ಪ್ರೇಮಪರವಶ
ಕಾಮನ ಬಿಲ್ಲಿನ ಬಣ್ಣಗಳ
ಸಂಭ್ರಮದಿ ನಲಿಯುತಿದೆ
ಪ್ರೇಮದ ರಂಗು….!
ಕಾಣೆಯಾಗಿದ್ದಾನೆ ದಿನದ ಒಡನಾಡಿ
ಉಗುಳುತಿದೆ ಆತ್ಮವ ಬೊಗಳಿ ಬೊಗಳಿ ದಿನದ
ನಾಯಿಯೂ
ಅಶೋಕ್ ಹೊಸಮನಿಯವರ ಕವಿತೆಗಳು Read Post »
ಗಜಲ್ ಪ್ರೊ.ರಾಜನಂದಾ ಘಾರ್ಗಿ ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು ಭಾವನೆಗಳ ಮತ್ತೇರಿ ಸುತ್ತಲ ಜಗವ ಮರೆಯುತ್ತಿರುವೆನನ್ನನೇ ಮರೆಯುವ ಮುನ್ನ ನನ್ನ ಅರಿವನ್ನು ಮರಳಿಸಿಬಿಡು ನಿನ್ನ ಮೋಹಕ ನಗೆಯ ಪಾಷದಲಿ ನರಳುತಿದೆ ನನ್ನ ಚೇತನಸಂವೇದನೆ ಸ್ಥಬ್ದವಾಗುವ ಮುನ್ನ ನನ್ನ ನಗುವನ್ನು ಮರಳಿಸಿಬಿಡು ಕಾಯುತಿರುವೆ ದೂರದ ದಾರಿಯಲಿ ಕಣ್ಣಿಟ್ಟು ಹಗಲಿರುಳುರಾತ್ರಿ ಕಳೆದು ಬೆಳಕಾಗುವ ಮುನ್ನ ಕಸಿದ ನಿದ್ರೆಯನ್ನು ಮರಳಿಸಿಬಿಡು ಕಳೆದುಕೊಂಡಿಹಳು ರಾಜಿ ತನ್ನನ್ನು ನಿನ್ನ ಅಂಧ ಪ್ರೀತಿಯಲಿಕಣ್ಣೀರು ಬತ್ತಿ ಕುರುಡಾಗುವ ಮುನ್ನ ಸುರಿದ ಪ್ರೀತಿಯನ್ನು ಮರಳಿಸಿಬಿಡು ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು ಭಾವನೆಗಳ ಮತ್ತೇರಿ ಸುತ್ತಲ ಜಗವ ಮರೆಯುತ್ತಿರುವೆನನ್ನನೇ ಮರೆಯುವ ಮುನ್ನ ನನ್ನ ಅರಿವನ್ನು ಮರಳಿಸಿಬಿಡು ನಿನ್ನ ಮೋಹಕ ನಗೆಯ ಪಾಷದಲಿ ನರಳುತಿದೆ ನನ್ನ ಚೇತನಸಂವೇದನೆ ಸ್ಥಬ್ದವಾಗುವ ಮುನ್ನ ನನ್ನ ನಗುವನ್ನು ಮರಳಿಸಿಬಿಡು ಕಾಯುತಿರುವೆ ದೂರದ ದಾರಿಯಲಿ ಕಣ್ಣಿಟ್ಟು ಹಗಲಿರುಳುರಾತ್ರಿ ಕಳೆದು ಬೆಳಕಾಗುವ ಮುನ್ನ ಕಸಿದ ನಿದ್ರೆಯನ್ನು ಮರಳಿಸಿಬಿಡು ಕಳೆದುಕೊಂಡಿಹಳು ರಾಜಿ ತನ್ನನ್ನು ನಿನ್ನ ಅಂಧ ಪ್ರೀತಿಯಲಿಕಣ್ಣೀರು ಬತ್ತಿ ಕುರುಡಾಗುವ ಮುನ್ನ ಸುರಿದ ಪ್ರೀತಿಯನ್ನು ಮರಳಿಸಿಬಿಡು
