ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಸಮಯ ಅಮೂಲ್ಯ ಸಮಯ ಅಪವ್ಯಯ ಮಾಡದಿರುವುದು ಹೇಗೆ? ಜಯಶ್ರೀ.ಜೆ.ಅಬ್ಬಿಗೇರಿ. ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು. ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’ ಎನ್ನುವ ಬೆಂಜಮಿನ್ ಫ್ರಾಂಕ್ಲಿನ್ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅದನ್ನು ನಂಬುತ್ತೇವೆ. ಆದರೂ ಸಮಯದ ಅಪವ್ಯಯದ ಬಗ್ಗೆ ಹೆಚ್ಚು ಒತ್ತನ್ನು ನೀಡುವುದೇ ಇಲ್ಲ. ಬಹಳ ಸಲ ಮನೋರಂಜನೆಗಳಲ್ಲಿ ಅಮೂಲ್ಯ ಸಮಯ ಹಾಳುಮಾಡುತ್ತೇವೆ. ಇದು ಮನಸ್ಸಿಗೆ ಮುದ ನೀಡುತ್ತದೆಯಾದರೂ ದೀರ್ಘ ಸಮಯದ ನಂತರ ಇದರ ದುಷ್ಪರಿಣಾಮ ಆಗದೇ ಇರದು. ಸಮಯದ ಅಪವ್ಯಯವನ್ನು ತಡೆಯುವ ಮುನ್ನ ನಾವೇಕೆ ವ್ಯರ್ಥ ಸಮಯ ಕಳೆಯುತ್ತಿದ್ದೇವೆಂದು ತಿಳಿಯುವುದು ಮುಖ್ಯ. ಸೋಲಿನ ಭಯ ಪರಿಣಾಮಕಾರಿ ಕೆಲಸಗಳ ಆಧಾರದ ಮೇಲೆ ಸಮಾಜವು ಕೆಲವು ಉನ್ನತ ಸ್ತರಗಳನ್ನು ಗುರುತಿಸಿರುತ್ತದೆ. ಸೋತ ಹೆಸರನ್ನು ಪಡೆದುಕೊಳ್ಳುವ ನೋವು ಯಾರಿಗೂ ಬೇಕಿಲ್ಲ. ಹೀಗಾಗಿ ಏನೂ ಮಾಡದೇ ಇರುವುದು ಒಳಿತು ಎಂದೆನಿಸಿಬಿಡುತ್ತದೆ. ಸೋಲಿನ ಭಯ ಇರುವವರಿಗೂ ವ್ಯರ್ಥ ಸಮಯ ಕಳೆಯುವಿಕೆ ಮತ್ತು ಕೆಲಸ ಮುಂದೂಡುವಿಕೆಯು ಅದರೊಂದಿಗೆ ಅಂಟಿಕೊಂಡಿರುತ್ತವೆ. ಆದರೆ ಇದು ಬದುಕಿನಲ್ಲಿ ಸಂಪರ‍್ಣ ವೈಫಲ್ಯತೆಯನ್ನು ಮನೆ ಮಾಡಿಸುವಷ್ಟು ಅಪಾಯಕಾರಿ. ಭವಿಷ್ಯವನ್ನು ನಿರೀಕ್ಷಿಸುವ ಮಟ್ಟಕ್ಕೆ ಕರೆದೊಯ್ಯುತ್ತದೆ. ಕರ‍್ಯದ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನ ನೀಡಿದರೆ ಸೋಲಿನ ಭಯ ಕಡಿಮೆಯಾಗುವುದು. ಪರಿಪರ‍್ಣತೆಯ ಮುಂದಾಲೋಚನೆಯಲ್ಲಿ ತಡೆ ಹಿಡಿದುಕೊಳ್ಳದಿರಿ.’ಯಶಸ್ವಿ ವ್ಯಕ್ತಿಯು ವಿಫಲರು ಮಾಡಲು ಇಷ್ಟಪಡದದ್ದನ್ನೇ ಮಾಡುವ ಅಭ್ಯಾಸ ಹೊಂದಿರುತ್ತಾರೆ.’ಎನ್ನುವ ಇ.ಎಂ.ಗ್ರೇ ಮಾತುಗಳನ್ನು ಅರ್ಥೈಸಿಕೊಳ್ಳಬೇಕು.. ನಿರುತ್ಸಾಹ ಅನಾರೋಗ್ಯ ಜೀವನ ಶೈಲಿಯುಳ್ಳವರಲ್ಲಿ ಕಡಿಮೆ ಶಕ್ತಿ ಹೆಚ್ಚು ನಿರುತ್ಸಾಹ ಕಂಡು ಬರುತ್ತದೆ. ಸಾಧಿಸಲು ಮನಸ್ಸೇ ಆಗುವಂಥ ಮನೋಭಾವದಲ್ಲಿ ಸಿಲುಕಿ ಹಾಕಿಕೊಂಡು ಬಿಡುತ್ತಾರೆ. ಇದು ಸಮಯದ ಅಪವ್ಯಯಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಜೀವನ ಶೈಲಿಯು ದಣಿವನ್ನು,ಜಡತ್ವನ್ನು ಹೆಚ್ಚಿಸುವುದಲ್ಲದೇ ನಿಷ್ಕಿçÃಯರನ್ನಾಗಿಸುತ್ತದೆ.