ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಕಾಲಚಕ್ರ ಅರೆಕ್ಷಣವೂ ವಿರಮಿಸದೇ ಉರುಳುತ್ತಲಿದೆ ನಲ್ಲೆ ನಮ್ಮ ಪ್ರೀತಿ ಅಡೆತಡೆಯಿಲ್ಲದೇ ಬೆಳೆಯುತ್ತಲಿದೆ ನಲ್ಲೆ ನಡೆದ ಹಾದಿಯಲಿ ಎದುರಾದ ಕಷ್ಟ ಕೋಟಲೆಗಳು ನೂರು ಗಂಗಾ಼ಳದ ಗಂಜಿಯಲ್ಲೇ ಮೃಷ್ಟಾನ್ನದ ಸವಿ ತುಂಬಿದೆ ನಲ್ಲೆ ನಿನ್ನೆ ಮೊನ್ನೆಯಂತೆ ನೆನಪಿನಲ್ಲಿದೆ ಸಪ್ತಪದಿ ತುಳಿದ ಘಳಿಗೆ ದಶಕಗಳ ಅನುರಾಗದಲಿ ಈ ಬಂಧ ಬಿಗಿಗೊಂಡಿದೆ ನಲ್ಲೆ ಹುಲ್ಲಿನ ಮನೆಯೇ ಅರಮನೆಯಾಗಿರೆ ಎಲ್ಲಿಹುದು ಕೊರತೆ ? ನಾನು ಬಡವ ನೀನು ಬಡವಿ ಒಲವೇ ಸಿರಿಯಾಗಿದೆ ನಲ್ಲೆ ಬಾಳಿನ ಸಂಧ್ಯಾಕಾಲವಿದು ನನಗೆ ನೀನು ನಿನಗೆ ನಾನು ಸಾವಿನ ಮನೆಯ ಪಥದಲ್ಲೂ ಜೊತೆ ಸಾಗಬೇಕಿದೆ ನಲ್ಲೆ *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ನಾಲ್ಕನೆ ಅದ್ಯಾಯ ಕನ್ನಡಕ್ಕೆ ಗಜಲ್ ಬಂದ ರೀತಿ ಪ್ರಪಂಚದಲ್ಲಿ ಗಜಲ್ ಹುಟ್ಟಿದ ರೀತಿ, ಅದು ಬೆಳೆದು ಬಂದ ಬಗೆ ಮೊದಲಾದ ಸಂಗತಿಗಳ ನಂತರ ಈಗ ನಮ್ಮ ಕನ್ನಡ ಗಜಲಗಳಿಗೆ ಬರೋಣ ಕನ್ನಡದ ಜಾಯಮಾನ ಒಂದು ಮಟ್ಟಿಗೆ ಕಷ್ಟಕರವಾದ ಮತ್ತು ವಿದೇಶಿಯ ಪರ್ಷಿಯನ್, ಅರಬ್ಬೀ, ಉರ್ದು ಭಾಷೆಗೆ ಒಗ್ಗಿದ ಸಾಹಿತ್ಯ ಪ್ರಕಾರವಾದ ಗಜಲ್ ಎಪ್ಪತ್ತನೇ ದಶಕದಲ್ಲಿ ನಮ್ಮ ಕನ್ನಡ ಭಾಷೆಯಲ್ಲಿಯೂ ಸಹ ಆರಂಭಗೊಂಡಿತು. ಅತ್ಯಂತ ವಿಶಾಲ, ಪುರಾತನ, ಅಗಾಧ ಸಾಹಿತ್ಯದ ಪಟ್ಟುಗಳು ಮತ್ತು ಅತ್ಯಂತ ಮಧುರತೆಯಿಂದ ಕೂಡಿದ ಕನ್ನಡ ಭಾಷೆಯ ಜಾಯಮಾನಕ್ಕೆ ಗಜಲ್ ಸುಲಭವಾಗಿಯೇ ಒಗ್ಗಿಕೊಂಡಿತು. ಪ್ರಪಂಚದ ಯಾವುದೇ ಸಾಹಿತ್ಯದ ಪ್ರಕಾರವೇ ಆಗಲಿ, ಆ ಸಾಹಿತ್ಯದ ಸೂತ್ರಗಳ ಅನುಸಾರ ಹೋದರೆ ಎಂತಹ ಕಾವ್ಯವನ್ನು ಸಹ ಹುಟ್ಟಿ ಹಾಕುವಂತಹ ಸಾಮರ್ಥ್ಯ ಕನ್ನಡಕ್ಕೆ ಇರುವುದು ಭಾಷೆಯ ಹಿರಿಮೆಯನ್ನು ತೋರಿಸುತ್ತದೆ. ಇತರ ಕೆಲವು ಭಾಷೆಗಳಲ್ಲಿ ಆದ ಆರಂಭದ ಆಭಾಸ ಕನ್ನಡದಲ್ಲಿ ಆಗದೆ ಸಹಜವಾಗಿಯೇ ಮೂರ್ತರೂಪ ತಾಳಿತು. ಕನ್ನಡ ಸಂಸ್ಕೃತಿ, ಸಮುದಾಯ, ಜನ ಜೀವನದೊಂದಿಗೆ ಹೋದಾಗ ಗಜಲ್ ತನ್ನ ಮೊದಲನೇ ಮೆಟ್ಟಿಲನ್ನು ಕನ್ನಡದಲ್ಲಿ ಯಶಸ್ವಿಯಾಗಿ ಇಟ್ಟಿತು‌. ಮಧುಶಾಲೆ, ಮಧುಪಾತ್ರೆ, ಸಾಕಿ ಮೊದಲಾದವುಗಳನ್ನು ಗಜಲ್ ಆರಂಭದಲ್ಲಿಯೇ ಕಳೆದುಕೊಂಡು ತನ್ನ ಔಪಚಾರಿಕತೆಯನ್ನು ಮಾತ್ರ ಉಳಿಸಿಕೊಂಡಿದಕ್ಕೆ ಆ ಯಶಸ್ಸು ಸಾಧ್ಯವಾಯಿತು. ಅನುಭವ, ಅನುಭಾವ ಮತ್ತು ಭಾವಾಭಿವ್ಯಕ್ತಿಯ ಸಾಧ್ಯತೆಗಳು ಕನ್ನಡದಂತಹ ಭಾಷೆಯಲ್ಲಿ ಮಾತ್ರ ಅತಿ ಹೆಚ್ಚು ಗೋಚರವಾಗುತ್ತವೆ. ಕನ್ನಡ ಗಜಲಗಳ ಜನಕ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಚರಿತ್ರೆ, ಛಂದಸ್ಸು, ಚೌಕಟ್ಟು ಮೊದಲಾದ ಎಲ್ಲಾ ಪಟ್ಟುಗಳನ್ನು ಅರಿತು ಅದರ ಲಕ್ಷಣಗಳ ಅನುಸಾರ ನಿಯಮಬದ್ಧವಾಗಿ ಗಜಲ್ ಬರೆದ ಶಾಂತರಸವರು ಕನ್ನಡ ಗಜಲಗಳ ಜನಕರಾಗಿದ್ದಾರೆ.  ಅವರ “ಗಜಲ್ ಮತ್ತು ಬಿಡಿ ದ್ವೌಪದಿಗಳು” ಕನ್ನಡದ ಮೊಟ್ಟ ಮೊದಲ ಗಜಲ್ ಸಂಕಲನವಾಗಿದೆ. ಶಾಂತರಸ ಎನ್ನುವುದು ಕಾವ್ಯನಾಮ ಹೊಂದಿರುವ ಇವರ ಮೂಲ ಹೆಸರು ಶಾಂತಯ್ಯ ಹಿರೇಮಠ. ಆದರೆ ಇವರು ಶಾಂತರಸ ಹೆಂಬೇರಾಳ ಎಂದೇ ಪ್ರಸಿದ್ಧಿ. ಇವರು ಜನಿಸಿದ್ದು ರಾಯಚೂರು ಜಿಲ್ಲೆಯಲ್ಲಿ ಮತ್ತು ಇದು ಆಗ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಆದ ಕಾರಣ ಮಾತೃಭಾಷೆ ಕನ್ನಡದ ಶಿಕ್ಷಣದಿಂದ ವಂಚಿತರಾದ ಇವರು ಉರ್ದು ಮಾಧ್ಯಮದಲ್ಲಿ ಓದಬೇಕಾಗಿ ಬಂತು. ಹೆಸರಿಗೆ ಅಷ್ಟೇ ಶಾಂತರಸರಾದ ಇವರು ಪ್ರಾಥಮಿಕ ಶಿಕ್ಷಣದಲ್ಲಿಯೇ ಮುಸ್ಲಿಂ ಅಧ್ಯಾಪಕರ ಬೇಧ ಭಾವದಿಂದ ಸಿಡಿದೆದ್ದು ನಿಂತರು ಮತ್ತು ಅವರಲ್ಲಿ ಹೋರಾಟದ ಕೆಚ್ಚು ಹುಟ್ಟಿನಿಂದಲೇ ಬಂದಿತ್ತು. ಆದ ಕಾರಣ ಅವರು ಜೀವನ ಪೂರ್ತಿ ನಾನಾ ವಿಷಯಗಳಿಗಾಗಿ ಹೋರಾಡಿರುವ ಕಾರಣಕ್ಕೂ ಸಹ ಸ್ಮರಣೀಯರಾಗಿದ್ದಾರೆ. ಹೀಗೆ ಉರ್ದು ಸಂಪರ್ಕದಿಂದ ಬಂದ ಅವರು ಕನ್ನಡದೊಂದಿಗೆ ಉರ್ದುವನ್ನು ಸಹ ಕರಗತ ಮಾಡಿಕೊಂಡರು. ಉರ್ದು ಸಾಹಿತ್ಯದ ಕುರಿತು ಸಾಕಷ್ಟು ಆಳವಾದ ಅಧ್ಯಯನ ಮಾಡಿರುವ ಇವರು ಗಜಲನ್ನು ಅತ್ಯಂತ ಪರಿಣಾಮಕಾರಿಯಾಗಿ ಕನ್ನಡಕ್ಕೆ ತಂದರು. ಋತುವರ್ಣನೆ ಸೇರಿದಂತೆ ಹಲವಾರು ಉರ್ದು ಕಾವ್ಯ, ಗಜಲಗಳನ್ನು ಸಹ ಕನ್ನಡಕ್ಕೆ ಕರೆ ತಂದರು. ಗಜಲ್ ಮಾತ್ರವಲ್ಲದೆ ಹಲವಾರು ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದರು. ಇವರ ಮಗಳಾದ ಹೆಚ್ ಎಸ್ ಮುಕ್ತಾಯಕ್ಕ ಸಹ ಅವರ ಕಾರ್ಯಗಳಲ್ಲಿ ಸಹಾಯಕರಾಗಿದ್ದರು. ಶಾಂತರಸ ಅವರು ಗಜಲಗೆ ಸಂಬಂಧಿಸಿದಂತೆ ಒಂದು ಅರ್ಥಪೂರ್ಣ ವಾಕ್ಯವನ್ನು ನೀಡಿದ್ದಾರೆ ಮತ್ತು ಅದು ಹೀಗಿದೆ “ಇರುವಿಕೆಯೇ ಇಲ್ಲದಿರುವಿಕೆ ಮತ್ತು ಇಲ್ಲದಿರುವಿಕೆಯೇ ಇರುವಿಕೆ” ಜಂಬಣ್ಣ ಅಮರಚಿಂತ ಶಾಂತರಸರು ಹಾಕಿದ ಭದ್ರ ಬುನಾದಿಯ ಮೇಲೆ ಗಜಲ್ ಬರವಣಿಗೆಗಳಿಗೆ ಹೊಸ ಮಜಲನ್ನು ಸೃಷ್ಟಿಸಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರಲ್ಲಿ ಜಂಬಣ್ಣ ಅಮರಚಿಂತರು ಪ್ರಮುಖರಾಗಿದ್ದಾರೆ. ತೀಕ್ಷ್ಣವಾದ ಭಾಷಾ ಪ್ರಯೋಗಗಳು ಹಾಗೂ ಅಭಿವ್ಯಕ್ತಿಯ ಭಾವಗಳಿಗೆ ಹೆಸರಾದ ಇವರು ದಮನಿತರ ಧ್ವನಿಯಾಗಿ ಮೂಡಿ ಬಂದಿದ್ದರು. ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಡಿದ ಇವರು ಅದನ್ನು ತಮ್ಮ ಕಾವ್ಯಗಳಲ್ಲಿ ಸೊಗಸಾಗಿ ಹೊರ ತಂದಿದ್ದಾರೆ. ನಲ್ಲೆಯೊಂದಿಗಿನ ಸಂವಾದವಾದ ಗಜಲನ್ನು ಜನ ಸಾಮಾನ್ಯರ ಸಂವಾದವನ್ನಾಗಿಸಿ ವಿಭಿನ್ನ ನೆಲೆಯನ್ನು ಒದಗಿಸಿದರು. ಇವರ ಝೆನ್ ಆಧಾರಿತ ಗಜಲಗಳು ಅತಿ ಯಶಸ್ಸು ಕಂಡವು. “ರಕ್ತಸಿಕ್ತ ಖಡ್ಗ ನಿಮ್ಮ ಓಣಿಯಲ್ಲಿ, ಹಂತಕರು ಯಾರೆಂದು ಮತ್ತೆ ಕೇಳುವಿರಿ  ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ, ಬೆಳೆ ಯಾಕೆ ಬರಲಿಲ್ಲವೆಂದು ಮತ್ತೆ ಕೇಳುವಿರಿ” ಜಂಬಣ್ಣ ಅಮರಚಿಂತ ಅವರ ಬರಹದ ಪ್ರಖರತೆ ಎಷ್ಟು ತೀಕ್ಷ್ಣ ಮತ್ತು ಸೂಕ್ಷ್ಮವಾಗಿತ್ತು ಎನ್ನುವುದಕ್ಕೆ ಮೇಲಿನ ಒಂದು ಗಜಲನ ಮತ್ಲಾದ ಉದಾಹರಣೆಯ ಸಾಕು, ಅವರ ಸಾಹಿತ್ಯ ಎಷ್ಟು ಅಗಾಧವಾಗಿತ್ತು ಎನ್ನುವುದನ್ನು ತೋರಿಸುತ್ತದೆ ಕನ್ನಡದಲ್ಲಿ ಗಜಲ್ ಆರಂಭವಾಗಿ ಈಗಾಗಲೇ ಐವತ್ತು ವರ್ಷ ಕಳೆದರೂ ಸಹ ಅದು ಇನ್ನೂ ಮಾಧ್ಯಮಿಕ ಹಂತದಲ್ಲಿಯೇ ಇದೆ. ಶಾಂತರಸರಿಂದ ಹಿಡಿದು ಡಾ|ರಾಜಶೇಖರ್ ನೀರಮಾನ್ವಿ, ಡಾ| ಅಮರೇಶ ನುಗಡೋಣಿ, ಕಾಶಿನಾಥ್ ಅಂಬಲಗಿ, ಚಿದಾನಂದ ಸಾಲಿ, ಡಾ| ಗೋವಿಂದ ಹೆಗಡೆ, ಪ್ರಭಾವತಿ ದೇಸಾಯಿ, ಹೇಮಲತಾ ವಸ್ತ್ರದ ಅಂತಹ ಮೊದಲಾದ ಉತ್ತಮ ಗಜಲಕಾರರನ್ನು ಕಾಣುತ್ತಿರುವ ಗಜಲ್ ಸಾಹಿತ್ಯ ಇನ್ನೂ ಪರಿಶುದ್ಧವಾದ ತೀವ್ರತೆಯ ಬರಹಗಳು ಹೆಚ್ಚು ಹೆಚ್ಚು ಮೂಡಿ ಬರಬೇಕಿದೆ. ಇದೇ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಗಜಲ್ ಎನ್ನುವ ಹೆಸರಲ್ಲಿ ಬರುವ ಕೆಲವು ಕಲಬೆರಕೆಯ ಬರಹಗಳು ಮೂಲೆ ಸೇರಬೇಕಿದೆ ********* ಬಸವರಾಜ ಕಾಸೆ

