‘ ಗಾಲಿಬ್ ಸ್ಮೃತಿ’
ಸುಮಾರು ಇಪ್ಪತ್ತು ಷೇರ್ ಗಳನ್ನು ಹೊಂದಿರುವ ೯೦ ನೇ ಗಜಲ್ ತನ್ನ ಮಗನ ಸಾರ್ಥಕ ಬಾಳಿಗಾಗಿ ಜೀವ ಸವೆಸಿ ಕೊನೆಗೆ ಒಂಟಿತನದಲ್ಲಿ ನರಳುತ್ತಾ ತಾನು ತೊರೆದಿದ್ದ ಮದಿರೆಗೇ ದಾಸನಾಗುವ ತಂದೆಯ ಕರುಣಾಜನಕ ಕಥೆಯನ್ನು ಕಟ್ಟಿಕೊಡುತ್ತದೆ.
ಸುಮಾರು ಇಪ್ಪತ್ತು ಷೇರ್ ಗಳನ್ನು ಹೊಂದಿರುವ ೯೦ ನೇ ಗಜಲ್ ತನ್ನ ಮಗನ ಸಾರ್ಥಕ ಬಾಳಿಗಾಗಿ ಜೀವ ಸವೆಸಿ ಕೊನೆಗೆ ಒಂಟಿತನದಲ್ಲಿ ನರಳುತ್ತಾ ತಾನು ತೊರೆದಿದ್ದ ಮದಿರೆಗೇ ದಾಸನಾಗುವ ತಂದೆಯ ಕರುಣಾಜನಕ ಕಥೆಯನ್ನು ಕಟ್ಟಿಕೊಡುತ್ತದೆ.
ಮೌನೇಶ್ವರರ ಲೋಕದೃಷ್ಟಿ ಅತಿ ಮುಖ್ಯವಾ ದುದು.ಅವರು ಆಲೋಚಿಸದ ವಿಷಯಗಳೇ ಇಲ್ಲ .ಜಗತ್ತಿನಲ್ಲಿ ತಂದೆ ತಾಯಿಗಳು ಮಕ್ಕಳನ್ನು ಹಡೆದರೆ ಮುಗಿಯಲಿಲ್ಲ.ಅವರು ಯೋಗ್ಯರಾಗಿ ಬಾಳುವಂತೆ ಸಂಸ್ಕಾರ ಕೊಡುವದೂ ಅಗತ್ಯ.ಅದು ಅವರ ಜವಾಬ್ದಾರಿ ಕೂಡಾ.ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಕುರಿತು ಮೌನೇಶ್ವರರು
ಮೌನೇಶ್ವರರ ವಚನ ವಿಚಾರ : ಡಾ ವೀರೇಶ ಬಡಿಗೇರ Read Post »
“ವಿಮೋಚನೆ” ಪ್ರೇಮ, ತ್ಯಾಗ, ಮೋಸ, ಹತ್ಯೆಯ ಸಿನಿಮೀಯ ಮಾದರಿಯ ಕಥೆಯಾದರೆ, ‘ಮಗ್ದಷ್ಟೇ ಬದ್ಕು’, ‘ಸಾಬೀತು’ ಸಿರಸಿ, ಧಾರವಾಡದ ವಿಶಿಷ್ಟ ಪ್ರಾದೇಶಿಕ ಭಾಷೆಯ ಸೊಗಡಿಗಾಗಿ ಓದಿಸಿಕೊಳ್ಳುವ ಕಥೆಗಳು..ಕೇತಕಿ, ಗೂಡು, ಆಯಿ ಸಹ ಉತ್ತಮ ಕಥೆಗಳು..
ಈ ಬಗೆಯ ಹಲವು ಉತ್ತಮ ಕವಿತೆಗಳ ಮುತ್ತಿನ ಮಾಲೆ “ಸೌಗಂಧಿಕಾ”. ಇಲ್ಲಿ ವೈವಿಧ್ಯಮಯ ವರ್ಣನೆಗಳಿಲ್ಲ, ವಯ್ಯಾರವಿಲ್ಲ. ಸರಳ ಸುಂದರ ಸುಭಗ, ಬಂಧುರವಿದು. ಇಲ್ಲಿನವು ಓದಿದಂತೆಲ್ಲಾ ಒಲವು ಮೂಡಿಸುವಂತಹ ಕವನಗಳು
ಸೌಗಂಧಿಕಾ ಒಂದು ಅವಲೋಕನ Read Post »
‘ ನಿಚ್ಚಂ ಪೊಸತು’ ಆಯ್ದ ಸಂಗಂ ಕವಿತೆಗಳನ್ನು ಕನ್ನಡದಲ್ಲಿ ಓದುವಾಗ ಭಾಷೆ ಕೋಶಗಳನ್ನು ಮೀರಿದ ಕಾಲಮಾನಗಳನ್ನು ಮೀರಿದ ಅನುಭವವಾಯಿತು ಎಂದು ಕವಿಯೇ ಹೇಳಿದ್ದಾರೆ. ಅಂಥ ದಿವ್ಯತೆ ಇಲ್ಲಿನ ಶಬ್ದಗಳಲ್ಲಿ ಸೆರೆಯಾಗಿದೆ.
ಪುಸ್ತಕ ಸಂಗಾತಿ ಒಂದೇ ಗುಟುಕಿಗೆ ಅಮಲೇರುವ ಕಾವ್ಯ ಅರಿವಿನ ಹರಿಗೋಲು ಮೂಲಕ ಕಾವ್ಯದ ಪಯಣ ಆರಂಭಿಸಿದ ಕೆ.ಬಿ.ವೀರಲಿಂಗನಗೌಡರು ಹಲವು ಅಗ್ನಿದಿವ್ಯ ಗಳನ್ನು ದಾಟಿಕೊಂಡು ಬಂದಿರುವವರು ಸದ್ಯ ಸಾಸಿವೆಯೊಳಗೆ ಸಾಗರ ಕಾಣುವ ಅವರ ಕವಿತೆಗಳು ಹುಸಿ ಲೋಕದ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತವೆ ಹೇಳುವ ಸಾಲು ಎರಡಾದರೂ ದೀರ್ಘ ಕವಿತೆಯ ಎಲ್ಲ ಕಸುವನ್ನು ಆ ಸಾಲುಗಳಲ್ಲಿ ತುಂಬಿದ್ದಾರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನನಂತೆ ,ಕೆ.ಬಿ ಅವರು ‘ಸಾಕಿ’ ಎನ್ನುವ ತಮ್ಮ ಆತ್ಮಸಂಗಾತದ ದನಿಯನ್ನು ನಿವೇದಿಸಿಕೊಳ್ಳುವ ಮುಖೇನ ಲೋಕಕ್ಕೆ ಹೇಳಬೇಕಾದ ಎಲ್ಲ ಸಂಕಟಗಳ ದ್ರವ್ಯ ಕಾವ್ಯದಲ್ಲಿ ಅಡಗಿದೆ ಬಯಲ ಹದಗೊಳಿಸಿ ಪ್ರೀತಿಯನ್ನು ಹರಡುವ ಸಂತನಂತೆ ಕಾಣುತ್ತಾರೆಸಾಕಿ ಪ್ರೀತಿಯೆಂದರೆ/ ಗುಟ್ಟಾಗಿ ಗುನುಗುವುದಲ್ಲ/ಸುಟ್ಟ ರೊಟ್ಟಿಯಂತಾಗುವುದು ಎನ್ನುವಲ್ಲಿ ಪ್ರೀತಿಗಿರಬೇಕಾದ ಗಟ್ಟಿತನ,ಸುಟ್ಟ ರೊಟ್ಟಿಯ ಅನುಭವ ದ್ರವ್ಯ,ಪ್ರೀತಿ ,ರೊಟ್ಟಿ ಎನ್ನುವುದು ಸದ್ಯದ ತುರ್ತು, ಮಾನವತೆಯ ಬದುಕಿನ ಪ್ರತೀಕ ಕೆ.