ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲೀಲಾ ಕಲಕೋಟಿ ಎರಡು ಬರಹಗಳು

ಲೀಲಾ ಕಲಕೋಟಿ ನ್ಯಾನೋ ಕಥೆ ಸಂಜೆಯಾಗಿ ತಾಸೆರಡಾಗಿತ್ತು. ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ . ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ ಕುಂತು ಕಣ್ಣುಗಳಿಂದ ಮಾತಿಗಿಳಿದಿದ್ದೆ …..! ಸುಮ್ಮನೆ ಏಳು ಸುತ್ತಿನ ಸುರಳಿಯಬಿಚ್ಚುತ ಮೆಲ್ಲನೆಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ….?ಹಸಿರೆಲೆ ರಾಶಿಯಲಿಹುದುಗಿದಿ ಕಡೆದಬೆಣ್ಣೆಯಂತೆ….ಮುದ್ದಾಗಿ ಎದ್ದವಳೇಕುಂತೀಯಾಕ ಸುಮ್ಮನೆ?ಓ….! ನನ್ನ ಮಲ್ಲಿಗೆ…?ಬೀಗುತ ಬಿಮ್ಮನೆಘಮ್ಮಂತ ಸೂಸುತಕಂಪನು ಹರಡುತಸೊಂಪಾಗಿ,ಗುಂಪಾಗಿಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ……?ಬೀಸುವ ತಂಗಾಳಿಗೆಕುಲಕುತ ಬಳಕುತಮುದನೀಡಿ ಮನಕೆಮಂದಗಮನಿಯಂತೆಕುಂತೀಯಾಕ ಸುಮ್ಮನೆ?ಓ….!ನನ್ನ ಮಲ್ಲಿಗೆ….? ****************************

ಲೀಲಾ ಕಲಕೋಟಿ ಎರಡು ಬರಹಗಳು Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ದೇವು ಮಾಕೊಂಡ ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ ಅವರ ಬದುಕು ಅವರೇ ಕಂಡುಕೊಂಡಿಲ್ಲಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ **************************************

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಚೀನಿ ಗಾದೆ ನೂತನ ದೋಶೆಟ್ಟಿ ಮನದಲ್ಲಿ ಹಸಿರು ಗಿಡ ನೆಡುಹಾಡು ಹಕ್ಕಿ ಬಂದೇ ಬರುವುದುಒಂದು ದಿನ ಚೀನಿ ಗಾದೆಯ ನಂಬಿಎದೆಯಂಗಳದಲ್ಲಿನಗುವ ಹಸಿರು ಗಿಡ ಹಾಡು ಕೇಳದೆಹೊರಟ ನಿಟ್ಟುಸಿರಿಗೂಶಾಂತತೆಯ ಪಾಠ ಮೈಯೆಲ್ಲ ಕಿವಿಯಾಗಿಕಾಯುತಿದೆ ಹಸಿರು ಗಿಡಮನದ ಪ್ರತಿ ಮೀಟಿನಲೂಹಕ್ಕಿ ಗಾನದ ಕನವರಿಕೆ ಗಳಿಗೆಗಳ ಲೆಕ್ಕಸರಿ ಹೋಗಲೇ ಇಲ್ಲಹಕ್ಕಿ ಬರುವುದೋ ಇಲ್ಲವೋಹಾಡು ಕೇಳುವುದೊ ಇಲ್ಲವೊ ಮನ ಕರಗಿ ಹರಿಯಿತುಗಿಡದಲ್ಲಿ ಹಸುರಿತ್ತುತಾನು ಅತ್ತು ನಗುವ ಹಂಚಿಗಾದೆಯ ಉಳಿಸಿತ್ತು. *************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಎಲ್ಲೆಲ್ಲೆಂದು ಹುಡುಕಲಿ ? ರಜನಿ ತೋಳಾರ್ ನೀ ಹೊರಟು ಹೋಗಿದ್ದುಗೊತ್ತೇ ಆಗಲಿಲ್ಲ…ಕಣ್ತೆರೆದು ನೋಡಲುಏಕಾಏಕಿ ನಾ ಏಕಾಂಗಿ ಹೊಸ ಪ್ರಪಂಚದ ಬೆಡಗಿನಲಿರಂಗಿಸಿಕೊಂಡು ಸುತ್ತುವ ಗುಂಗಿನಲಿಮರೆತೇ ಹೋದೆಯಾಬಿಡಾರಕ್ಕೆ ಬರುವ ದಾರಿ ಝಲ್ಲೆಂದು ಮಳೆ ಹೊಯ್ಯುವಾಗಗುಡುಗು ಮಿಂಚಿನ ಸದ್ದಿಗೆಲ್ಲಾಡವಡವಿಸುವುದು ನನ್ನೆದೆಗೊತ್ತಲ್ಲವೇ… ಒಂದು ಮಾತೂ ಹೇಳದೇಹೊರಟೇ ಬಿಟ್ಟೆ ಅಂತೂ…ನಿಲ್ಲಲಾಗಲಿಲ್ಲವೇನಾಲ್ಕು ದಿನವೂ,ಬಂದು ಬಿಡುತ್ತಿದ್ದೆನಲ್ಲಾನಾನೂ ನಿನ್ನ ಜೊತೆಗೆ ಇದಾಗಲೇ ಎಲ್ಲೆಡೆ ಹುಡುಕಿಸೋತಿಹರು ನಿನ್ನ ಹೆತ್ತವರು..ಎಲ್ಲೆಲ್ಲೆಂದು ಹುಡುಕಲಿ ಇನ್ನು ? ಅಮ್ಮ ತುತ್ತು ಕೊಡುವಾಗಲೆಲ್ಲಾನಿನ್ನದೇ ನೆನಪು…ನನಗೆ ಮೊದಲು ..ನನಗೆ ಮೊದಲೆನ್ನುವ ಪೈಪೋಟಿ ಇನ್ನೆಲ್ಲಿ!ಹಾರುವುದ ಕಲಿಯುವ ಸಾಹಸಕಿಟಕಿಯ ಗ್ರೀಲಿನಲ್ಲೇಎಡವಿ ಜಾರಿ ಬಿದ್ದರೆಆರನೇ ಮಳಿಗೆಯಿಂದ..ಅಂಜಿಕೆಯಾದಾಗ ಬಂದು ಕೂರುವೆಗೂಡಿನಲ್ಲಿಹುಡುಕ ಬೇಕಲ್ಲವೇ ನಿನ್ನ… ********************

ಕಾವ್ಯಯಾನ Read Post »

ಅಂಕಣ ಸಂಗಾತಿ, ದಿಕ್ಸೂಚಿ

ದಿಕ್ಸೂಚಿ

ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ! ಎಷ್ಟೆಲ್ಲ ಅನುಭವಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಿದರೂ ಗೆಲುವು ಮಿಂಚಿನಂತೆ ಅರೆಗಳಿಗೆ ಮಿಂಚಿ ಮಾಯವಾಗುತ್ತದೆ.ಇಲ್ಲಿ ಎಲ್ಲದರಲ್ಲೂ ಒತ್ತಡ. ಯಾವುದೂ ಸರಳ ರೇಖೆಯಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ವಕ್ರ ರೇಖೆಯ ಕಾಣದ ತಿರುವುಗಳಲ್ಲಿ  ಶ್ರಮ ಹಾಕಿಯೇ ಪಡೆಯಬೇಕು.ಕೆಲವೊಮ್ಮೆ ಶ್ರಮ ಹಾಕಿದರೂ ಮುಖ ಎತ್ತಿಯೂ ನೋಡದೇ, ಬೆನ್ನು ತೋರಿಸಿ ನಗುತ್ತದೆ. ಕೈಗೆ ಸಿಗದೇ ಓಡಿ ಬಿಡುತ್ತದೆ ಗೆಲುವು! ಒಮ್ಮೊಮ್ಮೆ ನನಗೇ ತಿಳಿಯದಂತೆ ಮೇಲಕ್ಕೆತ್ತರಿಸಿ ಕೂರಿಸುತ್ತದೆ. ಮತ್ತೊಮ್ಮೆ ನಿರೀಕ್ಷಿಸಿದರೂ ಕೈಗೆ ಸಿಗದೇ ಕೆಳಕ್ಕೆ ಎಸೆದು ಬಿಡುತ್ತದೆ. ಹೆದರಿಸಿ  ಬೆನ್ನಲ್ಲಿ ಬೆವರಿಳಿಸಿದ ಸೋಲಿನ ಘಟನೆಗಳನ್ನು ನೆನದಾಗಲೊಮ್ಮೆ ಗೆಲುವಿನ ರುಚಿಯ ಆಸೆಯೇ ಬೇಡ ಎಂದೆನಿಸಿ ಬಿಡುತ್ತದೆ.ಸೋಲಿನ ಸಹವಾಸ ಸಾಕಾಗಿ ಒಮ್ಮೆ ಸರಿದು ನಿಂತು ಬದುಕಿನ ಕಪಾಳಕ್ಕೆ ಬಾರಿಸಲೇ ಎನಿಸುವಷ್ಟು ಕೋಪ ನೆತ್ತಿಗೇರುತ್ತದೆ. ಆದರೆ, ಎಷ್ಟೇ ಆಗಲಿ ಬದುಕು ನನ್ನದೇ ಅಲ್ಲವೇ? ಅದಕ್ಕೆ ನೋವಾದರೆ ಮರಳಿ ನನಗೂ ನೋವಾಗುವುದಲ್ಲವೇ? ಎನ್ನುತ್ತ ಹಲ್ಲು ಕಿತ್ತ ಹಾವಿನಂತೆ ಬಲಹೀನನಾಗಿ ಬಿಡುತ್ತೇನೆ. ಸೋಲಿನ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಈ ಕ್ಷಣವೇ ನನ್ನನ್ನು ನನ್ನ ಬಂಧು ಬಾಂಧವರು ಶವ ಪೆಟ್ಟಿಗೆಯಲ್ಲಿಟ್ಟು ಕೈ ತೊಳೆದುಕೊಳ್ಳಬಾರದೇ ಎಂದೆನಿಸದೇ ಇರದು. ಸೋಲು ಕಂಡಾಗ ಜೊತೆಗಿದ್ದವರು ದೂರವಾಗುವರು.ಕೆಲಸಕ್ಕೆ ಬಾರದವನು, ಕೈಲಾಗದವನು,ಎಂದು ಚುಚ್ಚು ಮಾತುಗಳಲ್ಲೇ ಚುಚ್ಚುವರು. ಇದೆಲ್ಲ ಏನು ಅಂತಿರೇನು? ಸಾಲು ಸಾಲು ಸೋಲುಂಡ ಜೀವಿಗಳ ಸ್ವಗತ. ಅಷ್ಟಕ್ಕೂ ಗೆಲುವು ಎಂದರೇನು? ಸೋಲಿನ ಸುಳಿಯಲ್ಲೇ ಇರುವ ಗೆಲುವಿನ ತುದಿ ಹಿಡಿಯಲು ಕುತೂಹಲ ಅಲ್ಲವೇ? ಹಾಗಾದರೆ ಮುಂದಿನ ಸಾಲುಗಳಿಗೆ ಕಣ್ಣು ಹಾಯಿಸಿ. ಗೆಲುವು ಎಂದರೇನು? ಗೆಲುವನ್ನು ವ್ಯಾಖ್ಯಾನಿಸುವುದು ಜೀವನವನ್ನು ಪುಟವೊಂದರಲ್ಲಿ ಹಿಡಿದಿಟ್ಟಷ್ಟೇ ಕಠಿಣ. ಹಾಗೆ ನೋಡಿದರೆ ಗೆಲುವು ಅನ್ನೋದು ಅವರವರ ಭಾವಕ್ಕೆ ಬಿಟ್ಟದ್ದು. ಕೆಲವರಿಗೆ ಹಣದೊಡೆಯರಾಗುವುದು ಗೆಲುವಾದರೆ, ಇನ್ನೂ ಕೆಲವರಿಗೆ ಆಟೋಟಗಳಲ್ಲಿ ಚಾಂಪಿಯನ್ ಆಗುವುದು. ತಾವು ದಾಖಲಿಸಿದ ದಾಖಲೆಗಳನ್ನು ತಾವೇ ಮುರಿಯುವುದು. ಇತರರ ಹೆಸರಲ್ಲಿರುವ ದಾಖಲೆಯನ್ನು ಸರಿಗಟ್ಟುವುದು.ಉದ್ಯಮಿಯಾಗುವುದು, ಸ್ವ ಉದ್ಯೋಗ, ಸರಕಾರಿ ನೌಕರಿ ಇನ್ನೂ ಹತ್ತು ಹಲವು.ಈಗ ನಮ್ಮ ಹತ್ತಿರ ಏನಿದೆಯೋ [ಮನೆ, ಶಿಕ್ಷಣ, ಹಣ, ಉದ್ಯೋಗ] ಅಷ್ಟನ್ನು ಪಡೆಯುವ ಕನಸು ಕಾಣುತ್ತಿರುವವರಿಗೆ ಅವುಗಳನ್ನೆಲ್ಲ ಪಡೆಯುವುದೇ ಗೆಲುವು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗೆಲುವು ಎಲ್ಲ ಕಾಲಕ್ಕೂ ಎಲ್ಲರಿಗೂ ಸಾಮಾನ್ಯವಾಗಿರುವುದಲ್ಲ. ವಯೋಮಾನ ಸ್ಥಿತಿ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವಂಥದು. ಅರ್ಲ್ ನೈಟಿಂಗೇಲ್‌ರ ಪ್ರಕಾರ  ‘ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿಪೂರ್ವಕವಾಗಿ ಸಾಧಿಸುವ ಪರಿಯೇ ಯಶಸ್ಸು’ ನೂರಾರು ಚಿಂತೆ ಕೋಟಲೆಗಳ ಮೀರಿ ಎದ್ದು ನಿಲ್ಲುವುದು ಯಶಸ್ಸು. ದೊಡ್ಡ ದೊಡ್ಡ ಕನಸು ಕಾಣುವುದು ಗೆಲುವಲ್ಲ. ಅವುಗಳು ನನಸಾಗುವವರೆಗೆ ಬೆನ್ನು ಹತ್ತುವುದು ಗೆಲುವು. ಅಂದ ಹಾಗೆ ಸೋಲಿನ ಸುಳಿಯಲ್ಲೇ ಗೆಲುವಿದೆ. ಅದ್ಹೇಗೆ ಅಂತಿರೇನು? ಸೋಲಿನ ಸಹವಾಸವೇ ಸಾಕಪ್ಪಾ ಎಂದು ಸೋಲನ್ನಪ್ಪಿಕೊಳ್ಳುವಾಗ ಎರಡು ಹೆಜ್ಜೆ ಮುಂದಿಟ್ಟರೆ ಸಾಕು ಗೆಲುವು  ತಾನಾಗಿಯೇ ನಮ್ಮ ಕೈ ಹಿಡಿಯುತ್ತದೆ. ಬನ್ನಿ ಸೋಲಿನ ಸುಳಿಯಲ್ಲಿ ಗೆಲುವು ಹೇಗೆ ಅಡಗಿದೆ ನೋಡೋಣ. ಬೇರು ಕಿತ್ತೊಗೆಯಿರಿ ಸೋಲನ್ನು, ಬೇಡ ಬೇಡವೆಂದರೂ ಕಾಲಿಗೆ ತೊಡರಿಸಿಕೊಳ್ಳುವ ಕಸದ ಬಳ್ಳಿಯೆಂದು ತಿಳಿಯುವುದು ತಪ್ಪು.    ಉಪಾಯವಿಲ್ಲದೇ ತಂತ್ರಗಳಿಲ್ಲದೇ ಕೈ ಹಾಕಿದರೆ, ಕೈ ಹಾಕಿದ ಕೆಲಸ ಕೈಗೂಡುವುದಿಲ್ಲ.ಸೋಲಿನ ಎದೆಯೊಳಗೆ ಇಣುಕಿ ನೋಡಬೇಕು. ಆಗ ಅದು ತನ್ನ ಅಂತರಾಳದ ನೋವನ್ನು ಬಿಚ್ಚಿಡುತ್ತದೆ.