ಗಝಲ್ ಲೋಕ Read Post »

ಇತರೆ, ಕಾವ್ಯಯಾನ

ಭೂಮಿ ದಿನ

ಭೂದೇವಿ ಡಾ: ಪ್ರಸನ್ನ ಹೆಗಡೆ ಕಾಣದ ದೇವರ ಹುಡುಕುವೆ ಏಕೋ ಕಾಣುವ ದೇವತೆ ಈ ಭೂಮಿ ನಾವೆಲ್ಲರೂ ಇರುವಾ ನಮ್ಮೆಲ್ಲರ ಹೊರುವಾ ಪ್ರತ್ಯಕ್ಷ ದೇವತೆ ಈ ಧರಣಿ ಗಂಧದ ಕಾಡನು ಜೇನಿನ ಗೂಡನು ಕರುಣಿಪ ದೇವತೆ ಈ ಧರಣಿ ತಣ್ಣನೆ ಹೊನಲನು ತುಂಬಿದ ಹೊಲವನು ಹೊತ್ತಿಹ ದೇವತೆ ಈ ತರುಣಿ ಏನು ಬಿತ್ತಿದರೂ ಬೆಳೆಯನು ಕೊಡುವಾ ಅಕ್ಷಯ ಪಾತ್ರೆಯೇ ಈ ಭೂಮಿ ಸಾವಿರ ತಪ್ಗಳ ನಗುತಾ ಕ್ಷಮಿಸುವ ಕ್ಷಮಾಧಾತ್ರಿಯೆ ಈ ಭೂಮಿ ಒದೆಯುವ ಕಾಲ್ಗಳ ಜರಿಯದೆ ಇರಿಯದೆ ಚುಂಬಿಸೊ ದೇವತೆ ಈ ಧರಣಿ ಉಗುಳುವ ಬಾಯ್ಗಳ ತೆಗಳದೆ ತದುಕದೆ ತುತ್ತೀಯುವ ತಾಯಿ ಈ ಜನನಿ ಧರ್ಮವ ಕೇಳದೆ ಜಾತಿಯ ನೋಡದೆ ಎಲ್ಲರ ಹೊರುವಳು ಈ ಭೂಮಿ ಏನನೂ ಕೇಳದೆ ಎಲ್ಲವ ನೀಡುವ ಕರುಣಾ ಮಯಿಯೇ ಈ ಭೂಮಿ ಚಂದದ ಮಣ್ಣನು ರುಚಿ ರುಚಿ ಹಣ್ಣನು ಈಯುವ ದೇವತೆ ಈ ರಮಣಿ ಜೀವ ಜಲವನು ಉಸಿರಾಟಕೆ ಉಸಿರನು ಕರುಣಿಪ ಕರುಳೇ ಈ ಧರಣಿ ದುಡಿಯುವ ಕೈಗೆ ದುಡಿಮೆಯ ನೀಡುವ ಕೊಡುಗೈ ದೇವಿ ಈ ಭೂಮಿ ಸತ್ತರೂ ಎಸೆಯದೆ ಕೈಗಳ ಚಲ್ಲದೆ ಮಡಿಲನೆ ಕೊಡುವಳು ಈ ಜನನಿ ********

