ಕಾವ್ಯಯಾನ
ನಾಲ್ಕಾರು ಮಳೆ ಹನಿಗಳು: ದೇವು ಮಾಕೊಂಡ ಸಿಂದ್ಗಿ ನನಗೆ ನಾನೇ ಬಂಧಿಯಾಗಿರುವೆ ಎರಡು ಕಳ್ಳ ಹುದುಲಗಳ ನಡುವೆ ಸಿಲುಕಿ ಬೇರೆರಡರ ಇಕ್ಕಟಿನಲಿ ಬೆಳೆದ ಈಚಲು ಸಸಿಯ ಹಾಗೆ ವಿಶಾಲ ಭೂಮಿ ಬಾನುಗಳ ನಡುವೆ ತಳಕು ಹಾಕಿಕೊಂಡಿರುವೆ ಪರೀಧಿಯೊಳಗಿನ ಕೇಂದ್ರದ ಹಾಗೆ ಬೆಳಗು ಬೈಗು ಪ್ರೀತಿ ಇಮ್ಮಡಿಗೊಳ್ಳುತ್ತದೆ ಸೂರ್ಯ ಬಿಸಲ ಪ್ರಖರ ಶಾಖಗೆ ಕಾಮ ಕಸ್ತೂರಿ ಅರಳಿದ ಹಾಗೆ ಎಲ್ಲೋ ಎಸೆದ ಬೀಜ ಮೊಳಕೆಯೊಡೆದು ನನ್ನೊಳಗೆ ಹೂವು ಬಿಡುತ್ತಿದೆ ತಿಂಗಳ ಚಂದಿರ ಮೂಡಿದ ಹಾಗೆ ಇರುಳ ರಾತ್ರಿ ಪುಟಿದೇಳುತ್ತಿದೆ ವಿರಹ ಕರಕಲಾಗುತ್ತಿದೆ ಸುಟ್ಟು ಸುಟ್ಟು ಅನಾಥನ ಗರಡಿಯೊಳಗೆ ಸಿಲುಕಿ ಬೆಳದಿಂಗಳ ಮೋಹ ಕಾಮದ ಚಿಗುರನು ಹಿಪ್ಪಿ ಮಾಡುತ್ತಿದೆ ಹಿಂಡಿ ಹಿಂಡಿ ಮರಡಿ ಮಣ್ಣಲಿ ನಾಲ್ಕಾರು ಮಳೆ ಹನಿ ಬಿದ್ದ ಹಾಗೆ