ಇತರರ ಗೆಲುವು ಕಂಡು ಹೊಟ್ಟೆ ಕಿಚ್ಚು ಹೆಚ್ಚಾಯಿತೇ ಹೊರತು ನಿನ್ನ ಗುರಿಯ ಕಿಚ್ಚು ಹೆಚ್ಚಾಗಲಿಲ್ಲ ಎಂದು ಅಳುತ್ತದೆ. ಸೋತೆನೆಂದು ನಿರಾಸೆಯಿಂದ ಕೈ ಚೆಲ್ಲಿ ಕುಳಿತಿಯೇ ಹೊರತು ನಾ ಹೊತ್ತು ತಂದ ಪಾಠವನ್ನು ಆಸೆಯಿಂದ ಸ್ವೀಕರಿಸಲೇ ಇಲ್ಲ. ಕೊರತೆ ಇರುವುದು ನಿನ್ನಲ್ಲಿಯೇ ಹೊರತು ನನ್ನಲ್ಲಲ್ಲ ಎಂದು ಬಿಕ್ಕುತ್ತದೆ. ಹಾಗಾದರೆ ನಾವು ಸೋಲು ತನ್ನ ಬೆನ್ನ ಮೇಲೆ ಹೊತ್ತು ತಂದಿರುವ ಪಾಠವನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದಂತಾಯಿತು. ಸೋಲಿನ ಕುರಿತಾಗಿರುವ ಹತಾಶೆ ನಿರಾಶೆಯ ಬೇರುಗಳನ್ನು ಹುಡುಕಿ ಅವುಗಳನ್ನು ಬೇರು ಸಮೇತ ಕಿತ್ತೊಗೆಯಬೇಕು. ಸೋಲೇ ಗೆಲುವಿನ ಸೋಪಾನವೆಂದು  ಯಾವ ಅಂಶಗಳ ಕೊರತೆಯಿಂದ ಸೋತೆ ಎಂದು ಆತ್ಮಾವಲೋಕನ ಮಾಡಿಕೊಂಡು ಮುನ್ನುಗ್ಗಬೇಕು.ಆಗ ಗೆಲುವು ಒಂದು ಹೆಜ್ಜೆ ಸನಿಹ ಬರುವುದು. ತಪ್ಪುಗಳ ಪಟ್ಟಿ ಮಾಡಿ  ‘ಮಾನವ ಯಶಸ್ಸಿನಿಂದ ಕಡಿಮೆ ಕಲಿಯುತ್ತಾನೆ. ವೈಫಲ್ಯತೆಯಿಂದ ಹೆಚ್ಚು ಕಲಿಯುತ್ತಾನೆ.’ಎನ್ನುತ್ತಾರೆ ಪ್ರಾಜ್ಞರು. ಕಂಡ ಸೋಲಿನಲ್ಲಿ ಮಾಡಿದ ಮುಖ್ಯ ತಪ್ಪುಗಳನ್ನು ಪಟ್ಟಿ ಮಾಡಿ ಒಂದು ವರದಿಯನ್ನು ಹೆಣೆಯಬೇಕು. ಅದನ್ನು ಸ್ಪಷ್ಟವಾಗಿ ಒಂದೆಡೆ ಬರೆದು ಮುಂದಿನ ಸಲ ಈ ತಪ್ಪುಗಳಾಗದಂತೆ ಜಾಗರೂಕತೆ ವಹಿಸಬೇಕು. ಹೊಸ ತಪ್ಪುಗಳಾದರೆ ಗಾಬರಿಯಿಂದ ಪ್ರಯತ್ನಿಸುವುದನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಇನ್ನೂ ಚೆನ್ನಾಗಿ ಮಾಡುವುದಾದರೆ ಹೇಗೆ ಮಾಡಬಹುದು ಎನ್ನುವ ಯೋಜನೆ ಹಾಕಿಕೊಂಡು ಮುನ್ನುಗ್ಗಬೇಕು. ಸಣ್ಣ ತೊರೆಗಳು ಮಹಾನ ಸಮುದ್ರಗಳಾಗುತ್ತವೆ. ತಪ್ಪುಗಳನ್ನು ಮರುಕಳಿಸದಂತೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಗೆಲುವಿನ ಇತಿಹಾಸ ನಿರ್ಮಾಣವಾಗುತ್ತದೆ. ಗುರಿಗೆ ಗುರಿ ಇಡಿ ಮಂಡಿಯೂರಿ ಕುಳಿತು ದೇವರನ್ನು ಬೇಡಿದರೆ ಸಿಗುವುದಿಲ್ಲ ಗೆಲುವು.ಯಾರ‍್ಯಾರನ್ನೋ ಒಲಿಸಿಕೊಳ್ಳಲು ಹೋಗುವುದರಲ್ಲಿಲ್ಲ. ಎಲ್ಲರಿಗೂ ಬೇಕಾದ ವ್ಯಕ್ತಿ ನಾ ಆದರೆ ಅದೇ ಗೆಲುವೆಂದು ಎಲ್ಲರನ್ನೂ ತೃಪ್ತಿ ಪಡಿಸಲು ನೋಡಿದರೆ ಸೋಲಿನ ಸುಳಿಯಿಂದ ಹೊರ ಬರಲಾಗುವುದಿಲ್ಲ. ಇದನ್ನೇ ಬಿಲ್ ಕಾಸ್ಟಿ ಹೀಗೆ ಹೇಳಿದ್ದಾನೆ.”ಯಶಸ್ಸಿನ ಕೀಲಿ ಕೈ ಯಾವುದೋ ನನಗೆ ತಿಳಿಯದು. ಆದರೆ ಎಲ್ಲರನ್ನೂ ತೃಪ್ತಿ ಪಡಿಸಲು ಯತ್ನಿಸುವುದು ವಿಫಲತೆಯ ಕೀಲಿಕೈ ಎಂಬುದನ್ನು ಮಾತ್ರ ನಾನು ಚೆನ್ನಾಗಿ ಬಲ್ಲೆ.” ಇಟ್ಟುಕೊಂಡ ಗುರಿಗೆ ಗುರಿ ಇಟ್ಟು ಹೊಡೆದರೆ, ಸೋಲು ನಿಮ್ಮನ್ನು ಬಿಟ್ಟು ಹೋಗಲು ಬೇಸರಿಸಿಕೊಳ್ಳುವುದಿಲ್ಲ. ಗುರಿಗೆ ಬೇಕಾದ ಕೆಲಸ ಕಾರ್ಯಗಳ ಯೋಜನೆ ರೂಪಿಸಿ ಮಾಡಲೇ ಬೇಕೆಂದು ಮನಸ್ಸಿಗೆ ಹಟ ಹಿಡಿಯುವಂತೆ ಮಾಡಿ.ಇಲ್ಲದಿದ್ದರೆ ಮನಸ್ಸು ಅನಗತ್ಯ ಕೆಲಸಗಳ ಸುತ್ತುವರೆದು ಅಗತ್ಯವಾದುದನ್ನು ಮಾಡಲು ಅಡಚಣೆ ಉಂಟು ಮಾಡುತ್ತದೆ. ಮನದ ತುಡಿತವು ಇಲಿಯನ್ನೂ ಹುಲಿಯಾಗಿಸಬಲ್ಲದು. ನಿರಂತರ ಪ್ರಯತ್ನಿಸಿ ಸೋತಾಗ ಹಗಲು ರಾತ್ರಿ ಸಾಲು ಸಾಲು ಸೋಲುಗಳನ್ನು ಅವುಚಿ ಹಿಡಿದುಕೊಂಡು ಕಣ್ಣೀರಿಡುವಾಗ ಗೆಲುವಿನ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಚಲಿಸುತ್ತವೆ ಎನ್ನುವುದನ್ನು ಮರೆಯಬಾರದು.ಹೇಳದಿದ್ದರೂ ಮಾಡುವವರು ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂಬುವುದನ್ನು ನೆನಪಿಡಬೇಕು. ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಿಗುವ ಸಮಯ ಹೆಚ್ಚು ಕಡಿಮೆ ತಡವಾಗಬಹದು. ಒಂದೊಂದು ಸೋಲಿನಿಂದಲೂ ಮಾರಕವಾದ ಅಂಶಗಳನ್ನು ತ್ಯಜಿಸಬೇಕು. ಪೂರಕ ಅಂಶಗಳತ್ತ ಚಿತ್ತ ದೃಢವಾಗಿಸಿ, ಬಿಡದೇ ಪ್ರಯತ್ನಿಸಬೇಕು. ಆಕಾಶದೆತ್ತರಕ್ಕೆ ಬೆಳೆದು ನಿಂತ ಹೆಮ್ಮರಗಳನ್ನು ಸಹ ಅನೇಕ ಹೊಡೆತಗಳಿಂದ ನೆಲಕ್ಕೆ ಉರಳಿಸಬಹುದು.ಅಂದರೆ ಯಶಸ್ಸಿಗೆ ಒಂದರ ಮೇಲೊಂದರಂತೆ ಪ್ರಯತ್ನಗಳು ಬೇಕಾಗುತ್ತವೆ. “ಬಹುತೇಕ ಜನರು ಯಶಸ್ಸಿನ ಬಾಗಿಲವರೆಗೆ ಬಂದು, ತಮ್ಮ ಪ್ರಯತ್ನ ಬಿಟ್ಟು ಬಿಡುತ್ತಾರೆ. ಹೌದು, ವಿಜಯದ ಗುರಿ ಒಂದು ಗಜ ದೂರವಿರುವಾಗ, ಕೇವಲ ಒಂದು ಅಡಿ ಇರುವಾಗ ಯತ್ನ ಬಿಟ್ಟು ಬಿಡುತ್ತಾರೆ.’ಎನ್ನುತ್ತಾರೆ ಎಚ್. ರಾಸ್. ಪೆರಾಟ್. ಕೊನೆಯ ಹೆಜ್ಜೆಯವರೆಗೂ ಪ್ರಯತ್ನಿಸಿ ಸೋಲಿನ ಸುಳಿಯಲ್ಲೇ ಅಡಗಿದ ಗೆಲುವು ತಂತಾನೇ ಹರಿದು ಬರುತ್ತದೆ. ************************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ದಿಕ್ಸೂಚಿ Read Post »

