ನಾನು-ನೀನು
ಕಾವ್ಯಯಾನ ನಾನು-ನೀನು ಅನಿತಾ ಕೃಷ್ಣಮೂರ್ತಿ ಸುಡುವ ಬೆಂಕಿಯ ಮೇಲಿರುವಬಾಣಲಿಯಲಿ ಪಟಪಟನೆಮೇಲೇರುವ ಅರಳಿನಂತೆಮಾತನಾಡುವ ನಾನು…ನಿನ್ನೆದುರಿಗೆ ಮಾತುಬಾರದ ಮೂಕಿ! ಕಾಡುವ ತಂಗಾಳಿಗೆ, ಮುಂಗುರುಳುಪ್ರತಿಭಟಿಸದೆ ಅತ್ತಿಂದಿತ್ತಸರಿದಾಡಿ, ಭಾವ ತನ್ಮಯಗೊಳಿಸುವ ನಾನು..ನಿನ್ನೆದುರಿಗೆ ಬೆದರಿ, ನಾಚಿ..ಕಣ್ಮುಚ್ಚುವ ಕುರುಡಿ! ಹುಣ್ಣಿಮೆಯ ಚಂದಿರನಿಗಾಗಿಹಾರಿ, ಹಾರಿ ಧುಮ್ಮಿಕ್ಕುವ ಅಲೆಯಂತೆ,ಚಂಗನೆ, ಸರಸರನೆ ಜಿಗಿಯುವ ನಾನು..ನಿನ್ನೆದುರಿಗೆ ಕಪ್ಪೆಚಿಪ್ಪಲಿ ಮುದುರಿ ಕುಳಿತ ಮುತ್ತು **********************







