ಎನ್.ಜಯಚಂದ್ರನ್ ಅವರಕವಿತೆ”ಆರ್ಥನಾದ”
ಕಾವ್ಯ ಸಂಗಾತಿ ಎನ್. ಜಯಚಂದ್ರನ್ “ಆರ್ಥನಾದ” ದಟ್ಟ ಕಾನನದ ಮಡಿಲಲ್ಲಿ ಹುಟ್ಟಿದ ಕಾಳಿ ನದಿ,ಹಾರ್ನಬಿಲ್ ಪಕ್ಷಿಗಳ ಹಾಡಿಗೆ ತೂಗಿದ ನದಿ,ಮರಗಳ ನೆರಳಲ್ಲಿ ಹರಿದ ಕನಸು,ಹಸಿರು ಕಾಡಿನ ತತ್ವಉಸಿರೇ ಅವಳು. ಆದರೆ ಇಂದು ಯಂತ್ರಗಳ ಗರ್ಜನೆ.,ನಿಶ್ಶಬ್ದ ಕಾಡಿನ ನೋವಿನ ಘೋಷಣೆ.ಅಭಿವೃದ್ಧಿಯ ಹೆಸರಿನ ಕಲ್ಲಿನ ಗೋಡೆ,ನದಿಯ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಬೇಡಿ ?ಕಾಳಿ ಕಣಿವೆಯ ಮಡಿಲಲ್ಲಿ ಮೌನ, ಪ್ರಕೃತಿಯ ಹೃದಯದಲ್ಲಿ ಕಾಣದ ಗಾಯ.ಮೀನುಗಳ ಕನಸುಗಳು ಕಣ್ಣೀರಾದವು,ಪಕ್ಷಿಗಳ ಗಾನವೂ ಮೌನವಾದವು.ಈ ಸುಂದರ ಕಾಳಿಯ ಕಣ್ಣೀರ ಕಥೆ,ಕೇಳುವವರಿಲ್ಲದ ಪ್ರಕೃತಿಯ ವ್ಯಥೆ ಎನ್. ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.9740635196
ಎನ್.ಜಯಚಂದ್ರನ್ ಅವರಕವಿತೆ”ಆರ್ಥನಾದ” Read Post »









