ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ನಾನು ನಾನಾಗದಿದ್ದರೆ…?” ಡಾ.ತಾರಾ ಬಿ.ಎನ್.ಧಾರವಾಡ

ಕಾವ್ಯ ಸಂಗಾತಿ ಡಾ.ತಾರಾ ಬಿ.ಎನ್.ಧಾರವಾಡ “ನಾನು ನಾನಾಗದಿದ್ದರೆ…?” ನಾನು ನಾನಾಗದಿದ್ದರೆಬೆಳಗಿನ ಕಿರಣಗಳುನನ್ನ ಬಳಿ ಬಂದುಹೆಸರೇ ಇಲ್ಲದ ಆತ್ಮವನ್ನು  ಹುಡುಕುತ್ತಿರಬಹುದೇ?ಕನ್ನಡಿಯ ಮುಂದೆ ನಿಂತಾಗನನ್ನ ಕಣ್ಣುಗಳಲ್ಲಿ ನನ್ನನ್ನೇಕಾಣಲಾಗದ ದಿನ,ಆ ನೋಟವೇ ನನಗೆನಾನೇ ಅಪರಿಚಿತನಾಗಿ ಬಿಡುವೆನಾನು ನಾನಾಗದಿದ್ದರೆ, ನನ್ನ ನಗುವೂ ಸಾಲುಗಟ್ಟಿದ ಸಾಲಾಗಿಬಿಡುತ್ತದಾ?ಮನಸ್ಸು ನಿಜವಾಗಿಹರ್ಷವಾಗದಿದ್ದರೂವದನ ಮಾತ್ರಜಗತ್ತಿಗೆ ಉತ್ತರಿಸಬೇಕೆಂದುನಗು  ಮುಖವಾಡಧರಿಸಬೇಕಾಗುತ್ತಾ?ನಾನು ನಾನಾಗದಿದ್ದರೆ, ನನ್ನ ಮೌನಕ್ಕೂ ಅರ್ಥವಿಲ್ಲದೆಹೃದಯದ ಆಂತರ್ಯದಲಿಉಕ್ಕುವ ಪ್ರಶ್ನೆಗಳುಶಬ್ದವಾಗದೇ,ಕೇವಲ ಭಾರವಾಗಿಯೇಉಳಿಯುತ್ತವೆನಾನು ನಾನಾಗದಿದ್ದರೆ, ನನ್ನ ನೋವಿಗೂಅನುಮತಿ ಬೇಕಾಗುತ್ತನನ್ನ ಕಣ್ಣೀರು ಕೂಡನಾಚಿಕೆಯಿಂದಹಿಂದಿರುಗಿಬಿಡುವುದುನಾನು ನನಾಗದಿದ್ದರೆ,ನನ್ನ ಕನಸುಗಳು ಯಾರದೋ ಅಧೀನದಲಿ ಸಿಕ್ಕಿಹಾಕಿಕೊಂಡು“ಸಾಧ್ಯ” ಮತ್ತು “ಅಸಾಧ್ಯ” ಎಂಬ ಗೋಡೆಗಳ ನಡುವೆಉಸಿರುಗಟ್ಟುತ್ತವೆ.ನಾನು ನಾನಾಗದಿದ್ದರೆ, ನನ್ನೊಳಗಿನ ನಗುವನ್ನುಯಾರಿಗೂ ತೋರಿಸದಂತೆ ಕೇಳುವ ಸರಳ ಪ್ರಶ್ನೆಗಳಿಗೆನನ್ನಲ್ಲೇ ಉತ್ತರ ಇರದೇ ಹೋಗುತ್ತದಯೇ ?ಆದರೆನಾನು ನಾನಾಗಿರುವುದೇಒಂದು ಕ್ರಾಂತಿ.ನನ್ನ  ಶಕ್ತಿ ದೌರ್ಬಲ್ಯಗಳೊಂದಿಗೆ,ನನ್ನ ಭಯಗಳೊಂದಿಗೆ,ನನ್ನ ಸಂಪೂರ್ಣತೆಯೊಂದಿಗೆನಾನು ನಿಂತಿರುವುದೇನನ್ನ ಅಸ್ತಿತ್ವದ ಆಧಾರನನ್ನ ಆತ್ಮಬಲದ ಘೋಷಣೆ.ನಾನು ನಾನಾಗಿದ್ದರೆ,ನನ್ನ ಕಣ್ಣೀರಿಗೆ ಕಾರಣ ಬೇಕಾಗಿಲ್ಲ,ನಗುವಿಗೆ ಅನುಮತಿ ಬೇಕಾಗಿಲ್ಲ.ನಾನು ಬಿದ್ದರೂ,ಮತ್ತೆ ಏಳುವ ಹಕ್ಕು ನನಗಿದೆ.ನಾನು ನಾನಾಗಿರುವ ತನಕ,ನನ್ನ ಜೀವನ   ಬಯಕೆ, ಆದರ್ಶ ಉತ್ತರ ಹುಡುಕುವ ದಾರಿಯೂನನ್ನದೇ ಆಗಿರುತ್ತದೆ.ಹಾಗಾಗಿ,ನಾನು ನಾನಾಗದಿರುವ ಲೋಕಕ್ಕಿಂತನಾನು ನಾನಾಗಿರುವ  ಭಾವ ನಿಜವಾದ ಜೀವನವೇ ಸ್ವಾದ ಡಾ ತಾರಾ ಬಿ ಎನ್ ಧಾರವಾಡ