ಬಿ ಅವರ ಕಾವ್ಯದ ಗಟ್ಟಿ ನಿಲುವಿನ ಉತ್ತರವಾಗಿದೆ ಪ್ರೀತಿಯ ಶಕ್ತಿ ಅದು ಅಸ್ಸೀಮ ಬಯಲು ಅಕ್ಕ ಹೇಳಿದಂತೆ ಸೀಮಿಯಲ್ಲಿದ ನಿಸ್ಸಿಮಂಗೆ ಒಲಿದನವ್ವಂತೆ,ಪಿನಿಕ್ಸ ಹಕ್ಕಿಯಂತಾಗುವುದು,ಶರಣಾಗುವುದಲ್ಲ,ಶರಣ ಸಂಸ್ಕೃತಿಗೆ ಅಣೆಯಾಗುತ್ತಾರೆ ಪ್ರೀತಿಯಂತೆ ಮುದ್ದಾಡುವುದಲ್ಲ ಕಾವ್ಯದ ಕೊನೆಯಲ್ಲಿ ಹೇಳುವ ಮಾತ್ರ ಅಲೌಕಿಕತೆಯೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ” ಎದ್ದು ಹೋಗಿ ಬುದ್ಧನಾಗುವುದು ಎನ್ನುವಲ್ಲಿ ಕಾವ್ಯವನ್ನು ಗರಡಿ ಮನೆಗೆ ಕರೆತರುತ್ತಾರೆಸಾಕಿ /ಕುಡಿಯುತ್ತಿದ್ದೇನೆ/ನಿರುತ್ತರದಲಿ ಕುಳಿತು/ಅಮೂರ್ತ ಅರ್ಥವಾಗದ್ದಕ್ಕೆ ಕವಿ ಸಾಕಿಗೆ ನಿವೇದಿಸಿಕೊಳ್ಳುವುದು , ಕುಡಿಯುವುದು ಏಕೆ ಅಂದರೆ ಅಮೂರ್ತ ಅರ್ಥವಾಗದ್ದಕ್ಕೆ,ಎಲ್ಲರ ಹುಡುಕಾಟವೂ ಅಮೂರ್ತ ವೇ ಎಷ್ಟೂ ಅರೆದು, ಮುರಿದು,ತೊರೆದು,ಕರಗಿ,ಮರುಗಿದರು ಅದು ಇನ್ನೂ ಮುಖಾಮುಖಿಯಾಗಿಲ್ಲ ಅಮೂರ್ತ ವನ್ನು ಮೂರ್ತವಾಗಿಸುವುದು ಕವಿಯೇ ಹೇಳಿದಂತೆ ಪ್ರೇಮವನ್ನು ಕುಡಿಯಬೇಕಾಗಿದೆ ಅದು ಲೋಕವನ್ನು ತಿಳಿಗೊಳಿಸುತ್ತದೆ ಸಾಕಿ/ ಕವಿತೆಯೆಂದರೆ/ಬೆಳೆಯುವುದಲ್ಲ/ ಬೇರಾಗಿ ಕೆಳಗಿಳಿಯುವುದು ಸಾಕಿ/ಕವಿತೆಯೆಂದರೆ/ ಹೊಸೆಯುವುದಲ್ಲ/ಒಲವ ಬೆಸೆಯುವುದು ಕವಿ ಎಲ್ಲಿಯೂ ಈ ಪ್ರೇಮವನ್ನು ಬಿಟ್ಟಿಲ್ಲ ಎಲ್ಲಿ ಪ್ರೇಮವನ್ನು ತೊರೆಯುತ್ತವೆಯೊ ಅಲ್ಲಿ ಅಶಾಂತಿ ,ಯುದ್ಧ ಕ್ಕೆ ದಾರಿಯಾಗುತ್ತದೆ ಎನ್ನುವ ಎಚ್ಚರಿಕೆಯನ್ನಿಟ್ಟುಕೊಂಡೆ ಒಲವ ಬೆಸೆಯಲು ಹಡದಿ ಹಾಸುತ್ತಾರೆ ಬಯಲ ಹಣತೆಯೆದುರು ಕತ್ತಲೆಯನ್ನೇ ಬೆತ್ತಲಾಗಿಸುತ್ತಾರೆಒಲವಿನೆದುರು ಕನಸನ್ನು ಶುಚಿಗೊಳಿಸುತ್ತಾರೆ******************************** ಹೆಬಸೂರ ರಂಜಾನ್
ಇದು ನನಸಾಗುವ ಕನಸೆಂಬುದು ಕವಿ, ಕಥೆಗಾರರ ಭಾವನೆಯಾಗಿದೆ. ಭಾಷೆ, ಧರ್ಮಗಳ ಸರಿ ಪ್ರಜ್ಞೆ ಇರುವವರ ಹೃದಯ ಮಿಡಿತವಾಗಿದೆ. ಈ ಭಾವನೆಗಳು ವಸ್ತುವಾಗುಳ್ಳ ಭಾರತೀಯ ಭಾಷೆಗಳಲ್ಲಿನ ಕಥೆಗಳನ್ನು ಸಂಕಲಿಸಿದರೆ ಅನೇಕ ಸಂಪುಟಗಳು ನಮಗೆ ಸಿಗುತ್ತದೆ. ಈ ನಿಟ್ಟಿನ ಚಲನೆಯಲ್ಲಿ ತೆಲುಗು ಕಥೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಪುಸ್ತಕ ಸಂಗಾತಿ ಹಾವೇರಿಯಾಂವ್ ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ ‘ಹಾವೇರಿಯಾಂವ್’ ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅಂಕಣ ಬರಹಗಳ “ಹಾವೇರಿಯಾಂವ್’’ ಪುಸ್ತಕ ಹೊರ ತಂದಿದ್ದಾರೆ. ಟಿ.ಕೆ.ತ್ಯಾಗರಾಜರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಡೆಕ್ಕನ್ ನ್ಯೂಸ್’ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ ‘ಕಾಕಾ ಕಾಲಮ್’ ಅಂಕಣ ಬರಹಗಳ ಸಂಕಲನವೇ ಈ ‘ಹಾವೇರಿಯಾಂವ್’. ಈ ಸಂಕಲನದಲ್ಲಿ ಒಟ್ಟು ೪೪ ಲೇಖನಗಳಿವೆ. ನಮ್ಮ ಸಮಾಜದ ಅಂಕುಡೊಂಕುಗಳನ್ನು ಜನರೆದುರು ತೆರೆದಿಡಲು ತಮ್ಮದೇ ಆದ ವಿಶಿಷ್ಟ ಭಾಷಾ ಶೈಲಿ ಕಂಡುಕೊಂಡಿದ್ದಾರೆ. ಇಲ್ಲಿಯ ಬರಹಗಳು ವಿಡಂಬನೆಯಾದರೂ ಅದಕ್ಕೊಂದು ಬೆರಗಿದೆ. ಅದೇ ‘ಹಾವೇರಿಯಾಂವ್’ ಕೃತಿಯ ವಿಶಿಷ್ಟ . ಮಾಲತೇಶರವರದ್ದು ಕೇವಲ ಉತ್ತರ ಕರ್ನಾಟಕದ ಗಂಡು ಭಾಷೆಯಷ್ಟೆ ಎನ್ನಲಾಗದು. ನೆಲದ ನಂಟಿದೆ. ಈ ನೆಲದ ನಾಣ್ಣುಡಿ, ಆಡು ಭಾಷೆ ಬಳಸಿಕೊಂಡು ಸಮಾಜದ ಎಲ್ಲ ಬಗೆಯ ಜನರಿಗೆ ಬಿಸಿ ಮುಟ್ಟಿಸುವ ರೀತಿಯೇ ಅಪರೂಪದ್ದು. ಹಾವೇರಿಯಾಂವ್ ಯಾರಿಗೂ ಮುಲಾಜು ತೋರಿಸಿಲ್ಲ. ತೋರಿಸುವುದೂ ಇಲ್ಲ. ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ. ಅದೇ ರೀತಿ ರಾಜಕೀಯ ವ್ಯವಸ್ಥೆ, ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೆ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ. ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು. ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತನನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ. ಜಾಗತೀಕರಣದ ಕಾಲವಿದು. ಸೋತವನು ಮತ್ತು ದಣಿದವನು ಬೆರಗಾಗಿ ಬದಲಾವಣೆಯತ್ತ ನೊಡುತ್ತ ನಿಲ್ಲುವ ದಿನಮಾನಗಳಲ್ಲಿ ಪತ್ರಕರ್ತನೊಬ್ಬನ ಮನಸ್ಥಿತಿ ಹೇಗಿರಬಹುದೆಂಬುದು ಉಹಿಸಲು ಅಸಾಧ್ಯ. ಹೆಚ್ಚು ರೋಚಕವೂ, ಹೆಚ್ಚು ಜನಪ್ರೀಯ, ಹೆಚ್ಚೆಚ್ಚು ಓದುಗರನ್ಬು ಹಿಡಿಯಲೇಬೇಕೆಂಬ ವ್ಯವಸ್ಥೆಯಲ್ಲಿ ಮಾಲತೇಶ ಅಂಗೂರು ತಮ್ಮ ಶಕ್ತಿ ಇತಿ ಮಿತಿಗಳನ್ನು ‘ಹಾವೇರಿಯಾಂವ್’ ದಲ್ಲಿ ವ್ಯಕ್ತಪಡಿಸುವ ಶಕ್ತಿಯನ್ನು ದಕ್ಕಿಸಿಕೊಂಡಿದ್ದಾರೆ. ಹಾವೇರಿಯ ಜನಸಾಮಾನ್ಯರಲ್ಲಿ ಕಂಡುಕೊಂಡ ಪಾತ್ರಗಳು ಬಹು ವಿಭಿನ್ನವಾಗಿವೆ. ಇಡೀ ಕೃತಿಯ ಬಹುಮೂಖ್ಯ ಪಾತ್ರದಾರಿಗಳಾದ ಬಸ್ಯಾ, ಲಕ್ಷö್ಮವ್ವ, ಪಾಟೀಲರು, ಕಾಕಾ ಇವರೆಲ್ಲರೂ ನಮ್ಮ ಜೊತೆನೆ ಇರುವವರು. ಹೀಗೆ ಈ ಪಾತ್ರಗಳ ಮೂಲಕ ಯಾವುದೇ ಮುಲಾಜಿಲ್ಲದೇ ದೊಡ್ಡವರ ಸಣ್ಣತನಗಳನ್ನು ಬಟಾಬಯಲು ಮಾಡುತ್ತಾ ಜನಸಾಮಾನ್ಯರ ಸಂಭಾಷಣೆಗಳಿಗೆೆ ಮಾಲತೇಶ ದನಿಯಾಗಿದ್ದಾರೆ. ‘ಯಡೆಯೂರಪ್ಪನ ಬಾಯಾಗ ಬೆಣ್ಣೆ, ಬಗಲಾಗ ಡೊಣ್ಣೆ’ ಲೇಖನವು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಸಂದರ್ಭವನ್ನು ಇವರ ವಿಡಂಬನೆಯ ಕಣ್ಣು ತೀಕ್ಷ÷್ಣವಾಗಿ ನೋಡುತ್ತದೆ. ಬಳೆಗಾರ ಸಾಹೇಬ್ರು ಕುರ್ಚೆಗ ಪೆವಿಕಾಲ್ ಹಾಕಿ ಕುಂತ ಬಿಟ್ಟಾರ!, ಲೇಖನದಲ್ಲಿ ನಿವೃತ್ತ ಅಧಿಕಾರಿ, ಸಾಹಿತಿ ಮನು ಬಳಿಗಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯಂ ಅಧ್ಯಕ್ಷರಾಗುವ ನಿಟ್ಟಿನಲ್ಲಿ ನಡೆಸಿದ ಕುತಂತ್ರಗಳನ್ನು ಎತ್ತಿ ತೋರಿಸುತ್ತದೆ. ‘ಗಾಳಿ ಬಿಟ್ಟಾಗ ತೂರಿಕೋ, ಇಲೆಕ್ಷನ್ ಬಂದಾಗ್ ಮಾರಿಕೋ…!, ಈ ಲೇಖನ ಪಕ್ಷಾಂತರಿಗಳನ್ನು ಚೆನ್ನಾಗಿ ಜಾಡಿಸಿದೆ. ಬೆಲೆ ಏರಿಕೆಯ ಪರಿಸ್ಥಿತಿಯನ್ನು ಬಿಂಬಿಸುವ ‘ಮಳಿಗಾಲ್ದಾಗ್ ಛತ್ರಿ ಬಿಡ್ಬರ‍್ದು.. ಚಳಿಗಾಲ್ದಾಗ್ ಹೆಂಡ್ತಿ ಬಿಡ್ಬರ‍್ದು..! ಬರಹ ಬದುಕಿನ ಮಗ್ಗಲನ್ನು ಹೊರಳಿಸಿ ತೋರಿಸುವಂತಿದೆ. ಹಸಿದ ಹೊಟ್ಟೆಗಳು ಜಪಿಸಲಾರವು ಹೆಚ್ಚು ದಿನ ರಾಮನಾಮ, ರಾಜಕಾರಣಿಗಳಿಗೆ ಓಟಿನ ಚಿಂತಿ, ಜನ್ರಿಗೆ ಕುಡಿಯುವ ನೀರಿನ ಚಿಂತಿ…, ಅಂದು ಗೋಲಿಬಾರಪ್ಪ.. ಇಂದು ಲಾಠಿಏಟಪ್ಪ…!, ದೇವ್ರಾಗಬಹುದು ಆದ್ರ ಬಸವಣ್ಣ ಆಗಾಕ ಸಾಧ್ಯ ಇಲ್ಲ..! ,ಇವ್ರಿಗೆ ಜನ್ರ ಜೀವಕ್ಕಿಂತ ರೊಕ್ಕಾನ ಮುಖ್ಯ..! ಪಾರ್ಲಿಮೆಂಟ್ ಅಂದ್ರ ಇವ್ರು ಮಾವುನ ಮನಿ ಅಂತ್ ತಿಳಕ್ಕಂಡಾರೇನೋ, ಶಾಸಕರು ರೇಸಾರ್ಟನಲ್ಲಿ-ಅಧಿಕಾರಿಗಳು ಎಸಿ ರೂಂನಲ್ಲಿ- ಸರ್ಕಾರ ಕೋಮಾದಲ್ಲಿ ಹಿಂಗಾದ್ರ ಹೆಂಗ್ಯ… ಕತ್ತಿ,ಕೊಡ್ಲಿ,ಕುಡುಗೋಲು, ನಮ್ನ ಮಂತ್ರಿ ಮಾಡ್ರಿ ಅಂತ್ ಗಂಟ್ ಬಿದ್ದಾವು… ಈ ರೀತಿಯಾದ ಲೇಖನಗಳ ತಲೆ ಬರಹಗಳಿಂದಲೇ ರಾಜಕೀಯದ ಗೇಲಿ ಮಾಡುವ ಪರಿ, ಪರಸ್ಪರ ಕೆಸರೆರಚಿಕೊಳ್ಳುವಿಕೆ , ಕೋಳಿ ಜಗಳ ಮಾಡುವವರ ಮುಖಕ್ಕೆ ಮಂಗಳಾರತಿ ಮಾಡುತ್ತಾ ಧನ ಬಲ, ಜಾತಿ ಬಲ ರಾಜಕೀಯದ ನಗ್ನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸಾಂದರ್ಭಿಕ ವಿಷಯಗಳಿಗೆ ಹಾಸ್ಯದ ಸ್ಪರ್ಶ ಕೊಟ್ಟು ವಿಡಂಬಿಸುವ ರೀತಿ ಬೆರಗು ಹುಟ್ಟಿಸುವಂತಿದೆ. ತನ್ನ ಸುತ್ತಲಿನ ದಾರಿದ್ರ‍್ಯ, ಬಡತನ, ಸಂಕಟ, ಹಸಿವು, ಜಾತಿ ನಿಂದನೆ, ಅನಾಥ ಪ್ರಜ್ಞೆಯ ವೇದನೆಗಳನ್ನು ಎತ್ತಿ ಹಿಡಿದಿರುವ ಮಾಲತೇಶ ಅಂಗೂರವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಬಡತನದ ಬೇಗೆಯಲ್ಲಿ ನೊಂದ ಜನರ ಹಾಗೂ ಮಹಿಳೆಯರ ದುಃಖ ದುಮ್ಮಾನ, ಕ್ರೌರ್ಯ, ಹಿಂಸೆಯ ಸೂಕ್ಮ ಸಂವೇದನೆಗಳನ್ನು, ಪರಿಸರ ಜಾಗೃತಿ, ಜೀವಸಂಕುಲ, ಪಕ್ಷಿಗಳ ಬದುಕು