ಕಾವ್ಯಯಾನ
ಕಿಟಕಿ ದೀಪ್ತಿ ಭದ್ರಾವತಿ ನೀನು ನನ್ನಿಂದ ದೂರ ಸರಿದಿದ್ದೀಯೆಆದರೂ ಮೋಡದಅಂಚುಗಳಲಿನಾನು ನಿನ್ನನ್ನು ಕಾಣುತ್ತೇನೆ ಮುಸ್ಸಂಜೆ ಕೆಂಬಣ್ಣದಲಿ ನೆನಪ ಅಲೆಗಳುಓಕುಳಿಯಾಡುವಾಗಲೆಲ್ಲನಿನ್ನ ಮುಂಗುರುಳು ನನ್ನಕಣ್ಣಿನಲಿಇಣುಕಿದಂತೆ ಭಾಸವಾಗುತ್ತದೆ ವ್ಯಾಖ್ಯಾನಿಸುತ್ತೇನೆನಾನು ನಿನ್ನನ್ನು ಮರೆತಿದ್ದೇನೆ ಎಂತಲೇ..ಆದರೆಬಿಟ್ಟು ಹೋದ ಹೆಜ್ಜೆ ಗುರುತುಗಳಹಾದಿ ಮಳೆಗಾಲದಲಿ ಮಿದುವಾಗಿಬೇಸಿಗೆಯಲಿ ಒರಟಾಗಿಬೆರಳಿಗಂಟುವಾಗಅರ್ಧ ಬರೆದಿಟ್ಟ ಕವಿತೆಯೊಂದುಎದೆಯಲ್ಲಿ ಗೂಡುಕಟ್ಟುತ್ತದೆ ಮತ್ತೆ ಇನ್ನೆಂದು ನಿನ್ನ ಭೇಟಿಯಾಗುವುದಿಲ್ಲಎಂದೆ ನಂಬುತ್ತೇನೆ.ಮುಚ್ಚಿ ಎದ್ದು ಹೋದ ಕಿಟಕಿಯಲಿಬೆಳಕ ಗೀರೊಂದು ತಡತಡಕಿ ಬರುವಾಗನಿನ್ನ ಕಣ್ಣ ಮಿಂಚುಇರುಳ ಸರಳುಗಳತೂರಿ ನನ್ನೆಡೆಗೆ ಬಂದಂತೆ ಅನ್ನಿಸುತ್ತದೆ ಮತ್ತೆ ಮತ್ತೆ ನಿನ್ನ ನೆನಪುಗಳಬೇಕೆಂದೆ ದೂರ ಅಟ್ಟುತ್ತೇನೆಅವು ಜಾತ್ರೆಯಲಿ ಕೈ ಬಿಟ್ಟ ಕೂಸಿನಂತೆಬಿಕ್ಕುವಾಗಲೆಲ್ಲಹೆಕ್ಕಿ ಎದೆಯ ಕಪಾಟಿನಲಿ ಬಚ್ಚಿಟ್ಟುಕೊಳ್ಳುತ್ತೇನೆಮತ್ತವು ನಿನಗೆ ಕಾಣದೆದಿಕ್ಕು ತಪ್ಪಿಸುವಾಗನಗುವಿನ ಸವಕಲು ನಾವೆಯೊಂದುತಣ್ಣಗೆ ನನ್ನತ್ತ ತೇಲಿ ಬರುವುದುಕಾಣತೊಡಗುತ್ತದೆ *********









