ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕವಿತೆ ಕಾರ್ನರ್

ಯಾತನೆಯ ದಿನಗಳು

ಇವು ಯಾತನೆಯ ದಿನಗಳುರಾಜಕೀಯ ಪರಿಬಾಷೆಯಲ್ಲಿ ಬಣ್ಣಿಸಲಾಗದಂತಹ,ಕವಿತೆಗಳನ್ನಾಗಿಸಲೂ ಸಾದ್ಯವಿರದಂತಹ-ಕತೆಗಳನ್ನಾಗಿಸಲೂ ಸಂಯಮವಿರದಂತಹ ಕಾಲ! ಅದೆಲ್ಲೊ ಆಧಾರ್ ಲಿಂಕ್ ಇರದೆಹಸಿವಿನಿಂದ ಹೆಣ್ಣು ಮಗುವೊಂದು ಸಾಯುತ್ತದೆಅದೆಲ್ಲೋ ಹೆಣ್ಣೊಬ್ಬಳನ್ನುಅತ್ಯಾಚಾರ ಮಾಡಿ ಯೋನಿಗೆ ಸಲಾಕೆ ತೂರಿಸಿ ಕೊಲ್ಲುತ್ತಾರೆಅದೆಲ್ಲೋ ತುಂಬು ಬಸುರಿಯ ಗರ್ಭಸೀಳಿಹುಟ್ಟಬೇಕಿರುವ ಮಗುವ ಕೊಲ್ಲುತ್ತಾರೆ ಹಸಿದವಳೊಬ್ಬಳು ತುಂಡು ರೊಟ್ಟಿಕದ್ದಿದ್ದಕ್ಕೆ ಬೆತ್ತಲು ಮಾಡಿಮೆರವಣಿಗೆಮಾಡುತ್ತಾರೆಅದೆಲ್ಲೊ ಸತ್ತ ದನದ ಚರ್ಮಸುಲಿದ ತಪ್ಪಿಗೆ ದಲಿತ ಯುವಕರನ್ನುಥಳಿಸಲಾಗುತ್ತದೆಅದೆಲ್ಲೋ ಅವರುಗಳನ್ನೆದುರಿಸಿಮಾತಾಡಿದವರನ್ನು ಹತ್ಯೆಗಯ್ಯಲಾಗುತ್ತದೆ ಇವೆಲ್ಲವನ್ನೂ ಅದೆಲ್ಲೋಅಂತಂದುಕೊಂಡುಮೌನಕ್ಕೆ ಮುಗಿಬಿದ್ದ ನನ್ನಷಂಡತನಕ್ಕೆ ಸಾಕ್ಷಿಯಾಗಿಹೊಟ್ಟೆತುಂಬ ಉಂಡು ತೇಗುತ್ತೇನೆ ಗೆಳೆಯರೊಂದಿಗೆ ಹೊಸದೊಂದುವಾದವಿವಾದಕ್ಕಾಗಿ ಹೊಸಆಯುಧಗಳನ್ನು ಅನ್ವೇಷಿಸಲುಮುಂದಾಗುತ್ತೇನೆ,ಸವಕಲಾದ ಅವೇ ಹಳೆಯ ಶಬುದಗಳಮತ್ತೆ ಮಸೆದು ಮಚ್ಚಾಗಿಸಿಹಲ್ಲು ಕಚ್ಚುತ್ತೇನೆದಿನದಂತ್ಯಕ್ಕೆ ಮಾತಿನಮಲ್ಲಯುದ್ದದಲ್ಲಿ ಗೆದ್ದಸಂಭ್ರಮದಲ್ಲಿಪಲ್ಲಂಗದಲ್ಲಿ ಪವಡಿಸುತ್ತೇನೆ ನಾನು ಬದುಕಿರುವುದಕ್ಕೆ ಸಾಕ್ಷಿಯಾಗಿ ಆಗೀಗಕನ್ನಡಿಯೊಳಗೆ ಇಣುಕಿನನ್ನ ಚಹರೆಯ ಇರುವಿಕೆಯ ಬಗ್ಗೆಖಾತರಿ ಪಡಿಸಿಕೊಳ್ಳುತ್ತೇನೆಇದೀಗ ಯಾತನೆಯ ಕಾಲಬರೆದ ಕವಿತೆ ಕತೆಗಳ ಸುಟ್ಟು ಹಾಕಿಅದೇ ಬೆಂಕಿಯಲ್ಲಿಒಳಿತೊಂದನ್ನು ಅರಸುವ ಕಾಲ

ಯಾತನೆಯ ದಿನಗಳು Read Post »

ಇತರೆ

ಪ್ರೀತಿಯೆನಲು ಹಾಸ್ಯವೇ

ಚಂದ್ರಪ್ರಭ ಅದು ಜಗಳವೆ.. ಕದನವೆ.. ಶೀತಲವೆ.. ಮುಕ್ತವೆ? ಯಾವುದೂ ಅಲ್ಲ. ಆದರೆ ಅವರು ಕಾಯಂ ಗುದ್ದಾಡುವುದಂತೂ ಸತ್ಯ. ಒಮ್ಮೊಮ್ಮೆ ತೆರೆದ ಗುದ್ದಾಟ.. ಒಮ್ಮೊಮ್ಮೆ ಮುಸುಕಿನ ಗುದ್ದಾಟ.. ಕಾಲನ ಪ್ರವಾಹದ ಬಿಸಿ. ಭಿನ್ನ ಭಿನ್ನ ತೀರಗಳಲ್ಲಿದ್ದೇ ದಿನ ದೂಡುವುದು ಸಹಜ ರೂಢಿಯಾಗಿದೆ ಅವರಿಗೆ. ಅದನ್ನು ಆಧುನಿಕತೆ ತಂದ ವಿಪತ್ತು, ನೀವು ಬಲಿಪಶು ಎಂದರೆ ಅವರಿಗೆ ಬೇಸರಾಗುತ್ತದೆ.. ಮಾಡರ್ನ್ ಯುಗದ ಪ್ರೊಡಕ್ಟ್ ಅಂದಾಗ ಕೊಂಚ ಸಮಾಧಾನ. ಸಂತಾನದೆದುರು ಮಾದರಿಯಾಗಿರಲು ಹರಸಾಹಸಪಡುತ್ತಾರೆ ಅವರು.. ಆದರೂ ಎಳೆಯ ಜೀವಗಳಿಗೆ ಇವರ ಜಗ್ಗಾಟದ ವಾಸನೆ ಬಡಿಯುತ್ತದೆ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವಾಗಲೂ ಅವರು ‘… ಒಲವೆ ನಮ್ಮ ಬದುಕು’ ತರಹದ ಸಾಲುಗಳನ್ನು ಗುನುಗುತ್ತಾರೆ. ಆಗೀಗ ತಾವು ಆಸ್ಥೆಯಿಂದ ಕಟ್ಟಿದ ಮನೆಯಲ್ಲಿ ಒಟ್ಟು ಸೇರಿ ಸಂಭ್ರಮಿಸುತ್ತಾರೆ. ಕರ್ತವ್ಯದ ಕರೆಯಾಲಿಸಿ ನಾಲ್ವರು ನಾಲ್ಕು ದಿಕ್ಕಾಗುವ ಅವರು ಜಾಲ ತಾಣಗಳಲ್ಲಿ ಇಂಟರ್ ಕನೆಕ್ಟೆಡ್ ಆಗುತ್ತಾರೆ. ಸಾಹಿತ್ಯ, ರಾಜಕಾರಣ, ಸಿನಿಮಾ, ಪ್ರಚಲಿತ ವಿದ್ಯಮಾನ ಎಲ್ಲವುಗಳ ಮೇಲೆಯೂ ಕಮೆಂಟಿಸುತ್ತಾರೆ.. ಭೇಟಿಗಳಲ್ಲಿ ಒಮ್ಮೊಮ್ಮೆ ಅಭಿಪ್ರಾಯ ಭೇದ ಕಾಡುವಾಗ ಮುನಿದು ಮುಖ ತಿರುವಿಕೊಳ್ಳುತ್ತಾರೆ. ಉದ್ವಿಗ್ನತೆಯಲ್ಲೂ ನೆನಪಾಗುತ್ತದೆ ಅವರಿಗೆ ಕವಿ ಸಾಲು – ‘… ಹತ್ತಿರವಿದ್ದರೂ ದೂರ ನಿಲ್ಲುವೆವು.. ಕೋಟೆಯಲಿ.. ‘ ತಂತಮ್ಮ ಕೋಟೆಯಲ್ಲಿ ನಿಂತುಕೊಂಡೇ ಕವಿತೆ ಕುರಿತು ಅವರು ವಿಮರ್ಶೆ ಮಾಡುತ್ತಾರೆ..ಆದರೂ ಕೋಟೆ ಒಡೆಯುವ ದಾರಿಗಾಣದೇ ಪರಸ್ಪರ ಬೀಳ್ಕೊಡುವಾಗ ಎಲ್ಲದಕ್ಕೂ ಮುಸುಕೆಳೆದು ನಕ್ಕು ಬಿಡುತ್ತಾರೆ. ಜೀವನ ಪ್ರವಾಹ ತಮ್ಮನ್ನು ಜೊತೆಯಾಗಿ ಕರೆದೊಯ್ಯುತ್ತಿದೆ ಎಂದವರಿಗೆ ಮನವರಿಕೆಯಾಗುತ್ತದೆ.. ಕ್ವಚಿತ್ತಾಗಿ ಸಿಗುವ ಅವಕಾಶಗಳಲ್ಲಿ ಅವರು ಫೋಟೋಕ್ಕೊಂದು ಚಂದದ ಪೋಜು ಕೊಡುತ್ತಾರೆ.. ಅದು ನೀಡುವ ಪುರಾವೆಯಲ್ಲಿ ಜೀವನೋತ್ಸಾಹವನ್ನು ಬಚ್ಚಿಟ್ಟುಕೊಳ್ಳುತ್ತಾರೆ.. ನಿಮ್ಮ ಅಕ್ಕಪಕ್ಕದಲ್ಲೆಲ್ಲೋ ಇವರು ಇದ್ದಾರು.. ಸುಮ್ಮನೆ ಆಚೀಚೆ ಒಮ್ಮೆ ಕಣ್ಣು ಹಾಯಿಸಿ ಬಿಡಿ.. ನನಗೇಕೊ ಕೆ. ಎಸ್. ನ. ಸಾಲು ಗುನುಗುವ ಮನಸ್ಸಾಗುತ್ತಿದೆ… ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತವುಂಡು ದುಃಖ ಹಗುರವೆನುತಿರೆ ಪ್ರೀತಿಯೆನಲು ಹಾಸ್ಯವೆ?

ಪ್ರೀತಿಯೆನಲು ಹಾಸ್ಯವೇ Read Post »

ಕಾವ್ಯಯಾನ

ನನ್ನೊಳು ಸುನಾಮಿಯೊ

ನನ್ನ ಕೊಳಲು ಚಂದ್ರಪ್ರಭ ಬಿದಿರ ರಂಧ್ರಗಳಲಿ ತೂರಿ ತುಳುಕುವಾಗ ನೀನು ಕೊಳಲ ಮಾಧುರ್ಯ.. ಇಂಪು ಸೊಂಪಿನ ಅದೇ ಮೋಡಿ ಬೀಸಿ ಬಂದ ಬಿರುಗಾಳಿಯಲಿ ಬೆರೆವಾಗ ಅಲುಗುವುದೇಕೆ ಅಸ್ತಿತ್ವದ ಸೌಧ..! ಮತ್ತದೇ ಗಾಳಿ ಭೋರ್ಗರೆವ ಸುನಾಮಿಯಲಿ ಬೆರೆವಾಗ ನನ್ನೊಳು ಸುನಾಮಿಯೊ ಸುನಾಮಿಯೊಳು ನಾನೊ..!! ನಿನ್ನ ಹೊರತು ಸಾಗದ ಉಸಿರು.. ಅಳವಿಗೇ ಸಿಕ್ಕದ ನಿನ್ನ ಗಾಳಿ ಎಂದವರಾರು..?