ಹೀಗೆ ತಮ್ಮ ಬರಹಗಳಲ್ಲಿ ಯಥಾವತ್ತಾಗಿ ಹಿಡಿದಿಟ್ಟಿದ್ದಾರೆ. ಈಟಿಯಂತೆ ತಿವಿಯುವಷ್ಟು ಹರಿತವಾದ ಬರಹಗಳಿವೆ. “ಬಂಡವಾಳಶಾಹಿ ಶಕ್ತಿ ನಮ್ಮ ವ್ಯವಸ್ಥೆಯನ್ನು ಹಿಡಿದುಕೊಂಡಿರುವ ರೀತಿಯನ್ನು, ಬಡವರ ಕಷ್ಟ, ತುತ್ತು ಕೂಳಿಗೂ ನಡೆಸುವ ಪರದಾಟವನ್ನು ಇವರ ಬರಹಗಳಲ್ಲಿ ಕಾಣಬಹುದು. ಬದುಕಿನ ಮಗ್ಗಲುಗಳ ಎಲ್ಲ ಮಜಲುಗಳು ಇವರ ಬರಹಗಳಲ್ಲಿ ಸಾಕಾರಗೊಂಡಿವೆ. ಗ್ರಾಮೀಣ ಜನರ ಬದುಕು, ಜನರ ವಿಷಾದ, ಅಸಹಾಯಕತೆ, ಗ್ರಾಮೀಣ ಮನೋರಂಜನೆ, ಇವನ್ನೆಲ್ಲಾ ‘ಹಾವೇರಿಯಾಂವ್’ ದಲ್ಲಿ ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ. ಪ್ರಚಲಿತ ಸಮಸ್ಯೆಗಳಿಗೆ ಅಂಕಣಗಳ ಮೂಲಕ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿದ್ದು ಅವರ ಬರವಣಿಗೆಯ ಭಾಷಾ ಶೈಲಿಯಲ್ಲಿ ದ್ವೇಷ, ಅಸೂಯೆಗಳಿಲ್ಲದ ಜೀವನ ಪ್ರೀತಿ ಇದೆ. ಅವರು ಹಾವೇರಿಯಾಂವ್ ಅಂಕಣಗಳ ಬರಹಗಳಲ್ಲಿ ನಂಬಿಕೆ ಬಿತ್ತಿದ್ದಾರೆಯೇ ಹೊರತು ನಂಜನ್ನು ಬಿತ್ತಿಲ್ಲ ಎಂದು ಎದೆಯುಬ್ಬಿಸಿ ಹೇಳಬಹುದು. ಅಂಗೂರವರಿಗೆ ವಿಷಯ ಸಂಗ್ರಹದ ಮುಲಭೂತ ಅರ್ಹತೆಯನ್ನು ದಕ್ಕಿಸಿ ಕೊಟ್ಟಿದೆ. ಅವರ ಸ್ನೇಹಪರತೆಯೂ ಬರಹಗಾರನ ಅರ್ಹತೆಯಾಗಿ ಬೆಳೆದು ಎಮ್ಮರವಾಗಿ ನಿಂತಿದೆ. ಹೊಸ ವಿಷಯ ಹೊಸ ರೂಪದ ಬರಹಗಳಿಂದ ಹೆಚ್ಚಿನ ಓದುಗ ಬಳಗವನ್ನು ಕಟ್ಟಿಕೊಂಡಿದ್ದಾರೆ. ಲೇಖಕ ಆಯಾಕಾಲದ ಧೋರಣೆಗೆ ಪ್ರತಿಕ್ರಿಯಿಸುತ್ತಾನೆ. ಅಭಿವ್ಯಕ್ತಿಯಲ್ಲಿ ಯಾವ ಮಾರ್ಗವನ್ನೇ ಅನುಸರಿಸಲಿ ಕ್ರೂರವ್ಯವಸ್ಥೆಯ ವಿರೋಧಿ ನೆಲೆಯೊಂದು ಈ ಸಾಹಿತ್ಯದ ಹಿನ್ನೆಲೆಯಲ್ಲಿರುತ್ತದೆ. ಇಲ್ಲಿ ಜನಪರ ಹೋರಾಟಗಳೊಂದಿಗೆ ಕ್ರಿಯಾತ್ಮಕ ಸಂಬAಧ ಬೆಳೆಸಲು ಮತ್ತು ಪ್ರಧಾನವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ ದುಡಿಯುವ ವರ್ಗಕ್ಕೊಂದು ಹೊಸಜಾಗೃತಿಯನ್ನು ‘ಹಾವೇರಿಯಾಂವ್’ ಕೃತಿಯಲ್ಲಿ ಕಾಣಬಹುದಾಗಿದೆ. ಸಾಮಾಜಿಕ, ರಾಜಕೀಯ ಬರಹಗಳ ಜೀವಂತಿಕೆಯಾಗಲಿ, ಪ್ರಸ್ತುತೆಯಾಗಲಿ ಏನೇ ಇದ್ದರೂ ಅಂಗೂರತ್ವವನ್ನು ಬಿಡದ ಬರಹಗಳಲ್ಲಿ ಒಂದು ರೀತಿಯ ಲವಲವಿಕೆ ಇರುತ್ತದೆ. ಇಂತಹ ಪ್ರಸ್ತುತೆ ಬರವಣಿಗೆ ಇದ್ದಾಗ ಮಾತ್ರ ಓದುಗನ ಪರೀಕ್ಷೆಯಲ್ಲಿ ಲೇಖಕ ಪಾಸಾಗಲು ಸಾಧ್ಯ. ಬರೆಯುವ ಕಷ್ಟ ಏನೆಂಬುದು ಬರಹಗಾರನಿಗೆ ಗೊತ್ತಿದೆ. ಅದನ್ನು ಯಾವುದೇ ಕಾರಣಕ್ಕೆ ಓದುಗನಿಗೆ ದಾಟಿಸಬಾರದು. ಯಾಕೆಂದರೆ ಅವನಿಗೆ ಓದುವ ಸುಖವಷ್ಟೇ ಮುಖ್ಯ. ಅಂಥ ಸುಖವನ್ನು ಇವರ ಬರಹಗಳಲ್ಲಿ ಕಾಣಬಹುದು. ಸಾಮಾಜಿಕ ಸ್ಥಿತಿಗತಿ, ಜನರ ಮನೋಸ್ಥಿತಿ, ಅಲ್ಲಿಯ ಸಮಸ್ಯೆಗಳು, ಆಚಾರ ವಿಚಾರ ಇವೆಲ್ಲವನ್ನೂ ಗಮನಿಸಿ ಮಾಲತೇಶ ಅಂಗೂರರವರು ನೀಟಾಗಿ ಮಾಡಿದ್ದಾರೆ ಸಮಾಜದಲ್ಲಿ ಪ್ರತಿಷ್ಠಾಪಿತ ಮೌಲ್ಯಗಳು ಜಡವಾದಾಗ, ಪ್ರತಿಗಾಮಿಯಾದಾಗ ಅವುಗಳ ವಿರುದ್ಧ ಹೋರಾಡುವ, ಸಮಾಜವನ್ನು ಎಚ್ಚರಿಸುವ ಸಾಹಿತ್ಯ ಅಂಕಣ ಬರಹಳ ಮೂಲಕ ಅಭಿವ್ಯಕ್ತಗೊಂಡಿದ್ದು, ಸಾಹಿತ್ಯ ಸೃಷ್ಟಿ ಖುಷಿಗಾಗಿ ಅಲ್ಲ, ಅದು ಸಾಮಾಜಿಕ ಹೊಣೆಗಾರಿಕೆ. ಇಂದು ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಧೋಗತಿಗೆ ತಳ್ಳಿರುವ ಯಜಮಾನ ಸಂಸ್ಕೃತಿಯ ಮುಖ್ಯ ಅಂಶಗಳಾದ ಜಾತಿ- ವರ್ಗಗಳ ವಿರುದ್ಧ, ಶೋಷಣೆಯ ವಿರುದ್ಧ ಶ್ರಮ ಜೀವಿಗಳನ್ನು ಬಂಡಾಯಕ್ಕೆ ಅಣಿಗೊಳಿಸುವ ಮಾರ್ಗವನ್ನು ಲೇಖಕ ಮಾಲತೇಶ ಅಂಗೂರ ಅವರು ಹಾವೇರಿಯಾಂವ್ ಅಂಕಣ ಬರಹಳ ಮೂಲಕ ಕಂಡುಕೊಂಡಿದ್ದಾರೆ. ರಾಜಕೀಯ, ಸಾಮಾಜಿಕ ವಿಡಂಬನೆ, ಮಡಿವಂತಿಕೆಯ ವಿರೋಧ, ಮೂಢನಂಬಿಕೆ, ಜಾತಿಪದ್ಧತಿಗಳನ್ನು, ಬಡತನ, ಶೋಷಣೆ, ಇವನ್ನು ಕೇಂದ್ರವಾಗಿಟ್ಟುಕೊಂಡು