ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಅವರ ಕವಿತೆ “ಪ್ರೀತಿ”

ಕಾವ್ಯ ಸಂಗಾತಿ ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಪ್ರೀತಿ ನನ್ನ ಪ್ರೀತಿಗಾಗಿಕಾಯಬೇಕಿಲ್ಲ ನೀನುಬೂದಿ ಮುಚ್ಚಿದ ಕೆಂಡನಿನ್ನ ನೆನಪಲ್ಲಿ ನಾನು ಯಾವುದೇ ಅಂತಸ್ತಿಲ್ಲವಯಸ್ಸಿನ ಬಂಧನವಿಲ್ಲಬಡತನ ಸಿರಿತನದ ಅರಿವಿಲ್ಲಉಚ್ಛ ನೀಚ ಭೇದವಿಲ್ಲ ಇಬ್ಬರ ಮನಗಳ ಬೆಸುಗೆಇದಕ್ಕೆ ಬೇಕಿಲ್ಲ ಒಪ್ಪಿಗೆಅವಿರತ ಭಾವನೆಗಳ ತೃಪ್ತಿಗೆಪರಸ್ಪರ ಕಾತರವೇ ಅಪ್ಪುಗೆ ಇರುವುದೆಲ್ಲ ಒಲುಮೆಭಾವಗಳ ಚಿಲುಮೆವಾತ್ಸಲ್ಯದ ಆರುಮೆತೋರಿಕೆಗಲ್ಲ ಈ ನಲುಮೆ ನಿನ್ನಯ ಅವ್ಯಕ್ತ ಪ್ರೀತಿನಿರಂತರ ಆಸರೆಯ ಆಸಕ್ತಿಆಶಿಸುವೆ ನಿನ್ನಿಂದ ನಾನೆಂದುಅಂದು ಇಂದೂ ಎಂದೆಂದು . ಪ್ರೊ. ರಾಜೇಶ್ವರಿ ಶೀಲವಂತ ಪುಣೆ.

ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಅವರ ಕವಿತೆ “ಪ್ರೀತಿ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಪ್ರೇಮಲೋಕ.”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಪ್ರೇಮಲೋಕ.” ಇವತ್ತು ಪ್ರೇಮಿಗಳ…ಪ್ರೇಮ ಲಹರಿ ಎಲ್ಲೆಡೆಯುಸಡಗರದ ಸಂಭ್ರಮೋತ್ಸವವು,! ಅದೇನೊ ಪ್ರೀತಿ…ಉಲ್ಲಾಸ ಯೌವನ ರಸಮಯಪ್ರೇಮ ಲೋಕದ ಸ್ನೇಹ ಸಾಗರವು,! ಪ್ರೇಮಾಂಕುರದಲಿ….ಅದೇ ಪ್ರೀತಿ, ವೇಷ, ಪೋಷಾಕುಕಾದಿರಲು ಬಯಸಿ ನಿನ್ನ ಆಗಮನವು,! ಕೈಯಲ್ಲೊಂದು ಗುಲಾಬಿ…ಬರುವಿಕೆಯ ದಾರಿ ನೋಡುತ್ತಕಾದಿರಲು ಪ್ರಿಯೆ,ಈ ತನುಮನವು,! ಬಂದು ಬಿಡು ಓ ಗೆಳತಿ…ಈ ದಿನವ ಅರ್ಥಪೂರ್ಣಗೊಳಿಸುಅಮರವಾಗಿರಲಿ ಪ್ರೀತಿ ಅನುದಿನವು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು ಅವರ ಕವಿತೆ”ಪ್ರೇಮಲೋಕ.” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಒಲವಿನ ಗೆಳೆಯ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಒಲವಿನ ಗೆಳೆಯ” ದತ್ತ ಪದ :- ಪ್ರಿಯಾ ನೀನಾರಿಗೂ ಆಗದಿರು ಇನಿಯ! ಒಲವಿನಿನಿಯಾ ನಿನ್ನ ಹೆಸರೆ ಮಧುರ ಗಾನಹೃದಯದೊಳಗೆ ಮೂಡುವ ಸುವಾಸನಬೆಳಗಿನ ಹೊನಲು ಕಿರಣದಂತೆ ನೀನುಕಂಡೆನೊಂದು ನಿನ್ನದೆ ಹೊಸ ಕನಸನು. ನಗುತ ಆಡುವ ಮೃದುವಾದ ಮಾತುಕೇಳಿದರೆ ಮರೆತೆನೆಲ್ಲ ಕಷ್ಟವನಂತುಮಳೆಯ ತಂಪಿನ ಹನಿಯಂತೆಬಿಸಿಲಿನಲಿ ಸಿಗುವ ನೆರಳಂತೆ. ಸ್ನೇಹದ ಸಾಗರದ ಮುತ್ತಿನಂತೆಪ್ರೀತಿಯ ಪಥಕೆ ನೀ ದೀಪದಂತೆಇನಿಯಾ ಎಂದರೆ ಮಧುರತೆಯ ಸಾರಜೀವನದಲಿ ತುಂಬುವೆ ಹರ್ಷಧಾರ. ಅವನ ಹೆಜ್ಜೆ ಚಿಗುರಿನ ಸವಿಅವನ ದೃಷ್ಟಿಯೆ ನನ್ನ ಕನಸಿನ ಕವಿಪ್ರಿಯಾ ನೀನಾರಿಗೂ ಆಗದಿರು ಇನಿಯಮನದೊಳಗೆ ಸದಾ ಉಳಿಯುವೆಯ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಒಲವಿನ ಗೆಳೆಯ” Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿಸಲು ಉಂಟೆ”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಪ್ರೀತಿಸಲು ಉಂಟೆ” *ಪ್ರೀತಿಸಲು ಉಂಟೆ * ಪ್ರಣಯ- ಪ್ರೀತಿ- ಪ್ರೇಮಇದೇಲ್ಲ ಹೃದಯ ಮರ್ಮಎರಡು ಆತ್ಮಒಂದಾಗುವ ಧರ್ಮ ಕೃಷ್ಣನು ಬೀಸಿದ ಬಾನಿನಗಾಳಿಯಲಿ ರಾಧೆ ಉಸಿರಿನಪ್ರೇಮ ಗೀತೆ -ಅಮರ ಕಥನ ಅಕ್ಕನ ಅರ್ಪಣೆ ಕಥನದಿಒಂದಾದಳು ಶಿವನ ಚರಣದಿಸಾವಿಲ್ಲದ ರೂಪಿಲ್ಲ ಗಂಡನಡಿ ಮೀರಾಳು ತ್ಯಜಿಸಿದ ನಡೆಹಾಡಿ ಹೊರಟಳು ಕೃಷ್ಣನಡೆವಿಷನುಂಗಿ ಮುಟ್ಟಿದ ಪ್ರೇಮದಡೆ ಶಿವನು ಪಾರ್ವತಿಗೆ ಅರ್ಪಿಸಿದ್ದೇತನುಮನ  ವರ್ಣಸಲಾದಿತ್ತೇಕಾಲ್ಪನಿಕ ಎನಿತು ಅನ್ನಲಾಗದು…. ಪ್ರೀತಿಸು ಪ್ರೀತಿಸು ಎನ್ನಲುಪ್ರೀತಿ ಹೇಳಿ ಕೇಳಿ ಹುಟ್ಟುಲು-ಅದು ಋಣಾನುಬಂಧ ಕಾಣು ಕೇಳಿದರೆ ಕೊಡುವ ಬೇಡಿದರೆನೀಡುವ ಪಡಿ ಪದಾರ್ಥವಾದರೆಪ್ರೇಮ ಭ್ರಮೆ ಪ್ರಮೇಯಾದರೆ  ಪ್ರೀತಿಯು ಹೇಳ ತಿರದ  ಅಂತರಂಗದೈಸಿರಿ  ಅಮೋಘ ಅನಂತಅಜಯ ಅಜರಾಮರ ಅನುಪಮ ಕೊಡುವುದೇ ಪ್ರೀತಿಯ ಧರ್ಮಮರಳಿ ಪಡೆಯುವ ಆಸೆ ಆರ್ಮಿಎಲ್ಲಾ ಸೀಮೆ ದಾಟಿ ನಿಸ್ಸೀಮ ಕರ್ಮ ಪ್ರೇಮ ತಿರುತುರುಗಿ ಸುತ್ತಿ ಸುಳಿದುಮತ್ತೆ ಅಲ್ಲೇ ಬಂದು ನಿಲುವ ಪ್ರೇಮಪ್ರೀತಿಸಿದ ಹೃದಯದತ  ಪಯಣವು ನಾವು ಮನಸಾರೆ ಪ್ರೇಮಿಸುವರುತಿರುಗಿ ಪ್ರೀತಿಸದಿರಲಿ ಬಿಡಲಿನಿಜ  ಪ್ರೇಮ ಅವರ ನೆರಳಲಿ ಬಲೆಯುತ ಬೆಳೆಯುತ ಪ್ರೇಮಿಸುತಅವರ ಖುಷಿಯಲಿ ತಾನು ಸಂತೈಸುತಅದೆಲ್ಲಿಯಾದರೂ  ನೀನು ಬಾಳು….  