ಮತ್ತೆ ಮಳೆ ಬಂದಿದೆ.. ಹರಿವ ನೀರಲ್ಲಿ ತನ್ನ ಪುಟ್ಟ ಕೈಗಳಿಂದದೋಣಿಗಳ ಬಿಟ್ಟುಅವು ಚಲಿಸುವ ಚಂದಕ್ಕೆಬೆರಗಾಗಿ ನಕ್ಕು ಹಗುರಾಗಿದೆ ಅರಳಿದ ನೆಲಸಂಪಿಗೆಯ ಕೇಸರಗಳಮುಟ್ಟಿ ನೋಡುತ್ತಹನಿ ಮುತ್ತಿಕೊಂಡ ದಳಗಳಸವರಿ ಇನ್ನಷ್ಟು ನಯವಾಗಿಸುತ್ತದೆ ಬೀಸುವ ತಂಗಾಳಿ ಅಲೆಯುವಎಲೆಗಳ ಜೊತೆ ಗುಟ್ಟುಗಳನಿಟ್ಟುಹೂವಿಂದ ಹೂವಿಗೆ ಅಲೆದುಪರಿಮಳವ ಹೊತ್ತೊಯ್ಯುತ್ತದೆ ಸಂಜೆ ಬಂದ ಮಳೆಗೆ ಖಾಸಾನೆಂಟರ ಕರೆದುತಾಜಾ ಮೀನುಗಳ ಹಿಡಿದುಊಟ ಬಡಿಸುವ ಭೂಮಿರಾತ್ರಿ ಪಟ್ಟಾಂಗ ಹೊಡೆದುಬದುಕಿನ ಖುಷಿಯ ದ್ವಿಗುಣಗೊಳಿಸುತ್ತದೆ ರಾಶಿ ರಾಶಿ ರಾಶಿ ಮೋಡಗಳು ಜಗದ ತುಂಬೆಲ್ಲಾ ಕವಿಯುವಾಗನವಿಲಿನ ಹಜ್ಜೆಗೆ ಗೆಜ್ಜೆದನಿಮೂಡಿ ಮುಸ್ಸಂಜೆಯ ಆಲಾಪಕ್ಕೆಶೃತಿ ಕೊಡುತ್ತದೆ ಕತ್ತಲಾಗಲಿ,ಜೀರುಂಡೆಗಳ ಸಂಗೀತ ಕಚೇರಿಕಪ್ಪೆಗಳ ಕರತಾಡನಹೊಯ್ಯುವ ಮಳೆ ಸದ್ದಿಗೆಭೂರಮೆಗೆ ಖುಷಿಯೋ ಖುಷಿ! ಹದಗೊಂಡ ಹಸೆಗೆಬೆದೆಗೊಂಡ ಭೂಮಿಹಸಿರುಕ್ಕಿಸಿ ಹಸನಾಗಿದೆಯಾಕೆಂದರೆ,ಕಾದು ಕಾದು ಕಾದು ಹೋಗಿದ್ದಈ ಧರೆಗೆ ಮತ್ತೆ ಮಳೆ ಬಂದಿದೆ.! ****** ಫಾಲ್ಗುಣ ಗೌಡ ಅಚವೆ
ಕಾವ್ಯಯಾನ
ಮೂಲ ಬಿಂದು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅದ್ಯಾವ ರೂಪದಲ್ಲಿ ಬಂದು ಸೇರಿತ್ತೋ?ಸಣ್ಣ ಸುಳಿವೂ ಇರಲಿಲ್ಲ ನೋಡುಹೆಡೆಯೆತ್ತಿ ಬುಸುಗುಟ್ಟದ ಹೊರತುಇರುವು ತಿಳಿಯುವುದಾದರೂ ಹೇಗೆ?ಮತ್ತೆ ಹಾಗೆ ಗೊತ್ತಾಗುವುದಕ್ಕೂಅದ್ಯಾವತ್ತೂ ಪ್ರಕಟವಾಗಲೂ ಇಲ್ಲ ಬಿಡು. ಅದೂ ಅಲ್ಲದೇ,ಇನ್ಯಾವತ್ತೋ ಹಠತ್ತನೇ ಎದುರಿಗೆ ಬಂದುಹಲ್ಲುಕಿಸಿದು, ನೋಡು ನಾನಿದ್ದೇನೆ; ಅದೂ ನಿನ್ನಲ್ಲೇ!ಅಂತ ಹೆದರಿಸುತ್ತದೆ ಅನ್ನುವ ಕಲ್ಪನೆಯಾದರೂಆವತ್ತು ಯಾರಿಗಿತ್ತು ಹೇಳು? ಯಾವುದೂ ಸುದ್ದಿಯಾಗಲಿಲ್ಲ,ಹಗಲು ರಾತ್ರಿ ಕತ್ತಲು ಬೆಳಕುಮೊಗ್ಗರಳಿದ್ದು ಹೂವಾದದ್ದುಉತ್ತು ಬಿತ್ತ ಮಣ್ಣಲ್ಲಿ ತೆನೆ ತೂಗಿದ್ದುಹಕ್ಕಿ ಹಾರಿದ್ದು ಕಪ್ಪೆ ಕೂಗಿದ್ದುಯಾವುದು ಕೂಡಾ,“ಅವನ ಆಣತಿ ಇಲ್ಲದೇ ಹುಲ್ಲುಕಡ್ಡಿಯೂಅಲ್ಲಾಡುವುದಿಲ್ಲ ಇಲ್ಲಿ…”ಎಲ್ಲದಕ್ಕೂ ಲೆಕ್ಕಾಚಾರವಿದೆ! ಆದರೆ,ಹಗುರವಾಗಿ ತೇಲುತ್ತಾ ಸಾಗುತ್ತಾ ಇದ್ದ ಬೆಳ್ಳಿ ಮೋಡಯಾವತ್ತೋ ಒಮ್ಮೆ ಕಪ್ಪಡರಿ ಘನೀಭೂತವಾಗಿ,ಸುರಿಸುರಿದು ಖಾಲಿಯಾಗುತ್ತದೆ;ಅಂತ ಯಾರಿಗೆ ತಾನೇ ಗೊತ್ತಿತ್ತು?ಎಲ್ಲ ತಡೆಗಳನ್ನು ದಾಟಿ ನಿಂತ ಅದರಆ ಮೂಲ ಬಿಂದುಅಸಲಿಗೆ ಇದ್ದುದಾದರೂ ಎಲ್ಲಿ? ಕಾಳಜಿಯ ಪರದೆಗಳಿಗೆ ಇದ್ದತೂತುಗಳು ಯಾರಿಗೂ ಕಾಣುವುದಿಲ್ಲ;ಅಷ್ಟೂ ಮೈಮರೆಯುತ್ತದೆ ಈ ಲೋಕಎಲ್ಲವೂ ತನ್ನದೇ ಅಧೀನ;ಅನ್ನುವ ಸಂಭ್ರಮದ ಭ್ರಮೆಯಲ್ಲಿಕುಳಿತುಬಿಡುತ್ತದೆ ಮೂಕ! ಎಲ್ಲೂ ನಿಲ್ಲದೇ ಸದಾಹರಿಯುತ್ತಿರುವುದೇ ನಾಕ;ಎಲ್ಲಾ ಗೊತ್ತಿದ್ದೂ,ಸುಮ್ಮನೆ ತಡೆದು ನಿಲ್ಲಿಸುತ್ತದೆಈ ಲೋಕ! ಯಾವುದನ್ನು ಕಟ್ಟಿಹಾಕಬಹುದಿಲ್ಲಿ?ಅದುಮಿಟ್ಟಷ್ಟೂ ಪುಟಿಯುವುದುಕತ್ತರಿಸಿದಷ್ಟೂ ಚಿಗುರುವುದುಬಂಧಿಸಿದಷ್ಟೂ ನೆಗೆಯುವುದು. ದಾಟುವುದೇ ಮನಸ್ಸಿನ ಹುಟ್ಟುಗುಣ;ಬೇಕಾಗಿರುವುದು ಒಂದು ನೆಪ ಮಾತ್ರ. *********