ಅನೇಕ ಬರಹಗಳಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈರುಧ್ಯಗಳು ಸಂಘರ್ಷಕ್ಕಿಂತ ಶೋಷಣೆಗೀಡಾದವರು ಅಸಹಾಯಕ ಸ್ಥಿತಿಗತಿಗಳನ್ನು ಹೇಳುವ ಕಾಳಜಿ ಹೆಚ್ಚು. ಪ್ರತಿಭಟನೆಯ ಧೋರಣೆಯನ್ನು ವ್ಯಕ್ತಮಾಡಿವೆ ತೀಕ್ಷ್ಣವಾದ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಈ ಕೃತಿಯಲ್ಲಿ ಕಾಣಬಹುದು. ಪ್ರಭುತ್ವ ಮತ್ತು ಹಿಂಸೆಗಳ ನಡುವಿನ ಸಂಗತಿಗಳನ್ನು ವೈಚಾರಿಕವಾಗಿ ಅಂಕಣಗಳ ಮೂಲಕ ಅಭಿವ್ಯಕ್ತಪಡಿಸಿದ ಅಂಗೂರ ಅವರು ಕೆಲವೊಮ್ಮೆ ಅಕ್ಷರಗಳಿಗೆ ಇಂಕ್ ಆಗಿದ್ದರೆ ಇನ್ನು ಕೆಲವೊಮ್ಮೆ ಬೆಂಕಿಯೂ ಆಗಿದ್ದಾರೆ. ಒಟ್ಟಾರೆ ಹಾವೇರಿ ನೆಲದ ಸತ್ವವನ್ನು ಹಾವೇರಿಯಾಂವ್ ಅಂಕಣದಲ್ಲಿ ಹಿಡಿದಿಟ್ಟಿದ್ದಾರೆ. ಬದುಕಿನ ಎಲ್ಲ ಕಷ್ಟ, ನಷ್ಟ ಹಾಗೂ ಸಂಕಷ್ಟಗಳನ್ನು ಅನುಭವಿಸಿ ಹಾವೇರಿ ನೆಲದ ಸಂಗತಿಗಳನ್ನು ತಮ್ಮ ಬರವಣಿಗೆ ಮೂಲಕ ಬಿಚ್ಚಿಟ್ಟಿದ್ದಾರೆ. ಜನಸಾಮಾನ್ಯರೂ ಸುಲಭವಾಗಿ ಓದಿ ಅರ್ಥಮಾಡಿಕೊಳ್ಳುವ ಸಾಹಿತ್ಯ ಅಂಕಣಗಳಲ್ಲಿದ್ದು ಅಂಗೂರ ಅವರು ಮನಸ್ಸನ್ನು ಅರಳಿಸುವ ಸಾಹಿತ್ಯ ರಚಿಸಿದ್ದು ಸುಕ್ಕುಗಟ್ಟಿದ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ತಮ್ಮ ವಿಶಿಷ್ಟ ಬರವಣಿಗೆಗಳ ಮೂಲಕವೇ ಮಾಲತೇಶ ಅಂಗೂರ ಜನಸಾಮಾನ್ಯರಿಗೂ ಚಿರಪರಿಚಿತರಾಗಿದ್ದಾರೆ. ಪತ್ರಕರ್ತನಾಗಿ ಇವರ ಸಾಮಾಜಿಕ ತುಡಿತ ಅನನ್ಯವಾದುದು . **************************** ನಾಮದೇವ ಕಾಗದಗಾರ
ಪುಸ್ತಕ ಸಂಗಾತಿ ಸಮಯಾಂತರ ಕನಸುಗಾರರು ಬರಲಿ ನಾವೂ ಸೋತ ಆಟವನ್ನು ಗೆದ್ದು ತರಲಿ ಅವರು- ಸಮಯಾಂತರ ಕಟ್ಟುವ ಕವಿ, ಕನ್ನಡದ ಕಾವ್ಯದೆಗಳನ್ನು ಮುಟ್ಟಿದ,ನಮ್ಮ ಅಂತರಾಳವನ್ನು ತಟ್ಟುವ,ಕವಿ ಸತೀಶ ಕುಲಕರ್ಣಿ ಅವರ ಆಯ್ದ ಕವಿತೆಗಳ ಸಂಕಲನ ‘ಸಮಯಾಂತರ’ ಮೊಗಸಾಲೆ ಪ್ರಕಾಶನದಲ್ಲಿ ಪ್ರಕಟವಾದ -೨೦೧೩ ಕೃತಿ ಹಲವೂ ಗಟ್ಟಿ ಕವಿತೆಗಳ ಗುಚ್ಛ “ರಕ್ತಗಾಲಿನ ನಮ್ಮಪಾಲಿನ/ ಹಾಡ ಬರೆಯತೇವ /ನೆಲಕ ಹಾಡ ಬರೆಯತೇವ ಎನ್ನುತ್ತಲೆ ಸತೀಶರು ನೆಲದ ಜನರ ನಾಡಿ ಮಿಡಿತದಿಂದ ರೂಪುಗೊಂಡು ಕಾವ್ಯ ನೆಲಕೆ ಸಂಕಟವೊದಗಿದಾಗ ಸತೀಶರ ಕಾವ್ಯ ಹೋರಾಟದ ನಾಲಗೆಯ ಮೇಲೆ ಕೆಂಪಾಗಿ ಹೋಗುತ್ತದೆ. ಎದೆ ಗಟ್ಟಿಸಿ ತುಳಿತಕ್ಕೊಳಗಾದವರ ಒಮ್ಮೆಲೆ ಧ್ವನಿಯಾಗಿ ಬಿಡುತ್ತದೆ. ಕಾವ್ಯ ನೆಲದ ಬೇರುಗಳನ್ನು ಹುರಿಯಾಗಿಸಿ ಗಾಂಧಿಯನ್ನೇ ಪ್ರಶ್ನೆ ಮಾಡುತ್ತದೆ ‘ಬೇರು ಸತ್ತಿಲ್ಲ ಮತ್ತೊಮ್ಮೆ ಈ ನೆಲದ ಮಾತಾಗಬಹುದೇ ಹೇಳು ಗಾಂಧಿ ಗಿಡ…? ನೆಲದ ಮಾತಾಗಬಹುದೇ ಹೇಳು ಗಾಂಧಿ ಎನ್ನುವ ಕವಿ ಅಸಹಾಯಕತೆಯಲ್ಲಿ ಗಾಂಧಿ ಗಿಡ ಪ್ರಶ್ನಿಸುವುದು ಪ್ರಸ್ತುತ ವ್ಯವಸ್ಥೆಯ ವ್ಯಂಗವಾಗಿ ಮತ್ತೆ ಭೂತಕಾಲದ ಆದರ್ಶ ಗಳು ಈ ಸಂಕಟದ ಕಾಲದಲ್ಲೂ ಗಾಂಧಿ ಬೇಕಾಗಿತ್ತು ಎನ್ನುವ ಕವಿಯ ತಹತಹಿಕೆ ಓದುಗನ ಹಳಹಳಿಕೆಯಾಗಿ ಬಿಡುತ್ತದೆ ಮೌನ ಚಿಗಿಯುವುದು ಅಷ್ಟೇ ಸುಲಭವಲ್ಲ ಅದು ಅಪಾರ ಮಾತುಗಳನ್ನು ಹುದುಗಿಸಿಕೊಂಡು ಅನಂತ ಕಾಲ ಸಮಾದಿ ಸ್ಥಿತಿಯಲ್ಲಿದ್ದಾಗ ಮೌನ ಹುಟ್ಟಬಲ್ಲದು ಆ ಮೌನ ಕಾವ್ಯವಾಗಬಲ್ಲದು ಅಡಿಗರ ಕವಿತೆಯಂತೆ ‘ ಹುತ್ತಗಟ್ಟದ ಚಿತ್ತ ಮತ್ತೆ ಕೆತ್ತಿತೇನೊ ಅಂತ ಆ ಪುರುಷೋತ್ತಮನ’ ಸಾಲುಗಳೆರಡರ ನಡುವೆ ಮೌನ ಚಿಗಿತರೆ ಸಾಕು ಅದು ನನ್ನ ಕವಿತೆ ಮೌನಕ್ಕಿರುವ ಅನಂತ ಅರ್ಥ ,ಅಪರಿಮಿತ ಸಾಧ್ಯತೆಗಳನ್ನು ಕಾವ್ಯದ ಜೊತೆ ಮಿಳಿತಗೊಳಿಸಿದ್ದಾರೆ ಸ್ಪರ್ಶ ಬೇಕೆನಗೆ/ ಉಚ್ಛ ಅಸ್ಪೃಶ್ಯನಾಗುವುದು ಬೇಡ/ ಹಾರುವ ನಾನಲ್ಲ /ನೆಲದ ಮೇಲೆ ನಡೆಯುವವ ಪ್ರತಿಯೊಬ್ಬ ವ್ಯಕ್ತಿಯು ಅನುಭವಿಸುವ ವೇದನೆಯ ತುಮುಲುಗಳ ತಾಕಲಾಟಗಳನ್ನು ಕಾವ್ಯ ಸಮರ್ಥ ವಾಗಿ ಹಿಡಿದು ತನ್ನ ನಿಲುವನ್ನು ನೆಲದ ಜೊತೆ ಕವಿ ಸಮ್ಮೀಳಿಸುತ್ತಾರೆ. ಕಾಲದ ಕಟ್ಟಳೆಯಲಿ ಎಲ್ಲರೂ ಸಿಕ್ಕಿಕೊಂಡವರೆ ಶಂಕಿತರಂತೆ ಅನುಮಾನಿಸುವ ಗುಮಾನಿ ಎಲ್ಲ ಕಾಲವನ್ನು ಬಿಟ್ಟಿಲ್ಲ ,ಕಾವ್ಯಧಾರೆಯ ಎಲ್ಲರನ್ನೂ ಸಮುದಾಯದ ಚೌಕಟ್ಟಿನಲ್ಲಿ ಬಂಧಿಸಲೂ ನೋಡಿದರು ಆ ಕಾಲಕ್ಕೆ ತಕ್ಕಂತೆ ಎಲ್ಲರೂ ಪ್ರತ್ಯುತ್ತರ ಕೊಡುತ್ತಲೆ ಮುಖಾಮುಖಿ ಯಾಗಿದ್ದಾರೆ ಹಾಗೆಯೆ ಕವಿ ಸತೀಶರನ್ನು ಈ ಸೋಂಕು ಬಿಟ್ಟಿಲ್ಲ ಕಾವ್ಯ ಕೊಡುವ ಉತ್ತರ ಅದ್ಭುತ ‘ ‘ ಹಾರುವ ನಾನಲ್ಲ ನೆಲದ ಮೇಲೆ ನಡೆಯುವವ’ ಎನ್ನುವ ಕವಿ ನೆಲದ ಜೊತೆ ತನ್ನತನವನ್ನು ತನ್ನ ಮೂಲವನ್ನು ಗುರುತಿಸಿಕೊಳ್ಳುತ್ತಾರೆ ಈ ಪರಿಯ ಕಾವ್ಯ ಕನ್ನಡ ಸಾಂಸ್ಕೃತಿಕ ಲೋಕ ಅನುಭವಿಸುತ್ತಲೆ ಬಂದಿದೆ ಎನ್ಕೆ ಹನಮಂತಯ್ಯ ಅವರ ‘ನಾನು ಗೋವು ತಿಂದು ಗೋವಿನಂತಾದೆ’ ಬಿ ಫೀರಬಾಷಾ ಅವರ ‘ ಅಕ್ಕಾ ಸೀತಾ ನಿನ್ನಂತೆ ನಾನೂ ಶಂಕಿತ’ ಎನ್ನುವಲ್ಲಿ ಹೆಬಸೂರ ರಂಜಾನ್ ಅವರ ‘ ಅಮ್ಮಾ/ನಿನ್ನ ಎದೆಯಾಳದಲಿ/ನಾನೊಂದು ಗನ್ನು ಬಾಂಬು ಎನ್ನುವ ಸಾಲುಗಳು ಎಲ್ಲ ಸಮುದಾಯಗಳ ಅಸ್ಮಿತೆಯನ್ನು ಪರೀಕ್ಷಿಸುತ್ತವೆ ಕವಿ ಸತೀಶರ ಕಾವ್ಯ ಮಂಜುಗಡ್ಡೆಯು ತನ್ನನ್ನು ಕಳೆದುಕೊಳ್ಳುತ್ತಾ ತನ್ನ ಹೊರಮೈ ನ್ನು ತೊಳೆದುಕೊಳ್ಳುತ್ತಾ ಕರಗುವುದಲ್ಲಾ ಆ ರೀತಿ ತನ್ನ ಶಂಕೆಯನ್ನು ನೆಲದ ಜೊತೆ ತಾದಾತ್ಮ್ಯ ಗೊಳಿಸಿ ಅನುಸಂಧಾನಿಸುವ ಪರಿ ಅನನ್ಯ ಹಾದಿ ಹೆಣವಾದ/ ಬೀದಿ ದೀಪಗಳ ದೊರೆಯೇ….. ಕಂಬ ನೆಟ್ಟವನು ನೀನು/ ಸಾವು ತಂತಿಯ ಬಿಗಿದು /ನಿತ್ಯ ನಾಗರ ಹಾವಿನೊಡನಾಡಿದವ ಲೈನ್ ಮನ್ ಮಡಿವಾಳ ಭೀಮಪ್ಪನಿಗೆ ಎನ್ನುವ ಕವಿತೆಯಲ್ಲಿ ತನ್ನ ಕಾಯಕದ ಜೊತೆಗಾರನ ಸಾವಿನ ದುರಂತ, ಜೀವ ಕಾರುಣ್ಯದ ಪ್ರೀತಿ ದುಗುಡ ಕಾವ್ಯದುದ್ದಕ್ಕು ಕರುಳು ಮಿಡಿಯುವ ವಿದ್ರಾವಕ ನೀನು ಬೆಳಕು ಕೊಟ್ಟು ಕತ್ತಲೆಯನ್ನು ನೀ ಸೇರಿದೆ ಎನ್ನುವ ಸಾಲುಗಳು ಓದುಗನನ್ನು ಮಿಡಿಯುತ್ತವೆ ಕಾವ್ಯ ಅದು ಪ್ರಭುತ್ವದ ಕೈಗೊಂಬೆಯಾಗದೆ ಉಳ್ಳವರ ಅಡಿಯಾಳಾಗದೆ ಒಬ್ಬ ಸಾಮಾನ್ಯನ , ದುಡಿಯುವ ಕಾರ್ಮಿಕನಸಾವು ಹೇಗೆ ಕಾವ್ಯದ ವಸ್ತುವನ್ನು ತಮ್ಮ ಬಂಡಾಯದ ಸಿದ್ಧಾಂತವನ್ನು ಕಾವ್ಯದ ಪಾತಳಿಯಲ್ಲಿ ನೆಲಸಮಗೊಳಿಸಿದ್ದಾರೆ. ನಗರ ಏಳುತ್ತದೆ,ಬಾಲ ಬಿಚ್ಚುತ್ತದೆ ,ಆಕಳಿಸುತ್ತದೆ,ಮಿರಗುತ್ತದೆ, ಕರಗುತ್ತದೆ ಎನ್ನುವ ಸಾಲುಗಳು ನಾಗರಿಕ ಜಗತ್ತಿನ ಕಿರೀಟವಾಗಿರುವ ನಗರಗಳ ವಾಸ್ತವ ಬದುಕನ್ನು ಅದರ ಭ್ರಮಾತ್ಮಕ ಕಲ್ಪನೆಗಳನ್ನು ಕವಿತೆ ಹುಸಿಗೊಳಿಸುತ್ತದೆ ‘ ನಗರ ಗಾಢ ಗೊರಕೆ ನಿದ್ರೆಯಲ್ಲಿದೆ’ ಎನ್ನುವ ಧ್ವನಿಪೂರ್ಣ ಸಾಲುಗಳು ಅಮಾನವೀಯತೆಯ ಸಾಕ್ಷಿಯ ಪ್ರತೀಕದಂತಿರುವ ನಗರಗಳ ಕರ್ಮಕಾಂಡ ವನ್ನು ಅನಾವರಣಗೊಳಿಸುತ್ತಲೆ ಮಾನವತೆಯ ವಿರೋಧಿ ಪ್ರಜ್ಞೆಯನ್ನು ನಗರ ಒಳಗೊಂಡಿವೆ ” ಮರಣ ಮಹಾಯಾಗದ/ ಮುನ್ನುಡಿಗೆ / ಹುರಿಗೊಂಡ ಒಂದೆ ಒಂದು ಬಾಣ ಎನ್ನುವ ಕವಿತೆಯ ಸಾಲುಗಳು ಯುದ್ಧ ವಿರೋದಿ ನೆಲೆಯನ್ನು ಕಾವ್ಯ ಸಾದರ ಪಡಿಸುತ್ತದೆ. ಸತೀಶರ ಕಾವ್ಯದ ವಸ್ತುಗಳು ದೇವಲೋಕದ ವಸ್ತುಗಳಾಗದೆ ಸದ್ಯದ ನಿತ್ಯ ದುಡಿಯುವ ಜನರ ಜೊತೆಯಾದ ವಸ್ತುಗಳೆ ಕಾವ್ಯದ ನಿಲುವಾಗಿದೆ.