ಕವಿತೆ
ನೀನಿರಬೇಕು ಎಚ್. ಕೆ. ನಟರಾಜ ಇಳಿಸಂಜೆ ನಾನು ಮುಳುಗುವ ಸೂರ್ಯ..ನೀನೋ ರಾತ್ರೀ ಪ್ರೀತಿಸುವ ಆಗಸದ ಚಂದ್ರಮ.ಆದರೂ ಸೂರ್ಯ ಬೆಳಗುತ್ತಲೇಇರುತ್ತಾನೆ..ಚಂದ್ರ ನೀರಂತರ..ಮುದ ಕೊಡುತ್ತಿರುತ್ತಾನೆ.ನಿನ್ನಂತೆ ನಿನ್ನ ನಗುವಿನಂತೆಈ ಕತ್ತಲೆ ಬೆಳದಿಂಗಳಾಟದ ಗೊಂಬೆ ನಾನು.ಕತ್ತಲೆಯ ನಿಶೆತುಂಬಿದ ಮರುಳಹಗಲಿನಲ್ಲಿ ಬದುಕಿನ ಬಯಲಾಟದಪಾತ್ರವಾದರೂ ಆರ್ಭಟಿಸುವುದು ಇರುಳ ಬೆಳಕಿನಾಟದಲೆ..ಒಡ್ಡೋಲಗ ಪ್ರಭುಗಳು.ನೀನೆಂದರೆ ನೀನೇ ಒಡಲಾಳದ ಕರುಣೆಉಕ್ಕಿ ಬರಲು ಒಲುಮೆಯ ಚಿಲುಮೆ ಕನಸುಕಂಗಳಿಗೆ ಕಾರಿರುಳ ರಾತ್ರಿಯಲಿದೀಪ ದೀವಿಗೆಯಾಗಿ ಕಾಡುವ ನಿನನಗುವಿನಂದದಿ..ಮಲ್ಲಿಗೆ ಚಫ್ಪರಕಟ್ಟುವ ಬಯಕೆಯ ತಿರುಕ ನಾನು..ಪ್ರೇಮತಪೋವನದ ಸಂತನೂ ನಾನುನಕ್ಕು ಬಿಡೆ ಒಮ್ಮೆ.. ಕೇಕೇ ಹಾಕಿ.. ಹಸಿಇನಾಳಕೆ ಇಳಿಯಲೀ ಭೀಬತ್ಸ.. ಚಂದ್ರ ನಗುತ್ತಾನೆಹೀಗೇಕೆ ಮಾಡಿದೆ ತರುಣೆ.. ಕೇಳುತ್ತಾನೆಕನಸುಕಂಗಳಿಗೆ ಹರಿದ ಮಬ್ಬುಕಗ್ಗತ್ತಲೆನೀನಾಗು ನನ್ನ ನಗುವಿನ ತಿಳಿನೊರೆ.. ಬೆಳ್ನೊರೆ.ಅಪ್ಪಿಬಿಡು ಮನಸಾರೆ.. ಸಂಗತಿಗಳೇನು ಘಟಿಸಿಲ್ಲವಿಲ್ಲಿ.. ಅಸಂಗತವೂಸುಸಂಗತವೋ.. ಅರಿಯುವ ತವಕದೊಳಗೆಇದ್ದವರ್ಯಾರು..?ಬೆಚ್ಚಿ ಓಡುವ ಕುದುರೆ ಹಿಡಿದವರ್ಯಾರು..ಬಂದು ಬಿಡೆ ನನ ಮನದೊಳಗೆ ನುಗ್ಗಿಬಿಡೆತಡೆಯುವರ್ಯಾರು.. ನನ್ನ ಪದನುಡಿಯಪ್ರೀತಿಥೇರಿಗೆ ಅಡ್ಡ ನಿಲ್ಲುವರಾರು…??!! ಇರಬೇಕು ನೀನು.. ನಕ್ಷತ್ರಗಳ ನಗುವಾಗಿ..ಹೊಳಪಾಗಿ ಇಳಿಸಂಜೆ ಸೂರ್ಯನ ಹೊನಲಾಗೀ. .ಚಂದ್ರನ ತಂಪಾಗಿ.. ನನ್ನೊಲವ ಇಂಪಾಗಿ.. ಕಾವ್ಯಕನ್ನಿಕೆಯಾಗಿ ಏದೆಯಾಳದಿ ಸೊಂಪಾಗಿಕೊರಳ ಹಾಡಿನ ಪದವಾಗಿ.. ಕಿವಿ ತಣಿಸೋ ಮಾಧುರ್ಯವಾಗಿ.. ನನ್ನ ಪ್ರೀತಿಯರಮನೆಯ ಅರಸಿಯಾಗಿ.. ಇರಬೇಕು ನೀನು..ನನ್ನೊಲವ ಸಿರಿಯಾಗಿ ಬಿಸಿ ಬಯಕೆಯಉಸಿರಾಗಿ.. **********************