ಭೂಮಿ ದಿನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಮೇಗರವಳ್ಳಿ ರಮೇಶ್ ಆಲ್ಖೆಮಿಸ್ಟ್ ಕಾದಂಬರಿ ಮೂಲ:ಪೌಲೋ ಕೋಎಲ್ಹೊ(ಅರ್ಜೆಂಟೈನಾ) ಕನ್ನಡಕ್ಕೆ: ಕಮಲ ಹೆಮ್ಮಿಗೆ ಶ್ರೀಮತಿ ಕಮಲ ಹೆಮ್ಮಿಗೆಯವರು ಅನುವಾದಿಸಿದ ಪೌಲೋ ಕೋಎಲ್ಹೊ ನ ಕಾದಂಬರಿ “ಆಲ್ಖೆಮಿಸ್ಟ್”– ಒಂದು ಒಳ ನೋಟ                                                                                                               ಅರ್ಜೆಂಟೈನಾದ ಕಾದಂಬರಿ ಕಾರ ಪೌಲೋ ಕೊಎಲ್ಹೊ ಸ್ಪಾನಿಶ್ ಭಾಷೆಯಲ್ಲಿ ಬರೆದ ಕಾದಂಬರಿ “ಆಲ್ಖೆಮಿಸ್ಟ್” ಒಂದು ವಿಶಿಷ್ಠ ಕಥಾ ಹಂದರವನ್ನು ಹೊಂದಿರುವ, ಓದುಗನಲ್ಲಿ ಹೊಸ ಸಂಚಲನವನ್ನು ಉಂಟುಮಾಡುವ ಕಾದಂಬರಿ. ಕನ್ನಡದ ಶ್ರೇಷ್ಠ ಕವಯಿತ್ರಿಯರಲ್ಲಿ ಒಬ್ಬರಾದ ಡಾ! ಕಮಲ ಹೆಮ್ಮಿಗೆಯವರು ಈ ಕಾದಂಬರಿಯನ್ನು ಅದರ ಮಲಯಾಳಂ ಆವೃತ್ತಿಯಿಂದ  (ಅನುವಾದಕರು ರಮಾ ಮೆನೋನ್) ಕನ್ನಡಕ್ಕೆ ತಂದಿದ್ದಾರೆ. ಅನುವಾದಕಿ ಕಮಲಾ ಹೆಮ್ಮಿಗೆಯವರು ಈ ಕಾದಂಬರಿಯ ಇಂಗ್ಲಿಶ್ ಅನುವಾದವನ್ನು ಓದಿದಾಗ ಸಪ್ಪೆಯೆನಿಸಿತಂತೆ. ಅವರ ಕಿರಿಯ ಸ್ನೇಹಿತೆಯೊಬ್ಬರ ಸಲಹೆಯ ಮೇರೆಗೆ ಶ್ರೀಮತಿ “ರಮಾ ಮೇನೋನ್” ರ ಮಲಯಾಳಂ ಅನುವಾದವನ್ನುಓದಿ, ಪ್ರಭಾವಿತರಾಗಿ ಅದರಿಂದ ಈ ಕಾದಂಬರಿಯ ಕನ್ನಡಾನುವಾದವನ್ನು ಮಾಡಿದಾರೆ.  ಇದಕ್ಕೂ ಮೊದಲು ಈ ಕಾದಂಬರಿಯ ಕನ್ನಡಾನುವಾದ ಬಂದಿತ್ತೆಂದು ತಿಳಿಯಿತು. ಆದರೆ ಅದರ ಪ್ರತಿಗಳಾಗಲೀ, ಅನುವಾದಕರ ಹೆಸರಾಗಲೀ ಲಭ್ಯವಿಲ್ಲ.    ಕಮಲಾ ಅವರು ಕಾದಂಬರಿಯ ಆಶಯಕ್ಕೆ ಸ್ವಲ್ಪವೂ ಕುಂದು ಬರದ ಹಾಗೆ ಅದ್ಭುತವಾಗಿ ಅನುವಾದಿಸಿದ್ದಾರೆ. ಅನುವಾದ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂದರೆ ಓದುಗರು ಕಾದಂಬರಿಯ ನಾಯಕ ಸ್ಯಾಂಟಿಯಾಗೋನ ಅರಸುವಿಕೆಯ ಪಯಣದಲ್ಲಿ ಅವನೊಂದಿಗೆ ಹೆಜ್ಜೆ ಹಾಕುತ್ತಾ, ಆಂಡಲೂಸಿಯಾದ ಹುಲ್ಲುಗಾವಲುಗಳಲ್ಲಿ, ಆಫ್ರಿಕಾದ ಊರುಗಳಲ್ಲಿ, ಸಹಾರಾ ಮರುಭೂಮಿಯ ಮರಳಿನಲ್ಲಿ ,  ಪಿರಮಿಡ್ಡುಗಳ ಸನಿಹದಲ್ಲಿ ಸುತ್ತಾಡಿ ಅವನ ಅನುಭವಗಳನ್ನು ತಾವೂ ಒಳಗೊಳ್ಳುತ್ತಾ ಸಾಗುತ್ತಾರೆ. ಇದೊಂದು ಸಾರ್ಥಕ ಅನುವಾದವೆಂದರೆ ತಪ್ಪಾಗುವುದಿಲ್ಲ.      ಕಥೆ ಪ್ರಾರಂಭವಾಗುವುದಕ್ಕೂ ಮುನ್ನ ನಾಂದಿ ರೂಪದಲ್ಲಿ  ಆಲ್ಖೆಮಿಸ್ಟ್ ಓದಿದ ನಾರ್ಸಿಸಸ್ ಕಥೆಯ ಪ್ರಸ್ತಾಪವಿದೆ.  ಈ ಕಥೆ ಕೊನೆಯಾಗುವುದು ಅಳುತ್ತಿರುವ ಕೊಳ ವನದೇವತೆಯರಿಗೆ ತನ್ನ ಅಳುವಿನ ಕಾರಣ ತನ್ನನ್ನು ನೋಡುತ್ತಿದ್ದ ನಾರ್ಸಿಸಸ್ ನ ಕಣ್ಣುಗಳಲ್ಲಿ ಕಾಣುತ್ತಿದ್ದ ತನ್ನ ಪ್ರತಿಬಿಂಬವೇ  ಹೊರತು ಅವನ ಬಾಹ್ಯ ಸೌಂದರ್ಯವಲ್ಲ ಎಂದು ಹೇಳುವಲ್ಲಿ ಮನುಷ್ಯನ ಬಾಹ್ಯ ರೂಪಕ್ಕಿಂತ ಆಂತರ್ಯದ ಸೌಂದರ್ಯಮುಖ್ಯ ಎಂಬ ಅಂಶವನ್ನುಎತ್ತಿ ಹಿಡಿಯುತ್ತದೆ. ಇದು ಆಲ್ಖೆಮಿಸ್ಟ್ ಕಾದಂಬರಿಯಲ್ಲಿ ಹಾಸು ಹೊಕ್ಕಾಗಿರುವ, ಸ್ಯಾಂಟಿಯಾಗೋ ಕೊನೆಯಲ್ಲಿ ಕಂಡುಕೊಳ್ಳುವ ದರ್ಶನಕ್ಕೆ ಬರೆದ ಮುನ್ನುಡಿಯಂತಿದೆ. ಇದರಿಂದ ಕಾದಂಬರಿಯ ಮೌಲ್ಯ ವೃದ್ಧಿಯಾಗಿದೆ.     ಮಧ್ಯಕಾಲೀನ ಯುಗದಲ್ಲಿ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಕೆಲ ಭಾಗಗಳಲ್ಲಿ ಆಲ್ಖೆಮಿ  ಅಂದರೆ ರಸ ವಿದ್ಯೆ ಪ್ರಚಲಿತದಲ್ಲಿದ್ದು ಕೆಲವರು ಇದನ್ನು ಅಭ್ಯಸಿಸಿ ಪ್ರಯೋಗಗಳನ್ನು ನಡೆಸುತ್ತಿದ್ದರು.  ಅಂಥವರಿಗೆ ಆಲ್ಖೆಮಿಸ್ಟ್ ಗಳು (ರಸವಾದಿಗಳು) ಎಂಬ ಹೆಸರಿತ್ತು.  ಈ ಆಲ್ಖೆಮಿಸ್ಟ್ ಗಳು ಸಾಧಾರಣ ಲೋಹವನ್ನುಕರಗಿಸಿ ಶುದ್ಧೀಕರಿಸಿ ಚಿನ್ನವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ತೊಡಗುತ್ತಿದ್ದರು. ಈ ವಿದ್ಯೆಯ ಮೂಲ ಗ್ರೀಕೋ-ರೋಮನ್ ಮತ್ತು ಈಜಿಪ್ಟ ದೇಶಗಳೆಂದು ಹೇಳುತ್ತಾರೆ.ಆಲ್ಖೆಮಿಸ್ಟ್ ಗಳು ಕೇವಲ ಸಾಧಾರಣ ಲೋಹಗಳನ್ನು ಚಿನ್ನವಾಗಿಸುವುದಲ್ಲದೇ ತತ್ವಜ್ನಾನಿಗಳೂ ಆಗಿರುತ್ತಿದ್ದರು. ಆತ್ಮ ಶುದ್ಧಿಯ ಬಗ್ಗೆ, ಜೀವಾತ್ಮಗಳ ಸಂಬಂಧದ ಬಗ್ಗೆ ಚಿಂತನೆ ನಡೆಸುತ್ತಿದ್ದರು.  ಅಲ್ಲದೇ ಮನುಷ್ಯನ ಆಯುಷ್ಯವನ್ನು ವೃದ್ಢಿಸುವ ಕಷಾಯವನ್ನೂ ಸಹ ತಯಾರಿಸುತ್ತಿದ್ದರು. ಈ ಕಾದಂಬರಿಯ ಮುಖ್ಯ ವ್ಯಕ್ತಿ ಸ್ಯಾಂಟಿಯಾಗೋ ಎಂಬ ಯುವಕ. ತಮ್ಮ ಮಗ ಪಾದ್ರಿಯಾಗಬೇಕೆಂಬ ತಂದೆ ತಾಯಿಯರ ಇಚ್ಚೆಗೆ ವಿರುದ್ಧವಾಗಿ, ಪಾದ್ರಿಯಾಗಿ ನಾಲ್ಕು ಗೋಡೆಗಳ ನಡುವೆ ಕಳೆದು ಹೋಗುವುದರಲ್ಲಿ ಅರ್ಥವಿಲ್ಲವೆಂದು ಮನಗಂಡು, ದೇಶ ಸುತ್ತಿ ಅನುಭವ ಗಳಿಸುವ ಆಶಯದಿಂದ ಕುರಿಗಾಹಿಯ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾನೆ.  ಇಲ್ಲಿಂದ ಅವನ ಸಂಚಾರೀ ಬದುಕು ಆರಂಭವಾಗುತ್ತದೆ.      ಒಮ್ಮೆ ಟರೀಫ಼ಾದಲ್ಲಿವ್ಯಾಪಾರಿಯೊಬ್ಬನಿಗೆ ಕುರಿಗಳತುಪ್ಪಳವನ್ನು ಮಾರುವ ಸಂದರ್ಭದಲಿ ಆ ವ್ಯಾಪಾರಿಯ ಮಗಳನ್ನು ಕಂಡು ಸ್ಯಾಂಟಿಯಾಗೊ ಮೋಹಗೊಳ್ಲುತ್ತಾನೆ.ಎರಡು ವರ್ಷಗಳ ನಂತರ ಅವಳನ್ನು ನೋಡುವ ಉದ್ದೇಶದಿಂದ ಹೊರಟವನಿಗೆ ಸಂಜೆ ಒಂದು ಪಾಳು ಬಿದ್ದ, ಛಾವಣಿಯಿಲ್ಲದ ಚರ್ಚ್ ಕಾಣಿಸುತ್ತದೆ. ಆ ಚರ್ಚ್ ಒಳಗೆ ಬೆಳೆದಿರುವ ಒಂದು ಸೈಕೋಮೋರ್ ಮರದ ಕೆಳಗೆ  ಆ ರಾತ್ರಿ ಕಳೆಯುವುದೆಂದು ನಿರ್ಧರಿಸಿ ಮಲಗಿದವನಿಗೆ ಒಂದು ಕನಸು ಬೀಳುತ್ತದೆ.  ಕನಸಿನಲ್ಲಿ ಮಗುವೊಂದು ಅವನ ಕೈ ಹಿಡಿದು ಈಜಿಪ್ಟಿನ ಪಿರಮಿಡ್ಡುಗಳ ಬಳಿಗೆ ಒಯ್ದು ಅಲ್ಲಿರುವ ನಿಧಿಯನ್ನು ತೋರಿಸುತ್ತದೆ.  ಈ ರೀತಿಯ ಕನಸನ್ನು  ಅವನು ಹಲವಾರು ಬಾರಿ ಕಂಡಿರುತ್ತಾನೆ.      ಟರೀಫಾದಲ್ಲಿರುವ ಜಿಪ್ಸಿ ಮುದುಕಿಯಿಂದ ಕನಸಿನ ಅರ್ಥವನ್ನು ತಿಳಿದುಕೊಳ್ಳ ಬೇಕೆಂದು ಅವಳ ಬಳಿ ಹೋಗುವ ಸ್ಯಾಂಟಿಯಾಗೋನಿಗೆ ಅವನ ಕನಸಿನ ನಿಧಿ ಈಜಿಪ್ಟಿನ ಪಿರಮಿಡ್ಡುಗಳ ಬುಡದಲ್ಲಿರುವುದಾಗಿಯೂ, ಸ್ಯಾಂಟಿಯಾಗೋ ಅದನ್ನು ಪಡೆದಾಗ ಅದರಲ್ಲಿ ಹತ್ತನೇ ಒಂದು ಭಾಗವನ್ನು ತನಗೆ ಕೊಡಬೇಕೆಂದು ತಾಕೀತು ಮಾಡುತ್ತಾಳೆ.  ಮುಂದೆ ಸ್ಯಾಂಟಿಯಾಗೋ ಗೆ ಸಾಲೆಮ್ ನ ರಾಜನೆಂದು ಹೇಳಿಕೊಳ್ಳುವ ಮಿಲ್ಚಿ ಜ಼ೆಡೆಕ್ ಎಂಬ ಮುದುಕನ ಭೇಟಿಯಾಗುತ್ತದೆ.  ಮಿಲ್ಚೆಜ಼ೆಡೆಕ್ ಸ್ಯಾಂಟಿಯಾಗೋಗೆ  ಅನೇಕ ವಿಚಾರಗಳನ್ನು ಕುರಿತು ತಿಳಿಸುತ್ತಾನೆ. ಆತ್ಮಾನುಭವ ಮತ್ತು ಪ್ರಕೃತಿಯೊಂದಿಗಿನ ಅದರ ಸಂಬಂಧ ಗಳನ್ನು ತಿಳಿಸಿ “ಪೂರ್ಣ ಮನಸ್ಸಿನಿಂದ ಕೇಳಿಕೊಂಡರೆ ಪ್ರಕೃತಿ ನಮಗೆ ನೆರವಾಗುತ್ತದೆ ಎಂದೂ ತಿಳಿಸುತ್ತಾನೆ. ಕನಸಿನ ಸಾಕ್ಷಾತ್ಕಾರಕ್ಕಾಗಿ ಈಜಿಪ್ಟಿನ ಪಿರಮಿಡ್ಡುಗಳ ಬಳಿ ತೆರಳಲು ಪ್ರೇರೇಪಿಸುತ್ತಾನೆ. ಅವನಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಸಹಾಯವಾಗಲೆಂದು ಯೂರಿಮ್ ಮತ್ತು ತುಮಿಮ್ ಎಂಬ ಎರಡು ಕಲ್ಲುಗಳನ್ನು ನೀಡುತ್ತಾನೆ.      ಸ್ಯಾಂಟಿಯಾಗೋ ತನ್ನಲ್ಲಿದ್ದ ಕುರಿಗಳಲ್ಲಿ ಆರು ಕುರಿಗಳನ್ನು ತಾನು ಕೊಟ್ಟ ಮಾತಿನಂತೆ ಮಿಲ್ಚಿಜ಼ೆಡೆಕ್ ನಿಗೆ ಕೊಟ್ಟು ಉಳಿದ  ಕುರಿಗಳನ್ನು ಮಾರಿ ಆಫ್ರಿಕಾಕ್ಕೆ ಪಯಣಿಸಿ ಆಫ್ರಿಕಾದ ಟ್ಯಾನ್ಜೀರ್ ಪಟ್ಟಣಕ್ಕೆ ಬಂದಿಳಿಯುತ್ತಾನೆ.  ಅಪರಿಚಿತ ಸ್ಥಳದ ಹೋಟೆಲ್ ಒಂದರಲ್ಲಿ ಪರಿಚಯವಾಗುವ, ಸ್ಪ್ಯಾನಿಷ್ ಮಾತನಾಡುವ ಯುವಕ ಸ್ಯಾಂಟ್ಯಾಗೋನೊಂದಿಗೆ ಸ್ನೇಹ ಬೆಳೆಸಿ ಅವನಲ್ಲಿದ್ದ ಹಣವನ್ನೆಲ್ಲ ಲಪಟಾಯಿಸುತ್ತಾನೆ. ಎಲ್ಲವನ್ನೂ ಕಳೆದುಕೊಂಡ ಸ್ಯಾಂಟಿಯಾಗೋನನ್ನು ಅನಾಥಪ್ರಜ್ನೆ ಕಾಡುತ್ತದೆ. ಹೇಗಾದರೂ ಮಾಡಿ ಸ್ವಲ್ಪ ಹಣ ಸಂಪಾದಿಸಿ  ಆಂಡಲೂಸಿಯಾಗೆಹಿಂದಿರುಗಬೇಕೆಂದುಕೊಳ್ಳುತ್ತಾನೆ. ಅವನಿಗೆ ಒಬ್ಬ ಹರಳು ಮತ್ತು ಗಾಜಿನ ವಸ್ತುಗಳ ವ್ಯಾಪಾರಿಯ ಅಂಗಡಿಯಲ್ಲಿ ಕೆಲಸ ಸಿಗುತ್ತದೆ. ತನ್ನ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆ ಗಳಿಂದ ಅಂಗಡಿಯ ಯಜಮಾನನ ವಿಶ್ವಾಸ ಗಳಿಸುತ್ತಾನೆ.  