ನನ್ನೊಳು ಸುನಾಮಿಯೊ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕೃತಿ-ಮುಳುಗದಿರಲಿ ಬದುಕು(ಅನುವಾದಿತ) ಲೇ:-ಡಾ.ಸುಭಾಷ್ ರಾಜಮಾನೆ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಕೃತಿಯ ಬಗ್ಗೆ ಒಂದು ಟಿಪ್ಪಣಿ ಡಾ.ಮಹಾಲಿಂಗ ಪೋಳ ದಿನಾಂಕ ೦೮-೧೨-೨೦೧೯ ರಂದು ಭಾನುವಾರ ಬಿಡುಗಡೆಯಾಗುತ್ತಿರು ‘ಮುಳುದಿರಲಿ ಬದುಕು’ ಡಾ.ಸುಭಾಷ್ ರಾಜಮಾನೆಯವರ ೪ ನೇ ಕೃತಿ. ೩ ನೇ ಅನುವಾದದ ಕೃತಿ.ಈಗಾಗಲೆ ಸಿನಿಮಾಕ್ಕೆ ಸಂಬಂಧಿಸಿದ ‘ ದಿ ಆರ್ಟಿಸ್ಟ್’ ಮತ್ತು ವಿಕ್ಟರ್ ಪ್ರ್ಯಾಂಕಲ್ ನ ‘ ಬದುಕಿನ ಅರ್ಥ ಹುಡುಕುತ್ತಾ’ ಎಂಬ ಕೃತಿಗಳನ್ನು ಅನುವಾದಿಸಿದ್ದಾರೆ. ಕನ್ನಡದಲ್ಲಿ ಇಲ್ಲದ ವಿಶಿಷ್ಟವಾದ ವಸ್ತುವುಳ್ಳ ಪುಸ್ತಕವನ್ನು ಆಯ್ದುಕೊಂಡು ಅನುವಾದ ಮಾಡುವುದು ಡಾ.ಸುಭಾಷ್ ರಾಜಮಾನೆಯವರ ವಿಶೇಷತೆ.ಕ್ರಿ.ಶ ೫೫-೧೩೫ ರ ಕಾಲಾವಧಿಯಲ್ಲಿ ಬದುಕಿದ್ದ ಗ್ರೀಸ್ ನ ತತ್ತ್ವಜ್ಞಾನಿ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಎಂಬ ಮಹತ್ವದ ಪುಸ್ತಕವನ್ನು ಈಗ ಕನ್ನಡಕ್ಕೆ ತಂದಿದ್ದಾರೆ.ತತ್ತ್ವಶಾಸ್ತ್ರ ವಿಷಯವನ್ನು ಓದುವ ,ಬೋಧಿಸುವ ಕಾಲ ನಿಂತುಹೋದ ಈ ಸಂದರ್ಭದಲ್ಲಿ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಕನ್ನಡದ ಓದುಗರಿಗೆ ನೀಡುತ್ತಿರುವುದು ಸಂತೋಷದ ವಿಷಯ.ಪಾಶ್ಚಾತ್ಯ ತತ್ತ್ವಜ್ಞಾನಿಗಳ ಪುಸ್ತಕ ಕನ್ನಡದಲ್ಲಿ ಸಿಗುವುದು ಅಪರೂಪ.ಅವರ ಚಿಂತನೆಗಳನ್ನು ಓದಬೇಕೆಂದರೆ ಇಂಗ್ಲಿಷ್ ಕೃತಿಗಳ ಇಲ್ಲವೆ ಇಂಟರ್ ನೆಟ್ ನ ಮೊರೆಹೋಗಬೇಕು.( ನಾನು ಎಂ.ಎ;ತತ್ತ್ವಶಾಸ್ತ್ರ ಓದುವಾಗ ಈ ಕಹಿ ಅನುಭವ ಆಗಿದೆ.) ಈ ಎಪಿಕ್ಟೆಟಸ್ ಗ್ರೀಸ್ ನ ತತ್ತ್ವಜ್ಞಾನಿಗಳಲ್ಲಿ ಪ್ರಮುಖನಾದವನು.ಗ್ರೀಕ್ ಮತ್ತು ರೋಮನ್ನರ ಮೇಲೆ ಮತದೃಷ್ಟಿಯಿಂದ ಪ್ರಭಾವ ಬೀರಿದ ‘ಸ್ಟೋಯಿಕ್’ ಪಂಥಕ್ಕೆ ಸೇರಿದವನು.ಈ ಪಂಥ ‘ ವಿಶ್ವದೇವೈಕ್ಯವಾದ’ದಿಂದ ಪ್ರಾರಂಭವಾಗಿ ‘ ಏಕೇಶ್ವರ’ಭಾವನೆಯೆಡಗೆ ಬೆಳೆದಿದೆ.ಈ ಪಂಥಕ್ಕೆ ಎಪಿಕ್ಟೆಟಸ್ ನ ಕೊಡುಗೆ ಮಹತ್ವದ್ದಾಗಿದೆ.ಇವನ ಬೋಧನೆಗಳು ಕ್ರೈಸ್ತ್ ರ ಹೊಸ ಒಡಂಬಡಿಕೆಯ ಮಾತುಗಳಂತಿವೆ.ಅಲ್ಲದೆ ಕ್ರೈಸ್ತ್ ಧರ್ಮದ ಪ್ರಚಾರಕ್ಕೆ ಇವುಗಳನ್ನು ಬಳಸಿಕೊಳ್ಳಲಾಗಿದೆ.ಇವನು ” ಒಬ್ಬ ದೇವರಿದ್ದಾನೆ,ಅವನ ಚೇತನ ವಿಶ್ವವನ್ನು ವ್ಯಾಪಿಸಿದೆ,ಅದು ನಮ್ಮ ಕಾರ್ಯಗಳಲ್ಲದೆ ನಮ್ಮ ಆಲೋಚನೆಗಳಲ್ಲೂ ಭಾವಗಳಲ್ಲೂ ವಿಕಾಸವಾಗುತ್ತದೆ” ಎಂದಿದ್ದಾನೆ. ಗ್ರೀಸ್ ನ ಹಿಂದಿನ ತತ್ತ್ವಜ್ಞಾನಗಳೆಲ್ಲ ಭೌತಜಗತ್ತಿನ ಕುರಿತಾದ ಚಿಂತನೆಗೆ ಹೆಚ್ಚು ಒತ್ತುಕೊಟ್ಟಿದ್ದರು.ಈ ಸ್ಟೋಯಿಕ್ ಪಂಥದವರು ಭೌತಜಗತ್ತಿನ ಚಿಂತನೆಯ ಜೊತೆಗೆ ಮನುಷ್ಯನ ಬುದ್ಧಿ,ಆಲೋಚನೆ,ಬಾಹ್ಯಕ್ರಿಯೆಗಳ ಕುರಿತಾಗಿ ಚಿಂತಿಸಿದ್ದಾರೆ.ಅದರಲ್ಲೂ ಎಪಿಕ್ಟೆಟಸ್ ಮನುಷ್ಯನ ಬುದ್ಧಿಶಕ್ತಿ,ಆಲೋಚನೆ,ದೃಷ್ಟಿಕೋನ ರೂಪುಗೊಳ್ಳುವುದರ ಕುರಿತಾಗಿ ಚಿಂತಿಸಿದ್ದಾನೆ.” ಮನುಷ್ಯ ಯಾವುದೇ ಘಟನೆಗಳನ್ನೋ,ಪರಿಸ್ಥಿಗಳನ್ನೋ ಎದುರುಗೊಂಡಾಗ ಅವು ಬಾಹ್ಯ ಸಂಗತಿಗಳಾಗಿ ಬಾಧಿಸುವುದಿಲ್ಲ; ಅವುಗಳ ಬಗ್ಗೆ ನಮ್ಮ ಆಲೋಚನೆಗಳೇನು ಎನ್ನುವುದು ಮುಖ್ಯವಾಗುತ್ತದೆ.ಬರಿ ಘಟನೆಗಳು ನಮ್ಮನ್ನು ವಿಚಲಿತರನ್ನಾಗಿ ಮಾಡುವುದಿಲ್ಲ; ಅವುಗಳ ಬಗೆಗಿನ ನಮ್ಮ ವ್ಯಾಖ್ಯಾನಗಳೇ ವಿಚಲಿತರನ್ನಾಗಿಸುತ್ತವೆ.ತಮ್ಮಷ್ಟಕ್ಕೆ ತಾವು ವಸ್ತುಗಳಾಗಲಿ,ಘಟನೆಗಳಾಗಲಿ ನಮಗೆ ನೋವು ನೀಡಲಾರವು.ನಾವು ಆ ವಸ್ತುಗಳಿಗೆ ಘಟನೆಗಳಿಗೆ ಯಾವ ರೀತಿ ಸ್ಪಂದಿಸುತ್ತೇವೆ ಎಂಬುದರಿಂದ ನಮ್ಮ ಮನೋಧರ್ಮಗಳು ರೂಪುಗೊಳ್ಳುತ್ತವೆ.” ಎಂಬ ಎಪಿಕ್ಟೆಟಸ್ ನ ಮಾತುಗಳು ಆಧುನಿಕ ಮನೋವಿಜ್ಞಾನದ ಸಿದ್ಧಾಂತವನ್ನೇ ತಿಳಿಸುತ್ತವೆ. ಈ ” ಮುಳುಗದಿರಲಿ ಬದುಕು” ಕೃತಿ ಎಪಿಕ್ಟೆಟಸ್ ನ ಯಾವುದೋ ಒಂದು ಸಿದ್ಧಾಂತದ ಕುರಿತಾಗಿ ತಿಳಿಸುವ ಪುಸ್ತಕವಲ್ಲ.ಬದಲಾಗಿ ಅವನ ಒಟ್ಟು ಚಿಂತನೆಯ ಸಾರವನ್ನು ಇದರಲ್ಲಿ ಭಟ್ಟಿ ಇಳಿಸಿದಂತಿದೆ.ಕೃತಿಯು ಎರಡು ಭಾಗಗಳಲ್ಲಿದ್ದು,ಮೊದಲ ಭಾಗದಲ್ಲಿ ‘ ವ್ಯಕ್ತಿತ್ವ ವಿಕಸನ’ಕ್ಕೆ ಬೇಕಾಗುವ ಎಲ್ಲ ಮೂಲ ತತ್ತ್ವಗಳು,ಜೀವನ ಮೌಲ್ಯಗಳನ್ನು ಬೋಧಿಸುವ ಬರಹಗಳಿವೆ.ಸಮಾಜದಲ್ಲಿ ಮನುಷ್ಯ ಭ್ರಮೆಗಳಿಂದ ಮುಕ್ತನಾಗಿ ಸದ್ಗುಣಿಯಾಗಿ ಹೇಗೆ ಬದು ಕಬೇಕು,ಅದಕ್ಕೆ ಬೇಕಾಗುವ ಮೂಲದ್ರವ್ಯ ಯಾವುದು ಎಂಬುದರ ಕುರಿತಾದ ಬರಹಗಳಿವೆ.ಇಲ್ಲಿ ಇಚ್ಛಾಶಕ್ತಿ,ಪ್ರೇರಣೆ,ದೃಷ್ಟಿಕೋನ,ಯೋಗ್ಯತೆ,ಪ್ರಾಮಾಣಿಕತೆ,ವಾಸ್ತವತೆ,ಬದುಕನ್ನು ನೋಡುವ ರೀತಿ,ನೆಮ್ಮದಿ,ಧನಾತ್ಮಕತೆ,ಆದರ್ಶಗಳು,ವಿವೇಕಯುಕ್ತತೆ,ಸಚ್ಚಾರಿತ್ರ್ಯ,ಸಂಬಂಧಗಳು,ವಿಶ್ವಾಸಾರ್ಹತೆ,ಘನತೆಯ ವ್ಯಕ್ತಿತ್ವ,ಪ್ರಕೃತಿಗೆ ಹೊಂದಿಕೊಳ್ಳುವುದು ಹೀಗೆ ಒಬ್ಬ ಮನುಷ್ಯ ಆದರ್ಶದ ಮಾದರಿಯಾಗಿ ಸಾಮುದಾಯಿಕ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಮಾರ್ಗದರ್ಶಕ ಚಿಕ್ಕ ಚಿಕ್ಕ ಅಧ್ಯಾಯಗಳಿವೆ. ಎರಡನೆಯ ಭಾಗದಲ್ಲಿ ತತ್ತ್ವಜ್ಞಾನದ ಮೂಲ ಉದ್ದೇಶ ,ಪುಸ್ತಕಗಳ ಉಪಯುಕ್ತತೆ,ಸಜ್ಜನರ ಗೆಳೆತನ,ತಪ್ಪುಗಳ ಮನ್ನಣೆ,ಸಚ್ಚಾರಿತ್ಯದ ನಿರಂತರತೆ,ಸದ್ಗುಣತೆ,ವೈಚಾರಿಕತೆ ,ಸಂತೋಷ ಹೀಗೆ ಹಲವು ವಿಷಯಗಳ ಕುರಿತು ಮೌಲ್ಯಯುತವಾದ ಬರಹಗಳಿವೆ. ಇಲ್ಲಿಯ ಬರಹಗಳನ್ನು ಪುಸ್ತಕದ ಮೊದಲ ಅಧ್ಯಾಯದಿಂದಲೇ ಓದಬೇಕೆಂಬ ನಿಯಮವೇನೂ ಇಲ್ಲ.ಯಾಕೆಂದರೆ ಪ್ರತಿಯೊಂದು ಬರಹಗಳು ತಮ್ಮಷ್ಟಕ್ಕೆ ಮುಕ್ತಕಗಳಂತೆ ಸ್ವತಂತ್ರವಾಗಿವೆ.ಯಾವುದೇ ಪುಟ ತೆಗೆದರೂ ಅಲ್ಲೊಂದು ನಿರ್ದಿಷ್ಟ ಮೌಲ್ಯದ ಮೂಲದ್ರವ್ಯ ಇರುವುದನ್ನು ಕಾಣುತ್ತೇವೆ.ಈ ಪುಸ್ತಕದ ವಿಶೇಷವೆಂದರೆ ಇಲ್ಲಿಯ ಅಧ್ಯಾಯಗಳು ಕನಿಷ್ಟ ಮೂರು ಸಾಲಿನ ,ಹೆಚ್ಚೆಂದರೆ ಎರಡು ಪುಟ ಮೀರುವುದಿಲ್ಲ.(ಓದಲು ಸಮಯವೇ ಇಲ್ಲದ ಈ ಕಾಲದಲ್ಲಿ ಸುದೀರ್ಘವಾದ ಬರಹಗಳನ್ನು ಯಾರು ಓದುತ್ತಾರೆ? ಎನ್ನುವವರಿಗೆ ಈ ಪುಸ್ತಕ ಹೆಚ್ಚು ಇಷ್ಟವಾಗಬಹುದೇನೋ !.) ಈ ಅನುವಾದದ ಕುರಿತಾಗಿ ಹೇಳಬೇಕೆಂದರೆ ಇದು ಅನುವಾದ ಮಾಡಿದ ಪುಸ್ತಕ ಎಂಬ ಭಾವನೆ ಎಲ್ಲೂ ಬರುವುದಿಲ್ಲ.ಕನ್ನಡದ ಚಿಂತನೆಯಿಂದಲೇ ರೂಪಗೊಂಡ ಕೃತಿಯಂತೆ ಭಾಸವಾಗುತ್ತದೆ.ಇಲ್ಲಿಯ ಚಿಂತನೆಗಳು ಮನುಷ್ಯನ ಒಳಗನ್ನು ( ಅಂತರಂಗ) ಗಟ್ಟಿಗೊಳಿಸಿ ಬಾಹ್ಯ ನಡವಳಿಗಳನ್ನು ತಿದ್ದುವ ಮತ್ತು ಗ್ರಹಿಕೆಯನ್ನು ಸ್ಪಸ್ಟ ಹಾಗೂ ವಾಸ್ತವಗೊಳಿಸುವತ್ತ ನಮ್ಮನ್ನು ಕೈ ಹಿಡಿದು ನಡೆಸುತ್ತವೆ.ಅದು ತತ್ತ್ವಶಾಸ್ತ್ರದ ಉದ್ದೇಶವೂ ಹೌದು. ಒಂದು ಚಿಕ್ಕ ಅಧ್ಯಾಯ: “ಒಳ್ಳೆಯದು ಒಳ್ಳೆಯದೇ” ‘ಒಳ್ಳೆಯತನ ಸ್ವತಂತ್ರವಾಗಿದ್ದು,ನಮ್ಮ ಒಳಗಿನಿಂದಲೇ ಅದಕ್ಕೊಂದು ಅಸ್ತಿತ್ವ ದೊರಕುತ್ತದೆ.ಒಳ್ಳೆಯತನ ಎಂದಿಗೂ ಇದ್ದೇ ಇರುತ್ತದೆ.ನಮ್ಮ ಅಸ್ತಿತ್ವಕ್ಕೂ ಮೊದಲೇ ಇತ್ತು’ (ಪುಟ.೧೪೦)

