ಕಾವ್ಯಯಾನ
ಜೋಗಿಗಳು ನಟರಾಜು ಎಸ್. ಎಂ. ಪಿತೃಪಕ್ಷದಿ ತಾತನ ಎಡೆಗೆಂದುಬಾಳೆ ಎಲೆಯ ಮೇಲೆ ಇಟ್ಟಿದ್ದಮುದ್ದೆ ಗೊಜ್ಜು ಅನ್ನ ಪಾಯಸದಪಕ್ಕ ಬಿಳಿ ಪಂಚೆ ಬಣ್ಣದ ಚೌಕಹುಳಿ ಹುಳಿಯಾದ ಬಿಳಿಯ ಯೆಂಡ ಬಾಡುಗ್ಲಾಸಿನ ಮೇಲೆ ಹಚ್ಚಿಟ್ಟ ಬೀಡಿ ಸಿಗರೇಟುತಟ್ಟೆಯಲಿ ದ್ರಾಕ್ಷಿ ಬಾಳೆಯ ಜೊತೆಒಂದೆರಡು ಕಿತ್ತಳೆ ಸೇಬುಇವೆಲ್ಲದರ ಮಧ್ಯೆ ಅವಿತು ಕುಳಿತಿರುವಅರಿಸಿನ ಕುಂಕುಮ ವಿಭೂತಿ ಬಳಿದಕಂಚಿನ ದೇವರ ಜೊತೆ ಪುಟ್ಟ ತ್ರಿಶೂಲಗೋಡೆಯ ಹಲಗೆಯ ಮೇಲೆಜೋಡಿಸಿಟ್ಟ ಚಾಮುಂಡಿ ಶಿವ ಪಾರ್ವತಿಡೊಳ್ಳು ಹೊಟ್ಟೆ ಗಣೇಶನ ಚಿತ್ರಪಟಎಲ್ಲವೂ ಅಲಂಕೃತ ಕಟ್ಟಿದ ಕಾಕಡಕನಕಾಂಬರ ಚೆಂಡೂವುಗಳಿಂದ ನಾಟಿ ಹೆಂಚಿನ ಒಳಗೆ ಕೆಂಡದಲಿಘಮ ಘಮಿಸೋ ಸಾಂಬ್ರಾಣಿಅಕ್ಕಿ ತುಂಬಿದ ಲೋಟದಲ್ಲಿ ಉರಿಯುತ್ತಿರೋಸೈಕಲ್ ಗುರುತಿನ ಅಗರಬತ್ತಿಬಾಯಿಗೆ ಟವೆಲ್ ಕಟ್ಟಿ ನಿಂತ ಜೋಗಯ್ಯನಸುತ್ತ ಮುತ್ತ ನೆರೆದ ಮನೆ ಮಂದಿನೀರ್ ಚಿಮುಕಿಸಿ ಗಂಧದ ಕಡ್ಡಿಯ ಘಮ ಸೋಕಿಸಿವೀಳ್ಯದೆಲೆಯ ತುದಿ ತೊಟ್ಟು ಕಿತ್ತುಬಾಳೆಹಣ್ಣಿನ ತುದಿ ಮುರಿದುಒಡೆದ ತೆಂಗಿನ ಕಾಯಿಯ ಎಳನೀರುತೀರ್ಥಕ್ಕೆಂದು ಲೋಟದಿ ಭರ್ತಿಉರಿಯುವ ಕಡ್ಡಿ ಕರ್ಪೂರದ ಬೆಳಕಿಗೆಹೊಳೆಯುತ್ತಿರುವ ದೇವರ ವಿಗ್ರಹಜೋಗಯ್ಯನ ಗಂಟೆಯ ಸದ್ದಿನ ಜೊತೆಅವನ ಮಗನ ಜಿಂಕೆ ಕೊಂಬಿನ ನಾದಕೆಮನಸೋತು ಕಣ್ಮುಚ್ಚಿ ಕೈ ಮುಗಿದ ಭಕ್ತ ವೃಂದ ಮಂಗಳಾರತಿ ತಟ್ಟೆಗೆ ಟಣ್ ಎಂದುಬೀಳುತ್ತಿದ್ದ ನಾಲ್ಕಾಣೆ ಎಂಟಾಣೆ ಜಾಗದಲ್ಲೀಗರೂಪಾಯಿ ಒಂದು ಎರಡು ಐದರ ಸದ್ದುಮುಖಕ್ಕೆ ಬಿದ್ದ ತೀರ್ಥಕ್ಕೆ ಬೆಚ್ಚಿಅಳುವ ಕಂದನ ದನಿಗೆ ಮನೆಯವರ ನಗುಜೋಗಯ್ಯ ಹಾಕುವ ತೀರ್ಥಕ್ಕೆ ಕೈ ಒಡ್ಡಿನಿಂತವರ ಬಲಗೈಗೆ ಬಿದ್ದ ತೀರ್ಥಅರ್ಧ ಹೊಟ್ಟೆಗೆ ಉಳಿದರ್ಧ ತಲೆಗೆದೇವರಿಗೆ ಕಡ್ಡಿ ಹಚ್ಚಿ ಕೈ ಮುಗಿದುಉರಿವ ಕರ್ಪೂರದ ತಟ್ಟೆ ಬೆಳಗಿಅಡ್ಡ ಬಿದ್ದ ಭಕ್ತರ ಹಣೆಗೆ ಜೋಗಯ್ಯನಬೆರಳುಗಳಿಂದ ವಿಭೂತಿಯ ಮೂರು ಪಟ್ಟುಹಿರಿಯರು ಬಂದು ಎಡೆ ಮುಟ್ಟಲಿ ಎಂದಾಗಮನೆಯವರೆಲ್ಲಾ ಮನೆಯಿಂದ ಹೊರ ಬಂದುಬಾಗಿಲು ಮುಚ್ಚಿ ಒಂದೈದು ನಿಮಿಷ ಮೌನನಂತರ ಮನೆ ಹೊಕ್ಕು ನೆಂಟರಿಷ್ಟರ ಜೊತೆಮನೆ ಮಂದಿಗೆ ಪಿತೃಪಕ್ಷದ ಮೃಷ್ಟಾನ್ನ ******









