ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಗುಚ್ಛ

ವಿಧಿ! ಆರ್.ಸುನೀಲ್ ತರೀಕೆರೆ ರಂಗಪ್ಪನ ಮನೆ ಮುಂದೆ ಬೆಂಕಿ ಬಿದ್ದ ಸುದ್ದಿ ಊರಲ್ಲೆಲ್ಲಾ ಐದೇ ನಿಮಿಷಕ್ಕೆ ಹರಡಿಹೋಯಿತು.ಆ ಸುದ್ದಿ ನನ್ನ ಕಿವಿಗೂ ಬಿದ್ದ ಕ್ಷಣದಿಂದ ಮನಸ್ಸು ವ್ಯಾಕುಲಗೊಳ್ಳತೊಡಗಿತು.ಛೇ..ಅಂತೂ ಇಂತೂ ರಂಗಪ್ಪ ಹೋಗ್ನಿಟ್ಟ.! ಬದುಕಿದ್ದಾಗ ಅವನು ಪಟ್ಟ ಪಾಡು ನೆನೆಸಿಕೊಂಡು ಸಅಯ್ಯೋ ಅಂತ ಒಂದು ಕಡೆ ಅನ್ನಿಸತೊಡಗಿದರೆ ಮತ್ತೊಂದು ಕಡೆ ಬಿಡು ಅವನು ಹೋದದ್ದು ಒಳ್ಳೆಯದೇ ಆಯಿತು ಇಲ್ಲದಿದ್ದರೆ ಪಾಪ ಇನ್ನೂ ನೋವು ಅನುಭವಿಸುತ್ತಿದ್ದ.ಏನ್ ಈಗಾಗ್ಲೇ ಕಮ್ಮೀ ನೋವು ಅನುಭವಿಸಿದ್ದಾನಾ ಅವ್ನು..?!ಇಷ್ಟು ದಿನ ಅವ್ನು ಬದುಕಿದ್ದೂ ಸತ್ತಂಗೆ ತಾನೇ ಇದ್ದದ್ದು.ದಿನಾ ಬೆಳಗಾದ್ರೆ ಒಂದಲ್ಲ ಒಂದು ಗೋಳು ನೋವು ರಗಳೆ ಅವ್ನಿಗೆ ಇದ್ದೇ ಇತ್ತು ಪಾಪ.!ಅಂತ ಮನಸ್ಸು ಅವನ ಬಗ್ಗೆ ಇನ್ನಿಲ್ಲದಂತೆ ಮರುಗತೊಡಗಿತು. ರಂಗಪ್ಪ ತೀರಾ ಬಡವನೇನೂ ಆಗರ‍್ಲಿಲ್ಲ.ಇದ್ದ ಎರಡೆಕೆರೆ ಜಮೀನಿನಲ್ಲೇ ಅಡಿಕೆ ಗಿಡಕೆ ಬೆಳೆದುಕೊಂಡು ಅದರಲ್ಲೇ ತನಗೊಂದು ಸ್ವಂತದ ಸೂರು ಅಂತ ಮಾಡಿಕೊಂಡಿದ್ದ.ಹೆAಡ್ತಿ ಬೇರೆ ಸತ್ತು ಎಷ್ಟೋ ವರ್ಷ ಆಗಿತ್ತು.ಇದ್ದ ಒಬ್ಬ ಮಗನ ಮದ್ವೆ ಮಾಡಿ ಹೆಂಗೋ ಅಂತ ಒಂತ ಒಂದು ನೆಮ್ಮದಿಯ ಜೀವ್ನ ಮಾಡ್ತಿದ್ದ.ಮೊದ್ಲು ಮೊದ್ಲು ಎಲ್ಲಾ ಚೆನ್ನಾಗೇ ಇತ್ತು.ರಂಗಪ್ಪನ್ನೂ ಕೂಡ ಚೆನ್ನಾಗೇ ನೋದ್ಕೋತಿದ್ರು.ಆದ್ರೆ ಬರ್ತಾ ಬರ್ತಾ ರಂಗಪ್ಪನ ಮಗ ಸೊಸೆಗೆ ರೋಟದಿಂದ ಬರ್ತಿದ್ದ ಆದಾಯದ ಮೇಲೆ ಕಣ್ಣು ಬಿತ್ತು. ಮೊದ್ಲಿನಿಂದ್ಲೂ ಉಢಾಳನಾಗಿ ಬೆಳೆದಿದ್ದ ರಂಗಪ್ಪನ ಮಗ ಮಲ್ಲ ಯಾವ ಕೆಲ್ಸ ಕಾರ್ಯಾನೂ ಮಾಡ್ದೆ ಅಪ್ಪನ ದುಡ್ನಾಗೆ ಮಜಾ ಮಾಡ್ಕೊಂಡು ತಿರುಗ್ತಾ ಇದ್ದ.ಇಸ್ಪೀಟು ಹೆಂಡ ಜೊತೆಗೆ ಅದೂ ಇದೂ ಅಂತ ಸ್ವಲ್ಪ ಶೋಕೀನೂ ಕೂಡ ಜಾಸ್ತೀನೇ ಇತ್ತು.ಅವೆಲ್ಲಾ ಇತ್ತೀಚಿಗಂತೂ ತುಸು ಮಿತಿ ಮೀರಿ ಹೋಗಿದ್ವು.ಇಂತವ್ನಿಗೆ ಒಂದು ಮದ್ವೆ ಅಂತ ಮಾಡಿಬಿಟ್ರೆ ಸರಿಹೋಗ್ತಾನೆ ಅಂತ ಲೆಕ್ಕ ಹಾಕಿದ್ದ ರಂಗಪ್ಪನ ಎಣಿಕೆ ತಪ್ಪಾಗಿ ಹೋಗಿತ್ತು.ಅವ್ನಿಗೆ ಮದ್ವೆ ಮಾಡಿದ ತಕ್ಷಣ ತೋಟದ ವ್ಯವಹಾರವೆಲ್ಲಾ ಅವ್ನಿಗೆ ಸೊಸೆಗೆ ವಹಿಸ್ಬಿಟ್ಟು ತಾನು ಆರಾಮಾಗಿ ಮೊಮ್ಮಕ್ಕಳನ್ನ ಆಟ ಆಡಿಸ್ತಾ ಕಾಲ ಕಳೀಬಹುದು ಅಂತ ಅಂದುಕೊAಡಿದ್ದ ರಂಗಪ್ಪ ಮಲ್ಲ ನಾಯಿ ಬಾಲ ಡೊಂಕು ಎಂಬAತೆ ಮದ್ವೆ ಆದ್ಮೇಲೆ ಕೂಡ ಸರಿ ಹೋಗದ್ದು ಕಂಡು ಒಳಗೊಳಗೆ ಸ್ಯಾನೇ ನೋವು ಅನುಭವಿಸ್ತಿದ್ದ. ಇತ್ತ ತಾನು ಮದ್ವೆ ಆದ್ರೂ ಕೂಡ ಅಪ್ಪ ಯಾವ ವ್ಯವಹಾರಾನೂ ಕೊಡ್ತಾ ಇಲ್ವಲ್ಲಾ ಅಂತ ಮಲ್ಲ ಕೂಡ ಒಳಗೊಳಗೇ ಕುದ್ದು ಹೋಗ್ತಿದ್ದ.ಇಂಥಾ ಬೇಜವಾಬ್ದಾರಿ ಮಗನಿಗೆ ವ್ಯವಹಾರ ಕೊಟ್ರೆ ಆಸ್ತಿಯೆಲ್ಲಾ ನುಂಗಿ ನೀರು ಕುಡಿದಾನೂ ಅಂತ ರಂಗಪ್ಪ ಹೆದರಿದ್ರೆ ಅತ್ತ ಮಲ್ಲ ತಾನು ಮದ್ವೆ ಆದ್ರೂ ಕೂಡ ಖರ್ಚಿಗೆ ಕಾಸು ಬೇಕು ಅಂದ್ರೆ ಅಪ್ಪನ ಮುಂದೆಯೇ ಕೈ ಒಡ್ಡಬೇಕಲ್ಲಾ ಅನ್ನೋ ಅಸಹನೆಯಿಂದ ವಿಲವಿಲ ಒದ್ದಾಡ್ತಿದ್ದ.ಮಗ ನೋಡಿದ್ರೆ ಹಿಂಗೆ ಸೊಸೆನಾದ್ರೂ ಅವ್ನಿಗೆ ಬುದ್ದಿ ಹೇಳಿ ಸರಿ ದಾರಿಗೆ ತರಬಹುದು ಅನ್ನೋ ಎಲ್ಲೋ ಒಂದು ಸಣ್ಣ ಭರವಸೆ ಕೂಡ ಸೊಸೆ ಮದುವೆಯಾಗಿ ಬಂದ ಹೊಸತರಲ್ಲೇ ಸುಳ್ಳು ಮಾಡಿದ್ಳು.ಇರೋ ಇರಡೆಕೆರೆ ಜಮೀನಿನಲ್ಲೇ ಮೂರ್ನಾಲ್ಕು ಲಕ್ಷ ಆದಾಯ ಬರೋದು ನೋಡಿ ಸೊಸೆಯ ಕಣ್ಣು ಕೂಡ ಕುಕ್ಕುತ್ತಿತ್ತು.ಒಮ್ಮೊಮ್ಮೆ ಮಗನಿಗಿಂತ ಮೊದಲು ಇವಳೇ ದುಡ್ಡಿಗಾಗಿ ಜಗಳ ಕಾಯೋಕೆ ಮುಂದೆ ನಿಂತ್ಕೋತಿದ್ಲು.ಆದಷ್ಟು ಬೇಗ ಈ ವ್ಯವಹಾರನೆಲ್ಲಾ ತಾನೇ ವಹಿಸ್ಕೊಂಡ್ರೆ ತನಗೆ ಬೇಕಾದ ಒಡವೆ ವಸ್ತç ಮಾಡ್ಕೊಂಡು ಜಮ್ಮಂತ ರಾಣೀಯಂಗೆ ಮೆರೀಬಹ್ದು ಅಂತ ಕನಸು ಕಾಣ್ತಾ ತನ್ನ ಗಂಡನಿಗೇ ಇಲ್ಲಸಲ್ಲದ್ದು ಹೇಳಿಕೊಟ್ಟು ತನ್ನಪ್ಪನ ವಿರುದ್ಧವೇ ಯುದ್ಧಕ್ಕೆ ನಿಲ್ಸಿಬಿಡ್ತಿದ್ಳು.ಒಟ್ನಲ್ಲಿ ರಂಗಪ್ಪನ ಸ್ಥಿತಿ ಮನೆಯಲ್ಲಿ ಬಿಸಿ ತುಪ್ಪದ ಹಾಗೆ ಇತ್ತ ನುಂಗೋಕೂ ಆಗ್ದೆ ಉಗುಳೋಕೂ ಆಗ್ದೆ ಇರೋ ತರ ಅಯೋಮಯವಾಗಿಬಿಟಟಿತ್ತು. ದಿನಾ ಈ ಗೋಳು ರಗಳೆ ಯಾಕೆ ಆಕಡೆ ಹಾಳಾಗಿ ಹೋಗ್ಲಿ ಅಂತ ಆ ತೋಟವನ್ನ ಮನೆಯನ್ನ ಅವ್ರ ಹೆಸ್ರಿಗೇ ಮಾಡಿಬಿಡೋಣ ಇಲ್ಲದಿದ್ರೆ ಒಂದಲ್ಲಾ ಒಂದು ದಿನ ಇವು ಆಸ್ತಿ ಹಣದ ಆಸೆಗೆ ತನ್ನನ್ನ ಕೊಲ್ಲೋಕೂ ಹೇಸಲ್ಲಾ ಅಂತ ಯೋಚಿಸಿದ ರಂಗಪ್ಪ ಹೀಗೆ ಭಂಗ ಪಡೆದಾಗ್ಲೆಲ್ಲಾ ನನ್ನ ಹತ್ರ ಬಂದು ತನ್ನ ಗೋಳು ತೋಡ್ಕೊಂಡಾಗ “ಹಂಗೆಲ್ಲಾದ್ರೂ ಮಾಡ್ಬಿಟ್ಟಿಯೋ ರಂಗಪ್ಪ..ನೀನಿನ್ನೂ ಚೆನ್ನಾಗಿರೋವಾಗ್ಲೇ ಹಿಂಗೆಲ್ಲಾ ರ‍್ಕೊಟ್ಟು ಬಿಟ್ರೆ ಆಮೇಲೆ ಆ ಆಸ್ತೀನೂ ಇರಲ್ಲ ನೀನೂ ಇರಲ್ಲ ನಿನ್ನ ಭಿಕ್ಷೆ ಬೇಡೋ ಹಾಗೆ ಮಾಡಿಬಿಟ್ಟಾರು ಹುಶಾರೂ ಇನ್ನೂ ಸ್ವಲ್ಪ ದಿನ ಹೋಗ್ಲಿ ಆಮೇಲೆ ಬೇಕಾದ್ರೆ ಒಂದು ನಿರ್ಧಾರಕ್ಕೆ ಬರ್ತಿಯಂತೆ..!”ಅAತ ಏನೋ ಹೇಳಿ ಅವ್ನಿಗೆ ಸಮಾಧಾನ ಮಾಡುವ ಜೊತೆಗೆ ಸ್ವಲ್ಪ ಎಚ್ಚರಿಕೆಯ ಮಾತನ್ನೂ ಹೇಳ್ತಾ ಇದ್ದೆ.ಆದ್ರೆ ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಆ ಹಾಳಾದವ್ರು ರಂಗಪ್ಪನಿಗೆ ಏನೋ ಒಂದು ಗತಿ ಕಾಣ್ಸೇ ಕಾಣಿಸ್ತಾರೆ ಅಂತ ಒಂದು ಸಣ್ಣ ಅನುಮಾನ ಮಾತ್ರ ಕಾಡ್ತಾನೇ ಇತ್ತು. ಇದನ್ನೆಲ್ಲಾ ನೋಡಿ ಬೇಸತ್ತು ಹೋಗಿ ನಾನೇ ಒಮ್ಮೆ ಮಲ್ಲನತ್ರ ಯಾಕಪ್ಪಾ ಹಿಂಗೆಲ್ಲಾ ಮಾಡ್ತೀರಾ ಒಂದಲ್ಲ ಒಂದು ದಿನ ಈ ತೋಟ ಮನೆಯೆಲ್ಲಾ ನಿಂಗೇ ತಾನೆ ಬರೋದು.ನೀವು ಕೊಡೋ ಕಾಟಕ್ಕೆ ಪಾಪ ನಿಮ್ಮಪ್ಪ ದಿನಾ ಕೊರಗ್ತಾ ಇದಾನೆ ಅಂತ ಬುದ್ದಿ ಹೇಳೋಕೆ ಹೋದ್ರೆ ನನಗೆ ಅವರಪ್ಪನ ತರ ವಯಸ್ಸಾಗಿದೆ ಅವನ ಹಾಗೆ ನಾನೂ ಒಬ್ಬ ಹಿರೀ ಮನುಷ್ಯ ಅಂತಾನೂ ನೋಡ್ದೆ ನಂಗೇ ಬಾಯಿಗೆ ಬಂದAಗೆ ಮಾತಾಡಿ ನಿಮಗ್ಯಾಕ್ರೀ ನಮ್ಮನೆ ಉಸಾಬರಿ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ ಅಂತ ದಬಾಯಿಸಿ ಹೋಗಿದ್ದ.ಇವ್ನೇ ಹಿಂಗೆ ಇನ್ನು ರಂಗಪ್ಪನ ಬಾಯಿಂದ ಅವ್ನ ಸೊಸೆಯ ಗುಣಗಾನ ಕೇಳಿದ್ದ ನನಗೆ ಅಪ್ಪಿತಪ್ಪಿಯೂ ಅವಳ ಹತ್ರ ಮಾತಾಡೋ ಧೈರ್ಯ ಕೂಡ ಬರಲಿಲ್ಲ. ಅಲ್ಲಾ ಹೆಂಗೂ ರಂಗಪ್ಪನಿಗೆ ಒಬ್ನೇ ಮಗ.ಅಕಸ್ಮಾತ್ ರಂಗಪ್ಪ ಏನಾದ್ರೂ ತೀರಿಹೋದ್ರೂ ಆ ಆಸ್ತಿಯೆಲ್ಲಾ ಅವ್ನಿಗೇ ತಾನೆ ಬರೋದು ಸುಮ್ನೆ ಯಾಕೆ ಜಗಳ ಆಡಿ ಎಲ್ರೂ ನೆಮ್ಮದಿ ಹಾಳು ಮಾಡ್ಕೋತಾರೆ ಅಂತ ಅನ್ನಿಸಿದರೂ ಮಲ್ಲ ನಂಗೆ ಮಾಮೂಲಿ ಮನುಷ್ಯನ ತರ ಕಾಣಲಿಲ್ಲ.ಹೌದು ಕುಡಿದ ಅಂದ್ರೆ ಅವ್ನು ಮನುಷ್ಯನಾಗೇ ಇರ್ತಿರ್ಲಿಲ್ಲ.ಆ ನಶೆಯಾಗೆ ತಾನು ಏನು ಮಾಡ್ತಿದ್ದೀನೆಂಬ ಪರಿವೆಯೂ ಅವ್ನಿಗೆ ಇರ್ತಿರ್ಲಿಲ್ಲ.ಶುದ್ಧ ತಲೆ ಕೆಟ್ಟೋನಂಗೆ ಆಡ್ತಿದ್ದ. ಹಿಂಗೆ ದಿನಾ ಜಗಳ ನೋವು ಭಯ ಇವುಗಳಿಂದಲೇ ಕಾಲ ದೂಡುತ್ತಿದ್ದ ರಂಗಪ್ಪ ಅಂತೂ ಇವತ್ತು ಹೋಗ್ಬಿಟ್ಟ.ಪಾಪ ಏನ್ ಅವ್ನೇ ಅಚಾನಕ್ಕಾಗಿ ಸತ್ನೋ ಇಲ್ಲಾ ಮಗ ಸೊಸೆ ಸೇರಿ ಇಬ್ರೂ ಅವ್ನನ್ನ ಹೊಡೆದಾಕುದ್ರೋ ..?!