ಅಲ್ಲಿ ಮಡಿವಾಳ ಭೀಮಪ್ಪ, ಅವರ ಗುರುಗಳು, ಚಪ್ಪಲಿಗಳು,ನಂಬದ ದೇವರುಗಳು, ಜನಪರ ಕಾವ್ಯದ ಬಗ್ಗೆ, ನಗರಗಳ ಬಗ್ಗೆ, ಬದುಕಿನ ಭವಣೆಗಳ ಬಗ್ಗೆ, ಮನಸುಗಳನು ಕಟ್ಟುವ, ಭಯೋತ್ಪಾದನೆಯಿಂದ ನಲುಗಿ ನೆಲೆ ಕಳೆದುಕೊಂಡ ಮುಗ್ದ ಕಂದಮ್ಮಗಳ ನೋವು, ಯುದ್ಧ, ಶಾಂತಿ ಎಲ್ಲವೂ ವಸ್ತುಗಳಾಗಿ ನೆಲೆಗೊಂಡಿವೆ, ಕವಿತೆಯಲ್ಲವೂ ಒತ್ತರಿಸಿಕೊಂಡು ಬಂದ ಕವಿತೆಗಳಾಗಿರದೆ ಅವೆಲ್ಲವೂ ಸಹಜತೆಯಿಂದ ಹೋರಾಟದ ಹಾದಿಯಲ್ಲಿ ಪಡಿಮೂಡಿದ್ದು. ಸತೀಶರ ಕಾವ್ಯ ನಾಲ್ಕು ಗೋಡೆಯ ಮಧ್ಯ ಹುಟ್ಟಿದ ಚಮತ್ಕಾರಿ ಶಬ್ದಗಳಲ್ಲ ಅವು ಕರುಳಿನಿಂದ ಹಾದಿ ಬೀದಿಗಳಲ್ಲಿ ಕಾವ್ಯ ತನ್ನ ಅಂತರಂಗ ತಾವಾಗಲೆ ತೆರೆದುಕೊಂಡು ಹಾಡಾಗಿದ್ದು, ಅವು ಅತ್ತವರ ಕರುಳಿನ ಭಾಷೆ ಕಾವ್ಯದಲ್ಲಿ ಹೃದ್ಯಗೊಂಡಿದೆ ಇಷ್ಟು ಬಾರ ಹೊತ್ತು/ ಇಷ್ಟು ದೂರ ತಂದ / ಈ ಚಪ್ಪಲಿಗಳಿಗೆ ನನ್ನ ವಂದನೆಗಳು ಅನನ್ಯ ವಸ್ತು ಒಳಗೊಂಡ ಕಾವ್ಯ ‘ ಚಪ್ಪಲಿಗಳು ಪರಾಣ ಕಾಲದಿಂದ ಅಧುನಿಕ ಕಾಲದವರೆಗೂ ಚರ್ಚಿತವಾದ ವಸ್ತು ಅದು ಭರತ, ಬಸವಣ್ಣನಿಂದಿಡಿದು ತೀರಾ ಇತ್ತೀಚಿನ ತನಕವು ಸುದ್ದಿಯಲ್ಲಿದೆ ಚಪ್ಪಲಿಯು ನಿಷ್ಕಾಮ ಸೇವೆಯನ್ನು ಹೇಳುತ್ತಲೆ ದೈವತ್ವದ ಸ್ಥಾನದ ಎತ್ತರಕೆ ಹೋಗುತ್ತವೆ, ಬಸವಣ್ಣ ಚನ್ನನ ಚಪ್ಪಲಿಯನ್ನು ತಲೆಯ ಮೇಲೆ ಹೊತ್ತಂತೆ ಸತೀಶರು ಕಾವ್ಯದಲ್ಲಿ ಚಪ್ಪಲಿಗಳು ಎದೆಯ ಮೇಲೆರಿದೆ ಕಾವ್ಯದಲ್ಲಿ ಬರುವ ಸಾಲುಗಳು ಮೌನದ ಸಂಗಾತಿಗಳೆ, ನನ್ನ ಕಾಲು ಮರಿಗಳೆ, ಬಡಮೋಚಿಯ ಜೋಡಿ ಮಕ್ಕಳೆ, ಅರಿವಿನಾ ದೇವರುಗಳೆ, ಮರಿ ಪಾರಿವಾಳಗಳೆ, ಓ ಮೌನ ತಪಸ್ವಿಗಳೆ,ಎಂದು ಚಪ್ಪಲಿಗಳನ್ನು ಸಂಬೋದಿಸುವ ರೀತಿ ಪರಿ ಅನನ್ಯ ಕವಿ ಸತೀಶರು ಬದುಕಿನ ಅರ್ಧ ಭಾಗವನ್ನು ಬೀದಿಯ ಬಯಲಲ್ಲೆ ಕಳೆದವರು ಬಂಡಾಯವನ್ನು ಉಸಿರಾಗಿಸಿಕೊಂಡು ಮನುಷ್ಯ ಪರ ನಿಲುವನ್ನಿಟ್ಟುಕೊಂಡವರು ಸಿದ್ದಲಿಂಗಯ್ಯನವರ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರನಂತೆ, ಚಂಪಾ ಅವರ ಪ್ರೀತಿಯಿಲ್ಲದೆ ನಾನು ದ್ವೇಷವನ್ನು ಕೂಡಾ ಮಾಡಲಾರೆ ಎನ್ನುವಂತೆ ತಣ್ಣನೆಯ ಕಾವನ್ನು ಕಾವ್ಯಕ್ಕೆ ಸ್ಪರ್ಶಿಸಿದವರು ತನ್ನದೆ ತನ್ನದೆ ಪರಂಪರಾಗತ ಸಮೂಹವನ್ನು ಎದುರಿಸಿಕೊಂಡು ಬಸವಣ್ಣ ಹೇಳಿದಂತೆ ” ಆನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ” ಎನ್ನುವ ನಿಲುವನ್ನೆ ಕವಿ ‘ ಹಾರುವವ ನಾನಲ್ಲ ನೆಲದ ಮೇಲೆ ನಡೆಯುವವ ‘ ಎನ್ನುವ ನಿಲುವು ‘ ಗೋವಿಂದ ಭಟ್ಟರು ಶರೀಫನಿಗೆ ತೊಡಿಸಿದ ಜನಿವಾರವನ್ನು ಸಾರ್ವತ್ರಿಕಗೊಳಿಸುವುದು ಸತೀಶರು ‘ ಹೆಗಲೇರಿ ಬೆನ್ನಿಳಿದು ಸೊಂಟ/ ಸುತ್ತಿದ ಜನಿವಾರ ನನಗೆ/ಸಾವು/ ಹೆಡಮುರಗಿಯ ಹಾವು ಎಂದು ನಿರಾಕರಿಸುವುದು , ಬಸವಣ್ಣ ‘ ಅಕ್ಕನಿಗಿಲ್ಲದ ಜನಿವಾರ ನನಗೇಕೆ’ ಎಂದು ಪ್ರಶ್ನಿಸುವುದು ಎಲ್ಲವೂ ಸಾರ್ವತ್ರಿಕ ಗೊಳಿಸುವುದು, ನಿರಾಕರಿಸುವುದು, ಪ್ರಶ್ನಿಸುವುದು ಒಳಗೊಂಡು ಮಂತ್ರಕ್ಕಿಂತಲೂ ಸ್ಪರ್ಶಶಕ್ತಿಯ ಮಹತಿಯನ್ನು ಕಾವ್ಯದಲ್ಲಿ ದಾಖಲಿಸುತ್ತಾರೆ ಸಂಶಯದ ಮಂಡಲದಲ್ಲಿ, ಸುಳಿಗಳಲಿ ನಾನು ಹರಿವ ಹೊಳೆ ಎನ್ನುವುದು ಕೆಂಡ ಕುಂಡಗಳ ಸಂಗ ದ ಆತಂಕದ ಗಡಿಗಳನು ನೀವೇದಿಸುತ್ತಾರೆ ತಮ್ಮ ಕಾವ್ಯದ ನಿಲುವನ್ನು ದಾಖಲಿಸುತ್ತಾ ತಮ್ಮ ಬಂಡಾಯ ಕವಿತೆಯಲ್ಲಿ ” ದಮನಕ್ಕೆ ಉತ್ತರ ದಿಕ್ಕಾರ/ಬಂಡಾಯ ದಬ್ಬಾಳಿಕೆಗೆ ಉತ್ತರ ಎನ್ನುತ್ತಾರೆ ಸಾದತ್ ಹಸನ್ ಮಾಂಟೋ ಕವಿತೆಯಲ್ಲಿ ಹೋರಾಟದ ಹುಕಿಗೆ ಸಂಗಾತಿಯಾಗಿ ಕಾಲ ಕಾಲಕ್ಕೆ ಗೋಳಗೊಮ್ಮಟದ ನಿಲ್ಲದ ಮಾರ್ದನಿ ಮಂಟೋ ನಿತ್ಯ ಕೈದಿ,ಕಾಲಾತೀತ ಬಂದಿ / ನಮ್ಮಾತ್ಮಗಳ ಬೆಂಕಿಯಾಗಿದ್ದಾನೆ ಮಂಟೊ ಹೋರಾಟದ ಕಾವಿಗೆ ಕಿಡಿಯಾದ ಮಂಟೋನನ್ನು ತಮ್ಮ ಕಾವ್ಯದಲ್ಲಿ ಪ್ರತಿಫಲನಗೊಳ್ಳುತ್ತಾನೆ ಈ ಬೀದಿಯವರು ಕವಿತೆಯಲ್ಲಿ ಬೀದಿಯವರ ಪರ ನಿಲುವು ,ಒಡಲಾಳ ಕಿಚ್ಚಿನ ಕವಿತೆ ೧೯೮೦ ರ ದಶಕದಲ್ಲಿ ಬಂದ ಸಂಕಲನ ಕವಿತೆಯಲ್ಲಿ ಬೆವರು ಸುರಿಯುವವರ ಸಂಗಡ/ ಬದುಕು ಸುಲಿಯುವವರು ಇದ್ದಾರೆ ಎನ್ನುವಲ್ಲಿ ಕವಿ ಬೆವರಿಗೆ ಪ್ರತಿಯಾಗಿ ರಕ್ತ ಬೇಡುವವರು ,ಕಿತ್ತು ತಿನ್ನುವವರ ನಡುವೆ ಕೂತು