ಕಲ್ಪನಾ ಎಸ್ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಏಕೈಕ ಜೀವ, ನನ್ನಪ್ಪ” Background ನಲ್ಲಿ ಅಳುವನಮ್ಮ ಮುಂದೆ ನಗುತ ಇರುವಏಕೈಕ ಜೀವ ಅದೇ ಅಪ್ಪ… ಆತನ ಬೆವರ ಹನಿ ಕಾಣ್ತದಆದ್ರ ಆತನ ಕಣ್ಣೀರ ಹನಿಯಾರಿಗೂ ಕಾಣದು… ತನ್ನವರ ಮೊಗದ ಮೇಲಿನನಗುವ ಕಂಡು ನಗುತಲಿರುವತನ್ನ ನೋವನೆಂದು ತೋರಿಸದವ… ಉಸಿರು ಕೊಟ್ಟ ಜೀವಕೆ ಹೆಸರುಕೊಟ್ಟ ಹೃದಯ ಅವನ ಹೆಸರೆಹೆಮ್ಮೆಯದು ಮಕ್ಕಳಿಗೆ… ಈ ಒಂದಿನ ಸಾಕೇನು ಮಾಡಲುಅಪ್ಪನ ಗುಣಗಾನ ಈ ಕಾಲ ಸಾಲದುಪಡೆಯಬೇಕು ಮರುಜನ್ಮಾನ… ಈ ಅಕ್ಷರಗಳಿಗೆ ಹೋಲಿಸಲಾಗದವನಮ್ಮ ಭಾವಕ್ಕೂ ನಿಲುಕದವಆಗಸದಗಲ ವಿಶಾಲ ಮನೋಭಾವದವ…. ನಗುವ ನಗಿಸುವ ಹೂವಿಗಿಂತಲೂಮೃದು ಮನದವ ಕೋಪಬಂದರಂತೂ ಕಾಲಭೈರವ… ಈ ಜಗದಲಿ ಅಪ್ಪನ ಮುಂದೆಸರಿಸಾಟಿ ಯಾರಿಲ್ಲವೊಅವ ನಮ್ಮ ಜೀವ ದೈವ…. ಕಲ್ಪನಾ ಎಸ್ ಪಾಟೀಲಕಾವ್ಯಧರೆ
ಕಲ್ಪನಾ ಎಸ್ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ” Read Post »