ಕಾವ್ಯ ಸಂಗಾತಿ ನೀನಿರದ ದಿನ ಲಕ್ಷ್ಮಿ ಕೆ.ಬಿ ನೀನಿರದ ದಿನಸೂರ್ಯ ಉದಯಿಸಲೇ ಇಲ್ಲ….. ಮೋಡಗಳೆಲ್ಲ ಅಲ್ಲಲ್ಲೇ ನಿಂತುಒಮ್ಮೆಲೆ ಚೀರುತ್ತಾಅಳಲಾರಂಭಿಸಿವೆ ಬಾನಿಗೂ ಭಯ ವೆಂಬಂತೆಗುಡುಗು-ಸಿಡಿಲು ಮಿಂಚುಹೆಚ್ಚಾದ ಹೃದಯಬಡಿತ ಗೂಡೊಳಗಿನ ಹಕ್ಕಿ-ಮರಿಗಳಿಗೂಚಳಿ ಶೀತ ಜ್ವರಹಾರಲಾಗದ ಹಕ್ಕಿಗೆ ಗಂಟಲು ಬಿಗಿತ ಕಾಮನಬಿಲ್ಲಿನ ಬಣ್ಣಗಳೂಕಾರ್ಮುಗಿಲ ನೆರಳಲ್ಲಿಕಳೆಗುಂದಿ ನಿಂತಿವೆ ಹಸಿರೂ, ಭುವಿಎಷ್ಟು ತಾನೇ ಸಹಿಸಿಯಾಳುಮುಗಿಲ ನೋವಾ ಎಷ್ಟು ನುಂಗಿಯಾಳು ಹಗಲಿಗಿಂದು ರಾತ್ರಿಯ ನೆರಳುರವಿಗೆ ಹಗಲಲ್ಲೇ ನಿದ್ರೆಯ ಮಂಪರುರಾತ್ರಿ ಚಂದ್ರಮನಿಗೆ ಮತ್ತದೇ ಕತ್ತಲು ಕತ್ತಲ ರಾಜ ಶಶಿಗೆ ಆಕಳಿಕೆ, ತೂಕಡಿಕೆಬಾನಿಗೆಲ್ಲ ಬೆಳಕ ಚೆಲ್ಲಿ, ನಿದ್ರೆ ಇರದೆನರಳಾಡುತ್ತಿದ್ದಾನೆಬಾನ ತುಂಬಾ ಹೊರಳಾಡುತ್ತಿದ್ದಾನೆ….
ಕಾವ್ಯ ಸಂಗಾತಿ ಅನುವಾದಿತ ಅಬಾಬಿಗಳು (೬ನೇ ಕಂತು) ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ)ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೩)ಮೊನ್ನೆ ರಥ ಇಂದು ವಿಗ್ರಹದಿನಕ್ಕೊಂದು ಹೊಸ ಯೋಜನೆದೇಶದಲ್ಲಿ ರಾಜಕೀಯ ಆಧ್ಯಾತ್ಮಿಕಹಕೀಮುಪ್ರಮಾಣಗಳಿಂದ ಪ್ರಸಿದ್ಧರಾಗುವ ಯೋಚನೆ. ೧೪)ದೇವಾಲಯವೋ? ವಿದ್ಯಾಲಯವೋ?ಎಲ್ಲಾದರೂ ಆಣೆಗಳನ್ನು ಮಾಡುವರುಅಸಲು ಆಣೆ ಅಂದರೇನು ಗೊತ್ತಾ?ಹಕೀಮುದೈವವೆಂದರೆ ಇವರಿಗೆ ಆಟದ ವಸ್ತುವೇನು? ೧೫)ಎಲ್ಲರಿಗೂ ತಿಳಿದ ರಹಸ್ಯವೇಪಕ್ಷಗಳ ದೌರ್ಭಾಗ್ಯದ ವಾಗ್ದಾನಗಳುಇಂದಿನ ರೌಡಿಗಳು ನಾಳೆಯ ನಾಯಕರೆ?ಹಕೀಮುದೇಶವೇ ಕಬ್ಜಾ ಆಗುತ್ತಿದೆಯೇನೋ!
ಅನುವಾದಿತ ಅಬಾಬಿಗಳು (೬ನೇ ಕಂತು) Read Post »
ಕಾವ್ಯ ಸಂಗಾತಿ ಒಂಥರಾ ಭಯ ಸಂತೆಬೆನ್ನೂರು ಫೈಜ್ನಟ್ರಾಜ್ ಬೆಳೆದಷ್ಟೂ ಭಯಬಿದಿರಿಗೆಬೆತ್ತ, ಬುಟ್ಟಿ, ಕೊಳಲಾಗುವ ಹುನ್ನಾರಕೆ* ಹರಿದಷ್ಟೂ ನದಿಗೆ ಭಯಸಾಗರದಿಕಳೆದೇ ಹೋಗುವ ದುಗುಡಕೆ* ಮಣ್ಣಲಿ ಮಲಗಿದಷ್ಟೂ ಬೀಜಕ್ಕೆ ಭಯಟಿಸಿಲೊಡೆದುಮಣ್ಣ ಬಂಧ ದೂರಾದೀತೆಂದು* ನಡೆದಷ್ಟು ಆತಂಕಗುರಿ ಮುಟ್ಟಿ ಮುಂದೆಮೈಲಿಗಲ್ಲಾಗಿ ತಟಸ್ಥನಾಗೋ ತುಮುಲ* ಒಲವೂ ಅಷ್ಟೇ ಪ್ರೀತಿಸಿದಷ್ಟು ಭಯಕಳೆದುಕೊಂಡುಒಳಗೇ ಸತ್ತು ಹೋಗಬಹುದೆಂದು!