ನಾನು ಮಾತ್ರ ನನ್ನ ಹೃದಯದತಂಪು ಇಂಪಿನಲಿ ಹುದಿಗಿಹುದುಎನ್ನ ಮನ ಸಿಂಚನಗೊಂಡಿಹದು  ನಿನ್ನಲೇ .ನನ್ನ ಪ್ರಾಣ ಜೀವದ ಜೀವ ನೀನೇ ಎನ್ನ  ಆತ್ಮಕ್ಕೆ ಆಧಾರ ಜವನನ್ನ ಆಸ್ತಿ ಪಾಸ್ತಿ ಎಲ್ಲವೂ ನೀನೆ “ನನ್ನ ಅಸ್ತಿತ್ವಕ್ಕೆ ನೀನೇ ಕಾರಣನೀನೇ ವಿಮಲ ಪ್ರೀತಿಯ ದ್ಯೋತಕ” ಅಂತ ಯಾರಲ್ಲಿ ಅನ್ನಿಸುವುದು ಅದು ನಿಜವಾದ ಪ್ರೀತಿ ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿಸಲು ಉಂಟೆ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಇಂದು ಪ್ರೇಮಿಗಳ ದಿನ ಬಂದೇ ಬಿಟ್ಟಿತಲ್ಲ ಗೆಳತಿನಿನ್ನ ಮೇಲೆ ಪ್ರೀತಿ ಅದೆಂದೋ ಹುಟ್ಟಿತಲ್ಲ ಗೆಳತಿ ಒಂದು ದಿನವಷ್ಟೇ ಮೀಸಲಿಟ್ಟರೆ ಅದೆಂಥ ಪ್ರೀತಿಪ್ರತಿಕ್ಷಣ ನಿನ್ನುಸಿರೇ ಎದೆ ಕದವ ತಟ್ಟಿತಲ್ಲ ಗೆಳತಿ ಎಷ್ಟು ಪ್ರೀತಿಸುವೆ ಎಂದು ಕೇಳಿ ತಿಳಿಯುವುದಲ್ಲಭಾವದಿ ಹುಟ್ಟಿ ಬಾಂದಳವನೇ ಮುಟ್ಟಿತಲ್ಲ ಗೆಳತಿ ಪ್ರೀತಿ ಪರಸ್ಪರ ನಂಬಿಕೆಯ ಮೇಲೆ ನಿಂತಿಹುದಂತೆಸಂಶಯದ ಭೂತಗಳ ಬಿಡದೇ ಸುಟ್ಟಿತಲ್ಲ ಗೆಳತಿ ತೋ(ಹೇ)ರಿಕೆಗೋ ಪ್ರೀತಿಸುವವನಲ್ಲ ಕುಂಬಾರಬರಡಾದ ಎದೆ ನೆಲದಿ ಹಸಿರನ್ನೇ ನೆಟ್ಟಿತಲ್ಲ ಗೆಳತಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಕವಿತೆ”ಪ್ರೀತಿ ಎಂದರೆ”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಪ್ರೀತಿ ಎಂದರೆ” ಪ್ರೀತಿ ಎಂದರೆಪ್ರದರ್ಶನವಲ್ಲಪರಸ್ಪರ ಸ್ಪಂದಿಸುವುದುಬಾಂಧವ್ಯ ಎಂದರೆಬಯಸುವದಲ್ಲಬೆಸೆಯುವುದುಸಂತಸ ಎಂದರೆಬರೀ ಸುಖವಲ್ಲಸವಿಯುವುದುಭಾವನೆಗಳು ಎಂದರೆ ಬಳಸಿಕೊಳ್ಳುವುದಲ್ಲಭರವಸೆ ಹುಟ್ಟಿಸುವುದುಕನಸುಗಳು ಎಂದರೆಕಾಣುವದಲ್ಲನನಸಾಗಿಸುವುದುನೆನಪುಗಳು ಎಂದರೆಮಾಸುವದಲ್ಲಆರಾಧಿಸುವುದುಬದುಕು ಎಂದರೆಜೀವಿಸುವದಲ್ಲಸುಂದರಗೊಳಿಸುವುದುಪ್ರೇಮಾಂತರಂಗದನಿನ್ನೊಲುಮೆಗೆಕಟ್ಟುವೆ ತೋರಣನಿನ್ನಾಗಮನ ಎನಗೆಸಹ್ಯಾದ್ರಿ ಚಾರಣ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಕವಿತೆ”ಪ್ರೀತಿ ಎಂದರೆ” Read Post »

