ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೆನಪುಗಳು

ಕಾವ್ಯಯಾನ ನೆನಪುಗಳು ಅಕ್ಷತಾ ಜಗದೀಶ ಮರಳಿ ಬಾರದ ಕ್ಷಣಗಳುನೆನಪಿನ‌ ಅಲೆಗಳಾಗಿಮತ್ತೆ ಮತ್ತೆ ಮನದ ಅಂಗಳದಿರಂಗವಲ್ಲಿ ಮೂಡಿಸುತಿದೆ… ನೋವು- ನಲಿವಿನ‌ ದಿನಗಳುನನ್ನವರೊಡನೆ ಕಳೆದ ಕ್ಷಣಗಳುಹುಡುಗಾಟದ ಬಾಲ್ಯವುಹುಡುಕಾಟದ ಯೌವನವು… ಅಮ್ಮನ ಬೆಚ್ಚನೆಯ ಅಪ್ಪುಗೆಅಪ್ಪನ ಅಕ್ಕರೆಯ ಮಾತುಗಳುಮರಳಿ ನೆನಪಾಗುತಿದೆಅಲೆಗಳಾಗಿ ಹೃದಯಕೆ ಅಪ್ಪಳಿಸುತಿದೆ… ಮನದ ಪುಟ ತಿರುವಿದಾಗನೆನಪಿನ ನೆನಪುಗಳೆಲ್ಲಾಕಣ್ಣೀರ ಹನಿಗಳಾಗಿ‌ ಹರಿದುಮರಳಿ ನೆನಪಿನ ಪುಟಸೇರಿ ಅಮರವಾಗಿದೆ……..

ನೆನಪುಗಳು Read Post »

ಕಾವ್ಯಯಾನ

ಗಜ಼ಲ್

ಗಜ಼ಲ್ ರಾಹುಲ ಮರಳಿ ನಿನ್ನ ನೋಟದಿ ನಶೆಯ ಅನುಭವಿಸುತಿರಲು ಮದಿರೆ ಬೇಕಾ ಸಖಿಮಧುಬಟ್ಟಲಿನ ಸುಖವು ನಿನ್ನ‌ ಅಧರದಲಿರಲು ಮದಿರೆ ಬೇಕಾ ಸಖಿ ಹುಣ್ಣಿಮೆ ಚಂದಿರನಂತೆ ಹೊಳೆವ ನಿನ್ನ ಸುಂದರ ಮೊಗವು ಕಣ್ಮುಂದಿದೆಏಕಾಂತದ ತಂಪಾದ ಹೊತ್ತಲಿ ನಿನ್ನೊಟ್ಟಿಗಿರಲು ಮದಿರೆ ಬೇಕಾ ಸಖಿ ಎರಡು ಕಾಮನ ಬಿಲ್ಲಿನ ನಡುವಿನ ನಾಸಿಕವು ಸಂಪಿಗೆಯಂತಿದೆರತ್ನದ ಮೂಗುತಿ ನಿನ್ನತ್ತ ಆಕರ್ಷಿಸುತ್ತಿರಲು ಮದಿರೆ ಬೇಕಾ‌ ಸಖಿ ಶಂಖುವಿನಂತಹ ಸುಂದರ ಕರ್ಣಗಳಲಿ ಓಲೆ ನಲಿದಾಡುತಿದೆಮನದ ಆಲಾಪನೆ ಕೇಳುವ ಕರ್ಣಗಳಿರಲು ಮದಿರೆ‌ ಬೇಕಾ ಸಖಿ ನಕ್ಷತ್ರದ ಹೊಳಪಿನಂತೆ ಹೊಳೆಯುವ ನಿನ್ನ ಅಕ್ಷಿಗಳ ತುಂಟಾಟಹುದುಗಿದ ಮನ್ಮಥನ ಗುಣವ ಕೆರಳಿಸುತಿರಲು ಮದಿರೆ ಬೇಕಾ ಸಖಿ ಇಬ್ಬರ ಬೆರಳುಗಳು ಬೆಸೆದು ಭಾವನೆಗಳ ಬಂಧ ಹೆಚ್ಚಿಸುತಿವೆಪ್ರಿಯತಮೆಯು ಮೈಮನವ ಅರ್ಪಿಸುತಿರಲು ಮದಿರೆ ಬೇಕಾ ಸಖಿ ಯೌವನದ ಶಾಖ ‘ಜೀವಕವಿಯ’ ರೋಮಗಳನೂ ರಂಗೇರಿಸುತಿದೆಮನದ ಕಾಮನೆ ಪೂರೈಸುವ ರತಿ ಜೊತೆಗಿರಲು ಮದಿರೆ ಬೇಕಾ ಸಖಿ *************************

ಗಜ಼ಲ್ Read Post »

ಕಾವ್ಯಯಾನ

ಪರಿಪೂರ್ಣತೆ

ಕಾವ್ಯಯಾನ ಪರಿಪೂರ್ಣತೆ ಪ್ರೊ ರಾಜನಂದಾ ಘಾರ್ಗಿ ಕಾಣಲಿಲ್ಲ ಮುಖದಲ್ಲಿಇಲ್ಲ ಹೆಸರಲಿ ಆಕಾರದಲ್ಲಿಪದವಿ ಪ್ರಶಸ್ತಿ ಗಳಲ್ಲಿಹುಡುಕುತ್ತಿರುವೆ ನಿನ್ನನ್ನು…ನೀ ಬರೆದ ಕವನಗಳಲ್ಲಿಓದುವ ಪುಸ್ತಕಗಳಲ್ಲಿತೊರುವ ಚಿಂತನೆಗಳಲ್ಲಿಬರೆಯುವ ಲೇಖನಗಳಲ್ಲಿನೀನಾಡುವ ಮಾತುಗಳಲ್ಲಿನೀಡುವ ವ್ಯಾಖ್ಯಾನಗಳಲ್ಲಿಬೇಟಿಮಾಡಿದ ತಾಣಗಳಲ್ಲಿನೋಡಿದ ನೋಟಗಳಲ್ಲಿಬೆಳೆಸಿದ ತೋಟಗಳಲ್ಲಿಅರಳಿದ ಹೂವು ಗಳಲ್ಲಿಹೂವು ಬೀರುವ ಸುಗಂಧದಲ್ಲಿಸ್ನೇಹಿತರ ಗುಂಪುಗಳಲ್ಲಿಅಭಿಮಾನಿಗಳ ಬಳಗದಲ್ಲಿನಿನ್ನ ಸುತ್ತುವರೆದ ಪರಿಸರದಲ್ಲಿಸಮಗ್ರತೆಯ ಪರಿಪೂರ್ಣತೆಯಲ್ಲಿ *********************

ಪರಿಪೂರ್ಣತೆ Read Post »

You cannot copy content of this page

Scroll to Top