ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ವಾಯ್.ಜೆ.ಮಹಿಬೂಬ ಹೃದಯದಲಿ ಪ್ರೀತಿ ಅಂಕುರಿಸಿದೆ ಸಸಿಯಾಗಿಸಲು ಬಾ ಸಖಿಹದವಾಗಿ ಮನಬೆರೆಸಿ ಉದಯರಾಗದಿ ನೀರೆರೆಯಲು ಬಾಸಖಿ ಅನುಮಾನ ಸಂಶಯದ ಶೆಕೆ ಬಡಿಯದಿರಲಿ ಎಲ್ಲಿಯೂ ಇದಕೆನಂಬುಗೆ ವಿಶ್ವಾಸಗಳ ರೆಕ್ಕೆ-ಪುಕ್ಕಗಳಾಗಿ ವಿಹರಿಸಲು ಬಾ ಸಖಿ ಅನುವು-ತನುವುಗಳೆ ದಿನಮಂತ್ರಗಳಾಗಲಿ ನಮ್ಮಿಬ್ಬರ‌ ಬಾಳ್ಗೆನೀನಿರುವಾಗ ಹಂಗ್ಯಾತರದು ಸತ್ಕಾಲಕೆ ಹಿತವಾಗಲು ಬಾ ಸಖಿ ಹರಾಮಿನ ಅರಮನೆ ತೊರೆದುಬಿಡು,ಕಂಬಳಿ-ದಿನದಂಬಲಿ ಸಾಕುತಮಕೆ ಬೆಳಕು-ಅಹಂಗೆ ವಿರಾಮ,ನಾನು ಸಂಭ್ರಮಿಸಲು ಬಾಸಖಿ ‘ಅಜಾದ್’ಬಯಸುವುದೇನಿದೆ,ಬಯಕೆಯೂ ಅರಾಮಿನಲ್ಲಿದೆಸತ್ಕರಿಸಿದವನೇ ಜಗದೊಡೆಯನಿಗೆ ಕರಮುಗಿಯಲು ಬಾಸಖಿ ***********************************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” ಯಾದರೂ ಇರುಳಿಗೆ ಇರಲಿ ******************************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸರೋಜಾ ಶ್ರೀಕಾಂತ್ ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆ ಕೇಳು ಸಖಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆ ಕೇಳು ಸಖ ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನಒಲವರಿತ ಮುಂಗುರುಳಿಗೆ ಸ್ಪರ್ಶದ ಸಡಗರ ಕೇಳು ಸಖ ಸದ್ದಿಲ್ಲದ ಮೌನದೊಳಗೂ ನೂರೊಂದು ಮಾತುಗಳಿವೆಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿವೆ ಕೇಳು ಸಖ ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸಗೆಲುವಿನ ನಗೆ ನೀ ಬೀರುವಾಗ ಸೊಗಸಿದೆ ಕೇಳು ಸಖ ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ ***********************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಿವರಾಜ್.