ಏನೋ ಹಾಳಾಗೋಗ್ಲಿ ಬಿಡು ರಂಗಪ್ಪ ಇದ್ದಾಗಂತೂ ಜೀವನದಾಗೆ ನೆಮ್ಮದಿ ಕಾಣ್ಲಿಲ್ಲ.ಸತ್ತ ಮೇಲಾದ್ರೂ ನೆಮ್ಮದಿ ಸಿಕ್ತಲ್ಲಾ ಅಂತ ಮನಸ್ಸಿನಾಗೇ ಅಂದ್ಕೊAಡು ಕೊನೇ ಸಲ ಅವನ ಮುಖನಾದ್ರೂ ನೋಡ್ಕೊಂಡು ಬರೋಣ ಅಂತ ಅವನ ಮನೆ ಕಡೆ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕತೊಡಗಿದೆ. ಆಗ್ಲೇ ಅವನ ಮನೆ ಮುಂದೆ ದೊಡ್ಡದಾಗಿ ಶಾಮಿಯಾನ ಹೊಡೆದಿತ್ತು.ನಾಲ್ಕೆöÊದು ಸೌಧೆ ತುಂಡುಗಳು ಸಣ್ಣಗೆ ಉರಿಯುತ್ತಿದ್ದವು.ಆಗಲೇ ತುಂಬಾ ಜನಗಳೂ ಕೂಡ ಸೇರಿದಂಗಿತ್ತು.ಇವನ್ನೆಲ್ಲಾ ದೂರದಿಂದಲೇ ನೋಡುತ್ತಲೇ ಅವನ ಮನೆಗೆ ಹತ್ತಿರ ಹತ್ತಿರವಾದಂತೆ ಹೃದಯದೊಳಗೆ ದುಃಖವೂ ಹೆಚ್ಚಾಯಿತು.ಕಣ್ಣು ತನಗರಿವಾಗದಂತೆ ತೇವವಾಗತೊಳ್ಳತೊಡಗಿದವು.ನಿಧಾನವಾಗಿ ಭೂಜದ ಮೇಲಿದ್ದ ಟವೆಲ್ಲಿನಿಂದ ಮುಖದ ಬೆವರನ್ನು ಒರೆಸಿಕೊಳ್ಳುತ್ತಾ ಅವನ ಮನೆಯ ಮುಂದಿನ ಜಗುಲಿಯ ಹತ್ತಿರ ಬಂದAತೇ ಅಲ್ಲಿ ಕೂತಿದ್ದವನನ್ನು ನೋಡಿ ಒಮ್ಮೆಲೆ ಹೌಹಾರಿದಂತಾಯ್ತು.ಕಣ್ಣುಗಳನ್ನು ದೊಡ್ಡದಾಗಿ ಬಿಡುತ್ತಾ ಇದೇನು ಆಶ್ಚರ್ಯವೆಂಬAತೆ ನೋಡಿದೆ.ಅಲ್ಲಿ ಕೂತಿದ್ದವನು ಅಕ್ಷರಶಃ ರಂಗಪ್ಪನೇ ಆಗಿದ್ದ.ಮತ್ತೊಮ್ಮೆ ಕಣ್ಣುಜ್ಜಿಕೊಂಡು ಅವನೇ ಹೌದೋ ಅಲ್ಲವೋ ಎಂಬAತೆ ನೋಡಿದೆ.ಅದರಲ್ಲಿ ಯಾವುದೇ ಅನುಮಾನವಿಲ್ಲ ಅವನು ರಂಗಪ್ಪನೇ ಆಗಿದ್ದ.!ಹಾಗಾದ್ರೆ ಸತ್ತೋನು ರಂಗಪ್ಪ ಅಪ್ಪ..ಹಾಗಾದ್ರೇ ಮತ್ಯಾರು..ಮಲ್ಲನಾ..ಸೊಸೆಯಾ..?! ಮತ್ತೆ ಸಾವಕಾಶದಿಂದ ಗಾಬರಿ ದುಗುಡದಿಂದ ರಂಗಪ್ಪನ ಪಕ್ಕದಲ್ಲಿ ಹೋಗಿ ಕೂತೆ.ಅವನಿಗೆ ಕಣ್ಣಲ್ಲೇ ಸಂಜ್ಙೆ ಮಾಡುತ್ತಾ ಇವೆಲ್ಲಾ ಏನು..?ಸತ್ತದ್ದು ಯಾರು..?!ಎಂಬAತೆ ಕೇಳಿದೆ.ಅದಕ್ಕವನಿಗೆ ದುಃಖ ಒಮ್ಮಳಿಸಿ ಬಂತು.ಬಿಕ್ಕುತ್ತಲೇ “ಏನAತ ಹೇಳಲಿ ಮಂಜಣ್ಣ..ನಿನ್ನೆ ರಾತ್ರಿ ಮಗ ಸೊಸೆ ಇಬ್ರೂ ಯಾರಿಗೂ ಗೊತ್ತಾಗ್ದಂಗೆ ತೋಟಕ್ಕೆ ಹೋಗವ್ರೆ ಅಡಿಕೆ ಗೊನೆ ಕದಿಯೋಕೆ.ಅಂತಾ ಕತ್ಲಾಗೆ ಮರ ಹತ್ತಿದವ್ನು ಗೊನೆ ಕೊಯ್ದು ಇಳಿಯೋ ರಭಸದಾಗೆ ಆಯಾ ತಪ್ಪಿ ಕೆಳಗೆ ಬಿದ್ದವ್ನೆ.ಬಿದ್ದ ತಕ್ಷಣಕ್ಕೆ ಜೀವ ಅಲ್ಲೇ ಹೋಗ್ಬಿಟ್ಟೆöÊತೆ.ಇದನ್ನು ನೋಡಿ ಗಾಬರಿಯಾದ ಸೊಸೆ ಗಂಡನ ಅವಸ್ಥೆ ನೋಡಿ ಯಾರನ್ನಾದ್ರೂ ರ‍್ಕೊಂಡು ಬರೋಣ ಅಂತ ಓಡೋಡಿ ಬಂದ್ಳೆ ಕತ್ಲಾಗೆ ಗೊತ್ತಾಗ್ದೆ ತೋಟದ ಬಾವಿಯಾಗೆ ಬಿದ್ದವ್ಳೆ.ಅವ್ಳೂ ಅಲ್ಲೇ ಶಿವನ ಪಾದ ಸೇರವ್ಳೆ…ಅಯ್ಯೋ ವಿಧಿಯೇ..?!ಅಂತ ಅಳುತ್ತಾ ತಲೆ ಮೇಲೆ ಕೈಹೊತ್ತು ಕೂತು ಬಿಟ್ಟ ರಂಗಪ್ಪ. ವಿಷಯ ಕೇಳಿ ನನಗೆ ಗರ ಬಡಿದಂತಾಯ್ತು.ಒAದು ಕ್ಷಣ ಮನದಲ್ಲಿ ಏನೇನೋ ಯೋಚನೆಗಳು ರಂಗಪ್ಪನ ಮನೆಯ ಚಿತ್ರಣ ಮಗ ಸೊಸೆ ಎಲ್ಲಾ ದೃಶ್ಯದಂತೆ ಹಾದುಹೋದವು.ಯಾರು ರಂಗಪ್ಪ ಸಾಯಲಿ ಅಂತ ದಿನಾ ಕಾಯ್ತಾ ಇದ್ರೋ ಅವರೇ ಸತ್ತು ಹೆಣವಾಗಿ ಮಲಗಿದ್ರು.ಅವರು ಕೊಡೋ ಕಾಟಾನ ತಡೀಲರ‍್ದೆ ಎಂದೋ ಶಿವನ ಪಾದಕ್ಕೆ ಸೇರಬೇಕಿದ್ದ ರಂಗಪ್ಪ ಅವರ ಹೆಣದ ಮುಂದೆನೇ ಜೀವಂತ ಕೂತಿದ್ದ.ಆ ದೇವ್ರು ಯರ‍್ಯಾರ ಹಣೆಬರಹದಲ್ಲಿ ಏನೇನು ಬರೆದವ್ನೋ..ದೇವ್ರೇ ಏನಪ್ಪಾ ನಿನ್ನ ಲೀಲೆ ಅಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಾ ರಂಗಪ್ಪನಿಗೆ ಸಮಾಧಾನ ಪಡಿಸಿ ಮುಂದಿನ ಕೆಲಸಕ್ಕೆ ಅಣಿಯಾದೆ. ಕಿರುಪರಿಚಯ: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನೌಕರಿ ಹಾಗೂ ವಾಸ.ಹಲವಾರು ಕಥೆ,ಕವನ,ಲೇಖನ ಬರೆದಿರುವ ಇವರ ನೆಚ್ಚಿನ ಸಾಹಿತ್ಯ ಪ್ರಕಾರ ಹನಿಗವನ ಹಾಗೂ ಚುಟುಕುಗಳು.

