ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯನ

ಕಾಪಾಡಬೇಕಿದೆ ರಾಮಕೃಷ್ಣ ಸುಗತ ನೀವು ಆಯ್ಕೆ ಮಾಡಿದ್ದೀರಿ ಫಲವತ್ತಾದ ಮಣ್ಣನ್ನುಅಷ್ಟೇ ಆಸ್ಥೆಯಿಂದ ಬೆಳೆಸಿದ್ದೀರಿ ಹೂವಿನ ತೋಟವನ್ನುಕರೆಸಿದ್ದಿರೇನು ನಿಮ್ಮದೇ ದೇವಲೋಕದ ವರ್ಣಕರನ್ನುಎಷ್ಟು ಬಣ್ಣ ಬಣ್ಣದ ಹೂಗಳುತಿಳಿಯುತ್ತಿಲ್ಲ ಅವುಗಳ ವಾಸನೆನೀವು ಆಯುವಂತರು ಸ್ವಾಮಿಎಂದೋ ಕೊಯ್ದು ಬಿಟ್ಟಿದ್ದೀರಿ ನಮ್ಮ ಮೂಗನ್ನು ಮನೆಯ ಹಿಂಭಾಗದಲ್ಲಿ ಹುಲ್ಲು ಬೆಳೆದಿದ್ದಕ್ಕೆನೀವು ದೂರು ಕೊಡುತ್ತೀರಿನೀವು ಪುಣ್ಯವಂತರು ಸ್ವಾಮಿನೀವು ಕಾಲಿಟ್ಟು ಹೋದ ನಮ್ಮದೇ ಓಣಿಗಳಲ್ಲಿಎಲ್ಲೋ ಮೂಲೆಯಲ್ಲಿ ಚಿಗುರುವ ಚಿಗುರಿಗೂಅರ್ಜಿ ಹಾಕುತ್ತಿದ್ದೇವೆ ಅನ್ಯಗ್ರಹ ಜೀವಿಗಳಂತೆ ಪ್ರೀತಿಯೆಂದರೆ ಕುದಿಯುವ ನಿಮ್ಮನ್ನುಚಳಿಗಾಲದ ತಂಪು ರಾತ್ರಿಗಳು ಏನೆಂದು ಕಾಡಿಯಾವುನೀವು ಆರೋಗ್ಯವಂತರು ಸ್ವಾಮಿನಾವು ಬೆಚ್ಚಗೆ ಮಲಗಿದರೆನಿದ್ರಾಹೀನತೆಯಿಂದ ಬಳಲುತ್ತೀರಲ್ಲಾಕನಿಷ್ಠ ನಮ್ಮ ಮನೆಗೆ ಬೆಂಕಿ ಹಚ್ಚುವಾಗಲಾದರೂಬಿಸಿಲಿಗೆ ನಿಂತುಕೊಳ್ಳಿ ಸರಿ ನಾನಿನ್ನು ಬರುತ್ತೇನೆಎದೆಯಲ್ಲಿ ಉಗಿಯ ಬಂಡಿಯೊಂದು ಓಡುತ್ತಿದೆನಿತ್ಯವೂ ನೋವು ಹೊತ್ತು ಸಾಗುತ್ತಿದೆಯಾರೋ ಕಟ್ಟಿಟ್ಟ ನಿಲ್ದಾಣಕ್ಕೆನನ್ನ ಹೆಸರಿಟ್ಟಿದ್ದಾರೆಇದೀಗ ನಾನು ಇಳಿಯಲೇಬೇಕಿದೆಹಳಿಯನ್ನೇ ಕಸಿವವರ ಮಧ್ಯೆ ಸರಕನ್ನು ಕಾಪಾಡಬೇಕಿದೆ **********

ಕಾವ್ಯಯನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪೆಂದರೆ… ವಸುಂಧರಾ ಕದಲೂರು ಆಗ ನಿನ್ನ ನೆನಪೆಂದರೆ, ಬೇಕಾದ ಮಳೆಯಂತೆತುಂಬಿಕೊಳ್ಳಲು ಹಳ್ಳಕೊಳ್ಳಜಲಾಗರ ಸಾಗರ;ಮುತ್ತುಹವಳ ಸಂಗ್ರಹಾಗಾರ. ಅಚ್ಚಬಿಳುಪಿನ ಕಾಗದದಲಿನೆಚ್ಚಿನ ಅರ್ಥ ತುಂಬಿದ ಭಾವಕೋಶಅಚ್ಚುಕಟ್ಟಾಗಿ ಅಚ್ಚು ಮಾಡಿಸಿದಪದಕೋಶ.. ಈಗ ನಿನ್ನ ನೆನಪೆಂದರೆ, ಅಕಾಲದಲ್ಲಿ ಮಳೆಗರೆದು ಆದರಾಡಿ ರಸ್ತೆಅರ್ಥಕೋಶದಲಿ ಸೇರಿಬಿಟ್ಟಖಾಲಿ ಹಾಳೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಂದು ಕವಿತೆ ಎಂ.ಎಸ್.ರುದ್ರೇಶ್ವರ ಸ್ವಾಮಿ (he ran away from there, he preferred her. she shouted – listen, I am older than you… was he too young for her?) ನಿನ್ನೆ ಮೊನ್ನೆಯಿಂದ ಮುನಿದುದೂರವೇ ಇದ್ದಅವಳು, ಮತ್ತೆ ಬಂದು ಮಕ್ಕಳ ಆಟಆಡೋಣವಾ? ಎಂದು,ಮಗುವಿನ ಹಾಗೆ ಕೇಳಿದಳು. ಭಾಷೆ, ಮಾತಿನಅರ್ಥದ ಜಾಡು ಹಿಡಿದು ವಿಶ್ಲೇಷಣೆಗೆಸಿದ್ಧವಾಯಿತು; ಮಗುವಿನಹಾಗೆ, ಮಗುವಲ್ಲ ಅವಳು. ಮನಸ್ಸು ನದಿ-ಯ ಹಾಗೆ ಹರಿಯುತ್ತಲೇ ಹಿಂತಿರುಗಿನೋಡಬಲ್ಲದು.ಗೌರಿಶಂಕರದ ಕನಸುಕಾಣುತ್ತ ಮಳೆಯಾಗಿ ಇಳೆ ಸುತ್ತಬಲ್ಲದು. ಮಕ್ಕಳ ಆಟ ಆಡೋಣವಾ?ಮತ್ತೆ ಕೇಳಿದಳು. ಒಂದು ಮೆಟಾಫರ್-ಗಾಗಿ ಕಾಯುತ್ತಿದ್ದನನಗೆ, ಗತಿಸಿದದಿನಗಳು ಕಣ್ಣ ಮುಂದೆಥಕ ಥಕನೆಕುಣಿಯಹತ್ತಿದವು. ಅವಳು ನನಗಿಂತಒಂದು ವರ್ಷಕ್ಕೆದೊಡ್ಡವಳು, ಐದು ಇರಬಹುದು,ನನಗೆ ನಾಲ್ಕು.ನಮಗೆಲ್ಲ ಅವಳೇ ಲೀಡರ್. ಅವಳ ಜೊತೆಹುಡುಗಿಯರು; ನಾನಿದ್ದಲ್ಲಿಹುಡುಗರು. ಅದಕ್ಕೇಅವಳು ನನ್ನನ್ನೇಕೇಳಿದ್ದು. ಮದುವೆ-ಆಟ ಆಡೋಣ, ಎಂದು. ಬಟ್ಟೆಯಲ್ಲಿ ಗೊಂಬೆ-ಮಾಡಿ, ಆಟ ಶುರು…ನೀನು ಮದುವಣಿಗ,ಗೌರಿ ಮದುವಣಗಿತ್ತಿ, ಎಂದು ಹೇಳುತ್ತ,ಕೈ-ಹಿಡಿದು ನಮ್ಮಿಬ್ಬರನ್ನೂ ಕೂರಿಸಿಅರಿಸಿನದ ನೀರು-ಹಾಕುವ ಶಾಸ್ತ್ರಶುರು ಆಗುತ್ತಿದ್ದಂತೆ, ಅಲ್ಲಿಂದ ಎದ್ದು, ನೀನುಹೆಂಡತಿ ಆಗುವುದಾದರೆ,ಸರಿ. ಇಲ್ಲ, ನಾನು ಆಟಕೆಡಿಸುತ್ತೇನೆಎಂದು, ಸಿಟ್ಟಿನಿಂದ ಅವಳಿಗೆ ಹೇಳಿ ಕಾಲುಕಿತ್ತೆ. ಕಿರುಚಿ ಕೂಗಿದಳು, ನಾನು –ದೊಡ್ಡೋಳು ಕಣೋ, ನಿನ್ನ ಹೆಂಡತಿಆಗುವುದಕ್ಕೆ…. *********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ನೆನಪು ಮರೆಯಲು ಮದಿರೆಯ ಸಂಗ ಮಾಡಿದ್ದೆ ಸಖಿವ್ಯಸನ ತೊರೆಯಲು ಸುರೆಯ ಹಂಗ ಬಿಡದಾಗಿದೆ ಸಖಿ ಮಧುವಿನ ದಾಸನಾಗಿ ದಾಸ್ಯದಿ ಬದುಕ ನೂಕುತಿರುವೆತುಟಿಯಂಚಿಗಿಟ್ಟ ಬಟ್ಟಲಿನಲ್ಲಿ ನೀನು ಕಾಣುತಿರುವೆ ಮರೆಯದಾಗಿದೆ ಸಖಿ ನೀರವ ಮೌನದ ಕತ್ತಲೆಯಲಿ ಸಿಗಬಹದೆಂದು ಹುಡುಕಿರುವೆಶರಾಬಿನ ಸಿಸೆಯೊಳಗೂ ನಿನ್ನದೆ ಬಿಂಬವ ಕಾಣುತಿದೆ ಸಖಿ ಮರೆಯಲಾಗದ ಹವ್ಯಾಸ ನನ್ನನು ಬೆಂಬಿಡದೆ ಕಾಡಿದೆಅವಳನು ಮರೆಯುವ ಮಾತಾಡಿಮಿಣುಕು ದೀಪದ ಮುಂದೆ ಕುಳಿತಿದ್ದೆ ಸಖಿ ಸುರಪಾನದ ಸುಖದಲಿ ತೇಲಾಡಿ ನೊಂದ ಮರುಳನು ಮರುಗುತಿರುವನುಆದದ್ದೇಲ್ಲ ಮರೆತು ಹೊಸಬಾಳ್ವೆಗೆ ಹೊಂದಿ ನಡೆಯ ಬೇಕೆಂದಿದ್ದೆ ಸಖಿ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜಕ್ಕವಕ್ಕಿಗಳು ಕಮಲಾ ಹೆಮ್ಮಿಗೆ ೧. ನೆನಪಿದೆಯೆ ನಿಮಗೆ ಕಣವಿಯವರೆ      ಜಯನಗರದ ಹಳಿ ದಾಟಿದರೆ      ಹಳದೀ ಹೂವು ಚೆಲ್ಲಿದ ರಸ್ತೆ      ‘ ಚೆಂಬೆಳಕು’! ಹಕ್ಕಿ ಗೂಡಂಥ ನಿಮ್ಮ ಮನೆ      ಆಚೀಚೆ ಕೂತ ನೀವುಗಳು,ನಡುವೆ      ಬೂದಿ ಮುಚ್ಚಿದ ಕೆಂಡದಂಥ ನಾನು….ಮಧ್ಯೆ ವ್ಯಸ್ತ,ಮೂಸಿನೋಡುವ ನಿಮ್ಮ ‘ಗೂಫಿ’ನಾಯಿ!……….             ಗುಟುಕರಿಸುತ್ತ ಚಹಾ,ಮಾತು,ಬದುಕಿನ ಪಾಡು…………………………         ಜsರ್ ಮಳೆಯಿದ್ದಲ್ಲಿ, ದಾಟಿಸುತ್ತಿದ್ದಿರಿ ಬ್ರಿಡ್ಜು,ಛತ್ರಿ ಹಿಡಿದು….. ೨.  ನಿಮ್ಮ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲೊಮ್ಮೆ       ಓದಬೇಕಿತ್ತು ನಾನೂ,ಒಂದು ಕವಿತೆ       ರೈಲಲ್ಲಿ ಒಂದೇ ಬೋಗಿ….ಧಡಖ್ ಧಡಖ್       ಧಡಖ್ ಧಡಖ್….. ಮೆಲ್ಲಗೆ ಬಂದಿರಿ ಲಯಕೆ ತಕ್ಕಂತೆ..‌..       ‘ ಮನಿಯವರು ನಿಮಗು ಬುತ್ತಿ ಕಟ್ಯಾರೆ’ ಎಂದಾಗ, ಒಣರೊಟ್ಟಿ ಬದಿಗೆ ಸರಿಸಿದ್ದೆ ನಾನು…… ನೀವು ನೀಡಿದಿರಿ ಚಪಾತಿ, ಮೊಸರನ್ನ ಮತ್ತು    ಹೆಚ್ಚಿಟ್ಟ ಹಣ್ಣಿನ ವಾತ್ಸಲ್ಯದ ಹೋಳು,ಮಿನುಗಿತ್ತು ಕಣ್ಣು…… ೩. ಕಳೆದಬಾರಿ,ಕಲ್ಯಾಣನಗರಕ್ಕೆ ಬಂದಾಗ    ‘ ಕವಿನೆರಳು’! ನೀವೇ ಒಳಹೋಗಿ ಚಹ ತಂದಿರಿ.     ‘ ಇವರಿಗೆ ಮಂಡೀನೋವು,ಸದ್ಯ ನನಗಿಲ್ಲ’ ….ನಕ್ಕಿರಿ….. ಹೊರಡುವಾಗ ಅಚಾನಕ ಕಾಲಿಗೆರಗಿದೆ ನಾನು…. ಅಸ್ಪಷ್ಟ ಏನೋ ಉಲಿದಿರಿ,ತುಂಬು ಮನದಿಂದ ನೀವು! ೪. ಈಗ  ‘ಹಾರಿತು ಜಕ್ಕವಕ್ಕಿಗಳಲ್ಲೊಂದು’ ಎಂದಾರು,  ಆಲಂಕರಿಕವಾಗಿ ಮಂದಿ! ಒಂಟಿಹಕ್ಕಿ ನೆನಪು ಹಾರೀತು  ಆದರೆ ……..ನೀವು? —–    ಜsರ್ — ಒಂದುವೇಳೆ ,  ಕವಿನೆರಳು Twilight (ಹಿರಿಯ ಲೇಖಕಿ ಶಾತಾದೇವಿ ಕಣವಿಯವರು ತೀರಿದ ಸಂದರ್ಭ)

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನದೇ ಜಪದಲ್ಲಿ ವೀಣಾ ಪಿ. ಏಕಪತ್ನಿ ರಾಮನಿಗೆ ವನ-ವೈಭೋಗಗಳಲಿಅನ್ಯ ಸ್ತ್ರೀಯಿಲ್ಲ ಸತಿ ಸೀತೆ ಹೊರತು.. ಕೃಷ್ಣನನೆದೆಯಲ್ಲಿ ಅನುರಣಿತ ರಾಗದಲಿಅನ್ಯ ಪ್ರೇಮವದಿಲ್ಲಅನುರಾಗಿ ರಾಧೆ ಹೊರತು.. ಮೀರಾ-ಶಬರಿಯರಲ್ಲಿ ಅನ್ಯ ತುಡಿತವದಿಲ್ಲಕೃಷ್ಣ-ರಾಮರ ಪರಮ ಕಾಮ್ಯದ ಹೊರತು.. ಸ್ವರ-ಶೃತಿಯ ಬೆಸೆಯುವ ಸರಸತಿಯ ಮೀಟು ತಂತಿಅನ್ಯವಾದ್ಯವಲ್ಲವದು ವೀಣಾ.. ಹಂಗಿನರಮನೆ ತೊರೆದ ಪ್ರೇಮದೀ ಗುಡಿಯಲ್ಲಿಬೇರೆ ಮಾತುಗಳಿಲ್ಲ ನಿನ್ನ ಜಪದ ಹೊರತು.. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇನ್ನಷ್ಟು ಯೌವನ ಕೊಡು ಮಂಜುನಾಥ ನಾಯ್ಕ ಹಾಲುಮಾರುವ ಹುಡುಗ ಕಾಜುಗಣ್ಣಿನ ವಿನೋದನೊರೆ ಹಾಲಿನಂತವನು ಪೇಟೆಯ ತುಂಬಹಾಲು ಹಂಚುವ ಉಮೇದಿಕಾಜುಗಣ್ಣ ಬಿಂಬಗೊಳಗೆಉಫ್ ಉಫ್ ಎಂದು ರಸ್ತೆ ಉಬ್ಬಿನಲಿ ತುಳಿದಿದ್ದಕ್ಕೆ ಸೈಕಲ್ಲುಬಿದ್ದು ರಕ್ತಕಾರಿಕೊಂಡ ಹೆಬ್ಬಟ್ಟಿನ ಉರಿ ಬ್ರೇಕೊತ್ತಿದೆಸೈಕಲ್ಲಿನ ವೇಗಕ್ಕೆಅಪ್ಪನ ಕ್ಯಾನ್ಸರಿಗೆ, ಅಮ್ಮನ ಮಧುಮೇಹಕ್ಕೆಚಂದನದ ಕೊರಡುತೇಯುತ್ತಿದೆ ಬೀದಿಯಲಿಕಾಯುತ್ತಿದೆಹಾಲಿನ ಮನಸ್ಸೊಂದುಮಗನ ಬರುವಿಕೆಗೆಅಡುಗೆ ಮನೆಯಲಿ ಬೇನೆಯಲಿಬೇಯುವ ಹಂಚಿನ ರೊಟ್ಟಿ ಐನೋರ ತೋಟದ ಮರದ ತುದಿಗೇರಿ ಅಡಿಕೆಗೊನೆ,ಸಿಂಗಾರ,ಸಿಯಾಳಕಾಯಿ ಕೊಯ್ವ ಈರಜ್ಜಕಸರತ್ತುಗಯ್ಯುತ್ತಾಆಕಾಶ ಮುಟ್ಟುವಂತೆಮರದ ತುದಿಯಲಿಒಂದೊಂದೇ ಫಲಗಳಎಸೆಯುವ ಕೆಳಗೆನುಣ್ಣಗೆ ಜಾರುವ ಮರತಡವರಿಸುವುದು ಒಮ್ಮೊಮ್ಮೆ ಈರನ ಕಾಲುಕೆಳಗೆ ಭೂಮಿ ಬಾಯ್ತೆರೆದು ಕಾದಿದೆಬಿಡಾರದೊಳಗೆ ಈರಜ್ಜನಗುಡಿಸಲೊಡತಿಕೊಳೆ ಅಡಿಕೆ ಅಂಬಡಿ ಎಲೆಗೆತಿಕ್ಕುತ್ತಾ ಚಿಪ್ಪೆಕಲ್ಲಿನ ಸುಣ್ಣವ ನುಣ್ಣಗೆ ಬೈಗಿನಲಿಈರಜ್ಜನಡೆದು ಬರುವ ತೋಡಿನಲಿಇಣುಕಿಣುಕಿ ನೋಡುತ್ತಾಬೆಚ್ಚಗಾಗುತಿದೆ ಬಿಸಿನೀರುಹಬೆ ಹಬೆ ಹಂಡೆಯಲಿಬೆಚ್ಚನೆಯ ಬದುಕ ಗೂಡೊಳಗೆ ನಸುಕಲಲ್ಲಿ ಬೈಗೆ ಬಂಗುಡೆಸಮದಾಳೆ,ಕುಡುತ್ಲಿ,ಪೇಡಿ ಏಡಿಗಳ ಹೊತ್ತು ಬರುವ ನಮ್ಮೂರ ಬೆಸ್ತರ ಪದ್ಮಕ್ಕನ ಮಗಳು ತುಂಬು ಬಸುರಿಪಾತಿದೋಣಿಗೆ ಗಂಡಉದರದ ಗೇಣಿಗೆ ಅವ್ವದಣಪೆಯಾಚೆ ನಿಂತು ನೀಕುವಳುಖಾಲಿ ಬುಟ್ಟಿಹೊತ್ತ ಅಮ್ಮನನಿರಾಳ ಹೆಜ್ಜೆ ಸದ್ದಿಗೆಪೇಟೆಯಲಿ ಪದ್ಮಕ್ಕನ ಮೀನಿಗೆಚೌಕಾಸಿಯ ಕೂಗು ಜೋರಾಗಿದೆಸಾಸಿವೆಯ ದರಕ್ಕೆ ಮಾರಿಮನೆಯ ದಾರಿ ಹಿಡಿದಿದ್ದಾಳೆಅಲ್ಲಿ ತುಂಬು ಬಸುರಿಯವೇದನೆ ಜೋರಾಗಿದೆ ಸಾಗುವ ಹೆಜ್ಜೆಗಳಿಗೆಲ್ಲಾಇನ್ನಷ್ಟು ಯೌವನ ಕೊಡು ದಿವ್ಯವೇಕಾಯುವ ಹೃದಯಗಳೆಲ್ಲಾಹಸುಳೆಯಂತದ್ದು. ************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ಆಗಸದಲ್ಲಿ ನೇಸರ ಹುಟ್ಟುತಿದ್ದಾನೆ ನೋಡಿಕನಸುಗಳು ಮೂಟೆ ತರುತಿದ್ದಾನೆ ನೋಡಿ ಇರುಳು ಕಳೆದು ಹೋಗಿದೆ ಹಗಲಿನ ಒಡಲಲ್ಲಿಚೈತನ್ಯವನ್ನು ಹೊತ್ತು ಬಂದಿದ್ದಾನೆ ನೋಡಿ ಮೂಡಣದಲ್ಲಿ ರವಿ ಅಂಬೆಗಾಲು ಇಡುತಿರುವನುಅಕ್ಷಯ ಉಲ್ಲಾಸವನ್ನು ಹಂಚುತಿದ್ದಾನೆ ನೋಡಿ ಅವನಿಯನ್ನು ಹೊಂಗಿರಣಗಳು ಚುಂಬಿಸುತಿವೆಪಾದರಸದ ಚಲನೆಯನ್ನು ನೀಡುತಿದ್ದಾನೆ ನೋಡಿ ಹಕ್ಕಿಗಳ ಚಿಲಿಪಿಲಿಯು ಹೃದಯವನ್ನು ತಟ್ಟುತ್ತಿದೆನಿರಾಸೆಯ ಕೊಳೆಯನ್ನು ತೊಳೆಯುತಿದ್ದಾನೆ ನೋಡಿ ಗಿಡ-ಮರಗುಳು ತಂಗಾಳಿಯಿಂದ ಸ್ವಾಗತಿಸುತಿವೆಬಾಳಿನ ಅನನ್ಯ ಕಲೆಯನ್ನು ಕಲಿಸುತಿದ್ದಾನೆ ನೋಡಿ ಹಾಸಿಗೆಯನ್ನು ತೊರೆದು ಹೊರಗೆ ನೋಡು ಮಲ್ಲಿಮಂದಹಾಸದ ಪಾಠವನ್ನು ಹೇಳುತಿದ್ದಾನೆ ನೋಡಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀ ಹೋದರೂ.. ಶೀಲಾ ಭಂಡಾರ್ಕರ್ ನಿನ್ನ ನೆನಪುಗಳು..ನನ್ನ ಬಳಿಯೇ ಉಳಿದಿವೆನಿನ್ನ ಜತೆ ಹೋಗದೆ.. ಇನ್ನೂ ..ಚೆನ್ನಾಗಿ ಬೆಳೆಯುತ್ತಿವೆ..ದಟ್ಟವಾಗಿಮನದ ತೋಟದೊಳಗೆ ನೀನಾಡಿದ್ದ ಮಾತುಗಳುಆಸೆಯಿಂದ ಕತ್ತೆತ್ತುತ್ತವೆ ಆಗಾಗಹಳೆಯ ಆಲದ ಮರದಪೊಟರೆಯೊಳಗಿನಿಂದಮರಿ ಕೋಗಿಲೆಗಳು ಇಣುಕಿದ ಹಾಗೆ. ಎಷ್ಟು ದೂರದವರೆಗೆನಡೆದು ಬಂದಿವೆ ನೋಡುಆ ನೆನಪುಗಳು ಬರಿಗಾಲಿನಲ್ಲಿ.