ನನ್ನೊಳಗೂ ಮಳೆ ವರುಣ ನೀಡಿದ ಸಿಹಿ ಚುಂಬನದ ಮಳೆ,ನನ್ನೆದೆಯ ಅಂಗಳದಲಿ ನಾಚಿವೆತನುಮನದ ಹೂಗಳುನನ್ನೊಳಗೂ ಮುಂಗಾರು, ಮೌನದ ಪರದೆಯೊಳಗೆಅವಿತ ಮಾತುಗಳುಎದೆಯ ನೆಲದಲಿ ಒಣಗಿದ ನೆನಪುಗಳಿಗೆ,ಕತ್ತಲೆಯ ಬೇಲಿ ದಾಟಿ ಹರಿದು ಬಂದಳುನನ್ನೊಳಗೂ ಮುಂಗಾರು ಮೊಗೆ ಮೊಗೆದು ಸುರಿದಳು ವಿರಹದ ಕಣ್ಣೀರು,ಬಚ್ಚಿಟ್ಟುಕೊಂಡ ಮಾತು ಬಿಚ್ಚಿಡುವ ಸಂತಸನನ್ನೊಳಗೂ ಮುಂಗಾರು ಋತುಗಳ ಕನವರಿಕೆಯಲಿಮಿಲನದ ಲವಲವಿಕೆಮತ್ತೆ ಮೌನವೇ ನಾಚಿತುಬಾಚಿ ತಬ್ಬಿತು,ವಸಂತನಕುಂಚದಲಿ ಮತ್ತೆ ಬಣ್ಣ ಬಣ್ಣದ ಚಿತ್ತಾರಗಳುನನ್ನೊಳಗೂ ಮುಂಗಾರು ಕನಸುಗಳು ಗೂಡು ಕಟ್ಟಿವೆಮನದ ಕೂಜನದಲಿ ಇನಿದನಿ ಕೇಳಿಸುತಿದೆಎಳೆಬಿಸಿಲ ರಂಗು ಕಾಡಿದೆಕಾಮನಬಿಲ್ಲಿನ ವರ್ಣಗಳಲಿ ನನ್ನೊಳಗೂಮುಂಗಾರು ಸುರಿದಿದೆ ನನ್ನೊಳಗೂ ಕವಿತೆ ಓಡಾಡಿದೆ,ಪ್ರೇಮ ಗೀತೆಗಳೆಲ್ಲ ಹರಯ ಕಂಡಿದೆನನ್ನೊಳಗೂ ಹೊರಗೂ ಮಳೆಯಾಗಿದೆ *********** ವೀಣಾ ರಮೇಶ್
ಮಳೆ ಹುಯ್ಯಲಿ ಜಾರಿದವು ಮುತ್ತಿನ ಹನಿಗಳು ಅಂಜಿಕೆಯಿಲ್ಲದೆನಭದ ಗೇರೆಗಳ ದಾಟಿ ಅನಂತದೆಡೆಗೆಅವಕೊಂದೆ ಚಿಂತೆ ಹನಿದ ಹನಿಗಳೆಲ್ಲಹಸಿರಾಗಲು ಕಾತರಿಸಿದ ಭವದ ಒಡಲ ಸೇರಿಹಿಗ್ಗಿ ನುಲಿಯಲು,ಬೆಸೆಯಲು ಆತುರಯಾವ ಹನಿ ಮುತ್ತಾಗುವುದೋಯಾವ ಹನಿ ನತ್ತಾಗುವುದೋಇಳೆಯ ಮೈಸಿರಿಗೆ ಒನಪಾಗುವುದೋಸಿಡಿಲು ಗುಡುಗಿನ ಆರ್ಭಟಕೆಬೆಚ್ಚಿ ಬಿದ್ದು ಸದ್ದಿಲ್ಲದೆ ಸರಿದೂಗಿಸಲುಉಬ್ಬು ತಗ್ಗುಗಳೆಲ್ಲ ಕೊಂಚ ಸಾವರಿಸಿದಂತೆಮಳೆಯ ತುಂತುರು ಹನಿಗಳಿಗಾಗಿಮೆಲ್ಲುಸಿರಿನ ಪ್ರೇಮಕ್ಕೆ ಹಂಬಲಿಸಿದಂತೆಬೆಂದು ಬಸವಳಿದ ಮನಕಿಂದು ಆನಂದಮೈಮನಕೆಲ್ಲ ಸುಗ್ಗಿಯ ಹಬ್ಬದೂಟದಂತೆಕಾರ್ ಮೋಡಗಳು