ನಿರುತ್ಸಾಹದ ಹಿಂದಿನ ಮೂಲ ಕಾರಣವನ್ನು ಹುಡುಕಲೇಬೇಕು. ಅಂದಾಗ ಮಾತ್ರ ಮುಂದೆ ಹೆಜ್ಜೆ ಇಡಲು ಅನುವಾಗುತ್ತದೆ. ಇದಕ್ಕೆ ಯಶಸ್ವಿ ವ್ಯಕ್ತಿಗಳು ಕಂಡು ಕೊಂಡಿರುವ ದಾರಿಯೆಂದರೆ ಮುಂಜಾನೆ ಹೊತ್ತಿನಲ್ಲಿ ವಾಕಿಂಗ್ ಜಾಗಿಂಗ್ ಮಾಡುವುದು. ಇದು ದಿನವೆಲ್ಲ ಉತ್ಸಾಹ ಭರಿತರನ್ನಾಗಿಸುತ್ತದೆ. ದೈಹಿಕ ಚೈತನ್ಯ ಕಡಿಮೆಯಾದರೆ ನಿರುತ್ಸಾಹ ಜಪ್ಪಯ್ಯ ಅಂದರೂ ಬಿಟ್ಟು ಹೋಗಲ್ಲ. ಆದ್ದರಿಂದ ವ್ಯಾಯಾಮಗಳಲ್ಲಿ ತೊಡಗಿಸುಕೊಳ್ಳುವುದು ಅಗತ್ಯ. ದೃಷ್ಟಿ ಕೋನದ ಅಭಾವ ‘ಆಲಿಸ್ ಇನ್ ವಂಡರ್ ಲ್ಯಾಂಡ್’ ಕೃತಿಯಲ್ಲಿಯ ಘಟನೆಯೊಂದು ನನಗೆ ನೆನಪಾಗುತ್ತಿದೆ. ಆಲಿಸ್ ಕಾಡಿನಲ್ಲಿ ಹೋಗುತ್ತಿರುವಾಗ ಮುಂದಿನ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಬೆಕ್ಕನ್ನು ಕೇಳುತ್ತಾಳೆ. ಅದಕ್ಕೆ ಬೆಕ್ಕು ‘ನಿನಗೆಲ್ಲಿ ಹೋಗುವುದಿದೆ?’ ಎಂದು ಕೇಳುತ್ತದೆ.’ಎಲ್ಲೂ ಹೋದರೂ ನಡೆಯುತ್ತದೆ.’ ಎನ್ನುತ್ತಾಳೆ ಖಚಿತವಾಗಿ ಎಲ್ಲಿಗೆ ಹೋಗಬೇಕೆನ್ನುವುದು ನಿನಗೆ ಗೊತ್ತಿಲ್ಲವೆಂದರೆ ದಾರಿ ಎಲ್ಲೋ ಒಂದು ಕಡೆ ಕರೆದೊಯ್ಯುತ್ತದೆ ಹೋಗು.’ಖಚಿತ ಗುರಿ ಇಲ್ಲದಿದ್ದಾಗ ಹೀಗೆ ಎಲ್ಲಿ ಬೇಕಾದಲ್ಲಿ ಅಲೆದಾಡಿ ಸಮಯ ವ್ಯರ್ಥವಾಗುತ್ತದೆ..ಆದ್ದರಿಂದ ಖಚಿತ ಗುರಿ ಹೊಂದಬೇಕು. ಸಮಯದ ಅಪವ್ಯವ ತಡೆಯಲು ಮೂರು ‘ಸಿ’ಗಳನ್ನು ಅಳವಡಿಸಿಕೊಳ್ಳಿ. ಸೆರೆ ಹಿಡಿಯುವಿಕೆ. ಮಾಡ ಬೇಕಾದ ಕೆಲಸಗಳನ್ನು ಸೆರೆ ಹಿಡಿಯುವುದರಿಂದ ಉತ್ಪಾದಕತೆ, ಕಾರ‍್ಯಕ್ಷಮತೆ, ದಕ್ಷತೆ ಗುಣಿಸಿದಷ್ಟು ಹೆಚ್ಚುತ್ತವೆ. ಮೆದುಳು ನಮ್ಮ ದೇಹದ ಒಂದು ಚುರುಕಾದ ಅವಯವವಾದರೂ ಅದು ಸ್ವಭಾವದಲ್ಲಿ ಸೋಮಾರಿಯಾಗಿದೆ. ಬೇಕಾದದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದಾಗೊಂದಿಷ್ಟು ನೆನಪಿಗೆ ಬರುತ್ತದೆ. ನೆನಪಾಗದಿದ್ದರೆ ನಮಗೆ ಒತ್ತಡ ಉಂಟಾಗುತ್ತದೆ.ಇದರಿಂದ ನಮ್ಮ ಮೆದುಳಿಗೆ ನಾವೇ ಘಾಸಿ ಮಾಡಿಕೊಳ್ಳುತ್ತೇವೆ ಎಂದು ಅನೇಕ ಸಂಶೋಧನೆಗಳ ವರದಿಗಳು ಹೇಳಿವೆ. ಅಷ್ಟೇ ಅಲ್ಲ ಕಾರ‍್ಯಕ್ಷಮತೆ ಮತ್ತು ಉತ್ಪಾದಕತೆಯ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅತ್ಯಗತ್ಯವಾಗಿ ಬೇಕಾದ ವಿಚಾರಗಳನ್ನು ಬರೆದಿಡಲು ನೋಟ್ ಪ್ಯಾಡ್ ಒಂದನ್ನು ಬಳಿಸಿ. ಇಲ್ಲದಿದ್ದರೆ ಮೊಬೈಲ್‌ನಲ್ಲಿರುವ ನೋಟ್‌ನ್ನು ಬಳಸಿ.ಮೆದುಳಿನಿಂದ ತೆಗೆದು ಇದರಲ್ಲಿ ದಾಖಲಿಸಬೇಕು. ಯಾವುದು ಯಾವಾಗ ನೆನಪಾದರೂ ಅದರಲ್ಲಿ ಬರೆಯಲು ಸಾಧ್ಯ.ಮಾಡದೇ ಉಳಿದ ಕೆಲಸಗಳ ಪಟ್ಟಿಯೂ ಅದರಲ್ಲಿ ಗೊತ್ತಾಗುತ್ತದೆ. ಜಗತ್ಪçಸಿದ್ಧ ವರ್ಜಿನ್ ಗ್ರೂಪ್‌ನ ಮಾಲಿಕ ರಿಚರ್ಡ್ ಬ್ರಾನ್ಸನ್ ಯಾವಾಗಲೂ ತಮ್ಮ ಹತ್ತಿರ ಒಂದು ನೋಟ್ ಪ್ಯಾಡ್‌ನ್ನು ಇಟ್ಟುಕೊಳ್ಳುತ್ತಾರೆ.