ಬೇಸಿಗೆಯಿಂದ ಮಳೆಯವರೆಗೆಬಾಲ್ಯದಿಂದ ತಾರುಣ್ಯದವರೆಗೆ ಅಡಗಿ ಕುಳಿತುಸಂಭಾಷಿಸುತ್ತವೆ ಕೆಲವುತಮ್ಮ ತಮ್ಮಲ್ಲೇಒಳಕೋಣೆಯೊಳಗೆ. ಎಲ್ಲವೂ ನೆನಪಿದೆ ನನಗೆನಿನ್ನ ಪ್ರೀತಿ. ನಿನ್ನ ಮಾತು..ತಿಳಿ ಹಾಸ್ಯ ಮತ್ತು ನಿನ್ನ ನಗೆ. ನೇರಳೆ ಹಣ್ಣೆಂದು ತಿನ್ನಿಸಿದಬೇವಿನ ಹಣ್ಣಿನ ರುಚಿಯೂಮರೆತಿಲ್ಲ ಇನ್ನೂ ನನಗೆ ಕಹಿ ಹಾಗೆಯೇ ಉಳಿದುಕೊಂಡಿದೆ..ನಾಲಿಗೆಯ ಮೇಲೆ. ********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಗಂಟಿಕ್ಕಿ ಹುರಿ ಹುಬ್ಬು ಹಾರಿಸಿದಂತೆಲ್ಲ ನಾನೇನೂ ಬೆದರುವುದಿಲ್ಲಪೊದೆ ಮೀಸೆಯಲ್ಲೇ ರೋಷ ಉಕ್ಕಿಸಬೇಡ ಸೊಪ್ಪು ಹಾಕುವುದಿಲ್ಲ ತವರಲ್ಲಿ ಮುದ್ದಾಗಿ ಅಂಗೈಲೇ ಬುವಿ ಬಾನು ದೋಚಿದವಳು ನಾನುಕಣ್ಣಲ್ಲೇ ಕೆಣಕಿದಂತೆಲ್ಲ ಮೈ ಮನದ ಕಣಗಳೆಲ್ಲ ನವಿರೇಳುವುದಿಲ್ಲ ನಿನ್ನಂತೆಯೇ ಆಡಿ ನಲಿದು ಬಣ್ಣದ ಲಂಗದಲಿ ಕನಸ ಜೀಕಿದವಳುಮಾತು ಮೌನಕೆ ಮಣಿವ ಬೆಳ್ನಗೆಯಲಿ ಸ್ವಂತಿಕೆ ನಳನಳಿಸುವುದಿಲ್ಲ ನಿನ್ನ ಸೇವೆಯೇ ಎನ್ನ ಜೀವನದ ಪರಮ ಗುರಿಯೆಂಬ ಭ್ರಮೆಯೇಕೆಸದಾ ಕೀಲುಗೊಂಬೆಯಂತೆ ನಡೆವ ಪರಿ ನನಗೂ ಇಷ್ಟವಾಗುವುದಿಲ್ಲ ಕಾಲ ಮೇಲೆ ಕಾಲು ಹಾಕಿ ಕೂತು ಗಂಡು ಜನ್ಮವೆಂಬ ಬೀಗುವಿಕೆಯೇಮಗ್ಗಲಿಗೆಳೆದು ಬರಸೆಳೆದರೆ ಹಗಲಿಡಿಯ ದರ್ಪ ಮರೆಯಾಗುವುದಿಲ್ಲ ಒಮ್ಮೆಯಾದರೂ ಅಹರ್ನಿಶಿ ನಾ ಏಗಿದಂತೆ ಏಗಬಲ್ಲೆಯ ನೀನೂನುಒಡಲಗುದಿಯ ಸವರದಿರೆ ದಾಂಪತ್ಯ ಒಳಗೊಳಗೆ ಪದುಳಿಸುವುದಿಲ್ಲ ನಿನಗಿರುವಂತೆಯೇ “ಸುಜೂ” ಗೂ ತನ್ನವರ ಹಿತಾಸಕ್ತಿ ಇರಬಾರದೇನುನಿನ್ನ ವರ್ತುಲವೇ ಅಂತಿಮವಾದರೆ ಸಾಮರಸ್ಯ ಸೊಗಯಿಸುವುದಿಲ್ಲ *************

ಕಾವ್ಯಯಾನ Read Post »

You cannot copy content of this page

Scroll to Top