ಕಥಾಗುಚ್ಛ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮ್ಮನೂರಿನ ನೆನಪುಗಳು @ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ ಅಶ್ವಥ್ ತಮ್ಮಪ್ಪಣ್ಣನಸ್ವಾತಂತ್ರ‍್ಯಪ್ರವಚನ.   ಅಂದಿದ್ದೇ ತಡ… ತಮ್ಮಪ್ಪಣ್ಣ ಎದ್ದು ನಿಂತರು… ಅಂದರೆ ತಮ್ಮಪ್ಪಣ್ಣ ಎಂದಿನಂತೆ ಮುಖ್ಯ ಅತಿಥಿ. ನಾನು ಶಾಲೆಗೆ ಸೇರುವುದಕ್ಕಿಂತ ಮೊದಲು, ಶಿಶುವಿಹಾರದಲ್ಲಿದ್ದಾಗಲೂ ಸ್ವಾತಂತ್ರ‍್ಯ ದಿನಾಚರಣೆಗೆ ಶಾಲೆಯ ಮಕ್ಕಳ ಜೊತೆ ಸೇರಿಸುತ್ತಿದ್ದರಿಂದ ತಮ್ಮಪ್ಪಣ್ಣನ ಭಾಷಣದ ಇವೆಂಟ್ ಪರಿಚಯವಾಗಿತ್ತು. ಈಗ ನಾನು ಒಂದನೇ ತರಗತಿ. ಹಾಗಾಗಿ ಚಿಕ್ಕಮಕ್ಕಳ ಮುಂದಿನ ಸಾಲಿನಿಂದ ಬಡ್ತಿ ಪಡೆದು ಶಾಲೆಯ ಮಕ್ಕಳ ಸಾಲಿನಲ್ಲಿ ಕುಳಿತಿದ್ದೇ ಆ ದಿನಾಚರಣೆಯ ವಿಶೇಷ. ಅವನ ಗೊಣಗಾಟ ಮೇಷ್ಟ್ರಿಗೆ ಕೇಳಲಿಲ್ಲ, ತಮ್ಮಪ್ಪಣ್ಣನ ಕಿವಿಗೂ ಬೀಳಲಿಲ್ಲ ಸದ್ಯ! ಕೊಡು, ಲೆಕ್ಕ ಮಾಡಿ ತಂದಿದ್ದೀನಿ” ಅನ್ನುವ ಮೇಷ್ಟರ ಸೂಚನೆಯನ್ನು ಸ್ವೀಕರಿಸಿದ ಸೂರಿ, ಒಬ್ಬರಿಗೆ ಒಂದು ಚಾಕೋಲೇಟು ಒಂದು ಹಾಲ್ಕೋವಾ ಕೈಯಲ್ಲಿರಿಸಿ ಮುಂದುವರಿದ. ಎಲ್ಲರಂತೆ ನಾನೂ ಎರಡೂ ಕೈ ಚಾಚಿದೆ. ಸೂರಿಯ ಕೈಯಿಂದ ಎರಡು ಶ್ಯಾಮಾ ಚಾಕಲೇಟು ಜಾರಿದವು. ಏನೋ ಸಣ್ಣವನು ಅನ್ನುವ ಭಾವದಂತೆ ನಗುವ ಮುಖ ಮಾಡಿ ಸೂರಿ ಮುಂದುವರೆದ. ತಮ್ಮಪ್ಪಣ್ಣ ಕುಳಿತೇ ಇದ್ದರು. ಹೀಗೆ ನಾನು ಏಳನೇ ತರಗತಿ ಮುಗಿಸುವ ತನಕವೂ ತಮ್ಮಪ್ಪಣ್ಣನ ಸ್ವಾತಂತ್ರ‍್ಯ ದಿನದ ಪ್ರವಚನ “ಗಾಂಧಿ ಕಷ್ಟಪಟ್ಟು…. ಅನ್ನ ನೀರು ಬಿಟ್ಟು….. ಉಪವಾಸ ಮಾಡಿ …. ದೇಶ ನಮ್ಮದು ಅನ್ನುವ ಹಾಗೆ ಮಾಡಿದರು” ಅನ್ನುವ ಇದೊಂದೇ ವಿಚಾರವನ್ನು ಏಳು ರ‍್ಷವೂ ಕೇಳಿದ್ದಾಯ್ತು! ತಮ್ಮಪ್ಪಣ್ಣನನ್ನು ಹೊರತುಪಡಿಸಿದರೆ ಬೇರೆ ಯಾರೂ ಅಧ್ಯಕ್ಷರ ಕರ‍್ಚಿ ಅಲಂಕರಿಸಲಾಗಲೇ ಇಲ್ಲ. ಹೈಸ್ಕೂಲು ಸೇರಿದ ನಂತರ ಮೇಷ್ಟರು ಬದಲಾದರು! ಬೇರೆ ಊರಾಗಿದ್ದರಿಂದ ತಮ್ಮಪ್ಪಣ್ಣನ ಪ್ರವಚನ ತರ‍್ಗಡೆಯಾಗದೇ ಊರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಉಳಿಯಿತು. ಸ್ವಾತಂತ್ರ‍್ಯ ಸಂಗ್ರಾಮದ ಹಲವು ವಿಚಾರಗಳು, ಕತೆಗಳು ಉಪಕತೆಗಳು, ಗಾಂಧೀಜಿಯ ಸತ್ಯಾಗ್ರಹಗಳು, ಸಬರಮತಿ ಆಶ್ರಮ, ಸಮಾಜ ಸುಧಾರಣೆಗಳು, ಪತ್ರಿಕೋದ್ಯಮ, ಹೀಗೆ ಗಾಂಧೀ ತತ್ವಗಳ ಒಂದೊಂದೇ ಎಳೆಗಳು ಮನದ ತೆರೆಕಾಣಲಾರಂಭಿಸಿದವು. ಅನಾಹುತಗಳನ್ನು ಸುಮ್ಮನೆ ಜರ‍್ಣಿಸಿಕೊಂಡು ನಾವು ಸ್ವತಂತ್ರರೆಂದುಕೊಂಡುಬಿಡುವುದಾ? ಕುವೆಂಪು ಹೇಳಿದ ಈ ಸಾಲು ನೆನಪು ಮಾಡಿಕೊಳ್ಳಬೇಕು; “ಕತ್ತಿ ಪರಕೀಯವಾದರೆ ಮಾತ್ರ ನೋವೇ? ನಮ್ಮವರೇ ಹದಮಾಡಿ ತಿವಿದರದು ಹೂವೇ?” ಎನ್ನುವುದನ್ನು. ಅಂದಹಾಗೆ ತಮ್ಮಪ್ಪಣ್ಣ ತೀರಿಕೊಂಡು ದಶಕವಾಯ್ತು. ಆದರೂ ಸ್ವಾತಂತ್ರ‍್ಯೋತ್ಸವವೆಂದರೆ ಮೊದಲು ನೆನಪಾಗುವುದು ನಮ್ಮ ತಮ್ಮಪ್ಪಣ್ಣನ ಪ್ರವಚನ, ಉಗಿಬಂಡಿಯ ಉರುವಲಿನಂತೆ ಕೆಂಪಗಿರುತ್ತಿದ್ದ ಅವರ ತಾಂಬೂಲದ ಬಾಯಿಂದ ಹೊರಬೀಳುತ್ತಿದ್ದ ಗಾಂಧೀಜಿಯ ಉಪ್ವಾಸ, ಹೊಟ್ಟೆ ಬಟ್ಟೆ ಕಟ್ಟಿ ದೇಶ ನಮ್ಮದು ಅಂತ ಮಾಡಿಕೊಟ್ಟ ಗಾಂಧೀ ಸಾಧನೆ! “ತಟ್ಟು ಚಪ್ಪಾಳೆ ಪುಟ್ಟಮಗು ತಕೋ ಕೈ, ಇಕೋ ಕೈ, ಗಾಂಧಿಗಿಂದು ಜನುಮದಿನ” ಅಂತ ಮಗಳಿಗೆ ಹೇಳುತ್ತಾ ತಮ್ಮಪ್ಪಣ್ಣನ ಸಾಲು ಸಾಲು ಪ್ರವಚನಮಾಲೆಗಳು ನೆನಪಾದವು.

