ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭೀಮ ದೀಪ

LIVE Ambedkar Jayanti 2020 Updates: बाबा साहेब के कारण ...

ಎ ಎಸ್. ಮಕಾನದಾರ

ಸಮ ಸಮಾಜದ ಕನಸುಗಾರ
ಭಾರತ ಮಾತೆಯ ಕುವರ ಡಾ. ಬಿ ಆರ್. ಅಂಬೇಡ್ಕರ್ !

ಕಪ್ಪು ನೆಲದ
ಕೆಂಪುಗಣ್ಣಿನ
ಪಾರಿವಾಳ ಗುಣದ ಭೀಮ !

ಕೋಮುವಾದ ಬ್ರಾಮಣ್ಯ
ಬಂಡವಾಳಶಾಹಿಗಳ
ಬಣ್ಣ ಬಯಲು ಮಾಡಿದ

ಸಮಾನತೆಯ
ಮಂತ್ರ ಜಪಿಸಿ
ಕಪ್ಪು ಜನರ ಸೂರ್ಯನಾದ

ಬಿಳಿ ಕರಿಯರ ನಡುವಿನ
ಅಡ್ಡಗೋಡೆಯ ಕೆಡವಿದ
ಅಪ್ರತಿಮ ಚಿಂತಕ

ದ್ವೀಪಗಳಾಗಿದ್ದ ಕೇರಿ ಮೊಹಲ್ಲಾ
ಬಡಾವಣೆಗಳಲ್ಲಿ
ಚೈತನ್ಯ ದೀಪ ಬೆಳಗಿಸಿದ

ವರ್ಗ ವರ್ಣದ
ವಿಷದ ಹಾವಿಗೆ
ಹೆಡಮುರಿಗೆ ಕಟ್ಟಿದ

ಲೋಕ ನಿಂದೆಗೆ ಬೆದರದ
ಧರ್ಮ ದರ್ಪಕೆ ಹೆದರದ
ಕೊಳೆತ ಹಣ್ಣಲ್ಲೂ ಬಿತ್ತಗಿ ಬೀಜ ತುಂಬಿದ

ಬುದ್ಧ ಬಸವರನು ಪ್ರೀತಿಸಿದ
ನೊಂದವರ ಕೊರಳಲಿ ಧ್ವನಿಸಿ
ಕತ್ತಲ ಕೇಡು ಕಳೆದ ಭೀಮದೀಪ

*******

About The Author

2 thoughts on “ಕಾವ್ಯಯಾನ”

  1. Dr.pushpavati shalavadimath

    ಸತತ 21 ತಾಸು ಅಧ್ಯಯನ ಮಾಡಿ ಅರ್ಥಶಾಸ್ತ್ರ ವಿಷಯದಲ್ಲಿ ವಿದೇಶದಲ್ಲಿ ಸಂಶೋಧನೆ ನಡೆಸಿದ ಮೊದಲ ಭಾರತೀಯ.ಭಾರತಾಂಬೆಯ ಹೆಮ್ಮೆಯ
    ಕುವರ.ಭಾರತಕ್ಕೆ ಲಿಖಿತ ಸಂವಿಧಾನ ಬರೆಯುವ
    ಮುನ್ನ ಜಗತ್ತಿನ ಎಲ್ಲ ಲಿಖಿತ ಸಂವಿಧಾನ ಅಧ್ಯಯನ
    ಮಾಡಿದವರು. ಇವರು ಭಾರತದ ಮೌಢ್ಯತೆ ಕಳೆದ ಸೂರ್ಯ.ಸಮತೆಯ ಮಮತೆಯ ನಂದಾದೀಪ
    ಬೆಳಗಿದ ಭೀಪದೀಪ.ಕತ್ತಲೆಯುಂಡು ಜಗಕೆ ಜ್ಞಾನದ
    ಬೆಳಕನಿತ್ತ ಅರಿವಿನ ದೀಪ. ಸುಟ್ಟುಕೊಂಡು ಬೆಳಗುವ
    ನೀತಿಯಿಟ್ಟುಕೊಂಡು ಬದುಕಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ
    ಕುರಿತು ಬರೆದ ಎಸ್ ಮಕಾನದಾರರ ಕವಿತೆ ಅರ್ಥಪೂರ್ಣವಾಗಿದೆ. ಅಂಬೇಡ್ಕರವರನ್ನು
    ನೆನೆಯುವುದೆಂದರೆ ಮನುಷ್ಯ ಮನುಷ್ಯರನ್ನು
    ಅರಿತಂತೆ.ಮನುಷ್ಯ ಪ್ರತಿ ಮನುಷ್ಯನನ್ನು
    ಗೌರವಿಸಿದಂತೆ. ಮನದ ವಿಚಾರಗಳನ್ನು ಹೊರ
    ಹಾಕಲು ವೇದಿಕೆ ಕೊಟ್ಟ ಭೀಮದೀಪಕ್ಕೂ ಕವಿಗೂ
    ನಮನಗಳು.

Leave a Reply

You cannot copy content of this page

Scroll to Top