ಪುಸ್ತಕ ಸಂಗಾತಿ Read Post »

ಕಥಾಗುಚ್ಛ

ಯಾರೂ ಓದದೆಯೇ ಹೋದ ಕತೆ…

ಟಿ.ಎಸ್.ಶ್ರವಣ ಕುಮಾರಿ ಯಾರೂ ಓದದೆಯೇ ಹೋದ ಕತೆ… ಇದೋ ಅತ್ಯಂತ ಜನನಿಬಿಡವಾದ ಮಾರುಕಟ್ಟೆ ಪ್ರದೇಶ. ಈ ಮಾರುಕಟ್ಟೆ ಸಂಕೀರ್ಣ ಮತ್ತು ಅದರ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾರದ, ಸಿಗದ ವಸ್ತುವೇ ಇಲ್ಲ ಎಂದುಕೊಳ್ಳಿ.  ಸಣ್ಣ ಪುಟ್ಟ ಸಾಸುವೆ, ಪಿನ್ನು ಇಂತಹ ವಸ್ತುಗಳನ್ನು ಮಾರುವ ಅಂಗಡಿಗಳಿಂದ ಹಿಡಿದು ಕಾರು, ರಿಯಲ್ ಎಸ್ಟೇಟ್ ಏಜೆನ್ಸಿಯಂತ ದೊಡ್ಡ ವಹಿವಾಟುಗಳೂ ಇಲ್ಲಿವೆ. ಇವೆಲ್ಲವೂ ಇಲ್ಲಿದೆ ಎಂದ ಮೇಲೆ ಇವನ್ನೆಲ್ಲಾ ಮಾರುವವರು, ಕೊಳ್ಳುವ ಗಿರಾಕಿಗಳು, ಸರಕನ್ನು ಹೊರುವ ಹಮಾಲಿಗಳು, ಸಾಗಿಸುವ ಚಾಲಕರು, ವ್ಯವಹಾರವನ್ನು ಕುದುರಿಸುವ ದಲ್ಲಾಳಿಗಳು, ಪಾರ್ಕಿಂಗ್ ಕಾಸು ವಸೂಲಿ ಮಾಡುವ ಹುಡುಗರು, ಇವೆಲ್ಲ ವ್ಯವಹಾರಗಳನ್ನು ನೋಡಿ ಮಜಾ ತೆಗೆದುಕೊಳ್ಳುವ, ಅಂದಿನ ನಾಷ್ಟ, ಊಟ, ಬೀಡಿ, ಸಿಗರೇಟು, ಸೇಂದಿ, ಖರ್ಚಿಗೊಂದಿಷ್ಟು ಕಾಸು ಇವನ್ನೆಲ್ಲಾ ಕಂಡವರ ದುಡ್ಡಿನಲ್ಲಿ ಗಿಟ್ಟಿಸುವ ಉಡಾಫೆ ಮಂದಿಗಳೂ ಸಾಕಷ್ಟು ಇದ್ದಾರೆ. ಅಂತೆಯೇ ಮಾರುಕಟ್ಟೆಯ ಸುತ್ತಲೂ ಬೀದಿಯ ಇಕ್ಕೆಲಗಳಲ್ಲೂ ಬುಟ್ಟಿ ವ್ಯಾಪಾರಸ್ತರೋ, ತಳ್ಳು ಗಾಡಿಯವರೋ ತಂತಮ್ಮ ಸರಕನ್ನು ಮುಂಜಾವಿನಿಂದ ಸರಿ ರಾತ್ರಿಯವರೆಗೂ ಮಾರುತ್ತಾ ತಮ್ಮ ದಿನದ ಸಂಪಾದನೆ ಎಣಿಸುತ್ತಿರುತ್ತಾರೆ.ಅಲ್ಲಿ, ಇಲ್ಲಿ ಗಿರಾಕಿಗಳಿಗೆ ಗಾಳ ಹಾಕುತ್ತಾ ನಿಲ್ಲುವ ವೈಯಾರಿಗಳು, ಇವರನ್ನೇ ಹುಡುಕುತ್ತಾ ಬರುವ ರಸಿಕ ಮಹಾಶಯರೂ ಇಬ್ಬರ ನಡುವಿನ ತಲೆಹಿಡುಕರೂ ಅಲ್ಲಿಲ್ಲಿ ಕಾಣ ಸಿಗುತ್ತಾರೆ.ಇಷ್ಟೆಲ್ಲದರ ಮದ್ಯೆಯೇ ಸಮಾಜದಲ್ಲಿ ಮರ್ಯಾದಸ್ತರೆಂದು ಗುರುತಿಸಿಕೊಂಡಿರುವ ಬಹಳಷ್ಟು ಜನರೂ ಯಾವುದೋ ಒಂದಲ್ಲ ಒಂದು ವ್ಯವಹಾರಕ್ಕೆ ಇಲ್ಲಿಗೆ ಬರುತ್ತಿರುತ್ತಾರೆ.ಇಷ್ಟೆಲ್ಲವೂ ಇದ್ದ ಮೇಲೆ ಪೋಲೀಸರ ಮೇಲ್ವಿಚಾರಣೆ? ಅವರೂ ಇದ್ದಾರೆ.ಇಷ್ಟೆಲ್ಲವನ್ನೂ ಏಕೆ ಹೇಳುತ್ತಿದ್ದೇನೆಂದರೆ ಇದು ಇಡೀ ಜಗತ್ತಿನ ಮಾರುಕಟ್ಟೆಯ ಒಂದು ಸಣ್ಣ ಸ್ವರೂಪವೆಂದು ಹೇಳುವುದಕ್ಕಷ್ಟೆ ಮತ್ತು ನನ್ನ ಈ ಕತೆ ಈ ಮಾರುಕಟ್ಟೆಯ ಬದಿಯ ಫುಟ್ ಪಾತೊಂದರಲ್ಲಿ ಬಿದ್ದಿದ್ದಕ್ಕೆ. ಆ ಕತೆ ಮಾರುಕಟ್ಟೆಯ ಮುಂಬಾಗದ ಮೂಲೆಯಲ್ಲಿ ಫುಟ್ ಪಾತ್ ವ್ಯಾಪಾರಸ್ತರ ಹಿಂಬಾಗದಲ್ಲಿ ಗೋಡೆಯ ಪಕ್ಕದಲ್ಲಿ ಪ್ರಾಯಶಃ ಬೆಳಗಿನಿಂದಲೇ ಬಿದ್ದಿತ್ತೇನೋ, ಅದನ್ನು ಗಮನಿಸಿದರ‍್ಯಾರು? ಬೆಳಗಿನ ಹೋಲ್ ಸೇಲ್ ವ್ಯಾಪಾರದಲ್ಲಿ ಕೊಂಡ ಸರಕನ್ನೋ, ಬೇರೇನೇನೋ ಸರಕುಗಳನ್ನೋ ತುಂಡು ವ್ಯಾಪಾರಸ್ತರು ಎಂದಿನಂತೆ ತಮ್ಮ ತಮ್ಮ ಅನಧಿಕೃತವಾದ ಅಧಿಕೃತ ಜಾಗಗಳಲ್ಲಿ ಹರಡಿಕೊಂಡು ಕುಳಿತುಕೊಂಡರು. ಅಂತವರಲ್ಲೊಬ್ಬ ಹೆಂಗಸುತನ್ನ ಊಟದ ಡಬ್ಬಿ, ಛತ್ರಿ, ಬಟ್ಟೆಯ ಗಂಟು, ಕಂಕುಳಲ್ಲಿದ್ದ, ಓಡಾಡುತ್ತಿದ್ದ ಚಿಳ್ಳೆ ಪಿಳ್ಳೆಗಳಿಗೆ ಜಾಗ ಮಾಡಲು ಹೋದಾಗ ಅನಾಥವಾಗಿ ಬಿದ್ದಿದ್ದ ಈ ಕತೆಯು ಕಾಣಿಸಿತು.`ರಾತ್ರಿ ಕುಡಿದಿದ್ದು ಇನ್ನೂ ಇಳ್ದಿಲ್ಲಾನ್ನೋಂಗದೆ’ ಎನ್ನುತ್ತಾ ಆ ಹೆಂಗಸು ಅದನ್ನು ಪಕ್ಕಕ್ಕೆ ಒತ್ತರಿಸಿ ತನ್ನ ಬಿಡಾರಕ್ಕೆ ಜಾಗ ಮಾಡಿಕೊಂಡಳು. ಪಕ್ಕಕ್ಕೆ ದೂಡಿದಾಗ ಅದಕ್ಕೇನಾದರೂ ನೋವಾಯಿತೇನೋ… ನರಳಿತೇನೋ… ಯಾರಿಗೇನೂ ಕೇಳಲಿಲ್ಲ ಬಿಡಿ. ʻಅದ್ರ ತಂಟೇಗೋಗ್ಬೇಡಿ. ಅಸಿವಾದ್ರೆ ಕವರ‍್ನಾಗೆ ಬನ್ನದೆ, ಡಬ್ಬೀನಾಗೆ ರೊಟ್ಟಿಯಿದೆ, ತಿನ್ಕೊಳಿʼ ಎಂದು ತನ್ನ ಮರಿಗಳಿಗೆ ಹೇಳುತ್ತಾ ತನ್ನ ವಹಿವಾಟಿನ ಜಾಗಕ್ಕೆ ಪ್ಲಾಸ್ಟಿಕ್ ಶೀಟ್ ಹರಡಿ ಒಂದೊಂದೇ ತರಕಾರಿಯನ್ನು ಅದರ ಮೇಲೆ ಜೋಡಿಸಿಕೊಳ್ಳುತ್ತಾ ಹೋದಳು. ಸ್ವಲ್ಪ ಹೊತ್ತು ಸುಮ್ಮನಿದ್ದ ಮಕ್ಕಳು ʻಅವ್ವಾ ಅದೇನವ್ವಾʼ ಎಂದು ಬೆರಳು ತೋರುತ್ತಾ ಕೇಳಿದವು ʻಮುಚ್ಕೊಂಡು ಸುಮ್ಕೆ ಕೂರಕ್ ಬರಾಕಿಲ್ವಾ.  ಏನ್ ಕತೆಯೋ ಏನ್ ಸುಡುಗಾಡೋ…ಇಲ್ಲಿ ಬಂದ್ ಬಿದ್ದದೆʼ ಎಂದು ಪಿಳ್ಳೆಗಳ ಮೇಲೆ ಒಂದು ಆವಾಜ್ ಹಾಕಿ ತನ್ನ ಕೆಲಸ ಮುಂದುವರಿಸಿದಳು.  ಅವೂ ಕುತೂಹಲದಿಂದ ಹಿಂದೆ ಮುಂದೆ ಅಕ್ಕ ಪಕ್ಕ ಎಲ್ಲಾ ನೋಡಿದವು ಅವಕ್ಕಂತೂ ಅದನ್ನು ಓದಲು ಬರಲಿಲ್ಲ… ಜಾಗರೂಕತೆಯಿಂದ ಅದರ ಮೇಲೆ ಬೀಳದಂತೆ ಅವು ತಮ್ಮ ಪಾಡಿಗೆ ತಾವು ಆಡಿಕೊಳ್ಳತೊಡಗಿದವು… ಹನ್ನೊಂದು ಗಂಟೆಯಾಗುತ್ತಾ ಬಂದಂತೆ ಆ ಜಾಗದ ಮುಂದಿನ ವಾರಸುದಾರ ತನ್ನ ಸರಕುಗಳೊಂದಿಗೆ ಹಾಜರಾದ. “ಯಕ್ಕೋ ನಿಂಟೈಮಾಯ್ತು. ಉಳ್ದಿರೋವೆಲ್ಲಾ ಎತ್ಕೋ. ನಂಜಾಗ ಬಿಡು” ಎನ್ನುತ್ತಾ ದೊಡ್ಡ ದೊಡ್ಡ ಎರಡು ಮೂಟೆಗಳನ್ನಿಳಿಸಿದ. “ವಸಿ ತಡ್ಯಣ್ಣೋ, ಎಲ್ಲಾ ಬ್ಯಾರೆ ಬ್ಯಾರೆ ಕವರ‍್ನಾಗೆ ಮಡಿಕ್ಕೊಂತಿನಿ. ಬೆರ‍್ತೋದ್ರೆ ಬ್ಯಾರೆ ಮಾಡೋದು ಕಸ್ಟ ಎನ್ನುತ್ತಾ ತುಂಬತೊಡಗಿದಳು. “ಉಳ್ದಿರೋವೆಲ್ಲಾ ಏನ್ ಮಾಡ್ತೀಯೆ? ಮನೇಗೆ ಉಪಯೋಗಿಸ್ಕತೀಯ? ಇಲ್ಲಾ ಬೀದೀಲ್ ಮಾರ‍್ಕೊಂಡು ಓಯ್ತೀಯಾ ಎಂದ. “ಇಷ್ಟ್ ತಿನ್ನೋಕಾಯ್ತದಾ? ವಸಿ ಮಡೀಕೊಂಡು ಉಳ್ದವನ್ನ ಮನೇತ್ರ ಮೆಸ್ಸು, ಕ್ಯಾಂಟೀನು ಅವೆ. ಅವ್ರಿಗೆ ಸುರೀತೀನಿ”.  “ಸರಿ, ಬೇಬೇಗ್ ಮಗ್ಸು” ಎನ್ನುತ್ತಾ ಒಂದು ಮೂಟೆಯನ್ನು ಹಿಂದಿಡಲು ನೋಡಿದಾಗ ಈ ಕತೆ ಕಾಣಬೇಕೆ?! “ಯಾವ್ದಕ್ಕೋ ಇದು ಇಲ್ಬಿದ್ದದೆ” ಎನ್ನುತ್ತಾ ಹಿಂದೆ ಹೋಗಿ ಅದನ್ನು ಪರಿಶೀಲಿಸಿದ. ಏನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಆ ಹೆಂಗಸು ಜಾಗವನ್ನು ಖಾಲಿ ಮಾಡಿ “ಯಾವ್ದೋ ನಾಕಾಣೆ, ಬೆಳ್ಗಿಂದ ಅಂಗೇ ಬಿದ್ದದೆ… ತೊಗೋಣ್ಣೋ ನಿಂಜಾಗ. ಇದು ಮಡಿಕ್ಕೋ” ಎನ್ನುತ್ತಾ ಒಂದು ಕವರಿನಲ್ಲಿ ಹಾಕಿದ್ದ ಒಂದಿಷ್ಟು ತರಕಾರಿಯನ್ನು ಅವನಿಗೆ ಕೊಟ್ಟು ತನ್ನ ಗಂಟುಮೂಟೆಯನ್ನು ಕಟ್ಟಿಕೊಂಡು ಪಿಳ್ಳೆಗಳನ್ನು ಕಟ್ಟಿಕೊಂಡು ಹೊರಟಳು.