ಅಂಕಣ ಸಂಗಾತಿ, ಮುಖಾಮುಖಿ

ಮುಖಾಮುಖಿ

“ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ” “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ನಾಗರೇಖಾ ಗಾಂವಕರ್ ನಾಗರೇಖಾ ಗಾಂವ್ಕರ್ ಅಂಕೋಲಾ ತಾಲೂಕಿನ ಆಡ್ಲೂರು ಗ್ರಾಮದವರು. ನಾಗರೇಖಾ ಅವರು ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಾಭಾಷಾ ಉಪನ್ಯಾಸಕಿ. ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧,೨ ನ್ನು ಸಹ ಪ್ರಕಟಿಸಿದ್ದಾರೆ. ಕತೆಗಳನ್ನು ಸಹ ಬರೆಯುವ ಇವರು, ಕೆಲ ಕತಗಳಿಗೆ ಬಹುಮಾನ ಸಹ ಪಡೆದಿದ್ದಾರೆ. ಕನ್ನಡ ಕವಿಗಳ ಕವಿತೆಗಳನ್ನು ಆಂಗ್ಲಭಾಷೆಗೆ ತರ್ಜಿಮೆ ಮಾಡುವಲ್ಲಿ ಸಹ ಈಚೆಗೆ ತೊಡಗಿಕೊಂಡಿದ್ದಾರೆ. ಕನ್ನಡ ಕಾವ್ಯ ಜನಪರವಾಗಿ, ಮಹಿಳಾ ಜಗತ್ತಿನ ಕುರಿತು ಸ್ಪಂದಿಸುತ್ತಲೇ ಬಂದಿದೆ. ಸಮಾಜದ ಪ್ರತಿಬಿಂಬವೇ ಆಗಿರುವ ಸಾಹಿತ್ಯ, ನೋವಿಗೆ ಸಾಂತ್ವಾನ ಹೇಳಿದೆ. ದುಃಖಕ್ಕೆ ಮಿಡಿದಿದೆ. ಅನ್ಯಾಯವನ್ನು ಪ್ರತಿಭಟಿಸಿದೆ. ತಾಯಿಯಂತೆ ಪ್ರೀತಿ,ವಾತ್ಯಲ್ಯಗಳನ್ನು ನೀಡಿದೆ. ಕಾವ್ಯ ಅಮೃತಕ್ಕೆ ಹಾರುವ ಗರುಡ ಎಂಬ ಮಾತಿದೆ. ಕಾವ್ಯದ ದಿಕ್ಕು ದಿಶೆಗಳನ್ನು ಕನ್ನಡ ಕಾವ್ಯ ಜಗತ್ತು ನಿರಂತರವಾಗಿ ತನ್ನ ದಾರಿಯನ್ನು ಹುಡುಕುತ್ತಾ ಸಾಗಿದೆ. ಈ ಸಲ ಸಂಗಾತಿ ವೆಬ್ ನೊಂದಿಗೆ ನಾಗರಾಜ್ ಹರಪನಹಳ್ಳಿ ಅವರ ಜೊತೆ ಮುಖಾಮುಖಿಯಾಗಿದ್ದಾರೆ ಕವಯಿತ್ರಿ ನಾಗರೇಖಾ ಗಾಂವ್ಕರ್. …… ಪ್ರಶ್ನೆ : ಕವಿತೆ ಏಕೆ ಬರೆಯುತ್ತೀರಿ? ಉತ್ತರ : ಬದುಕಿಗೆ ಜೀವಂತಿಕೆಯನ್ನು ತುಂಬುವಂತಹ ಎಷ್ಟೆಷ್ಟೋ ಪ್ರಯತ್ನಗಳಿವೆ. ಭಾವ ಜೀವಿಯಾದವ ಸಂವೇದನೆಗಳ ತಾಕಲಾಟದಲ್ಲಿ ವೈಯಕ್ತಿಕ ದರ್ಶನಗಳ ಕಂಡುಕೊಳ್ಳುವತ್ತ ಹಾಗೂ ಅದನ್ನು ಒಡಮೂಡಿಸುವಲ್ಲಿ ಇದೊಂದು ಮಾರ್ಗ ಹಿಡಿಯುವುದಿದೆ. ಹಾಗಾಗಿ ಕವಿತೆ ನನ್ನನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತದೆ. ಯಾಂತ್ರಿಕ ಬದುಕಿನ ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ. ನಾನು ಯಾರಿಗಾಗಿ ಬರೆಯುತ್ತೇನೆ ಅಂತಾ ಟಾಲಸ್ಟಾಯ್ ಬಹಳ ವಿಷಾದದಿಂದ ಕೇಳಿಕೊಂಡಿದ್ದನಂತೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ನಾನು ಹೇಳಬಯಸುವುದಿಷ್ಟೇ! ದ್ವಂದ್ವಗಳನ್ನು ಮೀರಲು, ನನ್ನ ನಾನು ಕಳೆದುಕೊಳ್ಳಲು, ನಿರಾಳವಾಗಲು ಕವಿತೆಗಳನ್ನು ಬರೆದದ್ದು ಇದೆ. ಬರೆಯುತ್ತಿರುವೆ. ಕವಿತೆ ಹುಟ್ಟುವ ಕ್ಷಣ ಯಾವುದು? ಕವಿತೆ ಹುಟ್ಟುವುದು ಕೂಡಾ ಅತೀವ ವಿಷಾದದ ನೆರಳಲ್ಲಿ, ದುಃಖದ ಪರಮಾವಧಿಯಲ್ಲಿ ಇಲ್ಲವೇ ಸಂತೋಷದ ಉತ್ತುಂಗದಲ್ಲಿ. ಅದು ವೈಯಕ್ತಿಕ ಸಂದರ್ಭವೇ ಆಗಿರಬಹುದು ಇಲ್ಲ ಸಾಮಾಜಿಕ ಸಾಂಸ್ಕೃತಿಕ ನೆಲೆಗಳಲ್ಲಿ ಉಂಟಾದ ವಿಪ್ಲವದ ಸಂದರ್ಭವೇ ಆಗಿರಬಹುದು. ಪ್ರಕೃತಿಯಲ್ಲಿ ಮೈ ಮರೆತಾಗ,ಅನ್ಯಾಯ ಕಂಡಾಗ, ಅಸಹಾಯಕತೆ ಉಂಟಾದಾಗ, ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ, ಕವಿತೆ ಹುಟ್ಟುತ್ತದೆ. ಕವಿತೆಗಳ ವಸ್ತು, ವ್ಯಾಪ್ತಿ, ಹೆಚ್ಚಾಗಿ ಯಾವುದು? ಕವಿತೆ ಆ ಸಮಯದ ಫಲ. ಆದರೂ ಬಾಲ್ಯದ ನೆನಪುಗಳು ನನ್ನ ಬಹಳ ಕಾಡಿವೆ. ಸಮೃದ್ಧವಾದ ಜೀವನಾನುಭವ ಕೊಟ್ಟ ದಿನಗಳವು ಅವು. ಹಾಗಾಗಿ ಆ ನೆನಪುಗಳು ಮಧ್ಯ ವಯಸ್ಸಿನಲ್ಲಿ ನಿಂತು ನೋಡಿದಾಗ ಅಲ್ಲಿಗೂ ಇಲ್ಲಿಗೂ ಇರುವ ಅಗಾಧ ವ್ಯತ್ಯಾಸ, ದೃಷ್ಟಿಕೋನಗಳ ವೈರುಧ್ಯಗಳು ಅನುಭವಗಳು ಎಲ್ಲ ಭಿನ್ನ ವಿಭಿನ್ನವಾಗಿ ಕವಿತೆಗಳಲ್ಲಿ ಮೂಡಿದ್ದಿದೆ. ಹಾಗೇ ಸುತ್ತಲಿನ ಸಮಾಜದ ಓರೆಕೋರೆಗಳು ಅನ್ಯಾಯದ ನಡೆಗಳು, ಬಂಡಾಯವನ್ನು ಮನದಲ್ಲಿ ಮೂಡಿಸಿದಾಗ, ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಗಳು ಕವಿತೆಯ ವಸ್ತುವಾಗಿವೆ. ಸಮಕಾಲೀನ ಜೀವನದಲ್ಲಿ ದೌರ್ಜನ್ಯವನ್ನು, ನೋವನ್ನು ವ್ಯಕ್ತಪಡಿಸುವುದು ಮಹಿಳಾ ಕವಿತೆಗಳ ಗುರಿಯಾಗಿರದೇ ಸಮಾನ ಗುಣಮಟ್ಟದ ಕಾವ್ಯ ಕಟ್ಟುವ ದಿಶೆಯಲ್ಲಿ ನನ್ನ ಒಲವಿದೆ. ಪ್ರೀತಿಯ ಕವಿತೆಗಳು, ಪ್ರಕೃತಿಯ ಕುರಿತಾದ ಕವಿತೆಗಳು, ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಕವಿತೆಗಳ ಬರೆದಿರುವೆ. ಕವಿತೆಗಳಲ್ಲಿ ಬಾಲ್ಯ ಇಣುಕಿದೆಯಾ? ಬಾಲ್ಯದ ನೆನೆಪುಗಳು, ಅದು ಎದೆಯೊಳಗೆ ಎಂದೂ ಮಾಸದ ನೆನೆಪುಗಳ ಮಾಲೆಯಾಗಿ ಇದ್ದದ್ದು, ಕಳೆದುಕೊಂಡ ಹೆತ್ತವರ ನೆನೆಪು, ಅವರುಂಡ ನೋವಿನ ದಿನಗಳ ನೆನಪು ನನ್ನ ಕವಿತೆಗಳಿಗೆ ವಸ್ತುವಾಗಿದೆ. ಆದರೆ ಬದುಕನ್ನು ಒಳಗೊಳ್ಳುವ ಸಾರ್ವಕಾಲಿಕ ಜೀವನ ಸತ್ಯಗಳ ಬಿಂಬಿಸುವ ಕವಿತೆಗಳ ಹುಟ್ಟಿಗೂ, ತುರ್ತು ಕಾಲಕ್ಕೆ, ಆ ಕ್ಷಣದ ತೀವ್ರತೆಗೆ ಹುಟ್ಟುವ ಕವಿತೆಗಳಿಗೂ ಒಂದು ಅವ್ಯಕ್ತ ಭಾವದ ತುಡಿತ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕವಿತೆಗಳು ನಿರ್ದಿಷ್ಟ ಪ್ರಕಾರದಲ್ಲಿ ಗುರುತಿಸಿಕೊಳ್ಳುವಲ್ಲಿ ಸೋತಿವೆ ಎಂಬ ಬೇಸರವಿದೆ ನನಗೆ. ಆದರೂ ಬದುಕು ಎಲ್ಲ ಅನುಭವಗಳ ಮೂಲಕವೇ ಸಾಗುವುದರಿಂದ ಅನುಭವ ಜನ್ಯ ಅಭಿವ್ಯಕ್ತಿಯಾಗಿ ಕವಿತೆ ಹುಟ್ಟಿದೆ. ಆದರೆ ಅದು ಕೇವಲ ಅನುಭವವನ್ನು ಮಾತ್ರ ಕಡೆಯುವ ಕೋಲಲ್ಲ. ಅದರೊಳಗೆ ನಿಗೂಢತೆಗೆ ತೆರೆದುಕೊಳ್ಳಬೇಕು. ವಸ್ತು, ಅರ್ಥವನ್ನು ದಾಟಿ ಅಗಮ್ಯದೆಡೆಗೆ ಸಾಗಬೇಕು. ಅಂತಹ ಕೆಲವೇ ಕೆಲವು ಕ್ಷಣಗಳ ನಾನು ಅನುಭವಿಸಿದ್ದೇನೆ. ಮತ್ತು ಏಲಿಯಟ್ ಹೇಳುವ “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ಈ ಮಾತನ್ನು ನಾನು ಬಹಳವಾಗಿ ಒಪ್ಪುವೆ. ಎಲ್ಲ ಕವಿತೆಗಳ ವಸ್ತುವು ನನ್ನ ಅನುಭವವೇ ಆಗಬೇಕೆಂದಿಲ್ಲ. ಪ್ರಸ್ತುತ ರಾಜಕಾರಣದ ಬಗ್ಗೆ ? ನೋಡಿ ರಾಜಕಾರಣ ಪದಕ್ಕೆ ಎಷ್ಟು ಅನರ್ಥ ಬಂದಿದೆ, ಅದು ಅಪಭ್ರಂéಶಕ್ಕೆ ಒಳಗಾಗಿದೆ. ಇವತ್ತು ಸಾಮಾನ್ಯ ಭಾಷೆಯಲ್ಲಿ ಅವನು ಬಹಳ ರಾಜಕಾರಣ ಮಾಡುತ್ತಾನೆ ಎಂದು ಯಾರಾದರೂ ಹೇಳಿದರೆ ಅವನೇನೋ ಕುತಂತ್ರ ಮಾಡುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತದೆ.. ಹಾಗಾಗಿ ನನಗೆ ರಾಜಕೀಯ ಅದರ ದೊಂಬರಾಟಗಳ ಬಗ್ಗೆ ತೀವ್ರ ನಿರಾಸಕ್ತಿ, ಅಷ್ಟೇ ಅಲ್ಲ ಜಿಗುಪ್ಸೆ ಕೂಡಾ. ದೇಶದ ಒಳಿತನ್ನು ಉದ್ಧಾರವನ್ನು ಮೂಲಧ್ಯೇಯವಾಗಿಸಿಕೊಂಡ ರಾಜಕೀಯ ನಾಯಕರು ಇಂದು ವಿರಳಾತೀವಿರಳ. ಭಾರತದಲ್ಲಿ ಸ್ವಜನ ಹಿತಾಸಕ್ತಿಯೇ ನಾಯಕರ ಮುಖ್ಯ ಧ್ಯೇಯ. ಅದೂ ಪಕ್ಷಾತೀತವಾದ ಪರಂಪರೆಯಾಗಿ ನಮ್ಮಲ್ಲಿದೆ. ಕೊಳೆತು ನಾರುತ್ತಿರುವ ರಾಜಕಾರಣದ ಬಗ್ಗೆ ಕವಿತೆ ಕಟ್ಟಿ ಅದನ್ನು ವಿಡಂಬಿಸುವ ಕವಿತೆಗಳು ಪುಂಖಾನುಪುಂಖವಾಗಿ ಬರುತ್ತಿವೆ. ಆದರೂ ಪದಗಳು ಸೋತಿವೆ. ಹಾಗಿದ್ದೂ ಅಂತಹ ಕವಿತೆಗಳು ತುತರ್ುಕಾಲದ ಕವಿತೆಗಳಾಗಿ ನಾನೂ ಬರೆದಿದ್ದಿದೆ, ಧರ್ಮ ದೇವರು ವಿಚಾರದಲ್ಲಿ ನಿಲುವು ? ವಿಗ್ರಹ ಆರಾಧನೆ, ನಂಬಿಕೆ, ನಾಮಸ್ಮರಣೆ, ಭಯ ಇವು ಯಾವುದೂ ಇಲ್ಲದಂತೆ ಮನಸ್ಸು ಸ್ವಚ್ಛವಾಗಿದ್ದಾಗ ಕಾಲಾತೀತವಾದ, ಶಾಶ್ವತವಾದ ದೇವರೆಂದು ಕರೆಯಬಹುದಾದ ಸತ್ಯ ಕಾಣಿಸುತ್ತದೆ. ಇದನ್ನು ಕಾಣಲು ಅಪಾರವಾದ ಒಳನೋಟ, ತಿಳುವಳಿಕೆ, ತಾಳ್ಮೆ ಬೇಕು. ಧರ್ಮವೆಂದರೆ ಏನು ಎಂದು ಅನ್ವೇಷಿಸುವವರು ದಿನದಿನವೂ ಅನ್ವೇಷಿಸುತ್ತಲೇ ಇರುವವರು ಮಾತ್ರ ನಿಜದ ಧರ್ಮ ಅರಿಯಬಲ್ಲರು ಎಂದು ಜಿಡ್ಡು ಕೃಷ್ಣಮೂರ್ತಿ ಹೇಳುತ್ತಾರೆ. ಆದರೆ ಅಂತಹ ಒಳನೋಟ ಇನ್ನು ಪಡೆಯದ ನಾನು ಆಸ್ತಿಕ ಮನಸ್ಥಿತಿಯಲ್ಲಿ ಸಂಸ್ಕೃತಿಯ ನೆರಳಲ್ಲಿ ಇದ್ದು, ಸಾರ್ಥಕ ಬದುಕಿಗೆ ಬೇಕಾದ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವಂತಹ ಆಚರಣೆಗಳಲ್ಲಿ ಒಲವಳ್ಳವಳು. ಅಲ್ಲದೇ ನಮ್ಮದೇ ಆದ ಒಂದು ಸಂಸ್ಕೃತಿಯ ಉಳಿವು ಬೇಕೆನ್ನುವ ನಿಟ್ಟಿನಲ್ಲಿ ಪರಂಪರೆಯನ್ನು ಬೆಳೆಸಿಕೊಂಡು ಹೋಗುವುದು ಉತ್ತಮ. ನಕಾರಾತ್ಮಕ ಧೋರಣೆ ವೈಚಾರಿಕತೆ ಆಗುವುದಿಲ್ಲ. ಆದರೆ ಮೌಢ್ಯದಿಂದ ಕೂಡಿದ ಸಂಪ್ರದಾಯಗಳಿಗೆ ನನ್ನ ವಿರೋಧವಿದೆ. ಇಂತಹುಗಳೆಲ್ಲ ಹೆಚ್ಚಾಗಿ ರೂಢಿಗತವಾಗಿ ಬಂದ ಸಂಪ್ರದಾಯಗಳು. ಪರಂಪರೆಗೂ ಸಂಪ್ರದಾಯಕ್ಕೂ ವ್ಯತ್ಯಾಸಗಳು ಬಹಳ ಇವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ? ನಮ್ಮಲ್ಲಿ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಇದೆ. ನಮ್ಮದೇ ಆದ ಜೀವನ ವಿಧಾನವಿದೆ. ಆದರೂ ಇನ್ನೊಂದು ಬಗೆಯಲ್ಲಿ ಪ್ರಕ್ಷುಬ್ಧ ಸಾಂಸ್ಕೃತಿಕ ವಾತಾವರಣವನ್ನು ಅನುಭವಿಸುತ್ತಿದ್ದೇವೆ. ಆದರೂ ವಿವಿಧತೆ ಇದ್ದಲ್ಲಿ ಸಹಜವಾದ ಭಿನ್ನತೆ ಇದು. ಏಕಮುಖ ಸಂಚಲನೆಯನ್ನು ಕಂಡುಕೊಳ್ಳಲಾಗದ, ಭಿನ್ನತೆಯಲ್ಲಿಯೇ ಏಕತೆಯನ್ನು ಹೊಂದಬೇಕಾದ ರೀತಿಯನ್ನ ಪ್ರತಿಪಾದಿಸುವತ್ತ ನಾವೆಲ್ಲ ಮನಸ್ಸು ಮಾಡಬೇಕಾಗಿದೆ. ಸಾಹಿತ್ಯ ವಲಯದ ರಾಜಕಾರಣ ಹೇಗಿದೆ? ಇತ್ತೀಚೆಗೆ ಸಾಹಿತ್ಯ ವಲಯದ ರಾಜಕಾರಣ ರಾಜಕೀಯದ ರಾಜಕಾರಣಕ್ಕಿಂತ ತೀರಾ ಕೆಳಮಟ್ಟದ್ದು ಮತ್ತು ಅಪಾಯಕಾರಿ ನಿಲುವಿನದು. ಸಮಾನತೆ ಸಹಬಾಳ್ವೆಯ ಸ್ವಸ್ಥ ಸಮಾಜ ನಿಮರ್ಾಣ ಮಾಡಬೇಕಾದ ಜವಾಬ್ದಾರಿ ಮರೆತು ಪಂಥಗಳಲ್ಲಿ ಮೈಮರೆತು, ಪರಸ್ಪರ ಕೆರಚಾಟ, ಕೆಸರಾಟದಲ್ಲಿ ತೊಡಗಿದಂತಿದೆ. ಜಾತಿ ಪಂಥಗಳ ಮೇಲಾಟ ಇಲ್ಲೂ ಢಾಳಾಗಿ ಕಾಣುತ್ತಿದೆ. ದೇಶದ ಚಲನೆಯ ಬಗ್ಗೆ ಏನನಿಸುತ್ತದೆ…? ಈ ದೇಶ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಆದರೆ ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ಸದೃಢ ಸಮಾಜವನ್ನು, ಪ್ರಜಾಪ್ರಭುತ್ವದ ಬುನಾದಿ ಮೇಲೆ ನಿಂತ ಆಡಳಿತ ವ್ಯವಸ್ಥೆಯನ್ನು ಪೋಷಿಸುವ ಅಗತ್ಯವಿದೆ. ನೆಚ್ಚಿನ ಕವಿಗಳು ಕನ್ನಡ ಮತ್ತು ಇಂಗ್ಲೀಷನಲ್ಲಿ? ನನ್ನ ಇಷ್ಟದ ಕವಿ ಕುವೆಂಪು, ನವೋದಯದ ಕಾಲದಲ್ಲೂ ಬಂಡಾಯದ ದನಿ, ಹಾಗೇ ಕವಿ ಸುಬ್ರಾಯ ಚೊಕ್ಕಾಡಿಯವರು, ಮಹಿಳಾ ಕವಯತ್ರಿಯರಲ್ಲಿ ಮಾಲತಿ ಪಟ್ಟಣಶೆಟ್ಟಿ, ವೈದೇಹಿ, ಲಲಿತಾ ಸಿದ್ದಬಸವಯ್ಯ ಇವರೆಲ್ಲರ ಕವಿತೆಗಳು ಇಷ್ಟ.ಇಂಗ್ಲೀಷ ಸಾಹಿತ್ಯದಲ್ಲಿ ನನ್ನ ಮೆಚ್ಚಿನ ಕವಯತ್ರಿ ಎಮಿಲಿ ಡಿಕನ್ಸನ್- ಬದುಕಿನುದ್ದಕ್ಕೂ ಮುಂಚೂಣಿಗೆ ಬರೆದೇ ಎಲೆಮರೆಯ ಕಾಯಾಗಿಯೇ ಕಾವ್ಯ ಕಟ್ಟಿದ ಆಕೆ ಸತ್ತ ನಂತರ ಇಂದಿನ ಬಹುತೇಕ ಯುವ ಮನಸ್ಸುಗಳ ಮನಸ್ಸನ್ನು ಸೆರೆಹಿಡಿದದ್ದು. ಸಾವನ್ನು ಸಂಭ್ರಮಿಸಿದವಳು ಆಕೆ. ಹಾಗೇ ಜಾನ್ ಕೀಟ್ಸ್, ಡಿ ಎಚ್ ಲಾರೆನ್ಸ್ ಮತ್ತು ಡಬ್ಲೂ ಬಿ ಯೇಟ್ಸ್ ಕೂಡಾ ನೆಚ್ಚಿನ ಕವಿಗಳು ಸಾಹಿತ್ಯದ ಬಗ್ಗೆ ಕನಸುಗಳೇನು? ಸಾಹಿತ್ಯ ಬದುಕಿನ ಹಾದಿಗೆ ಒಂದಿಷ್ಟು ಬಲವನ್ನು ನೀಡುವಂತದ್ದು, ಶೋಷಿತ ವರ್ಗದ ದನಿ ಹಾಗೂ ಮಹಿಳಾ ದನಿ ಸಾಹಿತ್ಯದಲ್ಲಿ ಗಟ್ಟಿಯಾಗಲಿ, ಅದಕ್ಕೆ ತಕ್ಕ ಬೆಂಬಲ ಸಿಗಲಿ. ಇನ್ನು ನನ್ನ ಮಟ್ಟಿಗೆ ಅಂತರಂಗದ ತುಮುಲಗಳ ಇಡಿಯಾಗಿ ತೆರೆದುಕೊಳ್ಳಲು, ನಿಸೂರಾಗಲು ಇರುವ ಸಾಧನವಾಗಿ, ಸ್ನೇಹಿತೆಯಾಗಿ, ಕವಿತೆ ಕೈಹಿಡಿದಿದೆ. ಬರೆದದ್ದೆಲ್ಲ ಬೆಲ್ಲವೇ ಆಗಿಲ್ಲ. ಆದರೆ ಬದುಕನ್ನು ವಿಕಸನಗೊಳಿಸಿದೆ. ಜೀವನವನ್ನು ಸಂಭ್ರಮಿಸಲು ಕಲಿಸಿದೆ. ನೋವಿಗೆ ಮುಲಾಮಾಗಿದೆ. ಕನಸಿಗೆ ತೈಲವನ್ನೆರೆದಿದೆ. ರಾಗದ್ವೇಷಗಳಿಗೆ ಶಾಯಿಯಾಗಿದೆ.ಕವಿತೆಯಲ್ಲಿ ನನಗೆ ವಿಶ್ವಾಸವಿದೆ. ಈಚೆಗೆ ಓದಿದ ಕೃತಿಗಳ ಬಗ್ಗೆ ಹೇಳಿ ಎಚ್ ಎಸ್ ರಾಘವೇಂದ್ರರಾವ್ ಅನುವಾದಿಸಿರುವ ಜಿಡ್ಡು ಕೃಷ್ಣಮೂರ್ತಿಯ ಸಂಸ್ಕೃತಿ ಸಂಗತಿ. ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಕನ್ನಡಕ್ಕೆ ಅನುವಾದಿಸಿರುವ ಮರಾಠಿ ಸಾಹಿತಿ ವಿ.ಸ ಖಾಂಡೇಕರರ ಆತ್ಮಕಥನ ಒಂದು ಪುಟದ ಕಥೆ ಹಾಗೂ ಪ್ರತಿಭಾ ನಂದಕುಮಾರರ ಅನುದಿನದ ಅಂತರಗಂಗೆ ಇದಿಷ್ಟು ಇತ್ತೀಚೆಗೆ ಓದಿದ ಕೃತಿಗಳು. ನಿಮಗೆ ಇಷ್ಟದ ಕೆಲಸ ಓದು ಬರಹದ ಜೊತೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವುದು, ಬಾಲ್ಯದಲ್ಲಿ ತೋಟ ಗದ್ದೆ ಹಳ್ಳ ಕೊಳ್ಳ ಇಲ್ಲಿಯೇ ನನ್ನ ಬದುಕಿನ ಕನಸುಗಳು ಚಿಗುರಿದ್ದು. ಹಾಗೇ ಅಡುಗೆ ಮಾಡುವುದು, ಮನೆಯನ್ನು ಒಪ್ಪ ಓರಣಗೊಳಿಸುವುದು. ನಿಮ್ಮ ಇಷ್ಟದ ಸಿನೇಮಾ ? ಇದೇ ಅಂತ ಹೇಗೆ ಹೇಳಲಿ. ಕುಬಿ ಮತ್ತು ಇಯಾಲ್, ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಹೀಗೇ ಸುಮಾರು ಇವೆ. ಮರೆಯಲಾಗದ ಘಟನೆ ಮೊದಲ ಬಾರಿ ಊರು ಬಿಟ್ಟು ನೌಕರಿಗೆ ಹೋದಾಗ ಹೊಸ ಸ್ಥಳದಲ್ಲಿ ಕಂಡ ಕಸದ ತೊಟ್ಟಿಯಲ್ಲಿ ಎಸೆದ ನವಜಾತ ಹೆಣ್ಣು ಶಿಶುವನ್ನು ನೋಡಿದ್ದು, ಸುತ್ತಮುತ್ತ ಹತ್ತಾರು ದೌರ್ಜನ್ಯಗಳ ಕಂಡಿದ್ದಿದೆ. ಹೆತ್ತವರ ಸಾವನ್ನು ನೋಡಿದ್ದಿದೆ. ಸಂಬಂಧಿಗಳ ಅಕಾಲ ಮರಣ ನೆನಪಾದರೆ ನೋವು ಮಡುಗಟ್ಟುತ್ತದೆ ಇವೆಲ್ಲ ಸದಾ ನೆನಪಿನಲ್ಲಿ ಉಳಿಯುವಂತಹವು. ******************************************* ********************************************* ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಮುಖಾಮುಖಿ Read Post »

