ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆತಂಕಗಳ ಸರಮಾಲೆ

Village Baby Images, Stock Photos & Vectors | Shutterstock

ರೇಷ್ಮಾ ಕಂದಕೂರ

ಮಗು ಎಂಬುದು ದೈವಿಕ ಶಕ್ತಿ .ಮಗುವಿನಲ್ಲಿ ಅವ್ಯಕ್ತ ಭಯ ಭಾವನೆಗಳು ಆತಂಕ ಇದ್ದೇ ಇರುತ್ತದೆ . ಕೆಲವು ಪೋಷಕರಿಗೆ ಇದರ ಅರಿವು ಇರುತ್ತದೆ,ಕೆಲವರಿಗೆ ಇರುವುದಿಲ್ಲ,ಮಕ್ಕಳ ಆತಂಕಕ್ಕೆ ಕಾರಣಗಳೇನು? ಆ ಕಾರಣಗಳ ಮೂಲ ಏನು ಎಂಬುದು ತಿಳಿಯದೇ ಮಕ್ಕಳು ಹೆದರಿಕೊಳ್ಳುವರು ಏಕೆ ಹೀಗೇಕೆ ಎಂಬ ಪ್ರಶ್ನೆ ಕಾಡತೊಡಗುತ್ತದೆ.ಮಕ್ಕಳ ವರ್ತನೆ ಬದಲಾಗುವ ರೀತಿ ಕಂಡು ಒಳಗೊಳಗೆ ಕೊರಗುತ್ತಾರೆ.

     ಇದರಿಂದ ಮಗು ಕೂಡ ತಂದೆ ತಾಯಿಯ ತಿರಸ್ಕಾರಕ್ಕೆ ಒಳಗಾಗುತ್ತದೆ. ನಾನು ಪರಿತ್ಯಕ್ತ  ಎಂಬ ಭಾವನೆ ಮೂಡತೊಡಗುತ್ತದೆ.ಕೋಪ ನಿರ್ಲಕ್ಷ ಭಾವನೆಗಳು ಕೂಡ ವ್ಯಕ್ತವಾಗುತ್ತದೆ.ಮಕ್ಕಳ ಪ್ರತೀಕಾರದ,ಅಪರಾಧದ ಸ್ವಭಾವಗಳು  ದ್ವಿಗುಣಗೊಳ್ಳುತ್ತದೆ.

   ಬರೀ   ಹೆತ್ತವರಾಗದೆ ಹೃದಯವಂತ ಹೆತ್ತವರಾಗಿ .ಪ್ರೀತಿ ವಾತ್ಸಲ್ಯದೊಂದಿಗೆ ಸ್ವತಂತ್ರ ಆಲೋಚನೆ ಮಾಡಲು ಪ್ರೇರಣೆ ನೀಡಿ.ಆತ್ಮವಿಶ್ವಾಸ,ಧೈರ್ಯ ವೃದ್ಧಿಸುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ  ಭಿನ್ನಾಭಿಪ್ರಾಯಗಳು ಬಂದಾಗ ಉಪಶಮನಕ್ಕೆ ಆಲೋಚನಾ ಶಕ್ತಿ ಮದ್ದಾಗುತ್ತದೆ‌.

       ಉದ್ವೇಗ,ಭಾವಾತೀರೇಕ ಒಳಗಾಗದೆ ಸೌಮ್ಯ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಉತ್ತಮ.ಮಕ್ಕಳ ಮುಂದೆ ಹುಲಿ ಸಿಂಹಗಳಂತೆ ಎಗರಾಡಿದರೆ ಮಕ್ಕಳು ಹರಿಣರಾಗುವರು. ಮೊನಚಾದ ಟೀಕೆಗಳು ಭವಿಷ್ಯಕ್ಕೆ ಕರಾಳವಾಗುವ ಸಂಭವ ಹೆಚ್ಚು.ಟೀಕೆಗಳು ಸಾಂಧರ್ಭಿಕವಾಗಿ ಸಂವಹನವಾಗಬೇಕೇ ಹೊರತು ಗೆಳೆಯರ ಮುಂದೆ ಮಾನ ಹೋಗುವಂತಹುದಾಗಬಾರದು.  ಅನುಭವಗಳೇ ವ್ಯವಹರಿಸುವ ಪಾಠ ಕಲಿಸುತ್ತದೆ . ತಾಳ್ಮೆ ಅಗತ್ಯ.ಮಕ್ಕಳು ಅನುಕರಣೆ ಮಾಡುತ್ತವೆ ಹಾಗಾಗಿ   ಮಕ್ಕಳ ಮುಂದಿರುವಾಗ ಹೆತ್ತವರ ವರ್ತನೆ ಮೊದಲು ಎಚ್ಚರಿಕೆಯದಾಗಿರಬೇಕು.

        ಭಾವನೆಗಳು ಹೊಳೆಯ ಹರಿವಿನಂತೆ.ಹೊಳೆಯ ಹರಿವನ್ನು ನಿಧಾನವಾಗಿ ಹರಿಯ ಬಿಡಬೇಕೆ ಹೊರತು ಭೋರ್ಗರೆವ ಪ್ರವಾಹ ರೀತಿ ಇರಬಾರದು. ಭಾವಶಕ್ತಿಯನ್ನು ಗೌರವಿಸಬೇಕು.ಸರಿಯಾದ ದಾರಿ ಕಲ್ಪಿಸಬೇಕು.ಬಲವಂತ ಮಾರ್ಗಕ್ಕಿಂತ ಮಿಗಿಲಾಗಿ ಅನುಯಯಿಸುವಲ್ಲಿ ಶಕ್ತಿಯಿದೆ.ಹೀಗಾಗಿ ಮಕ್ಕಳ ಜೊತೆ ಉತ್ತಮ ಸಂಬಂಧಗಳನ್ನು ಸ್ಥಾಪಿಸುವುದು ಆದ್ಯ ಕರ್ತವ್ಯವಾಗಬೇಕಿದೆ.ಸಂವೇದನಾಶೀಲತೆಯಿಂದ ಮಕ್ಕಳ ವಿಚಾರಗಳನ್ನು ಆಲಿಸುವ ಮೂಲಕ ಅವರಲ್ಲಿ ಇತ್ಯಾತ್ಮಕ ಬದಲಾವಣೆ ಉಂಟಾಗಬಹುದು.ಮಕ್ಕಳು ಅಲಕ್ಷ್ಯದಿಂದ ಹತಾಶರಾಗುತ್ತಾರೆ.ಹೆತ್ತವರು ಮಕ್ಕಳನ್ನು ಹೃನ್ಮನದಿಂದ ಗೆಲ್ಲಬೇಕು.ಆಲೋಚನೆ ಪ್ರಾರಂಭವಾದರೆ ತಪ್ಪು ನಡುವಳಿಕೆಗಳನ್ನು ಅರಿಯಲಾರಂಭಿಸುತ್ತಾರೆ‌.

ಮಕ್ಕಳೊಂದಿಗೆ ಎಚ್ಚರದಿಂದ ವ್ಯವಹರಿಸೋಣ, ಆತಂಕ ದೂರಮಾಡೋಣ.

*********

About The Author

1 thought on “ಪ್ರಸ್ತುತ”

  1. ರೇಶ್ಮಾ ಗುಳೇದಗುಡ್ಡಾಕರ್

    ನಿಜ ಮೇಡಂ ತುಂಬಾ ಸೂಕ್ಷ್ಮ ವಿಚಾರವಿದು ಚನ್ನಾಗಿ ಹೇಳಿರುವಿರಿ

Leave a Reply

You cannot copy content of this page

Scroll to Top