತು ಹಣಕ್ಕಾಗಿ ಅಮೂಲ್ಯವಾದ ಮತವನ್ನೇ ಮಾರಿಕೊಳ್ಳೊರು, ತೂರಿಕೊಳ್ಳೊರು, ಅಡ ಇಡೊವ್ರು ಇರೊವರ್ಗೂ ರಾಜಕೀಯ ಸನ್ನಿವೇಶ ಚೆನ್ನಾಗಿರಲ್ಲ.. ಪ್ರಶ್ನೆ  :ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ           : ಈ ಎರಡೂ ನಮ್ಮೊಳಗೆ ಮಾನವೀಯ ಪ್ರೀತಿ ತುಂಬಿ, ಚೂರು ದಾರಿ ತಪ್ಪಿದಾಗ ಎಡಬಿಡದೇ ಕಾಡಿ             ನಿದ್ದೆಗೆಡಿಸಿ ಭಯ ಹುಟ್ಟಿಸಬೇಕಿತ್ತು, ಆದರೆ ಹಾಗಾಗದೇ ಸ್ವಾರ್ಥದ ಸರಕಾಗುತ್ತಿರುವುದರ ಕುರಿತು    ತುಂಬಾ ಬೇಸರವಿದೆ. ಪ್ರಶ್ನೆ  : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತಿದೆ? ಉತ್ತರ           : ಮುಖಗಳಿಗಿಂತ ಮುಖವಾಡಗಳೇ ಹೆಚ್ಹೆಚ್ಚು ರಾಚುತ್ತಿವೆ ಅಂತಾ ಅನ್ನಸ್ತಿದೆ. ಪ್ರಶ್ನೆ  : ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ನೇರ ರಾಜಕಾರಣಕ್ಕಿಂತ, ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ. ಪ್ರಶ್ನೆ  :ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ           :“ರಿಪೇರಿಯ ಹಂತವನ್ನೂ ಮೀರಿ ಹೋಗುತ್ತಿದೆ” ಎಂದ ಲಂಕೇಶ್‍ರ ಮಾತೇ ಹೇಳುತ್ತದೆ. ಪ್ರಶ್ನೆ  :ನಿಮ್ಮ ಕನಸುಗಳೇನು? ಉತ್ತರ           :ಬಯಲು ಸೀಮೆಯಲಿ ಕಾಡು ಬೆಳೆಸುವುದು, ಬೆಳೆಸಿದ ಆ ಕಾಡ ನೆರಳಲಿ ಕುಳಿತು ಸ್ನೇಹ ಪ್ರೀತಿ ಸೌಹಾರ್ದತೆಯ ಆಟ ಪಾಠ ಸಂವಾದ ನಡೆಸುವುದು. ಪ್ರಶ್ನೆ  :ಕನ್ನಡ ಹಾಗೂ ಅನ್ಯ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ          ಯಾರು? ಉತ್ತರ           : ಕನ್ನಡದ ಕುವೆಂಪು, ತೇಜಸ್ವಿ, ಲಂಕೇಶ್, ನಿಸ್ಸಾರಹ್ಮದ್, ದೇವನೂರು ಮಹಾದೇವ  ತುಂಬಾ ಇಷ್ಟ, ಇನ್ನು      ಚಾಲ್ರ್ಸಬಕೊವಸ್ಕಿ, ರೂಮಿ, ಬ್ರೆಕ್ಟ್, ಬೋದಿಲೇರ್ ಮತ್ತು ಗೀಬ್ರಾನ್‍ರ ಅನುವಾದಿತ ಬರಹಗಳು             ಸಹ ಕನ್ನಡದಷ್ಟೇ ಇಷ್ಟವಾಗ್ತಾವೆ. ಪ್ರಶ್ನೆ  :ಈಚೆಗೆ ಓದಿದ ಕೃತಿಗಳಾವವು? ಉತ್ತರ           :‘ನೋವೂ ಒಂದು ಹೃದ್ಯ ಕಾವ್ಯ’ ರಂಗಮ್ಮ ಹೊದೇಕಲ್ಲರ ಕವನ ಸಂಕಲನ, ‘ಏಪ್ರಿಲ್ ಫೂಲ್’ ಹನುಮಂತ ಹಾಲಿಗೇರಿಯವರ ಕಥಾ ಸಂಕಲನ. ‘ದೀಪದ ಗಿಡ’ ಬಸೂ ದ್ವಿಪದಿಗಳು. ಪ್ರಶ್ನೆ  :ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ           :ಮಕ್ಕಳಿಗೆ ಪಾಠ ಮಾಡುವುದು. ಪ್ರಶ್ನೆ  :ಇಷ್ಟವಾದ ಸ್ಥಳ ಯಾವುದು? ಉತ್ತರ           :ಬಯಲು ಪ್ರಶ್ನೆ  :ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಉತ್ತರ           :ದಿಯಾ ಪ್ರಶ್ನೆ  :ನೀವು ಮರೆಯಲಾರದ ಘಟನೆ ಯಾವುದು? ಉತ್ತರ           :ಪ್ರಕಟಿತ ಕಥೆಗೆ ನೋಟಿಸ್ ಪಡೆದು, ಒಂದು ಬಡ್ತಿ ಕಳೆದುಕೊಂಡಿದ್ದು. ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

You cannot copy content of this page

Scroll to Top