ಮಾಗಿ ಕಾಲ
ಕವಿತೆ ಮಾಗಿ ಕಾಲ ಡಾಲಿ ವಿಜಯ ಕುಮಾರ್. ಕೆ.ವಿ ಆವರಿಸಿದ ಚಳಿನನ್ನ ಮೈತಾಕದಂತೆಎದೆಯ ಚಿಪ್ಪಿನೊಳಗೆ ಕಾದನಿನ್ನ ಬಿಸಿ ಅಪ್ಪುಗೆಯ ಹಿತಕ್ಕೆಬರುವ ಮಾಸಗಳೆಲ್ಲಮಾಘಮಾಸವನ್ನೇಹೊತ್ತಿರಬಾರದೆ ಅನ್ನಿಸುತ್ತೆ… ಒಲಿದ ಮನಸುಗಳಮಾಗಿಸಿ.ಬಿಗಿಯಾಗಿ ಬೆಸೆದುಬಲಿತ ಕನಸುಗಳಮಿಲನವಾಗಿಸುವಶಿಶಿರ ಋತುಪರಿಪೂರ್ಣತೆಯ ಭಾವಗಳಪೂರ್ಣವಿರಾಮದಂತೆ.ನನಗೆ… ಮನದ ಮಾತುಗಾರನಮಂತ್ರಿಸಿ ವಶೀಕರಿಸುವಮಾಘಮಾಸಮಡದಿ ಮನದರಸರಮನಸುಗಳ ಹೊಸೆದುಪ್ರತಿ ಹೊತ್ತಿನ ಪಾಲುದಾರಿಕೆಯಪರಮ ಸುಖಕೆಮುತ್ತುಗಳ ಮಳೆಗರೆಸುವಪ್ರತಿ ಮಾಗಿಯೂಇಲ್ಲಿ ಹೊಸ ವಸಂತಗಳೇ…… ಕಿಟಕಿಯಿಂದತೂರಿ ಬರುವಹೊಂಗಿರಣಗಳ ಅಲ್ಲೇತಡೆದು ನಿಲ್ಲಿಸುವೆ.ಇನಿಯನಮುದ ನೀಡುವಮುದ್ದು ಪ್ರೀತಿಯಕದ್ದು ನೋಡದಿರಲೆಂದು…. ಅಂತದ್ದೊಂದುಸವಿ ಸಾಕಾಗುವಷ್ಟುಸವಿದೇಬಿಡುವೆ.ಸುಮ್ಮನಿರಿಚಿಲಿಪಿಲಿ ರಾಗಗಳೇ.ಬೆಳಗಿನ ಕಾತರಿಕೆ ನನಗಿಲ್ಲ. ಇಂದಿನಕನಸುಗಳ ಕೈಚೆಲ್ಲಿದರೆಮನಮುಂದಿನ ಮಾಗಿಕಾಲಕ್ಕಾಗಿಕಾದು ಕೂರಬೇಕು….ಹೆಪ್ಪುಗಟ್ಟಿದ ಹಲವು ನೆನಪುಗಳಜೊತೆಗೆ…… ಮಾಗಿ-ಶಿಶಿರ-ಚಳಿಗಾಲ *******************************









