Category: ಕಾವ್ಯಯಾನ

  • ಜಯಂತಿ ಕೆ.ವೈ. ಕವಿತೆ  “ಅಪ್ಪನೆಂದರೆ….”

    ಜಯಂತಿ ಕೆ.ವೈ. ಕವಿತೆ “ಅಪ್ಪನೆಂದರೆ….”

    ಕಾವ್ಯ ಸಂಗಾತಿ ಜಯಂತಿ ಕೆ.ವೈ. “ಅಪ್ಪನೆಂದರೆ….” ಅಪ್ಪನೆಂಬೋ ಅಪ್ಪ ಅವನ ಕೊನೆಯುಸಿರು ಚೆಲ್ಲಿದಾಗನಾನು ಕೈಗೂಸು!ಆರು ದಶಕ ಮತ್ತೆರಡು ಸಂವತ್ಸರಗಳನ್ನು ಅಪ್ಪನಿಲ್ಲದೆ ಕಳೆದಿರುವ ನನಗೆ ಅವನ ಪ್ರೀತಿಯ ಸವಿರುಚಿ ಸಿಕ್ಕಿದ್ದುವರ್ಷ ವರ್ಷದ ಅವನ ಶ್ರಾದ್ಧಗಳಂದು ಮಾಡುವ ರವೆಯುಂಡೆ ಪಾಯಸಗಳಲ್ಲಿ ಅಪ್ಪನ ನೆನಪು ಕಾಡುವುದುಅಪ್ಪನ ಹೆಸರು ಲೇಟ್……ಎಂದು ಶಾಲೆ, ಕಾಲೇಜುಗಳಿಗೆ ಸೇರುವಾಗ ಭರ್ತಿಮಾಡುವ ಅರ್ಜಿಗಳಲ್ಲಿ!ಅಪ್ಪನೆಂದರೆ ಆಕಾಶವೇ? ಗೊತ್ತಿಲ್ಲ!ಅಪ್ಪನೆಂದರೆ ಶಾಪಗ್ರಸ್ತ ಗಂಧರ್ವನೇ? ತಿಳಿಯದು!ಅಪ್ಪನೆಂದರೆ …….ಅಮ್ಮನ ನೆನಪಕೋಶಗಳಿಂದಹೊರಹೊಮ್ಮಿದ ಭಾವ!ಆಗಾಗ ಮನೆಯಲ್ಲಿ ಆಡುವ ಮಾತುಗಳಲ್ಲಿ ಇಣುಕುವ ಹೆಮ್ಮೆಯ ಜೀವ!ಮತ್ತೆನನಗುಸಿರುಕೊಟ್ಟವನು!!ಅಪ್ಪನೆಂದರೆ…. ಅಪ್ಪನೆಂಬೋ ಅಪ್ಪ ಅವನ ಕೊನೆಯುಸಿರು…

  • ಗಾಯತ್ರಿ ರವಿ. ಹುಬ್ಬಳ್ಳಿ ಅವರ ಕವಿತೆ “ಗಾಂಧಿ ನೋಟು”

    ಗಾಯತ್ರಿ ರವಿ. ಹುಬ್ಬಳ್ಳಿ ಅವರ ಕವಿತೆ “ಗಾಂಧಿ ನೋಟು”

    ಕಾವ್ಯ ಸಂಗಾತಿ ಗಾಯತ್ರಿ ರವಿ. ಹುಬ್ಬಳ್ಳಿ “ಗಾಂಧಿ ನೋಟು”  ಕಚೇರಿಯ ಖಜಾನೆಯಲ್ಲಿ ಗಾಂಧಿ ನೋಟಿನದೇ ದರ್ಬಾರು ಹೊಸ ನೋಟುಗಳು  ಬಂದರೆನೋಟವೆಲ್ಲ ಅವನೆಡೆಗೆ ಸೂಸುವ ನೋಟಿನ ಸುವಾಸನೆ  ಒಂದೇ ದಾರದಲ್ಲಿ ನೂರರ ಕಟ್ಟು ಈಗಷ್ಟೇ  ಜನ್ಮತಳೆದ ಎದ್ದೇಳಲು  ಓಲಾಡುವ ಎಳೆಗರುವಿನ  ನೊಸಲು  ಲೆಕ್ಕ ಒಪ್ಪಿಸುವಾಗ ಹೆಚ್ಚಿಗೆ ಬಂದರೆ ತಪ್ಪಿದೆ ಅಂತಲೇ ಅರ್ಥ  ಕಡಿಮೆಯಾದರೆ ಮತ್ತೆ ಮತ್ತೆ ಎಣಿಸುವ ಯಂತ್ರದ ಬಾಯಿಂದ ಹೊರಗೆ ಬರುವ  ಅಲ್ಲಿಯೂ ಸರಿಯಾಗಲಿಲ್ಲವೆಂದರೆ ಕೈಯಿಂದ ಒಂದೊಂದೇ ನೋಟನ್ನು ಎತ್ತಿ ಎತ್ತಿ ಹಾಕುವುದು  ಒಂದೊಮ್ಮೆಹರಿದ ನೋಟಿಗೆ  ಹಾಳೆಯ ತುಂಡರಿಸಿ ಹದವಾಗಿ ಹಚ್ಚಿ ಆಪರೇಷನ್ ಮಾಡಿದ್ದುಉಂಟು ಎಂದೂ ಕಳೆಗುಂದದ ನಗು ಅವನದು  ಮಾಸಿದ ಕಪ್ಪಾದ ಇಟ್ಟಲ್ಲೇ ಇಟ್ಟು ಧೂಳು ತಿಂದ ಕಮಟು ವಾಸನೆಯ ಮಳೆಯಲ್ಲಿ ತೋಯಿದ ಬಣ್ಣ ವಾಡಿದ ಬೆವರಲಿ ಬೆಂದಬರಿ ಮೈ ಕುಬೇರ  ಕೌಂಟರಿನಿಂದ …

  • ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.”

    ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.”

    ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” ಭೂಪಟದ ಗೆರೆಗಳಲಿರಕ್ತದ ಕಲೆಗಳ ಹಸಿವು,ಅಧಿಕಾರದ ಅಮಲಿಗೆಅನಾಥ ಮಗುವಿನ ಅಳುವೇ ನೈವೇದ್ಯ, ಉಕ್ಕಿನ ಹಕ್ಕಿಗಳ ಅಬ್ಬರಕೆಮಣ್ಣಾದವು ಬದುಕು,ಗೆಲುವಿನ ಪಟಾಕಿ ಅಡಿಯಲ್ಲಿಹೂತುಹೋದವು ಸಾವಿರ ಉಸಿರು, ತುತ್ತು ಅನ್ನದ ಪಾತ್ರೆಯಲಿಬೆಂದು ಹೋದವು ಮದ್ದು-ಗುಂಡು,ಮನೆಮಠದ ನೆನಪುಗಳಿಗೆಈಗ ಸ್ಮಶಾನವೇ ಕಡೆಯ ಉಡುಗೊರೆ, ದೇಶಪ್ರೇಮದ ಘೋಷಣೆಯಲಿಕಾಣದಾದವು ಒಲವಿನ ಕಣ್ಣು,ಯುದ್ಧದ ಬೂದಿಯಲಿ ಉಳಿದದ್ದುಬರಿಯ ಬೂದುಬಣ್ಣದ ಮಣ್ಣು, ಗಡಿ ದಾಟದ ಕನಸುಗಳಿಗೆಬಾಂಬುಗಳೇ ಅಂತಿಮ ವಿರಾಮ,ಗೆದ್ದವನ ಅಟ್ಟಹಾಸದಲಿಸತ್ತವನ ಹೆಸರಿಗಿಲ್ಲ ಆರಾಮ, ಬಂಕರಿನ ಕತ್ತಲಲಿ ಬಿಕ್ಕಳಿಸುತಿದೆ ಬಾಲ್ಯ,ಸಮಾಧಿಯ ಮೇಲೆ ನಿಂತು ನಗುತ್ತಿದೆ…

  • ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

    ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

    ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್ ಮುಂಗಾರಿನ ಕರಿ ಮುಗಿಲು ಜಲಧಾರೆಯ ಸುರಿಸುತಿದೆ ನೋಡಾಇಳೆಯ ಮೊಗದಿ ನಗೆ ಮೊಗ್ಗು ಬಿರಿದು ಕಂಪು ಹರಡುತಿದೆ ನೋಡಾ ನೀಲಿ ಆಕಾಶದಿ ನೇಸರ ಮೂಡಿಸಿದ ಹೊಂಬಣ್ಣದ ಹೊನಲುಪ್ರಕೃತಿ ಮಡಿಲಲಿ ಮುಂಜಾವು ಪಕ್ಷಿಗಳ ಗಾನ ಕೇಳುತಿದೆ ನೋಡಾ ಒಲವಿನ ಚೈತ್ರ ಬರುವಿಗೆ ಬನವು ಹಸಿರುಟ್ಟು ಹೂ ಅರಳಿಸಿದೆನಿಸರ್ಗದ ಸೊಬಗು ಪ್ರೇಮಿಯ ಎದೆಯವೀಣೆ  ಮಿಡಿಯುತಿದೆ ನೋಡಾ ಧಾರಿಣಿಯ ಹೃದಯ ಸೂರ್ಯ ಕೋಪಕೆ ನಲುಗಿ ನರಳುತಿದೆ  ಮೌನದಿಬಿದ್ದ ಮಳೆಯ ರಭಸಕೆ ನದಿಯು ಕಡಲಾಗಿ ಮೊರೆಯುತಿದೆ…

  • ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು”

    ಡಾ. ದಾನಮ್ಮ ಝಳಕಿ ಅವರ ಕವಿತೆ “ಹಸಿರು ತೇರು”

    ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹಸಿರು ತೇರು” ಹಸಿರು ತೇರು ಹೊರಟಿದೆ,ಭುವಿಯೆಲ್ಲ ಹಬ್ಬವಾಗಿದೆ;ಮರದ ನೆರಳು ಹರಡಿದೆ,ಮನದೊಳಗೆ ಮುದತಂದಿದೆ. ಗಿಡವ ನೆಟ್ಟು ಬೆಳಸೋಣ,ಗಿರಿಯ ಸೊಬಗು ಉಳಿಸೋಣ;ನದಿಯ ನಗುವು ಕೇಳೋಣ,ನಾಳೆಯ ಬದುಕು ಕಾಪಾಡೋಣ. ಎಲೆಯ ನಾದವು ವೀಣೆಯದು,ಹೂವಿನ ಪರಿಮಳ ಗೀತೆಯದು;ಹಕ್ಕಿಯ ಕಲರವ ವೇದವದು,ಪ್ರಕೃತಿಯ ಮಡಿಲೇ ಸ್ವರ್ಗವದು. ಮಳೆ ಸುರಿಯಲು ಕಾಡಿರಬೇಕು,ಕಾಡು ಬೆಳೆಯಲು ನಾವಿರಬೇಕು;ಉಸಿರು ಉಳಿಯಲು ಮರವಿರಬೇಕು,ಜಗವು ಉಳಿಯಲು ಹಸಿರಿರಬೇಕು. ಬನ್ನಿ ಎಲ್ಲರು ಕೈಜೋಡಿಸಿ,ಭೂಮಿತಾಯಿಯ ಪ್ರೀತಿಗೋಸ್ಕರ;ಹಸಿರು ತೇರನು ಎಳೆಯೋಣ,ಭವ್ಯ ಭವಿಷ್ಯವ ಕಟ್ಟೋಣ. ಹಸಿರು ನಮ್ಮ ಉಸಿರಾಗಲಿ,ಹಸಿರು ನಮ್ಮ ಹೆಸರಾಗಲಿ;ಹಸಿರು ತೇರು…

  • ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….”

    ಆದಪ್ಪ ಹೆಂಬಾ ಅವರ ಕವಿತೆ “ಜಗದೊಡೆಯಮುನಿದರೇ….”

    ಕಾವ್ಯ ಸಂಗಾತಿ ಆದಪ್ಪ ಹೆಂಬಾ “ಜಗದೊಡೆಯಮುನಿದರೇ….” ಇನಿತು ಮುನಿಯದೆಎನಿತು ದಣಿಯದೆನಗುತಲಿಹನು ನೇಸರಹೊನ್ನ ಬೆಳಕುಅರುಣ ಕಿರಣಚೆಲ್ಲುತಿಹನು ದಿನಕರ|| ಮತಿಹೀನ ಮನುಜಭೂಮಾತೆಯ ತನುಜಅಮ್ಮನೆಂಬುದ ನೋಡದೇಹೊನ್ನ ಮಣ್ಣನು ಅಗೆಯುತಲಿರುವೆಹಸಿರು ವನಸಿರಿಯ ಬಗೆಯುತಲಿರುವೆಬೆತ್ತಲಾಗುತಿಹಳು ಅಮ್ಮ ನಿನಗಿನ್ನು ಕಾಣದೆ|| ಜಗವ ಬೆಳಗುವಅವನ ಕಣ್ಣಿಗೇ ಮಣ್ಣಂತೆಕಾಣಲೊಲ್ಲದು ತಿಳಿಯಲೊಲ್ಲದುನಿಮ್ಮಗಳ ಕಪ್ಪು ರಂಗಿನಾಟಕೊಂಚ ತಾಳಿಪಾಪದ ಫಲ ಉಣ್ಣುವಿರಂತೆ|| ನೇಸರನೊಬ್ಬಮಹಾ ಮರೆಗುಳಿನಿತ್ಯ ಬರುವನುಎಲ್ಲವ ಮರೆತುಮತ್ತೆ ಮುಳುಗುವನುಬೇಸರದಿ ಮುನಿದು|| ಜಗದೊಡೆಯ ಮುನಿದರೆಉಳಿಗಾಲ ನಮಗಿಲ್ಲಯೋಚಿಸಿ ಮುಂದಡಿ ಇಡಿಮಿಂಚಿ ಹೋದರೆ ಕಾಲಚಿಂತಿಸಿಯೂ ಫಲವಿಲ್ಲ|| ಇಂದಿದೆಯೋಮುಂದಿದೆಯೋಎಂದಿದೆಯೋಮನುಕುಲದ ಮಾರಿಹೋಮತಿಳಿದೇಳು ಸಿಡಿದೇಳು ಕೂಗೇಳುತಡೆಯೋಣ ಭೂರಮೆಯ ನಾಶವನ್ನ|| ಆದಪ್ಪ ಹೆಂಬಾ

  • ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ”

    ತೇಜಾವತಿ .ಎಚ್ .ಡಿ. ಅವರ ಕವಿತೆ “ಸೀಮೆ ಜಾಲಿ”

    ಕಾವ್ಯ ಸಂಗಾತಿ ತೇಜಾವತಿ .ಎಚ್ .ಡಿ. “ಸೀಮೆ ಜಾಲಿ” ಅಂಕುಡೊಂಕಾದ ಕರಿ ನಾಗರಗಳಾಗಿಉದಯರಶ್ಮಿಗೆ ಮೈಯೊಡ್ಡಿರುವರಸ್ತೆಯ ಇಕ್ಕೆಲಗಳಲ್ಲಿದಶದಿಕ್ಕಿಗೂ ಕಬಂಧ ಬಾಹುಗಳನ್ನು ಚಾಚಿರುವಸಾಲು ಸಾಲು ಸೀಮೆಜಾಲಿಯ ಮರಗಳುಮೈತುಂಬಾ ಮುಳ್ಳು, ಕೆಸರು ದುರ್ನಾತ ಅವುಗಳ ನಡುವಲ್ಲೊಂದು ಪುಟ್ಟ ರಾಯಸಕ್ಕರಿ ಮರ ತಲೆಯೆತ್ತಿ ನಿಂತು ಸೂರ್ಯನೆಡೆಗೆ ಮುಖಮಾಡಿ ಕಂಗೊಳಿಸಿಚಿಗುರು ಹೂ ಮಿಡಿ ಕಾಯಿಹಣ್ಣು ತೊಟ್ಟು ಹಸಿರು ಉಟ್ಟು ಸಂಭ್ರಮಿಸಿದೆ ಅದೇ ಕೊಳಕು ಅದೇ ಕೆಸರು ಅದೇ ಗಾಳಿ ಅದೇ ಬಿಸಿಲನ್ನು ಉಂಡುಬರಡು ಭೂಮಿಯಲ್ಲಿ ತಂಪೆರೆದು ಅತ್ಮಾಭಿಮಾನವ ಸೂಸುತ್ತಿದೆಪರಿಸರದ ಹಂಗು ತೊರೆದು ಸುತ್ತಲಿದ್ದರೇನಂತೆ ಸೀಮೆಜಾಲಿ…

  • ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ”

    ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ”

    ಕಾವ್ಯಸಂಗಾತಿ ಮನ್ಸೂರ್ ಮುಲ್ಕಿ “ನೀಲಿ ನೀಲಿ ಆಕಾಶ” ನೀಲಿ ನೀಲಿ ಆಕಾಶ ಚುಕ್ಕಿಗಳಿಲ್ಲದೆ ಹೊಳೆಯುವುದೇಸೂರ್ಯನು ಕೊಡದಿರೆ ಆ ಶಾಖ ಚಂದಿರ ಸುಮ್ಮನೆ ಹೊಳೆಯುವನೇ ಹೂವುಗಳಿರದ ತೋಟಗಳು ಪರಿಮಳ ಬೀರಲು ಸಾಧ್ಯವೇಜೇನುಗಳಿರುವ ಗೂಡಿನಲಿ ಸಿಹಿಗಳು ಸಿಗದೇ ಇರುವುದೇ ಪ್ರೀತಿಯೇ ಇರದ ಹೃದಯದಲಿ ನಗುವನ್ನು ಕಾಣಲು ಸಾಧ್ಯವೇನಂಬಿಕೆ ಇಲ್ಲದ ಬದುಕಿನಲಿ ನೆಮ್ಮದಿ ಹುಡುಕಲು ಸಾಧ್ಯವೇ ವಿಶ್ವಾಸದ ನಡೆಯಲಿ ಬೆರೆತಾಗ ಜೀವನ ಸಾರ್ಥಕ ಆಗದೇಸೃಷ್ಟಿಗಳೆಲ್ಲ ಹೇಳುವುದು ಶಾಶ್ವತವಾದ ಸತ್ಯವೇ ನದಿಯು ಸಾಗರ ಸೇರದೆ ಭೂಮಿಯ ಒಡಲಲ್ಲಿ ನಿಲ್ಲುವುದೇಗಾಳಿಯು ಸನಿಹಕ್ಕೆ ಬರದಿರಲು ಉರಿಯುವ…

  • ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು”

    ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು”

    ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನೆನಪಿನ ಸಾಲು” ತಿರುಗಿ ಬಾರದ  ಪುಟಗಳು,ನೆನಪಿನ ಬಂಡಿಯಲಿ ಮರೆ ಕ್ಷಣಗಳು,ಚಿನ್ನದ ರಥದಲ್ಲಿ ಓಡಿದ  ಬಾಲ್ಯ,ಇಂದಿನ ನೆನಪಲಿ ಅರಳಿದ ಕಾವ್ಯ. ಕೆಸರಲಿ ಹೊರಳಾಡಿದ  ದಿನಗಳು,ಹಸಿರಲಿ ಓಡಿದ  ಹೆಜ್ಜೆಗಳು,ಅಮ್ಮನ ಮಡಿಲ ಸವಿ ನಿದ್ದೆಯ ಸುಖ, ಇಂದು ಬರಿ ನೆನಪಿನ ಮುಖ. ಗೆಳೆಯರ ಜೊತೆಗೂಡಿ ನಕ್ಕ  ದಿನಗಳು,ಕಾಗದದ ದೋಣಿ ತೇಲಿದ ದಿನಗಳು,ಚಿಂತೆಯಿಲ್ಲದ ನಿರಾತಂಕದ ನಗೆ,ಮರಳಿ ಬಾರದು  ಸಂಭ್ರಮ ಜಗತ್ತಿನೆಡೆಗೆ. ಕಾಲ ಚಕ್ರ ಉರುಳುತ ಸಾಗಿದೆ,ವರ್ತಮಾನದ ಬದುಕು ಯಾಂತ್ರಿಕ,ಹಳೆಯ ದಿನಗಳ ನೆನೆದ ಮನಕೆ, ಮಧುರ ಮೌನ…

  • ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…”

    ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…”

    ಕಾವ್ಯ ಸಂಗಾತಿ ಸವಿತಾ ದೇಶಮುಖ “ಪ್ರೀತಿ ಕಳೆದುಹೋಗಿದೆ…” ಮನೆ ಮೂಲೆ ಮೂಲೆಯಲಿ ಹುಡಕಿದೆನಿನ್ನ ಪುಟ್ಟ ಹೆಜ್ಜೆಯ ಸದ್ದು ಕೇಳದೆಆತುರದಿ ಓಡಿಬರುವ ನಿನ್ನ ನೋಟದ,ನೆನಪಾಗಿ ಹೃದಯ ತುಂಬಿ ಕಾಡುತ್ತಿದೆ.!!೧!! ತಿಂಡಿ ಬಟ್ಟಲೂ ಹಾಗೆಯೇ ಉಳಿದಿದೆ,ಕಾಯುತ ನಿನ್ನ ದಾರಿ ನೋಡುತ್ತಿದೆ.ಎಲ್ಲಿ ಹೋದೆ ಕಣ್ಮರೆಯಾಗಿ ಹೊರಟೆನಿನ್ನಿಲ್ಲದೆ ಮನವು ಖಾಲಿಯಾಗಿದೆ.!!೨!! ಮಡಿಲ ಮೇಲೆ ಮಲಗಿದ ಕ್ಷಣಗಳು,ಮನದಾಳದಿ ಜೀವಂತವಾದ ದಿನಗಳುಮುದ್ದಿನ ಮ್ಯಾವ್ ಮ್ಯಾವ್ ಕೇಳಿದ ಕ್ಷಣಕಣ್ಣಂಚಿನಲಿ ಕಂಡ ನಿನ್ನ ತುಂಟಾಟಗಳು!!೩!! ಕರೆಗೆ ಕಿವಿಗೊಡದೆ ಗಾಳಿಗೆ ತೂರಿದ ಓಟಬೇಡವೆಂದರು ಮತ್ತೆ ನನ್ನ ಮನೆಗೆ ಬಂದ ಆಟನಿನ್ನ…

You cannot copy content of this page