“ನಾನು ನಾನಾಗದಿದ್ದರೆ…?” ಡಾ.ತಾರಾ ಬಿ.ಎನ್.ಧಾರವಾಡ Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ “ಹತ್ತು ಶಾಯಿರಿಗಳು”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ “ಹತ್ತು ಶಾಯಿರಿಗಳು” ೧ನಿನ್ನ ಮ್ಯಾಲ ನಾ ಬರಿಬೇಕಾದ ಸಾಲೆಲ್ಲಯಾರೋ ಕದ್ದಕೊಂಡ ಹೋಗ್ಯಾರ,ನಿಜಆದರ ನಿನ್ನ ಮ್ಯಾಲ ನಾ ಇಟ್ಟಿರೋಪ್ರೀತಿನ ಯಾರ ಕದ್ದಕೊಂಡಹೋಗ್ತಾರ ೨ಗಿಡದಾಗ ಅರಳಿದ ತಾಜಾಹೂವ ಹರಿದುನಿನ್ನ ಮುಡಿಗೆ ಅರ್ಪಿಸಬೇಕಂತಿದ್ದೆಆದರ ಅದರೊಳಗಿಂದ ದುಂಬಿಹಾರಿ ಹೋದದ್ದ ನೋಡಿಅವು ಮೀಸಲಲ್ಲ ಅಂತಹೃದಯಾನ ಹೂವ ಮಾಡಿಅರ್ಪಿಸಿ ಬಿಟ್ಟೆ. ೩ನೀ ಪ್ರೀತಿ ಮಾಡಿತಿದಿ ಇಲ್ಲ,ನನ್ನ ಮುಂದಿರೂ ಪ್ರಶ್ನೆನ ಅಲ್ಲನೀ ಒಮ್ಮೆ ಪ್ರೀತಿ ಮಾಡಿದ್ದಿ ಅನ್ನೊಉತ್ತರನ ಈ ಜನ್ಮ ಮುಗಸಾಕನನಗ ಸಾಕು ೪ಪ್ರೀತಿ ಪ್ರೇಮ ಸುಳ್ಳು ಅಂತವಾದ ಮಾಡು ಹುಚ್ಚರನ್ನಕಾಂಡ್ರಿಕ್ ನನಗ ನಗಿ ಬರ್ತದೆಮಳಿ ಬೆಳಿ ಸುಳ್ಳಂದರಜೀವನ ಹೆಂಗ ನಡಿತೈತಿ೫ದೇವಸ್ಥಾನದಾಗ ದೇವ್ರುಅದಾನ ಬಿಟ್ಟಾನ ಅದುನನಗ ಮುಖ್ಯ ಅಲ್ಲಎದಿ ಮದೇವಸ್ಥಾನದಾಗಸ್ಥಾಪಿತಾದ ನಿನ್ನ ಮೂರ್ತಿಬಿಟ್ಟರ ನನಗ ಬ್ಯಾರೆ ದೇವರ ಬೇಕಿಲ್ಲ ೬ಹಾದು ನಾನು ಹುಚ್ಚಬಹಳ ಮಂದಿ ಇವ ಹುಚ್ಚ ಅಂದರಅದು ಖರೇನ ಅಂತಿನಿಆದರ ಅವರು ತಮ್ಮ ಹುಚ್ಚ ಮರತುಮಾತಾಡೂದು ಕಂಡನಾ ಒಳಗೊಳಗ ನಗತಿನಿ ೭ದಿನಾ ಪ್ರವಚನ ಕೇಳಾಕ ಹೋದಆ ಸುಂದರಿ ಮುಖ ನೋಡಿ ನೋಡಿಅವನ ಆ ಪ್ರವಚನದಾಗಆಕಿ ಒಂದ ಪಾತ್ರ ಆದದ್ದುಹೆಂಗಂತ್ ನನಗ ತಿಳಿವಲ್ದು ೮ಜೀವನ ಅಂದರ ಇದ ಇರಬೇಕುಪ್ರೀತಿ ಮಾಡಿದವರು ಕೈ ಕೊಟ್ಟರೂಪ್ರೀತಿ ಕೈಕೊಡಂಗೊಇಲ್ಲಹಂಗಂತನ ಈ ಪ್ರೇಮ ಕವಿತಾಹುಟ್ಟಗೋತನ ಇರ‍್ತಾವಲ್ಲ ೯ಉದಯ ಆಗೋ ಆ ಸೂರ್ಯಾಗನಂದ ಒಂದ ವಿನಂತಿಬಹಳ ಸುಡು ಸುಡು ಬಿಸಲ  ಬೀರಬ್ಯಾಡನನ್ನ ಎದಿಯಾಗ ತಣ್ಣಗ ಇರುಆಕಿ ಹಸರ ನೆನಪು  ಆರಿ ಹೋದೀತು ಅಂತ ೧೦ಹರಕೊಂಡು ಹೋಗೂ ಮಳಿ ನೀರಿನ್ಯಾಗಎಲ್ಲಾ ಹರಕೊಂಡ ಹೋಗ್ತಾವಎಂಥ ವಿಸ್ಮಯ ಅಂತಿಎಂಥ ರ‍್ರನ ಮಳಿ ಅದರೂಎದಿಯಾಗಿನ ನೆನಪ ಮಾತ್ರ ಶಾಶ್ವತ ಇರ‍್ತಾವ ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ “ಹತ್ತು ಶಾಯಿರಿಗಳು” Read Post »

