ಬೇರುಗಳು
ಕವಿತೆ ಪೂರ್ಣಿಮಾ ಸುರೇಶ್ ನಸುಕಿನ ಮೌನಹಳೆಯ ಹಾದಿಗೆಹೆಜ್ಜೆ ಜೋಡಿಸಿದೆ ಅದೇಆಚೆ ಬದಿ ಅಶ್ವತ್ಥ ಈ ಬದಿ ಆಲ ಆಲದ ಜಟಿಲ ಬಿಳಲುಗಳುನೇತಾಡಿದ್ದುಮಣ್ಣ ಪಾದಗಳು ತೇಲಿ ಅಗಸವಸ್ಪರ್ಶಿಸಿಮುದಗೊಂಡಿದ್ದುಎಲೆ ಮರೆಯ ಗೂಡಿನ ಹಕ್ಕಿಗಳಗಂದರ್ವವಾಣಿಗೆ ಪ್ರತಿಧ್ವನಿಸಿದ್ದೂಗುಲಾಬಿ ಅಂಗೈ ದೊರಗು ಸೆಳೆತಕೆಕೆಂಪಾಗಿದ್ದುಪುಟ್ಟ ಉರಿ ಸುಡುತ್ತಿದ್ದರೂ ಆಕರ್ಷಣೆ ! ಮತ್ತೆಮತ್ತೆತೂಗಿ ಬಿದ್ದದ್ದುತರಚಿದ್ದು.. ಈ ಅಶ್ವತ್ಥ!ಪುಟ್ಟ ಮನಸಿಗೆ ನಿಲುಕದದೊರಗು ದೇಹಆಗಸದ ಅಖಂಡ ಮೌನಕೆತನ್ನ ಧ್ಯಾನ ತುಣುಕುಗಳ ಸಿಲುಕಿಸಿಅನುಸಂಧಾನಗೈವಎಲೆಗಳು ಸುತ್ತು ಸುತ್ತಿದ್ದುಹತ್ತಿರದ ಪುಟ್ಟಗಿಡದ ಹಸಿರಪರಪರ ಎಳೆದುಹರಿದುಮನೆಯಾಟಕೆ ಅಡುಗೆತಯಾರಾಗಿದ್ದು.. ಕೈಗೆ ಹಸಿರು ರಸಕಾಲಲ್ಲಿ ಮಣ್ಣು ತೇವ ಆಲ-ಅಶ್ವತ್ಥಆಳಕ್ಕಿಳಿಸುತ್ತವೆಬೇರುಒಳಕೂಗುಅಕ್ಷರವಾಗಲು ತುಡಿಯುತ್ತವೆ.ಬೆಳಕಾಗಿ ಪೊರೆಯುತ್ತದೆಜೀವಂತಿಕೆಯ ಜಗದಗಲ ತೆರೆಯುತ್ತದೆ. ************************************