ಕಾವ್ಯಯಾನ

ಕಾವ್ಯಯಾನ

ಅವನಿದ್ದಾನೆ ಮಾಲತಿ ಶಶಿಧರ್ ನನಗಾಗಿ ನೀನುದುಃಖಿಸುವುದೇನು ಬೇಡನಾನೀಗ ನಿರಾಳಅವನು ಕೂಗಿದ, ದನಿ ಹಾದುಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆಬೀಳುವ ಮಾತಿಲ್ಲಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇಬಿಟ್ಟು ಹೊರಟದ್ದಾಗಿದೆಅವನು ದಾರಿಯುದ್ದಕ್ಕೂ ಜೊತೆಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆಮುದ್ದಿಸುತ್ತಾನೆಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗಎಳೆದುಕೊಂಡು ಹೋಗಿಮರ ಸುತ್ತುವ ಆಟಆಡಿಸುತ್ತಾನೆನಾನು ಅರೆಬರೆ ಬರೆದು ಬಿಟ್ಟಕವಿತೆಗಳ ಕೈಗಿಟ್ಟು ಬರೆಸುವನುಕವಿತೆ ಪೂರ್ಣವಾಗುವವರೆಗೂಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿನಿಲ್ಲುವನುಅವನು ಶಾಂತಿಯ ಪ್ರತೀಕಕೆಟ್ಟದಿನಗಳಿಗೆ ಅಗುಳಿ ಇಟ್ಟುಶಾಂತಿ ಮಂತ್ರ ಪಠಿಸುವನನಗೆ ಅವನೇ ಮಂತ್ರದಂಡನನ್ನ ತಲೆಯ ಮೇಲೀಗ ಹೊರೆ ಇಲ್ಲಎಲ್ಲವೂ ಅವನ ಉಸಿರ ರಭಸಕೆತೂರಿ ಹೋಗಿದೆನನ್ನ ಕುರುಳಲ್ಲೀಗ ಮೊಲ್ಲೆ ಮೊಗ್ಗಪರಿಮಳಇಳಿ ಸಂಜೆ ಹೊತ್ತಿಗೆ ಅಂದವನೋಡಿ ಹಾಡಿ ಹೊಗಳುತ್ತಾನೆನೀನು ನನಗಾಗಿ ದುಃಖಿಸುವುದೇನುಬೇಡ ನನ್ನೊಡನೆ ಈಗ ಅವನಿದ್ದಾನೆಆತ್ಮವಿಶ್ವಾಸ.. ನನಗಾಗಿ ನೀನುದುಃಖಿಸುವುದೇನು ಬೇಡನಾನೀಗ ನಿರಾಳಅವನು ಕೂಗಿದ, ದನಿ ಹಾದುಬಂದತ್ತ ಹೆಜ್ಜೆ ಹಾಕುತ್ತಾ ಹೋಗಿದ್ದಾಗಿದೆಅಲ್ಲಿ ಅವನು ನನ್ನ ಕೈ ಹಿಡಿದಿದ್ದಾನೆಬೀಳುವ ಮಾತಿಲ್ಲಬೆನ್ನು ತಿರುಗಿಸಿ ನಡಿಗೆ ಶುರುವಿಟ್ಟಿದ್ದೇನೆಎಲ್ಲಾ ತಾಪತ್ರಯಗಳ ನಿನ್ನ ಅಡಿಗಳಲ್ಲೇಬಿಟ್ಟು ಹೊರಟದ್ದಾಗಿದೆಅವನು ದಾರಿಯುದ್ದಕ್ಕೂ ಜೊತೆಇದ್ದು ನಗಿಸುತ್ತಾನೆ, ಪ್ರೀತಿಸುತ್ತಾನೆಮುದ್ದಿಸುತ್ತಾನೆಒಮ್ಮೊಮ್ಮೆ ಬೇಸರದಿ ಕುಸಿದು ಕೂತಾಗಎಳೆದುಕೊಂಡು ಹೋಗಿಮರ ಸುತ್ತುವ ಆಟಆಡಿಸುತ್ತಾನೆನಾನು ಅರೆಬರೆ ಬರೆದು ಬಿಟ್ಟಕವಿತೆಗಳ ಕೈಗಿಟ್ಟು ಬರೆಸುವನುಕವಿತೆ ಪೂರ್ಣವಾಗುವವರೆಗೂಕೆನ್ನೆಯ ಕೆನ್ನೆಗೊತ್ತಿ ತೋಳಲಿ ಬಳಸಿನಿಲ್ಲುವನುಅವನು ಶಾಂತಿಯ ಪ್ರತೀಕಕೆಟ್ಟದಿನಗಳಿಗೆ ಅಗುಳಿ ಇಟ್ಟುಶಾಂತಿ ಮಂತ್ರ ಪಠಿಸುವನನಗೆ ಅವನೇ ಮಂತ್ರದಂಡನನ್ನ ತಲೆಯ ಮೇಲೀಗ ಹೊರೆ ಇಲ್ಲಎಲ್ಲವೂ ಅವನ ಉಸಿರ ರಭಸಕೆತೂರಿ ಹೋಗಿದೆನನ್ನ ಕುರುಳಲ್ಲೀಗ ಮೊಲ್ಲೆ ಮೊಗ್ಗಪರಿಮಳಇಳಿ ಸಂಜೆ ಹೊತ್ತಿಗೆ ಅಂದವನೋಡಿ ಹಾಡಿ ಹೊಗಳುತ್ತಾನೆನೀನು ನನಗಾಗಿ ದುಃಖಿಸುವುದೇನುಬೇಡ ನನ್ನೊಡನೆ ಈಗ ಅವನಿದ್ದಾನೆಆತ್ಮವಿಶ್ವಾಸ..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಮ್ಮ ಹಾಗೆ ಬರೆಯಲಾಗುವುದಿಲ್ಲ ವಿ.ಎಸ್.ಶಾನಬಾಗ್ ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲನಿಮ್ಮ ಬಗ್ಗೆ ನೀವು ಬರೆದ ಹಾಗೆನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲನೀವು ಹೇಳಿದಹಾಗೆನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲಒರೆಸಿ ಹಾಕಿದೆ ಎಲ್ಲ ಅವನು ಅವಳ ಹಳೆಯ ಪ್ರೀತಿಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿಎಲ್ಲ ಎಲ್ಲ ಎಲ್ಲ ಅನುರಾಗಕ್ಕೆಅವಳನ್ನು ಕೂಡಲಾಗುವುದಿಲ್ಲಅವನನ್ನು ಕಳೆಯಲಾಗುವುದಿಲ್ಲಇವರ ಬಗ್ಗೆನೀವು ಬರೆದಹಾಗೆನನಗೆ ಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಅವ ಅವಳ ನೆನೆದ ಹಾಗೆಅವಳು ಅವನು ನಡೆದಹಾಗೆಒದ್ದೆ ನಿಂತ ಅವರನ್ನು ಕವಿತೆಯಲ್ಲಿಕರೆಯಲಾಗುವುದಿಲ್ಲಆದ್ದರಿಂದ ನಿಮ್ಮ ಹಾಗೆಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಆದ್ದರಿಂದ ನಾನು ನಿಮ್ಮಗುಂಪಿನಲ್ಲಿ ಸಲ್ಲನೀವು ಬರೆದದ್ದೇ ಕವಿತೆತೆರೆದದ್ದೇ ಕಥೆತಾಳೆಯಾಗದಿದ್ದರೂ ಯೋಚನೆ, ರೂಪಕಕೂರಿಸಿ ಶಬ್ಧಗಳ ಜಾತಕಪೀತಿಯಲ್ಲಿ ಕೂಡಿದ ಕ್ಷಣಗಳಶಬ್ದಗಳಲ್ಲಿ ತುಂಬಿಸಲಾಗುವುದಿಲ್ಲಎಲ್ಲ ಅನುರಾಗಕೆ ಸಲ್ಲ ನಿಮ್ಮದೇ ಆದ ನುಡಿಕಟ್ಟುಗಳಿಂದನೀವೆಲ್ಲ ಕವಿತೆಯಬಗ್ಗೆ ಹೇಳುತ್ತಲೇ ಇರುವಾಗನಿಮ್ಮನ್ನು ಕೇಳಿದ್ದು ಹೆಚ್ಚು,ಬರೆದದ್ದು ಬರೇ ಹುಚ್ಚು ಅವನು ಅವಳ ಬಗ್ಗೆ ಸದಾ ಬರೆಯುವ ನಿಮ್ಮಕಾವ್ಯ,ಲಯ,ಉಪಮೆ ರೂಪಕ ಪ್ರತಿಮೆ ಪ್ರತಿಭೆಬೆನ್ನಲ್ಲೇ ಹೊತ್ತ ನಿಮಗೆನಿಮ್ಮದೇ ನುಡಿಕಟ್ಟು ಹೇಳಿದ್ದೆಲ್ಲ ಕವಿತೆನೀವು ಬರೆದದ್ದನ್ನೆಲ್ಲ ಪ್ರಕಟಿಸುವವು ಎಲ್ಲನಿಮ್ಮ ಹಾಗೆ ಬರೆದರೂ ಓದುವವರಿಲ್ಲಪ್ರೀತಿಗೆ ಎಲ್ಲ ನಮ್ಮಂತೆ ಕವಿತೆಯೂ ಪ್ರೀತಿಯಲ್ಲಿಪ್ರಕಟವಾಗುತ್ತವೆ ಕೆಲವರದು ಖಾಸಗಿಸಾರ್ವಜನಿಕವಾಗಲು ಸಲ್ಲಆದ್ದರಿಂದಲೇ ನಿಮ್ಮ ಹಾಗೆ ಬರೆಯುವುದಿಲ್ಲನಿಮ್ಮ ಸಲ್ಲದ ಪ್ರೀತಿಗೆ ಎಲ್ಲ ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇಳೆಯ ಸ್ವಗತ ಕಲಾ ಭಾಗ್ವತ್ ಹಕ್ಕಿ ಹಾರಾಡಿಗೂಡ ಸೇರುವ ಸಂಜೆಚಿಲಿಪಿಲಿಗಳ ಸದ್ದು ಗದ್ದಲ ತಾನೇ ಗೆದ್ದೆನೆಂಬ ದಣಿವುಹಿಗ್ಗಿ ಹಿಂದಿಕ್ಕಿ ಓಡಿಹುದುಕರುಳ ಕುಡಿಗಳ ಸಿದ್ಧಿ ಸಂಭ್ರಮದಕಥೆಗಳಿಗೆ..ಮೆಲುದನಿಯಲೇ ಉತ್ತರಒಳಗೊಳಗೆ ಏರು ಎತ್ತರ! ಪಿಸುಮಾತಿನ ರಸಘಳಿಗೆ,ಕುಸುರಿ ಮಾಡಿದೆ ಕನಸ,ಪಡುವಣದ ಕೆಂಪಂಚಿನಲಿ..ಹೋಗಿಯೇ ಬಿಟ್ಟನಾಳೆ ಬರುವೆನೆಂದು!ಇಲ್ಲೀಗ ಕಗ್ಗತ್ತಲು.. ಕೈಯೊಂದು ಚಾಚಿತು ಬಾಎಂದು ಬೆಳಕ ತೋರಲು..ಆಹಾ.. ಎಂತಹ ಶುಭ್ರ !ಎಂದಿನಂತಲ್ಲ ಇಂದು.. ಮಾಸಕೊಮ್ಮೆಯಾದರೂಮರೆಯಾದರೇ ಚಂದಈ ಚಂದ್ರಮ..ಮರುದಿನ ತುಸು ಮಾತ್ರ ನೋಡಲು.ಪುಟ್ಟ ಮಗುವಿಗೆಬೇಕಲ್ಲವೇ ಊಟದಾಟಕೆ?ಕರುಣೆಯೋ, ಒಲುಮೆಯೋ..ಇಣುಕಿದರೆ ಸೆಳವೊಂದಿಹುದು ದಿನದಂತ್ಯದ ಶಾಂತ, ಹಸಿತಅವನ ಮೊಗವೊಂದೇ ಸಾಕುಹಂಚಿಕೊಳ್ಳಲು ಸಿಹಿ-ಕಹಿಯ ಬೆಳಗಾದರೆ ಬಂದೇ ಬಿಡುವನವನುಬಡಿದೆಬ್ಬಿಸಲುಮಾತಿಗೆ ತಪ್ಪದೆ,ಮೂಡಣವ ರಂಗೇರಿಸಿ..ತಿಳಿಗೊಳದಲಿ ತೋರಿ ಪ್ರತಿಬಿಂಬಹಸಿರಿಗಷ್ಟೇ ಕೇಳುವುದುಕಿವಿಯಲೂದಿದಉಸಿರಿನ ಸ್ವರ..ಯಾಕೆ ಆಯಾಸ? ಮುಸುಕ ಸರಿಸಿ, ಮುಖವರಳಿಸಿಹಸಿ ಕನಸಲಿ ಸ್ವಾಗತಿಸಲೇಮತ್ತೆ ಸಂಜೆಯ?.. ************************************