ಕಾವ್ಯಯಾನ

ಪ್ರೇಮ(ಲತಾ)ಕವಿತೆ ಲತಾ ಎ ಆರ್‌ ಬಾಳೆಹೊನ್ನೂರು

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು ನನ್ನವನು ಕಣ್ಣಿನಲಿ  ಇಳಿಸಿದೆ ಪ್ರೇಮಪತ್ರವ ಹೃದಯಕೆಅರಿತು ಮನ ಸೆಳೆದಿಹುದು ಬರಹಕೆಆಳದ ಮಾತು ಇಳಿಸಲಾಗದು ಕವನಕೆಬಯಸಿದೆ ಜೀವ ಬಿಡಿಸದ ಬಂಧನಕೆ ಸೆಳೆಯುತಿರುವೆ ಕನಸು ನನಸಿನಲಿನೋಡ ಬಯಸಿರುವೆ ಈ ದಿನದಲಿತಂಗಾಳಿ ಸುಳಿದಂತೆ ನಿನ್ನ ನೆನಪಿನಲಿಚಳಿಯಲ್ಲೂ ಮೈ ನಡುಗಿದೆ ಕಂಪಿಸುತಲಿ ನೀನೆ ಜೀವನದ ಸುಮಧುರ ಗೆಳೆಯಸರಿಯುತಿದೆ ಸವಿಯಾದ ಸಮಯಬರೆದು ಬಿಡು ಹೆಸರ ಸಹಿಯಕಾಪಾಡುವ ಪ್ರೇಮಿಗಳಂತೆ ಪ್ರೀತಿ ನಿಧಿಯ ನೀನೆಂದೆಂದು ನನ್ನವನು ತಿಳಿದಿರುನನ್ನೊಲವ ಪ್ರೇಮವ ತೊರೆಯದಿರುಸಪ್ತ ಸಾಗರದಾಚೆ ನನ್ನ ಕರೆಯದಿರುತಾಯಿ ನೆಲದ ಋಣವ ಮರೆಯದಿರು ಲತಾ ಎ ಆರ್ ಬಾಳೆಹೊನ್ನೂರು