ಇನ್ನು ತನ್ನ ವ್ಯಾಪಾರಕ್ಕೆ ತಡವಾಗುತ್ತದೆ ಎಂದುಕೊಳ್ಳುತ್ತಾ ಅವನೂ ಅದನ್ನು ಮತ್ತಷ್ಟು ಒತ್ತರಿಸಿ ತನ್ನ ಒಂದು ಮೂಟೆಯನ್ನು ಅಲ್ಲಿಟ್ಟ. ಮುಂದಿನ ಜಾಗದಲ್ಲಿ ತನ್ನ ಚಾಪೆಯನ್ನು ಹಾಸಿ ತನ್ನ ಸರಕಾದ ಚಡ್ಡಿ, ಬನೀನು, ಟೀಷರ್ಟು, ಟ್ರಾಕ್ ಪ್ಯಾಂಟು, ಮಕ್ಕಳ ಚಿಕ್ಕ ಪುಟ್ಟ ಉಡುಪುಗಳು ಮುಂತಾದವುಗಳಿಗೆ ಜಾಗಮಾಡಿಕೊಂಡು ತನ್ನ ಸರಕಿನ ಜಾಹೀರಾತನ್ನು ತಾನೇ ಕೂಗತೊಡಗಿದ. ಫುಟ್ಪಾತಿನುದ್ದಕ್ಕೂ, ಶೂ, ಚಪ್ಪಲಿಗಳು, ಪ್ಲಾಸ್ಟಿಕ್ ಸಾಮಾನು, ಆಟಿಕೆಗಳು, ಬಟ್ಟೆ, ಸೀರೆಗಳು, ಪೆಟಿಕೋಟ್, ಬ್ರಾ, ಪ್ಯಾಂಟೀಸ್‌ಗಳು, ತಿಂಡಿ ಸರಕುಗಳು ಇಂಥದೆನ್ನುವಂತಿಲ್ಲ ಎಲ್ಲ ಗೂಡುಗಳು ತಲೆಯೆತ್ತತೊಡಗಿದವು. ಪಕ್ಕದ ಬೀದಿಯಲ್ಲಿ ತಲಗಟ್ಟಮ್ಮನ ಜಾತ್ರೆ ಬೇರೆ. ಬಿಸಿಲಿನ ಚುರುಕಿನೊಂದಿಗೆ ವ್ಯಾಪಾರವೂ ಕುದುರಿಕೊಳ್ಳತೊಡಗಿತು. ಅದೆಷ್ಟು ಜನ ಆ ಫುಟ್ ಪಾತಿನ ಮೇಲೆ ಓಡಾಡಿದರೋ ಲೆಕ್ಕವಿಟ್ಟರ‍್ಯಾರು.ಕೆಲವರ ಕಣ್ಣಿಗಾದರೂ ಇದು ಬೀಳದೇ ಇರಲು ಸಾಧ್ಯವೇ?! ಬಿದ್ದೇ ಬಿತ್ತು.  ಒಬ್ಬಿಬ್ಬರು ಏನಿರಬಹುದು ಇದು…  ಯಾಕೆ ಇಲ್ಲಿ ಬಿದ್ದಿದೆ… ಎಂದುಕೊಂಡರು. ಆದರೆ ಅವರಿಗೆ ಇದನ್ನು ನೋಡಿ ಓದಲು ವ್ಯವಧಾನವೆಲ್ಲಿದೆ? ನಾಳೆಯ ಹೊತ್ತಿಗೆ ಇಡೀ ಜಗತ್ತೇ ಮುಳುಗಿಹೋಗುವುದೇನೋ?  ಅಷ್ಟರೊಳಗೆ ತಾನು ಮಾಡಿ ಮುಗಿಸಬೇಕಾದ ಕೆಲಸ ಒಂದು ಜನ್ಮಕ್ಕಾಗುವಷ್ಟಿದೆ! ಅಂತಹುದರಲ್ಲಿ ಯಾವುದೋ ಬಿಸಾಡಿಹೋದ ಈ ಕತೆಯನ್ನು ನೋಡುತ್ತಾ ಕೂಡುವುದೇ?! ಮೊದಲು ಇಲ್ಲಿನ ಕೆಲಸ ಮುಗಿಸಿ ಓಡಬೇಕು ಮುಂದಿನ ಕೆಲಸದ ಕಡೆಗೆ… ಎಲ್ಲರೂ ಓಡುವವರೆ… ಕತೆಗೋ ಇದ್ಯಾವುದರ ಪರಿವೆಯೂ ಇಲ್ಲ. ಬಿದ್ದುಕೊಂಡಿದೆ ತನ್ನ ಪಾಡಿಗೆ ತಾನು. ನೋಡಿಕೊಂಡೂ ಓಡುತ್ತಿರುವವರು ಓಡುತ್ತಿದ್ದಾರೆ ತಂತಮ್ಮ ಪಾಡಿಗೆ…  ಮಧ್ಯಾನ್ಹದ ಹೊತ್ತಿಗೆ ಅಲ್ಲೇ ಮೂಲೆಯ ತಳ್ಳುಗಾಡಿಯವನಿಂದ ಪಲಾವನ್ನು ಕೊಂಡು ತಿಂದು ನೀರು ಕುಡಿಯಲೆಂದು ಹಿಂದಿನ ಮೂಟೆಯ ಬಳಿ ಇಟ್ಟಿದ್ದ ನೀರಿನ ಬಾಟಲಿಗೆ ಕೈ ಹಾಕಿದವನಿಗೆ ಮತ್ತೆ ಇದರಮೇಲೆ ಬಿಸಿಲು ಬೀಳುತ್ತಿದ್ದುದು ಕಾಣಿಸಿತು. ಏನು ಸುಡುಗಾಡೋ ಎಂದುಕೊಳ್ಳುತ್ತಾ ಒಂದಷ್ಟು ನೆರಳಿನೆಡೆಗೆ ನೂಕಿದ. ಅಷ್ಟರಲ್ಲಿ ಯಾರೋ ಗಿರಾಕಿ ಕರೆಯುತ್ತಿದ್ದರು. “ಬಂದೇ.ಡಜನ್ನಿಗೆ ನೂರೈವತ್ತು ಕಣಕ್ಕ.  ಈ ಕೈ ಟವಲು ನೋಡಿ. ಬಟ್ಟೆ ಎಂಗದೆ.  ಇದಾದ್ರೆ ಇನ್ನೂರೈವತ್ತು ಆಗತ್ತೆ…” ತನ್ನದೇ ಕತೆಯಲ್ಲಿ ಮುಳುಗಿಹೋದ… ಮುಂದಿನ ಪಾಳಿಯವನು ಬಂದು ಜಾಗಕ್ಕೆ ತಕರಾರು ಮಾಡಿದಾಗಲೇ ಅವನಿಗೆ ಸಮಯವಾದದ್ದು ತಿಳಿದದ್ದು.  “ಓ… ಎದ್ದೆ ಕಣಣ್ಣೋ”  ಎನ್ನುತ್ತಾ ತನ್ನ ಬಿಡಾರವನ್ನು ಖಾಲಿ ಮಾಡತೊಡಗಿದ.  “ಎಂಗಾಯ್ತು ಇವತ್ತು ವ್ಯವಾರ”  ಮುಂದಿನವನು ತನ್ನ ಕಂತೆಯನ್ನು ಬಿಚ್ಚುತ್ತಾ ಕೇಳಿದ.  “ಪರ‍್ವಾಗಿಲ್ಲ ಕಣಾ. ತಲಗಟ್ಟಮ್ಮನ್ ಜಾತ್ರೆ ಅಲ್ವಾ.  ವಸಿ ಜನಾ ಜಾಸ್ತೀನೇ ದಿನಕ್ಕಿಂತ.”  “ಸೇಂದೀಗ್ ನಾಕ್ ಕಾಸು ಜಾಸ್ತಿ ಸಿಗ್ತೂನ್ನು” “ಇಲ್ ಕಣಣ್ಣೋ ಚಿಕ್ಮಗೀಗೆ ರವಷ್ಟು ಉಸಾರಿಲ್ಲ. ಎಂತೆಂತದೋ ಟೆಸ್ಟುಗಳಂತೆ ಬರ‍್ಕೊಟ್ಟವ್ರೆ. ನಾಳೀಕೆ ಕರ‍್ಕೊಂಡೋಗ್ಬೇಕು. ಅದಿಕ್ಕೊಂದೀಷ್ಟು ಅಗುರಾಯ್ತು ಅಷ್ಟೇಯ” ಅನ್ನುತ್ತಾ ತನ್ನೆರಡೂ ಮೂಟೆಗಳನ್ನು ಎತ್ತಿಕೊಳ್ಳುವಾಗ ಮತ್ತೊಮ್ಮೆ ಮುಖ ತೋರಿದ ಕತೆಗೆ ಮುಖದಿರುವಿ ನಡೆದ. ಆ ಸಂಕೀರ್ಣದಲ್ಲೇ ಇದ್ದ ಸಬ್ ರಿಜಿಸ್ತ್ರಾರ್ ಆಫೀಸಿನ ಮುಂದೆ ಆ ಬ್ರೋಕರ್ ಮದ್ಯಾನ್ಹ 3 ಘಂಟೆಯಿಂದಲೇ ಕಾಯುತ್ತಿದ್ದ. ಕ್ಷಣಕ್ಕೊಮ್ಮೆ ಮೊಬೈಲನ್ನು ಹಿಡಿದು “ಎಲ್ಲಿದೀರ? ಬೇಗಬನ್ನಿ. ಇಲ್ದಿದ್ರೆ ಇವತ್ತು ಕೆಲ್ಸ ಆಗಲ್ಲ. ಸಾಹೇಬ್ರು ಮುಂದಿನವಾರ ಟೂರ‍್ನಲ್ಲಿರ‍್ತಾರೆ. ನಿಮ್ಗೇ ತೊಂದ್ರೆ” ಎಂದು ಅವಸರಿಸುತ್ತಿದ್ದ.  “ಹಾ… ಸರಿ ಸರಿ ಬೇಗ್ಬನ್ನಿ… ಇಲ್ಲೇ ಮುಂದುಗಡೆ ಫುಟ್ಪಾತ್ ಅಂಗಡಿಗ್ಳು ಇದಾವಲ್ಲ ಅಲ್ಲೇ ಎರಡನೇ ಕಂಬದ ಹತ್ರ ನಿಂತುಕೊಂಡಿದೀನಿ” ಬರುವವರಿಗೆ ಸುಳಿವುಗಳನ್ನು ಕೊಡುತ್ತಿದ್ದ. ನೋಡುನೋಡುತ್ತಲೇ ನಾಲ್ಕು ಗಂಟೆಯಾಗಿ ಹೋಯ್ತು. ‘ಇವ್ರ ಕಮಿಷನ್ ನೆಚ್ಕೊಂಡು ನಾಳೇ ತಿರುಪತೀಗೆ ಕರಕೊಂಡು ಹೋಗ್ತೀನಿ ಅಂದಿದೀನಿ. ಈವಯ್ಯಾ ಏನಾದ್ರೂ ಕೈಕೊಟ್ರೆ ಮನೇನಲ್ಲಿ ಗೋವಿಂದಾ… ಗೋವಿಂದಾ’ ಎಂದುಕೊಳ್ಳುತ್ತಾ ಬಾಯಲ್ಲಿ ಬಂದ ಎಂಜಲನ್ನು ಉಗಿಯಲು ಕಟ್ಟೆಯ ಪಕ್ಕಕ್ಕೆ ಹೋದರೆ ಅಲ್ಲಿ ಬಿದ್ದಿದ್ದ ಕತೆ ಕಾಣಬೇಕೆ! ‘ಅಯ್ಯೋ ನನ್ಮಗಂದ್ ಇದ್ಯಾವುದಿದು’ ಎನ್ನುತ್ತಾ ಅದರೆಡೆಗೆ ಬಗ್ಗಿದ. ಅಷ್ಟರಲ್ಲಿ ಫೋನ್ ಬಡಕೊಳ್ಳಬೇಕೆ… ಒಂದೇ ಸಲ ನೆಟ್ಟಗಾಗಿ “ಬಂದೇ ಸಾರ್ ಬಂದೇ. ಇಲ್ಲೇ ಇದೀನಿ…”ಎನ್ನುತ್ತಾ ತಾನು ಸೂಚಿಸಿದ್ದ ಜಾಗದೆಡೆಗೆ ಓಡಿದ. ಮುಂದಿನವನು ತನ್ನ ಸರಕನ್ನೆಲ್ಲಾ ಮುಂದೆ ಜೋಡಿಸಿಕೊಳ್ಳುತ್ತಾ ಹೋದ. ಅಷ್ಟರಲ್ಲೇ ವ್ಯಾಪಾರ ಶುರುವಾಗಿದ್ದರಿಂದ ಎಷ್ಟೋ ಹೊತ್ತು ಹಿಂತಿರುಗಿ ನೋಡಲಾಗಲಿಲ್ಲ. ಬಳೆ, ರಿಬ್ಬನ್ನು, ಪೌಡರ್, ಸೆಂಟು, ಬಾಚಣಿಕೆ… ಒಂದೇ ಎರಡೇ. ಹೆಣ್ಣು ಮಕ್ಕಳು ಮುಗಿಬೀಳುವ ಎಲ್ಲಾ ಸಾಮಾನುಗಳೂ ಅವನ ಸರಕಲ್ಲಿತ್ತು.  ವಯಸ್ಸಿನ ಹೆಣ್ಣುಮಕ್ಕಳು ಮುಂದೆ ವ್ಯಾಪಾರಕ್ಕೆ ನಿಂತಿದ್ದಾಗ, ನಗನಗ್ತಾ ಚೌಕಾಸಿ ಮಾಡುತ್ತಿದ್ದಾಗ ಹೊತ್ತು ಓಡಿದ್ದು ಗೊತ್ತಾಗಲು ಸಾಧ್ಯವೇ.  ಹೇಳಿ ಕೇಳಿ ಜಾತ್ರೆಗೆ ಬಂದಿದ್ದ ಪೋರಿಯರು. ವ್ಯಾಪಾರ ಭರ್ಜರಿಯಾಗೇ ಸಾಗಿತ್ತು. ಮದ್ಯದಲ್ಲೊಮ್ಮೆ ವಂದಕ್ಕೆ ಹೋಗಿಬರುವಾ ಅನ್ನಿಸಿದ್ದಕ್ಕೆ ಪಕ್ಕದಲ್ಲಿದ್ದೋನನ್ನ ಸ್ವಲ್ಪ ಹೊತ್ತು ಅಂಗಡಿ ನೋಡಿಕೊಳ್ಳಕ್ಕೆ ಹೇಳಿ ಎದ್ದು ಹೋದವನಿಗೆ ಬಂದು ಕೂರುವಾಗ ಇದು ಕಣ್ಣಿಗೆ ಬಿತ್ತು.  