ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನದಿ ದಡದಲಿ ನಡೆದಾಡಿದಂತೆ

ಶೋಭಾ ನಾಯ್ಕ.ಹಿರೇಕೈ ಕಂಡ್ರಾಜಿ

ಕವಿತೆ ಬರಿ ಅಂದರೆ
ಕವಿತೆ ಹುಟ್ಟದು ಗೆಳೆಯ
ಹುಟ್ಟುವುದು ಕನಸು ಮಾತ್ರ!

ಕಿರುಬೆರಳ ನೀ ಹಿಡಿದು
ಕಣ್ಮುಂದೇ.. ಬಂದಂತೆ
ನದಿ ದಡದ ಮೇಲೆಲ್ಲ
ನಡೆದಾಡಿ ಹೋದಂತೆ

ಹೋದಲ್ಲಿ ಬಂದಲ್ಲಿ
ಹೂ ಅರಳಿ ನಕ್ಕಂತೆ
ನಕ್ಷತ್ರವನೇ ಕಿತ್ತು
ಕಣ್ಮುಂದೆ ಇಟ್ಟಂತೆ

ಅಂಗೈ ಗೆರೆಗಳ ಮೇಲೆ
ಕವನಗಳ ಬರೆದಂತೆ
ನಯನಗಳು ಒಂದಾಗಿ
ಪ್ರೇಮವನೇ ಉಂಡಂತೆ

ಅರಬ್ಬಿಯ ಅಲೆಗಳಲಿ
ಹೊರಳಾಡಿ ಮಿಂದಂತೆ
ದೂರ ತೀರವ ದಾಟಿ
ಹೊಸ ಲೋಕ ಕಂಡಂತೆ

ಹಾಯಿ ದೋಣಿಯ ಏರಿ
ಹಾಡುತ್ತ ಹೋದಂತೆ
ಹೊಸ ಹಾದಿಯಲಿ ನಾವು
ಹೊಸ ಜನ್ಮ ಪಡೆದಂತೆ…..

ಕವಿತೆ ಬರೆ ಎಂದರೆ
ಕವಿತೆ ಹುಟ್ಟದು ಗೆಳೆಯ
ಹುಟ್ಟುವುದು ಕನಸು ಮಾತ್ರ.

*********

About The Author

4 thoughts on “ಕಾವ್ಯಯಾನ”

  1. Nagraj Harapanahalli.karwar

    ಚೆಂದ ಕವಿತೆ…ಕನಸು‌, ಆಶಾವಾದ ಬಿತ್ತುವ ಕವಿತೆ…

    1. ಎಂ. ಕುಸುಮ

      ಕನಸಿಗೂ ಕವಿತೆಗೂ ಸೇತುವೆ ಕಟ್ಟುವ ಕವನ, ಚೆನ್ನಾಗಿದೆ.

Leave a Reply

You cannot copy content of this page

Scroll to Top