ಪ್ರೇಮ(ಲತಾ)ಕವಿತೆ ಲತಾ ಎ ಆರ್‌ ಬಾಳೆಹೊನ್ನೂರು Read Post »

ಕಾವ್ಯಯಾನ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ”

ಕಾವ್ಯ ಸಂಗಾತಿ ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” ಒಮ್ಮೆ ಎಳ್ಳು ಒಮ್ಮೆ ಬೆಲ್ಲಬದುಕಿದು ನೋವು ನಲಿವುಗಳ ಸಂಕ್ರಮಣ ಇಲ್ಲಿ ಬೇಲಿ ಅಲ್ಲಿ ಹಾದಿಬದುಕಿದು ಪಥ ಬದಲಿಸುವ ರಥಸಪ್ತಮಿ ನಿನ್ನೆ ಶಿಶಿರ ಎಂದು ವಸಂತಬದುಕಿದು ಹಲವು ಋತುಗಳಲ್ಲಿ ಪರಿಭ್ರಮಣ ಮುಳುಗುವ ಸೂರ್ಯ ಹೊತ್ತುವ ದೀಪಬದುಕಿದು ಕತ್ತಲೆ ಬೆಳಕಿನ ನಡುವಿನ ಆವರ್ತನ ಅಲ್ಪ ಸುಖ ಸಾಕಷ್ಟು ಕಷ್ಟಬದುಕಿದು ಸಮ್ಮಿಶ್ರ ನಗರ ಸಂಕಲನ   ಸಾಸಿವೆಯಷ್ಟು ನಗು ಸಾಗರದಷ್ಟು ಅಳು ಬದುಕಿದು ಪ್ರತಿಪಕ್ಷ  ಹೊಂದಾಣಿಕೆಯ ಹೂರಣ ಆ ಕಣಿವೆ ಈ ಬೆಟ್ಟಬದುಕಿದು ದಿನನಿತ್ಯ  ಇಳಿದೇರುವ ಚಾರಣ ಒಮ್ಮೆ ಜನನ ಒಮ್ಮೆ ಮರಣಬದುಕಿದು ವಿಧಿ ವಿಲಾಸದ ಸಂಕೀರ್ತನ ದಾಕ್ಷಾಯಣಿ ಶಂಕರ ಹುಣಶ್ಯಾಳ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” Read Post »

ಕಾವ್ಯಯಾನ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ”

ಕಾವ್ಯಸಂಗಾತಿ ಡಾ  ಗೀತಾ ದಾನಶೆಟ್ಟಿ ವಿಶ್ವಪಥ ಉಡುವ ಬಟ್ಟೆನಡೆವ ಬದುಕುಹಲವು ಬಗೆರೀತಿಯಾದರೇನು ?ಮನುಜ ಮತ ಒಂದೇ ಇರಲುದ್ವೇಷ ಅಸೂಯೆಗಳೆತಕೆಭ್ರಾಂತಿ ಅಳಿದು,ಶಾಂತಿ ಉಳಿದುಸತ್ಯ ಸಮತೆಗೆ ಮಣಿದುಮತ್ತೆ ಬೆಳೆಯಲಿಮನುಜ ಮತನಿತ್ಯ ಸಾಗುವ  ವಿಶ್ವಪಥ ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ” Read Post »