ಹತ್ತಿರ ಹೋಗಿ ನೋಡಿದ… ಏನೂ ಅರ್ಥವಾಗದೆ  “ಯಾವಾಗಿಂದ ಬಿದ್ದದೆ?” ಪಕ್ಕದವನನ್ನು ಕೇಳಿದ. ”ಯಾವಾಗಿಂದ ಬಿದ್ದದೋ ಕಂಡರ‍್ಯಾರು? ನಾನೂ ಆಗ್ಲೇ ಎದ್ದೋಗಿದ್ದಾಗ ನೋಡ್ದಿ. ಏನೂ ತಿಳೀನಿಲ್ಲ. ಯಾವ್ದೋ ಬ್ಯಾವರ್ಸಿ; ಬದ್ಕೈತೋ, ಸತ್ತೈತೋ… ನಮ್ನಮ್ ಕತೆ ನೋಡ್ಕೊಂಡು ಹೋದ್ರೆ ಸಾಲ್ದಾ. ದಿನಕ್ಕಿಂತಾವೆಷ್ತೋ ಕಂಡೋರ‍್ಯಾರು” ಎಂದು ತನ್ನ ಸರಕಿನ ಜಾಹೀರಾತನ್ನು ಕೂಗುತ್ತಾ ಮಾತಿಗೆ ವಿರಾಮ ಹಾಕಿದ. ಅಷ್ಟು ಹೊತ್ತಿಗೆ ಇವ್ನ ಮುಂದೂ ಗಿರಾಕಿಗಳು ಬಂದಿದ್ದರಿಂದ ಈ ವಿಷಯ ಮರೆತು ತನ್ನ ವ್ಯಾಪಾರದಲ್ಲಿ ತಲ್ಲೀನನಾದ. ಈಗದು ಕತ್ತಲಲ್ಲಿ ಮಲಗಿತ್ತು. ಮುಂದಿನ ಬೀದಿಯ ದೀಪದ ಬೆಳಕು ಅದನ್ನು ತಲುಪುತ್ತಾ ಇರಲಿಲ್ಲ. ಆ ದೀಪದ ಕಂಬದ ಬಳಿ ತನ್ನ ಮಾಮೂಲಿ ಗಿರಾಕಿಗೆ ಕಾಯುತ್ತಾ ನಿಂತಿದ್ದವಳಿಗೆ ಎಷ್ಟು ಹೊತ್ತಾದರೂ ಬಾರದ್ದರಿಂದ ಕೋಪವುಕ್ಕುತ್ತಾ ಇತ್ತು. ಸುಮ್ಮನಿರಲಾಗದೇ ಈ ವ್ಯಾಪಾರಿ “ಏನವ್ವಾ ಇನ್ನೂ ಅಕ್ಕಿ ಬಂದಂಗಿಲ್ಲ” ಎನ್ನುತ್ತಾ ಮಾತಿಗೆಳೆದ. ಮೊದಲೇ ಕೋಪದಲ್ಲಿದ್ದವಳು “ಸುಮ್ ಕುಂತ್ಕೊಂಡು ನಿನ್ನ ಕ್ಯಾಮೆ ನೋಡ್ಕಾ” ಎನ್ನುತ್ತಾ ಮುಖದಿರುವಿದಳು. ಅವಳ ಕೋಪ ಕಂಡು ಖುಷಿಯಾಗಿ ಇವನು ಕಿಸಕ್ಕೆಂದು ನಕ್ಕ. ತಿರುಗಿಸಿ ಏನಾದರೂ ಅನ್ನುತ್ತಿದ್ದಳೇನೋ ನಮ್ಮ ಪುಣ್ಯ ಬಿಡಿ ಅವಳ ಮಾತುಗಳನ್ನು ಕೇಳಿಸಿಕೊಳ್ಳುವ ಭಾಗ್ಯ ನಮಗಿಲ್ಲ – ಅಷ್ಟರಲ್ಲಿ ಯಾವುದೋ ಹೊಸ ಮಿಕ ಅವಳ ಬಲೆಗೆ ಬಿದ್ದಿತ್ತು.  ವ್ಯವಹಾರ ಕುದುರಿಸಲು ಅವಳು ಆ ಕತೆ ಬಿದ್ದಿದ್ದ ಕತ್ತಲೆಯ ಕಡೆಗೆ ಅವನನ್ನು ಸನ್ನೆ ಮಾಡಿ ಕರೆದಳು. ಇನ್ನೇನು ಅದನ್ನೇ ಎಡುವುವವಳಿದ್ದಳು “ಥತ್ ಸೂಳೇಮಗಂದು” ಎಂದು ಝಾಡಿಸಿ ಒದ್ದು ಜಾಗಮಾಡಿಕೊಂಡಳು. “ಏನದು?” ಎಂದ ಹೊಸ ಮಿಕ.  “ದರಬೇಸಿ ನನ್‌ಮಗಂದು… ಅದನ್ ಅತ್ತಾಗ್ ಬಿಡು” ಎನ್ನುತ್ತಾ ವ್ಯವಹಾರ ಕುದುರಿದ ತಕ್ಷಣ ಅವರಿಬ್ಬರೂ ಆ ಕತ್ತಲಲ್ಲೇ ಎಲ್ಲೋ ಕರಗಿಹೋದರು. ರಾತ್ರಿ ಹತ್ತಾಗುತ್ತಾ ಬಂದಿತ್ತು. ಅಲ್ಲಿ ವ್ಯಾಪಾರ ಮಾಡುತ್ತಾ ಕುಳಿತಿದ್ದವರೆಲ್ಲಾ ತಂತಮ್ಮ ಸರಕನ್ನು ಎತ್ತಿಡತೊಡಗಿದರು. ಜಾತ್ರೆಯ ದಿನವಾದ್ದರಿಂದ ಅವರಿಗೆ ನಾಲ್ಕು ಕಾಸು ಹೆಚ್ಚಾಗಿಯೇ ಸಂಪಾದನೆಯಾಗಿತ್ತು.  ಕಟ್ಟಿಕೊಂಡ ಸರಕನ್ನು ಬೆನ್ನ ಮೇಲೆ ಹೊತ್ತು ಸಿಟಿಬಸ್ಸಿನ ಕಡೆಗೋ, ಅಥವಾ ಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ ತಮ್ಮ ವಾಹನಗಳಿಗೆ ಕಟ್ಟಿಕೊಂಡೋ ಹೊರಡುವ ತಯಾರಿ ಮಾಡಿಕೊಂಡರು. ಇದರ ಮುಂದಿದ್ದವನೂ ತನ್ನ ಗಂಟುಮೂಟೆ ತಯಾರಿಸಿ ಇಟ್ಟುಕೊಂಡು ಗೆಳೆಯನಿಗಾಗಿ ಕಾಯುತ್ತಿದ್ದ. ಇಬ್ಬರೂ ಸೇರಿ ಆಟೋದಲ್ಲಿ ಹಾಕಿಕೊಂಡು ಹೋಗುವ ಮಾತಾಡಿಕೊಂಡಿದ್ದರು. ಆಗ ಅವನಿಗೆ ಹಿಂದೆ ಬಿದ್ದಿದ್ದ ಅದರ ಜ್ಞಾಪಕ ಬಂತು. ʻಏನಾಗಿದ್ಯೋ ನೋಡುಮಾʼ ಎಂದುಕೊಳ್ಳುತ್ತಾ ಅದರ ಹತ್ತಿರ ಹೋದ. ಇನ್ನೂ ಉಸಿರಾಡ್ತಾ ಇದೆಯೇನೋ ಅನ್ನಿಸ್ತು.  ಬಗ್ಗಿ ಇನ್ನೇನು ಮುಟ್ಟಬೇಕು, ಅಷ್ಟರಲ್ಲಿ ಆಟೋ ಮಾಡಿಕೊಂಡು ಬಂದಿದ್ದ ಗೆಳೆಯ “ಬೇಗ ಬಾ.. ಒತ್ತಾಗೈತೆ ಅಲ್ಲೇನ್ ನೋಡ್ತಾ ನಿಂತಿದೀಯ.. ಬಿರೀನ್ ಬಾ.. ಮನೇ ಅತ್ರ ರಾತ್ರಿ ನಾಟ್ಕ ಆಡ್ತಾವ್ರೆ. ನೋಡಾಕ್ ಓಗ್ಬೇಕು” ಎಂದು ಅವಸರಿಸಿದ. “ಬಂದೇ ಇರು; ಇದೇನ್ ಬದ್ಕಿದ್ಯೋ ಸತ್ತಿದ್ಯೋ ನೋಡುಮಾ ಅನ್ಕಂಡಿ. ಬದ್ಕಿದ್ರೆ ನಾ ಏನ್ಮಾಡೇನು… ಸತ್ತಿದ್ರೆ ಏನ್ಮಾಡೇನು.  ಎಲ್ಲಾ ಒಂದೇ.. ಅಂದಂಗೆ ಯಾವ್ ನಾಟ್ಕಾ ಅಂದಿ” ಎನ್ನುತ್ತಾ ತನ್ನ ಗಂಟು ಮೂಟೆಗೆ ಆಟೋದಲ್ಲಿ ಜಾಗಮಾಡಿಕೊಂಡು, ಹಸ್ತವಿಡುವಷ್ಟು ಉಳಿದ ಜಾಗದಲ್ಲಿ ಕುಂಡಿಯೂರಿಕೊಂಡು ಕುಳಿತ. ಆಟೋ ಬರ‍್ರನೆ ಹೋಗುವುದರಲ್ಲಿ ಅವರು ಮುಂದೇನು ಮಾತಾಡಿಕೊಂಡರೋ ಕೇಳಲಿಲ್ಲ. ಬೆಳಗಿನಿಂದ ಗಿಜಿಗಿಜಿಗುಡುತ್ತಿದ್ದ ವಾಣಿಜ್ಯ ಸಂಕೀರ್ಣ ನಿಧಾನವಾಗಿ ನಿರ್ಜನವಾಗುತ್ತಿತ್ತು. ಎಲ್ಲ ಅಂಗಡಿ ಮುಂಗಟ್ಟುಗಳೂ ಬಾಗಿಲನ್ನು ಜಡಿದುಕೊಂಡವು.ವಾಹನ ನಿಲ್ದಾಣದಲ್ಲಿದ್ದ ವಾಹನಗಳೆಲ್ಲಾ ಖಾಲಿಯಾದವು. ಸಿಟಿಬಸ್ಸಿನ ಕಂಡಕ್ಟರ್ “ಲಾಸ್ಟ್ ಟ್ರಿಪ್, ಲಾಸ್ಟ್ ಟ್ರಿಪ್. ಬೇಗ ಬೇಗ ಹತ್ತಿಕೊಳ್ಳಿ” ಎಂದು ಅಳಿದುಳಿದವರನ್ನು ಹತ್ತಿಸಿಕೊಳ್ಳತೊಡಗಿದ. ಪಕ್ಕದ ಬೀದಿಯ ಜಾತ್ರೆಯ ಸಂಭ್ರಮವೂ ಮುಗಿದು ತಲಗಟ್ಟಮ್ಮ ತನ್ನ ದೇಗುಲದಲ್ಲಿ ಬಂದಿಯಾಗಿ, ಸುಸ್ತಾಗಿ, ಕುಳಿತಲ್ಲೇ ನಿದ್ದೆಮಾಡತೊಡಗಿದಳು. ದಿನವಿಡೀ ಕಾಯೊಡೆದು, ಮಂಗಳಾರತಿ ಮಾಡಿ, ತಾಯಿತ ಕಟ್ಟಿ, ಭಂಡಾರ ಬಳಿದಿದ್ದ ಅಯ್ಯ ಮೈಯೆಲ್ಲಾ ಮುರಿದು ಹೋಗುವಷ್ಟು ಬಸವಳಿದಿದ್ದು, ಅಂದಿನ ಸಂಪಾದನೆಯನ್ನು ಕೈಚೀಲಕ್ಕೆ ತುರುಕಿಕೊಂಡು, ಬಾಗಿಲಿಗೆ ಬೀಗ ಜಡಿದು ಮನೆಯ ಕಡೆಗೆ ನಡೆದ. ಮಾರುಕಟ್ಟೆ ಬಳಸಿಕೊಂಡು ಹಿಂದಿನ ಬೀದಿಗೆ ಹೋದರೆ ಅವನ ಮನೆ. ಬಸ್ಸಿನ ದಾರಿಯಲ್ಲ; ಆಟೋದವರು ಬರುವುದಿಲ್ಲ. ಹೇಗೋ ಕಷ್ಟಪಟ್ಟುಕೊಂಡು ಬರುತ್ತಿರುವಾಗ ಕತ್ತಲಲ್ಲಿ ಕಾಣದೇ ಆ ಕತೆಯನ್ನು ಎಡವಿ ಅದರ ಮೇಲೇ ಬಿದ್ದುಬಿಟ್ಟ. ಪ್ರಾಣವೇ ಹೋದಷ್ಟು ಭಯವಾಗಿ “ಅಮ್ಮಾ ತಲಗಟ್ಟಮ್ಮಾ” ಎಂದು ಕಿರಿಚಿಕೊಂಡ. ಹತ್ತಿರದಲ್ಲಿ ಯಾರೂ ಓಡಾಡುತ್ತಿರಲಿಲ್ಲವಾದ್ದರಿಂದ ಯಾರಿಗೂ ಅವನ ಕೂಗು ಕೇಳಲಿಲ್ಲ. ಎದ್ದು ಕುಳಿತುಕೊಂಡು ಅಲುಗಾಡಿಸಿ ನೋಡಿದ. ಇನ್ನೂ ಸಣ್ಣಗೆ ಉಸಿರಾಡುತ್ತಿತ್ತು. ‘ಸಧ್ಯ ನಾನು ಬಿದ್ದು ಜೀವ ಹೋಗಲಿಲ್ಲವಲ್ಲ’ ಎಂದು ಸಮಾಧಾನಿಸಿಕೊಂಡು ಎದ್ದು ನಿಂತ. ಕೆಳಗೆ ಬಿದ್ದಿದ್ದ ತನ್ನ ಕೈಚೀಲವನ್ನು ಹೆಕ್ಕಿಕೊಂಡು ಮತ್ತೊಮ್ಮೆ ಅದರ ಕಡೆಗೆ ನೋಡಿದ. ‘ತಾನು

