ಪ್ರಶಾಂತ್ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!”
ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ಪ್ರೇಮ ಪ್ರಕರಣದ ತಪ್ಪಿತಸ್ಥರು..!” ಪ್ರೇಮದಲ್ಲಿನಾನು ತಪ್ಪು ಮಾಡಿದ್ದು ನಿಜಆದರೆನೀನು ನನ್ನನ್ನು ತಿದ್ದಬಹುದಿತ್ತು..!ಹಾಗೂಆ ಎಲ್ಲಾ ಅಧಿಕಾರವೂನಿನ್ನ ಬಳಿಯೇ ಇದ್ದವು..! ನೀನೋ ತಿದ್ದುವ ಭರದಲ್ಲಿಸ್ವತಃ ತಪ್ಪು ಮಾಡಿಬಿಟ್ಟೆಈಗ ನೀನು ಕೂಡ ನನ್ನಷ್ಟೇತಪ್ಪಿತಸ್ಥಳು..! ಪ್ರೇಮದ ಕೋರ್ಟಿನಲ್ಲಿಆತ್ಮಸಾಕ್ಷಿಯನ್ನು ಮುಂದಿರಿಸಿಕೊಂಡುಖಾಲಿ ಮಾತುಗಳ ವಕೀಲಿಕೆಯನ್ನುನಿನ್ನ ವಿರುದ್ಧ ನಡೆಸಲಾರೆಆಗಾಗಿನನ್ನ ತಪ್ಪುಗಳನ್ನು ಒಪ್ಪಿಕೊಂಡುಪ್ರಾಯಶ್ಚಿತ್ತವೆಂಬಂತೆಪ್ರೇಮದ ಸೆರಮನೆಯೊಳಗೆನಗುತ್ತಲೇಜೀವಾವಧಿ ಶಿಕ್ಷೆಗೆ ಒಳಗಾಗಿದ್ದೇನೆ..! ನೀನೋಮತ್ತೊಬ್ಬರ ಜಾಮೀನಿನಡಿಯಲ್ಲಿಹಳೆಯ ಪ್ರೇಮ ಪ್ರಕರಣವೊಂದರಆರೋಪಗಳೆಲ್ಲಾವನ್ನುತಳ್ಳಿ ಹಾಕುತ್ತಾನಿರಪರಾಧಿಯ ಸೋಗಿನಲ್ಲಿಬಿಡುಗಡೆಗೊಂಡಶಹರವೊಂದರ ಹಳೆಯ ಖೈದಿಯಂತೆಎಲ್ಲೆಲ್ಲೋ ಓಡಾಡುತ್ತಿರುವೆ..! ವಾಸ್ತವವೇನೆಂದರೆಪ್ರೇಮದ ಅಸಲಿಯತ್ತಿನಲ್ಲಿದಾವೆ ಹೂಡಲುಮೇಲ್ಮನವಿಯನ್ನು ಸಲ್ಲಿಸಲುಯಾವ ಕೋರ್ಟುಗಳೂ ಇಲ್ಲಒಮ್ಮೆ ತಪ್ಪು ಮಾಡಿದರೆ ಮುಗಿಯಿತುಸಾಯಬೇಕು ಅಥವಾಸಾಯುವ ತನಕ ಅದೇ ನೆನಪುಗಳನ್ನುಎದೆಯಲ್ಲಿಟ್ಟುಕೊಂಡು ನರಳಬೇಕು..! ಏಕೆಂದರೆಈ ಹಾಳು ಪ್ರೇಮ ಗ್ರಂಥಗಳಲ್ಲಿಯಾವ ಪ್ರಕರಣಗಳಿಗೂಆತ್ಮಸಾಕ್ಷಿಗಳ ಹೊರತಾಗಿಯಾವ ಕಾಯ್ದೆಗಳಾಗಲೀಕಲಮ್ಮುಗಳನ್ನಾಗಲೀಯಾರೊಬ್ಬರೂ ಕೂಡ ಇಲ್ಲಿಯವರೆಗೆ ಬರೆಯಲಾಗಿಲ್ಲವೆಂಬುದೆಇಲ್ಲಿನ ಒಂದು ಸೋಜಿಗ..! ಪ್ರಶಾಂತ್ ಬೆಳತೂರು
ಪ್ರಶಾಂತ್ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!” Read Post »