ಇದೊಂದು ತರ ಎಕ್ಸಟರ್ನಲ್ ಹಾರ್ಡ್ ಡಿಸ್ಕ್ ತರಾ. ಡಿಸ್ಕ್ ನಮ್ಮ ಮೆದುಳಿನ ಜಾಗವನ್ನು ಖಾಲಿ ಮಾಡಲು ಅನುಕೂಲವಾಗುತ್ತದೆ. ಮೆದುಳು ಮತ್ತೆ ಹೊಸದಾಗಿ ಆಲೋಚಿಸಲು ಉತ್ತೇಜನ ನೀಡಿದಂತಾಗುತ್ತದೆ. ಒತ್ತಡ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಇವೆಲ್ಲ ಕರ‍್ಯಕ್ಷಮತೆಯ ಮೇಲೆ ಅತ್ಯಧಿಕವೆನಿಸುವಷ್ಟು ಸುಧಾರಣೆ ತರುತ್ತವೆ. ಕ್ಯಾಲೆಂಡರ್ ಈ ಸಂಜೆ ನನಗೆ ಇಂಥ ಲೇಖನವನ್ನು ಓದುವುದಿದೆ. ನನ್ನ ಗೆಳೆಯ/ತಿಯ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸುವುದಿದೆ. ಇದು ಕಾಲೇಜ್ ಫೀ ತುಂಬಲು ಕೊನೆಯ ದಿನಾಂಕ. ಇವೆಲ್ಲವಕ್ಕೆ ನಿಗದಿತ ದಿನಾಂಕವನ್ನು ಗುರುತಿಸುವುದು.ಹೀಗೆ ಮಾಡುವುದರಿಂದ ಮೆದುಳು ರಿಲ್ಯಾಕ್ಸ್ ಆಗಿರುತ್ತದೆ. ಮತ್ತು ಮಾಡಲೇ ಬೇಕಾದ ಕೆಲಸಗಳು ಮಾಡಲಾಗದೇ ಉಳಿಯುವುದಿಲ್ಲ. ಸೆರೆಹಿಡಿಯುವರಿಂದ ಮತ್ತು ಕ್ಯಾಲೆಂಡರ್ ಬಳಿಸಿದ್ದರಿಂದ ಯಾವ ಕೆಲಸ ಯಾವಾಗ ಮಾಡುವುದಿದೆ ಎನ್ನುವುದರ ಬಗೆಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಬೆಳಿಗ್ಗೆದ್ದು ಕ್ಯಾಲೆಂಡರ್ ನೋಡಿದರೆ ಸಾಕು ಇಂದು ನಾನು ಯಾವ ಮುಖ್ಯ ಕೆಲಸಗಳನ್ನು ಮಾಡಬೇಕಾಗಿದೆ ಎನ್ನುವ ದೃಶ್ಯ ಕಣ್ಮುಂದೆ ಬರುತ್ತದೆ. ರಾತ್ರಿ ಮಲಗುವಾಗ ಅಂದು ನಿಗದಿಪಡಿಸಿದ್ದ ಕೆಲಸಗಳೆಲ್ಲ ಮಾಡಿ ಆಯಿತೇ? ಎಂದು ಚೆಕ್ ಮಾಡಿಕೊಳ್ಳಬೇಕು. ಉಳಿದಿದ್ದರೆ ಮತ್ತೆ ಅದನ್ನು ಎಂದು ಮಾಡಲಾಗುವುದು ಎಂದು ಕ್ಯಾಲೆಂಡರ್‌ನಲ್ಲಿ ಗುರುತಿಸಿಕೊಳ್ಳುವುದು. ಇದರಿಂದ ಸಮಯ ನರ‍್ವಹಣೆಯೂ ಆಗುತ್ತದೆ ಮತ್ತು ಮಾಡುವ ಕೆಲಸಗಳಿಗೆ ಸರಿಯಾದ ದಿಕ್ಕು ಸಿಗುತ್ತದೆ. ಏಕಾಗ್ರತೆ ಮೊದಲನೆಯ ‘ಸಿ’ ಕ್ಯಾಪ್ಚರ್ ಮೆದುಳಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಎರಡನೇ ‘ಸಿ’ ಕ್ಯಾಲೆಂಡರ್ ಯಾವ ಯಾವ ಕೆಲಸ ಯಾವಾಗ ಎನ್ನುವ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಸರಿಯಾದ ಫಲಿತಾಂಶ ಪಡೆಯಲು ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ಬೇರೆ ಬೇರೆ ವಿಚಾರಗಳು ಮನಸ್ಸಿನೊಳಗೆ ಸದ್ದು ಮಾಡತೊಡಗಿದರೆ ಅವುಗಳನ್ನು ನೋಟ್ ಪ್ಯಾಡಿನಲ್ಲಿ ಬರೆದರೆ, ಮೆದುಳು ಮತ್ತೆ ಕಾರ‍್ಯದತ್ತ ಕೇಂದ್ರೀಕರಿಸಿ ಅಡೆತಡೆಗಳಿಲ್ಲದ ಕೆಲಸ ಮಾಡಲು ಸಾಧ್ಯ. ಸಾಮಾನ್ಯವಾಗಿ ಏಕಾಗ್ರತೆ ಮುಂಜಾನೆ ಹೆಚ್ಚಿರುತ್ತದೆ. ಮುಖ್ಯವಾದ ಕೆಲಸಗಳನ್ನು ಮುಂಜಾನೆಯೇ ಮಾಡಿ ಮುಗಿಸುವುದು ಸೂಕ್ತ. ಇದರಿಂದ ಮುಖ್ಯವಾದ ಕೆಲಸಗಳನ್ನು ಚೆನ್ನಾಗಿ ಬೇಗ ಮುಗಿಸಲು ಸಾಧ್ಯವಾಗುವುದು. ‘ಸಿಂಹವೂ ಸಹ ಮೊದಲು ಎರಡು ಹೆಜ್ಜೆ ಹಿಂದೆ ಹೋಗಿ ಬೇಟೆ ಆಡುತ್ತದೆ.’ ಹಾಗೆಯೇ ನಾವೂ ಸಹ ಏಕಾಗ್ರತೆ ಆಗುತ್ತಿಲ್ಲವೆಂದರೆ ಸ್ವಲ್ಪ ಹೊತ್ತು ವಿರಾಮ ಪಡೆದು ಕೆಲಸಕ್ಕೆ ಮರಳುವುದು ಒಳ್ಳೆಯದು. ಈ ಎರಡು ಹೆಜ್ಜೆಗಳ ವಿರಾಮ ಪಡೆಯುವುದರಿಂದ ಪುನಃಶ್ಚೇತನ್ಯ ಉಂಟಾಗುತ್ತದೆ. ಬದುಕಿನ ಪ್ರತಿ ಕ್ಷಣವನ್ನು ಸುಸಂಘಟಿತವಾಗಿ, ಉತ್ಪಾದನಶೀಲ, ಶಿಸ್ತು ಬದ್ಧ ಮಾಡಬೇಕೆಂದರೆ ಈ ಮೂರು ‘ಸಿ’ ಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ. ಈ ರೀತಿಯ ಕರ‍್ಯ ನರ‍್ವಹಣೆಯು ಸಮಯದ ಅಪವ್ಯವನ್ನು ತಡೆಯುವುದಲ್ಲದೇ ಕಾರ‍್ಯಕ್ಷಮತೆ ಮತ್ತು ಫಲಿತಾಂಶವನ್ನು ಅಧಿಕಗೊಳಿಸುತ್ತದೆ. ‘ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಆಶಿಸುವ ಬದಲಾವಣೆ ನೀವಾಗಿ.’ ಎನ್ನುವ ಗಾಂಧೀಜಿಯವರ ಮಾತನ್ನು ಅಳವಡಿಸಿಕೊಂಡರೆ ಸಮಯದ ಸವಿ ಸವಿಯಲು ಸಾಧ್ಯ. ********

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಸಮ್ಮಾನದ ಬೀಡಿಗೆ ಶಾಲಿನಿ ಆರ್. ಪ್ರಕೃತಿಯ ಭಾವೊತ್ಕರ್ಷ ದಿನದಿಂದ ದಿನಕೆ ಎಲ್ಲೆಲ್ಲೂ ನಗೆಯ ರಂಗವಲ್ಲಿ ನದಿ ಕಾನನಗಳ ಅಂಗಳದ ತುಂಬ, ಹೂ ಹಾಸಿದೆ ಡಾಂಬರಿನ ಹಾದಿಯುದ್ದಕೂ ಮರುಳಾಗಿ ಒಂದೇ ಹಠ ತುಸು ಹೆಚ್ಚೆ ಹೊತ್ತು ನಿಲುವೆ ವಾಹನಗಳ ಸುಳಿವಿರದ ಹಾದಿ ತುಂಬ, ಕಂಡು ಕಾಣದ ಹಕ್ಕಿ ಪಕ್ಕಿ ಮರಳಿ ಕಲರವ ಮೂಲೆ ಮೂಲೆಯ ಕಾಂಕ್ರೀಟಿನ ಕಾಡಿನಲ್ಲೆಲ್ಲಾ, ಜಂಗಮವಾಣಿಯಲಿ ಸೆರೆ ಹಿಡಿದರು ದಣಿವಾರದ ಪ್ರಕೃತಿಯ ಹಾವಾಭಾವ ಮತ್ತದರ ಕಾಪಿಡುವ ಧಾವ, ಮನುಜನ ಸಹಜ ಭಾವ! ನಿಧಾನಿಸಿದೆ ಪ್ರಕೃತಿ ಹೂ ಮನದ ಉಸಿರಿನೇರಿಳಿತದಲಿ ಶುದ್ದ ನರನಾಡಿನಲಿ , ಸಮ್ಮಾನದಿ ನಲಿವ ಪರಿಸರಕೂ ಬಂದಿದೆ ಉನ್ಮಾದ ಎಂದೋ ಕಳೆದ ಪಾರದರ್ಶಕ ನಡಿಗೆ ಕಳೆಯದಿರಲಿ ಮತ್ತೆಂದು ಹರಕೆ ತೇರು ಹರಿದಿದೆ, ತಗ್ಗು ದಿಬ್ಬಗಳ ಬಾಳಿನಲು ಸಗ್ಗತೋರಿದೆ ಸೃಷ್ಟಿ ಸಮಷ್ಟಿ, ಹುಸಿ ಮುನಿಸ ಮುಸಿ ನಗುತ ಕುಡಿಗಣ್ಣಲೆ ಸನ್ನೆ ಮಾಡಿಹಳು ಹಸಿರುಟ್ಟು ನಲಿದು ಮತ್ತೆ ಎಚ್ಚರಿಸುತಿಹಳು, ಪಾಠ ಕಲಿಸಲೆಂದೇ ಬಂದ ಉಸಿರ ಸೋಕಿದ ಗಾಳಿ, ಪಲ್ಲಟಗೊಂಡಿದೆ ಧಾವಂತ ಬದುಕು, ಅತಿಯಲ್ಲೆ ಅವನತಿಯ ಸೂತ್ರ ಹಿಡಿದು, ಮತ್ತೆ ಹುಡುಕಾಟ ಮೂಲ ಮಂತ್ರದ ತಡಕಾಟ ಮುಖವಾಡ ಇದ್ದ ಮುಖಕೆ ಮತ್ತೊಂದು ಮುಖವಾಡದ ಕವಚ ಕಳಚಿಡುವ ತವಕ ವೇಗ, ಮತ್ತೆ ಸರಳ ಬದುಕಿಗೆ ಸಹಜ ಸಮ್ಮಾನದ ಬೀಡಿಗೆ… ************

ಕಾವ್ಯಯಾನ Read Post »

ಇತರೆ

ಅವ್ವನ ನೆನಪಲಿ

