ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ರವಿ …ಮೀಟ್ಸ್…. ಬಾನು” ನೀ ಬರುವ ಸಮಯ ಕೆಂಪೇರುವುದುನನ್ನ ಮೂಡಣದ ಕೆನ್ನೆ ,ನೀ ಬರುವ ಸಂಭ್ರಮ ಹೇಳ ತೀರದು ,ನನ್ನ ಹರುಷದ ಬಾಗಿಲು ತೆರೆಯುವಕೀಲಿ ನೀನು, ಮೆಲ್ಲನೆ ಉಲಿಯಲೆ ನಲ್ಲ , ನಿನ್ನ ಹೆಸರು ….ರವಿ ….ರವಿ…..ರವಿ….. ಮಂದ ಶೀತಲ ಗಾಳಿ ,ಇಬ್ಬನಿಯ ಮಣಿ ಮಾಲೆ ಹಸುರಿನ ಮೇಲೆ ,ಅರಳಿ ನಿಂತ ಹೊಸ ಕುಸುಮ ,ಹಕ್ಕಿಯ ಚಿಲಿ ಪಿಲಿ ನಾದ ,ನಿನ್ನ ಸ್ವಾಗತ ಕೊರುವವು ,ನೀ ತಂಪ ಸುಸುತ ,ಮಂದಹಾಸ ಬಿರುತ ,ಸ್ವರ್ಣ ವರ್ಣದ ತೇರ ಏರಿ ಬರುವೆ ….. ತುಸು ಹೊತ್ತು ಸರಿಯುತ್ತಿರೆಅದೇನು ರೋಷವೊ ?ಅದೆಂಥಹ ಮೋಹವೊ ?ಕಾಯಿಸಿ , ಕಂಗೆಡಿಸಿ ,ಬೇಯಿಸಿ , ಬೇಂಡಾಗಿಸುವೆಅದೇನು ಹುಚ್ಚು ಪ್ರೇಮವೊ ನಿನ್ನದು ,ಇರುವ ಸ್ವಲ್ಪ ಹೊತ್ತಲ್ಲೆ ನನ್ನೊಡನೆಸರಸ , ವಿರಸ ಮತ್ತೆ ಸರಸ…. ನೀ ಮರಳುವಾ ಸಮಯ ಕೆಂಪಾಗಿಸುವೆನನ್ನ ಪಡುವಣದ ಕೆನ್ನೆಇಡೀ ದಿನ ನನ್ನ ಗೋಳಾಡಿಸಿಹೋಗುವಾಗ ರಮಿಸಿ , ಮುದ್ದಿಸಿ ,ತಬ್ಬಿ ತಂಪನೆರೆಯುವೆನಿನ್ನ ಪ್ರೇಮದ ಪರಿಯ ನಾನರಿಯೆ ?ನೀ ನನ್ನವನೆಂಬ ಖುಷಿ ನನ್ನದುನೀ ನನಗಾಗೆ ಇರುವೆ ಎಂಬ ಜಂಭ ನನ್ನದುನಾ ನಿನ್ನ ಬೆಳಕಿನಲಿ ನಲಿಯುವೆ , ನಾ ನಿನ್ನವಳೆಂಬ ತೃಪ್ತಿ ನನ್ನದು…… ನೀ ಮರೆಯಾಗುವೆ ಇರುಳಿಗೆನಾ ಬೇಸರದಿ ಮುಖ ಕಪ್ಪು ಮಾಡಿಕೊಂಡುಮುದುರಿ ಮಂಕಾಗುವೆಮತ್ತೆ ನಾಳೆ ನಿನ್ನ ಬರುವಿಕೆಗಾಗಿಕನವರಿಸಿ ಕಾಯುವ ನಾನು ನೀಲಿಬಾನು …ಬಾನು….ಬಾನು…. ಪರವಿನಬಾನು ಯಲಿಗಾರ