ಬಿಗಿದಪ್ಪಿ ಬೆವರ ಹರಿಸಿಉನ್ಮದಾದ ಬಿಸಿಗಾಳಿ ಧರೆಯ ನಡುಗಿಸಿದಾಗೆಲ್ಲಎಂಥ..! ಸುಮಧುರ ಮಳೆಗಾಳಿ ಹೊಳಪುಕಾಗದದ ದೋಣಿ ತೇಲಿ ಬಿಟ್ಟ ನೆನಪುಆಣಿ ಕಲ್ಲು ಗಂಟಲಲಿ ಬಿಕ್ಕಿದಂತೆ ಹನಿಗಳುಮಣ್ಣಿನೊಳು ಮೇಳೈಸಿ ಗಂಧ ಪಸರಿಸಿದಂತೆಮಣ್ಣಿನ ಮಗನ ಮೊಗದಲ್ಲಿಂದು ಹೊಂಗನಸುಉತ್ತಿದಾ ಸತ್ವ ಬೀಜಕ್ಕೊಂದು ಚಿಗುರುತುತ್ತು ಕೂಳಿಗಾಗಿ ಹೋರಾಡುವ ಬದುಕಿಗೆಮಳೆಯೊಂದು ಅಮೃತ ಸುರಿಸಿದಂತೆ…ಹೊತ್ತೊಯ್ಯುವ ಮೋಡಗಳ ಚಿತ್ತದಲಿಬಿತ್ತುವ ಮನಕಿಂದು ಅಗಣಿತ ತಾರೆಗಳುಹೊಯ್ಯೋ ಹೊಯ್ಯೋ ಮಳೆರಾಯಇಳೆಯ ತಾಪದಲಿ ಚಿಗುರಲಿ ಹೊಸ ಕಾಯ… *********** ಶಿವಲೀಲಾ ಹುಣಸಗಿ
ಆಮಂತ್ರಣ ಒಣಗಿದೆದೆಯ ಬೆಂಗಾಡಿನಲಿ,ಭ್ರಮೆಯ ದೂಳಡಗಿಸುವಂತೆ,ಬಾ ಮಳೆಯೇ, ದಣಿವಾರದ ಮೂಲೆಯಲಿ,ಜೇಡಭಾವ ಜಾಡಿಸುವಂತೆ,ಬಾ ಮಳೆಯೇ, ಮನದ ಬಯಕೆ ಕತ್ತಲಲಿ,ಕರುಡು ಕಳೆವ ಬೆಳಕಂತೆ,ಬಾ ಮಳೆಯೇ, ಗದ್ದಲಗಳ ಗದ್ದೆಯಲಿ,ಹಸಿರೂಡಲು ನೇಗಿಲಂತೆ,ಬಾ ಮಳೆಯೇ, ನನ್ನ ಮನದ ಮೌನದಲಿ,ಹನಿಯ ಶಬ್ದ ಉಳಿವಂತೆ,ಬಾ ಮಳೆಯೇ, ಬದುಕ ಬಟ್ಟಲ ಬವಣೆಗಳಲಿ,ಉಕ್ಕಿ ಹರಿವ ಕರುಣೆಯಂತೆ,ಬಾ ಮಳೆಯೇ, ಒಂಟಿಯಾದ ಮನದಲಿ,ತಂಪನೀವ ಎಲರಂತೆ,ಬಾ ಮಳೆಯೇ, ಹನಿ ಹನಿಗಳು ಕಾಡುವಂತೆ,ಬಂದಗಳಿಗೆಗಳಿಗೆಲ್ಲ ಬೇಡಿಯಂತೆ,ಬಾ ಮಳೆಯೇ, ಬಾಯಾರಿದ ಪಯಣದಲಿ,ಇನಿಯನ ಜೇನದನಿ ಹನಿಯಂತೆ,ಬಾ ಮಳೆಯೇ, ಬರಿದೆ ಬೊಗಸೆಯಲಿ,ಎದೆ ತುಂಬಿದಾ ಕನಸು ಸುರಿವಂತೆ,ಬಾ ಮಳೆಯೇ, ಸತ್ತ ಕನಸುಗಳ ಮಧ್ಯದಲಿ,ಸೂಚಿ ಮಲ್ಲೆ ಅರಳುವಂತೆ,ಬಾ ಮಳೆಯೇ, ಮನದ ಮರುಭೂಮಿಯಲಿ,ಘನಿಕರಿಸಿದೆಲ್ಲ ಭಾವ ಕರಗುವಂತೆ,ಬಾ ಮಳೆಯೇ, *********** ಶಾಲಿನಿ.ಆರ್