ಅವ್ವನ ನೆನಪಲಿ… ಮಲ್ಲಿಕಾರ್ಜುನ ಕಡಕೋಳ ಸಗರನಾಡು – ಮಸಬಿನ  ಪ್ರಾಂತ್ಯದ ಸುರಪುರ ಬಳಿಯ ” ಜಾಲಿಬೆಂಚಿ ”  ಅವ್ವನ  ತವರೂರು. ಏಳೂರು  ಗೌಡಕಿಯ ವತನದಾರ ಮನೆತನದಾಕೆ.  ಕಡಲೇಬೇಳೆ ಬಣ್ಣದ ತುಂಬು ಚೆಲುವೆಯಾದ  ಆಕೆಯನ್ನು ನೋಡಿದ  ಅಪ್ಪನಿಗೆ, ಮದುವೆಯಾಗುವುದಾದರೇ.. ಈ ಸಾಹೇಬಗೌಡರ ಮಗಳು ನಿಂಗಮ್ಮ ಗೌಡತಿಯನ್ನೇ ಆಗಬೇಕೆಂಬ ಸಂಕಲ್ಪ  ಮಾಡಿದ. ಅಪ್ಪನಿಗೆ ಆಗ ಉಂಡುಡಲು  ಯಥೇಚ್ಛವಾಗಿದ್ದುದು ಕಡುಬಡತನ ಮಾತ್ರ. ನಮ್ಮೂರ ಸಾಹುಕಾರರ ಹೊಲ – ಮನೆಯಲ್ಲಿ ಜೀತಕ್ಕಿದ್ದ. ಸಾಹುಕಾರರಿಗೆ  ನೂರಾರು ಎಕರೆ ಜಮೀನು. ಅದೆಲ್ಲ  ಜಮೀನು ತನ್ನದೆಂದು ” ಫೋಸು ” ಕೊಟ್ಟು ಸುಳ್ಳುಹೇಳಿ ಅವ್ವನನ್ನು ಲಪಟಾಯಿಸಿದನಂತೆ. ೧೯೪೮ ರ ರಜಾಕಾರರ ಸಪಾಟಿಯಷ್ಟೊತ್ತಿಗೆ  ಅವರ ಲಗ್ನವಾಗಿ ಅಜಮಾಸು ಎರಡು  ಪಟ್ಟಗಳೇ ಅಂದರೆ ಇಪ್ಪತ್ನಾಲ್ಕು  ವರುಷಗಳು ಕಳೆದಿದ್ದವಂತೆ.  ಒರಟು ಕಗ್ಗಲ್ಲಿನಂತಹ  ಅಪ್ಪನನ್ನು  ತಿದ್ದಿ,ತೀಡಿ  ಮೂರ್ತಿ  ಮಾಡಿದ  ಕೀರ್ತಿ ತನ್ನದೆಂದು  ಅವ್ವ  ಹೇಳುತ್ತಿದ್ದಳು. ಅದಕ್ಕೆ  ಅಪ್ಪ  ಕೊಡುವ  ಉತ್ತರವೆಂದರೆ  ನೀನೇನು  ಕಿತ್ತೂರ  ಚೆನ್ನಮ್ಮ… ನೇರೂ  ಮಗಳು  ಇಂದ್ರಾಗಾಂಧೀನಾ..? ಅಂತಿದ್ದ.  ಆದರೆ  ನಮ್ಮ  ಮನೆತನವೆಂಬ  ವೃಕ್ಷದ  ಬೇರು, ಬೊಡ್ಡೆ, ಒಟ್ಟು  ಮರವೇ  ಅವಳು.  ನನ್ನಪ್ಪ , ಮಡಿವಾಳಪ್ಪನವರ  ತತ್ವಪದಗಳೊಂದಿಗೆ ಊರೂರು  ಶಪಥ  ಭಜನೆಗಳನ್ನು  ಹುಡುಕುತ್ತ  ತಿರುಗುವ  ತಿರುಗಲು ತಿಪ್ಪ.  ಅವನೊಂದಿಗೆ  ತಾನು  ಕಳೆದ ಮುಕ್ಕಾಲು  ಶತಮಾನದ  ಕತೆಗಳನ್ನು  ಅವ್ವ  ಸ್ವಾರಸ್ಯಕರವಾಗಿ  ನಿರೂಪಿಸುತ್ತಿದ್ದಳು.   ನನ್ನವ್ವ  ತೀರಿಕೊಂಡು(29.05.2015) ನಾಲ್ಕು  ವರುಷ  ತೀರಿದವು. ಯಾವುದೇ  ಕಾರಣಕ್ಕು  ತಾನು  ಕಡಕೋಳ ಮಡಿವಾಳಪ್ಪನ  ಸನ್ನಿಧಾನದಲ್ಲೇ  ಪ್ರಾಣ  ಬಿಡಬೇಕೆಂಬುದು  ಅವಳ ಸಂಕಲ್ಪವಾಗಿತ್ತು.  ಅಷ್ಟಕ್ಕು  ಅವ್ವ  ತನ್ನ  ಸಂಕಲ್ಪ  ಈಡೇರಿಸಿಕೊಂಡಳು.  ೧೯೮೯ ರಲ್ಲಿ  ಅಪ್ಪ  ತೀರಿಕೊಂಡ  ಮೇಲೆ  ಅವ್ವ  ನಮ್ಮೊಂದಿಗೆ  ದಾವಣಗೆರೆಯಲ್ಲೇ  ಇರ್ತಿದ್ದಳು.  ಹಾಗಿರಬೇಕಿದ್ರೇ  ನಮ್ಮನೆಗೆ  ಬರುವ ರಂಗಕರ್ಮಿಗಳು, ಸಾಹಿತಿ,  ಪತ್ರಕರ್ತರಿಗೆ  ಅವಳ  ಪರಿಚಯ  ಮಾಡಿ ಕೊಡದಿದ್ದರೆ  ಸಣ್ಣ  ಮಕ್ಕಳಂತೆ  ಮುನಿಸಿಕೊಂಡು  ಬಿಡ್ತಿದ್ದಳು.    ಕಂಚ್ಯಾಣಿ ಶ್ಯಾಣಪ್ಪ ,  ಪಿ.ಬಿ. ಧುತ್ತರಗಿ,  ಸತ್ಯಂಪ್ಯಾಟಿ ನಿಂಗಣ್ಣ ಮಾಸ್ತರ ( ಅವ್ವನ  ಮಾತಿನಲ್ಲಿ ) ,  ರವಿ ಬೆಳಗೆರೆ, ಬಸೂ, ಆರ್.ನಾಗೇಶ್, ಮುಖ್ಯಮಂತ್ರಿ ಚಂದ್ರು,  ಆರ್. ನಾಗರತ್ನಮ್ಮ, ಆರ್.ಟಿ. ರಮಾ,  ಮಾಸ್ಟರ್  ಹಿರಣ್ಣಯ್ಯ….ಹೀಗೆ  ಯಾರೇ  ಬರಲಿ  ಅವರೊಂದಿಗೆ  ತಾನು  ಮಾತಾಡುವ  ಅದಮ್ಯ  ಹಂಬಲ  ಆಕೆಗೆ. ಒಮ್ಮೆ ಎಂ.ಪಿ. ಪ್ರಕಾಶ್ ನಮ್ಮನೆಗೆ  ಬಂದು ಅವಳೊಂದಿಗೆ ತಾಸೊಪ್ಪತ್ತು  ಸಂವಾದಕ್ಕಿಳಿದರು. ಅವ್ವ ಜವಾರಿ ಸ್ವರದಲಿ ಮಧುರವಾಗಿ  ಹಾಡುವ  ಮಡಿವಾಳಪ್ಪನ ತತ್ವಪದ ಕೇಳಿ ಅವರು  ಮೈ ಮರೆತರು. ಊಟಮಾಡಿ ಮತ್ತೆ ಮತ್ತೆ  ಹಾಡುಕೇಳಿ…  ಹೋಗುವಾಗ,  ಎಂ.