ಅವನ  ಬಳಿ ಸಾಕಷ್ಟು ಹಣವೂ ಸಂಗ್ರಹವಾಗುತ್ತದೆ.  ಅಂಗಡಿಯಲ್ಲಿ ಕೆಲವಾರು ತಿಂಗಳುಕೆಲಸ ಮಾಡಿದ ನಂತರ ಸ್ಯಾಂಟಿಯಾಗೋನನ್ನು ಆಂಡಲೂಸಿಯಾಗೆ ಹಿಂದಿರುಗುವುದೋ ಅಥವಾ ಕನಸಿನ ನಿಧಿಯನ್ನರಸಿ ಪಿರಮಿಡ್ಡುಗಳ ಕಡೆ ಹೋಗುವುದೋ ಎಂಬ ದ್ವಂದ್ವ ಕಾಡ ತೊಡಗುತ್ತದೆ.  ಅದೇ ಸಂದರ್ಭದಲ್ಲಿ ಈಜಿಪ್ಟಿಗೆ ಪಯಣ ಹೊರಟಿದ್ದ ಜನರ ಗುಂಪೊಂದು ಅಲ್ಲಿಗೆ ಬರುತ್ತದೆ.ಆ ಗುಂಪನ್ನು ಸೇರಿಕೊಂಡು ಈಜಿಪ್ಟಿನ ಕಡೆಗೆ ಪಯಣ ಬೆಳೆಸುತ್ತಾನೆ.      ಅವನಿಗೆ ಆ ಗುಂಪಿನಲ್ಲಿದ್ದ ಆಂಗ್ಲ ಮನುಷ್ಯನೊಬ್ಬನ ಪರಿಚಯವಾಗುತ್ತದೆ.  ಆ ಮನುಷ್ಯ ರಸವಾದದ (ಆಲ್ಖೆಮಿ) ರಹಸ್ಯಗಳನ್ನು ಅರಿಯಲೋಸುಗ ಪಿರಮಿಡ್ಗೆ ಹೋಗುವ ದಾರಿಯಲ್ಲಿರುವ ಓಯಸಿಸ್ನಲ್ಲಿ ವಾಸಿಸುತ್ತಿರುವ ಆಲ್ಖೆಮಿಸ್ಟ್ ಒಬ್ಬನನ್ನು ಭೇಟಿಮಾದಲು ತಾನು ಇಚ್ಚಿಸುವುದಾಗಿಯೂ, ಮತ್ತು ಆ ಆಲ್ಖೆಮಿಸ್ಟ್ ಗೆ  ಇನ್ನೂರು ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವುದೆಂದೂ ಹೇಳುತ್ತಾನೆ. ಮರುಭೂಮಿಯಲ್ಲಿ ಪಯಣಿಸುತ್ತಾ ಸ್ಯಾಂಟಿಯಾಗೋ ಮರುಭೂಮಿಯ ಮಾತುಗಳನ್ನು ಆಲಿಸುವುದನ್ನೂ ಮತ್ತು ಜಗತ್ತಿನ ಆತ್ಮವನ್ನು ಶೋಧಿಸುವುದನ್ನೂ ಕಲಿಯುತ್ತಾನೆ.      ಗುಂಪು ಓಯಸಿಸ್ ಪ್ರದೇಶಕ್ಕೆ ಬರುತ್ತದೆ.  ಅಲ್ಲಿ ಅವರೆಲ್ಲ ಕೆಲ ದಿನ ತಂಗುತ್ತಾರೆ. ಅಲ್ಲಿ ಸ್ಯಾಂಟಿಯಾಗೊನಿಗೆ ಫಾತಿಮಾ ಎಂಬ ಅರಬ್ ಹುಡುಗಿಯ ಭೇಟಿಯಾಗುತ್ತದೆ.  ಅವಲ ಸೌಂದರ್ಯಕ್ಕೆ ಮಾರು ಹೋದ ಸ್ಯಾಂಟಿಯಾಗೋ ಅವಳಲ್ಲಿ  ಅನುರಕ್ತನಾಗುತ್ತಾನೆ.  ಗುಂಪಿನ ನಾಯಕ  ಎಲ್ಲರನ್ನೂ ಸೇರಿಸಿ  “ಮರುಭೂಮಿಯ ಬುಡಕಟ್ಟು ಜನಾಂಗದ ಬಣಗಳ ನಡುವೆ ಯುದ್ಧ ನಡೆಯುತ್ತಿರುವುದಾಗಿಯೂ, ಆದ್ದರಿಂದ ಪಯಣ ಮುಂದುವರಿಸಲು ಸಧ್ಯಕ್ಕೆ ಸಾಧ್ಯವಾಗುವುದಿಲ್ಲ” ಎಂದು ಹೇಳುತ್ತಾನೆ.      ಗುಂಪಿನೊಂದಿಗೆ ಅನಿವಾರ್ಯ ಓಯಸಿಸ್ನಲ್ಲಿ  ಉಳಿಯಲೇ ಬೇಕಾದ ಸ್ಯಾಂಟಿಯಾಗೋ  ಮರುಭೂಮಿಯ ಕಡೆ ನಡೆದು ಸುತ್ತಾಡುತ್ತಾನೆ.  ಆಗ ಅವನಿಗೆ ಆಗಸದಲ್ಲಿ ಎರಡು ಗಿಡುಗಗಳು ಹೋರಾಡುತ್ತಿರುವ ದೃಶ್ಯ ಕಾಣುತ್ತದೆ.  ಅದನ್ನು ಕಂಡ ಸ್ಯಾಂಟಿಯಾಗೊಗೆ ಸೈನ್ಯದ ತುಕುಡಿಯೊಂದು ಓಯಸಿಸ್ ಪ್ರದೇಶವನ್ನು ಆಕ್ರಮಿಸುವ ಮುನ್ಸೂಚನೆ ಸಿಗುತ್ತದೆ.  ಓಯಸಿಸ್ ಗಳ ಮೇಲೆ ದಾಳಿ ಮಾಡುವುದು ಅಲ್ಲಿಯ್ ನಿಯಮಕ್ಕೆ ವಿರುದ್ಧವಾದದ್ದರಿಂದ ಈ ವಿಶಯವನ್ನು ಓಯಸಿಸ್ ಪ್ರದೇಶದ ಮುಖ್ಯಸ್ಥನೊಂದಿಗೆ ಹಂಚಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಕೈಯಲ್ಲಿ ಕತ್ತಿ ಹಿಡಿದ, ಬಿಳಿಯ ಕುದುರೆಯ ಮೇಲೆ ಕುಳಿತಿದ್ದ, ಕಣ್ಣುಗಳೆರಡನ್ನು ಬಿಟ್ಟು ದೇಹದ ಉಳಿದ ಭಾಗವನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬನು ಸ್ಯಾಂಟಿಯಾಗೋಗೆ ಎದುರಾಗುತ್ತಾನೆ. ಅವನೇ ಆಂಗ್ಲ ಮನುಷ್ಯ ಹೇಳಿದ ಆಲ್ಖೆಮಿಸ್ಟ್ ಆಗಿರುತ್ತಾನೆ.  ಆಲ್ಖೆಮಿಸ್ಟ್ ಸ್ಯಾಂಟಿಯಾಗೋನನ್ನು ತನ್ನ ಗುಡಾರಕ್ಕೆ ಕರೆದುಕೊಂಡುಹೋಗುತ್ತಾನೆ.  ಅವನಿಂದ ಸ್ಯಾಂಟಿಯಾಗೋ ಅನೇಕ ವಿಚಾರಗಳನ್ನು ತಿಳಿದುಕೊಳ್ಳುತ್ತಾನೆ.  ಮುಖ್ಯವಾಗಿ ಪ್ರಕೃತಿ ಭಾಷೆಯನ್ನು ಮತ್ತು ಭೌತ ಶಕ್ತಿಗಳೊಂದಿಗೆ ಸಂಭಾಷಿಸುವುದನ್ನು ಕಲಿಯುತ್ತಾನೆ.  ಆಲ್ಖೆಮಿಸ್ಟ್ ತಾನು ಮರುಭೂಮಿಯನ್ನು ದಾಟಿ ಈಜಿಪ್ಟಿನ ಪಿರಮಿಡ್ಡುಗಲ ಕಡೆ ಹೋಗುವುದಾಗಿಯೂ, ಬೇಕಾದರೆ ತನ್ನ ಜತೆ ಬರಬಹುದೆಂದು ಸ್ಯಾಂಟಿಯಾಗೊಗೆ ಹೇಳುತ್ತಾನೆ. ಸ್ಯಾಂಟಿಯಾಗೋ ಆಲ್ಖೆಮಿಸ್ಟ್ ಜತೆ ಪಯಣಿಸಲು ಒಪ್ಪುತ್ತಾನೆ. ಇಬ್ಬರೂ ಯುದ್ಧ ನಡೆಯುತ್ತಿದ್ದ  ಮರುಭೂಮಿಯ ಪ್ರದೇಶವನ್ನು ಪ್ರವೇಶಿಸುತ್ತಾರೆ.      ಯುದ್ಧ ಮಾಡುತ್ತಿದ್ದ ಯೋಧರು ಇವರಿಬ್ಬರನ್ನು ಬಂಧಿಸುತ್ತಾರೆ.  ಆಗ ಆಲ್ಖೆಮಿಸ್ಟ್ ಯೋಧರ ಹತ್ತಿರ ಸ್ಯಾಂಟಿಯಾಗೋ ನಿಗೆ ಬಿರುಗಾಳಿಯಾಗಿ ಮಾರ್ಪಡುವ ವಿದ್ಯೆ ಗೊತ್ತಿದೆಯೆಂದು ಹೇಳುತ್ತಾನೆ. ಆಲ್ಖೆಮಿಸ್ತ್ನನ್ನು ಅವಹೇಳನ ಮಾಡಿದ ಯೋಧರು, ಹಾಗಿದ್ದರೆ ತಮ್ಮ ಸೇನಾಧಿಪತಿಯ ಎದುರು  ಸ್ಯಾಂಟಿಯಾಗೋ ಆ ವಿದ್ಯೆಯನ್ನು ಪ್ರದರ್ಷಿಸ ಬೇಕೆಂದು ತಾಕೀತು ಮಾಡುತ್ತಾರೆ.  ಆಲ್ಖೆಮಿಸ್ಟ್ ಒಪ್ಪಿಕೊಳ್ಳುತ್ತಾನೆ. ಆದರೆ ಏನೂ ಅರಿಯದ ಸ್ಯಾಂಟಿಯಾಗೋನಿಗೆ  ಆತಂಕ ಶುರುವಾಗುತ್ತದೆ.  ಮರುದಿನ ಮುಂಜಾನೆ ಸ್ಯಾಂಟಿಯಾಗೋ ಮರುಭೂಮಿಯಲ್ಲಿದ್ದ ಒಂದು ಮರಳು ದಿಬ್ಬದ ಮೇಲೆ ಕುಳಿತು ಈ ಗಂಡಾಂತರದಿಂದ ತನ್ನನ್ನು ಪಾರುಮಾಡುವಂತೆ ದೇವರನ್ನು ಪ್ರಾರ್ಥಿಸುತ್ತಾನೆ.  ಮರುಭೂಮಿ, ಸೂರ್ಯ, ಗಾಳಿಗಳೂ ಕೂಡ ಅವನೊಂದಿಗೆ ಪ್ರಾರ್ಥಿಸುತ್ತಿವೆ ಅನಿಸುತ್ತದೆ. ಅವುಗಳೊಂದಿಗೆ ಅವನು ಸಂಭಾಷಿಸುತ್ತಾನೆ, ತನ್ನ ಹೃದಯದ ಮಾತು ಕೇಳುತ್ತಾನೆ.   ಗಾಳಿ ಬಿರುಗಾಳಿಯಾಗಿ ಪರಿವರ್ತಿತವಾಗುತ್ತದೆ.  ಬಿರುಗಾಳಿ ನಿಂತಾಗ ಸ್ಯಾಂಟಿಯಾಗೋ ಆ ಯೋಧರ ನಡುವೆ ಇರುತ್ತಾನೆ.  ಅವರು ಇವರಿಬ್ಬರನ್ನೂ ಮುಂದೆ ಹೋಗಲು ಬಿಡುತ್ತಾರೆ.      ಮಧ್ಯದಲ್ಲಿ ಆಲ್ಖೆಮಿಸ್ಟ್ ತನಗೆ ಬೇರೆ ಎನೋ ಜರೂರು ಕೆಲಸವಿದೆ ಎಂದು ಹೇಳಿ ಓಯಸಿಸ್ಗೆ ಹಿಂದಿರುಗುತ್ತಾನೆ.  ಒಂಟಿಯಾದ ಸ್ಯಾಂಟಿಯಾಗೋ ಛಲ ಬಿಡದೇ ಮುಂದೆ ಸಾಗಿ ಪಿರಮಿಡ್ಡುಗಳ ಬಳಿ  ಬರುತ್ತಾನೆ.  ನಿಧಗಾಗಿ ಮರಳನ್ನು ಅಗೆಯುತ್ತಾನೆ, ಆದರೆ ಅವನಿಗೆ ನಿಧಿ ಸಿಗುವುದಿಲ್ಲ.  ಆಗ ಅಲ್ಲಿಗ ಬಂದ ಕಳ್ಳರ ಗುಂಪೊಂದು ಅವನನ್ನು ಥಳಿಸಿ ಅವನ ಬಳಿಯಿದ್ದ, ಅವನಿಗೆ ಆಲ್ಖೆಮಿಸ್ಟ್ ಕೊಟ್ಟಿದ್ದ ,ಚಿನ್ನದ ಗಟ್ಟಿಯನ್ನು ಕಿತ್ತುಕೊಳ್ಳುತ್ತಾರೆ.  ಆಗ ಸ್ಯಾಂಟಿಯಾಗೋ  ತಾನು ಕಂಡ ಕನಸಿನ ನಿಧಿಯ ಬಗ್ಗೆ ಹೇಳಿದಾಗ ಆ ಕಳ್ಳರಲ್ಲೊಬ್ಬನು ತಾನು ಕಂಡ ನಿಧಿಯ ಕನಸಿನ ಬಗ್ಗೆ ಹೇಳಿ, ಅದು ಆಂಡಲೂಸಿಯಾದ ಪಾಳು ಬಿದ್ದ ಚರ್ಚಿನಲ್ಲಿ ಇರುವುದಾಗಿ ಹೇಳುತ್ತಾನೆ.     ಆಂಡಲೂಸಿಯಾಗೆ ಹಿಂದಿರುಗುವ ಸ್ಯಾಂಟಿಯಾಗೋ ಹಿಂದೆ ತಾನು ಮಲಗಿದ್ದ ಪಾಳು ಚರ್ಚಿನ ಸೈಕೊಮೋರ್ ಮರದಡಿ ಅಗೆಯುತ್ತಾನೆ.  ನಿಧಿಯಿದ್ದ ಪೆಟ್ಟಿಗೆ ಸಿಗುತ್ತದೆ.  ಆಗ ಈಜಿಪ್ಟಿನ ಮರುಭೂಮಿಯ ಕಡೆಯಿಂದ ಹಿತವಾದ ತಂಗಾಳಿ ಬೀಸಿ ಬರುತ್ತದೆ. ಅದರಲ್ಲಿ ಫಾತಿಮಾಳ ಪ್ರೀತಿಯ ಚುಂಬನದ ಸುಗಂಧವಿರುತ್ತದೆ.  ಅವಳ ಮೊದಲ ಚುಂಬನ!  ಪರವಶನಾದ ಸ್ಯಾಂಟಿಯಾಗೋ “ಫಾತಿಮಾ ಬಂಗಾರೀ  ನಾ ಬರ್ತೀನಿ ಮರೀ”  ಎನ್ನುವಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆ.            ಇಡೀ ಕಾದಂಬರಿಯನ್ನು ಆವರಿಸಿಕೊಳ್ಳುವ ಆಲ್ಖೆಮಿ ( ರಸವಿದ್ಯೆ) ಒಂದು ಪ್ರತಿಮೆಯಾಗಿ ಹೊಮ್ಮಿದೆ.  ಆಲ್ಖೆಮಿಯಲ್ಲಿ ಸಾಧಾರಣ ಲೋಹವೊಂದು ಚಿನ್ನವಾಗಿ ಮಾರ್ಪಡಲು ಅದು ಶುಚಿರ್ಭೂತವಾಗ ಬೇಕು. ಹೀಗೆ ಶುಚಿರ್ಭೂತವಾಗಲು ಅದು ಅನೇಕ ವಿಧಿಗಳಿಗೆ ಒಳಪಡ ಬೇಕಾಗುತ್ತದೆ. ಆಗ ಮಾತ್ರ ಅದು ಚಿನ್ನವಾಗಿ ಮಾರ್ಪಡಲು ಸಾಧ್ಯ. ಕಾದಂಬರಿಯ ನಾಯಕ ಸ್ಯಾಂಟಿಯಾಗೋ ಕೂಡ ಒಬ್ಬ ಸಾಧಾರಣ ಮನುಷ್ಯ. ಅವನು ತನ್ನನ್ನೇ ತಾನು ಶೋಧಿಸಿಕೊಳ್ಳ ಬೇಕಾದರೆ, ಆತ್ಮದ ಮಾತನ್ನು ಆಲಿಸುವ, ಪ್ರಕೃತಿ ಭಾಷೆಯನ್ನು ಅರಿಯುವ ಸಿದ್ಧಿಯನ್ನು ಪಡೆಯ ಬೇಕಾದರೆ,  ನಿಧಿಗಿಂತಲೂ ಹೆಚ್ಚಾದ ಫಾತಿಮಾಳ ಪ್ರೇಮದ ಮಹತ್ವವನ್ನು ಅರಿಯ ಬೇಕಾದರೆ ಅವನೂ ಕೂಡ