ಕಾವ್ಯಯಾನ

“ಕಾಯುತ್ತಿದ್ದೇನೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಕಾಯುತ್ತಿದ್ದೇನೆ” ಕಾಯುತ್ತಿದ್ದೇನೆನನ್ನ ವ್ಯಾಲೆಂಟೈನ್ ಗೆಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆರೈತ ಹುಬ್ಬಿಗೆ ಕೈ ಹಚ್ಚಿಮುಗಿಲ ಮೋಡದಮಳೆಯ ಹನಿಗಾಗಿಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆಕಳೆದು ಹೋದ ಕರುತನ್ನ ತಾಯಿಯರಸುವಂತೆಮುಗ್ಧ ಪ್ರೀತಿಯ ಅಪ್ಪುಗೆಗೆಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆಕರಾಳ ದಿನಗಳಜೈಲಿನಲ್ಲಿ ಕೊಳೆಯುವಅಮಾಯಕರು ಜಾಮೀನಿಗಾಗಿಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆದಲಿತ ಬಡವರ ದಮನಿತರಶೋಷಣೆಯ ಸಂಕೋಲೆಕಳಚಿ ಬೀಳುವ ದಿನಕೆಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ನನಗೀಗ ಅರ್ಥವಾಗುತ್ತಿದೆಪ್ರೀತಿ ಪ್ರೇಮ ಪದಗಳುಭಯ ಭೀತಿಯಲ್ಲಿ ಮುದುಡಿವೆಸಮರಸ ಸಮಾಧಿಯಾಗಿದ್ವೇಷದ ಮಾರುಕಟ್ಟೆಯಲ್ಲಿಹೂವು ಕೊಳ್ಳುವವರಿಲ್ಲ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡುಜಗದ ಹಗೆಯಳಿಸಿಸ್ನೇಹ ಪ್ರೀತಿಯ ಉಸಿರಾಗಿನೊಂದ ಮನಕೆ ನೆಮ್ಮದಿಯತಿಳಿ ಕಾವೇರಿಯಾಗಿ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಸುಡುವ ಕೆಂಡದ ಮಧ್ಯೆಶಾಂತಿಯ ಮೊಂಬತ್ತಿ ಬೆಳಕಾಗಿಹೊಸ ಬದುಕಿನ ನಿರ್ಮಲನಿಶ್ಚಿತ ಶಾಶ್ವತ ಪ್ರೀತಿಯಾಗಿ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡುಬುದ್ಧ ಬಸವರ ಬೆಳಕಾಗಿಅನಾಥ ಮಕ್ಕಳ ತಾಯಿಯಾಗಿಅಂಗ ಲಿಂಗದ ಹಂಗು ತೊರೆದುಭೋರ್ಗರೆವ ಪ್ರೇಮ ಪ್ರವಾಹವಾಗಿ ಮತ್ತೆ ಕಾಯಿಸ ಬೇಡದಶಕದ ಶಾಪ ಅಳಿದುಒಲವು ಚಿಗುರಿ ಅರಳಲಿಕೋಪ ತಾಪ ಅಳಿದುತನು ಮನಕೆ ತಂಪು ನೆರಳಾಗಿನನ್ನ ನಿನ್ನೊಳಗಿನ ನಗೆ ಸಂಭ್ರಮಕೆ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡುಬವಣೆ ಭ್ರಾಂತಿ ಕಳೆದುಹೊಸ ಬದುಕಿನ ಕ್ರಾಂತಿಯಾಗಿಸತ್ಯ ಸಮತೆ ಮೆರವಣಿಗೆಗೆನನ್ನ ಒಂಟಿ ಪಯಣದಲ್ಲಿ ಬಾ ಪ್ರೇಮವೇ ಒಮ್ಮೆನಮ್ಮ ಬರಿದಾದ ಬಾಳಿನಲ್ಲಿತಿಳಿ ಬೆಳಕಾಗಿ ತಂಗಾಳಿ ಸೂಸಿನೆಮ್ಮದಿ ನಿದ್ರೆಗೆ ಜಾರುವ ಮುನ್ನನಿನ್ನ ಕೈ ಕುಲುಕಿ ಅಪ್ಪಿ ಮುದ್ದಾಡುವೇಬಂದು ಬಿಡು ಕಾಯುತ್ತಿದ್ದೇನೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ಕಾಯುತ್ತಿದ್ದೇನೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ “ಆತ್ಮ ಸಾಕ್ಷಿ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಆತ್ಮ ಸಾಕ್ಷಿ”  ಅಂತರಾಳದಲ್ಲಿ ಮೃದು ಧ್ವನಿ ಮಿಡಿಯುತ್ತಅದು ಶಬ್ದವಲ್ಲ,ಆದರೂಎಲ್ಲ ಶಬ್ದಗಳಿಗಿಂತ ಗಟ್ಟಿಯಾದ ಸತ್ಯ.ಕತ್ತಲೆಯೊಳಗೆ ದೀಪವಾಗಿದಾರಿತಪ್ಪಿದ ಹೆಜ್ಜೆಗಳಿಗೆ ದಿಕ್ಕುತೋರಿಸುವದಲೋಕದ ಕಣ್ಣಿಗೆ ಕಾಣದಿದ್ದರೂಒಳಗಿನ ಕಣ್ಣಿಗೆ  ಸ್ಪಷ್ಟವಾಗಿಗೋಚರಿಸುವ ಶಕ್ತಿ ನಟನೆಯ  ಮುಖವಾಡಗಳ ಮಧ್ಯೆನಗುವಿನ ಹಿಂದೆ ಅಡಗಿದ ನೋವನ್ನುಮೌನವಾಗಿ ಓದುವ ಆತ್ಮಸಾಕ್ಷಿ, ಸುಳ್ಳಿನ ಹೊಳಪವಿನೊಳಗಿನಖಾಲಿತನವನ್ನು ನೋಟದಲ್ಲೇ ಗುರುತಿಸುತ್ತಯಶಸ್ಸಿನ ಶಿಖರದಲ್ಲಿದ್ದಾಗಮೃದುವಾಗಿ ಪ್ರಶ್ನಿಸುತ್ತ“ಈ ಗೆಲುವು ನಿನ್ನದೇನಿನ್ನ ಮೌಲ್ಯಗಳನ್ನುಸೋಲಿಸಿದ ಬೆಲೆಯಾ?ಸೋಲಿನ ನೆಲದಲ್ಲಿ ಕುಳಿತಾಗತಾಯಿ ಹಸ್ತದಂತೆತಲೆಯ ಮೇಲೆ ಕೈ ಇಟ್ಟು“ನೀನು ತಪ್ಪಲಿಲ್ಲ,ನಿನ್ನ ಉದ್ದೇಶ ಪವಿತ್ರವಾಗಿತ್ತು”ಆಶ್ವಾಸನೆ ನೀಡುವದು.ಸಮಯದ ಹೊಡೆತಗಳಿಗೆಅದು ಎಂದೂ ಜರಿಯುವುದಿಲ್ಲ,ಪರಿಸ್ಥಿತಿಗಳ ಒತ್ತಡಕ್ಕೆಅದು ಮೌನವಾಗುವುದಿಲ್ಲ.ತಾಳ ತಪ್ಪಿದಾಗನಿದ್ರೆಯಲ್ಲೂ ಕಾಡುವದುಸರಿ ಮಾಡಿದಾಗನಿಶ್ಚಿಂತೆ ಎಂಬ ಹೂವನ್ನಿಟ್ಟುಹೃದಯವನ್ನು ಹಗುರಗೊಳಿಸುವದು.