ಹೊತ್ತಾರೆ Read Post »

ಕಾವ್ಯಯಾನ

ಕಾವ್ಯಯಾನ

ಗಜಲ್ ದೀಪಾಜಿ ಎದೆಯ ಮೇಲಿನ ಹಚ್ಚೆಗೆ ಅಗ್ಗಿಷ್ಟಿಕೆಯ ಕೆಂಡಹಚ್ಚಿ ಉಜ್ಜಿಕೊಂಡವನಲ್ಲವೇ ನೀನು ಎದೆ ಒಳಗಿನ ಇವಳನ್ನ ತೆಗೆದು ಹಾಕಲೆತ್ನಿಸಿ ಸೋತವನಲ್ಲವೇ ನೀನು ಹಿಡಿದು ತಂದ ಕೆಂಗುಲಾಬಿ ಕೆಳಗಿನ ಮುಳ್ಳ ಎಣಸ ತೊಡಗಿದ್ದ ಕುಸುಮಪ್ರೇಮಿ ಅಂತದೆ ಸುಮದ ಪರಿಮಳಕ್ಕೆ ಸೋತು ಬಿಗಿದಪ್ಪಿದ ದಿನಗಳ ಮರೆತವನಲ್ಲವೆ ನೀನು.. ಅಂಗೈಲಿ ಹಿಡಿದ ಮಧು ಪಾತ್ರೆಯೊಳಗಿನ ಬಿಂಬ ಕಲಕಿತೆಂದು ರೋಧಿಸಿದೆ ಏನು ಮಧುಹೀರಿ ಮಲಗಿದ ನಲ್ಲೆಯ ತುಟಿಗಳನೆ ಕಚ್ಚಿ ಕಡೆಗಣಿಸಿದವನಲ್ಲವೇ ನೀನು ಬಲವಂತಕ್ಕೆ ಪ್ರೀತಿಸಕೂಡದೆಂದು ಪಾಠಮಾಡುತ್ತಿದ್ದೆ ನೋಡು ಮರೆತು ಬಿಡು ಇನ್ನೂ ಜತೆಯಾಗಿ ನಡೆದುಬಂದ ದಿನಗಳನು ಎಂದು ನಶೆಯೊಳಗೂ ಪೀಡಿಸುತ್ತಿದ್ದವನಲ್ಲವೇ ನೀನು ಆಳವಿಲ್ಲದ್ದು-ಸೆಳೆತವಿಲ್ಲದ್ದು ಏನನ್ನೂ ಉಳಿಸಿಕೊಳ್ಳಲಾರದೆನ್ನುತ್ತಿದ್ದೆ‌ ನೋಡು ಬೆಳಗಿಸಿದ-ಬಾಳಿಸಿದ *ದೀಪಕ್ಕೆ ಆಳ ಹುಡುಕಿ ಸಿಗದೊಡನೆ‌ ಬೆನ್ನ ತೋರಿಸಿ ಹೊರಟನಲ್ಲವೇ ನೀನು..