ತಿನ್ನುವವರು, ಉರಿ ಹಚ್ಚಿ ಸುಟ್ಟು ಹಾಕುವವರ ಮಧ್ಯ ಹೊಸ ಚಿಗುರುವ ದನಿ ಎತ್ತುವವರು ಇದ್ದಾರೆ ಒಡಲಾಳ ಕಿಚ್ಚಿನ ಸಂಕಟ, ತಳಮಳ ತುಮುಲದ ಒಳಬೇಗುದಿಯನ್ನು ದೇವನೂರು ಮಹಾದೇವ ‘ಅವರ ಒಡಲಾಳ’ ಕತೆ ಆ ಕಿಚ್ಚಿನಲ್ಲಿ ಕುಸುಮ ಬಾಲೆ ಇಣುಕಿದಂತೆ ಹಾದು ಹೋಯಿತು ಪ್ರಸ್ತುತ ಪ್ರಭುತ್ವ ಪ್ರೇರಿತ ದಮನದಲ್ಲಿ ಅಂದು ಬರೆದ ಕವಿತೆಯು’ ವರ್ತಮಾನದ ಒತ್ತಡದಲ್ಲಿ ‘ ಕವಿತೆ ಮುಖಾ ಮುಖಿ ಯಾಗಿ ನಿಲ್ಲುತ್ತದೆ. “ವರ್ತಮಾನದ ಒತ್ತಡದಲ್ಲಿ ಚಹರೆಗಳು/ಭೂತವನ್ನು ತಿನ್ನುತ್ತವೆ , ಭವಿಷ್ಯವನ್ನು ಕೊಲ್ಲುತ್ತವೆ ಪ್ರಸ್ತುತ ವರ್ತಮಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಂದು ಹತ್ಯಾಚಾರದ ಹಂತಗಳು ಕವಿತೆಯಲ್ಲಿ ವಾಸ್ತವ ಭಾರತದ ನ್ಯಾಯ ಪದ್ದತಿಯ ಒಳನೋಟವನ್ನು ಸೂಕ್ಷ್ಮ ವಾಗಿ ಅನಾವರಣಗೊಳಿಸುತ್ತದೆ, ” ಅತ್ಯಾಚಾರವಾಗಿಲ್ಲ/ ತೀರ್ಪು ಬಂದಿತ್ತು ಒಂದು ದಿನ/ ಅವಳು ಹೆರಿಗೆ ನೋವಿಗೆ ನರಳುತಿದ್ದಳು ಎನ್ನುವ ಕೊನೆಯ ಸಾಲು ಮನಕಲಕುತ್ತದೆ. ಸತೀಶರ ಕವಿತೆ ಕಾಲುದಾರಿ ಬದಿಯ ಬೇಲಿ ಮೇಲಿನ ಹೂವಂತೆ , ನಾಳೆ ಈ ನೆಲದಲ್ಲಿ ಅರಳುವ ಸಾಲು ಸಾಲು ಗುಲಾಬಿ, ಸುಟ್ಟ ಮನಸ್ಸಿನ ಕ್ರಾಂತಿ ಪತ್ರ, ಪುಟ್ಟ ಮಗನ ಹರಿದ ಹವಾಯಿ ಚಪ್ಪಲಿ ಅವರ ಕಾವ್ಯವನ್ನು ಅವರೆ ಹೇಳುವಂತೆ ಪಿಂಡ ಪುರಾಣದಲ್ಲಿ,ಕಾಗೆ ಸಾಲುಗಳಲ್ಲಿ, ಜನಿವಾರದ ಬಂಧದಲ್ಲಿ, ಶ್ರಾದ್ಧ ಕರ್ಮದ ಕಾಂಡಗಳಲ್ಲಿ ನನ್ನ ಹುಡಕಬೇಡಿ ಎನ್ನುತ್ತಾರೆ ಕಾವ್ಯದ ಅಂತಿಮ ಉತ್ತರ ” ನಾನು ಬೂದಿಯಾಗಿರುವೆ/ ಈ ನೆಲದ ಮಣ್ಣಾಗಿರುವೆ ಎನ್ನುವ ಉತ್ತರ ತಾರ್ಕಿಕತೆಗೆ ತಂದು ನಿಲ್ಲಿಸುತ್ತದೆ. ಅದು ಪುಟ್ಟ ಬೀಜದ ಹೊಟ್ಟೆಯಿಂದ ಹುಟ್ಟುವ ಹೆಮ್ಮರ,ನನ್ನಂತೆ ನಾನಾಗಿ ಬದುಕಬಲ್ಲ ಸ್ವಾಭಿಮಾನ ದ ಹಾಡಾಗಿದೆ. ಅವರು ಬದುಕು,ಕಾವ್ಯವನ್ನಷ್ಟೇ ತಮ್ಮ ವೃತ್ತಿಯನ್ನು ಪ್ರೀತಿಸಿದವರು ಕಾವ್ಯದ ಬೆಳಕಿನ ಜೊತೆಗೆ ತಮ್ಮ ವೃತ್ತಿ ಯ ದೀಪದ ಕಂಬವನ್ನು ಹೊತ್ತವರು ಹೀಗಾಗಿಯೆ ಲೈನ್ಮನ್ ಮಡಿವಾಳಪ್ಪ ನೆನಪಿನ ಪರದೆಯಲಿ ಸರಿದು ಹೋಗುತ್ತಾನೆ,ಆ ನನ್ನ ಕೆ.ಇ.ಬಿ ಕವಿತೆ ವಿದ್ಯುತ್ ಇಲಾಖೆಯ ಚೆಂಬಳಕಿನ ನೆರಳು ಬೆಳಕು ಕತ್ತಲಿನಾಟವನ್ನು ತೆರದಿಡುತ್ತದೆ ಅಷ್ಟೇ ನೆನಹುನಿಂದ ” ಅನ್ನ ಕೊಟ್ಟ/ ಅರಿವೆ ಕೊಟ್ಟ/ ಮನೆ ಕೊಟ್ಟ ಮೂಕ ತಂದೆ ನನ್ನ ಕೆ.ಇ.ಬಿ ಎನ್ನುವಲ್ಲಿ ಆ ಬದುಕು ಕೊಟ್ಟ ಇಲಾಖೆಯ ಪ್ರೀತಿ ಅಷ್ಟೆ ಅಕ್ರೋಶವಾಗಿ ” ಊರೂರು ಚೌಕದಲಿ / ಹತ್ತೂರ ಒಡೆಯರ ನಡುವೆ/ ಹರಾಜಿಗೆ ನಿಂತ ಮುದಿ ಗುಲಾಮ ನನ್ನ ಕೆ.ಇ.ಬಿ ಹೀಗೆ ಜಗಭಗ ಸುಟ್ಟು ಬೂದಿ ಮಾಡಿ ಬಿಡು ಎಂದು ಒಳಗಿಚ್ಚನ್ನು ತೂರಿಬಿಡುತ್ತಾರೆ ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು ಎನ್ನುವ ಸತ್ತ ಗುರುಗಳನ್ನು ಸ್ಮರಿಸಿದ ಕವಿತೆಯ ಸರಳೀಕರಣ ಆಪ್ತತೆಯ ತೆಕ್ಕೆಯಲ್ಲಿ ತಂದು ಕಣ್ಣೇರಾಗಿಸುತ್ತದೆ. ಮಹಾಭಾರತದ ಆ ಹಕ್ಕಿ ಅವರ ಚರ್ಚಿತ ಕವಿತೆ “ಯಾವುದು ಗೆಲ್ಲಬೇಕು/ ಯಾವುದು ಸೋಲಬೇಕು/ ಇದು ಕವಿ ಹೃದಯದ ಕದರು ಕವಿಯಾಗಿ ನಾನೇಕೆ ಪ್ರಶ್ನೆ ಕೇಳಬಾರದು, ಹಕ್ಕಿ ಯಾಕೆ ಹಾರಿ ಹೋಗಬಾರದು ಯಾಕೆ ಬಾಣದ ಗುರಿ ತಪ್ಪಬಾರದು ಹೇಳಿ ನೀವೆ ಹೇಳಿ ಎಂದು
ಹಳೆಯ ಧೂಳು ಹಿಡಿದ ಅಥವಾ ತುಕ್ಕು ಹಿಡಿದ ರೇಜರ್ ಬ್ಲೇಡಿನಿಂದ ಹೆಣ್ಣಿನ ಗುಪ್ತಾಂಗದ ಕ್ಲಿಟೋರಸ್ ಎಂಬ ಬಹುಮುಖ್ಯವಾದ ಭಾಗವನ್ನು ಅನಸ್ತೇಸಿಯಾಗಳ ಸಹಾಯವಿಲ್ಲದೆಯೇ ತೆಗೆದು ಕತ್ತರಿಸಿ ಹಾಕಿ ಪೊದೆಗಳಿಂದ ತೆಗೆದ ಮುಳ್ಳುಗಳಿಂದ ಹಸಿಯಾದ ಗಾಯವನ್ನು ಮುಚ್ಚಿ ಹೊಲಿಯುವ ಬರ್ಬರ ಸಂಪ್ರದಾಯ.
You cannot copy content of this page