ಕಾವ್ಯಯಾನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ದಂಡೇಶು ದುರ್ಗಾ…” ಬಂದ್ಯಾ ನನ್ ಮಗ್ನೇ…ಈಟೊತ್ತಿಗ್ ನೆಪ್ಪಾಯ್ತ ನಿಂಗೆಮನಿ ಮಕ್ಳ್ ಮರಿ ?ನೆಟ್ಟಗ್ ನಿಲ್ಲಾಕು ಆಯ್ತ ಇಲ್ಲಅಷ್ಟ್ ಆಕವ್ನೆಬಡ್ಡೀಮಗನ್ ತಂದು !ಅಕ್ಕಿ ಡಬ್ಬದಾಗ್ ಕೈ ಆಕಿತೆಗ್ದವ್ನೆ ತಿಂಗಳ್ ರೊಕ್ಕಇವತ್ತ್ ನಿನ್ ಗ್ರಾಚಾರಬಿಡಸ್ತೀನ್ ನೋಡ್ಕ…ಗಡಂಗ್ನಾಗ್ ಕುಂತುಎಂಡ ಇಳಸ್ತಾನೆಎಂಡ್ತೀ ಒಡ್ವೆ ಮಾರಿಭಡವಾ ಬೇವಾರ್ಸಿಬೆಂಕಿ ಬೀಳಾ ನಿನ್ನನ್ಹಡದವ್ಳ ಹೊಟ್ಟೀಗೆ !ನಾಚ್ಕೀ ಆಗಾಕಿಲ್ಲ ? ನಂಗ್ ಬರಾ ಕೋಪಕ್ಕೆ…ನಿನ್ ಕಾಲ್ ಕಟ್ಟಿಬಟ್ಟಿ ಒಗ್ಯಾ ಬಂಡಿ ಮ್ಯಾಗ್ ಕುಕ್ಕಿಮಂಡಿ ಒಡ್ದ್ ಆಕ್ಬೇಕ್ ಅನ್ಸ್ ತ್ತೈತಿಆದ್ರ ಎನ್ ಮಾಡ್ಲಿನೀ ಗೊಟಕ್ ಅಂದ್ರನಾನ್ ತಾನೆ ಮುಂಡೆ ಆಗಾಕಿಇದ್ರೂ ನಷ್ಟ ಮಾಡಾಂವಸತ್ರೂ ಕಷ್ಟ ಕೊಡಾಂವ !ನಿನ್ ಮಖಕ್ಕಿಷ್ಟು ! ಸುಮತಿ ನಿರಂಜನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ Read Post »

ಕಾವ್ಯಯಾನ

ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ”