ಕಾವ್ಯಯಾನ Read Post »

ಇತರೆ

ಅನುಭವ

ಕಾಯುವವರು ಹಲವರಾದರೆ ಕೊಲುವವ ಒಬ್ಬನೇ ! ಗೌರಿ.ಚಂದ್ರಕೇಸರಿ          ಕೆಲ ದಿನಗಳ ಹಿಂದೆ ಮಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪೇಟೆಗೆಂದು ಹೊರಟಿದ್ದೆ. ಸ್ವಲ್ಪ ದೂರ ಕ್ರಮಿಸುವುದರಲ್ಲಿ ರಸ್ತೆಯ ಮಧ್ಯದಲ್ಲಿ ಹಾವೊಂದು ಕಂಡಿತು. ಆ ಬದಿಯಿಂದ ಈ ಬದಿಯ ರಸ್ತೆಯನ್ನು ಅದು ದಾಟುತ್ತಿತ್ತು. ತಕ್ಷಣವೇ ಸ್ಕೂಟಿಯನ್ನು ಬದಿಗೆ ನಿಲ್ಲಿಸಿದ್ದೆವು. ಎದುರು ಬದುರಿನಿಂದ ಬರುತ್ತಿದ್ದ ವಾಹನ ಸವಾರರು ಹಾವಿನ ಮೇಲೆ ವಾಹನಗಳನ್ನು ಹತ್ತಿಸದಂತೆ ಮಗಳು ಎಲ್ಲರ ಗಮನವನ್ನು ಹಾವಿನತ್ತ ಸೆಳೆಯುತ್ತಿದ್ದಳು. ಅದನ್ನು ಕಂಡ ವಾಹವ ಸವಾರರೆಲ್ಲ ತಮ್ಮ ವಾಹನಗಳ ವೇಗವನ್ನು ತಗ್ಗಿಸಿ ಹಾವಿಗೆ ಯಾವುದೇ ಹಾನಿಯಾಗದಂತೆ ಬದಿಯಿಂದ ಹೋಗುತ್ತಿದ್ದರು. ಇನ್ನು ಕೆಲವರು ಹಾವು ರಸ್ತೆ ದಾಟುವುದನ್ನು ಕುತೂಹಲದಿಂದ ವೀಕ್ಷಿಸುತ್ತ ನಿಂತಿದ್ದರು. ಅಷ್ಟರಲ್ಲಿ ಪ್ರಯಾಣಿಕರನ್ನು ಹೊತ್ತ ಆಟೋ ರಿಕ್ಷಾವೊಂದು ಅತೀ ವೇಗದಲ್ಲಿ ಬರುತ್ತಿತ್ತು. ತಕ್ಷಣ ಪರಿಸ್ಥಿತಿಯನ್ನು ಊಹಿಸಿದ ಆಟೋಚಾಲಕ ತನ್ನ ಸಮಯ ಪ್ರಜ್ಞೆಯನ್ನು ಮೆರೆದು ಆಟೋವನ್ನು ಅದೇ ವೇಗದಲ್ಲಿ ರಸ್ತೆಯಿಂದ ಕೆಳಗಿಳಿಸಿದ. ಆದರೆ ನಿಯಂತ್ರಣ ತಪ್ಪಿದ ಆಟೋ ರಸ್ತೆಯ ಪಕ್ಕಕ್ಕೆ ವಾಲಿಕೊಂಡು ಬಿಟ್ಟಿತು. ಆಟೋದಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾದವು. ಅಲ್ಲಿದ್ದ ಕೆಲವರು ಆಟೋವನ್ನು ಮೇಲಕ್ಕೆತ್ತಿ ಅದರಲ್ಲಿದ್ದವರನ್ನು ಉಪಚರಿಸುತ್ತಿದ್ದರು. ಅಷ್ಟರಲ್ಲಿ ಆ ಹಾವು ರಸ್ತೆಯ ಮುಕ್ಕಾಲು ಭಾಗವನ್ನು ದಾಟಿತ್ತು. ಅಷ್ಟರಲ್ಲಿ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಇನ್ನೇನು ರಸ್ತೆಯಿಂದ ಕೆಳಗಿಳಿಯುತ್ತಿದ್ದ ಹಾವಿನ ಹಿಂಭಾಗದ ಮೇಲೆ ಬೈಕನ್ನು ಹತ್ತಿಸಿಕೊಂಡು ವೇಗವಾಗಿ ಹೋಗಿಬಿಟ್ಟ. ಗಾಯಗೊಂಡ ಹಾವು ಸ್ವಲ್ಪ ಹೊತ್ತು ಜೀವನ್ಮರಣದ ಜೊತೆ ಹೋರಾಡಿ ತನ್ನ ಪ್ರಾಣವನ್ನು ಬಿಟ್ಟಿತ್ತು. ಅಪಾಯವನ್ನೂ ಲೆಕ್ಕಿಸದೇ ಹಾವನ್ನು ಉಳಿಸಲೆಂದು ಆಟೋ ಸಮೇತ ಬಿದ್ದು ಗಾಯಗೊಂಡ ಚಾಲಕ ಒಂದು ಕಡೆಯಾದರೆ ಕಂಡೋ ಅಥವಾ ಕಾಣದೆಯೋ ಹಾವಿನ ಸಾವಿಗೆ ಕಾರಣನಾದ ಆ ಬೈಕ್ ಸವಾರ ಇನ್ನೊಂದು ಕಡೆ. ಒಂದು ಜೀವವನ್ನು ಕಾಯುವವರು ಹಲವರಾದರೆ ಅದೇ ಜೀವವನ್ನು ಕೊಲುವವ ಇನ್ನೊಬ್ಬ. ಅದಕ್ಕೇ ಹೇಳುವುದೇನೋ. ಕಾಯುವವ ಒಬ್ಬನಾದರೆ ಕೊಲುವವ ಇನ್ನೊಬ್ಬ ಎಂದು. ಕಾಪಾಡುವ ದೇವರುಗಳು ಎಷ್ಟೇ ಇದ್ದರೂ ಕುಣಿಕೆ ಹಾಕುವವ ಮಾತ್ರ ಒಬ್ಬನೇ ಎಂದು ಮನಸ್ಸು ಹೇಳುತ್ತಿತ್ತು. ಆ ಹಾವು ಸುರಕ್ಷಿತವಾಗಿ ರಸ್ತೆಯನ್ನು ದಾಟಲು ಅಲ್ಲಿದ್ದವರೆಲ್ಲ ಮಾಡಿದ ಪ್ರಯತ್ನವೆಲ್ಲ ನಿರರ್ಥಕವಾಗಿತ್ತು.

