ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು”
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” ಇನ್ನು ಇದೆ ಹೇಳುವುದು…ಕೇಳಿಕೊಳ್ಳಿ ಬಂಧುಗಳೇನಿಮ್ಮ ಜೊತೆ ಬಹುಪಾಲು ವಿಷಯ ಹಂಚಿಕೊಳ್ಳಬೇಕಿದೆಸಮಯ ಗಮನ ಕೊಟ್ಟು ಕೇಳಿನಾನು ನೀವು ಇಲ್ಲಿ ಬದುಕ ಬೇಕಿದೆ. ಮೋಸ ವಂಚನೆ ಸುಳ್ಳುಗಳು ಅಧಿಕಾರ ಹಿಡಿದಿರುವಾಗ ಹತ್ತಿಕುವುದು ದಮನಿಸುವುದು ಕಾನೂನು ಕಟ್ಟಳೆಯಾಗಿವೆಸತ್ಯಕ್ಕೆ, ನ್ಯಾಯಕ್ಕೆ ಸಂಘರ್ಷಕೆಇನ್ನೂ ಇದೆಯಾ ಬದುಕು? ಸತ್ಯವ ನುಡಿದರೆ ಭಯೋತ್ಪಾದಕ ಎನ್ನುವರುನ್ಯಾಯವ ಕೇಳಿದರೆನಗರ ನಕ್ಷಲೈಟ್ ಎನ್ನುವರು ಮಾರಾಟವಾಗಿವೆ ಕೋರ್ಟ್ ಕಚೇರಿ ಹಕ್ಕಿಗೆ ಕೂಗುವ ಹಾಗಿಲ್ಲಧ್ವನಿ ಎತ್ತುವ ಹಾಗಿಲ್ಲಚಳುವಳಿ ಮಾಡುವ ಸ್ಥಿತಿಯಿಲ್ಲ ಪೊಲೀಸರ ಗುಂಡು ಬೂಟಿನ ಸದ್ದುರಾತ್ರಿಗೆ ಹಗಲೆನ್ನಬೇಕುಕೋಳಿಗೆ ನವಿಲೆನ್ನಬೇಕು ಬುದ್ಧ ಬಸವ ಎಂದರೆತಾಲಿಬಾನಿ ಎನ್ನುವರುಜಾತಿ ಧರ್ಮದ ದ್ವೇಷ ಬಿತ್ತುವರುವೋಟಿನ ಮಾರುಕಟ್ಟೆಗೆಬಿಕರಿಯಾಗಿವೆ ಮಠ ಮಸೀದಿಚರ್ಚ್ ವಿಹಾರ ಬಸದಿಗಳುಇನ್ನೂ ಇದೆಯಾ ಭವಿಷ್ಯ ? ದೇಶ ಹತ್ತಿ ಉರಿಯುತ್ತಿದೆರಾಜರ ವಿದೇಶಿ ಪ್ರವಾಸಮಂತ್ರಿಗಳು ಕೊಳ್ಳೆ ಹೊಡೆಯುತ್ತಿದ್ದಾರೆಬುದ್ಧಿ ಜೀವಿಗಳ ಗಾಢ ನಿದ್ದೆಪತ್ರಿಕೆ ಟಿವಿ ನೋಡುವ ಜನರುಇನ್ನೂ ಎದ್ದಿಲ್ಲ ದೇಶಕ್ಕೆ ನಾಡಿಗೆ ದಸರಾ ಪಲ್ಲಕ್ಕಿಯಲಿ ಮೆರವಣಿಗೆಸೋತವರ ಸತ್ತವರ ಗೊಂಬೆ ಕುಣಿತಪೊಲೀಸರ ಕವಾಯತ ನಮನಆನೆ ಒಂಟಿ ಕುದುರೆ ಸವಾರಿಮೋಸವೋ ಮೋಜು ಗೊತ್ತಾಗುತ್ತಿಲ್ಲ ಕೂಗುವ ಹಾಗಿಲ್ಲ ಶೋಷಕರ ವಿರುದ್ಧಇಂಕಿಲಾಬ್ ಘೋಷಣೆಒಬ್ಬನ ಸುಡಲು ಸಿದ್ಧ ನೂರು ಕೆಜಿ ಸಿಡಿ ಮದ್ದುನ್ಯಾಯಕ್ಕೆ ಬೆಲೆಯಿಲ್ಲ ಜಾಮೀನಿಲ್ಲಸತ್ಯವಂತರ ಹತ್ಯೆ ನಿತ್ಯ ನಡೆದಿವೆ ಅದಕೆಂದೇ ನಾನೂಕೂಗಿ ಹೇಳುತ್ತೇನೆ…ನಾನು ಬಸವ ಧರ್ಮಿಗಣಾಚಾರವೇ ನನ್ನ ಅಸ್ತ್ರನಾನು ಇರುಳಿಗೆ ಹಗಲೆನ್ನುವುದಿಲ್ಲಕೋಳಿಗೆ ನವಿಲೆನ್ನುವುದಿಲ್ಲ ಈಗ ಮುಸ್ಸಂಜೆ ಕರಾಳ ಕತ್ತಲೆಯಾಗುವುದುಜೈಲಿನ ಬಿರುಕು ಗೋಡೆಯಲ್ಲಿಚಿಗುರಿದೆ ಬುದ್ಧನ ಅರಳಿ ಮರಮುಂಜಾನೆ ಕ್ರಾಂತಿಯ ಸೂರ್ಯಮತ್ತೆ ಹುಟ್ಟುವನುಭ್ರಮೆ ಭ್ರಾಂತಿ ಅಳೆದು ಬನ್ನಿ ಎದ್ದೇಳಿ ದುಷ್ಟ ಕಾರಸ್ಥಾನಕ್ಕೆಬಲಿಯಾದವರ ಉಳಿಸ ಬನ್ನಿನಿಮ್ಮ ಹಕ್ಕಿಗೆ ಘೋಷಣೆಯಾಗ ಬನ್ನಿಬುದ್ಧ ಬಸವ ಬಾಪು ಬಾಬಾಸಾಹೇಬರಮತ್ತೆ ಭುವಿಗೆ ಹೊತ್ತ ತನ್ನಿ ನಾನು ಬಸವನ ಒಕ್ಕಲುಬಸವ ಪಥಿಕ ಬಸವ ಧರ್ಮಿಎದ್ದು ಬನ್ನಿ ಗುದ್ದು ಬನ್ನಿಅಸಮತೆ ಅನ್ಯಾಯ ಶೋಷಣೆಗೆಕೊನೆ ಹೇಳೋಣ ಬನ್ನಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” Read Post »