ಯಾರೂ ಓದದೆಯೇ ಹೋದ ಕತೆ… Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ ಕಳೆದ ಸಂಚಿಕೆಯಿಂದ…       ಅಕ್ಕ ಕೂಡಲ ಸಂಗಮವನ್ನು ಪ್ರವೇಶಿಸುತ್ತಲೇ ಮತ್ತೊಂದು ಅಗ್ನಿ ಪರೀಕ್ಷೆ ಅವಳಿಗೆ ಕಾದಿತ್ತು. ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಯಾರೇ ಬರಲಿ ಪರೀಕ್ಷಿಸದೇ ಅನುಮತಿಯನ್ನು ಕೊಡುತ್ತಿರಲಿಲ್ಲ. ಶರಣೆ ಅಕ್ಕಮಹಾದೇವಿಯನ್ನು ಕಂಡು ದಿಗ್ಭ್ರಮೆಗೊಂಡ ಅಲ್ಲಮ ಅವಳನ್ನು ಪರೀಕ್ಷಿಸಲು ಮುಂದಾಗಿ                              “ಸತಿ ನೀನು ಇತ್ತಲೇಕೆ ಬಂದೆಯವ್ವಾ ಸತಿಯೆಂದರೆ ಮುನಿವರು   ನಮ್ಮ ಶರಣರು ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು     ಇಲ್ಲದಿದ್ದರೆ ತೊಲಗು ತಾಯಿ” ಅಕ್ಕ; “ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೆ ನೋಡಾ” ಪ್ರಭು: ಕೇಶಿಯೆಂಬ ಸೀರೆಯು ಲಿಂಗಕ್ಕೆ ಮರೆಯಾಯಿತ್ತು. ಅಪಮಾನವೆಂತು ಹರಿಯಿತ್ತು. ಅಕ್ಕ: ಕಾಯಕರ್ರನೆ ಕಂದಿದರೇನಯ್ಯ ಕಾಯಮಿರ್ರನೆ ಮಿಂಚಿದರೇನಯ್ಯ ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನ ಲಿಂಗವು ಒಲಿದ ಕಾಯ ಹೇಗಿದ್ದರೇನಾಯ್ಯ. ಪ್ರಭು: ಭಾವ ಶುದ್ಧವಾದಲ್ಲಿ ಸೀರೆಯನುಳಿದು ಕೂದಲು ಮರೆ ಮಾಡುವುದುದೇತಕ್ಕೆ. ಅಕ್ಕ: ಕಾಮನ ಮುದ್ರೆಯನು ಕಂಡು ನಿಮಗೆ ನೋವಾದೀತೆಂದು  ಆಭಾವದಿಂದ ಮುಚ್ಚಿದೆ. ಕಾಯದೊಳು ಅಕಾಯವಾಯಿತ್ತು. ಜೀವದೊಳಗೆ ನಿರ್ಜೀವಾಯಿತ್ತು. ಭಾವದೊಳೆ ನಿರ್ಭಾವವಾಗಿತ್ತು.   ಅಕ್ಕನ ದಿಟ್ಟ ಸ್ಪಷ್ಟ ಅಂತರಂಗ ಬಹಿರಂಗ ಶುದ್ಧಿಯ ಉತ್ತರವನ್ನು ಕೇಳಿದ ಶರಣ ಸಂಕುಲ ಮೂಕವಿಸ್ಮಿತವಾಗುತ್ತದೆ. ಅಲ್ಲಮಪ್ರಭು “ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ ಗುಹೇಶ್ವರ ಲಿಂಗದಲ್ಲಿ ಸಂದಿಲ್ಲದಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ” ಎಂದರು. ಆ ಕ್ಷಣವೇ ಶರಣರೆಲ್ಲ ತಲೆಬಾಗಿ ಶರಣೊ ಎನ್ನುವರು.     ಅಕ್ಕನ ವ್ಯಕ್ತಿತ್ವ, ವಿಚಾರಧಾರೆಯೇ ಅಂತದ್ದು. ಸ್ತ್ರೀ ಸ್ವಾತಂತ್ರ್ಯವನ್ನು ಮೆರೆದ          ಅಂತೆಯೇ ಬದುಕಿದ ಅಕ್ಕ ಸ್ತ್ರೀ ಸ್ವಾತಂತ್ರ್ಯ ಅದಾಗೆಯೇ ಲಭಿಸುವುದಿಲ್ಲ. ಆತ್ಮಬಲದಿಂದ ನಾವಾಗಿಯೇ ಪಡೆದುಕೊಳ್ಳಬೇಕು, ಸಾಧ್ಯವಾದರೆ ಒತ್ತಾಯದಿಂದ ಕಸಿದುಕೊಳ್ಳಬೇಕೆಂಬ ಧೋರಣೆಯ ದಿಟ್ಟ ಮಹಿಳೆ. ಪಂಚೇಂದ್ರಿಯಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ? ಸಪ್ತ ವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೇ ಚನ್ನಮಲ್ಲಿಕಾಜರ್ುನ…….   ಸಂಸಾರವೆಂಬುದು ರತ್ನದ ಸಂಕಲೆ ಇದ್ದಹಾಗೆ, ಆಕರ್ಷಣೀಯವಾದ ಸಂಸಾರ ಸುಖದೊಳಗೆ ಗಂಡನ ಕಟ್ಟುಕಟ್ಟಲೆಯೊಳಗೆ ಅವನಿಚ್ಛೆಯಂತೆ ಬದುಕುವುದು ಅದೊಂದು ಜೀವನವೇ? ಶತಶತಮಾನಗಳ ಪುರುಷನ ದೌರ್ಜನ್ಯವನ್ನು ಪ್ರಶ್ನಿಸಿ ದಿಕ್ಕರಿಸಿದ ಅಕ್ಕ ಬಿಡುಗಡೆಯ ಬಯಸಿದ ಸ್ವತಂತ್ರ ಪ್ರೇಮಿ. ಸಂಸಾರ ಬಂಧನಕ್ಕೆ ಕಾರಣವಾಗುವ ಪಂಚೇಂದ್ರಿಯ ಮತ್ತು ಸಪ್ತ ವ್ಯಸನಗಳ ನಿಯಂತ್ರಿಸಿಕೊಂಡರೆ ಈ ರತ್ನದ ಸಂಕಲೆಯಿಂದ ಬಿಡುಗಡೆಯನ್ನು ಪಡೆಯಬಹುದು. ಮುಂದುವರೆದು ಅಕ್ಕ ಹೇಳುವುದು,  “ಈ ಸಾವಕೆಡುವ ಗಂಡರನೊಯ್ದು ಒಲೆಯೊಳಗೆ ಇಕ್ಕು ತಾಯಿ”-ಎನ್ನುತ್ತಾಳೆ. ಇದು ಅಕ್ಕನ ಉಗ್ರವಾದ ಪ್ರತಿಭಟನೆ. ಆಧುನಿಕ ಮಹಿಳಾ ವಾದಿಯರನ್ನು  ಬೆಚ್ಚಿಬೀಳಿಸುವ ಮಾತುಗಳಿವು.