ಲೋಕದ ನ್ಯಾಯಾಲಯಗಳುಸಾಕ್ಷ್ಯ ಕೇಳಬಹುದು,ಆದರೆಆತ್ಮಸಾಕ್ಷಿಉದ್ದೇಶವನ್ನ ತೂಕ ಹಾಕುತ್ತದೆ.ಅದಕ್ಕೆ ಅಲಂಕಾರ ಬೇಡ,ಪ್ರಶಂಸೆಯ ಅಗತ್ಯವಿಲ್ಲ,ಸತ್ಯವೇ ಅದರ ಉಸಿರು,ನೈತಿಕತೆಯೇ ಅದರ ಆಭರಣ.ಎಲ್ಲವೂ ಮೌನವಾದಾಗ,ಹೆಸರು, ಹುದ್ದೆ, ಗುರುತುಗಳೆಲ್ಲಕರಗಿದಾಗನಮ್ಮ ಜೊತೆಯಲ್ಲಿ ಉಳಿಯುವದುಈ ಮೌನದ ಸ್ನೇಹಿತ  ಆತ್ಮಸಾಕ್ಷಿ._______________________ ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ “ಆತ್ಮ ಸಾಕ್ಷಿ” Read Post »

ಕಾವ್ಯಯಾನ

ಕಾವ್ಯ ಸಂಗಾತಿ ಲತಾ ಎ ಆರ್‌ ಬಾಳೆಹೊನ್ನೂರು ಮಾಗಿಯ ಚಳಿ ತಣ್ಣನೆಯ ಮಾಗಿಯ ಚಳಿ ಮೈ ಸೋಕಿರಲುನಿನ್ನದೇ ಸವಿ ನೆನಪು ಕಾಡಿರಲುಮನಸು ಹೃದಯ ಮುದವೇರಲುಸೊಗಸಾಗಿ ಹಳೆ ನೆನಪು ಸೋಕಿರಲು ಸೆಳೆಯುತಿದೆ ಮನ ನಿನ್ನೆಡೆಗೆ ವಾಲಿಹೃದಯವನು ಇರಿಸಿರುವೆ ನಿನಗಾಗಿ ಖಾಲಿಒಂದಾಗಿ ಆಡೋಣ ಬಾ ಜೀವನ ಜೋಕಾಲಿಸೇರಿ ಜೀವನದ ಪಾಠವ ಕಲಿ ನೀನಿಲ್ಲದ ಬದುಕು ಬರೀ ನೀರಸನೀನಿರೆ ಜೊತೆಯಲ್ಲಿ ಮನ ಉಲ್ಲಾಸನಿನ್ನೊಲವು ಬೇಕಿದೆ ಬಾಳಿಗೆ ಸಂತಸ ಅರಿತುಕೊ ನನ್ನೆದೆಯ ಕೂಗಿನ ಮನಸ ಹೊಸಬಾಳಿನ ನೂತನ ಸಂಭ್ರಮ ನಿಶ್ಚಿತಹೂ ಚೆಲ್ಲಿ ಕೋರುವೆ ನಿನಗೆ ಸ್ವಾಗತಹಾರಾಡಿ ಕುಣಿದಿರುವೆ ನವಿಲಂತೆ ನಲಿಯುತನೀನೆಂದೆಂದು ನನ್ನವನೇ ಬಾಳಲ್ಲಿ ಶಾಶ್ವತ. ಲತಾ ಎ ಆರ್ ಬಾಳೆಹೊನ್ನೂರು

Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ” ಅರಿತು ಬೆರೆತು ನೀ…ಬಾಳಲೆಷ್ಟು ಹರುಷವು ಮನುಜಸಮಾಜ ಕಂಟಕ ಆಗದಿರು ಮನುಜ,?! ಹೃದಯದೊಳು…ಅವಿತಿರುವ ಮಲಿನ ಕಲ್ಮಶಗಳತೊರೆಯ ಬಾರದೇಕೆ ನೀ ಮನುಜ,?! ಜಾತಿ ಧರ್ಮಗಳು…ಚೌಕಟ್ಟಿನೊಳಗಿರಲು ಚೆಂದಮಾನವನಾಗಿ ಬದುಕು ಮನುಜ,! ಧರ್ಮ ಸಂಘರ್ಷಕ್ಕಲ್ಲ…ಶಾಂತಿಯೇ ಧರ್ಮಗಳ ಸಾರಪ್ರೀತಿಯೊಂದೇ ಮೋಕ್ಷಕ್ಕೆ ದಾರಿ ನೇರ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ” Read Post »

You cannot copy content of this page

Scroll to Top