ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ನಾ ಕಂಡ ಐರಲ್ಯಾಂಡ”
ಕಾವ್ಯ ಸಂಗಾತಿ ಜಯಶ್ರೀ ಎಸ್ ಪಾಟೀಲ “ನಾ ಕಂಡ ಐರಲ್ಯಾಂಡ” ಐರಲ್ಯಾಂಡದಲ್ಲಿ ಕಾಲಿಟ್ಟಾಗ ನಾವುಫ್ರಿಡ್ಜನಲ್ಲಿ ಹೋಗುತ್ತಿದ್ದಂತೆ ಭಾಸವುಮೋಡ ಕವಿದ ವಾತಾವರಣವುಜಿಟಿಜಿಟಿ ಮಳೆ ಗಾಳಿಯ ಅನುಭವವು ಹೊರಗಡೆ ಹೊರಟರೆ ನೋ ಡೌಟ್ಎರಡು ಪ್ಯಾಂಟ್ ಎರಡು ಶರ್ಟ್ಶೂಸ್ ಮತ್ತು ಸಾಕ್ಸ್ ಒಂದು ಜಾಕೆಟ್ನಮ್ಮ ಧಿರಿಸಿನಿಂದ ನಾವು ಸ್ಮಾರ್ಟ್ ತೆಗ್ಗುದಿನ್ನಿ ಇಲ್ಲದ ಸರಳ ದಾರಿಗಳುಮನುಷ್ಯರಿಗಿಂತ ಹೆಚ್ಚು ಕಾರುಗಳುದೊಡ್ಡ ಪ್ರಮಾಣದ ಮಾಲ್ ಕಟ್ಟಡಗಳುಒಂದೇ ತರಹದ ಮನೆಯ ವಿನ್ಯಾಸಗಳು ಚೆಂದ ಚೆಂದ ಉದ್ಯಾನವನಗಳುಹಚ್ಚಹಸಿರು ಹುಲ್ಲಿನ ಹಾಸಿಗೆಗಳುಅಲ್ಲಲ್ಲಿ ಕೂಡಲು ಕಲ್ಲಿನ ಆಸನಗಳುಹಸಿಯಿರಲು ನಿಂತು ಸೋತವು ಕಾಲುಗಳು ಶಿಸ್ತು ಸ್ವಚ್ಛತೆಗೆ ಪ್ರಾಮುಖ್ಯತೆ ಇದೆತಾಳ್ಮೆ ಪ್ರೀತಿ ಪರಸ್ಪರ ಸಹಕಾರವಿದೆನೀತಿ ನಿಯಮಗಳ ಪಾಲನೆಯಿದೆಪ್ರಾಣಿ ಪಕ್ಷಿಗಳಿಗೆ ಬಲು ಕಾಳಜಿಯಿದೆ ಪ್ರಕೃತಿಯ ಸೌಂದರ್ಯ ಅತಿ ಸುಂದರಧೂಳಿಲ್ಲದ ಸ್ವಚ್ಛ ಶುದ್ಧ ಪರಿಸರವಿವಿಧ ಬಣ್ಣದಲಿ ಕೆರೆ ನದಿ ಸಾಗರದಾರಿಯುದ್ದ ಚೆಂದದ ಕ್ರಿಸ್ಮಸ್ ಮರ ಜನರ ಮಾತಿನಲ್ಲಿ ಇಲ್ಲ ಧ್ವನಿ ಏರುಮಕ್ಕಳ ಮೇಲೆ ಮಾಡೋಹಾಗಿಲ್ಲ ಜೋರುತಮ್ಮ ಕೆಲಸ ತಾವೇ ಮಾಡುವ ಜಾಣರುನಿಯಮಪಾಲನೆಯಿಂದ ಚೆಂದ ಈ ಊರು ಜಯಶ್ರೀ ಎಸ್ ಪಾಟೀಲ,ಧಾರವಾಡ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ನಾ ಕಂಡ ಐರಲ್ಯಾಂಡ” Read Post »