ಪಿ. ಪ್ರಕಾಶ  ಅವ್ವನ  ಕಾಲುಮುಟ್ಚಿ  ನಮಸ್ಕರಿಸಿದರು.   ಪ್ರಕಾಶ  ಹೋದಮೇಲೆ ” ಅವರು  ದೊಡ್ಡವರು.. ಮಂತ್ರಿಗಳು ” ಅಂತ ಹೇಳಿದೆವು. ಅವಳಲ್ಲಿ ಯಾವ  ಪ್ರತಿಕ್ರಿಯೆಯೂ  ಇರಲಿಲ್ಲ. ಆದರೆ ಅವರು ಸ್ವಾಮಿಗೋಳು, ಅಯನೋರು  ಅಂದೆವು… ಆಗನೋಡಿ  ಅವಳ  ಪಾಪಪ್ರಜ್ಞೆಯ  ಕಟ್ಟೆಒಡೆದು  ಭೋರ್ಗರೆಯತೊಡಗಿತು.  ” ಅಯ್ಯೋ ನರಕಕ್ಕೆ ಹೋಗ್ತಿನಪೋ..  ಜಂಗಮರು ನನ್ನ ಪಾದಮುಟ್ಟಿ ನಮಸ್ಕಾರ ಮಾಡಿದರು ” ಅಂತ ಭೋರ್ಯಾಡಿ ಗೊಳೋ ಅಂತ ದುಃಖಿಸ ತೊಡಗಿದಳು. ಅವರು ಮತ್ತೆ  ಯಾವಾಗ ಬಂದಾರು…ಅವರ ಪಾದ  ತೊಳೆದು ಧೂಳುಪಾದಕ  ಕುಡಿದು  ಪಾವನವಾಗಲು ವರುಷಗಟ್ಟಲೇ  ಶಬರಿಯಂತೆ ಕಾಯ್ದಳು. ಕಡೆಗೂ ಪ್ರಕಾಶರು ಬರಲೇಇಲ್ಲ.        ಅವ್ವ ನನಗೆ ಬಾಲ್ಯದಲ್ಲಿ ಮಾಡಿ ಕೊಡುತ್ತಿದ್ದ ಬಿಸಿ ಬಿಸಿ ರೊಟ್ಟಿ ಮುಟ್ಟಿಗೆ ಎಂದರೆ ಮೃಷ್ಟಾನ್ನ ಭೋಜನ ಅಂತಾರಲ್ಲ ಅಷ್ಟೊಂದು ಸಂತೃಪ್ತಿಯ ಊಟ ನನಗದು. ಅವಳೇನೇ ತಿಂಡಿ, ಅಡಿಗೆ ಮಾಡಿರಲಿ ಅದಕ್ಕೆ ಅವ್ವ ಎನ್ನುವ ಕೈಗುಣದ ರುಚಿ ಇರ್ಲೇಬೇಕು. ಅನ್ನಕ್ಕೆ ಸಾರು ಹಾಕೊಂಡು ಉಂಡಂಗೆ ಹೋಳಿಗೆಗೆ ತುಪ್ಪ ಸುರುವಿಕೊಂಡು ಉಂಡಾಗಲೇ ಆಕೆಗೆ ಸಮಾಧಾನ. ಬಾಯಿ ಕಟ್ಟುತ್ತಿರಲಿಲ್ಲ. ಒಂದಲ್ಲ ಎರಡು  ಬಾರಿಬಿದ್ದು  ಕಾಲು ಮುರಕೊಂಡಳು.  ಅಷ್ಟಾದರೂ ಆಕೆ ಬೆತ್ತ ಹಿಡಿಯಲಿಲ್ಲ. ಆದರೆ ಕಡೆ ಕಡೆಗೆ ವಾರಗಟ್ಟಲೇ ಊಟ  ಬಿಟ್ಟಳು. ಪೂರ್ತಿ ಮೆತ್ತಗಾದಳು. ದಾವಣಗೆರೆಯಿಂದ ತನ್ನನ್ನು  ಕಡಕೋಳಕ್ಕೆ ಕರ್ಕೊಂಡು  ಹೋಗಬೇಕೆಂದು ಎದೆಯೊಡೆದು ಹಾಸಿಗೆ  ಹಿಡಿದಳು.  ನೀನು ಇಲ್ಲೇ ತೀರಿಕೊಂಡರೂ ಊರಿಗೆ (ಕಡಕೋಳ) ತಗೊಂಡು  ಹೋಗ್ತೀನೆಂದರೂ  ಕೇಳುತ್ತಿರಲಿಲ್ಲ. ” ಮಲ್ಲಣ್ಣ… ನೀನು ತಗೊಂಡು  ಹೋಗ್ತಿ  ಖರೇ.. ನನಗ ಹ್ಯಂಗೊತ್ತಾಗ್ತದಪ.. ಸತ್ತು  ಹೋಗಿರ್ತಿನಲ್ಲ…ಊರಲ್ಲಿ ಮಡಿವಾಳಪ್ಪನ ನೆಲಕ್ಕ ತಲಿ ಕೊಟ್ಟು  ಪ್ರಾಣ ಬಿಡಬೇಕು ” ಅಂತಿದ್ಳು..ಹಂಗೇ  ಆಯ್ತು.  ೨೦೧೫ ರ ಮೇ ೨೮ ರಂದು  ಮುಂಜಾನೆ ಡಾವಣಗೇರಿಯಿಂದ  ಹೊರಟು ರಾತ್ರಿ ಹತ್ತುಗಂಟೆಗೆ  ಕಡಕೋಳ ತಲುಪಿದಾಗ ಅವಳಿಗೆ ಸ್ವರ್ಗ ತಲುಪಿದ  ಖಂಡುಗ ಖುಷಿ. ಮಡಿವಾಳಪ್ಪನ ಕಾಯಕ ಭೂಮಿಯ ಮಣ್ಣಲ್ಲಿ ಮಣ್ಣಾಗಲು  ಸಂತಸ  ಪಟ್ಟಳು.  ರಾತ್ರಿಯೆಲ್ಲ, ಮತ್ತು ಮಳ್ಳೇ  ಮರುದಿನ  ಊರಿಗೂರೇ ಬಂದು  ಅವ್ವನೊಂದಿಗೆ ಮಾತಾಡಿತು.  ಮೇ ೨೯ರ ಸಂಜೆ ನಾಲ್ಕುಗಂಟೆಗೆ  ಮಡಿವಾಳಪ್ಪನ  ಧ್ಯಾನದೊಳಗೆ ಅವ್ವ ಲೀನವಾದಳು. ***********

ಅವ್ವನ ನೆನಪಲಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಉಮೇಶ ಮುನವಳ್ಳಿ ಬೇಡಿದಾಗ ನೀ ಕೊಡದೇ ಹೋದರೆ, ಹುಡುಕುವಾಗ ನಿನಗೆ ಸಿಗದೇ ಇರಬಹುದು. ನೀಡಿದಾಗ ನೀ ಸ್ವೀಕರಿಸದೇ ಹೋದರೆ, ಬೇಡುವಾಗ ನಿನಗೆ ಸಿಗದೇ ಇರಬಹುದು. ಹಲುಬಿದಾಗ ನೀ ಹೊರಳಿ ನೋಡದಿರೆ, ಮರಳಿ ಬಂದಾಗ ನಿನಗೆ ಸಿಗದೇ ಇರಬಹುದು. ಕೊಡಲು ಬಂದಾಗ ನೀ ಕೊಸರಿಕೊಂಡರೆ, ಕನವರಿಸಿದಾಗ ನಿನಗೆ ಸಿಗದೇ ಇರಬಹುದು. ಬಯಸಿದಾಗ ನೀ ಬಿಗುಮಾನ ಬಿಡದಿರೆ, ಬೇಕೆಂದಾಗ ನಿನಗೆ ಸಿಗದೇ ಇರಬಹುದು. ಸನಿಹ ಬಂದಾಗ ನೀ ಮುನಿಸಿಕೊಂಡರೆ, ಸಹಿಸಿ ಬಂದಾಗ ನಿನಗೆ ಸಿಗದೇ ಇರಬಹುದು. ರೀತಿ ಬಿಟ್ಟಾಗ ನೀ ಪ್ರೀತಿ ಕೊಡದಿರೆ, ರಿವಾಜು ಬಿಟ್ಟು ಬಂದಾಗ ನಿನಗೆ ಸಿಗದೇ ಇರಬಹುದು. ಇಷ್ಟಪಟ್ಟು ಬಂದ ಪ್ರೀತಿ ನೀ ಸ್ವೀಕರಿಸದಿರೆ, ಕಷ್ಟಪಟ್ಟು ಬಂದಾಗ ನಿನಗೆ ಸಿಗದೇ ಇರಬಹುದು. ತ್ಯಾಗಿಯಾದಾಗ ನೀ ತ್ಯಜಿಸಿ ಹೋದರೆ, ಭೋಗಿ ಉಮಿ ನಿನಗೆ ಸಿಗದೇ ಇರಬಹುದು, ಜೋಗಿ, ಪ್ರೇಮ ಭಿಕ್ಷೆ ಬೇಡಿ ಬಂದಾಗ ನೀ ನೀಡದರೆ, ಯೊಗಿನಿಯಾಗಿ ಬಂದಾಗ ನಿನಗೆ ಸಿಗದೇ ಇರಬಹುದು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಸ್ತ್ರಗಳಿವೆ ಲಕ್ಷ್ಮೀ ದೊಡಮನಿ ಕಾಳಕೂಟ ಮೀರಿಸಬಲ್ಲ ವಿಷಗಳಿವೆ ನಮ್ಮೊಳಗೆ ಅಮೃತವ ಹಾಳುಮಾಡಬಲ್ಲ ಕುತಂತ್ರಿಗಳಿವೆ ನಮ್ಮೊಳಗೆ ಕಟುವಾಣಿ,ಅಶ್ಲೀಲ ವಿಚಾರ,ಸಂಶಯಗಳ ಮುಖೇನ ಅಂದದ ತನುವ ನಶಿಸಬಲ್ಲ ರಸಾಯನಗಳಿವೆ ನಮ್ಮೊಳಗೆ ಸಂಬಂಧದ ಲೆಕ್ಕವಿಲ್ಲ, ಸಮಯ-ಜಾಗದ ಪರಿವೆಯಿಲ್ಲ ಸ್ತ್ರೀಯರ ಆಸಿಸಬಲ್ಲ ಕ್ರಿಮಿಗಳಿವೆ ನಮ್ಮೊಳಗೆ ಪ್ರಗತಿಯ ರಸ್ತೆಯಿಂದ. ಧುಮ್ಮಿಕ್ಕುವವರ ಎಳೆಯುವ ಧ್ಯೇಯದಿಂದ ದೂರಾಗಿಸಬಲ್ಲ ಭಾವನೆಗಳಿವೆ ನಮ್ಮೊಳಗೆ ಅವನನ್ನುಹೊರುವ, ಅರ್ಧಾಂಗಿಯಾಗಬಲ್ಲ ಅವಳ ಅಸಮತೆಯಿಂದ ಕಾಣಬಲ್ಲ ನೋಟಗಳಿವೆ ನಮ್ಮೊಳಗೆ ಬೆರಳಿಂದ ಬ್ರಹ್ಮಾಂಡವರಿವ ಶಕ್ತಿ ಹುಟ್ಟಿದೆ ‘ಚೆಲುವೆ’ ಪುಸ್ತಕ ಸಂಸ್ಕೃತಿ ಅಳಿಸಬಲ್ಲ ಅಸ್ತ್ರಗಳಿವೆ ನಮ್ಮೊಳಗೆ *******

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ನಿನ್ನ ಪ್ರೀತಿಯ ನೆರಳಿನಲ್ಲಿ… ನೋವು ನಲಿವಿನ ಸ್ಪಂದನ ಲೇಖನಗಳ ಸಂಕಲನ ಎನ್. ಆರ್ ರೂಪಶ್ರೀ ಬೆನಕ ಬುಕ್ಸ್ ಬ್ಯಾಂಕ್ ಮೈಸೂರಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ರೂಪಶ್ರೀ ಅವರ ಜ್ಞಾನ ಜ್ಯೋತಿ – ಆಧ್ಯಾತ್ಮಿಕ ಲೇಖನಗಳ ಸಂಕಲನ, ಮೌನ ಕಾಲ ಮತ್ತು ಕನಸ ತುಂಬಿದ ಕವಿತೆ ಎಂಬ ಕವನ ಸಂಕಲನಗಳು, ನೆನಪಿನ ನವಿಲುಗರಿ ನೆಲಕ್ಕೆ ಬಿದ್ದಿತ್ತು, ಹೆಜ್ಜೆಯಲ್ಲಿ ಗೆಜ್ಜೆನಾದ ಕಥಾಸಂಕಲನಗಳು ಈ ಹಿಂದೆ ಪ್ರಕಟಗೊಂಡಿವೆ. ಮೂಲತಃ ಶಿರಸಿಯವರಾದ ಇವರು ಕವಿ ಕಾವ್ಯ ಬಳಗ ಎನ್ನುವ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ ಬಹಳ ಕ್ರಿಯಾಶೀಲರು ಕೂಡ. ಲೇಖಕಿಯರ ಸಂಘ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ ಇವರಿಗೆ ದೊರೆತಿದೆ. ಪುಸ್ತಕಗಳು ಪ್ರಾಣ ಸ್ನೇಹಿತರು. ಅವು ನಗಿಸುತ್ತವೆ, ಅಳಿಸುತ್ತವೆ ಮತ್ತು ಈ ಬದುಕಿನ ಅರ್ಥ ಹುಡುಕುವಂತೆ ಮಾಡುತ್ತವೆ ಎಂಬ ಕ್ರಿಸ್ಟೋಫರ್ ಪಾವೊಲಿನಿ ಅವರ ಮಾತು ಒಳಪುಟದಲ್ಲಿ ಇದೆ. ಇದು ರೂಪಶ್ರೀ ಅವರ ಮಾತೂ ಆಗಿರಬಹುದು. ಏಕೆಂದರೆ ಅವರೇ ಹೇಳಿಕೊಂಡಂತೆ ‘ ಇವು ನನ್ನ ಭಾವನೆಗಳನ್ನೆಲ್ಲ ಹಿಡಿದಿಟ್ಟು ಹರಿಯಬಿಟ್ಟಿರುವ ಬರಹಗಳು’. ಒಟ್ಟು ಇಪ್ಪತ್ತೇಳು ಕಥೆ, ಲಹರಿ ಮತ್ತು ಬರಹಗಳು ಈ ಕೃತಿಯಲ್ಲಿ ಇವೆ. ಇದಕ್ಕೆ ಕನ್ನಡದ ಖ್ಯಾತ ಕಾದಂಬರಿಗಾರ್ತಿ ಎಸ್.ಮಂಗಳಾ ಸತ್ಯನ್ ಮುನ್ನುಡಿ ಬರೆದು ಹಾರೈಸಿದ್ದಾರೆ. ಇಲ್ಲಿನ ಪ್ರತಿಯೊಂದು ಬರಹಗಳೂ ಪ್ರೀತಿ ಪ್ರೇಮದ ಕುರಿತಾಗಿರುವುದು ವಿಶೇಷ. ಆದರೆ ಎಲ್ಲಾ ಬರಹಗಳು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿವೆ. ಮನುಷ್ಯತ್ವದ ಗುಣಗಳೇ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯಗಳೆಂಬ ಹುಟ್ಟನ್ನು ಹಿಡಿದು ರೂಪಶ್ರೀ ನಮ್ಮನ್ನು ಸಂಸಾರ ಶರಧಿಯನ್ನು ದಾಟಿಸಲು ಪ್ರಯತ್ನ ಮಾಡಿದ್ದಾರೆ. ಮಂಗಳಾ ಅವರು ಹೇಳಿರುವಂತೆ – ವೃತ್ತಿ ಮತ್ತು ಸಂಸ್ಕಾರಗಳು ನಮ್ಮ ಬದುಕಿನ ಅಂಗಗಳು. ಮದುವೆ, ಪ್ರೀತಿ ಪ್ರೇಮ ಪುರುಷನಿಗಿಂತ ಹೆಣ್ಣಿನ ಬದುಕಿನ ಮೇಲೆ ಒಂದು ವಿಶಿಷ್ಟ ಪರಿಣಾಮವನ್ನು ಬೀರುತ್ತದೆ ಎಂಬ ಅಂಶ ಈ ಕೃತಿಯಲ್ಲಿ ಅಡಕವಾಗಿರುವ ಬರಹಗಳಲ್ಲಿ ಕಂಡುಬರುತ್ತದೆ.ದಿಟ್ಟತನದ ಮಹಿಳೆ ಇಲ್ಲಿದ್ದಾಳೆ. ನನ್ನ ಪ್ರೀತಿಯ ನೆರಳಿನಲ್ಲಿ, ಮೌನ ಮುರಿಯದ ಪ್ರೀತಿ, ಮೌನ ಗರ್ಭದೊಳಗೆ, ದೂರ ತೀರದ ಪ್ರೀತಿ ಮತ್ತು ಮರೆತೆನೆಂದರೂ ಮರೆಯದ ಪ್ರೀತಿ.. ಅದು ಆಕೆಯ ರೀತಿ ; ಹೆಚ್ಚು ಮುದ ನೀಡಿದ ಬರಹಗಳು. ಪ್ರೀತಿಯ ಪಾರಿಜಾತ ಪಸರಿಸುತ್ತಿದೆ, ನೆನಪುಗಳ ಸಂಕೋಲೆಯಲ್ಲಿ ಬಂಧಿಯಾಗ ಹೊರಟು, ಅದೇ ಮಳೆ, ಮಿಂಚು, ಆಲಿಕಲ್ಲು, ಬದುಕ ಪ್ರೀತಿಗೊಂದು ದೀಪ ಹಚ್ಚಿ, ನೀ ನನಗೆ ಏನಾಗಬೇಕೋ ಇತ್ಯಾದಿಗಳು ಇಷ್ಟವಾದವು. ಈ ಕೃತಿಯ ಪ್ರಕಾಶಕರು ಮತ್ತು ನಿಮ್ಮೆಲ್ಲರ ಮಾನಸ ಪತ್ರಿಕೆಯ ಸಂಪಾದಕರಾದ ಗಣೇಶ ಕೋಡೂರು ಅವರು ಬೆನ್ನುಡಿಯಲ್ಲಿ ಹೇಳಿರುವಂತೆ ಈ ಸಂಕಲನದ ಓದು ನಿಮ್ಮ ಬದುಕಿನಲ್ಲಿ ಗೊತ್ತಿಲ್ಲದಂತೆ ಹೊಸದೊಂದು ಉತ್ಸಾಹವನ್ನು ಚಿಮ್ಮಿಸುತ್ತದೆ. ಒಮ್ಮೆ ಈ ಕೃತಿಯನ್ನು ಓದಿ. ********** ಡಾ.ಅಜಿತ ಹರೀಶಿ

ಪುಸ್ತಕ ಸಂಗಾತಿ Read Post »

You cannot copy content of this page

Scroll to Top