ಮಾಜಾನ್ ಮಸ್ಕಿಯವರ ಗಜಲ್ ಗಳು
ಕಾವ್ಯ ಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಗಳು ಗಜಲ್-ಒಂದು ಅಂತರಂಗ ಸ್ತಬ್ದವಾಯಿತು ಲೇಖನಿ ಮೌನವಾದ ಹೊತ್ತುಭಾವನೆ ಶೂನ್ಯವಾಯಿತು ಲೇಖನಿ ಮೌನವಾದ ಹೊತ್ತು ಉಸಿರು ಉಸಿರಾಡುವುದನ್ನು ಮರೆತು ಜಡವಾಯಿತು ದೇಹಕಣ್ಣ ಹನಿ ಹೆಪ್ಪಾಯಿತು ಲೇಖನಿ ಮೌನವಾದ ಹೊತ್ತು ಸಂಬಂಧಗಳಿಗೆ ಜೋತು ಬಿದ್ದ ಮನ ಸೋಲುವುದು ಏಕೆಮಂಡಿಯೂರಿ ಶರಣಾಯಿತು ಲೇಖನಿ ಮೌನವಾದ ಹೊತ್ತು ಸೋತ ಕನಸುಗಳು ಮಲಗಿ ಗೋರಿ ಶೃಂಗಾರಗೊಂಡಿತುಪೈಶಾಚಿಕ ಕುಣಿತ ಜೋರಾಯಿತು ಲೇಖನಿ ಮೌನವಾದ ಹೊತ್ತು “ಮಾಜಾ” ಬೆಳೆಯುವ ಮೊಳಕೆಯನ್ನು ಚಿವುಟಿ ನಂಜೇರಿಸುವರುಆರೈಕೆಯ ಕೊರತೆಯಾಯಿತು ಲೇಖನಿ ಮೌನವಾದ ಹೊತ್ತು *** ಗಜಲ್-2 ಕನ್ನಡಿಯ ಬಿಂಬ ನೋಡಿ ನಂಬಬೇಡ ಹೋಗಲಿ ಬಿಡುಬಾಹ್ಯ ಸೌಂದರ್ಯ ನೋಡಿ ಹಿಗ್ಗಬೇಡ ಹೋಗಲಿ ಬಿಡು ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ ಬದುಕುತ್ತಿರುವರು ಜನಆಸೆಯಿಂದ ನಂಬಿ ಮೋಸ ಹೋಗಬೇಡ ಹೋಗಲಿ ಬಿಡು ನಿಬಿಡ ಜಾತ್ರೆಯಲ್ಲೂ ಒಂಟಿತನ ಕಾಡುತ್ತಿದೆ ಅದೇಕೋಕೊನೆಯೇ ಇಲ್ಲದೆ ಜೊತೆ ಆಗುವರೆಂದು ಭ್ರಮಿಸಬೇಡ ಹೋಗಲಿ ಬಿಡು ಅವಶ್ಯಕತೆಗೆ ಅಂಟುವರು ಸ್ವಾರ್ಥಿಗಳೆ ಇರುವರು ಎಚ್ಚರಎಲ್ಲರಿಗೂ ನೀ ಮೆಚ್ಚುಗೆ ಎಂದು ಬೀಗಬೇಡ ಹೋಗಲಿ ಬಿಡು ಅರಿತು ಅರಿಯದಂತೆ ಸಾಗಬೇಕಾಗಿದೆ ಬಾಳಯಾನದಲ್ಲಿ “ಮಾಜಾ”ಮೋಸದ ಜಾಲ ಹಬ್ಬಿದೆ ಬೀಳಬೇಡ ಹೋಗಲಿ ಬಿಡು *** ಗಜಲ್-3 ಬಿರು ಬಿಸಿಲಿನಲ್ಲಿ ತಂಗಾಳಿ ಬೀಸಿದೆ ಇನಿಯನ ಸನಿಹಆ ಮಧುರತೆಯು ಮರು ಕಳಿಸದೆ ಇನಿಯನ ಸನಿಹ ಬೆಂಕಿಯ ಉಂಡೆಯ ತಾಪವ ಸಹಿಸುವೆನು ಗಾಲಿಬ್ವಿರಹ ವೇದನೆ ಸಹಿಸಲಾರೆನು ಇಲ್ಲದೆ ಇನಿಯನ ಸನಿಹ ತಿರುಗಿಯೂ ನೋಡದೆ ಖದಮ್ ಅಳಿಸುತ್ತಿವೆಭ್ರಮೆಯ ಇಂತಜಾರಲ್ಲಿ ಬಾರದೆ ಇನಿಯನ ಸನಿಹ ಹೇಳಲೂ ನುಂಗಲು ಆಗದ ಈ ತಡಪಲ್ಲಿ ಸೋಲುತ್ತಿರುವೆಮನ – ದೇಹದ ರಸಿಕತೆಯೇ ಮರೆಸಿದೆ ಇನಿಯನ ಸನಿಹ ದಿಲ್ ಮಿಡಿಯುತ್ತಿದೆ “ಮಾಜಾ” ಳ ಭಾವನೆಗಳಲ್ಲಿಖುದಾನ ಬಕಷ್ ಗೆ ಕಾಯುತ್ತಿದೆ ಇನಿಯನ ಸನಿಹ ಮಾಜಾನ್ ಮಸ್ಕಿ
ಮಾಜಾನ್ ಮಸ್ಕಿಯವರ ಗಜಲ್ ಗಳು Read Post »