ಮತ್ತೆ ಮಳೆಯಾಗಿದೆ ನಿನ್ನೊಲವಿನ ವರ್ಷಧಾರೆಗೆನನ್ನೊಳಗಿನ ನವಿಲುಗರಿದೆದರಿ ನರ್ತಿಸುತಿದೆಖುಷಿಗೆ ಪಾರವೇ ಇಲ್ಲದಂತೆ !ಮತ್ತೆ ಮಳೆಯಾಗಿದೆಕನಸು ಹೊಸದಾಗಿದೆ.. ಫಸಲಿಲ್ಲದ ಬಂಜರುಭೂಮಿಮುಂಗಾರಿನ ಸ್ಪರ್ಶಕೆ ತಾ ಚಿಗುರೊಡೆದಿದೆಒಡಲಕಾವ ತಣಿಸಿ ಹನಿಯ ಸಿಂಚನಕೆಬೀಜ ಮೊಳೆತು ಜೀವ ಅಂಕುರಿಸಿದೆ ಸತ್ತಬೇರುಗಳೆಲ್ಲ ಉಕ್ಕಿ ಮರುಕನಸುಸುಪ್ತ ಚೇತನದಲ್ಲಿ ಜಾಗೃತವಾಗಿದೆನಿಸ್ತೇಜದಿ ಜಡವಾಗಿದ್ದ ಬೇರುವರ್ಷ ಪೋಷಕಕ್ಕಾಗಿ ಹಂಬಲಿಸಿದೆ ಬೆಳೆದು ವೃಕ್ಷವಾಗಲೀಗ ಅದಕೊಂದುದೃಢರಕ್ಷಣೆಯ ಆಸರೆ ದೊರೆತಿದೆಜಾತಿಮತದಾಚೆಗಿನ ಸಹಬಾಳ್ವೆಯಲಿ ತಾನುಬೆಳೆದು ಹೆಮ್ಮರವಾಗ ಹೊರಟಿದೆ. ***** ಹೆಚ್.ಡಿ.ತೇಜಾವತಿ
ಮತ್ತೆ ಮರೆಯಾಗುವ ತವಕವೇತಕೆ ಮೋಡಗಳೆ ಮೋಡಗಳೆ ಏಕಿಷ್ಟು ಅವಸರ ಹೊರಟಿರುವಿರೇತಕೆ ತಿರುಗಿ ನೋಡದೇ . ಬಾನಂಗಳದಲಿ ಚಿತ್ತಾರ ಮೂಡಿಸಿ ಮತ್ತೆ ಮರೆಯಾಗುವ ತವಕವೇತಕೆ? ಒಂದು ಹನಿಯೂ ಸುರಿಸದೆ. ಬಾಯಾರಿದ ಭೂಮಿಯು ಬಾಯ್ತೆರೆದು ನಿಂತಿದೆ ನೀವು ಸುರಿಸುವ ಹನಿಗಳಿಗಾಗಿ. ಕವಲೊಡೆದಿದೆ ಮಣ್ಣು ಜೀವಜಲದ ಆಸೆಯಿಂದ ಅತ್ತಲೊ ಇತ್ತಲೊ ಒಮ್ಮೆ ಜೊರಾಗಿ ಗಾಳಿ ಬಿಸುತಿರಲು ಹೊರಟೆ ಬಿಟ್ಟಿರಾ ಗಾಳಿಯ ಜೊತೆಯಾಗಿ. ಭೂಮಿಯದು ನಳನಳಿಸುತಿದೆ ಹಸಿರು ಸೀರೆ ಯನು ಹೊದ್ದು ಸದಾ ಋಣಿಯಾಗಿಹೆ ನಾವು ಭೂತಾಯಿ ನಿಮಗೆ. ******* ಡಾ.ಪ್ರತಿಭಾ