ಪುಸ್ತಕ ವಿಮರ್ಶೆ Read Post »

ಕಥಾಗುಚ್ಛ

ಕಥಾಯಾನ

ಮಕ್ಕಳ ಕಥೆ ಗರುಡನ ಆದರ್ಶ ರಾಜ್ಯ ಮಲಿಕಜಾನ ಶೇಖ     ವಿಂದ್ಯ ಪರ್ವತಗಳ ಇಳಿಜಾರು ಭಾಗದಲ್ಲಿ ‘ಸುಂದರಬನ’ ಎಂಬ ಸುಂದರ ಕಾಡು. ಹಚ್ಚ ಹಸಿರಿನ ಸಿರಿ, ಸುತ್ತಲೂ ಪರ್ವತ ಶ್ರೇಣಿ. ಅಲ್ಲಲ್ಲಿ ನೀರಿನ ಹೊಂಡಗಳು, ಜುಳು ಜುಳು ಹರಿಯುವ ನದಿ ಇವೆಲ್ಲವುಗಳಲ್ಲಿ ಹಾರಾಡಿ, ನಲಿದು ನೆಮ್ಮದಿಯಿಂದ ಬದುಕುವ ಪಕ್ಷಿ ಸಂಕುಲ. ಪಕ್ಷಿಗಳೆಲ್ಲಾ ಹಾರಾಡಿಕೊಂಡು ಗೂಡು ಮಾಡಿಕೊಂಡು ಸಂತೋಷವಾಗಿದ್ದವು. ಕಾಲ ಕ್ರಮೇಣ ಅವುಗಳಲ್ಲಿ ಸ್ವಾರ್ಥ ಬೆಳೆದು, ತಂಡ ಕಟ್ಟಿಕೊಂಡು ಕಳ್ಳತನ, ಸುಲಿಗೆ, ಅನ್ಯಾಯ, ಅತ್ಯಾಚಾರದಲ್ಲಿ ನಿರತರಾದವು. ಅದರಲ್ಲಿ ನೆರೆಯ ಕಾಡಿನ ಬರಗಾಲದಿಂದ ಅಲ್ಲಿಯ ಪಕ್ಷಿಗೂ ವಲಸೆ ಬರುವುದು ದೊಡ್ಡ ಸಮಸ್ಯೆಯಾಯಿತು.             ಈ ಬಗ್ಗೆ ಅಲ್ಲಿಯ ಎಲ್ಲ ಪಕ್ಷಿಗಳು ಕೂಡಿಕೊಂಡು ಸಮಾಲೋಚನೆ ಮಾಡಿದವು. ನಮ್ಮ ಪಕ್ಷಿಗಳ ಬದುಕು ನೆಮ್ಮದಿ, ಸಂತೋಷಕ್ಕೆ ಮರಳಬೇಕಾದರೆ ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ದಿಮತ್ತೆಗೆ  ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಆ ತೀರ್ಮಾನ ಮಾಡುವುದಿತ್ತು, ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಸಭೆಯ ಮುಂದೆ ಹೊಸ ಪೇಚು ನಿರ್ಮಾಣವಾಯಿತು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ ಪಕ್ಷಿಯ ಮನೆಯ ಮುಂದೆ ಕಾಳು ಹಾಕುವಂತೆ ಹೇಳಲಾಯಿತು. ಇದಕ್ಕಾಗಿ ಎಲ್ಲ ಪಕ್ಷಿಗಳಿಗೆ ಐದು ದಿನಗಳ ಅವಕಾಶ ಕೊಡಲಾಯಿತು.               ಮೂರು ಪಕ್ಷಿ ಕಾಡಿನ ಪಕ್ಷಿಗಳನ್ನು ಒಲಿಸಿಕೊಳ್ಳುವದಕ್ಕೆ ತಮ್ಮ ತಂಡ ಕಟ್ಟಿಕೊಂಡು ಹೊರಟವು. ಗರುಡ ಶಿಸ್ತಿನ ಸಿಪಾಯಿ, ದಿಟ್ಟ ಸ್ವಭಾವ, ಕೆಲಸದ ಬಗ್ಗೆ ಮಾತಾಡಿ ಕಾಡಿನಲ್ಲಿ ಸೇರುವ ವೈರಿಗಳನ್ನು ತಡೆಯಲು ಗಗನ ಯಾತ್ರೆಗೆ ಹಾರಿತು. ಗೂಬೆ ಕನಸು ದೊಡ್ಡದು ಆದರೆ ಹಗಲಿನಲ್ಲಿಯೆ ಡುಸ್ಸೆಂದು ಮಲಗುತಿತ್ತು. ರಾತ್ರಿ ಸ್ವಲ್ಪ ಎಲ್ಲರಿಗೆ ಬಣ್ಣದ ಲೋಕ ತೋರಿಸಿ ಮತ್ತೆ ಮಲಗುತಿತ್ತು. ಆದರೆ ಯಾವ ವಿಶೇಷ ಗುಣವಿಲ್ಲದ, ಹಳಸಿದ ಅನ್ನಕ್ಕೆ ಮತ್ತು ಕೊಳೆತ ಮಾಂಸಕ್ಕೆ ಜಾರುವ ಕಾಗೆಗೆ ಮಾತ್ರ ರಾಜನಾಗುವ ಬಯಕೆ ಬಹಳ. ಎಲ್ಲ ಪಕ್ಷಿಗಳ ಮುಂದೆ ಸತತ ಕಾ.. ಕಾ.. ಮಾಡುತ್ತಾ ಇಲ್ಲ ಸಲ್ಲದ ಮಾತುಗಳನ್ನು ಹೇಳುತಿತ್ತು. ‘ನಾನು ರಾಜನಾದರೆ ಗರುಡನಿಗಿಂತ ಎತ್ತರಕ್ಕೆ ಹಾರಿ, ವರುಣ ದೇವನನ್ನು ಸೋಲಿಸಿ ಕಾಡಲ್ಲಿ ಬರಗಾಲ ಬೀಳದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳುತಿತ್ತು. ಇಂತಹ ಮಾತುಗಳಿಗೆ ಮಾರು ಹೋಗಿ ಪಕ್ಷಿಗಳು ಸಾವಕಾಶ ಕಾಗೆಯತ್ತ ಜಾರಲು ಪ್ರಾರಂಭ ಮಾಡಿದವು. ಕಾಗೆ ತನ್ನ ಗುಂಪನ್ನು ಕರೆದು, ಪ್ರತಿ ಹಕ್ಕಿ ಗೂಡಿಗೆ ಕೊಳೆತ ಮಾಂಸದ ತುಣುಕು ಮತ್ತು ಹಳಸಿದ ಅನ್ನ ಹಾಕಲು ಹೇಳಿತು. ಆಗ ಮಾತ್ರ ದೊಡ್ಡ ಚಮತ್ಕಾರವೇ ಆಯಿತು. ಎಲ್ಲ ಹಕ್ಕಿಗಳು ಕಾಗೆಯೇ ನಮ್ಮ ರಾಜನೆಂದು ಹೇಳತೊಡಗಿದವು.             ಐದು ದಿನಗಳ ನಂತರ ನೋಡಿದರೆ ಕಾಗೆಯ ಮನೆಯ ಮುಂದೆ ಕಾಳಿನ ದೊಡ್ಡ ರಾಶಿಯೇ ಬಿದ್ದಿತ್ತು. ಗೂಬೆಗೆ ಸ್ವಲ್ಪ ಕಾಳು ಬಂದಿದ್ದವು ಆದರೆ ಗರುಡನಿಗೆ ಮಾತ್ರ ಒಂದು ಕಾಳೂ ಹಾಕಿರಲಿಲ್ಲ. ಅದಕ್ಕೆ ಬಹಳ ನೋವಾಯಿತು. ಹಕ್ಕಿಗಳಿಗೆ ‘ಶಿಸ್ತು, ಶೌರ್ಯ, ಶಾಂತಿ, ರಕ್ಷಣೆ’ ಬೇಕಾಗಿಲ್ಲ ಎಂದು ನೊಂದುಕೊಂಡಿತು.              ಅತ್ತ ಕಾಗೆಯ ಮನೆಯ ಮುಂದೆ ಮಾತ್ರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾಡಿನ ತುಂಬೆಲ್ಲಾ ‘ಕಾ,, ಕಾ,,’ ಕರ್ಕಶ ಧ್ವನಿಯು ಆವರಿಸಿತು. ಮರದಲ್ಲಿ ಹೊಲಸು ಮಾಡುವದರ ಜೊತೆಗೆ ಕಾಗೆ ಕಾರುಬಾರು ಪ್ರಾರಂಭಿಸಿತು. ತನ್ನ ದರಬಾರದಲ್ಲಿ ತಿಪ್ಪೆ ಕೆದರುವ ಕೋಳಿ, ಗೂಬೆ, ಬಾವುಲಿಗಳಂತ ಪಕ್ಷಿಗಳನ್ನು ಮಂತ್ರಿಗಳನ್ನಾಗಿ ಮಾಡಿ ಸಲಹೆ ಪಡೆಯುತಿತ್ತು.                   ಕಾಗೆ ರಾಜನಾದ ನಂತರ ಕಾಡಿನ ತುಂಬೆಲ್ಲಾ ಹೊಲಸುತನ ಪ್ರಾರಂಭವಾಯಿತು. ಹೊಲಸು ತಿಂದು ಹೊಲಸು ಮಾಡುವುದು ಹೆಚ್ಚಾಯಿತು. ಇಷ್ಟು ದಿನ ಗರುಡನಿಗೆ ಅಂಜಿ ಕುಳಿತ ಕಾಗೆಗಳ ಗ್ಯಾಂಗು ಸಕ್ರಿಯವಾದವು. ಎಲ್ಲ ಪಕ್ಷಿಗಳ ಮೇಲೆ ದಬ್ಬಾಳಿಕೆ ಪ್ರಾರಂಭವಾಯಿತು. ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ. ಮೊದಲಿದ್ದ ಸ್ವಾತಂತ್ರವು ಇಲ್ಲದಂತಾಯಿತು. ಆದರ್ಶ, ಬುದ್ಧಿಮತ್ತೆ ಮಣ್ಣಾಯಿತು. ಪಕ್ಷಿಗಳಿಗೆ ಪಶ್ಚಾತಾಪ ಆಗುತ್ತಲಿತ್ತು. ಅಂತಹದರಲ್ಲಿ ನೆರೆಯ ಕಾಡಿನ ಪಕ್ಷಿಗಳು ಈ ಕಾಡಿನ ಮೇಲೆ ಯುದ್ಧ ಸಾರಿದವು. ಎಲ್ಲ ಪಕ್ಷಿಗಳಿಗೆ ಮತ್ತಷ್ಟು ಚಿಂತೆಯಾಯಿತು. ‘ಚುಗುಲಿ’ ಮಾಡುವ ಕಾಗೆಗಳೇನು ಯುದ್ಧ ಮಾಡಬೇಕು.                    ಆಗ “ನಮ್ಮ ಕಾಡನ್ನು ರಕ್ಷಣೆ ಮಾಡುವದು ನನ್ನ ಧರ್ಮ” ಎಂದು ಗರುಡ ತನ್ನ ಸ್ನೇಹಿತರ ಸಹಕಾರದಿಂದ ವೀರಾವೇಶದಿಂದ ಕಾದಾಡಿ ಅವುಗಳನ್ನು ಹಿಮ್ಮೆಟ್ಟಿಸಿತು. ಎಲ್ಲ ಪಕ್ಷಿಗಳಿಗೆ ಗರುಡನ ಮೇಲೆ ಗರ್ವ ಎನಿಸಿತು. ಅವೆಲ್ಲವು ಗರುಡನ ಜಯ ಜಯಕಾರ ಹಾಕುತ್ತಾ ಬಂದು ಕ್ಷಮೆ ಕೇಳಿ, “ನೀನೆ ರಾಜನಾಗಬೇಕು ಮತ್ತು ಕಾಗೆಗಳ ಹೊಲಸು ವೃತ್ತಿಗೆ ಕಡಿವಾಣ ಹಾಕಬೇಕು” ಎಂದು ವಿನಂತಿಸಿಕೊಂಡವು. ಅಂದಿನಿಂದ ತ್ಯಾಗ, ಪ್ರಾಮಾಣಿಕ, ನಿಸ್ವಾರ್ಥಗಳಂತಹ ಆದರ್ಶ ಗುಣವುಳ್ಳ; ಶೌರ್ಯ ಮತ್ತು ಚತುರತೆಗೆ ಹೆಸರಾದ, ಪಕ್ಷಿಗಳ ಸ್ವಾತಂತ್ರ್ವವನ್ನು ರಕ್ಷಣೆ ಮಾಡಿ, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಗರುಡ ಪಕ್ಷಿಯು ರಾಜನಾಗುತ್ತದೆ. ಆಗ ಅಲ್ಲಿ ಮತ್ತೆ ಎಲ್ಲ ಪಕ್ಷಿಗಳು ನೆಮ್ಮದಿಯಿಂದ ಬದುಕುತ್ತವೆ. *******

ಕಥಾಯಾನ Read Post »

ಇತರೆ

ಪ್ರಸ್ತುತ

ಆತಂಕಗಳ ಸರಮಾಲೆ ರೇಷ್ಮಾ ಕಂದಕೂರ ಮಗು ಎಂಬುದು ದೈವಿಕ ಶಕ್ತಿ .ಮಗುವಿನಲ್ಲಿ ಅವ್ಯಕ್ತ ಭಯ ಭಾವನೆಗಳು ಆತಂಕ ಇದ್ದೇ ಇರುತ್ತದೆ . ಕೆಲವು ಪೋಷಕರಿಗೆ ಇದರ ಅರಿವು ಇರುತ್ತದೆ,ಕೆಲವರಿಗೆ ಇರುವುದಿಲ್ಲ,ಮಕ್ಕಳ ಆತಂಕಕ್ಕೆ ಕಾರಣಗಳೇನು? ಆ ಕಾರಣಗಳ ಮೂಲ ಏನು ಎಂಬುದು ತಿಳಿಯದೇ ಮಕ್ಕಳು ಹೆದರಿಕೊಳ್ಳುವರು ಏಕೆ ಹೀಗೇಕೆ ಎಂಬ ಪ್ರಶ್ನೆ ಕಾಡತೊಡಗುತ್ತದೆ.ಮಕ್ಕಳ ವರ್ತನೆ ಬದಲಾಗುವ ರೀತಿ ಕಂಡು ಒಳಗೊಳಗೆ ಕೊರಗುತ್ತಾರೆ.      ಇದರಿಂದ ಮಗು ಕೂಡ ತಂದೆ ತಾಯಿಯ ತಿರಸ್ಕಾರಕ್ಕೆ ಒಳಗಾಗುತ್ತದೆ. ನಾನು ಪರಿತ್ಯಕ್ತ  ಎಂಬ ಭಾವನೆ ಮೂಡತೊಡಗುತ್ತದೆ.ಕೋಪ ನಿರ್ಲಕ್ಷ ಭಾವನೆಗಳು ಕೂಡ ವ್ಯಕ್ತವಾಗುತ್ತದೆ.ಮಕ್ಕಳ ಪ್ರತೀಕಾರದ,ಅಪರಾಧದ ಸ್ವಭಾವಗಳು  ದ್ವಿಗುಣಗೊಳ್ಳುತ್ತದೆ.    ಬರೀ   ಹೆತ್ತವರಾಗದೆ ಹೃದಯವಂತ ಹೆತ್ತವರಾಗಿ .ಪ್ರೀತಿ ವಾತ್ಸಲ್ಯದೊಂದಿಗೆ ಸ್ವತಂತ್ರ ಆಲೋಚನೆ ಮಾಡಲು ಪ್ರೇರಣೆ ನೀಡಿ.ಆತ್ಮವಿಶ್ವಾಸ,ಧೈರ್ಯ ವೃದ್ಧಿಸುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ  ಭಿನ್ನಾಭಿಪ್ರಾಯಗಳು ಬಂದಾಗ ಉಪಶಮನಕ್ಕೆ ಆಲೋಚನಾ ಶಕ್ತಿ ಮದ್ದಾಗುತ್ತದೆ‌.        ಉದ್ವೇಗ,ಭಾವಾತೀರೇಕ ಒಳಗಾಗದೆ ಸೌಮ್ಯ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಉತ್ತಮ.ಮಕ್ಕಳ ಮುಂದೆ ಹುಲಿ ಸಿಂಹಗಳಂತೆ ಎಗರಾಡಿದರೆ ಮಕ್ಕಳು ಹರಿಣರಾಗುವರು. ಮೊನಚಾದ ಟೀಕೆಗಳು ಭವಿಷ್ಯಕ್ಕೆ ಕರಾಳವಾಗುವ ಸಂಭವ ಹೆಚ್ಚು.ಟೀಕೆಗಳು ಸಾಂಧರ್ಭಿಕವಾಗಿ ಸಂವಹನವಾಗಬೇಕೇ ಹೊರತು ಗೆಳೆಯರ ಮುಂದೆ ಮಾನ ಹೋಗುವಂತಹುದಾಗಬಾರದು.  ಅನುಭವಗಳೇ ವ್ಯವಹರಿಸುವ ಪಾಠ ಕಲಿಸುತ್ತದೆ . ತಾಳ್ಮೆ ಅಗತ್ಯ.ಮಕ್ಕಳು ಅನುಕರಣೆ ಮಾಡುತ್ತವೆ ಹಾಗಾಗಿ   ಮಕ್ಕಳ ಮುಂದಿರುವಾಗ ಹೆತ್ತವರ ವರ್ತನೆ ಮೊದಲು ಎಚ್ಚರಿಕೆಯದಾಗಿರಬೇಕು.         ಭಾವನೆಗಳು ಹೊಳೆಯ ಹರಿವಿನಂತೆ.ಹೊಳೆಯ ಹರಿವನ್ನು ನಿಧಾನವಾಗಿ ಹರಿಯ ಬಿಡಬೇಕೆ ಹೊರತು ಭೋರ್ಗರೆವ ಪ್ರವಾಹ ರೀತಿ ಇರಬಾರದು. ಭಾವಶಕ್ತಿಯನ್ನು ಗೌರವಿಸಬೇಕು.ಸರಿಯಾದ ದಾರಿ ಕಲ್ಪಿಸಬೇಕು.ಬಲವಂತ ಮಾರ್ಗಕ್ಕಿಂತ ಮಿಗಿಲಾಗಿ ಅನುಯಯಿಸುವಲ್ಲಿ ಶಕ್ತಿಯಿದೆ.ಹೀಗಾಗಿ ಮಕ್ಕಳ ಜೊತೆ ಉತ್ತಮ ಸಂಬಂಧಗಳನ್ನು ಸ್ಥಾಪಿಸುವುದು ಆದ್ಯ ಕರ್ತವ್ಯವಾಗಬೇಕಿದೆ.ಸಂವೇದನಾಶೀಲತೆಯಿಂದ ಮಕ್ಕಳ ವಿಚಾರಗಳನ್ನು ಆಲಿಸುವ ಮೂಲಕ ಅವರಲ್ಲಿ ಇತ್ಯಾತ್ಮಕ ಬದಲಾವಣೆ ಉಂಟಾಗಬಹುದು.ಮಕ್ಕಳು ಅಲಕ್ಷ್ಯದಿಂದ ಹತಾಶರಾಗುತ್ತಾರೆ.ಹೆತ್ತವರು ಮಕ್ಕಳನ್ನು ಹೃನ್ಮನದಿಂದ ಗೆಲ್ಲಬೇಕು.ಆಲೋಚನೆ ಪ್ರಾರಂಭವಾದರೆ ತಪ್ಪು ನಡುವಳಿಕೆಗಳನ್ನು ಅರಿಯಲಾರಂಭಿಸುತ್ತಾರೆ‌. ಮಕ್ಕಳೊಂದಿಗೆ ಎಚ್ಚರದಿಂದ ವ್ಯವಹರಿಸೋಣ, ಆತಂಕ ದೂರಮಾಡೋಣ. *********