ಅನುಭವ Read Post »

ಇತರೆ

ಕಾವ್ಯಯಾನ

ಅಪ್ಪನೊಡನೆ ಒಂದಿಷ್ಟು ಮೋಹನ ಗೌಡ ಹೆಗ್ರೆ ಒರಿಗೆಯವರೆಲ್ಲ ಬಾಲ್ಯಕ್ಕೆ ಬಣ್ಣ ತುಂಬುವಾಗ ನನ್ನ ಪಂಜರದ ಗಿಳಿಯಾಗಿ ಮಾಡಿದ ಸದಾ ನಾ ಶಪಿಸುವವ ನೀನಾಗಿದ್ದೆ ಊರ ಜಾತ್ರೆಯಲಿ ಅಮ್ಮ ಕೈ ಹಿಡಿದು ನಿಂತರೂ ದೂರದ ಕಣ್ಣುಗಳ ಕಾವಲುಗಾರನಾದ ನಿನ್ನ ಶಪಿಸುವವಳು ನಾನಾಗಿದ್ದೆ. ಎಲ್ಲೋ ಯಾರೋ ಓಡಿಹೋದ ಸುದ್ದಿಗೆಲ್ಲಾ ಸುಮ್ಮನೆ ಮುಂದಾಲೋಚನೆಯಿಂದ ಅಮ್ಮನ ಬೈಯುವಾಗ ನಾ ಕಂಡ ನಕ್ಸಲೈಟ್ ನೀನಾಗಿದ್ದೆ…. ನಿನ್ನಿಷ್ಟದಂತೆ ಓದಿದೆ ಕೆಲಸಕ್ಕೂ ಸೇರಿದೆ ಇಷ್ಟು ವರ್ಷ ಬೆವರಿಳಿಸಿದ ನೀನು ನಾ ಮೆಚ್ಚಿದ ಗಂಡಿಗೆ ನನ್ನ ಒಪ್ಪಿಸಿದೆ….. ಅಂದು ನಿನ್ನ ಕಣ್ಣಲ್ಲಿದ್ದ ಸಂತೃಪ್ತಿ ಎಲ್ಲವನ್ನೂ ಒಂದೇ ನೋಟ ಪ್ರೀತಿಯ ಕಣ್ಣೀರಲ್ಲಿ ಹೇಳಿದ ಪಾಠೋಪಕರಣ ನನಗೆ ಪ್ರಶ್ನಾರ್ಥಕವಾಗಿತ್ತು… ಅಂದು ನೀನು ನನಗೆ ಕ್ರೂರಿ, ಕೋಪಿಷ್ಟ, ಸ್ವಾರ್ಥಿ, ಎಲ್ಲವೂ ಆಗಿದ್ದೆ.. ನಿನ್ನ ದ್ವೇಷಿಸಿ ತಿರಸ್ಕರಿಸಿದಾಗಲೆಲ್ಲ ಅದೆಷ್ಟು ಕಣ್ಣೀರಿಟ್ಟಿರುವೆಯೋ ಆದರೆ ಇಂದು ನಾನು ತಾಯಿಯಾಗಿರುವೆ ನನ್ನ ಮಗಳಿಗೆ ಮತ್ತೆ ಕ್ರೂರಿಯಾಗಲು……