ಚಿಲುಮೆ ಮಳೆಹನಿಗಡಿಯಾರದ ಮೂರು ಮುಳ್ಳುಗಳಿದ್ದಂತೆಕಾಲಕಾಲಕ್ಕೆ ತಿರುಗುತಿವೆಋತುಗಳು ಭಾಗವಾಗಿ ಬೇಸಿಗೆಯಲ್ಲಿ ಅದುಮಿಟ್ಟಶಿಶ್ನಮಳೆಯಲಿ ಚಿಗುರೊಡೆದುಪುಟಿದೇಳುತ್ತದೆ ಚಳಿಯಲಿಹಿಡಿತ ಮೀರಿ ಮುಪ್ಪಾಗದ ಯೋನಿಸ್ವಾಗತಿಸುತ್ತಿದೆಕಾಲದ ನಾಚಿಕೆ ಬದಿಗಿಟ್ಟುಅಲೆಯುತ್ತಿದೆ ಪಕ್ವಗೊಂಡ ಅಪ್ರಜ್ಞೆಬೆಡ್ ರೂಮ್ ಬಾತ್ ರೂಮ್ ಗಳಪರಿಧಿ ಆಚೆ ಮಿಡುಕಾಡುತ್ತಿದೆ ಮಳೆಹನಿಸರಿಸೃಪಗಳು ತಲೆಯೆತ್ತಿಹೆಡೆಯೆತ್ತಿತಣಿಸಿಕೊಂಡಂತೆ ಮೋಹಚಂದಿರನ ರಾತ್ರಿಯಲಿಪುಟಿವ ನೀರ ಚಿಲುಮೆಯಂತೆ ********* ದೇವು ಮಾಕೊಂಡ
ಮಳೆಗಾಲದ ಕನವರಿಕೆ ಮಳೆಗಾಲದ ರಾತ್ರಿಗಳಿಗೆಮಾರನೇ ದಿನಕ್ಕೆ ತಂಗಳುನಿದ್ದೆಯುಳಿಸುವ ಬಾಬತ್ತುಹೇಗೆ ಮಲಗಿದರೂಮುಂಜಾವಿನ ಕಾಲುಸೆಳೆತತಲೆಬಾಲವಿಲ್ಲದ ಉದ್ದುದ್ದಕನಸುಗಳ ಮುಸುಗುಒಂದೊಳ್ಳೆ ಸವಿಘಟ್ಟಕ್ಕೆಒಯ್ದು ನಿಲ್ಲಿಸಿದ ಕ್ಷಣವೇಫಳಾರನೆ ಗುಡುಗು- ಸಿಡಿಲುಯಾರ ಮನೆಯ ಮಾಳಿಗೆಯಮೇಲೋ ಕುಳಿತು ಗೊಳೋಅಳುವ ಬೆಕ್ಕುಅತ್ತಿತ್ತ ಹೊರಳಿದರೆಮಳೆಯಲ್ಲೇ ನಡುಗುತ್ತಾ ನೆನೆಯುತ್ತಾಸ್ವಿಗ್ಗಿ ಡೆಲಿವರಿ ಕೊಟ್ಟವನಕಣ್ಣೇಕೆ ನೋಡಲಿಲ್ಲ?ಮನೆಯೊಳಗೆ ಕರೆದುಬಿಸಿ ಕಾಫಿ/ ಕಷಾಯ ಕೊಟ್ಟುಕಳಿಸಬಹುದಿತ್ತೇನೋ!ಅಮ್ಮ ಹಸಿದ ಬೀದಿನಾಯಿಗೂಬಿಸಿಬಿಸಿ ಬೋಡುಪ್ಪಿಟ್ಟುಕೆಲವೊಮ್ಮೆ ಚೂರಿಷ್ಟು ಕಾಫಿಮೆಟ್ಟಿಲ ಕೆಳಗೆರಡು ಗೋಣಿತಾಟುಹೊಂಚುತ್ತಿದ್ದು ನೆನಪಾಗಿಮತ್ತೆಲ್ಲೋ ಎಳೆದು ನಿಲ್ಲಿಸುವಕಣ್ಣಮುಚ್ಚಾಲೆ ನೀರು ಕುಡಿ- ಕಾಲ್ತೊಳೆದುಮುದುರಿ ಮಲಗುಮತ್ತೆ ಹೊರಳಾಡಿಗಂಟೆ ಎಂಟಾಯ್ತೆಂದುದಡಬಡಿಸಿ ಓಡುಛೇ ಮಳೆಗಾಲದ ರಾತ್ರಿಗೆಏಕಿಂಥ ಮರುಳು? ಮಳೆಯೊಂದಿನ ಹನಿಯಾಗಿನದಿ, ಕೆರೆ, ಜಲಧಾರೆಯಾಗಿನೆನಪುಗಳ ಹಂಗಿಲ್ಲದೆಸಂಚರಿಸಬಾರದೆ ನಾನುಪುಟ್ಟ ಮಳೆಹನಿಯಾಗಿಚಂದ್ರಬಿಂಬದ ತೊಟ್ಟಿಲಾಗಿ ******** ಎಸ್ ನಾಗಶ್ರೀ