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಕೆ.ಬಿ.ಸಿದ್ದಯ್ಯ ಹುಳಿಯಾರ್ ಷಬ್ಬೀರ್ ದಲಿತ ಕೇರಿಯ ಹುಡುಗ ಅಲ್ಲಮನ ಮಹಾಮನೆ ಹೊಕ್ಕು ದಲಿತರ ಅಕ್ಷರ ಲೋಕವನ್ನು ಅರಮನೆಯಾಗಿಸಿದ.. ದಲಿತ ಕಾವ್ಯೋದ್ಭದಲ್ಲಿ ಚಿಂತನೆಯ ಫಲ ಬೆರೆಸಿ ಮಸ , ಮಸೆದು ಹತಾರಗಳನ್ನು ಖಂಡಕಾವ್ಯವಾಗಿಸಿದವರು ಮೊನಚು ಮಾತು ಬಿಳಿಯ ಗಡ್ಡದೊಳ್ ಬೆರಳಾಟದ ಚೆಂದದೊಂದಿಗೆ ಅಂಬೇಡ್ಕರ್ ಕೂಗೇ ನಿಮ್ಮ ಕೂಗಾಗಿ ಗಾಂಧಿ ಬುದ್ಧನನ್ನು ನಿಮ್ಮೆರಡು ಕೈಗಳಲ್ಲಿ ತಬ್ಬಿ ಹಿಡಿದವರು .. ಭೌತಿಕ ಜಗತ್ತು ಆಧ್ಯಾತ್ಮದ ಮುಂದೆ ಸೋಲುವಂತೆ ಬಕಾಲ ಮುನಿಯಾಗಿ ಶಬ್ದಕ್ಕೆ ಶಬ್ದವೇ ನಾಚುವಂತೆ ಅದರಾಚೆಗೂ … ಗಲ್ಲೆಬಾನಿಯಲ್ಲೆ ಅದ್ದಿ ಅನಾತ್ಮ ಅರಿವಾಗಿಸಿ, ದಕ್ಲದೇವಿ ಕಾವ್ಯ ಕುಲುಮೆಯ ಒಲೆಯಲ್ಲಿ ಕುದ್ದು ಖಂಡಕಾವ್ಯದ ಕಿಡಿಯಾಗಿ.. ಇಡಿಯಾಗಿ ಸುತ್ತಲಿನ ಬೆಳಕಿನ ಬೆಳಕಾಗಿದ್ದು ಬಸವಣ್ಣಮಾತು ಮುತ್ತಿನಹಾರವಾದಂತೆ ಈ ದೇಹ, ನನ್ನ ದೇಹ, ಇಡೀ ದೇಹ ಭವದ ಸಾಲ ಎಂದಿದ್ದು ಸತ್ಯವಾಗಿದೆ..ಕೆ. ಬಿ. ಸತ್ಯವಾಗಿದೆ. *****************************

ಕಾವ್ಯಯಾನ Read Post »