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಮಣ್ಣಿಗೆ ಬಿದ್ದ ಹೂಗಳು ಬಿದಲೋಟಿ ರಂಗನಾಥ್ ಅರುಣ್ ಕುಮಾರ್ ಬ್ಯಾತ ಬಿದಲೋಟಿ ರಂಗನಾಥ್ ಸರ್ ಜಾಲತಾಣದ ಆತ್ಮೀಯರಾದರೂ ಅವರು ಭೇಟಿ ಆದದ್ದು, ಮೊನ್ನೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ. ಮಾತಾಡಿಸಿ ಕೈಗೆರಡು ಪುಸ್ತಕಗಳನಿಟ್ಟು ಓದು ಎಂದರು. ನಾನೂ ಬಿಡುವಿನಲ್ಲಿ ಹಾಗೇ ಕಣ್ಣಾಡಿಸಿದೆ ಒಂದು ಮೂರು ಹತ್ತು ಹೀಗೆ ಎಲ್ಲವೂ ಮುಗಿದುಹೋದವು…ಓದಿಕೊಂಡಾಗ ಉಳಿದ ನನ್ನವೇ ಒಂದಿಷ್ಟೇ ಇಷ್ಟು ಅನಿಸಿಕೆಯನ್ನು ಇಲ್ಲಿ ಬರೆಯುವುದಕ್ಕೆ ಪ್ರಯತ್ನಿಸಿರುವೆ… ಏನು ಮಣ್ಣಿಗೆ ಬಿದ್ದ ಹೂವುಗಳು..? ಯಾಕೆ ಇದೇ ಶೀರ್ಷಿಕೆ ಇಟ್ಟರು ಎಂದು ತಡಕಾಡಿದೆ…! ಒಂದೆರಡು ಸಾಲು ಉತ್ತರ ಹೇಳಿದಂತಿದ್ದವು..,ಬುಡ್ಡಿಯ ಬೆಳಕ ಕಳೆದುಕೊಂಡು ಬೆಳದಿಂಗಳ ಬೆಳಕಲ್ಲಿ ಗೂಡಿರಿಸಿ ಮಲಗಿದ್ದ ತಣ್ಣನೆಯ ನೆನಪುಗಳನ್ನು ಕರ ಜೋಡಿಸಿ ಕಣ್ಣಲ್ಲಿ ಕರೆದ ದಾರಿಯಲ್ಲಿ ಬಂದ ಕಾವ್ಯಗಳಿಗೆ ಜೋಕಾಲಿ ಕಟ್ಟಿದೆ..! ನಾನು ನಾನಗದೇ ಭಾವ ಬಿಂದುವಿಗೆ ಹೂ ಮುಡಿಸಿ ಅಂದ ತುಂಬಿಕೊಂಡು ಕುಣಿಯುತ್ತಿದ್ದೆ…! ಅಲ್ವಾ… ಕೊಂಚ ಶಾಂತಿ ಸಿಗಲು ನಾ, ಅಡವಿಟ್ಟ ಮೊದಲ ಎಸಳ ಕವಿತೆಯ ಸಾಲು ಕೊಡು ಅದರಿಂದ ನೂರು ಭಾವ ತುಂಬಿದ ಕವಿತೆ ಬರೆದು ಕೊಡುವೆ ನಾನು…! ಕವಿಯೊಬ್ಬನ ಅಂತರಂಗದಲ್ಲಿ ಮಂಥನ ಮಾಡಬಲ್ಲ ಭಾವಯಾನ ಇಲ್ಲಿ ವ್ಯಕ್ತವಾಗುತ್ತದೆ. ಇಲ್ಲೂ ಕವಿಗಳು ತಮ್ಮದೇ ನಿಲುವಿನಲ್ಲಿ ಜಾತಿಯನ್ನು ನಿಂದಿಸುತ್ತಾರೆ, ಒಳಗಿನ‌ ಸೇಡ ನಿರ್ಭೀತಿಯಿಂದ ಹೊರಹಾಕುತ್ತಾರೆ..”ನಾನು ನಾನಗಿರುವುದಿಲ್ಲ , ನಿನ್ನ ಜಾತಿ ಯಾವುದೆಂದರೆ ಮೈ ಕೈ ಪರಚಿಕೊಳ್ಳುತ್ತೇನೆ ಎಂದು ಒಳಗಿನ‌ ಒಡಬಾಗ್ನಿಯನ್ನು ರಾಚುತ್ತಾರೆ…! ಆಕಾಶ ಮಡಿಕೆ ತೂತು ಬಿದ್ದ ರಾತ್ರಿ ಕವಿತೆಯಲ್ಲಿ ಬಡತನದ ಅನಾವರಣ ತರೆದಿಟ್ಟಿದ್ದಾರೆ., ಹೌದು ನಾನು ಆ ತರಹದ ನಡುರಾತ್ರಿ ಬಡಿಸ ಮಳೆಗೆ ತಡಕಾಡಿದ ಅಪ್ಪನನ್ನು, ಬಡಿದಾಡಿದ ಅಮ್ಮನನ್ನು, ಮಿಸುಕಾಡದೇ ಕೂತ ನಮ್ಮನ್ನು ನಮಗೆ ನೆನಪಿಸಿದವು…ಅಸಹಾಯಕತೆಗೆ ಎಷ್ಟು ಸೇಡು…! ಅಂದು ತೊಟ್ಟಿಕ್ಕಿದ ಆ ತೂತಾದ ಸೂರಿನಲ್ಲಿ ಬಿದ್ದ ಹನಿಗಳ ಕಲರವ ಇನ್ನೂ ಕಿವಿಗಳಲ್ಲಿದೆ.. ಒಳಗೆ ನುಗ್ಗಿದ ನೀರು ಒಲೆಯ ಮೆದು ಮಾಡಿ ಎನ್ನುವಾಗ ಹಪಹಪಿಸಿದ ಹಸಿವು ಕಾಣುತ್ತದೆ…! ಕಾಲದೊಟ್ಟಿಗೆ ಪ್ರೀತಿಯನ್ನು ಅದರ ಬದಲಾವಣೆಯಲ್ಲಿ ತನ್ನನ್ನೂ ತಿರುಗಿಸುತ್ತಾ ಕವಿ ನನ್ನಿಂದಿಲ್ಲದ ಕಾಲ ಎಂಬ ಕವಿತೆಯಲ್ಲಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.. ಸಾಲುಗಳು ಎಷ್ಟು ಚಂದ…, ” ಪ್ರೀತಿ ಬದುಕಿದ್ದ ಕಾಲದಲ್ಲಿ ಭಾವ ಸುರುಳಿಯಾಗಿತ್ತು, ಅಕ್ಕ ಪಕ್ಕದ ಗುಳ್ಳೆಯ ಹಂಗಿರಲಿಲ್ಲ ಮನಸ್ಸು ತಿಳಿಯಾಗಿತ್ತು…ಕದಡಿರಲಿಲ್ಲ…! ಕನಸುಗಳನ್ನು ಹಾರಿ ಬಿಟ್ಟಿದ್ದೇನೆ ಎಲ್ಲಿದ್ದರೂ ಹಿಡಿದುಕೋ ಎಂಬ ಸಾಲು ಎಷ್ಟು ಸತ್ಯವಾಗಿವೆ…! ಮೂಕ ಹಕ್ಕಿಯ ಮಾತು ಕವಿತೆಯಲ್ಲಿ ” ನನ್ನನ್ನು ನಾನೇ ನೋಡಿಕೊಳ್ಳುತ್ತೇನೆ,‌ ನನಗೆ ನಾನೇ ಅರ್ಥವಾಗದ ಹಾಗೆ, ಸದ್ದು ಗದ್ದಲದ ನಡುವೆ ಒಬ್ಬನೇ ಕೂತು” ಎಂದು ಒಂಟಿತನದ ಸಂಕಟದಲ್ಲೇ ತನ್ನೊಳಗಿನ‌ ತನ್ನನ್ನು ಸಮಾಧಾನಿಸುತ್ತಾ ನೋಡುವ ಬಗೆಯ ಬರೆಯುತ್ತಾರೆ. ಹೀಗೆ ಒಂದೈವತ್ತು ಕವಿತೆಗಳು ಈ ಪುಸ್ತಕದಲ್ಲಿವೆ, ಅವರೇ ಹೇಳುವಂತೆ ದಿಕ್ಕೆಟ್ಟವರ ಅಸಹಾಯಕರ ನಿರ್ಗತಿಕರ ಕೈ ಹಿಡಿದು ಮೇಲುತ್ತವ ಕವಿತೆಗಳು ಹೆಚ್ಚು ಕಿವಿ ತಟ್ಟುತ್ತವೆ.. ನೆಲದ ಜೀವಗಳ ಅಂತಃಕರಣ ಕವಿಯನ್ನು ಹೆಚ್ಚಾಗಿ ಕಾಡಿವೆ..ಬದುಕನ್ನೇ ಅಕ್ಷರಗಳಿಗೆ ಕಟ್ಟಿಕೊಟ್ಟ ಕವಿತೆಗಳು ನಮ್ಮವೇ ಎಂಬ ಹಳೆಯ ನೆನಪುಗಳ ಮತ್ತೆ ನೆನಪಿಸುತ್ತವೆ. ಹಳ್ಳಿ ದಾಟಿ ಕವಿತೆಗಳ ವಸ್ತು ಹೊರಗೆ ಹೋಗಿಲ್ಲ…! ಅಪ್ಪ ಅಮ್ಮ ಸಂಸಾರ ಬಡತನ, ಜಾತಿ, ಬಣ್ಣ, ಹಸಿವು ಅಸಹಾಯಕತೆ, ಹೊಟ್ಟೆ ಚುರುಕಿನ ಹೊಯ್ದಾಟಗಳ ಇಲ್ಲಿ ಕಾಣಬಹುದು..! ಕವಿತೆ ಬರೆಯಲು ಹಪಹಪಿಸುವ ನಮಗೆ ಸಿಕ್ಕದ್ದನ್ನೇ ಗೀಚಾಡುವ ಸಮಯಕ್ಕೆ ಬರೆಯಲು ಇಷ್ಟು ನಮ್ಮವೇ ವಿಷಯ ಇದ್ದಾವಲ್ಲ ಎಂಬ ಅಚ್ಚರಿಯೂ ಈ ಪುಸ್ತಕ ಓದಿದ ಮೇಲೆ ಅನಿಸದೇ ಇರದು.. ಕವಿತೆಗಳಲ್ಲಿ ಕಣಬಹುದಾದ ಬಳಸಿದ ಪದಗಳಂತು ಅವರೆಕಾಯಿ ಸೊಗಡಿನಂತವು, ದಾರಿ ಬದಿಯ ಹೂಗಳ ಘಮದಂತವು, ಬಿದ್ದ ಗಾಯದ ಗುರುತಿನಂಥವು…! ಹಾಗೇ ನಮ್ಮನ್ನು ಮುಟ್ಟಿ ಹೋಗಿ ಮರೆಯಾಗಿ ಮತ್ತೆ ಬಂದು ಬಡಿದೆಬ್ಬಿಸುವಂತಹ ಪದಗಳ ಕೈ ಚಳಕವಿದೆ…! ಓದುತ್ತಾ ನನ್ನ ಬಾಲ್ಯವೂ ಮರುಕಳಿಸಿತು. ಅಗಾಧ ಶ್ರೀಮಂತಿಕೆಗೆ ಬಡತನದ ಹಸಿವಿನ ನೋವು ಅರ್ಥವಾಗುವುದಿಲ್ಲ..ನಾವು ಹಸಿದವರು ಅನ್ನದ ಬೆಲೆಯೂ ಅಕ್ಷರಗಳ ಅಕ್ಕರೆಯೂ ನನ್ನ ಹಸಿವಿಗೆ ತುತ್ತನಿಟ್ಟು ಸಂತೈಸಿದವು… ಇಂತಹದ್ದೊಂದು ಪುಸ್ತಕ ಕೈಯಲ್ಲಿ ಇರಿಸಿದ ನಿಮಗೆ ಹೃದಯ ಪೂರ್ವ ಧನ್ಯವಾದಗಳು ಸರ್..ಮತ್ತಷ್ಟು ಮಣ್ಣಿನ‌ ಸೊಗಡಿನ ಪುಸ್ತಕಗಳು ನಮ್ಮೊಳಗೆ ಉಸಿರಾಡಲಿ…. ಪ್ರೀತಿಯಿಂದ ——————————–

ನಾನು ಓದಿದ ಪುಸ್ತಕ Read Post »

You cannot copy content of this page

Scroll to Top