“ದೋಷಿ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್
ಕಾವ್ಯ ಸಂಗಾತಿ “ದೋಷಿ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ ಸ್ಪರ್ಧೆ ಎನಿಸಿದರೆ ನಿಮಗೆನ್ನಕಾಯಕವದರ ದೋಷಿಯು ನಾನಲ್ಲ||ಕೆರೆಯುತಲಿದ್ದು ಮಾಯುವುದಕ್ಕೆಡೆ ಕೊಡದೆ ನಂಜಾಗುತಿರೆ ಗಾಯ ದೋಷಿಯು ನಾನಲ್ಲ|| ನಾನಾಡುವ ದಿಟ ಮಾತು ಸದಾಕಟುವೆನಿಸಿದರಕೆ ದೋಷಿಯು ನಾನಲ್ಲ||ನಾ ಬಲ್ಲೆ ಎನ್ನರಿವು ಹರಿವಿನ ಹಿತಮಿತಅಹಂ ಅನಿಸಿದರದು ತಮಗೆ ದೋಷಿ ನಾನಲ್ಲ|| ಎನ್ನ ಬಾಹ್ಯ-ಆಂತರ್ಯ ಸೊಬಗಿಗೆ ನಿಮ್ಮಕಣ್ಗಳು ಸೋಲುಂಬುದಕೆ ದೋಷಿಯು ನಾನಲ್ಲ||ಮುನ್ನ ಕೃತಿ ಪ್ರೌಢಿಮೆಯ ಆಳವರಿಯದೆವರ್ಜಿಸಿ ಕಳೆದುಕೊಳ್ಳುವುದಕೆ ದೋಷಿಯು ನಾನಲ್ಲ|| ಎನ್ನಾತ್ಮ ಮೆಚ್ಚುವಂತೆ ಮಾಡುವ ಕೆಲಸನಿಮ್ಮ ಕಾಡಿದರದರ ದೋಷಿಯು ನಾನಲ್ಲ||ಬೆನ್ನಂತೆ ಕಾಣದಿರುವ ನಿಮ್ಮ ಗುಣವ ನೀವೆ ತಿಳಿಯದಿರುವುದಕೆ ದೋಷಿಯು ನಾನಲ್ಲ|| ಆವುದನ್ನು ತಲೆಗೇರಿಸಿಕೊಳ್ಳದೆ ಇಷ್ಟದೊಂದಿಗೆ ಬಾಳುತಿರುವ ಅಂತರ್ಧ್ಯಾನಿ ನನಗಾವ ದೋಷವಿಲ್ಲ||ಆಕರ್ಷ ಜಗಕೆ ಮರುಳಾಗುತಿರುವ ಮೋಹಿ ನೀ ನಿನ್ನ ಅರಿಯದಕೆ ಅನಿಸುತ್ತಿದೆ ನಿಮಗೆ ದೋಷವೇ ಎಲ್ಲ || ಕೊ//ಮಾಳೇಟಿರ ಸೀತಮ್ಮ ವಿವೇಕ್, ಹಾಸನ.
“ದೋಷಿ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ Read Post »