ಕಾವ್ಯ ಸಂಗಾತಿ ವಿಮಲಾರುಣ ಪಡ್ಡಂಬೈಲು ಗೀಚಿನಿಂದರಳಿದ ಗೀತೆ ಆ ಪುಟ್ಟ ಕೈಯಲಿ  ಅಂದುತೋಚಿ ಗೀಚಿದ ಸಾಲುಬಿಳಿಹಾಳೆ ಮೇಲೇರಿ ಕವಿತೆಯಾಗಲುಮನದಿ ಮೂಡಿದ  ಆ ಭಾವ ಬಲು ಹಿತ. ಸೂರ್ಯ-ಚಂದಿರ-ಚುಕ್ಕಿ-ತಾರೆಗಳಪಿಸುಮಾತು ಎದೆಗಿಳಿಯಲುನನ್ನ  ದಿಟ್ಟಿಸಿ  ನಕ್ಕಿದ್ದವುನೈಜ ಭಾವದ ನನ್ನ ತಾಳ-ಮೇಳಕೂ ವರ್ಣ ಕುಹಕವೋ ಮೋಹಕವೋ ತಿಳಿಯದಾದೆ!ಆದರೂ ಕವಿತೆ ಗಾನವಾದಾಗ  ನಾ ಸಂಭ್ರಮಿಸಿದ ಆ ದಿನಗಳೆಷ್ಟು ಚೆಂದ.. ಹಿತ್ತಲಲ್ಲರಳಿದ ಜಾಜಿ ಸೇವಂತಿಗೆ ಗುಲಾಬಿಕಂಪು ಸೂಸುತ್ತ ಹನಿಯ ಬಿಗಿದಪ್ಪಿರಲುಮೌನಗರ್ಭದಿ ಕೂಸು ಮಿಸುಕಾಡಿದಂತಾಯ್ತುಖಾಲಿ ಕಾಗದದಿ ಜೀವ ತಳೆದಾಯ್ತುನಾನೋ ಅದರ ಬೆನ್ನು ತಟ್ಟಿದ್ದೆಅಥವಾ ಅದು ನನ್ನೊಳಗಿನ ಸ್ಪಂದನೆಗೆಸ್ಪರ್ಶಸಿತ್ತೋ?ಒಂದಂತೂ ದಿಟಅರಿಯದ ಆ ಮುಗ್ಧ ಮಹಾದಾನಂದ. ಚಿಮಣಿ ದೀಪ ಸುತ್ತ ಸೆಳಕು ಚೆಲ್ಲಿರಲುಉರಿವ ಸೌದೆಯ  ಉರಿಯಲಿಅಮ್ಮನ  ಬೆವರು  ಬಸಿದಿರಲುತುತ್ತು ಉಣ್ಣಿಸಿದ ಖುಷಿಗೆಆತ್ಮತೃಪ್ತಿಯ ಎರಕ ಹೊಯ್ದನಾ ಬರೆದ ಎರಡು ಸಾಲುಅವಳಿಗದೆಷ್ಟು ಸಂತೃಪ್ತಿ!ಹಿಗ್ಗಿತ್ತು ನನ್ನ ಹೃದಯ. ಅಪ್ಪನ ಹೆಗಲೇರಿ ನೋಡಿದ ಜಾತ್ರೆಅಕ್ಕತಂಗಿಯರೊಡಗೂಡಿ ಆಡಿದ ಆಟಮರದ ನೆರಳಲ್ಲಿ ಬಿತ್ತಿದ ಬೀಜಗಳುಬರಹದ ಬೇರಾಗಿ ಅವು ಕವಿತೆಯಾಗಿಬೀಸುವ ಕುಳಿರ್ಗಾಳಿ ನೀ ಕವಿಯೆಂದುಪಿಸುಗುಟ್ಟಿದ ಆ ದಿನವೆಷ್ಟು ಚೆಂದ … ಅಂದು ಗೀಚಿದ್ದೆ ಗೀತೆ ಅದೆಂಥಾ ಆನಂದಇಂದು ಭಾವಗಳ ಹೆಣೆದಷ್ಟು ನಿರ್ಭಾವಜೋಂಪು ನಿದಿರೆಯಲಿ ಮುದುಡಿದ ಪದಗಳಭಾವವಾಗಿ ನನ್ನತ್ತ ಹರಿಯ ಬಿಡು ಕವಿತೆನಿನ್ನಾಗ ಜಗ ಮೆಚ್ಚುವುದು ಸುನೀತೆ. ವಿಮಲಾರುಣ ಪಡ್ಡoಬೈಲು

ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ” Read Post »

ಕಾವ್ಯಯಾನ

ʻಆತ್ಮಾಭಿಮಾನʼ ಡಾ ತಾರಾ ಬಿ ಎನ್.