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಸಿರಿನೆಡೆಗೆ ನಮ್ಮನ್ನು ನಡೆಸುವ ‘ಹೂ ಹಸಿರಿನ ಮಾತು’ ಹೂ ಹಸಿರಿನ ಮಾತುಲೇಖಕಿ : ಡಾ.ಎಲ್.ಸಿ.ಸುಮಿತ್ರಾಪ್ರಕಾಶಕರು : ಅಂಕಿತ ಪುಸ್ತಕ, ಬೆಂಗಳೂರುಪ್ರಕಟಣಾ ವರ್ಷ :೨೦೧೨ಪುಟಗಳು : ೯೬ ಬೆಲೆ : ರೂ.೧೨೦ ಹಿರಿಯ ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಅವರ ‘ಹೂ ಹಸಿರಿನ ಮಾತು’ ಸಾರ್ವಕಾಲಿಕ ಪ್ರಸ್ತುತಿಯುಳ್ಳ ಒಂದು ಕೃತಿ.  ಎಲ್ಲೆಲ್ಲೂ ಕಾಡು ಕಡಿದು, ಗುಡ್ಡಗಳನ್ನು  ಅಗೆದು, ಗದ್ದೆಗಳನ್ನು ಮುಚ್ಚಿ ಕಾಂಕ್ರೀಟು ಕಾಡುಗಳನ್ನಾಗಿ ಪರಿವರ್ತಿಸಿ ನಾವು ಪ್ರಕೃತಿಯ ಮುನಿಸಿಗೆ  ತುತ್ತಾಗುತ್ತಿರುವ ಇಂದು ಎಚ್ಚೆತ್ತುಕೊಳ್ಳಬೇಕಾದ ಕಾಲ. ಬಂದಿರುವ ಇಂದಿನ ಸಂಧರ್ಭದಲ್ಲಿ ಪರಿಸರದ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರೂ ಓದಬೇಕಾದ ಕೃತಿಯಿದು. ಸಾಹಿತ್ಯದೊಂದಿಗೆ ಉದ್ಯಾನ ಕಲೆ ಮತ್ತು ಹಸಿರುಪ್ರಿಯತೆಗಳನ್ನೂ ಮೈಗೂಡಿಸಿಕೊಂಡಿರುವ ಮಲೆನಾಡಿನ ತೀರ್ಥಹಳ್ಳಿಯ ಸುಮಿತ್ರಾ ಅವರು ಸ್ವತಃ ಕಾಡುಮೇಡುಗಳನ್ನು ಸುತ್ತಿ ಅಳಿವಿನಂಚಿನಲ್ಲಿರುವ ಅಪರೂಪದ ಗಿಡಗಳ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿ ಸಸ್ಯಶಾಸ್ತ್ರಜ್ಞರೊಂದಿಗೆ ಚರ್ಚಿಸಿ ಪುಸ್ತಕಗಳನ್ನು ಪರಾಮರ್ಶಿಸಿ ಚಿಂತನೆ ನಡೆಸಿ  ಈ ಪುಸ್ತಕವನ್ನು ಬರೆದಿದ್ದಾರೆ. ಅವರ ನಿರೂಪಣೆಯಲ್ಲಿ ವೈಜ್ಞಾನಿಕ ವಿವರಗಳೊಂದಿಗೆ ಸಾಹಿತ್ಯದ ಸೊಗಡೂ ಇರುವುದರಿಂದ  ಬಹಳ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ‘ಹೂ ಹಸಿರಿನ ಮಾತಿ’ನಲ್ಲಿ ೨೩ ಜಾತಿಯ ಅಪರೂಪದ, ಪರಂಪರಾಗತ ಹಿನ್ನೆಲೆಯ ಸಸ್ಯಗಳ ಕುರಿತಾದ ವಿವರಗಳಿವೆ. ಹಲವು ಸಸ್ಯಗಳ ಉಪಪ್ರಭೇದಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ. ಪ್ರತಿಯೊಂದು ಗಿಡ-ಮರ-ಬಳ್ಳಿಗಳ ಮೂಲ, ಅವುಗಳ ಬೇರು-ಕಾಂಡ-ಕೊಂಬೆ-ರೆಂಬೆಗಳು, ಎಲೆ, ಹೂವು, ಹಣ್ಣು, ಕಾಯಿ, ಬೀಜಗಳ ಬಾಹ್ಯ ಸ್ವರೂಪದ ವಿವರಣೆಗಳಿಂದ ಆರಂಭಿಸಿ ಅವುಗಳ ಸಸ್ಯಶಾಸ್ತ್ರೀಯ ಹೆಸರುಗಳು,  ಕನ್ನಡದಲ್ಲಿ ವಾಡಿಕೆಯಲ್ಲಿರುವ ಹೆಸರುಗಳನ್ನು ನಮೂದಿಸುತ್ತ ಮುಂದೆ ಅವುಗಳ ಸಾಮಾನ್ಯ ಉಪಯೋಗಗಳು, ಅವುಗಳ ಔಷಧೀಯ ಗುಣಗಳು, ಬೀಜಗಳ ಲಭ್ಯತೆ, ಪರಾಗಸ್ಪರ್ಷ, ಯಾವುದರ ಹೂಗಳ ಮೇಲೆ ಜೇನು ಹುಳಗಳು ಕುಳಿತು ಜೇನು ಉತ್ಪಾದನೆ ಮಾಡಲು ಸಹಾಯಕವಾಗುವ ಅಪಾರ ಪ್ರಮಾಣದ ಸಿಹಿಯಿದೆ, ಯಾವುವು ನಿತ್ಯಹರಿದ್ವರ್ಣದ ಸಸ್ಯಗಳು ಎಂದು ಮುಂತಾದ  ಮಾಹಿತಿಗಳನ್ನು ಕೊಡುತ್ತಾರೆ. ಅಲ್ಲದೆ  ಬೇರೆ ಬೇರೆ ಗಿಡಗಳನ್ನು ಪುನರುತ್ಪಾದನೆ ಮಾಡುವುದು ಹೇಗೆ, ಬೀಜಗಳ ಮೂಲಕವೋ, ಬೇರುಗಳ ಮೂಲಕವೋ, ಗೆಲ್ಲುಗಳನ್ನು ನೆಡುವುದರ ಮೂಲಕವೋ ಎಂಬುದನ್ನೂ ತಿಳಿಸುತ್ತಾರೆ.   ಮತ್ತು ಹೆಚ್ಚು ಉಪಯುಕ್ತ ಗಿಡಗಳು ಹೇಗೆ ಅತಿಯಾದ ಬಳಕೆಯಿಂದಾಗಿ ಅಳಿವಿನಂಚಿಗೆ ಬಂದದ್ದರಿಂದ ಅವುಗಳನ್ನು ತಂದು ಪುನಃ ನೆಟ್ಟು ಬೆಳೆಸುವ ಅನಿವಾರ‍್ಯತೆಯಿದೆ ಎಂಬುದನ್ನೂ ಹೇಳುತ್ತಾರೆ. ಲೇಖಕಿ ತಮ್ಮಮುನ್ನುಡಿಯಲ್ಲಿ ಹೇಳುವಂತೆ ಈ ಕೃತಿಯಲ್ಲಿ ಅವರು ನೀಡುತ್ತಿರುವ ವಿವರಗಳು ಇಂದು ತೀರಾ ಅಪರೂಪವಾಗಿರುವ, ಇವತ್ತಿನ ತಲೆಮಾರಿನ ಯುವಕ-ಯುವತಿಯರಿಗೆ ಕೇಳಿಯೂ ಗೊತ್ತಿಲ್ಲದ ಸಸ್ಯಗಳ ಕುರಿತು ಮಾತ್ರ.  ಸುರಗಿ, ಅಶೋಕ, ರಂಜ, ಹೊಳೆ ದಾಸವಾಳ, ಹಾಲಿವಾಣ, ಕೇದಿಗೆ, ಮಾಧವಿಲತೆ, ಪಾರಿಜಾತ ಮೊದಲಾದ, ಹಿಂದೆ ನಾಡಿನ ಎಲ್ಲರ ಮನೆಗಳ ತೋಟ, ಹಿತ್ತಲು-ಬಯಲು-ಹೊಳೆಬದಿಗಳಲ್ಲಿ ಕಾಣಸಿಗುತ್ತಿದ್ದು ಪರಿಮಳ ಬೀರುತ್ತಿದ್ದ ಹೂಗಿಡಗಳು, ಸೀತಾಳೆ, ನಾಗಸಂಪಿಗೆ, ಕುರಿಂಜಿ ಹೂ, ನರ‍್ವಾಲ, ಕಾಡಿನ ದೀಪ, ಕಂಚುವಾಳ ಕಕ್ಕೆ, ಮೊದಲಾದ ಕಾಡು ಹೂಗಳು, ಶಾಲ್ಮಲಿ, ಇಪ್ಪೆಮರ,ಬೂರುಗ, ಮುತ್ತುಗ ಮೊದಲಾದ ಬೃಹತ್ ವೃಕ್ಷಗಳನ್ನು  ಲೇಖಕಿ ಓದುಗರಿಗೆ ಸಮೃದ್ಧ ವಿವರಗಳೊಂದಿಗೆ ಪರಿಚಯಿಸುತ್ತಾರೆ. ವಿದೇಶಿ ಮೂಲದವಾಗಿದ್ದು ಇಲ್ಲಿ ನೆಲೆಯೂರಿರುವ ಹೂಬಾಳೆ, ಆಲ್ಪೀನಿಯಾ,ಬ್ಲೀಡಿಂಗ್ ಹರ‍್ಭ್  ಮೊದಲಾದ ಕೆಲವು ಸಸ್ಯಗಳೂ ಇಲ್ಲಿ ಜಾಗ ಪಡೆದಿವೆ. ಹಲವಾರು ಗಿಡಮರಗಳ ಬಗ್ಗೆ ಮಾತನಾಡುವಾಗ ಲೇಖಕಿ ತಮ್ಮ ಬಾಲ್ಯದಲ್ಲಿ ಅವುಗಳ ಅಂದ ಚೆಂದ ಪರಿಮಳಗಳನ್ನು ಆಸ್ವಾದಿಸಿದ ಬಗ್ಗೆ , ಹೂಗಳನ್ನು ಮುಡಿಗೇರಿಸಿಕೊಂಡು ಖುಷಿಪಟ್ಟಿದ್ದರ ಬಗ್ಗೆ , ಹಬ್ಬ ಹರಿದಿನಗಳಂದು ಆಚರಣೆಯ ವಿಧಿಗಳಲ್ಲಿ ಅವುಗಳ ಹೂವು-ಹಣ್ಣು-ಎಲೆಗಳನ್ನು ಬಳಸಿಕೊಂಡದ್ದರ ಬಗ್ಗೆ,  ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ತೋರಣ ಕಟ್ಟುತ್ತಿದ್ದುದರ ಬಗ್ಗೆ ಸಂಭ್ರಮದಿಂದ ನೆನಪಿಸಿಕೊಳ್ಳುತ್ತ ನಿರೂಪಣೆಯ ನಡುನಡುವೆ ವೈಯಕ್ತಿಕ ಸ್ಪರ್ಶ ಕೊಡುತ್ತಾರೆ.  ಸಾಹಿತ್ಯದ ಪ್ರಾಧ್ಯಾಪಕಿಯಾದ್ದರಿಂದ ಸಹಜವಾಗಿ  ಅವರಿಗೆ ಪಂಪ, ರನ್ನ, ಜನ್ನ, ಬೇಂದ್ರೆ, ಕುವೆಂಪು, ಶಿವರುದ್ರಪ್ಪ ಮೊದಲಾದ ಕವಿಗಳ ಕವಿತೆಗಳಲ್ಲಿ ಆ ಗಿಡ-ಮರ-ಹೂವುಗಳ ಹೆಸರು ಬರುವುದು ಸಾಂಧರ್ಭಿಕವಾಗಿ  ನೆನಪಾಗುತ್ತದೆ. ರಾಮಾಯಣ, ಮಹಾಭಾರತ, ತಮಿಳಿನ ಸಂಘಂ ಕಾವ್ಯಗಳನ್ನೂ ಅವರು ಉದ್ಧರಿಸುತ್ತಾರೆ. ಒಟ್ಟಿನಲ್ಲಿ ಲೇಖಕಿಯ ಓದಿನ ವಿಸ್ತಾರಕ್ಕೆ ಈ ಎಲ್ಲ ಉದಾಹರಣೆಗಳು ಸಾಕ್ಷಿಯಾಗುತ್ತವೆ. ‘ಹೂ ಹಸಿರಿನ ಮಾತು’ ಅನೇಕ ವೈಶಿಷ್ಟ್ಯಗಳುಳ್ಳ ಕೃತಿ.  ಮೊತ್ತ ಮೊದಲಾಗಿ ಇದು ಸಾಹಿತ್ಯ-ವಿಜ್ಞಾನಗಳ ಸಂಗಮ. ಪರಂಪರಾಗತವಾಗಿ ನಮ್ಮಲ್ಲಿ ಬೆಳೆದುಕೊಂಡು ಬಂದ ಗಿಡಮರಗಳು ಅಳಿದು ಹೋಗಲು ಬಿಡಬಾರದೆಂಬ  ಕಾಳಜಿ ಇದರ ಹಿಂದೆ ಇದೆ. ನಮ್ಮ ಪರಿಸರವು ಗಿಡಮರಗಳನ್ನು ಕಳೆದುಕೊಂಡು ಬೋಳಾಗಿ  ಮನುಷ್ಯನ ಆಧುನಿಕತೆಯ ಹುಚ್ಚಿಗೆ ಬಲಿಯಾಗಬಾರದು ಎಂಬ ಕಾಳಜಿ ಇಲ್ಲಿದೆ.  ನಿಸರ್ಗದ ಮಕ್ಕಳಾದ ನಾವು ನಿಸರ್ಗವನ್ನು ಉಳಿಸಿಕೊಂಡು ಹೂ ಹಸಿರುಗಳ ಜತೆಗೆ ಸದಾ ಮಾತುಕತೆ ನಡೆಸುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ  ಒಳ್ಳೆಯದೆನ್ನುವ ಪರೋಕ್ಷವಾದ ಸಂದೇಶವೂ ಇದರೊಳಗಿದೆ. ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಇದರ ಹಿಂದೆ ಲೇಖಕಿಯ ಅಪಾರ ಪರಿಶ್ರಮವಿದೆ. ಯಾಕೆಂದರೆ ಇದು ಒಂದೆಡೆ ಅಲುಗಾಡದೆ ಕುಳಿತು ಬರೆದದ್ದಲ್ಲ. ಆಗಲೇ ಹೇಳಿದಂತೆ ಇದರ ಹಿಂದೆ ಬಹಳಷ್ಟು ಕ್ಷೇತ್ರಕಾರ‍್ಯ ಮತ್ತು ಸಂಶೋಧನೆಗಳಿವೆ. ಸಸ್ಯಶಾಸ್ತ್ರವನ್ನು ಒಂದು ಪಠ್ಯ ವಿಷಯವನ್ನಾಗಿ ತೆಗೆದುಕೊಂಡವರಿಗೆ ಮಾತ್ರವಲ್ಲದೆ ಸಾಮಾನ್ಯ ಓದುಗರಿಗೂ ಖುಷಿ ಕೊಡಬಲ್ಲ ,ಉಪಯುಕ್ತವಾಗ ಬಲ್ಲ ಮತ್ತು ಅರಿವು ಮೂಡಿಸಬಲ್ಲ ಒಂದು ಕೃತಿಯಿದು. ಅಂಕಿತ ಪುಸ್ತಕವು ೨೦೧೨ರಲ್ಲಿ ಮುದ್ರಿಸಿ ಪ್ರಕಟಿಸಿದ  ಕೃತಿಗೆ ಕಥೆಗಾರ್ತಿ ಉಷಾ ಪಿ.ರೈಯವರು ಬರೆದು ಅಪಾರ ಅವರು ವಿನ್ಯಾಸ ಮಾಡಿದ ಸುಂದರವಾದ ಮುಖಪುಟ ಚಿತ್ರವು ಪುಸ್ತಕದ ಅಂದವನ್ನು ಹೆಚ್ಚಿಸಿದೆ.         ********************************* ಡಾ.ಪಾರ್ವತಿ ಜಿ.ಐತಾಳ್        

ಪುಸ್ತಕ ಸಂಗಾತಿ Read Post »

You cannot copy content of this page

Scroll to Top