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಮತ್ತೆಂದೂ ಮಂಡಿಗೆ ಮೆಲ್ಲಲಿಲ್ಲ ಕತ್ತಲಾಗಲೆಂದೆ ಬೆಳಗಾಗುವುದು ಆರಲೆಂದೇ ದೀಪ ಉರಿಯುವುದು ಬಾಡಲೆಂದೇ ಹೂವು ಅರಳುವುದು ಕಮರಲೆಂದೆ ಕನಸು ಹುಟ್ಟುವುದು ಗೊತ್ತಿದ್ದರೂ  ಹಣತೆ ಹಚ್ಚಿಟ್ಟಳು ಬರಲಿರುವ ಸಖನಿಗಾಗಿ. ಮಲ್ಲೆ ಮೊಗ್ಗ ಮಾಲೆ ಹೆರಳಿಗೆ ಮುಡಿದು ನಿಂತಳು ಬರಲಿರುವ ಸಖನ ಮೂಗಿಗೆ ಘಮಿಸಲೆಂದು ಬರಡು ಎದೆಗೆ ವಸಂತನ ಕನವರಿಸಿ ಹೊಸ ಕನಸು ಚಿಗುರಿಸಿಕೊಂಡಳು ಬರುವ ಸಖನಿಗೊಂದಿಗೆ ಹಂಚಿಕೊಳ್ಳಲೆಂದು ಮುಸ್ಸಂಜೆಗೆ ಬಂದ ಸಖ ಹಚ್ಚಿಟ್ಟ ಹಣತೆ ಆರಿಸಿದ ಮಲ್ಲೆ ಮಾಲೆಯ ಹೊಸಕಿಹಾಕಿದ ಅದಾಗತಾನೆ ಚಿಗುರೊಡೆದಿದ್ದ ಕನಸುಗಳ ಚಿಗುರ  ಚಿವುಟಿ ಹಸಿಯೆದೆಯ ಮತ್ತೆ ಬರಡಾಗಿಸಿ ನಡೆದ ಮತ್ತೊಂದು ಎದೆಬಯಲ ಅರಸಿ ಅದೇ ಕಡೆ ಮತ್ತವಳೆಂದು ಹಣತೆ ಹಚ್ಚಿಡಲಿಲ್ಲ ಗಿಡದಿಂದ ಮಲ್ಲಿಗೆಯ ಬಿಡಿಸಿ ತರಲಿಲ್ಲ ಒಣಗಿದೆದೆಗೆ ನೀರು ಹಾಯಿಸಲಿಲ್ಲ ಕನಸಿರಲಿ ಮನಸಲ್ಲೂ ಮಂಡಿಗೆ ತಿನ್ನಲಿಲ್ಲ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ನಾನು ನಿನ್ನಾತ್ಮದ ಗುರುತಾಗಿದ್ದೆ ಬಿದಲೋಟಿ ರಂಗನಾಥ್ ಹೌದು ನಾನು ನಿನ್ನಾತ್ಮದ ಗುರುತಾಗಿದ್ದೆ ಆ ನಿನ್ನ ನೋಡುವ ನೋಟದ ಬಿಸುಪಿಗೆ ಚಳಿಯಾಗಿದ್ದೆ ಮಳೆಯಾಗಿದ್ದೆ ಮುಗಿಲೇ ಆಗಿದ್ದೆ ನಿನ್ನ ಮೈಯೊಳಗಿನ ಬಿಸಿಗೆ ಬೆರೆತ ಜೀವವಾಗಿದ್ದೆ ನೀನು ನಡೆದ ದಾರಿಯ ಮೇಲಿನ ಹೆಜ್ಜೆಯನು ಮುಟ್ಟಿ ಬೆಳಕಿನ ಕಿರಣಗಳ ಮುಡಿಸಿದ್ದೆ ಉಳಿದ ಮಾತುಗಳ ನಿಟ್ಟುಸಿರ ಮೌನಕೆ ಕಾಲದ ಸವಾರ ಕುಂಟಾಗಿ ಬಿದ್ದಿದ್ದ ಎದೆಯೊಳಗಿನ ಗಿಲಕಿಗೆ ಕೀ ಕೊಡುವ ನಿನ್ನ ಹೃದಯದ ಕೋಮಲ ಕೈಗಳು ನನ್ನಿಂದ ಜಾರಿಹೋದಾಗಿನ ಶೂನ್ಯತೆಯಲಿ ಕತ್ತಲ ಮನೆಯಲಿ ದಿನಗಳ ಎಣಿಸುತ್ತ ಕೂತಿರುವೆ ಎಷ್ಟೊಂದಿತ್ತು ಹೇಳಲು ಮೌನದ ಒರಟುತನವ ಪಾಳಿಸಲು ನೋಡು ನಿನ್ನ ಕಣ್ಣ ಚಿಪ್ಪಿನಲಿ ಕಡೆದ ನನ್ನದೇ ಚಿತ್ರ ಕಣ್ಣೀರ ಕೋಡಿ ಹರಿದರೂ ಕೊಚ್ಚಿ ಹೋಗಿಲ್ಲ ಅಂದು ನಿನ್ನೆದೆಯೊಳಗೆ ಮಿನುಗಿದ ನಕ್ಷತ್ರ ಕಣ್ಮಿಟುಕಿಸುತ್ತಲೇ ಇದೆ… ನೀನು ಜಾರಿ ಹೋಗಿ ಎಷ್ಟೋ ವರುಷಗಳಾದರು ! ಅವತ್ತು ನೀನೆ ಹೇಳಬಹುದಿತ್ತು ಹೃದಯ ಕಣ್ಣೀರುಕ್ಕಿಸಿದ ಕಥೆಯ ಹೇಳದೆ ಹೋಗಿ ನೋವಿನಲಿ ಹೆಣೆದ ಬಲೆಯಾದೆ ನೀನೂರಿದ ಹೆಜ್ಜೆಗಳು ಕವಲೊಡೆದು ಚಾಚಿವೆ ಎದೆಯ ತುಂಬಾ ಒಣಗಿ ಬೆತ್ತಲಾಗಿದ್ದರೆ ನಿಜಕ್ಕೂ ಈ ಕವಿತೆ ಇವತ್ತು ನಗುವ ಚಲ್ಲುತಿರಲಿಲ್ಲ ನಿನ್ನ ನೆನಪ ದಾರಿಯ ಏರಿಯ ಮೇಲೆ ಕೂತು ಕೆರೆಯ ನೀರಿಗೆ ಕಲ್ಲೆಸೆಯುತ್ತಿರಲಿಲ್ಲ.!

