ಮಾವನ ಕರೆ
ಕವಿತೆ ಮಾವನ ಕರೆ ಶೃತಿ ಮೇಲುಸೀಮೆ ಮೊಂಡ ಕೋಲ ಕಟ ಕಟ ಕುಟ್ಟುತ್ತಾಒಂಟಿ ಕಾಲ ಕುಂಟ ಮಾವಕೂಗ್ತಾ ಬಂದಿದ್ದ ಕೂಗ್ತಾ ಬಂದಿದ್ದ ನೀಲವ್ವ ತಾರವ್ವ ಎಂದುಕಣ್ ಅಗಲಿಸಿ ಕೇಳ್ತಾನೋಡ್ತಾ ನಿಂತಿದ್ದ ನೋಡ್ತಾ ನಿಂತಿದ್ದ ಹಸಿದ ಹೊಟ್ಟೆ , ಸಪ್ಪೆ ಮಾರಿ ಮಾಡ್ಕೊಂಡುತಿನ್ನಕ ತಾರವ್ವ ತಂಗ್ಯವ್ವ ಎಂದುಕರಿತಾ ನಿಂತಿದ್ದ ಕರಿತಾ ನಿಂತಿದ್ದ ಪುಟ್ಟಿ ಪುಟ್ಟಿ ಹಣ್ಣು ಮಾರುವಾಗರೊಕ್ಕ ಕೊಟ್ಟು ಒಯ್ಯನದಿದ್ದ ಮಾವ ಇಂದುಕಿಸೆಲೀ ರೊಕ್ಕ ಇಲ್ಲದೆ ಬಾಯಿ ಚಪ್ಪರಿಸುತದ್ದಸೊಸೆ ಮುಂದೆ ಸೋತು ಕೇಳ್ತಿದ್ದ ಸೋತು ಕೇಳ್ತಿದ್ದ ಬಾ ಮಾವ ಏನು ಉಂಡಿ ಎಂದಾಗತೊಂಬ್ಲ ತಿಂದು ಬಂದಿನಿ ,ರುಚಿ ಕೆಟ್ಟ ಬಾಯಿಗಂಗಳದಲ್ಲಿ ಅಂಬಲಿ ಆದ್ರೂಕೊಡವ್ವ ಎಂದಿದ್ದ ಕೊಡವ್ವ ಎಂದಿದ್ದ ಹೇಗಿದಿಯಾ ಮಾವ ಎಂದಾಗನನ್ನ ಬದುಕು ನಾಟಕದ ಪಾತ್ರ ಆದಂಗಾಗಿದೆಹರೆದರಲ್ಲಿ ವಿಜೃಂಭಿಸಿದ ಜೀವಸತ್ವ ಕಳಕೊಂಡ ಕಲ್ಕಿ ಜಗ ಎಂದಿದ್ದ ಕಲ್ಕಿ ಜಗ ಎಂದಿದ್ದ ಇದ್ದು ಇಲ್ಲದಂಗಿರುವ ಜೀವ್ನ ಕಾಳು ಇದೆ ಕೂಳಿಲ್ಲಹಣದ ಹುಚ್ಚು ಹಿಡಿದ ಮನಸುಎಲ್ಲಾ ಇದ್ದು ಇಲ್ಲೆ ಸುತ್ತುತ್ತಿದೆ ಏನು ಇಲ್ಲದಂಗ ಎಂದುನಿಟ್ಟುಸಿರು ಬಿಟ್ಟಿದ್ದ ನಿಟ್ಟುಸಿರು ಬಿಟ್ಟಿದ್ದ ****









