ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?”
ಕಾವ್ಯ ಸಂಗಾತಿ ಶಂಕರ್ ಪಡಂಗ ಕಿಲ್ಪಾಡಿ- “ಕವಿತೆ ಹುಟ್ಟಿದ್ದು ಹೇಗೆ?” ನನ್ನೊಳಗಿನ ಕವಿತೆಯನ್ನುಬಡಿದೆಬ್ಬಿಸಿದವರುತಿದ್ದಿ ತೀಡಿದವರು ಯಾರು..?ಅಕ್ಷರದ ,ಹಿಡಿತ, ತುಡಿತ, ಮಿಡಿತಗಳಅರಿವಿಲ್ಲದಿದ್ದರೂ,ಪಡುವಣದ ಶರಧಿಯಜೊತೆಲಲ್ಲೆಗರೆಯುವಚಂದಿರನ ನೋಡಿ ನನ್ನೊಳಗಿನ ಕವಿತೆಯ ಹುಟ್ಟು ,ಜೀವನದ ಅರ್ದ ಸತ್ಯದ ಬವಣೆಯ ನೆನೆದು,ಪೊಳ್ಳು ಭರವಸೆಯ ನೋಡಿಹುಟ್ಟಿತ್ತು ಕವಿತೆ.ನೀರುಣಿಸದೆ ಬೆಳೆದಹೆಮ್ಮರಗಳ ಕತ್ತರಿಸಿದರೂ,ಹಠ ಬಿಡದ ತ್ರಿವಿಕ್ರಮನಂತೆಮತ್ತೆ ಮತ್ತೆ ಚಿಗುರಿ,ಹಕ್ಕಿಗಳಿಗಾಸರೆಯನೀಡುವುದ ನೋಡಿ ,ಹುಟ್ಟಿತ್ತು ಕವಿತೆ.ಅಂತಸತ್ವವ ಮರೆತಂತೆಜೀವಿಸುವವರ ನೋಡಿ,ಬದುಕೆಲ್ಲ ಸವೆಸಿದರೂತೃಪ್ತಿ ಇಲ್ಲದ ಜನರ ನೋಡಿ,ಹುಟ್ಟಿತ್ತು ಕವಿತೆ.ಬದುಕು ಬಂಧುರವಾಗಲುನಿನ್ನನ್ನು ಅಪ್ಪಿಕೊಂಡೆ,ಒಪ್ಪಿಕೊಂಡೆ ಈಗನೀ ನನ್ನ ಜೀವಾಳವಾದೆ. ಶಂಕರ್ ಪಡಂಗ ಕಿಲ್ಪಾಡಿ
ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?” Read Post »