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್. ʻಆತ್ಮಾಭಿಮಾನʼ ನನ್ನೊಳಗಿನ ನಾದವದು,ನನ್ನ ನಿಲುವಿನ ನೆರಳದು,ಬಾಗದ ತಲೆಗೂ ಮುರಿಯದ ಮನಕೂಹೆಸರು ಕೊಟ್ಟ ಶಕ್ತಿಯದು ಆತ್ಮಾಭಿಮಾನ. ಬಿರುಗಾಳಿಯ ನಡುವೆ ನಿಂತುಬೇರು ಬಿಟ್ಟ ಮರದಂತೆ,ಎಷ್ಟು ಹೊಡೆತ ತಿಂದರೂನೆಲ ಬಿಟ್ಟು ಸರಿಯದ ನಂಬಿಕೆಯಂತೆ.ಅದು ಗರ್ವವಲ್ಲ, ಅಹಂಕಾರವೂ ಅಲ್ಲ.ಇತರರನ್ನು ಕುಗ್ಗಿಸುವ ದುರಹಂಕಾರವಲ್ಲ, ತನ್ನ ಮೌಲ್ಯವನ್ನು ಅರಿತುತಾನೇ ತಾನಾಗಿರುವ ಧೈರ್ಯವದು.ಕಟ್ಟಿದ ಕನಸುಗಳು ನುಚ್ಚುನೂರಾದಾಗಲೂಕಣ್ಣೀರ ಮಧ್ಯೆ ನಗು ಉಳಿಸಿದಂತೆ,“ನಾನು ಸೋಲಿಲ್ಲ” ಎನ್ನುವನಿಶ್ಶಬ್ದ ಘೋಷಣೆಯೇ ಆತ್ಮಾಭಿಮಾನ. ಸತ್ಯದ ದಾರಿಯಲ್ಲಿ ನಡೆಯುವಾಗಒಂಟಿತನ ಬಂದರೂ ಭಯವಿಲ್ಲ,ನನ್ನ ನಡೆ ನನ್ನದೆ ಎನ್ನುವಸ್ಥೈರ್ಯ ತುಂಬುವ ದೀಪವದು. ಬಡತನದ ಬಟ್ಟೆ ಧರಿಸಿದರೂಮನಸ್ಸು ರಾಜಸವಾಗಿರಬಹುದು,ಅಭಿಮಾನವಿಲ್ಲದೆ ಶ್ರೀಮಂತಿಕೆಖಾಲಿ ಮಂಟಪವಾಗಿರಬಹುದು.ತಲೆಯೆತ್ತಿ ನಡೆಯಲು ಕಲಿಸುವುದು, ನ್ಯಾಯದ ಪರ ನಿಲ್ಲಲು ಪ್ರೇರೇಪಿಸುವುದು,ಯಾರ ಹಂಗೂ ಇಲ್ಲದಬೇರೆ ಯಾರ ಅನುಮತಿಯಿಲ್ಲದೆನನ್ನ ಮೌಲ್ಯವನ್ನು ಘೋಷಿಸುವುದು.ಆತ್ಮಾಭಿಮಾನ ನನ್ನ ಶಿರಸ್ಸಿನ ಕಿರೀಟವದು,ನನ್ನ ಜೀವನದ ದೀಪವದು,ಬಿದ್ದಾಗಲೂ ಏಳುವಂತೆ ಮಾಡುವನನ್ನೊಳಗಿನ ಶಾಶ್ವತ ಶಕ್ತಿ.ಅನುಪಮ ಅವ್ಯಕ್ತ   ಶಕ್ತಿಯಮೌಲ್ಯಾದರ್ಶದ ಜ್ಞಾನಶಿಸ್ತುನನ್ನೊಳಗಿನ ಶಾಶ್ವತ ಶಕ್ತಿ. ಡಾ ತಾರಾ ಬಿ ಎನ್.

ʻಆತ್ಮಾಭಿಮಾನʼ ಡಾ ತಾರಾ ಬಿ ಎನ್. Read Post »

ಕಾವ್ಯಯಾನ

ಹನಿಬಿಂದು ಅವರ ಕವಿತೆ “ಪೋಷಕ ವಾತ್ಸಲ್ಯ”

ಕಾವ್ಯ ಸಂಗಾತಿ ಹನಿಬಿಂದು ಪೋಷಕ ವಾತ್ಸಲ್ಯ ಕೌಸಲ್ಯೆ ಮಾತ್ರವಲ್ಲ ಪ್ರತಿ ತಾಯ ವಾತ್ಸಲ್ಯಪುತ್ರ ಪುತ್ರಿ ಮನೆ ಹಿರಿಯರಿಗೆಭವಿಷ್ಯತ್ತಿನ ಯೋಚನೆ, ಯೋಜನೆ ವೈಶಾಲ್ಯಉಸ್ತುವಾರಿ ಜೊತೆ ಹಣ ಸಕಲರಿಗೆ.. ರಕ್ಷಣೆಯ ಹೊಣೆ ಹೊತ್ತ ಮಾತಾಪಿತರ ನೀತಿಭಕ್ಷಣೆಗೆ ತಂದಿತ್ತರೂ ಒಣ ಭೀತಿಅಗತ್ಯಕ್ಕೆ ತಕ್ಕಂತೆ ಬೇಕಾದುದೆಲ್ಲ ಒದಗಿಸುವ ಸ್ಪೂರ್ತಿದುಡಿತವೆಲ್ಲ ಮಕ್ಕಳಿಗೆ, ಕುಟುಂಬ ಪ್ರೀತಿ ನಿರ್ಲಕ್ಷ್ಯವಿಲ್ಲ ಇಲ್ಲಿ ಪೋಷಣೆ ಗಮನ ಆರೈಕೆಸೂಕ್ತ ವ್ಯವಸ್ಥೆ ನಿತ್ಯ ಒದಗಿಸುವರುಕಲ್ಪಿಸುತ ಸೌಲಭ್ಯಗಳ ಖರ್ಚು ವೆಚ್ಚ ಭರಿಸಿಹಿಂದಿನ ಮುಂದಿನ ನಾಳೆಗಳ ಯೋಜಿಸುವರು ಸವಾಲುಗಳು ಅದೆಷ್ಟೋ ಮನುಷ್ಯ ಬದುಕ ನೋವುಗಳೋಆದರೂ ನಿರ್ಮಿಸುತ ಕನಸ ಮಹಲುಗಳಸಂಪನ್ಮೂಲಗಳ ಕೊರತೆ ಇರಬಹುದು ಅಲ್ಲೆಲ್ಲೋಕುಟುಂಬದ ಸಹಭಾಗಿತ್ಯ ಪ್ರೀತಿ ಬಯಸುವ ಜೀವಗಳು ಹನಿಬಿಂದು