ಇತರೆ

ಚರ್ಚೆ

ಕನ್ನಡ ಸಂಸ್ಕೃತಿಯ ಕಡೆಗಣನೆ ಮಲ್ಲಿಕಾರ್ಜುನ ಕಡಕೋಳ ಹೊಸ ಸರ್ಕಾರಗಳು ರಚನೆಯಾಗುವಾಗ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ “ಮಂತ್ರಿಗಿರಿ” ಯಾರೂ ಬಯಸುವುದಿಲ್ಲ. ಇಲ್ಲವೇ ಅದಕ್ಕಾಗಿ ಪೈಪೋಟಿ ಇರುವುದೇ ಇಲ್ಲ. ಸಾಮಾನ್ಯವಾಗಿ ಪವರ್ಫುಲ್ ರಾಜಕಾರಣಿಗಳಿಗಂತೂ ಅದು ಬೇಡದ ಇಲಾಖೆಯೇ ಆಗಿರ್ತದೆ. ಇದುವರೆಗೂ ಯಾರೊಬ್ಬರೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಬೇಕೆಂದು ಬಯಸಿ, ಹಟ ಹಿಡಿದು ಮಂತ್ರಿಯಾದ ಉದಾಹರಣೆಗಳಿಲ್ಲ. ಹೀಗೆ ಬಹುಪಾಲು ಮಂದಿ ವೃತ್ತಿಪರ ರಾಜಕಾರಣಿಗಳಿಗೆ ಬೇಡವಾದ ಇಲಾಖೆ ಇದು. ಅಷ್ಟಕ್ಕೂ ಕಾಟಾಚಾರಕ್ಕೆ ಮಂತ್ರಿಯಾಗಿ ಬಂದವರಿಂದ ಇಲಾಖೆಗೆ ನ್ಯಾಯ ದೊರಕೀತಾದರೂ ಹೇಗೆ ? ಹೀಗಾಗಿ ದೊಡ್ಡ ದೊಡ್ಡ ಬಜೆಟ್ಟಿನ, ಯಥೇಚ್ಛ ಪ್ರಮಾಣದ ಆಮದಾನಿ ಬರುವ ಇಲಾಖೆಯ ಮಂತ್ರಿ ಪದವಿ ಮೇಲೆಯೇ ಅಧಿಕ ಕಣ್ಣುಗಳು. ಊಟದ ಜತೆಗೆ  ಉಪ್ಪಿನಕಾಯಿ ಸೈಡಿಗಿರಲಿ ಎಂಬಂತೆ ಆದಾಯದ ಖಾತೆಗಳ ಜತೆಗೆ ಇದನ್ನು  ನೆಂಚಿಗೆಗೆಂಬಂತೆ ಕನ್ನಡ-ಸಂಸ್ಕೃತಿ ಇಲಾಖೆಯ ಮಂತ್ರಿ ಪದವಿಯ ಬಳಕೆಯಾಗಿರುವುದೇ ಅಧಿಕ.   ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆಂದೇ ಎಕ್ಸ್ ಕ್ಲೂಸಿವ್ ಆದಂತಹ ಸಚಿವರಾಗಿ ಪ್ರಮಾಣವಚನ ಪಡೆದು ಪೂರ್ಣ ಪ್ರಮಾಣದ ನ್ಯಾಯದೊರಕಿಸಿ ಕೊಟ್ಟ ನಿದರ್ಶನಗಳು ಕ್ವಚಿತ ಎಂದೇ ಖಚಿತವಾಗಿ ಹೇಳಬಹುದು. ಕೆ. ಎಚ್. ಶ್ರೀನಿವಾಸ್, ಡಾ. ಜೀವರಾಜ ಆಳ್ವ… ಹೀಗೆ ಒಂದೆರಡ್ಮೂರು  ನಿದರ್ಶನಗಳು ದೊರಕಬಹುದು. ಆದರೆ ಇತ್ತೀಚಿನ ದಿನಮಾನಗಳಲ್ಲಿ ಇಂತಹ ನಿದರ್ಶನಗಳು ಇಲ್ಲವೆಂದೇ ಹೇಳಬಹುದು. ಬೇಕೋ ಬೇಡವೋ ಎನ್ನುವವರಿಗೆ ಇಲಾಖೆಯ ಉಸಾಬರಿ. ಹೀಗೆ ಬೇಡದವರಿಗೆ ಬೇಡದ ಖಾತೆ ದೊರಕಿದಾಗ ಇಲಾಖೆಯ ಅಭ್ಯುದಯ ಕನಸಿನ ಮಾತೇ. ಇದು ನಮ್ಮ ಕನ್ನಡದ ಸರ್ಕಾರಗಳು, ಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಕುರಿತಾಗಿ ಹೊಂದಿರುವ ಅನನ್ಯತೆಯೇ ? ಮಾತೆತ್ತಿದರೆ ಕನ್ನಡ ಮತ್ತು ಸಂಸ್ಕೃತಿ ಕುರಿತು ಅಪಾರ ಕಳಕಳಿ ತೋರುವ ರಾಜಕಾರಣಿಗಳಿಗೇ ಇಲಾಖೆ ಕುರಿತು ಖರೇ ಖರೇ ಕಾಳಜಿ ಇಲ್ಲ. ಪ್ರಾಯಶಃ ಅವರೆಲ್ಲರ ಲೆಕ್ಕಾಚಾರವೆಂದರೆ ಈ ಇಲಾಖೆಯ ಬಜೆಟ್ ಅಲ್ಪ ಪ್ರಮಾಣದ್ದು. ಅಜಮಾಸು ನಾಲ್ಕುನೂರು ಕೋಟಿ. ಪ್ರಾಯಶಃ  ಕೆಲವು ಪ್ರಾಧಿಕಾರ, ನಿಗಮ, ಮಂಡಳಿಗಳಿಗಿರಬಹುದಾದಷ್ಟು ಬಜೆಟ್. ಲಾಭಮಾಡಿ ತೋರಿಸಬೇಕೆಂದರೆ ಅದು ಕೆಲವರ ಪ್ರಕಾರ ಅನುತ್ಪಾದಿತ.    ಈ ಬಾರಿ ನಾಲ್ಕುನೂರು ಕೋಟಿಯಲ್ಲಿ ಅರ್ಧದಷ್ಟು ಹಣ ಮಾತ್ರ ಇಲಾಖೆಗೆ ಮೀಸಲಿಟ್ಟಿರುವಾಗ ಕನ್ನಡ ಸಂಸ್ಕೃತಿಯ ಕುರಿತು ಸರಕಾರದ ಕಾಳಜಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ಧದಷ್ಟು ಕಡಿಮೆ ಹಣದಲ್ಲಿ ಕನ್ನಡದ ಸಂಸ್ಕೃತಿ ಕೆಲಸ ಹೇಗೆ ಸಾಧ್ಯ ? ಹತ್ತಾರು ಉತ್ಸವ, ಇಪ್ಪತ್ತೆಂಟು ಜಯಂತಿ, ಹತ್ತಿಪ್ಪತ್ತು ಸಂಖ್ಯೆಯ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಮಾಡುವ ಪ್ರಮುಖ ಜವಾಬ್ದಾರಿ ಇಲಾಖೆಯದು.  ಸಣ್ಣದೊಂದು ಜಿಲ್ಲಾಮಟ್ಟದ ಕಚೇರಿಯಿಂದ ಹಿಡಿದು ವಿಧಾನಸೌಧದ ಮೂರನೇ ಮಹಡಿವರೆಗೂ ಸಾಮಾನ್ಯ ಕಲಾವಿದ, ಸಾಹಿತಿ, ಜನಪದರಿಗೆ ನಿಲುಕದ ಯೋಜನೆಗಳು. ಈಗೆಲ್ಲವೂ ಗಣಕೀಕರಣದ ಗಮ್ಮತ್ತು. ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಆನ್ ಲೈನ್ ಅರ್ಜಿಗಳನ್ನು ಸಲ್ಲಿಸಬೇಕು. ತಮಟೆ, ಡೊಳ್ಳು, ಹಲಗೆ, ನುಡಿಸುವ ಹಳ್ಳಿಯ ಅನಕ್ಷರಸ್ಥ ಕಲಾವಿದನಿಗಿದು ನಿಲುಕದ ನಕ್ಷತ್ರ. ಬಹುಪಾಲು ಬುದ್ದಿವಂತ, ಜಾಣರಿಗೇ ಆನ್ ಲೈನ್ ಅರ್ಜಿ ಸಲ್ಲಿಸುವುದು ಹರಸಾಹಸದ ಕೆಲಸ. ಕಡೆಯಪಕ್ಷ ಇದನ್ನಾದರೂ ಇಲಾಖೆ ಸರಳಗೊಳಿಸಬೇಕಿದೆ. ಆದರೆ ಕಲಾವಿದರಿಗೆ ಗೌರವಧನ ” ಆರ್ಟಿಜಿಎಸ್ ” ಮೂಲಕ ಸಲ್ಲಿಕೆಯಾಗುವುದು ಸ್ವಾಗತಾರ್ಹ. ಇನ್ನು ಮಾಸಾಶನ ಮಂಜೂರಾತಿಗಾಗಿ ಗ್ರಾಮೀಣ ಕಲಾವಿದರು ವರ್ಷಗಟ್ಟಲೇ ಕಾಯಬೇಕು. ಕೆಲವರು ಕಾದು ಕಾದೂ ಸತ್ತೇ ಹೋಗುತ್ತಾರೆ. ಹೀಗಾಗಿ ಮಾಸಾಶನ ಕೆಲವರ ಪಾಲಿಗೆ ಒಮ್ಮೊಮ್ಮೆ ಮರಣ ಶಾಸನದಂತಾಗಿದೆ.   ಸಂಸ್ಕೃತಿಯ ಸಂಪ್ರೀತಿ, ಅಂತಃಕರಣದ ಆಡುಂಬೊಲ ಆಗಬೇಕಿದ್ದ ಇಲಾಖೆ, ಇತರೆ ಬ್ಯುರೋಕ್ರಟಿಕ್ ಇಲಾಖೆಗಳ ತರಹ  ದಿನೆ ದಿನೇ ಸಂವಹನಶೀಲತೆ, ಸಹೃದಯತೆ, ಸಾಂಸ್ಕೃತಿಕ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದೆ. ಜನಸಂಸ್ಕೃತಿಯಿಂದ ದೂರ ದೂರ ಸರಿಯುತ್ತಿದೆ. ಕೆಲವು ನಿರ್ದಿಷ್ಟವಾದ ವಾರ್ಷಿಕ ಅನುದಾನಗಳ ಮಂಜೂರಾತಿಯಲ್ಲಿ ಯಥೇಚ್ಛ ಭ್ರಷ್ಟಾಚಾರ. ಇದಕ್ಕಾಗಿಯೇ ಮಧ್ಯವರ್ತಿ ಏಜೆಂಟರುಗಳಿದ್ದಾರೆ. ಈ ಏಜೆಂಟರು ಸರ್ಕಾರದ ಉನ್ನತ ಅಧಿಕಾರ ಮಟ್ಟದಲ್ಲೇ ಪರ್ಸೆಂಟೇಜ್ ವ್ಯವಹಾರ ಮಾಡುವಲ್ಲಿ ನಿಸ್ಸೀಮರು. ಒಬ್ಬರೇ ಬೇರೆ ಬೇರೆ ಹೆಸರುಗಳಲ್ಲಿ ಕಲಾತಂಡ ಕಟ್ಟಿಕೊಂಡಿರುತ್ತಾರೆ. ಅವರಿಗೆಲ್ಲ ಉಲ್ಲೇಖಿತ ಏಜೆಂಟರು ಅನುದಾನ, ಇತರೆ ಕಾರ್ಯಕ್ರಮ ಕೊಡಿಸುವಲ್ಲಿ, ನಡೆಯದ ಕಾರ್ಯಕ್ರಮಗಳ ಜಿಎಸ್ಟಿ ಸಮೇತವಾದ ವ್ಯವಸ್ಥಿತ ದಾಖಲೆಪತ್ರಗಳನ್ನು ಒದಗಿಸುವಲ್ಲಿ ಇವರು ನಿಪುಣ ಪ್ರಳಯಾಂತಕರು.    ಇಂತಹ (ಅ)ವ್ಯವಹಾರದಲ್ಲಿ ಬೆಂಗಳೂರಿಗೆ ಮಾತ್ರ ಅಗ್ರಸ್ಥಾನ ಎಂದುಕೊಳ್ಳಬೇಕಿಲ್ಲ. ದೂರದ ಬೀದರ, ಬಿಜಾಪುರಗಳೇನು ಹಿಂದೆ ಬಿದ್ದಿಲ್ಲ. ಇದೆಲ್ಲದಕ್ಕು ಅಧಿಕಾರಿಗಳ ಫುಲ್ ಸಹಕಾರವಿಲ್ಲದೇ ಸಾಧ್ಯವಿಲ್ಲ. ಕೆಲವು ಮಹಿಳಾ ಅಧಿಕಾರಿಗಳು ಸಹ ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ನಿಗೂಢವೇನಲ್ಲ. ಯಾವುದೇ ಸೃಜನಶೀಲ ಕಲೆ ಸರಕಾರದ ಅನುದಾನಗಳನ್ನೇ ಅವಲಂಬಿಸಿ ಬದುಕಬಾರದು. ಹಾಗೆ ಬದುಕಿದಾಗ ಅವುಗಳ ಆತ್ಮಸಾಕ್ಷಿಯ ಗೌರವಕ್ಕೆ ಕುಂದುಂಟು. ಆತ್ಮಗೌರವ ಕಳೆದುಕೊಂಡ ಕಲೆ ಮತ್ತು ಕಲಾವಿದರು ಬಹುಕಾಲ ಬದುಕುವುದಿಲ್ಲ. ಹಾಗೆಂದು ಸರ್ಕಾರದ ಧನಸಹಾಯ ಬೇಡವೆಂಬುದಲ್ಲ. ಅನುದಾನಕ್ಕಾಗಿಯೇ ಕಲಾತಂಡಗಳೆಂಬುದಲ್ಲ. ಈಗ್ಗೆ ಆರೇಳು ದಶಕಗಳ ಹಿಂದೆ ಇಂತಹ ಯಾವ ಆಸೆಬುರುಕತನ ಇಲ್ಲದೇ ಬಹುಸಂಖ್ಯೆಯಲ್ಲಿ ನಾಟಕ ಸಂಸ್ಥೆಗಳು ನವರಸಭರಿತ ರಂಗಸಂಸ್ಕೃತಿಯ ಸಂಚಲನೆ ಮೂಡಿಸಿದ್ದವು. ಈಗಿನಂತೆ ಫುಲ್ ಕಾಮೆಡಿ ಎಂಬ ಟ್ಯಾಗ್ ಲೈನ್ ಹಾಕಿಕೊಂಡು, ಏಕರಸ ಪ್ರಧಾನದ  ಹಾಸ್ಯಕ್ಕಾಗಿಯೇ ನಾಟಕಗಳೆಂದು ಬಿಂಬಿತವಾಗಿರಲಿಲ್ಲ. ಹೌದು ಆಗ ಅಕ್ಷರಶಃ  ಹಾಸ್ಯರಸ ಋಷಿಗಳಿದ್ದರು.    ಸಂಸ್ಕೃತಿಯ ಸದವಕಾಶ ಮತ್ತು ಸೌಲಭ್ಯಗಳ ಕುರಿತು ಸಣ್ಣದೊಂದು ನಿದರ್ಶನ ಇಲ್ಲಿ ಉಲ್ಲೇಖಿಸುವೆ. ಅಮೆರಿಕೆಯ “ಅಕ್ಕ” ಫೆಸ್ಟಿವಲ್ ಸೇರಿದಂತೆ ಬಹುಪಾಲು ಅವಕಾಶಗಳು ಬೆಂಗಳೂರು ಕಡೆಯವರಿಗೇ ದಕ್ಕುತ್ತವೆ. ಅದಕ್ಕೆಲ್ಲ ದೊಡ್ಡಮಟ್ಟದ ಲಾಬಿ. ಯಾಕಂದರೆ ಬೆಂಗಳೂರು ಗು-ಲಾಬಿ ನಗರ ಅಲ್ಲವೇ ? ಹೀಗಾಗಿ ಮತ್ತೆ, ಮತ್ತೆ ಸಿಕ್ಕವರಿಗೇ ಮತ್ತೆ ಮತ್ತೆ ಅವಕಾಶಗಳು. ಒಂದು ಡಜನ್ನಿಗೂ ಹೆಚ್ಚಿಗಿರುವ ಅಕಾಡೆಮಿಗಳು, ಅಲ್ಲದೆ ಪ್ರಾಧಿಕಾರ, ಬಹುಪಾಲು ಪ್ರತಿಷ್ಠಾನಗಳು ಬೆಂಗಳೂರಿನಲ್ಲಿಯೇ ಗೂಟ ಹೊಡೆದುಕೊಂಡಿವೆ. ವಾಸ್ತವವಾಗಿ ಈಗ ಆಗಿರುವುದು ಕರ್ನಾಟಕದ ರಾಜಕೀಯ ಏಕೀಕರಣ. ಅದರಲ್ಲೂ ಎರಡು ಪ್ರಮುಖ ಜಾತಿಗಳ ಏಕೀಕರಣ. ಸಾಂಸ್ಕೃತಿಕ ಏಕೀಕರಣ ಆಗಬೇಕಿದೆ. ಅದರ ಮೂಲಕ ಸಮಗ್ರ ಕರ್ನಾಟಕದ ಸಾಂಸ್ಕೃತಿಕ ವಿಕೇಂದ್ರೀಕರಣದ  ಸಂಪನ್ನತೆ ಸಮೃದ್ಧಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ನೀಡಿರುವ “ಸಾಂಸ್ಕೃತಿಕ ನೀತಿ ವರದಿ”ಯನ್ನು ಜಾರಿಗೆ ತರಬೇಕಿದೆ. ಸೋಜಿಗದ ಸಂಗತಿ ಎಂದರೆ ಯಾವುದೇ ಸರಕಾರಗಳು ಅಸ್ತಿತ್ವಕ್ಕೆ ಬಂದಾಗಲೂ ಕನ್ನಡದ ಅಸ್ಮಿತೆ ಹಾಗೂ ಅಭಿವೃದ್ಧಿ ಕುರಿತಾದ ಇಂತಹ ಜನಸಂಸ್ಕೃತಿಪರ  ವರದಿಗಳನ್ನು ನೇಪಥ್ಯಕ್ಕೆ ನುಸುಳಿಸುವ ಹುನ್ನಾರಗಳು ಜಾಣತನದಿಂದಲೇ ಜರುಗುತ್ತವೆ.    ಕೆಲವು ಅಕಾಡೆಮಿಗಳು ಸಾಂಸ್ಕೃತಿಕ ಕ್ರಿಯಾಶೀಲತೆ ಕಳೆದುಕೊಂಡು ಸರಕಾರಿ ಕಚೇರಿಗಳಂತಾಗಿ ಅವು ಪ್ರಶಸ್ತಿಗಳನ್ನು ನೀಡುವ ಯಂತ್ರಗಳಾಗಿವೆ. ಮತ್ತೆ ಕೆಲವು ನೀಡಿದ ಪ್ರಶಸ್ತಿ ವಾಪಸು ಪಡೆಯುವ ನಿರ್ದಯ ಸ್ಥಿತಿ ತಲುಪಿವೆ. ಅವುಗಳ ಏಕತಾನತೆ ಮತ್ತು ಇತರೆ ಚಟುವಟಿಕೆಗಳ ಕುರಿತು ಪ್ರತ್ಯೇಕವಾಗಿ ಇನ್ನೊಮ್ಮೆ ಬರೆದರಾಯಿತು. ಈ ಬಾರಿಯಂತು ಹಣದ ಕೊರತೆ ಎಂದು ಅವು ಕೊರಗುವಂತಾಗಿದೆ. ಸರಕಾರ ಯಾವ ಪಕ್ಷದ್ದೇ ಇರಲಿ ಕೆಲವರಿಗೆ ಕೆಲವು ಅಕಾಡೆಮಿಗಳ ಸದಸ್ಯತ್ವ ಖಾಯಂ. ಇಂತಹ ಅವಕಾಶವಾದಿಗಳ ಕುರಿತು ಸರ್ಕಾರ ಮತ್ತು ಇಲಾಖೆ ಎಚ್ಚರ ವಹಿಸಬೇಕಿದೆ. ಇನ್ನೊಂದೆಡೆ  ಕೋಟಿ, ಕೋಟಿ ಹಣ ಖರ್ಚುಮಾಡುವ ರಂಗಾಯಣಗಳು ಏಕತಾನೋತ್ಸವಗಳ ಕೊರೋನಾ ರೋಗದಿಂದ ಬಳಲುತ್ತಿವೆ. ದಶಕಗಳೇ ಕಳೆದರೂ ಜನ ಸಾಮಾನ್ಯರಿಗೆ ರಂಗಾಯಣಗಳ ಪೂರ್ಣ ಪರಿಚಯವೇ ಆಗಿಲ್ಲ. ಜಾಗತಿಕ ಮಟ್ಟದಲ್ಲಿ ಗುರುತರಗೊಂಡಿರುವ ಮೈಸೂರು ರಂಗಾಯಣ  ಜಿಲ್ಲೆಯಾಚೆ ಹೊರ ಜಿಲ್ಲೆಯ ಸಾಮಾನ್ಯ ರಂಗಾಸಕ್ತರ ಗಮನ ಸೆಳೆಯಲಿಲ್ಲ. ಇನ್ನು ಅವುಗಳ ರಂಗ ಸಂಸ್ಕೃತಿಯ ಲಾಭದ ವಿಷಯ ಬಹುದೂರದ ಮುಗಿಲಮಾತು. ಶೇಕಡಾ ಹತ್ತರಷ್ಟು ಜನರನ್ನೂ ರಂಗಾಯಣಗಳು ತಲುಪಿಲ್ಲ. ಜನಸಾಮಾನ್ಯರಿಗೆ ಇವರ ನಾಟಕಗಳು ಅರ್ಥವಾಗುವುದಿಲ್ಲ. ಸಾಮಾನ್ಯರಿಗಾಗಿ ರಂಗಾಯಣ ಅಲ್ಲ  ಬುದ್ದಿಜೀವಿಗಳಿಗೆ ರಂಗಾಯಣ ಎನ್ನುವಂತಾಗಿದೆ. ಅದಕ್ಕೆಂದೇ ಕೆಲವರ ಕಣ್ಣಿಗೆ ರಂಗಾಯಣಗಳು ಬಿಳಿಯಾನೆಗಳಂತೆ ಹೊಳೆಯುತ್ತಿವೆ.  ಜನಮಾನಸದಲ್ಲಿ ಕಂಪನಿ ಶೈಲಿಯ ವೃತ್ತಿ ನಾಟಕಗಳು ಇವತ್ತಿಗೂ ಜನಜನಿತ. ದುರಂತವೆಂದರೆ ಅವು ಸದಭಿರುಚಿ ಬೆಳೆಸುವ ರಂಗಪರಂಪರೆಯಿಂದ ದೂರ ಸರಿದಿವೆ. ಸೋಜಿಗವೆಂದರೆ ಇದುವೇ ಪ್ರಜಾಸತ್ತಾತ್ಮಕ  ರಂಗಸಂಸ್ಕೃತಿಯ ಗೆಲುವು‌ ಎಂಬಂತಾಗಿದೆ.   ಮೊನ್ನೆ, ಮೊನ್ನೆಯಷ್ಟೇ ನಿಧನರಾದ ಪಾಟೀಲ ಪುಟ್ಟಪ್ಪನಂಥವರು, ಅವರ ಪೂರ್ವದ ಕೆ. ವಿ. ಪುಟ್ಟಪ್ಪ, ದ. ರಾ. ಬೇಂದ್ರೆ, ಡಾ. ರಾಜಕುಮಾರ್ ಅಂಥವರು ಸರಕಾರದ ಸಾಂಸ್ಕೃತಿಕ ಮತ್ತು ಕನ್ನಡ ವಿರೋಧಿ ನೀತಿಗಳ ಕುರಿತು ಮಾತನಾಡಿದರೆ ಅಂದು ಪ್ರಭುತ್ವ ಕಣ್ಣು, ಕಿವಿ ತೆರೆದು ಗಂಭೀರವಾಗಿ ಆಲಿಸುತ್ತಿತ್ತು. ಕೂಡಲೇ ವಿಧಾನಸೌಧದ ಮೂರನೇ ಮಹಡಿ ಸೂಕ್ತ ಪರಿಹಾರಕ್ಕೆ  ಮುಂದಾಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಸರ್ಕಾರದ ಇಂತಹ ಅಸಡ್ಡೆತನಗಳ ಬಗ್ಗೆ ಯಾರಾದರೂ  ಧ್ವನಿ ಎತ್ತಿದರೆ ಸಾಕು, ಅದು ಯಾರ ಧ್ವನಿ ?, ಯಾವ ಧ್ವನಿ ? ಅದು ಎಡನೋ, ಬಲನೋ ? ಎಂದು ಅನುಮಾನಿಸುವ ಮಟ್ಟ ಮುಟ್ಟಿರುವುದು ಬಹುದೊಡ್ಡ ಸಾಂಸ್ಕೃತಿಕ ದುರಂತ. ಇದು ಕನ್ನಡ ಸಂಸ್ಕೃತಿಯ ಕಡೆಗಣನೆ ಮಾತ್ರವಲ್ಲ. ಕನ್ನಡ ಭಾಷೆ, ಸಂಸ್ಕೃತಿ ಮಾತ್ರವಲ್ಲ ಒಟ್ಟು ಬದುಕಿನ ಮೇಲೆ ಬೀಸುತ್ತಿರುವ ವಿಷಮ ಪಾರಮ್ಯದ ಗಾಳಿಯ ದುರಿತಕಾಲವೆಂದೇ ಭಾವಿಸಬೇಕಾಗುತ್ತದೆ. **********

