ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾಫಿಯಾನಾ

ಕಾವ್ಯ ಸಂಗಾತಿ ಕಾಫಿಯಾನಾ ಎ. ಹೇಮಗಂಗಾ ಮೈ ಮರೆತು ಹಗಲುಗನಸು ಕಾಣುತ್ತಾ ಸಮಯ ಕಳೆಯದಿರು‘ ಕೈ ಕೆಸರಾದರೆ ಬಾಯಿ ಮೊಸರೆಂ’ಬ ಸತ್ಯವ ಮರೆಯದಿರು ಗಮ್ಯ ತಲುಪುವ ಹಾದಿಯಲ್ಲಿ ನೂರಾರು ಕಲ್ಲು, ಮುಳ್ಳುಗಳುಪಲಾಯನ ಮಾಡಲು ಹೊಣೆಗಳ ಪರರ ಹೆಗಲಿಗೆ ಏರಿಸದಿರು ಕಷ್ಟಗಳೇ ಇಲ್ಲದ ಬಾಳು ಯಾರಿಗೂ ಲಭ್ಯವಿಲ್ಲ ಬುವಿಯಲ್ಲಿಬರಿಯ ಸುಖದ ಪಾಲೇ ಸದಾ ನಿನಗಿರಲೆಂದು ಬಯಸದಿರು ಉಪದೇಶ ಮಾಡುವುದರಲ್ಲೇ ಕಾಲಹರಣವಾದರೆ ಹೇಗೆ ?ಶ್ರಮಜೀವಿಯಾಗದೇ ಮಾದರಿ ನೀನೆಂದು ಭ್ರಮಿಸದಿರು ಸತ್ತ ನಂತರ ಗೋರಿಯಲ್ಲಿ ಮಲಗುವುದು ಇದ್ದೇ ಇದೆ ಹೇಮಕ್ಷಣಿಕ ಬಾಳಲ್ಲಿ ಅಲ್ಪವಾದರೂ ಸಾಧಿಸದೇ ಇಲ್ಲಿಂದ ತೆರಳದಿರು

ಕಾಫಿಯಾನಾ Read Post »

ಕಾವ್ಯಯಾನ, ಗಝಲ್

ತೀನ್ ಕಾಫಿಯಾ ಗಜಲ್

ಕಾವ್ಯ ಸಂಗಾತಿ ತೀನ್ ಕಾಫಿಯಾ ಗಜಲ್ ನಯನ. ಜಿ. ಎಸ್ ಟಿಸಿಲೊಡೆಯುತಿಹ ಸಂಚಿನೊಳು ಭಾವಗಳ ಹರಣಕಂದಳಿಸುತಿಹ ಸ್ವಾರ್ಥತೆಯೊಳು ಜೀವಗಳ ಹರಣ ಮಬ್ಬಿನ ಸೋಗಿನಲಿ ಅಖಾಡಕ್ಕಿಳಿದಿವೆ ಚೋದ್ಯಗಳುಸವೆಸುತಿಹ ಹೆಜ್ಜೆಗೆಜ್ಜೆಗಳೊಳು ಭವ್ಯಅಸುಗಳ ಹರಣ ಪಾಪ ಭೀತಿಯನು ಮೀರಿತಲಿ ವಿಜೃಂಭಿಸುತಿದೆ ಕೃತ್ಯಎಣಿಕೆಯಾಗುತಿಹ ಸಾಲಂಕಿಗಳೊಳು ಸ್ವಪ್ನಗಳ ಹರಣ ಬಾಷ್ಪಗರೆಯುವ ಮುಗ್ಧತೆಗೆ ಜೀವಂತಿಕೆಯಲಿ ಸಮರಮೆರೆದಾಡುತಿಹ ಹೃದಯದೊಳು ಹಾರೈಕೆಗಳ ಹರಣ ‘ನಯನ’ಗಳಿಗೆ ಪಾಶವಿಕ್ಕುತ್ತಲಿವೆ ಲೋಭಿಗಳ ಹೀನತ್ವಅಬ್ಬರಿಸುತಿಹ ಅಸ್ಮಿತೆಯೊಳು ಚಿಗುರಾಸೆಗಳ ಹರಣ ನಯನ. ಜಿ. ಎಸ್

ತೀನ್ ಕಾಫಿಯಾ ಗಜಲ್ Read Post »

You cannot copy content of this page

Scroll to Top