ಹನಿಬಿಂದು ಅವರ ಕವಿತೆ “ಪೋಷಕ ವಾತ್ಸಲ್ಯ” Read Post »

ಕಾವ್ಯಯಾನ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ

ಕಾವ್ಯ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ ʻಅಡುಗೆʼ ಏನೇ ಏನಿವತ್ತು ಊಟಕ್ಕೆ  ಊಟಕ್ಕೇನಮ್ಮಎಲ್ಲರ ಮನೆಯ  ಸಹಜ ಪ್ರಶ್ನೆಅದಕ್ಕವಳದು ಹರ ಸಾಹಸನಿನ್ನೆಯದು ಇಂದಾಗೋಲ್ಲಪ್ರತಿದಿನವೂ ಹೊಸದಿರಬೇಕಲ್ಲಉಪ್ಪು ಖಾರ ಹದವಾಗಿರಲುಅವಳ ಪರಿವೆಯಿಲ್ಲಅದು  ತಪ್ಪಿದರೆ ಅವಳಿಗೇನೆ  ಎಲ್ಲಆ ಸಿಟ್ಟಿನಲ್ಲಿ  ಮಾಡೋಲ್ಲಅವಳು ರೊಟ್ಟಿಬಡೀತಾಳೆ ಸಿಟ್ಟಿನಲ್ಲಿ ತಟ್ಟಿ ತಟ್ಟಿಸೇರಿಸೋಲ್ಲ ಪಲ್ಯಕ್ಕೆ ಉಪ್ಪು ಖಾರಸುರೀತಾಳೆ ಭರ ಭರ ಕೋಪದಬ್ಬರ  ಎಲ್ಲರೂ ಹೋಟಲ ಮೊರೆರುಚಿಯಿರದ  ತಿಂಡಿಗೆ  ಟಿಪ್ಸ ಬೇರೆ  ನೀ ಮಾಡಿದ  ಚಹಾ ನಿನ್ನಷ್ಟೇ ಸಿಹಿಚಪಾತಿ ನಿನ್ನತರಹ ಮೃದುನಿನ್ನ ಕೈ ರುಚಿ ಜೇನಿನಂತೆಅಂತ   ನೀವೂಮ್ಮೆ ಪಿಸುಗುಟ್ಟಿದರದೆ ಅವಳಿಗೆ ಹೆಮ್ಮೆ  ಹೊಸ ಹುಮ್ಮಸ್ಸಿನೊಂದಿಗೆ ಪ್ರವೇಶಿಸುವಳವಳುಅಡುಗೆ ಮನೆಯ ಮತ್ತೊಮ್ಮೆಹೊತ್ತು ನೋಡಿ  ಈ ಎಲ್ಲವನುಒಂದು ದಿನವಾದರೂಮರುದಿನವೇ ತೇನಾಲಿ ರಾಮಕೃಷ್ಣನ ಬೆಕ್ಕಿನಂತೆ  ನೀವು ಪರಾರಿ                ನಿಟ್ಟುಸಿರಿನೊಂದಿಗೆಕೊನೆಗಂದೆಅಬ್ಬಾ!!  ನೀನೆ ಸರಿಸಾಟಿ ಇದಕೆಲ್ಲ. ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ Read Post »

You cannot copy content of this page

Scroll to Top