ಡಿ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ *******************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಎ. ಹೇಮಗಂಗಾ ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ ಹೊಂಬೆಳಕ ಸೂರ್ಯನೂ ಕೆಂಡದಂತೆ ಸುಡುವನು ನಿಷ್ಕರುಣಿಯಾಗಿಕುದಿಎಸರಿನಂತೆ ಮನಸು ಕುದಿಯುತಿದೆ ತೊರೆದು ಹೋಗದಿರು ನನ್ನ ಭಾವ ಸಂವಹನಕೆ ಬರಿಯ ಕಂಗಳೇ ಸಾಕು ಮಾತಿನ ಹಂಗಿಲ್ಲ ನನಗೆಎದೆಗೂಡಲಿ ಪ್ರೀತಿದೀಪವಿನ್ನೂ ಬೆಳಗುತಿದೆ ತೊರೆದು ಹೋಗದಿರು ನನ್ನ ಸುಖವೆಲ್ಲಿದೆ ಒಂಟಿ ಬಾಳಲ್ಲಿ ನಿನ್ನ ಕೂಡಿ ಒಡನಾಡದ ಹೊರತು ?ಮಧುಪಾನಕೆ ಅಧರ ಹಂಬಲಿಸುತಿದೆ ತೊರೆದು ಹೋಗದಿರು ನನ್ನ ತನುವಿಂದು ಕೊರಡಾಗಿ ಬಾಡಿದೆ ಹಿತ ಸಂವೇದನೆಯ ಸ್ಪರ್ಶವಿರದೇಅಪ್ಪುಗೆಯ ಬಿಸುಪು ನೆನಪಾಗಿ ಕಾಡುತಿದೆ ತೊರೆದು ಹೋಗದಿರು ನನ್ನ ನನ್ನ ಮರೆತು ಬದುಕುವುದು ಬದುಕೇ ಅಲ್ಲವೆಂದು ಹಳಹಳಿಸಿದ್ದೆಜೀವ ಸಹಿಸಲಾಗದ ನೋವ ಸಹಿಸುತಿದೆ ತೊರೆದು ಹೋಗದಿರು ನನ್ನ ಬುವಿಯೊಂದು ಗೋಲ ಮರಳಲೇಬೇಕು ‘ಹೇಮ’ ಳೆಡೆಗೆ ಕೊನೆಗೊಮ್ಮೆಹೊಸಬದುಕು ನಮಗಾಗಿ ಕಾಯುತಿದೆ ತೊರೆದು ಹೋಗದಿರು ನನ್ನ ******************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಚಳಿಯ ನಿನ್ನಯ ಆಲಿಂಗವನ್ನು ಬಯಸುತಿದೆಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನುಜೀವನವು ನಿನ್ನಯ ಸನಿಹವನ್ನು ಬಯಸುತಿದೆ ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ ‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನುಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಶೋಕ ಬಾಬು ಟೇಕಲ್. ನೀ ಮಾಡಿದ ಒಲವಿನ ಗಾಯ ಮಾಗಿಸಿತು ಈ ಮಧು ಬಟ್ಟಲುದೂರ ತೊರೆದ ಭಾವಗಳಿಗೆ ವಿದಾಯ ಹೇಳಿಸಿತು ಈ ಮಧು ಬಟ್ಟಲು ಕ್ಷಣ ಕ್ಷಣದ ರೋದನವನ್ನು ಸಂತೈಸಿ ಲಾಲಿಸಿ ಪಾಲಿಸಿದೆಪ್ರತಿ ದಿನವೂ ಮಮತೆಯ ಮಡಿಲಾಗಿ ಆರಾಧಿಸಿತು ಈ ಮಧು ಬಟ್ಟಲು ಬಾಂದಳದಿ ಕೆಂಪ್ಹರಡುವ ರವಿಯೂ ನಾಚಿ ನಿಬ್ಬೆರಗಾಗುತಿದ್ದಇಳಿಸಂಜೆಗೂ ರಮಿಸಿ ಅಭ್ಯಂಜನ ಮಾಡಿಸಿತು ಈ ಮಧು ಬಟ್ಟಲು ಸುಯ್ ಗುಡುವ ಗಾಳಿಯೂ ಸದ್ದಡಗಿ ಪಲ್ಲಂಗದಲಿ ಮಲಗಿದೆನಿನ್ನ ಭಾವ ಭಂಗಿಯ ಕ್ಷಣ ಹೊತ್ತು ಮರೆಸಿತು ಈ ಮಧು ಬಟ್ಟಲು ಜರಿವ ಜಗಕೂ ಅರಿವಿದೆ ಅಬಾಟೇ ನೊಂದ ಜೀವವೆಂದುಮೋಹದ ಮದರಂಗಿಯ ಶಪಿಸಿತು ಈ ಮಧು ಬಟ್ಟಲು ************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಮತ್ತೇರಿಸುವ ಮಧು ಇಂದು ನೆತ್ತರಿನ ಬಣ್ಣವಾಯಿತೇಕೆತುಟಿ ಸೋಕುವ ಮುಂಚೆ ಬಟ್ಟಲು ಉರುಳಿ ಹೋಯಿತೇಕೆ ಹೃದಯ ಒಡೆದು ಚೂರಾದರಾಗಲಿ ಮಧುಶಾಲೆ ಕೈ ಮಾಡಿ ಕರೆದಿದೆತುಂಬಿ ತುಳುಕುವ ಹೂಜಿ ಎದುರಿಗಿದೆ ಮುಖದ ನಗು ಮಾಯವಾಯಿತೇಕೆ ಯಾರೇನೇ ಅಡಿಕೊಳ್ಳಲಿ ಬಿಡು ನೋವು ಮರೆಸುವ ಔಷಧಿ ಜೊತೆಗಿದೆ ಗಾಲಿಬ್ಸಾಕಿ ಸುರಿದು ಕೊಟ್ಟ ಸಂಜೀವಿನಿ ಕೈ ಸೇರುವ ಮುನ್ನ ನೆಲದ ಪಾಲಾಯಿತೇಕೆ ಎಲ್ಲರೂ ನನ್ನ ನೋಡಿ ದೂರ ಸರಿಯುತ್ತಾರೆ ಸಜನಿ ಎದೆಯ ಬೇನೆ ನಿನಗಷ್ಟೇ ಗೊತ್ತುದರ್ದಿಗೆ ಮುಲಾಮು ಸವರಿ ಕೈಗಿತ್ತ ತುತ್ತು ಬಾಯಿಗೆ ಬರದಾಯಿತೇಕೆ ಮಸೀದಿಯಲಿ ಮುಲ್ಲಾ ಅಜಾ ಕೊಟ್ಟಾಗಲೇ ಇವರಿಗೆ ಬೆಳಗಾಗುತ್ತದೆ ಅರುಣಾಮೈಖಾನಾದೊಳಗೆ ನಾನಿರುವಾಗ ಕತ್ತಲೆಯಲ್ಲೂ ಒಳಗೆ ಬೆಳಕಾಯಿತೇಕೆ ***************************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿಸೊಸಿದ ಹಾಲಿಗೆ ವಿಷವು ಬೆರೆತಿದೆ ಸಖಿ ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕುಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆಬಡವರ ಮನೆ ದೀಪಕೆ ಎಣ್ಣೆಇಲ್ಲದೆ ಆರುತಿದೆ ಸಖಿ ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದುಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ ******************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ನೂರುಲ್ಲಾ ತ್ಯಾಮಗೊಂಡ್ಲು ನಿನ್ನ ಶಹರಿನಲಿ ಬೆಳಕಿಗೆ ಕಾಲು ಮೂಡಿದಾಗ ನೀನಿದ್ದೆಆ ಬೃಂದಾವನದಲಿ ದುಂಬಿ ಮಕರಂದ ಹುಡುಕುವಾಗ ನೀನಿದ್ದೆ ಕಣ್ಣ ಕೊಂಬೆಯ ಮೇಲೆ ನಕ್ಷತ್ರ ಮಿನುಗುವ ಹೊತ್ತುಭರವಸೆಯ ಕಿರಣವೊಂದು ರೆಪ್ಪೆ ಮೇಲೆ ಹರಿದಾಗ ನೀನಿದ್ದೆ ಯಾವುದೊ ವಿಳಾಸವಿಲ್ಲದ ದಾರಿಯಲಿ ಕಾಲುಗಳು ಎಡವಿದವು ನಿಜಆದರೆ ನೀ ಹೊರಳಿ ಹೋಗಿದ್ದ ದಾರಿಯಲಿ ಅತ್ತರು ಘಮಿಸಿದಾಗ ನೀನಿದ್ದೆ ಯಾವುದದು ಮರೆಮಾಚುವ ವಚನ ಕಾಡಿತ್ತೊ ಅರಿಯೆಆದರೂ ನಿನ್ನ ಆ ಮರೆಮಾಚಿಕೆ ವಿಫಲವಾದಾಗ ನೀನಿದ್ದೆ ಗೊತ್ತು ನಿರೀಕ್ಷೆಗಳೆಲ್ಲ ಹುಸಿಯಾಗದು ಎಂದೂ ‘ಸಾಘರ್’ಕಾಡುವಿಕೆಗೂ ಒಂದು ಮಿತಿಯಿದೆ ಅದು ಖಚಿತವಾದಾಗ ನೀನಿದ್ದೆ *******************************************

ಗಝಲ್ Read Post »

You cannot copy content of this page

Scroll to Top