ಕಾವ್ಯಯಾನ Read Post »

ಇತರೆ

ಕಾಡುವ ಹಾಡು

ಮೈಸೂರು ದಸರಾ ಚಿತ್ರ-ಕರುಳಿನ ಕರೆ ಗೀತರಚನೆ- ಆರ್.ಎನ್.ಜಯಗೋಪಾಲ್ ಸಂಗೀತ-ಎಂ.ರಂಗರಾವ್ ಗಾಯಕರು-ಪಿ.ಬಿ.ಶ್ರೀನಿವಾಸ್ ಸುಜಾತ ರವೀಶ್ ಕಾಡುವ ಹಾಡು ಮೈಸೂರು ದಸರಾ ಮೈಸೂರು ಎಂದರೆ ದಸರಾ ಜಂಬೂ ಸವಾರಿ ಮೊದಲು ನೆನಪು ಬರುವುದು. ನಂತರ ಮೈಸೂರು ಪಾಕ್ ಮೈಸೂರು ಮಲ್ಲಿಗೆ ಮೈಸೂರು ರೇಷ್ಮೆ ಸೀರೆ ಮೈಸೂರು ಚಿಗುರು ವೀಳ್ಯದೆಲೆ ಹಾಗೂ ಶ್ರೀಗಂಧದ ಉತ್ಪನ್ನಗಳು ಮೈಸೂರು ವೀರನಗೆರೆ ಬದನೆಕಾಯಿ. ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ಕೈಗೆ ಹಚ್ಚುವ ಮಸಿ ತಯಾರಾಗುವುದು ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲೇ. ರಾಜ್ಯದ ರಾಜಧಾನಿ ಬೆಂಗಳೂರು ಆದರೂ ಸಾಂಸ್ಕೃತಿಕ ರಾಜಧಾನಿ ಮಾತ್ರ ನಮ್ಮ ಅರಮನೆ ನಗರಿಯೇ. ನಮ್ಮೂರು ಮೈಸೂರು ವೈಭವ ಹೊಗಳುತ್ತಾ ಕೂತರೆ ಪುಟಗಟ್ಟಲೆ ತುಂಬುತ್ತದೆ . ಬೇಡ ಈಗ ಹಾಡಿನಬಗ್ಗೆ ಮಾತ್ರ ಬರೀಬೇಕು. ಚಿಕ್ಕಂದಿನಿಂದ ಕಿವಿ ಮೇಲೆ ಬೀಳುತ್ತಿದ್ದ ಈ ಹಾಡಲ್ಲದೆ ನನ್ನನ್ನು ಕಾಡುವುದು ಬೇರ್ಯಾವುದು?”ಮೈಸೂರು ದಸರಾ ಎಷ್ಟೊಂದು ಸುಂದರ” ಕರುಳಿನ ಕರೆ ಚಿತ್ರದ ಪಿಬಿ ಶ್ರೀನಿವಾಸ್ ಅವರ ಮಧುರ ಕಂಠದ ಆರ್ ಎನ್ ಜಯಗೋಪಾಲ್ ರಚಿಸಿದ ಎಂ ರಂಗರಾವ್ ಸಂಗೀತದ ಈ ಹಾಡು ಮೈಸೂರು ಅಂದರೆ ದಸರಾ ಎನ್ನುವ ಮಾತಿಗೆ ಸುಂದರ ಪ್ರತಿಮೆ.ಪ್ರತಿ ನವರಾತ್ರಿಯ ಗೊಂಬೆ ಆರತಿಯ ದಿನ ಮಕ್ಕಳೆಲ್ಲ ಈ ಹಾಡನ್ನು ಕೋರಸ್ ಹಾಡೇ ಹಾಡುತ್ತಿದ್ದೆವು . ಕೇಳುತ್ತಿದ್ದವರ ಕಿವಿಯ ಗತಿ ಪಾಡು ನಿಮ್ಮ ಊಹೆಗೆ ಬಿಟ್ಟಿದ್ದು.😁😁😁😁😁 ಆ ನನ್ನ ಪ್ರೀತಿಯ ಹಾಡಿನ ಬಗ್ಗೆ ಬರೆಯಲು ಸಿಕ್ಕ ಸುವರ್ಣಾವಕಾಶಕ್ಕೆ ಸಾಹಿತ್ಯೋತ್ಸವಕ್ಕೆ ತುಂಬಾ ತುಂಬಾ ಧನ್ಯವಾದಗಳು . ಡಾಕ್ಟರ್ ರಾಜಕುಮಾರ್ ಕಲ್ಪನಾ ಮತ್ತು ಸಂಗಡಿಗರು ಸೇರಿ ದಸರೆಯ ಸಡಗರವನ್ನು ಸಂಭ್ರಮಿಸಿ ಹಾಡಿ ಕುಣಿವ ಹಾಡು ಇದು. ಮೊದಲಿಗೆ ಧಾರ್ಮಿಕ ಹಿನ್ನೆ ವಿವರಿಸುವ ಹಾಡು ಮಧ್ಯಮ ವರ್ಗದವರ ಹಬ್ಬದ ಆಚರಣೆಯ ರೀತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದ .ಮೈಸೂರು ನಗರ ಅಧಿದೇವತೆ ಚಾಮುಂಡಿಯ ಮಹಿಮೆಯನ್ನು ವರ್ಣಿಸುತ್ತದೆ . ನಂತರ ಮಹಾನವಮಿಯ ಬಗ್ಗೆ ಹೇಳುತ್ತಾ ಆ ತಾಯಿಯ ವರ್ಚಸ್ಸು ಅವಳಿಗೆ ಶರಣಾಗೋಣ ಎಂಬ ಆಶಯವನ್ನು ಬಿಂಬಿಸುತ್ತದೆ. ಕಡೆಗೆ ಚರಣದಲ್ಲಿ ಶತ್ರುವನ್ನು ಅಳಿಸಿ ಧರ್ಮ ಸಂಸ್ಥಾಪಿಸಿದ ನಾವು ಶಸ್ತ್ರ ಹೂಡಬೇಕು. ಬಡತನವನ್ನು ಅಳಿಸಲು ಪರಸ್ಪರ ಸಹಕಾರದಿಂದ ಆ ತಾಯಿಯ ಹೆಸರಲ್ಲಿ ಒಂದಾಗಿ ದುಡಿಯಬೇಕು ಎಂಬ ಸಂದೇಶವನ್ನು ಕೊಡುತ್ತದೆ. ಮುಖ್ಯವಾಗಿ ಎಲ್ಲ ಧಾರ್ಮಿಕ ಆಚರಣೆಗಳು ಸಾಮಾಜಿಕ ಉತ್ಸವದ ರೂಪ ತಾಳಿ ಆಚರಿಸಲ್ಪಡುವ ಉದ್ದೇಶವೇ ಅದು. ಸಾಮಾಜಿಕ ಸಮಾನತೆಯ ಸ್ಥಾಪನೆ ಪರಸ್ಪರ ಸಹಕಾರ ಮನೋಭಾವನೆ ಒಂದಾಗಿ ದುಡಿಯುವ ಸೇರಿ ನಲಿಯುವ ಈ ಉದ್ದೇಶ ಇಂತಹ ಹಾಡುಗಳಿಂದ ನೆರವೇರುತ್ತದೆ. ಪುಟ್ಟಣ್ಣ ಕಣಗಾಲರಂತಹ ಧೀಮಂತ ನಿರ್ದೇಶಕರು ಈ ತರಹದ ಸಾಮಾಜಿಕ ಕಳಕಳಿಯನ್ನು ಸಂದೇಶವನ್ನು ಈ ಹಾಡಿನ ಮೂಲಕ ಎತ್ತಿ ಹಿಡಿದಿದ್ದಾರೆ. ಹಿಂದಿನ ಚಿತ್ರಗಳಲ್ಲಿ ಇರುತ್ತಿದ್ದ ಒಳ್ಳೆಯ ವಿಷಯಗಳು ಇವೇ. ಮನರಂಜನೆಯ ಮೂಲಕ ಒಳಿತು ಕೆಡುಕಿನ ಬೋಧನೆ ಹಾಗೂ ಕೂಡಿ ದುಡಿಯುವ ಒಂದಾಗಿ ನಲಿಯುವ ಪಾಠ. “ಸ್ವಾಮಿ ಕಾರ್ಯದೊಂದಿಗೆ ಸ್ವಕಾರ್ಯ” ಎಂಬಂತೆ ಇಂತಹ ಚಿತ್ರಗಳು ಹಾಡುಗಳು ಈಗ ಮರೆಯಾಗಿರುವುದು ಕಾಲ ಧರ್ಮ ಪ್ರಭಾವ ಎನ್ನೋಣವೇ? ಕಾಲಾಯ ತಸ್ಮೈ ನಮಃ!

ಕಾಡುವ ಹಾಡು Read Post »

You cannot copy content of this page

Scroll to Top