ಕಾವ್ಯ ಸಂಗಾತಿ ದೀಪಾವಳಿ ಬಾಪು ಗ. ಖಾಡೆ ತಳಿರು-ತೋರಣದ ಚಿತ್ತಾರ ಬಾಗಿಲುರಂಗವಲ್ಲಿಯ ಸಿಂಗಾರ ಬಯಲುಸಡಗರ ಸಂಭ್ರಮ ಸುಳಿಸುಳಿದಾಡಲುಮನೆ-ಮನೆಯಲ್ಲಿ ದೀಪೋತ್ಸವ ಹೂ ಬಾಣ ಪಟಾಕಿ ಸುರು-ಸುರು ಬತ್ತಿಆಕಾಶ ಬುಟ್ಟಿಯ ಮಿನುಗುವ ಜ್ಯೋತಿಸಾಲು ದೀಪಗಳ ಹೊಣ್ಣಿನ ಕಾಂತಿಮನೆ-ಮನೆಯಲ್ಲಿ ದೀಪೋತ್ಸವ ನಗುಮೊಗದಿಂದಲಿ ನಾರಿಯರೆಲ್ಲರೂಬಂಧು-ಬಳಗಕೆ ಆರತಿ ಬೆಳಗಿಸವಿ ಸವಿ ಮಾತಲಿ ಸಿಹಿಯನು ಹಂಚಲುಮನೆ-ಮನೆಯಲ್ಲಿ ದೀಪೋತ್ಸವ ಮಹಾಲಕುಮಿಗೆ ಮಂಗಳದಾರುತಿಅಂಗಡಿಯಲ್ಲಿ ಹೊಸ ಲೆಕ್ಕದ ಪುಸ್ತಕಶುಭ ಕಾರ್ಯಕ್ಕೆ ಬಲಿಪಾಡ್ಯಮಿಮನೆ ಮನೆಯಲ್ಲಿ ದೀಪೋತ್ಸವ ಕಾರ್ತಿಕ ಮಾಸದ ಮಾಗಿಯ ಚಳಿಗೆಸಗ್ಗವೇ ಇಳಿದಿದೆ ನಮ್ಮೀ ಧರೆಗೆಚಿಣ್ಣರ ಕಣ್ಣಲ್ಲಿ ಬೆಳ್ಳಿಯ ಮಿಂಚುಮನೆ-ಮನೆಯಲ್ಲಿ ದೀಪೋತ್ಸವ
ಕಾವ್ಯ ಸಂಗಾತಿ ನೇಗಿಲು ಹೆಗಲು ಬದಲಾಗಿ ಮೋಹನ.ವಿ.ಹೊಸೂರ ಯಾರ ಬೀಜವೊಇನ್ನಾರದೋ ಗರ್ಭದಲಿಬಿತ್ತಿದ ಪರಿಯಲಿ ಸೇರಿಎಲ್ಲೋ ಇದ್ದವರು ನಾವುಮೊಳೆತು ಹೂ ಮಗುವಾಗರಳಿ ಹುಟ್ಟಿಸಿದ ಕಾರಣಕೆತಂದೆ ತಾಯಿ ಎನಿಸಿದವರಮಗುವಾಗಿ ಬೆಳೆದು ಆರೈಕೆಯಲಿಅರ್ಥ ಪೂರ್ಣ ಬದುಕು ಎಲ್ಲ ಸೇರಿನಮ್ಮದು ಒಂದೇ ಸಂಸಾರವಾಗಿ ಎಲ್ಲವೂ ನಾನುನನ್ನದೆಂಬ ಅಪ್ಯಾಯಮಾನದಲಿಬೆಳೆದು ನಲಿ ನಲಿದುಬಲಿತು ಮತ್ತೆ ಬೀಜವಾಗಿಇನ್ನಾರದೋ ಗರ್ಭದಲಿ ಮೊಳೆತುಇನ್ನೊಂದು ಜೀವಕೆ ಜೀವ ತುಂಬಿಧಾರೆಯೆರೆದು ಹೆಗಲ ನೊಗನೇಗಿಲು ಹೆಗಲು ಬದಲಾಗಿ ಬ್ಯಾಟನ್ ಒಪ್ಪಿಸಿ ರಿಲೇ ಆಟದ ರೀತಿನಾನು ನನ್ನದೆಂಬೆಲ್ಲವನೂ ಕೊಟ್ಟು ಬಿಟ್ಟುಕೋ ಕೋ ಆಟದಲಿ ಮುಟ್ಟಿ ಓಡುವ ನೀತಿಓಟ ಕೀಳೋ ಪರಿ ವಿಸ್ಮಯದಂತೆ ಬದುಕು
ನೇಗಿಲು ಹೆಗಲು ಬದಲಾಗಿ Read Post »
You cannot copy content of this page