ಚರ್ಚೆ Read Post »

ಇತರೆ

ಪ್ರಸ್ತುತ

ಇದು  ಲಾಕ್ಡೌನ್ ಸಮಯ ರೇಶ್ಮಾ ಗುಳೇದಗುಡ್ಡಾಕರ್ ಕರೋನಾದ ತಲ್ಲಣ ದಿನದಿನಕ್ಕೂ ಅಗಾಧವಾಗಿ ವ್ಯಾಪಿಸುತ್ತಿದೆ .     ಲಾಕ್ ಡೌನ್ ನಿಂದ ಸೀಲ್ ಡೌನ್ಗೆ ನಾವು ಸಿದ್ದರಾಗುತ್ತಿದ್ದೇವೆ .  ಪ್ರಾಣಿಗಳು ಸ್ವಚ್ಚಂದವಾಗಿ ಸಂಚರಿಸುತ್ತಾ ತಮ್ಮ ಸ್ವಾತಂತ್ರ್ಯ ಅನುಭವಿಸುತ್ತಿವೆ. ಮತ್ತೊಂದೆಡೆ ಇಡೀ ದೇಶದಲ್ಲೇ ವಾಯುಮಾಲಿನ್ಯ ಗಣನೀಯವಾಗಿ ತಗ್ಗಿದೆ.!! ನಮ್ಮ ರಾಷ್ಟ್ರದ ರಾಜಧಾನಿ ದೆಹಲಿ ಒಂದು ಕಾಲದಲ್ಲಿ ಹವಾಮಾನ ವೈಪರೀತ್ಯದಿಂದ ತತ್ತರಿಸಿ ಹೋಗಿತ್ತು .ಈಗ ಅದು ಹಳೆ ಮಾತು ಬಿಡಿ . ಮಹಾನಗರಿಗಳು ಮೌನವಾಗಿವೆ.  ಸದಾ ಜನಜಂಗುಳಿಯಿಂದ ಕೂಡಿ ನಿಶ್ಯಬ್ದತೆಯನ್ನು ಮರೆತ ನಗರಿಗಳು ಇಂದು ಸ್ತಬ್ದವಾಗಿವೆ .ನರನಿಗೆ ಸೂಕ್ಷ್ಮ ಜೀವಿಯೊಂದು ಸೆಡ್ಡು ಹೊಡೆದು ಅವನ ಬಂಧಿಯಾಗಿಸಿದೆ .!? ನವಿಲುಗಳು ಹೊರ ಬಂದು ನರ್ತಿಸುತ್ತಿವೆ .! ಜಿಂಕೆಗಳು ,ಕಾಡು ಪ್ರಾಣಿಗಳು ವಾಹನಗಳ ಭಯವಿಲ್ಲದೆ ರಸ್ತೆ ಯಲ್ಲಿ ಸಂಚರಿಸುತ್ತಿವೆ . ಸೂಕ್ಷ್ಮವಾಗಿ  ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಾನವ ಬಂಧಿಯಾದ ಆಗಾಧ ಬುದ್ಧಿಶಕ್ತಿ ಇದ್ದರೂ, ಪ್ರಾಣಿಗಳು ಸ್ವಂತ್ರವಾದವು .   ನೆರೆ , ಭೂಕಂಪ , ಸುನಾಮಿ ಯಂತಹ ಪ್ರಕೃತಿ ವಿಕೋಪ ಕಲಿಸದ ಪಾಠ ಸೂಕ್ಷ್ಮಾಣು ಜೀವಿ ಕಲಿಸಿತು . ವಿಶ್ವವನ್ನೆ ಒಂದು ಕುಟುಂಬ ಮಾಡಿ ಸಾವು ನೋವು ಎಲ್ಲರಿಗೂ ಒಂದೇ .ಎಂಬ ಮಂತ್ರ ಹೇಳಿತು .    ಸಾಂಕ್ರಾಮಿಕ ರೋಗಗಳು ಮನುಕುಲಕ್ಕೆ ಹೊಸದಲ್ಲ.  ಇತಿಹಾಸದ ಪುಟ ತೆರೆದು ನೋಡಿದಾಗ ಕಾಲರ ,ಸಿಡುಬು ಮೂಂತಾದ ರೋಗಗಳು ಮನುಕುಲಕ್ಕೆ ಮಾರಿಯಾಗಿ ಹೊಸ ಅನ್ವೇಷಣೆಯ.  ಉದಯಕ್ಕೆ ಕಾರಣವಾದವು, ಸಾಧನೆಯ ದಾರಿ ತೋರಿದವು ಎಂದರೆ ತಪ್ಪಾಗಲಾರದು . ಎರಡು ಶತಮಾನಗಳ ಹಿಂದೆ ಸಿಡುಬು ರೋಗ ಜನರ ಬದುಕನ್ನು ಕಸಿದಿತ್ತು .ಅಗ ಎಡ್ವರ್ಡ್‌ ಜನ್ನರ್ ಸಿಡುಬಿಗೆ ಲಸಿಕೆ ಅನ್ವೇಷಣೆ ಮಾಡಿದರು ಇದು  .ಹಲವಾರು ಜೀವಗಳನ್ನು ಉಳಿಸಲು ಕಾರಣವಾಯಿತು. ಇಂದು ಕೊರೊನಾ ವಿಶ್ವದಾದ್ಯಂತ ತನ್ನ ಅರ್ಭಟ ಮುಂದುವರೆಸಿದೆ . ಜನರ ಆರ್ಥಿಕ ,ಸಾಮಾಜಿಕ, ಮಾನಸಿಕ ,ದೈಹಿಕ ವಲಯಗಳ ಮೇಲೆ ಗಂಭೀರ ಪ್ರಮಾಣದ ಬದಲಾವಣೆಗೆ ಕಾರಣವಾಗಿದೆ ..! ಪರಿಣಾಮ ಲಾಕ್ ಡೌನ್ ಉಂಟಾಗಿದೆ .  ಮನೆಯಲ್ಲಿ ಇರುವದೇ  ಹಲವರಿಗೆ ಒಂದು ಸವಾಲು .ಗೃಹಿಣಿ ಯರಿಗೆ ಲಾಕ್ಡೌನ್ ಸೀಲ್ ಡೌನ್ ಹೆಚ್ಚು ವ್ಯತ್ಯಾಸ ಇಲ್ಲ .ಏಕೆಂದರೆ ಅಡುಗೆ ಮನೆಗೆ ರಜೆ ಘೋಷಣೆ  ಸಾದ್ಯವಿಲ್ಲ .ಬದಲಾಗಿ ಕೆಲಸ ಹೆಚ್ಚಿದೆ .ಮತ್ತೆ ಹಲವರಿಗೆ ಕಡಿಮೆಯಾಗಿದೆ.  ಲೋಕೋ ಬಿನ್ನರುಚಿಃ ಅಲ್ಲವೆ ? ನಮಗಾಗಿ ನಮ್ಮವರಿಗಾಗಿ ನಾವು ಮನೆಯಲ್ಲಿ ಉಳಿಯುವದು ಒಂದು ಜವಾಬ್ದಾರಿ .ನಾವು ಉಳಿಯೊಣ ಇತರರನ್ನು ಉಳಿಸೋಣ .ಸಾಮೂಹಿಕವಾಗಿ ಸೇರುವ ಸ್ಥಳಗಳನ್ನು ನಿಷೇಧಿಸೋಣ ನಮ್ಮವರ ಹಿತಕ್ಕಾಗಿ ಪ್ರಾರ್ಥನೆ, ಪೂಜೆ ಎಲ್ಲವನ್ನು ಮನೆಯಲ್ಲೇ ಮಾಡೋಣ .      ಸಾದ್ಯ ವಾದರೆ ಓದು ,ಕಲಿಕೆ ,ಬರವಣಿಗೆ ಎಂಬ ಹತ್ತು ಹಲವು ಬಗೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳೋಣ  .ನಮ್ಮ ಚಟುವಟಿಕೆಗಳು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತವೆ .ಆಸಕ್ತಿ ಬದ್ದತೆ ನಮ್ಮನ್ನು ಉತ್ತುಂಗಕ್ಕೆ ಒಯ್ಯುವುದರಲ್ಲಿ ಸಂಶಯವೇ ಇಲ್ಲ . ಬದುಕಿನಲ್ಲಿ ಬದಲಾವಣೆ ನಿರಂತರ .ಈ ಬದಲಾವಣೆಯನ್ನು ಋಣಾತ್ಮಕ ಅಥವಾ ಧನಾತ್ಮಕವಾಗಿ ನೋಡುವದು ನಮ್ಮ ಮನದ ನೋಟದಲ್ಲಿದೆ . ಹೀಗಾಗಿ ಅನಿವಾರ್ಯತೆಯನ್ನು ನಾವು ಸದುಪಯೋಗ ಪಡಿಸಿಕೊಳ್ಳೋಣ . ದಿನದಿನಕ್ಕೆ ಕರೋನಾ ತನ್ನ ವ್ಯಾಪ್ತಿ ಯನ್ನು ಹೆಚ್ಚಿಸಿಕೊಳ್ಳುತ್ತಿದೆ . ನಾವು ನಿಷೇಧವನ್ನು ಸಂಪೂರ್ಣವಾಗಿ ಬೆಂಬಲಿಸಿ ಪಾಲಿಸೋಣ  ಇಲ್ಲವಾದರೆ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಾಗುತ್ತದೆ . ಎಲ್ಲವೂ ನಮ್ಮ ಮನಸ್ಥಿಯನ್ನು ಅವಲಂಬಿಸಿದೆ ಮತ್ತಷ್ಟು ಮಗದಷ್ಟು ಕಲಿಯೋಣ ಮನೆಯಲಿ ಇರೋಣ ಕರೋನ ಓಡಿಸೋಣ ‌. *******

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ನದಿ ದಡದಲಿ ನಡೆದಾಡಿದಂತೆ ಶೋಭಾ ನಾಯ್ಕ.ಹಿರೇಕೈ ಕಂಡ್ರಾಜಿ ಕವಿತೆ ಬರಿ ಅಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ! ಕಿರುಬೆರಳ ನೀ ಹಿಡಿದು ಕಣ್ಮುಂದೇ.. ಬಂದಂತೆ ನದಿ ದಡದ ಮೇಲೆಲ್ಲ ನಡೆದಾಡಿ ಹೋದಂತೆ ಹೋದಲ್ಲಿ ಬಂದಲ್ಲಿ ಹೂ ಅರಳಿ ನಕ್ಕಂತೆ ನಕ್ಷತ್ರವನೇ ಕಿತ್ತು ಕಣ್ಮುಂದೆ ಇಟ್ಟಂತೆ ಅಂಗೈ ಗೆರೆಗಳ ಮೇಲೆ ಕವನಗಳ ಬರೆದಂತೆ ನಯನಗಳು ಒಂದಾಗಿ ಪ್ರೇಮವನೇ ಉಂಡಂತೆ ಅರಬ್ಬಿಯ ಅಲೆಗಳಲಿ ಹೊರಳಾಡಿ ಮಿಂದಂತೆ ದೂರ ತೀರವ ದಾಟಿ ಹೊಸ ಲೋಕ ಕಂಡಂತೆ ಹಾಯಿ ದೋಣಿಯ ಏರಿ ಹಾಡುತ್ತ ಹೋದಂತೆ ಹೊಸ ಹಾದಿಯಲಿ ನಾವು ಹೊಸ ಜನ್ಮ ಪಡೆದಂತೆ….. ಕವಿತೆ ಬರೆ ಎಂದರೆ ಕವಿತೆ ಹುಟ್ಟದು ಗೆಳೆಯ ಹುಟ್ಟುವುದು ಕನಸು ಮಾತ್ರ. *********

ಕಾವ್ಯಯಾನ Read Post »

You cannot copy content of this page

Scroll to Top