ಎರಡು ಮಳೆ ಕವಿತೆಗಳು ಮಳೆ ಸುರಿದೇ ಇದೆ ಮಳೆ ಬಾನ ಸಂಕಟವೆಲ್ಲ ಕರಗಿಕಣ್ಣೀರಾಗಿ ಇಳಿದಿದೆಯೇ ಹೊಳೆಇಳೆಯ ಅಳಲಿಗೆ ಎದೆ ಕರಗಿಸುರಿಸಿದೆಯೇ ನಭ ತನ್ನೊಲವ ಬಾನು ಬುವಿ ಒಂದಾಗಿಸಿದೂರಗಳ ಇಲ್ಲವಾಗಿಸಿಕಳೆಕೊಳೆ ಗುಡಿಸಿ ತೊಳೆತೊಳೆದು ತೊರೆ ಹರಿಸಿಸುರಿದಿದೆ ಮಳೆ ಬಿಸಿಲಬೇಗೆಗೆ ಬತ್ತಿ ಆಳಆಳ ನೆಲದಲ್ಲಿ ನೀರ ಪಸೆಗೆಚಾಚಿ ಚಾಚಿ ತುಟಿ ಬಸವಳಿದಬೇರಿಗೆ ಈಗ ಜೀವನ ಸೆಲೆಬಾನ ಕರುಣೆಗೆ ತಲೆಯೊಲೆದುತುಟಿಯೊಡ್ಡಿ ಹಿಗ್ಗುವ ಎಲೆ-ಎಲೆ !ಮೊಗ್ಗು ಹೂವು ಕೊಂಬೆಯ ಹಕ್ಕಿಮಣ್ಣಹುಳು ಎಲ್ಲಕ್ಕೂ ಈಗಜೀವ ಚೈತನ್ಯದ ಆವಾಹನೆ- ಅಲೆ ಉಳುವ ಊಡುವ ಮೂಡುವಚಿಗಿತು ಹೊಡೆ ತುಂಬಿಫಲಿಸುವ ಸಂಭ್ರಮವ ನೆಲದಕಣಕಣಕೂ ತುಂಬಿತುಂ ತುಂಬಿ ಹರಿಸಿ ಹರಸಿಉಸಿರಿನ ಮಂತ್ರ ಕಿವಿಯಲೂಡಿ‘ಧೋ ‘ ಶ್ರುತಿಯಲ್ಲಿಉಧೋ ಗತಿಯಲ್ಲಿನಾದವಾಗಿ ಮೋದವಾಗಿಸುರಿದು ಸುರಿಯುತ್ತಿದೆಇದೋ-ಮಳೆ ! ಸಂಜೆಮಳೆ ಪಾತ್ರವೇ ತಾನಾದ ನಟಮೊದಮೊದಲು ಗುಡುಗಿಸಿಡಿಲಾಡಿರೋಷಾವೇಶ ಕಳೆದುಕರುಣರಸವೇ ಮೈತಳೆದು ಕಣ್ಣಕೊನೆಯಲ್ಲಿ ಹಣಕಿದಕಂಬನಿ ಹನಿಹನಿ ಹನಿದುಇದೀಗ ಧಾರಾಕಾರ ಮುಖದ ಬಣ್ಣ ಕರಕರಗಿಕೊನೆಗೆ ಕಲಸಿದಬೂದು ಚಿತ್ರಗಳಾಗಿಇಳಿದಂತೆ ಮುಖದಿಂದಎದೆಗೆ, ನೆಲಕ್ಕೆ. ಸುರಿದಿದೆ ಸಂಜೆಮಳೆ-ಅಮೂರ್ತ ಚಿತ್ರಗಳಬಿಡಿಸುತ್ತಅಳಿಸುತ್ತಬರೆಯುತ್ತ… ********** ಡಾ. ಗೋವಿಂದ ಹೆಗಡೆ

